Author: AIN Author

ವಿಜಯಪುರ: ರಾಜ್ಯದಲ್ಲಿ ಭೀಕರ ಬರಗಾಲವಿದ್ದರೂ ಕೇಂದ್ರ ಸರಕಾರ ಬರ ಪರಿಹಾರ ಬಿಡುಗಡೆ ಮಾಡದೇ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು‌ ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಆಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂಬಿ ಪಾಟೀಲ ಆರೋಪಿಸಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಎಂಬಿ ಪಾಟೀಲ, ರಾಜ್ಯದಲ್ಲಿ ಭೀಕರ ಬರ ಪರಿಸ್ಥಿತಿ ಎದುರಾಗಿದ್ದು, ಸರಕಾರ ಪರಿಸ್ಥಿತಿ ನಿಭಾಯಿಸಲು ಸಕಲ‌ ಕ್ರಮಗಳನ್ನು ಕೈಗೊಂಡಿದೆ. ಆದರೆ, ಕೇಂದ್ರ ಸರಕಾರ ಯಾವುದೇ ರೀತಿಯಲ್ಲಿ ಸ್ಪಂದಿಸುತ್ತಿಲ್ಲ. ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿದರು. ಕೇಂದ್ರ ಬರ ಅಧ್ಯಯನ ತಂಡ ರಾಜ್ಯಕ್ಕೆ ಭೇಟಿ ನೀಡಿ ಒಂದು ತಿಂಗಳಾದರೂ ಬರ ಪರಿಹಾರ ಹಣ ಬಿಡುಗಡೆ ಮಾಡಿಲ್ಲ. ರಾಜ್ಯ ಸರಕಾರ ಸಾಕಷ್ಟು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಎನ್ ಡಿಆರ್ ಎಫ್ ಮಾರ್ಗಸೂಚಿಗಳಿಂದ ರೈತರಿಗೆ ಅನ್ಯಾಯವಾಗುತ್ತಿದೆ. ಪ್ರತಿ ಹೆಕ್ಟೇರ್ ನಿಗದಿ ಪಡಿಸಿರುವ ಪರಿಹಾರ ಮೊತ್ತ ರೈತರು ಬೆಳೆಗಾಗಿ ಮಾಡಿರುವ ಖರ್ಚಿಗೂ ಸಾಕಾಗುವುದಿಲ್ಲ. https://ainlivenews.com/joint_pain_suprem_ray_treatment_reiki/ ಈ ಪರಿಹಾರ ರೈತರ ಪಾಲಿಗೆ ಬಕಾಸುರನ ಹೊಟ್ಟೆಗೆ ಅರೆಕಾಸಿಮಜ್ಜಿಗೆ…

