ಜನನ ದಿನಾಂಕ ಮತ್ತು ಸಮಯದ ಆಧಾರ ಮೇಲೆ ನಿಮ್ಮ ಜನ್ಮಜಾತಕ ಬರೆದು ಅದನ್ನು ಸರಿಯಾಗಿ ಪರೀಕ್ಷಿಸಿ ಈ ಕೆಳಕಂಡ ಮಾಹಿತಿಗಳು ಇದ್ದರೆ”ಲಕ್ಷ್ಮಿ ಯೋಗ” ಉಂಟಾಗುತ್ತದೆ. ರಾಶಿಚಕ್ರದ ಚಿಹ್ನೆಯು ಏರಿಕೆಯ ಸ್ಥಾನದಲ್ಲಿ ಯೋಗವನ್ನು ಪಡೆದುಕೊಂಡರೆ ಉತ್ತಮ ಅದೃಷ್ಟದಿಂದ ಕೂಡಿರುತ್ತದೆ. ಲಕ್ಷ್ಮಿ ದೇವಿಯು ತ್ರಿಕೋನ ಭಾವ ದೇವತೆ ಆಗಿರುತ್ತಾಳೆ. ಭಗವಾನ್ ವಿಷ್ಣು ಕೇಂದ್ರ ಭವನದ ದೇವರು. ಕೇಂದ್ರ ತ್ರಿಕೋನ ರಾಜ ಯೋಗದಲ್ಲಿ ಒಂತ್ತನೇ ಮನೆಯ ಅಧಿಪತಿ ಉದಾತ್ತನಾಗಿದ್ದರೆ ಉತ್ತಮ ಅದೃಷ್ಟವು ಪಡೆದುಕೊಳ್ಳುವವರು. ಈ ಯೋಗದಲ್ಲಿ ವಿವಿಧ ಮನೆಗಳಲ್ಲಿ ಗ್ರಹಗಳ ಸ್ಥಾನ ಹೇಗಿದೆ ಎನ್ನುವುದನ್ನು ಪರಿಗಣಿಸಿ, ಅದೃಷ್ಟದ ತೀರ್ಪು ತಿಳಿಸಲಾಗುವುದು. ಈ ಯೋಗ ಅಥವಾ ಕುಂಡಲಿಯ ಲೆಕ್ಕಾಚಾರವನ್ನು ಪಾಶ್ಚಾತ್ಯ ಜ್ಯೋತಿಷ್ಯದಲ್ಲಿ ತಿಳಿಯಬಹುದು. ಒಂಬತ್ತನೇ ಮನೆ ಅದು “ಭಾಗ್ಯಸ್ಥಾನ”. ಒಂಬತ್ತನೇ ಮನೆಯಲ್ಲಿ ತ್ರಿಕೋನ ಉಂಟಾದರೆ ಅದನ್ನು “ಶುಭ ಲಕ್ಷ್ಮಿ ಯೋಗ” ಎಂದು ಪರಿಗಣಿಸಲಾಗುತ್ತದೆ. ಈ ಯೋಗದಿಂದ ಸಂಪತ್ತಿನ ಆದಾಯ ಉಂಟಾಗುವುದು. ಐಷಾರಾಮಿ ಜೀವನ ನಡೆಸುವರು. ಐಷಾರಾಮಿ ವಸ್ತುಗಳ ಬಳಕೆ ಮತ್ತು ಸಂತೋಷವನ್ನು ಪಡೆದುಕೊಳ್ಳುವರು. ಕೇಂದ್ರ ತ್ರಿಕೋನ ರಾಜ…
Author: AIN Author
ತಮ್ಮ ಜಾತಕ ನೋಡಿ (ಒಂದು ವೇಳೆ ಜಾತಕ ಇಲ್ಲದೆ ಹೋದರೆ ಹುಟ್ಟಿದ ದಿನಾಂಕ ಹಾಗೂ ಸಮಯ ತಿಳಿಸಿದರೆ ಜಾತಕ ಬರೆದು ಕಳುಹಿಸಲಾಗುವುದು) ಜಾತಕ ಆಧಾರ ಮೇಲೆ_ ರಾಶಿ ಹರಳು, ವಿದ್ಯೆ, ಉದ್ಯೋಗ, ಆರೋಗ್ಯ,ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಅತ್ತೆ-ಸೊಸೆ ಕಿರಿಕಿರಿ, ಸಂತಾನಭಾಗ್ಯ, ಕುಟುಂಬ ವಿಚಾರ , ಪ್ರೇಮ ವಿವಾಹದ ಮಾಹಿತಿ, ವಿದೇಶ ಪ್ರವಾಸ, ಆಸ್ತಿ ಖರೀದಿ, ಮನೆ ಕಟ್ಟುವ ವಿಚಾರ ಮುಂತಾದ ಮಾರ್ಗದರ್ಶನಗಳು