ಬಳ್ಳಾರಿ: ಸ್ಪಾಂಜ್ ಐರನ್ ಕಾರ್ಖಾನೆ ಬಂದ್ʼಗೆ ಆಗ್ರಹಿಸಿ ರೈತರಿಂದ ಬೃಹತ್ ಪ್ರತಿಭಟನೆ ನಡೆಸಲಾಯಿತು. ಬಳ್ಳಾರಿಯ ಡಿಸಿ ಕಛೇರಿ ಮುಂದೆ ಗ್ರಾಮಸ್ಥರು ಮತ್ತು ರೈತರಿಂದ ಪ್ರತಿಭಟನೆ ನಡೆಸಲಾಗಿದ್ದು, ಸಂಡೂರಿನ ರಣಜಿತ್‌ಪುರ್ ಗ್ರಾಮದ ಬಳಿ ಇರೋ ಸ್ವಾಂಜ್ ಐರನ್ ಪ್ಯಾಕ್ಟರಿಯಲ್ಲಿ ಕಾರ್ಖಾನೆಯಿಂದ ವಿಷಕಾರಿ ಅನಿಲ ಸೋರಿಕೆಯಿಂದ ಗ್ರಾಮಸ್ಥರ ಅನಾರೋಗ್ಯಕ್ಕೀಡಾಗುತ್ತಿದ್ದಾರೆ. ಬೆಳೆದ ಬೆಳೆಗಳ ಮೇಲೆ ಧೂಳಿನ ರಾಶಿಯಿಂದ ರೋಷಿ ಹೋಗಿರುವ ಗ್ರಾಮಸ್ಥರು, ಹಲವು ಸಮಸ್ಯೆಗಳಿಗೆ ಕಾರಣವಾಗಿರುವ ರಣಜಿತ್ಪುರ್ ಸ್ಪಂಜ್ ಅಂಡ್ಯ್ ಐರನ್ ಫ್ಯಾಕ್ಟರಿಯಾಗಿದ್ದು, ಪರಿಸರ ಹಾನಿ ಮಾಡ್ತಿರೋ ಐರನ್ ಪ್ಯಾಕ್ಟರಿ ಬಂದ್‌ಗೆ ಆಗ್ರಹಿಸಿದ್ದಾರೆ. ಡಿಸಿ ಕಛೇರಿ ಮುಂದೆ ಗ್ರಾಮಸ್ಥರ ಧರಣಿ, ಸ್ಪಾಂಜ್ ಐರನ್ ಕಾರ್ಖಾನೆ ಶಾಶ್ವತವಾಗಿ ಮುಚ್ಚುವಂತೆ ಜಿಲ್ಲಾಡಳಿತದ ಮೇಲೆ ಒತ್ತಡ ಏರಲಾಗಿದ್ದು, ನೂರಾರು ಸಂಖ್ಯೆಯ ರೈತರು ಮತ್ತು ಗ್ರಾಮಸ್ಥರು ಬಳ್ಳಾರಿ ಡಿಸಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ.