Read More

ಬೆಂಗಳೂರು:- ರಾಜಧಾನಿ ಬೆಂಗಳೂರಿನ ಅಂಬೇಡ್ಕರ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಮಹಿಳೆ ಸಾವನ್ನಪ್ಪಿದ್ದಾಳೆ. 34 ವರ್ಷದ ನಾಜ್ನಿ ಮೃತ ಮಹಿಳೆ. ವೈದ್ಯರ ನಿರ್ಲಕ್ಷ್ಯದಿಂದ ಮಹಿಳೆ ನಿಧನಳಾಗಿದ್ದಾಳೆ ಎಂದು ಸಂಬಂಧಿಕರು ಆರೋಪಿಸಿ, ಆಸ್ಪತ್ರೆ ಮುಂಭಾಗ ಧರಣಿ ಕುಳಿತಿದ್ದಾರೆ. ನಾಜ್ನಿ ಮೂರು ದಿನಗಳ ಹಿಂದೆ ಹೊಟ್ಟೆ ನೋವೆಂದು ಆಸ್ಪತ್ರೆಗೆ ದಾಖಲಾಗಿದ್ದರು. ಎರಡು ದಿನವಾದರೂ ವೈದರು ಚಿಕಿತ್ಸೆ ನೀಡಿಲ್ಲ. ಮೂರನೇ ದಿನ‌ ಹೊಟ್ಟೆಯಲ್ಲಿ ಗಡ್ಡೆ ಆಗಿದೆ, ಕೂಡಲೇ ಆಪರೇಷನ್ ಮಾಡಬೇಕೆಂದು ವೈದ್ಯರು ಹೇಳಿದ್ದಾರೆ. ವೈದ್ಯರು ಗುರುವಾರ ಸಂಜೆಯವರೆಗು ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡುತ್ತಿದ್ದರು. ನಂತರ ‌ನರದ ಸಮಸ್ಯೆ ಇದೆ ಬೇರೆ ಆಸ್ಪತ್ರೆಗೆ ಕರೆದುಕೊಂಡುಹೋಗಿ ಎಂದು ಕುಟುಂಬಸ್ಥರಿಗೆ ಹೇಳಿದ್ದಾರೆ. ಆಂಬುಲೆನ್ಸ್​ನಲ್ಲಿ ಬೇರೆ ಆಸ್ಪತ್ರೆಗೆ ತೆರಳುವ ವೇಳೆ ಮಹಿಳೆ ಮೃತಪಟ್ಟಿದ್ದಾಳೆ. ಮಹಿಳೆ ಮೊದಲೇ ಮೃತಪಟ್ಟಿದ್ದಾಳೆ, ವೈದ್ಯರು ಸುಮ್ಮನೆ ವೆಂಟಿಲೇಟರ್ ಹಾಕಿ ತಮ್ಮ ಆಸ್ಪತ್ರೆಯಿಂದ ಕಳುಹಿಸಿದ್ದಾರೆಂದು ಸಂಬಂಧಿಕರು ಆರೋಪ ಮಾಡಿದ್ದಾರೆ. ಮಹಿಳೆಗೆ ಸೂಕ್ತ ಚಿಕಿತ್ಸೆ ನೀಡದಿರುವುದೇ ಮಹಿಳೆ ಸಾವಿಗೆ ಕಾರಣವೆಂದು ಆರೋಪಿಸಿ, ವೈದ್ಯರ ವಿರುದ್ಧ…

Read More

ಬಳ್ಳಾರಿ ;- ಬಳ್ಳಾರಿಯಲ್ಲಿ ಲೋಕಾಯುಕ್ತ ಬಲೆಗೆ ಆರ್.ಟಿ.ಓ ಅಧಿಕಾರಿ ಸಿಕ್ಕಿ ಬಿದ್ದಿದ್ದಾರೆ. ಆರ್.ಟಿ.ಓ ಅಧೀಕ್ಷ ಚಂದ್ರಕಾಂತ ಗುಡಿಮನಿ ಲೋಕಾಯುಕ್ತ ಬಲೆಗೆ ಬಿದ್ದ ಅಧಿಕಾರಿ. ಏಜೆಂಟ್ ಮೊಹಮ್ಮದ್ ರಾಜ್ ಇವರ ಬಳಿ 15,000/ರೂ ತೆಗೆದುಕೊಳ್ಳವಾಗ ಲೋಕ ದಾಳಿ ನಡೆಸಿದೆ. ನಿನ್ನೆ ರಾತ್ರಿ 10.20ರ ಸಮಯದಲ್ಲಿ ಹಣ ಪಡೆಯುವ ಸಂದರ್ಭದಲ್ಲಿ ಚಂದ್ರಕಾಂತ್ ಮತ್ತು ಮೊಹಮ್ಮದ್ ರಾಜ್ ಟ್ರ್ಯಾಪ್ ಮಾಡಲಾಗಿದೆ. ಇಬ್ಬರನ್ನು ಬಳ್ಳಾರಿಯ ಹಾಲಿ ಲೋಕಾಯುಕ್ತ ಕಚೇರಿಯಲ್ಲಿ ವಿಚಾರಣೆಗೆ ಒಳಪಡಿಸಲಾಗಿದೆ, ಇಂದು ಬೆಳಿಗ್ಗೆ ನ್ಯಾಯಲಯಕ್ಕೆ ಆರೋಪಿಗಳನ್ನು ಹಾಜರು ಪಡಿಸಲಾಗುವುದು ಎಂದು ಮೂಲಗಳಿಂದ ತಿಳಿದುಬಂದಿದೆ. ಸಾರ್ವಜನಿಕರಿಂದ ಆರ್.ಟಿ.ಓ ಅಧಿಕಾರಿಗಳ ಮೇಲೆ ಸಾಕಷ್ಟು ದೂರುಗಳು ಕೇಳಿಬರುತ್ತಿದ್ದವು, ಇತ್ತೀಚೆಗೆ ನಗರ ಶಾಸಕ ಭರತ್ ರೆಡ್ಡಿ ಅವರು ಈ ಕುರಿತು ಆರ್.ಟಿ.ಓ ಕಛೇರಿಗೆ ಭೇಟಿ ನೀಡಿ ಖಡಕ್ ಎಚ್ಚರಿಕೆ ನೀಡಿರುವುದನ್ನು ಸ್ಮರಿಸಬಹುದು.