ತಿಳಿಸಲಾಗುವುದು. ಸೋಮಶೇಖರ್B.Sc ವಂಶಪಾರಂಪರಿತ ಜ್ಯೋತಿಷ್ಯರು, ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು. Mob.93534 88403 ನಿಮ್ಮ ದಾಂಪತ್ಯ ಜೀವನದಲ್ಲಿ ಸಂತೋಷವಾಗಿ ಬಾಳಬೇಕಾದರೆ ಅವರ ಜನ್ಮ ಕುಂಡಲಿಯಲ್ಲಿ ಇರುವ ಗ್ರಹಗಳೇ ಕಾರಣ. ನಿಮ್ಮ ಜನ್ಮ ಕುಂಡಲಿಯಲ್ಲಿ 2 ನೇ ಮನೆ, 7ನೇ ಮನೆ ಮತ್ತು 11ನೇ ಮನೆ ಪರೀಕ್ಷಿಸಬೇಕು. ಈ ಸ್ಥಾನದಲ್ಲಿ ಏನಾದರೂ ಶುಭಗ್ರಹಗಳಿದ್ದರೆ ನಿಮ್ಮ ದಾಂಪತ್ಯ ಜೀವನ ಸುಖಮಯವಾಗಿರುತ್ತದೆ. ಚಂದ್ರ, ಬುಧ, ಗುರು ಮತ್ತು ಶುಕ್ರ ಗಳಿಂದ ಉತ್ತಮ ಫಲ ದೊರಕುವುದು. ನಿಮ್ಮ ಕುಂಡಲಿಯಲ್ಲಿ 2 ನೇ…
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ. ಯಾವುದೇ ಸಂಸ್ಥೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ. ಸೋಮಶೇಖರ್ ಗುರೂಜಿB.Sc ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು. Mob. 93534 88403 ಯಾವುದೇ ವ್ಯಕ್ತಿಯ ಹುಟ್ಟಿದ ದಿನಾಂಕ ಮತ್ತು ಸಮಯ ಆಧಾರದಿಂದ ಜಾತಕ ಬರೆಯಲಾಗುವುದು, ಅದರ ಅನುಗುಣವಾಗಿ ನಕ್ಷತ್ರ, ಚರಣ, ರಾಶಿ, ತಿಳಿಯುವುದು ಸಹಜ. ಜಾತಕದಲ್ಲಿ ಸರ್ವೇ ಸಾಮಾನ್ಯವಾಗಿ ಕಾಣುವ ದೋಷಗಳು ಈ ಕೆಳಗಿನಂತಿವೆ… (1) ಗ್ರಹಣ ದೋಷ: ಜನ್ಮ ಕುಂಡಲಿಯಲ್ಲಿ ರವಿ ಮತ್ತು ಚಂದ್ರ ಸಂಯೋಗರಾಹು-ಕೇತುವಿನೊಂದಿಗೆ ಆದಾಗ ಈ ದೋಷ ಸೃಷ್ಟಿಯಾಗುವುದು. ಈ ದೋಷದಿಂದ ಕೆಳಕಂಡ ಸಮಸ್ಯೆಗಳು ಕಾಡುವವು.…
ವೃಶ್ಚಿಕ ಸಂಕ್ರಾಂತಿ ಸೂರ್ಯೋದಯ: 06.19 AM, ಸೂರ್ಯಾಸ್ತ : 05.50 PM ಶಾಲಿವಾಹನ ಶಕೆ1944, ಶುಭಕೃತ ನಾಮ ಸಂವತ್ಸರ, ಸಂವತ್2078, ಕಾರ್ತೀಕ ಮಾಸ, ಶುಕ್ಲ ಪಕ್ಷ, ದಕ್ಷಿಣಾಯಣ ಶರತ್ ಋತು, ತಿಥಿ: ಇವತ್ತು ಚೌತಿ 11:03 AM ತನಕ ನಂತರ ಪಂಚಮಿ ನಕ್ಷತ್ರ: ಇವತ್ತು ಮೂಲ 