Author: AIN Author
ಬಾಗಲಕೋಟೆ: ಕಳೆದೈದು ವರ್ಷಗಳಿಂದ ನಡೆಯುತ್ತಿರುವ ಬೆಳಗಾವಿ-ಬಾಗಲಕೋಟೆ ಜಿಲ್ಲೆ ಬೆಸುಗೆ ಮಾಡುವಲ್ಲಿ ಮಹತ್ತರ ಯೋಜನೆಯಾಗಿರುವ ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ರಬಕವಿ ಜಾಕವೆಲ್‌ನ ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಿಸಲಾಗುತ್ತಿರುವ ಮಹಿಷವಾಡಗಿ ಸೇತುವೆ ಕಾಮಗಾರಿಯ ವಿಳಂಬನೀತಿಗೆ ಜನತೆ ಆಕ್ರೋಶಗೊಂಡಿದ್ದು, ಶುಕ್ರವಾರ ಅಧಿಕಾರಿಗಳ ಸಭೆಯು ಕೊಂಚ ನಿರಾಳತೆ ತೋರುವಲ್ಲಿ ಕಾರಣವಾಗಿದೆ. ಕೇವಲ ಒಂದು ಕಿ.ಮೀ.ನಷ್ಟು ಸೇತುವೆ ನಿರ್ಮಾಣಕ್ಕೆ ಐದಾರು ವರ್ಷಗಳಿಂದ ವಿಳಂಬವಾಗುತ್ತಿರುವ ಬಗ್ಗೆ ತಾಲೂಕಿನ ಜನತೆಗೆ ಯಕ್ಷ ಪ್ರಶ್ನೆಯಾಗಿ ಕಾಡುತ್ತಿದ್ದರೆ, ಅಧಿಕಾರಿಗಳ ನಿರ್ಲಕ್ಷö್ಯವಂತು ಹೇಳತೀರದು. ಸೇತುವೆ ವೀಕ್ಷಣೆ ನಡೆಸಿ ಇಂದು ನಡೆದ ಮಹತ್ವದ ಸಭೆಯಲ್ಲಿ ನೀರಾವರಿ ಇಲಾಖೆ ಅಧೀಕ್ಷಕ ಅಭಿಯಂತರ ಸುಭಾಷ ಮಾತನಾಡಿ ಭೂ ಪರಿಹಾರದಲ್ಲಿ ರೈತರಿಗೆ ಕಡಿಮೆ ಹಣ ಒದಗಿಸುತ್ತಿರುವದಾಗಿ ರೈತರು ವಿರೋಧಿಸಿದ್ದಾರೆ. ತಿಳುವಳಿಕೆ ನೋಟಿಸ್ ನೀಡಿದಾಗ್ಯೂ ಪಡೆಯದ ಕಾರಣ ಭೂಸ್ವಾಧೀನ ಅನಿವಾರ್ಯವಾಗಿದ್ದು, ಶೀಘ್ರವೇ ಕಾರ್ಯ ನಡೆಯಲಿದೆ ಎಂದರು. ಈ ಕಾರ್ಯ ಪ್ರಕ್ರಿಯೆಗೊಂಡ ಕೆಲವೇ ದಿನಗಳಲ್ಲಿ ಸೇತುವೆ ಎರಡೂ ಬದಿಯಲ್ಲಿ ರಸ್ತೆ ನಿರ್ಮಾಣ ನಡೆಸಲಾಗುವದು. ಈಗಾಗಲೇ ಸೇತುವೆ ಕಾರ್ಯ ಶೇ.೫೦ ರಷ್ಟು ಮುಕ್ತಾಯಗೊಂಡಿದೆ.…
ಮೈಸೂರು: ಭಾರತೀಯ ಅಂಚೆ ಇಲಾಖೆ ಮೈಸೂರು ವಿಭಾಗದವರು ಭಗವಾನ್ ಮಹಾವೀರರ ವಿಶೇಷವಾದ ಅಂಚೆ ಕಾರ್ಡ್ ಹಾಗೂ ನಿರ್ವಾಣ ಮಹೋತ್ಸವದ ವಿಶೇಷವಾದ ಮುದ್ರೆಯನ್ನು ಹೊರತಂದರು. ಮೈಸೂರಿನ ಭಾರತೀಯ ಅಂಚೆ ಕಚೇರಿಗಳ ಸೀನಿಯರ್ ಸೂಪರಿಂಟೆಂಡೆಂಟ್ ಆದ ಐಪಿಎಸ್ ಅಧಿಕಾರಿ ಡಾ.