Read More

ನವದೆಹಲಿ: ಕಾಂಗ್ರೆಸ್‌ನ ಪ್ರಿಯಾಂಕಾ ಗಾಂಧಿ ವಾದ್ರಾ (Priyanka Gandhi) ಅವರು ಪ್ರತಿಸ್ಪರ್ಧಿ ಜ್ಯೋತಿರಾದಿತ್ಯ ಸಿಂಧಿಯಾ ವಿರುದ್ಧ ವಾಗ್ದಾಳಿ ನಡೆಸಿದ್ದು, ಜನರ ಆದೇಶವನ್ನು “ದ್ರೋಹ” ಮಾಡಿದ “ದೇಶದ್ರೋಹಿ” ಎಂದು ಹೇಳಿದ್ದಾರೆ. ಪ್ರಚಾರದ ಕೊನೆಯ ದಿನದಂದು ಮಧ್ಯಪ್ರದೇಶದ ದಾತಿಯಾದಲ್ಲಿ ಮಾತನಾಡಿದ ಪ್ರಿಯಾಂಕಾ “ಅವರ (ಬಿಜೆಪಿಯ) ಎಲ್ಲಾ ನಾಯಕರು ಸ್ವಲ್ಪ ವಿಚಿತ್ರವಾದವರು, ಮೊದಲು ನಮ್ಮ ಸಿಂಧಿಯಾ..ನಾನು ಉತ್ತರಪ್ರದೇಶದಲ್ಲಿ ಅವರೊಂದಿಗೆ ಕೆಲಸ ಮಾಡಿದ್ದೇನೆ, ನಿಜವಾಗಿ ಅವರ ಎತ್ತರ ಸ್ವಲ್ಪ ಕಡಿಮೆ ಆದರೂ ದುರಹಂಕಾರದಲ್ಲಿ ‘ವಾಹ್ ಭಾಯಿ ವಾಹ್’ ಎಂದಿದ್ದಾರೆ. https://ainlivenews.com/joint_pain_suprem_ray_treatment_reiki/ “ಯಾವುದೇ ಕಾರ್ಯಕರ್ತ ಅವರ ಬಳಿಗೆ ಹೋದರೆ ಅವರನ್ನು ಮಹಾರಾಜ ಎಂದು ಕರೆಯಬೇಕು. ಅವರು ಅದನ್ನು ಹೇಳದಿದ್ದರೆ, ನಮ್ಮ ಸಮಸ್ಯೆಗಳಿಗೆ ಗಮನ ಕೊಡುವುದಿಲ್ಲ”. ಅವರು ತಮ್ಮ ಕುಟುಂಬದ ಸಂಪ್ರದಾಯವನ್ನು ಚೆನ್ನಾಗಿ ಅನುಸರಿಸಿದ್ದಾರೆ. ಅನೇಕರು ದ್ರೋಹ ಮಾಡಿದ್ದಾರೆ, ಆದರೆ ಅವರು ಗ್ವಾಲಿಯರ್ ಮತ್ತು ಚಂಬಾದ ಸಾರ್ವಜನಿಕರಿಗೆ ದ್ರೋಹ ಮಾಡಿದರು ಅವರು ಸರ್ಕಾರ ಬೀಳುವಂತೆ ಮಾಡಿದರು ಎಂದು ಪ್ರಿಯಾಂಕಾ ಹೇಳಿದ್ದಾರೆ.