02:17 AM ತನಕ ನಂತರ ಆಷಾಢ ಯೋಗ: ಇವತ್ತು ಧೃತಿ07:37 AM ತನಕ ನಂತರ ಶೂಲ ಕರಣ: ಇವತ್ತು ವಿಷ್ಟಿ 11:03 AM ತನಕ ನಂತರ ಬವ 10:12 PM ತನಕ ನಂತರ ಬಾಲವ ರಾಹು ಕಾಲ: 10:30 ನಿಂದ 12:00 ವರೆಗೂ ಯಮಗಂಡ: 03:00 ನಿಂದ 04:30 ವರೆಗೂ ಗುಳಿಕ ಕಾಲ: 07:30 ನಿಂದ 09:00 ವರೆಗೂ ಅಮೃತಕಾಲ: 08.41 PM to 10.13 PM ಅಭಿಜಿತ್ ಮುಹುರ್ತ: ಬೆಳಗ್ಗೆ.11:38 ನಿಂದ ಮ.12:23 ವರೆಗೂ ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ. “ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು” ಸೋಮಶೇಖರ್ ಗುರೂಜಿB.Sc ಜ್ಯೋತಿಷ್ಯ…
ಬೆಳಗಾವಿ:- ಎಲ್ಲ ಸ್ಥಾನಗಳನ್ನೂ ಬಿಜೆಪಿ ಅವರಿಗೆ ಬಿಟ್ಟುಕೊಡಲು ನಾವೇನು ಕಡಲೆ ಪುರಿ ತಿನ್ನುತ್ತ ಕುಳಿತಿದ್ದೇವೆಯೇ’ ಎಂದು ಶಾಸಕ ಲಕ್ಷ್ಮಣ್ ಸವದಿ ಪ್ರಶ್ನಿಸಿದರು. ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲೂ ಗೆಲ್ಲುವುದಾಗಿ ಹೇಳಿದ್ದಾರೆ. ಅವರು ಪಕ್ಕದ ಮೂರು-ನಾಲ್ಕು ಕ್ಷೇತ್ರ ಸೇರಿಸಿಕೊಂಡು 32 ಕ್ಷೇತ್ರಗಳಲ್ಲೂ ಗೆಲ್ಲುತ್ತೇವೆ ಎನ್ನಬಹುದಿತ್ತು’ ಎಂದು ಶಾಸಕ ಲಕ್ಷ್ಮಣ ಸವದಿ ವ್ಯಂಗ್ಯವಾಡಿದರು. ಚುನಾವಣೆಯಲ್ಲಿ ಗೆಲ್ಲುವ ಬಗ್ಗೆ ವಿಜಯೇಂದ್ರ ನೀಡಿದ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ‘ಎಲ್ಲ ಸ್ಥಾನಗಳನ್ನೂ ಅವರಿಗೆ ಬಿಟ್ಟುಕೊಡಲು ನಾವೇನು ಕಡಲೆ ಪುರಿ ತಿನ್ನುತ್ತ ಕುಳಿತಿದ್ದೇವೆಯೇ’ ಎಂದು ಪ್ರಶ್ನಿಸಿದರು. ‘ಉಪ ಚುನಾವಣೆಯೇ ಬೇರೆ. ಸಾರ್ವತ್ರಿಕ ಚುನಾವಣೆಯೇ ಬೇರೆ. ಉಪ ಚುನಾವಣೆ ಕೇವಲ ಬಿಂದಿಗೆಯಲ್ಲಿನ ನೀರು ತೆಗೆದಂತೆ. ಆದರೆ, ಸಾರ್ವತ್ರಿಕ ಚುನಾವಣೆ ಸಮುದ್ರದಲ್ಲಿನ ನೀರು ತೆಗೆದಂತೆ. ಯಾರು ಗೆಲ್ಲುತ್ತಾರೆ ನೋಡೋಣ’ ಎಂದು ಪುನರುಚ್ಚರಿಸಿದರು.