ಎಂಜಲ್ ರಾಜ್ ಅವರು ಬಿಡುಗಡೆಗೊಳಿಸಿದರು. ಮೈಸೂರು ಅರಮೆನಯಲ್ಲಿ ನಡೆದ ಈ ಕಾಠ್ಯಕ್ರವು ಮೈಸೂರು ರಾಜವಮಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರು ಅವರ ಉಪಸ್ಥಿತಿಯಲ್ಲಿ ನಡೆಯಿತು. ಸಮಾರಂಭ ನಡೆಯಿತು. ಅಂಚೆ ಕಾರ್ಡ್ ಹಾಗೂ ಮುದ್ರೆಯ ಪ್ರವರ್ತಕರಾದ ಯುವರಾಜ್ ಜೈನ್ ಹಾಗೂ ರಶ್ಮಿತಾ ಜೈನ್, ಎಕ್ಸಲೆಂಟ್ ಶಿಕ್ಷಣ ಸಂಸ್ಥೆ, ಮೂಡುಬಿದಿರೆ, https://ainlivenews.com/what-happens-if-tea-coffee-is-given-to-children/ ವಿಕಾಸ್ ಜೈನ್, ಕಾರಾಧಕ್ಷರು, ಭಾರತೀಯ ಜೈನ ತೀರ್ಥ ಸಂರಕ್ಷಿಣಿ ಮಹಾಸಭಾ, ಬಿಹಾರ, ಮಹಾವೀರ ಕುಂದೂರ್, ಅಧ್ಯಕ್ಷರು, ಸಂಸ್ಕಾರ ವಿದ್ಯಾಲಯ, ಹುಬ್ಬಳ್ಳಿ ಇವರುಗಳು ಹಾಗೂ ಮೈಸೂರು ಅಂಚೆ ವಿಭಾಗದ ಹಿರಿಯ ಅಧಿಕಾರಿಗಳು ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಬೆಂಗಳೂರು: ವಿಧಾನಸಭೆ ಮತ್ತು ವಿಧಾನ ಪರಿಷತ್ ವಿಪಕ್ಷ ನಾಯಕರ ನೇಮಕಾತಿ ವಿಚಾರವಾಗಿ ಬೆಂಗಳೂರಿನಲ್ಲಿ ಇಂದು (ನ.17) ಸಂಜೆ 6 ಗಂಟೆಗೆ ಖಾಸಗಿ ಹೋಟೆಲ್ನಲ್ಲಿ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ. ಸಭೆಯಲ್ಲಿ ಹೈಕಮಾಂಡ್ ವೀಕ್ಷಕರು ವಿಪಕ್ಷ ನಾಯಕರ ಹೆಸರು ಘೋಷಣೆ ಮಾಡಲಿದ್ದಾರೆ. ವಿಧಾನಸಭೆಗೆ ಒಕ್ಕಲಿಗ ಮತ್ತು ವಿಧಾನ ಪರಿಷತ್ಗೆ ಹಿಂದುಳಿದ ವರ್ಗಕ್ಕೆ ಅವಕಾಶ ಸಿಗುವ ಸಾಧ್ಯತೆ ಇದೆ. ವಿಧಾನಸಭೆಗೆ ರೇಸ್ನಲ್ಲಿ ಶಾಸಕರಾದ ಆರ್. ಅಶೋಕ್, ಡಾ. ಅಶ್ವಥ್ ನಾರಾಯಣ ಮತ್ತು ಅರಗ ಜ್ಞಾನೇಂದ್ರ ಹೆಸರು ಇದೆ. ವಿಧಾನ ಪರಿಷರ್ಗೆ ಕೋಟ ಶ್ರೀನಿವಾಸ ಪೂಜಾರಿ, ತೇಜಸ್ವಿನಿ ಗೌಡ, ಛಲವಾದಿ ನಾರಾಯಣಸ್ವಾಮಿ ಮತ್ತು ಭಾರತಿ ಶೆಟ್ಟಿ ಹೆಸರು ಒಬಿಸಿ ಕೋಟದಲ್ಲಿ ಸುನಿಲ್ ಕುಮಾರ್ ರೇಸ್ನಲ್ಲಿದ್ದಾರೆ. ಬಹುತೇಕ ಆರ್. ಅಶೋಕ್ ಮತ್ತು ಕೋಟ ಶ್ರೀನಿವಾಸ ಪೂಜಾರಿ ವಿಪಕ್ಷ ನಾಯಕರಾಗಿ ಆಯ್ಕೆ ಸಾಧ್ಯತೆ ಇದೆ. ಬಿಜೆಪಿ ಶಾಸಕಾಂಗ ಸಭೆಗೆ ಹೈಕಮಾಂಡ್ ವೀಕ್ಷಕರಾಗಿ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಆಗಮಿಸುತ್ತಿದ್ದಾರೆ.
ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಸಿದ್ದಪಡಿಸಿರುವ ಜನತಾ ಜೀವವೈವಿಧ್ಯ ದಾಖಲಾತಿಯನ್ನು ಪುನರ್ವಿಮರ್ಶಿಸಿ ಸಲಹೆ ಸೂಚನೆಗಳನ್ನು ಸ್ವೀಕರಿಸಿ ನವೀಕರಿಸಲು ಜೀವವೈವಿಧ್ಯ ನಿರ್ವಹಣಾ ಸಮಿತಿಯ ಅಧ್ಯಕ್ಷರು ಹಾಗೂ ಆಡಳಿತಗಾರರಾದ ರಾಕೇಶ್ ಸಿಂಗ್ ರವರು ಅಧಿಕಾರಿಗಳಿಗೆ ಸೂಚಿಸಿದರು. ಜೀವವೈವಿದ್ಯ ದಾಖಲಾತಿಗೆ ಸಂಬಂಧಿಸಿದಂತೆ ಇಂದು ಪಾಲಿಕೆ ಕೇಂದ್ರ ಕಛೇರಿ, ಸಭಾಂಗಣ-01ರಲ್ಲಿ ನಡೆದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಜೀವವೈವಿದ್ಯ ಉಳಿಸುವ ಅಂಗವಾಗಿ ಯಾವ್ಯಾವು ಯಶಸ್ಸು ಕಂಡಿವೆ ಅದನ್ನು ದಾಖಲಿಸುವಂತಹ ಕೆಲಸವಾಗಬೇಕು. ಬೆಂಗಳೂರಿನಲ್ಲಿರುವ ಪಾರಂಪರಿಕವಾಗಿ ಇರುವಂತಹ ಜಾಗಗಳು, ಹಸಿರು ವನಗಳ ಬಗ್ಗೆ ಸಮಿಕ್ಷೆ ನಡೆಸಿ ವರದಿಸಲ್ಲಿಸಲು ಸೂಚಿಸಿದರು. ಕ್ರಮಬದ್ಧವಾಗಿ ಜೀವವೈವಿಧ್ಯ ನಿರ್ವಹಣೆಗೆ ಬೇಕಾಗುವ ಎಲ್ಲಾ ಅಗತ್ಯ ಸೌಲಭ್ಯವನ್ನು ಪಾಲಿಕೆ ಒದಗಿಸಲಿದೆ ಎಂದು ತಿಳಿಸಿದರು. ಜೀವವೈವಿಧ್ಯ ನಿರ್ವಹಣಾ ಸಮಿತಿಯ ಸದಸ್ಯ ಕಾರ್ಯದರ್ಶಿ ಮತ್ತು ಮುಖ್ಯ ಆಯುಕ್ತರಾದ ಶ್ರೀ ತುಷಾರ್ ಗಿರಿ ನಾಥ್ ಮಾತನಾಡಿ, ನಗರದಲ್ಲಿ ಕೃಷಿ, ಅರಣ್ಯ ಹಾಗೂ ವನ್ಯಜೀವಿ ವಿಭಾಗದಲ್ಲಿ ಜೀವ ವೈವಿಧ್ಯ ನಿರ್ವಹಣೆ ಸಂಬಂಧಿಸಿದಂತೆ ಸಂಪೂರ್ಣ ದಾಖಲಾತಿ ತಯಾರಿಸಲು ಜೀವ ವೈವಿಧ್ಯ ನಿರ್ವಹಣಾ ಸಮತಿ ಸದಸ್ಯರಿಗೆ ಸೂಚಿಸಿದರು. ಕೃಷಿ…
ನವದೆಹಲಿ: ಇಸ್ರೇಲ್ (Israel) ಮತ್ತು ಪ್ಯಾಲೆಸ್ತೀನ್ (Palestine) ಬಂಡುಕೋರ ಸಂಘಟನೆ ಹಮಾಸ್ (Hamas) ನಡುವೆ ನಡೆಯುತ್ತಿರುವ ಯುದ್ಧದಲ್ಲಿ ಅಪಾರ ಪ್ರಮಾಣದ ಸಾವು-ನೋವುಗಳು ಸಂಭವಿಸಿರುವುದನ್ನು ಪ್ರಧಾನಿ ನರೇಂದ್ರ ಮೋದಿ (Narendra Modi) ಖಂಡಿಸಿದ್ದಾರೆ. ವಾಯ್ಸ್ ಆಫ್ ದಿ ಗ್ಲೋಬಲ್ ಸೌತ್ ಶೃಂಗಸಭೆಯಲ್ಲಿ ಮಾತನಾಡಿದ ಅವರು, ಪಶ್ಚಿಮ ಏಷ್ಯಾ ಪ್ರದೇಶದಲ್ಲಿನ ಹೊಸ ಸವಾಲುಗಳ ಕುರಿತು ಮಾತನಾಡಿ, ಭಾರತವು ಸಂಘರ್ಷದಲ್ಲಿ ಸಂಯಮವನ್ನು