Read More

ವಿಶ್ವಕಪ್ ಟೂರ್ನಿಯ ಆವೃತ್ತಿ ಒಂದರಲ್ಲೇ ಅತಿ ಹೆಚ್ಚು ವಿಕೆಟ್ ಪಡೆದ ಭಾರತದ ಬೌಲರ್ಸ್‌ *ಮೊಹಮ್ಮದ್ ಶಮಿ, 23 ವಿಕೆಟ್, 6 ಇನಿಂಗ್ಸ್, 2023 * ಜಹೀರ್ ಖಾನ್, 21 ವಿಕೆಟ್, 11 ಇನಿಂಗ್ಸ್, 2011 * ಉಮೇಶ್ ಯಾದವ್, 18 ವಿಕೆಟ್, 8 ಇನಿಂಗ್ಸ್, 2015 * ಜಸ್‌ಪ್ರೀತ್‌ ಬುಮ್ರಾ, 18 ವಿಕೆಟ್, 9 ಇನಿಂಗ್ಸ್, 2019 * ಜಸ್‌ಪ್ರೀತ್‌ ಬುಮ್ರಾ,18 ವಿಕೆಟ್, 10 ಇನಿಂಗ್ಸ್, 2023 ಒಂದೇ ವಿಶ್ವಕಪ್ ಟೂರ್ನಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ಸ್‌ * ಮಿಚೆಲ್ ಸ್ಟಾರ್ಕ್, ಆಸ್ಟ್ರೇಲಿಯಾ, 27 ವಿಕೆಟ್, 10 ಇನಿಂಗ್ಸ್, 2019 * ಗ್ಲೆನ್ ಮೆಗ್ರಾತ್, ಆಸ್ಟ್ರೇಲಿಯಾ, 26 ವಿಕೆಟ್, 11 ಇನಿಂಗ್ಸ್, 2007 * ಮೊಹಮ್ಮದ್ ಶಮಿ, ಭಾರತ, 23 ವಿಕೆಟ್, 6 ಇನಿಂಗ್ಸ್, 2023 * ಚಮಿಂಡಾ ವಾಸ್, ಶ್ರೀಲಂಕಾ, 23 ವಿಕೆಟ್, 10 ಇನಿಂಗ್ಸ್, 2003 * ಮುತ್ತಯ್ಯ ಮುರಳೀಧರನ್, ಶ್ರೀಲಂಕಾ, 23 ವಿಕೆಟ್, 10 ಇನಿಂಗ್ಸ್,…

Read More

ಬೆಂಗಳೂರು:- ನಾವು ಆಪರೇಷನ್‌ ಕಮಲ ಮಾಡುವುದಿಲ್ಲ, ಭಯ ಬೇಡ ಎಂದು ಬಿ.ವೈ.ವಿಜಯೇಂದ್ರ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಬಿಜೆಪಿಯು ಇತರೆ ಪಕ್ಷದವರನ್ನು ಸೆಳೆದು ಆಪರೇಷನ್‌ ಕಮಲ ಮಾಡಲಿದೆ ಎಂಬ ಆತಂಕ ಕಾಂಗ್ರೆಸ್‌ನಲ್ಲಿದ್ದು, ಅಂತಹ ಭಯ ಬೇಡ. ಕಾಂಗ್ರೆಸ್ ಶಾಸಕರೇ ಅನುದಾನ ಇಲ್ಲದೇ ರಸ್ತೆಯಲ್ಲಿ ಓಡಾಡಲು ಸಾಧ್ಯವಾಗದ ಪರಿಸ್ಥಿತಿ ಇದೆ. ಕಾಂಗ್ರೆಸ್‌ ಸರ್ಕಾರಕ್ಕೆ ಅವರ ಪಕ್ಷದ ಶಾಸಕರೇ ಪಾಠ ಕಲಿಸುತ್ತಾರೆ ಎಂದರು. ಆ ಜಾತಿ, ಈ ಜಾತಿ ಎಂಬ ಮನೋಭಾವನೆ ಬಿಟ್ಟು ನಾನು ಬಿಜೆಪಿ ಕಾರ್ಯಕರ್ತ ಅಂತಾ ಕೆಲಸ ಮಾಡಿದರೆ ನಿಶ್ಚಿತವಾಗಿ ಲೋಕಸಭಾ ಚುನಾವಣೆಯಲ್ಲಿ ಗೆಲುವು ನಿಶ್ಚಿತ. ಚುನಾವಣೆ ಗೆದ್ದ ಬಳಿಕ ನಾನು ಯಾವುದೇ ಸಮುದಾಯಕ್ಕೆ ಸೇರಿದವನಲ್ಲ. ಕೇವಲ ಬಿಜೆಪಿ ಕಾರ್ಯಕರ್ತ ಎಂದು ಹೇಳಿದ ಅವರು, ನಾನು ರಾಜ್ಯ ಘಟಕದ ಅಧ್ಯಕ್ಷ ಸ್ಥಾನದ ನಿರೀಕ್ಷೆ ಮಾಡಿರಲಿಲ್ಲ. ಯಾರೂ ಸಹ ಬೇಸರದಲ್ಲಿ ಇಲ್ಲ. ಅದರ ಬಗ್ಗೆ ಚಿಂತೆ ಪಡಬೇಕಾಗಿಲ್ಲ. ಎಲ್ಲಾ ಹಿರಿಯರು, ಸಂಘ ಪರಿವಾರದ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುತ್ತೇನೆ ಎಂದರು.

Read More

ಮಂಗಳೂರು: ಲೋಕಸಭೆ ಚುನಾವಣೆ ವೇಳೆಗೆ ರಾಜ್ಯದಲ್ಲಿ ಬಿಜೆಪಿ, ಜೆಡಿಎಸ್‌ ಪಕ್ಷ ಖಾಲಿಯಾಗಲಿದ್ದು, ಆಗ ಕಾರ್ಯಕರ್ತರ ರಕ್ಷಣೆಗೆ ಯಾರೇ ನಾಯಕರು ಇರುವುದಿಲ್ಲ. ನಮ್ಮ ತತ್ವ ಸಿದ್ಧಾಂತ ಒಪ್ಪಿಕೊಂಡು ಯಾರು ಬೇಕಾದರೂ ಕಾಂಗ್ರೆಸ್‌ ಸೇರ್ಪಡೆಯಾಗಬಹುದು. ಬಿಜೆಪಿಯಲ್ಲಿ ನಾಯಕರೇ ಇಲ್ಲ ಎಂದು ನಮ್ಮ ನಾಯಕತ್ವ ಹುಡುಕಿಕೊಂಡು ಪಕ್ಷಕ್ಕೆ ಬರಲಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, https://ainlivenews.com/joint_pain_suprem_ray_treatment_reiki/ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ವಿಜಯೇಂದ್ರ ಅವರಿಗೆ ಶುಭ ಹಾರೈಸುತ್ತೇನೆ. ಇದರಿಂದ ಕಾಂಗ್ರೆಸ್‌ ಮೇಲೆ ಪರಿಣಾಮ ಆಗುವುದು ನಿಜ. ಅದು ಸಕಾರಾತ್ಮಕ, ಒಳ್ಳೆಯ ಪರಿಣಾಮ. ವಿಜಯೇಂದ್ರ ಆಯ್ಕೆಯಲ್ಲಿ ಬಿಜೆಪಿಯೊಳಗಿನ ಅಸಮಾಧಾನ ಬಹಿರಂಗವಾಗಿದೆ. ಸಿ ಟಿ ರವಿ, ಯತ್ನಾಳ್‌, ಸುನಿಲ್‌ ಕುಮಾರ್‌ ಗೈರುಹಾಜರಾಗಿದ್ದಾರೆ. ಯಡಿಯೂರಪ್ಪ ಅವರನ್ನು ಸಿಎಂ ಗಾದಿಯಿಂದ ಕಣ್ಣೀರು ಹಾಕಿಸಿ ಇಳಿಸಿದ್ದು ಯಾಕೆ ಎಂದು ಇನ್ನೂ ಯಾರಿಗೂ ಗೊತ್ತಿಲ್ಲ. ಬಿಜೆಪಿಯಲ್ಲಿ ಹೊಂದಾಣಿಕೆ ಇಲ್ಲ. ನಾಯಕತ್ವದ ಕೊರತೆ ಕಾರಣಕ್ಕೆ ಬಿಜೆಪಿ ವರಿಷ್ಠರು ವಿಜಯೇಂದ್ರ ಆಯ್ಕೆ ಮಾಡಿದ್ದಾರೆ ಎಂದರು.