ಕಲಬುರ್ಗಿ :- ಕರ್ನಾಟಕದಲ್ಲಿ ಇರುವುದು ಅಪ್ಪ- ಮಕ್ಕಳ ಸರ್ಕಾರ ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಫೋನ್‌ನಲ್ಲಿ ಮುಖ್ಯಮಂತ್ರಿ ಪುತ್ರ ಯತೀಂದ್ರ ಸಿದ್ದರಾಮಯ್ಯ ಅವರು ಮಾತನಾಡುವುದು ನೋಡಿದರೆ ಹಿಂಬಾಗಿಲಿನ ಮೂಲಕ ಸರ್ಕಾರವನ್ನು ನಡೆಸುತ್ತಿದ್ದಾರೆ ಎಂಬುದು ತಿಳಿಯುತ್ತದೆ. ರಾಜ್ಯದಲ್ಲಿ ಇರುವುದು ಅಪ್ಪ- ಮಕ್ಕಳ ಸರ್ಕಾರ’ ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ಟೀಕಿಸಿದರು. ಯತೀಂದ್ರ ಅವರು ಸೂಪರ್ ಸಿ.ಎಂ ಆಗಿ ಕಾರ್ಯ ನಿರ್ವಹಿಸುತ್ತಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಸರ್ಕಾರದಲ್ಲಿ ಯತೀಂದ್ರ ಅವರು ಆದೇಶ ಕೊಡುವ ಮಟ್ಟಕ್ಕೆ ತಲುಪಿದ್ದಾರೆ ಎಂದರೆ ಏನರ್ಥ? ವಿಡಿಯೊ ಸಂಭಾಷಣೆಯ ಬಗ್ಗೆ ಮುಖ್ಯಮಂತ್ರಿಗಳು ಸ್ಪಷ್ಟೀಕರಣ ಕೊಡಬೇಕು’ ಎಂದರು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರು ತಾವು ಎರಡನೇ ಅಂಬೇಡ್ಕರ್ ಎಂದು ತಿಳಿದಿದ್ದಾರೆ. ಕಲಬುರಗಿಯಲ್ಲಿ ಒಂದು, ಬೆಂಗಳೂರಿನಲ್ಲಿ ಮತ್ತೊಂದು ಮಾತನಾಡುವ ಪ್ರಿಯಾಂಕ್ ಅವರು ಬೆಳೆದಿದ್ದು ಮಲ್ಲಿಕಾರ್ಜುನ ಖರ್ಗೆ ಅವರ ಆಶ್ರಯದಲ್ಲಿ. ಪ್ರಿಯಾಂಕ್ ಪಡೆದಿದ್ದೆಲ್ಲವೂ ತಮ್ಮ ತಂದೆಯಿಂದ. ಆದರೆ, ಇವತ್ತು ಅವರೇ ಕುಟುಂಬ ರಾಜಕಾರಣದ ಬಗ್ಗೆ ಮಾತನಾಡುತ್ತಿದ್ದಾರೆ’ ಎಂದು…
ಸಿರಿಗೆರೆ:- ಅಧ್ಯಕ್ಷ ಸ್ಥಾನ ಅಧಿಕಾರವಲ್ಲ, ಹೊಣೆಗಾರಿಕೆ ಎಂದು ಬಿವೈ ವಿಜಯೇಂದ್ರ ಹೇಳಿದ್ದಾರೆ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಯವರ ಆಶೀರ್ವಾದ ಪಡೆದು ಮಾತನಾಡಿದರು. ನನಗೆ ದೊರೆತಿರುವ ರಾಜ್ಯ ಬಿಜೆಪಿ ಪಕ್ಷದ ಅಧ್ಯಕ್ಷ ಸ್ಥಾನ ಅಧಿಕಾರವಲ್ಲ. ಅದು ಹೊಣೆಗಾರಿಕೆ. ರಾಜ್ಯದ ಎಲ್ಲ ಹಿರಿಯರ ಮಾರ್ಗದರ್ಶನದಿಂದ ಅದನ್ನು ನಿಭಾಯಿಸುವೆ’ ಎಂದರು. ಹಾದಿಯಲ್ಲಿ ಕಲ್ಲುಮುಳ್ಳುಗಳೂ ಇವೆ. ಹಿರಿಯರ ಮಾರ್ಗದರ್ಶನದಲ್ಲಿ ಅವುಗಳನ್ನು ದಾಟಿಕೊಂಡು ಮುನ್ನಡೆಯುತ್ತೇನೆ. ಶಿಕಾರಿಪುರ ಕ್ಷೇತ್ರದ ಜನರು ಶಾಸನಸಭೆಗೆ ನನ್ನನ್ನು ಆಯ್ಕೆ ಮಾಡಿದ್ದರಿಂದ ಈ ಹೊಣೆಗಾರಿಕೆ ಸಂದಿದೆ’ ಎಂದರು. ‘ಗುರುವಿನ ಗುಲಾಮನಾಗದ ತನಕ ದೊರೆಯದಣ್ಣ ಮುಕುತಿ ಎಂಬ ದಾಸರ ಮಾತಿನಲ್ಲಿ ನಮ್ಮ ತಂದೆಗೆ ಅಪಾರ ವಿಶ್ವಾಸ. ಹಾಗಾಗಿಯೇ ಅವರು ಧರ್ಮಪೀಠಗಳಿಗೆ ಭೇಟಿ ನೀಡಿದಾಗ ಮುಖ್ಯಮಂತ್ರಿ, ನಾಯಕ ಎಂಬ ಎಲ್ಲ ಬಿಗುಮಾನ ತೊರೆದು ವಿನೀತಭಾವದಿಂದ ಇರುತ್ತಿದ್ದರು. ಮಠದ ಶಿಷ್ಯನಾಗಿ ನಾನೂ ಸಹ ಅವರದೇ ದಾರಿಯಲ್ಲಿ ಹೆಜ್ಜೆ ಹಾಕುತ್ತೇನೆ. ಆ ಕೆಲಸದಲ್ಲಿ ತರಳಬಾಳು ಶ್ರೀಗಳ ಮಾರ್ಗದರ್ಶನ ಮತ್ತು ಆಶೀರ್ವಾದ ಕೋರುತ್ತೇನೆ’ ಎಂದು ಹೇಳಿದರು. ‘ನನ್ನಿಂದ ತಪ್ಪುಗಳೇನಾದರೂ ಆದರೆ ಶ್ರೀಗಳು ಮಾರ್ಗದರ್ಶನ ಮಾಡಬೇಕು’…
ಬೆಂಗಳೂರು:- ರಾಜ್ಯದಲ್ಲಿ 3 ಸಾವಿರ ಪಬ್ಲಿಕ್ ಶಾಲೆ ಆರಂಭಿಸಲು ನಿರ್ಧರಿಸಲಾಗಿದೆ ಎಂದು ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಎಲ್ಲಾ ಮಕ್ಕಳು ಶಿಕ್ಷಣ ಪಡೆಯಬೇಕು, ಸರ್ಕಾರಿ ಶಾಲೆಗಳಿಗೆ ಹೆಚ್ಚು ಬರಬೇಕು. ಹಾಗಾಗಿ, ರಾಜ್ಯದಲ್ಲಿ ಸುಮಾರು 3ಸಾವಿರ ಪಬ್ಲಿಕ್ ಶಾಲೆಗಳನ್ನು ಪ್ರಾರಂಭಿಸಲು ಉದ್ದೇಶಿಸಲಾಗಿದೆ ಎಂದರು. 