ಅನುಸರಿಸಿದೆ ಎಂದು ಹೇಳಿದರು. https://ainlivenews.com/what-happens-if-tea-coffee-is-given-to-children/ ನಾವು ಸಂವಾದ ಮತ್ತು ರಾಜತಾಂತ್ರಿಕತೆಗೆ ಒತ್ತು ನೀಡಿದ್ದೇವೆ. ಇಸ್ರೇಲ್ ಮತ್ತು ಹಮಾಸ್ ನಡುವಿನ ಸಂಘರ್ಷದಲ್ಲಿ ನಾಗರಿಕರ ಸಾವನ್ನು ನಾವು ಬಲವಾಗಿ ಖಂಡಿಸುತ್ತೇವೆ. ಪ್ಯಾಲೆಸ್ತೀನ್ ಅಧ್ಯಕ್ಷ ಮಹಮದ್ ಅಬ್ಬಾಸ್ ಅವರೊಂದಿಗಿನ ಮಾತುಕತೆಯ ನಂತರ ಭಾರತವು ಪ್ಯಾಲೆಸ್ತೀನಿಯರಿಗೆ ಮಾನವೀಯ ನೆರವು ಕಳುಹಿಸಿದೆ. ಇದು ಜಾಗತಿಕ ಒಳಿತಿಗಾಗಿ ಜಾಗತಿಕ ದಕ್ಷಿಣದ ದೇಶಗಳು ಒಂದಾಗಬೇಕಾದ ಸಮಯ ಎಂದು ಅವರು ತಿಳಿಸಿದರು.
ಬೆಂಗಳೂರು: ಕೃಷಿ ಮೇಳದಲ್ಲಿ ಅತ್ಯಂತ ಸಂತೋಷದಿಂದ ಭಾಗಿಯಾಗಿದ್ದೇನೆ. ಸಂತೋಷದಿಂದ ಉದ್ಘಾಟನೆ ಮಾಡಿದ್ದೇನೆ. ಕೃಷಿ ಮೇಳಕ್ಕೆ ಬರಲುದಕ್ಕೆ ಆಗಲ್ಲ ಅಂತ ಗುರವಾರ ಸಂಜೆ ಹೇಳಿದ್ದೆ. ಮೈಸೂರಿನ ಕಾರ್ಯಕ್ರಮಕ್ಕೆ ಮುಂದಕ್ಕೆ ಹಾಕಿಸಿ ಕೃಷಿಮೇಳಕ್ಕೆ ಬರುವಂತೆ ಕೃಷಿ ಸಚಿವರು ಒತ್ತಾಯಿಸಿದರು. https://ainlivenews.com/joint_pain_suprem_ray_treatment_reiki/ ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಕರ್ನಾಟಕದಲ್ಲಿ ಸ್ಥಾಪನೆಯಾದ ಮೊದಲ ವಿಶ್ವ ವಿದ್ಯಾಲಯ. ವಿಶ್ವವಿದ್ಯಾಲಯದಲ್ಲಿ ಏನೆಲ್ಲ ತಂತ್ರಜ್ಞಾನ ಇರುತ್ತೆ? ನೀರಿನ ಸಂರಕ್ಷಣೆ ಹೇಗೆ ? ಭೂಮಿ ಫಲವತತ್ತೆ ಕಾಪಾಡುವುದು ಹೇಗೆ ? ಎಂಬ ವಿಷಯವನ್ನ ತಿಳಿಸುವ ಕೆಲಸ ವಿಶ್ವವಿದ್ಯಾನಿಲಯ ಮಾಡುತ್ತೆ. ರಾಜ್ಯದ ಹೆಚ್ಚಿನ ಜನರು ಕೃಷಿ ಮೇಲೆ ಅವಲಂಬಿಸಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ನಗರದ ಜಿಕೆವಿಕೆಯಲ್ಲಿ ನಡೆಯುತ್ತಿರುವ ಕೃಷಿ ಮೇಳಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದರು. ಚಾಲನೆ ಬಳಿಕ ಸಿಎಂ ಸಿದ್ದರಾಮಯ್ಯ ಹೊಸ ತಳಿಗಳ ಬಗ್ಗೆ ಮಾಹಿತಿ ಪಡೆದರು. ಸಿಎಂ ಸಿದ್ದರಾಮಯ್ಯ ಅವರಿಗೆ ಕೃಷಿ ಸಚಿವ ಚಲುವರಾಯಸ್ವಾಮಿ ಸಾಥ್ ನೀಡಿದರು.