Read More

ಬೆಂಗಳೂರು:- ಚಾಲಕನ ನಿಯಂತ್ರಣಕ್ಕೆ ಸಿಗದೇ ಡಿವೈಡರ್ ಮೇಲೆ ಥಾರ್ ಜೀಪ್ ಹತ್ತಿದ ಘಟನೆ ಮಾಗಡಿ ರಸ್ತೆಯ ವಿರೇಶ್ ಥಿಯೇಟರ್ ಮುಂಭಾಗದ ರಸ್ತೆಯಲ್ಲಿ ಜರುಗಿದೆ. ಕಾಮಾಕ್ಷಿಪಾಳ್ಯ ಮಾರ್ಗವಾಗಿ ಮಾಗಡಿರೋಡ್ ಗೆ ಥಾರ್ ಜೀಪ್ ಚಾಲಕ ಬರುತ್ತಿದ್ದ. ಈ ವೇಳೆ ರಸ್ತೆ ಡೌನ್ ಇದ್ದು, ಕಾರು ನಿಯಂತ್ರಣಕ್ಕೆ ಸಿಗದಿದ್ದಾಗ ಡಿವೈಡರ್ ಮೇಲೆ ಹತ್ತಿಸಿದ್ದಾನೆ. ಬೆಳಗ್ಗೆ 7:05 ರ ಸುಮಾರಿ ಘಟನೆ ನಡೆದಿದೆ. ಸ್ಥಳಕ್ಕೆ ವಿಜಯನಗರ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಇಲ್ಲ. ಬೆಳಗ್ಗೆ ಟ್ರಾಫಿಕ್ ಮೂಮೆಂಟ್ ಕಡಿಮೆ ಇದ್ದಿದ್ದರಿಂದ ಯಾವುದೇ ಅಪಘಾತವಾಗಿಲ್ಲ ಎನ್ನಲಾಗಿದೆ.

Read More

ಬೆಂಗಳೂರು:- ಸರ್ಕಾರದ ವಿರುದ್ದ ಅಂಗನವಾಡಿ ಕಾರ್ಯಕರ್ತೆಯರು ಮತ್ತೆ ಸಮರ ಸಾರಿದ್ದಾರೆ. ಈಸ ಹಿನ್ನೆಲೆ, ಸರ್ಕಾರದ ವಿರುದ್ದ ರಸ್ತೆಗಿಳಿದು ಪ್ರತಿಭಟಿಸಲು ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಸಜ್ಜಾಗಿದ್ದಾರೆ. ಆಫ್ಲೈನ್ ನೇಮಕಾತಿಗೆ ಆಗ್ರಹಿಸಿ ಅಂಗನವಾಡಿ ನೌಕರರು ಅನಿರ್ದಿಷ್ಟವಧಿ ಪ್ರತಿಭಟನೆ ಮಾಡಿದ್ದು, ನ.20 ರಿಂದ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ನೇಮಕಾತಿಗೆ ಆಗ್ರಹಿಸಿ ಪ್ರತಿಭಟನೆ ನಡೆಯಲಿದೆ. ಸೋಮವಾರ ಬೆಳಿಗ್ಗೆ 11 ಗಂಟೆಗೆ ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ ಶುರುವಾಗಲಿದೆ.. ಎಐಟಿಯುಸಿ ಜಯಮ್ಮ ನೇತೃತ್ವದಲ್ಲಿ ಫ್ರೀಡಂಪಾರ್ಕ್ ನಲ್ಲಿ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಯಲಿದೆ. ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆಗೆ ಕಾರಣವೇನು?* -ಬೆಂಗಳೂರು ನಗರದಲ್ಲಿ ಒಟ್ಟು 2877 ಅಂಗನವಾಡಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ -ಇದ್ರಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಹುದ್ದೆ 430, ಸಹಾಯಕಿಯರ ಹುದ್ದೆ 1198 ಖಾಲಿ ಇವೆ – ಈ ಹುದ್ದೆಗಳಿಗೆ 3-4 ವರ್ಷದಿಂದ ನೌಕರರನ್ನ ನೇಮಕ ಮಾಡಿಲ್ಲ -ಮಾರ್ಚ್ 5 ರಂದು ಭೌತಿಕ ನೇಮಕಾತಿ ಪ್ರಕಟಣೆ ಹೊರಡಿಸಿದ್ದು – ಸಾಕಷ್ಟು ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಹುದ್ದೆಗೆ ಅರ್ಜಿ ಸಲ್ಲಿಸಿದ್ದಾರೆ – ಅರ್ಜಿ ಸಲ್ಲಿಸಿ 8…