ಬೆಂಗಳೂರು: ವಿಧಾನಸಭೆ ವಿಪಕ್ಷ ನಾಯಕನ ಆಯ್ಕೆ ವಿಚಾರ ‘ನನಗೆ ಆ ಜವಾಬ್ದಾರಿ ಕೊಟ್ಟರೆ ಸಂತೋಷ ಎಂದು ಬೆಂಗಳೂರಿನಲ್ಲಿ ಶಾಸಕ ಆರಗ ಜ್ಞಾನೇಂದ್ರ ಹೇಳಿದರು. ‘ಕೊಡುವ ಸ್ಥಾನಕ್ಕೆ ಗೌರವ ಸಲ್ಲಿಸುವೆ, ಬೇರೆ ಯಾರಿಗೆ ಕೊಟ್ಟರೂ ಅವರೊಂದಿಗೆ ಸಹಕರಿಸಿಕೊಂಡು ಹೋಗುತ್ತೇವೆ. ನಮಗೆ ಪಕ್ಷ, ಸಿದ್ದಾಂತ ಮುಖ್ಯ. ಇಂದು ಸಂಜೆಯೇ ವಿಪಕ್ಷ ನಾಯಕರ ಆಯ್ಕೆ ಆಗಬಹುದು. ಅದಕ್ಕೂ ಮೊದಲು ಅವರು ಪ್ರಮುಖ ನಾಯಕರನ್ನು ಭೇಟಿಯಾಗಿ ವೈಯುಕ್ತಿಕ ಅಭಿಪ್ರಾಯ ಪಡೆಯುತ್ತಿದ್ದಾರೆ ಎಂದರು.
ಬೀದರ್: ಮಾಜಿ ಸಚಿವರು, ಜೆಡಿಎಸ್ ಪಕ್ಷದ ಹಿರಿಯ ನಾಯಕರಾಗಿರುವ ಬಂಡೆಪ್ಪ ಖಾಶೆಂಪುರ್ ರವರ ನೇತೃತ್ವದಲ್ಲಿ ಜೆಡಿಎಸ್ ನಾಯಕರು ಬೀದರ್ ಜಿಲ್ಲೆಯ ವಿವಿಧೆಡೆಯ ರೈತರ ಜಮೀನುಗಳಿಗೆ ಭೇಟಿ ನೀಡಿ ಬರ ಅಧ್ಯಯನ ನಡೆಸಿದರು. ಜಿಲ್ಲೆಯ ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಕಮಠಾಣಾ ರೈತ ಸಂಪರ್ಕ ಕೇಂದ್ರ, ಬಗದಲ್ ರೈತ ಸಂಪರ್ಕ ಕೇಂದ್ರ, ಬೀದರ್ ಉತ್ತರ ವಿಧಾನಸಭಾ ಕ್ಷೇತ್ರದ ಜನವಾಡ ರೈತ ಸಂಪರ್ಕ ಕೇಂದ್ರ, ಔರಾದ ವಿಧಾನಸಭಾ ಕ್ಷೇತ್ರದ ದಾಬಕಾ ರೈತ ಸಂಪರ್ಕ ಕೇಂದ್ರ ಸೇರಿದಂತೆ ವಿವಿಧ ರೈತ ಸಂಪರ್ಕ ಕೇಂದ್ರಗಳ ಖಾಶೆಂಪುರ್, ಕಾಡವಾದ, ಬಗದಲ್ ತಾಂಡ, ಮರಕಲ್, ಮುರ್ಕಿ, ಚಿಕ್ಲಿ, ಗಣೇಶಪೂರ್ ಸೇರಿದಂತೆ ವಿವಿಧ ಗ್ರಾಮಗಳ ಜಮೀನುಗಳಿಗೆ ಭೇಟಿ ನೀಡಿ ಮಳೆಯ ಕೊರತೆಯಿಂದ ಹಾಳಾದ ತೊಗರಿ ಸೇರಿದಂತೆ ವಿವಿಧ ಬೆಳಗಳನ್ನು ವೀಕ್ಷಿಸಿ, ರೈತರೊಂದಿಗೆ ಚರ್ಚಿಸಿದರು. ಪರಿಹಾರಕ್ಕೆ ಒತ್ತಾಯಿಸಿ ಶುಕ್ರವಾರ ಮುಖ್ಯಮಂತ್ರಿಗೆ ಮನವಿ: ಬಂಡೆಪ್ಪ ಖಾಶೆಂಪುರ್ ಜೆಡಿಎಸ್ ಪಕ್ಷದ ಪ್ರಮುಖರೊಂದಿಗೆ ಬೆಳೆ ವೀಕ್ಷಣೆ ನಡೆಸಿ ಮಾತನಾಡಿದ ಮಾಜಿ ಸಚಿವ ಬಂಡೆಪ್ಪ ಖಾಶೆಂಪುರ್ ರವರು, ಮಳೆಯ…
ಬೆಂಗಳೂರು: ತೆಲಂಗಾಣದಲ್ಲಿ ಚುನಾವಣೆ ಪ್ರಚಾರದ ವೇಳೆ ರಾಜ್ಯದ ಸಚಿವ ಜಮ್ಮೀರ್ ಅಹಮದ್ ಖಾನ್ ಬಿಜೆಪಿ ವಿರುದ್ದ ನೀಡಿದ ಹೇಳಿಕೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರರಿಂದ ಖಂಡನೆ ವ್ಯಕ್ತಪಡಿಸಿದ್ದಾರೆ. https://ainlivenews.com/joint_pain_suprem_ray_treatment_reiki/ ಬೆಂಗಳೂರಲ್ಲಿ ಮಾತನಾಡಿದ ಅವರು, ಸಭಾಧ್ಯಕ್ಷ ಸ್ಥಾನದಲ್ಲಿರುವವರಿಗೆ ನಾವು ಗೌರವ ಕೊಡುತ್ತೇವೆ ಎಂದರೇ ಅದು ಆ ಸ್ಥಾನಕ್ಕೆ ಮತ್ತು ಪ್ರಜಾಪ್ರಭುತ್ವಕ್ಕೆ ಕೊಡುವಂತದ್ದು ಯಾವುದೇ ವ್ಯಕ್ತಿಗಲ್ಲ ಎಂದರು. ಜಮ್ಮೀರ್ ಅಹಮದ್ ಅವ್ರೇ, ನೀವು ಯಾವುದೋ ಒಂದು ಕೋಮಿನ ಜವಬ್ದಾರಿ ತಗೊಂಡಿಲ್ಲ. ಒಬ್ಬ ಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ನೀವು ನಿಮ್ಮ ಅಂತರಾಳದ ಮಾತನ್ನು ಆಡಿದ್ದೀರಿ. ಈ ಹೇಳಿಕೆ ನಿಜಕ್ಕೂ ದುರದೃಷ್ಟಕರ. ಮತ್ತು ಇದನ್ನು ಖಂಡಿಸುತ್ತೇವೆ, ಇನ್ಮುಂದೆ ಈ ರೀತಿ ಮಾತಾಡದಂತೆ ಎಚ್ಚರಿಕೆ ವಹಿಸಿ ಅಂತಾ ಅವರು ಹೇಳಿದರು.