Read More

ಮುಂಬೈ: ಏಕದಿನ ವಿಶ್ವಕಪ್‌ 2023 (World Cup 2023) ರ ಟೂರ್ನಿಯಲ್ಲಿ ನ್ಯೂಜಿಲೆಂಡ್‌ (New Zealand) ವಿರುದ್ಧ ನಡೆದ ಸೆಮಿಫೈನಲ್‌ ಪಂದ್ಯದಲ್ಲಿ ಅಬ್ಬರದ ಬೌಲಿಂಗ್‌ ದಾಳಿ ನಡೆಸಿ 7 ವಿಕೆಟ್‌ ಕಬಳಿಸಿದ ಭಾರತದ ವೇಗಿ ಮೊಹಮ್ಮದ್‌ ಶಮಿ (Mohammed Shami) ದಾಖಲೆ ಬರೆದಿದ್ದಾರೆ. ಲೆಜೆಂಡರಿ ಆಸ್ಟ್ರೇಲಿಯಾ ವೇಗದ ಬೌಲರ್‌ ಗ್ಲೆನ್‌ ಮೆಕ್‌ಗ್ರಾತ್‌ (Glenn Mcgrath) ದಾಖಲೆಯನ್ನು ಸರಿಗಟ್ಟಿದ್ದಾರೆ.  ಗ್ಲೆನ್‌ ಮೆಕ್‌ಗ್ರಾತ್‌ ಏಕದಿನ ವಿಶ್ವಕಪ್ ಇತಿಹಾಸದಲ್ಲಿ ಅತ್ಯುತ್ತಮ ಬೌಲಿಂಗ್ ಅಂಕಿಅಂಶಗಳ ದಾಖಲೆಯನ್ನು ಹೊಂದಿದ್ದಾರೆ. ಐಸಿಸಿ ವಿಶ್ವಕಪ್ 2003 ರ ದಕ್ಷಿಣ ಆಫ್ರಿಕಾದ ಪೊಟ್ಚೆಫ್‌ಸ್ಟ್ರೂಮ್‌ನಲ್ಲಿ ನಮೀಬಿಯಾ ವಿರುದ್ಧ ನಡೆದ ಪಂದ್ಯದಲ್ಲಿ ಕೇವಲ 15 ರನ್‌ ನೀಡಿ 7 ವಿಕೆಟ್‌ ಕಿತ್ತು ವಿಶ್ವ ದಾಖಲೆ ಬರೆದಿದ್ದರು. ಆ ದಾಖಲೆಯನ್ನು ಭಾರತದ ಬೌಲರ್‌ ಶಮಿ ಸರಿಗಟ್ಟಿದ್ದಾರೆ. ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಬುಧವಾರ ನ್ಯೂಜಿಲೆಂಡ್‌ ವಿರುದ್ಧ ನಡೆದ ಪಂದ್ಯದಲ್ಲಿ ಶಮಿ ಬೌಲಿಂಗ್‌ ಮೋಡಿ ಮಾಡಿದರು. 9.5 ಓವರ್‌ಗಳಿಗೆ 57 ರನ್‌ ನೀಡಿ 7 ವಿಕೆಟ್‌ ಕಬಳಿಸಿ ಮಿಂಚಿದರು. ಜೊತೆಗೆ ಮ್ಯಾನ್‌…

Read More