2024-25ರ ವೇಳೆಗೆ ಮಕ್ಕಳ ಸಂಖ್ಯೆ ಹೆಚ್ಚಾಗಬೇಕು. ಹಾಗಾಗಿ, ಗ್ರಾಮಾಂತರ ಭಾಗದಲ್ಲಿ ಪಬ್ಲಿಕ್ ಶಾಲೆಗಳನ್ನು ಆರಂಭಿಸಲಾಗುತ್ತಿದೆ. ಮೂರು ವರ್ಷದಲ್ಲಿ ಕಾರ್ಯ ಪೂರ್ಣಗೊಳ್ಳಲಿದೆ. ಇದಕ್ಕೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ ಕೆ ಶಿವಕುಮಾರ್ ಅವರು ಸಹ ಒಪ್ಪಿಗೆ ಕೊಟ್ಟಿದ್ದಾರೆ. ಸಿಎಸ್ಆರ್ ಯೋಜನೆಯಡಿ ಹಣ ಲಭ್ಯವಾಗಲಿದೆ. ಇದಕ್ಕೆ 600 ಕೋಟಿ ರೂಪಾಯಿ ಖರ್ಚು ಬರಬಹುದು. ಅಜೀಂ ಪ್ರೇಂಜಿ ಫೌಂಡೇಷನ್ ಕೂಡ ಮಾತುಕತೆ ನಡೆಸಿದೆ. ಮುಂದಿನ ಶೈಕ್ಷಣಿಕ ವರ್ಷದಿಂದ ಸೌಲಭ್ಯ ಸಿಗಬಹುದು. ಮೂಲ ಸೌಕರ್ಯ ಕಲ್ಪಿಸುವ ವಿಚಾರದಲ್ಲಿ ಸಿಗಬಹುದು ಎಂದು ಮಾಹಿತಿ ನೀಡಿದ್ದಾರೆ. ಕರ್ನಾಟಕ ಪಬ್ಲಿಕ್ ಶಾಲೆಗಳ ಗುಣಮಟ್ಟ ಚೆನ್ನಾಗಿದೆ. ದೆಹಲಿಯಲ್ಲಿ ಇದು ವರ್ಕೌಟ್ ಆಗಿದೆ. ರಾಜ್ಯದಲ್ಲಿ ಎರಡು…
ಬೆಂಗಳೂರು :- ಹೈಕೋರ್ಟ್ ಆದೇಶದಂತೆ ಹೆಚ್ಡಿಕೆ ಬಿಡದಿ ಜಮೀನು ಒತ್ತುವರಿ ತೆರವಿಗೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಚಿವ ಚೆಲುವರಾಯಸ್ವಾಮಿ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಹೈಕೋರ್ಟ್ ಆದೇಶದ ಬಗ್ಗೆ ಸರ್ಕಾರ ಏನು ಮಾಡುತ್ತೆ ಅದನ್ನು ಮಾಡುತ್ತದೆ. ಮಾಜಿ ಸಿಎಂ ಎಂಬ ಕಾರಣಕ್ಕೆ ಮುಲಾಜು ಮಾಡಲ್ಲ, ಸರ್ಕಾರ ಹೈಕೋರ್ಟ್ ಆದೇಶ ಪಾಲನೆ ಮಾಡುತ್ತದೆ. ಆದರೆ, ಯಾವಾಗ ಎಂದು ಹೇಳಲು ಆಗುವುದಿಲ್ಲ ಎಂದರು. ಕುಮಾರಸ್ವಾಮಿ ನಾನು ಬೇರೆಯವರ ಆಸ್ತಿ ಲೂಟಿ ಮಾಡಿಲ್ಲ ಎನ್ನುತ್ತಾರೆ. ಹಾಗಾದರೆ ಅದರ ಬಗ್ಗೆ ತನಿಖೆ ಮಾಡಿಸಲಿ. ಎಲ್ಲಾ ರಾಜಕಾರಣಿಗಳ ಬಗ್ಗೆ ತನಿಖೆ ಮಾಡಬೇಕೋ ಅಥವಾ ಆಯ್ದ ಕೆಲವರ ಮೇಲೆ ತನಿಖೆ ಮಾಡಬೇಕೋ ಎಂಬುದನ್ನು ಪ್ರಧಾನಿ ಬಳಿ ಹೇಳಿ ತನಿಖೆ ಮಾಡಸಲಿ. ತನಿಖಾ ಸಂಸ್ಥೆಗಳು ಅವರ ಕೈಯಲ್ಲೇ ಇದೆ ಎಂದರು. ನಾನು ಅವರ ರೀತಿಯಲ್ಲಿ ಬಿಡದಿಯಲ್ಲಿ ಒತ್ತುವರಿ ಮಾಡಿಲ್ಲ, ಗ್ರ್ಯಾಂಟ್ ಮಾಡಿರುವ ಜಮೀನು ಪಡೆದಿಲ್ಲ. ನಾನು ಜಮೀನನ್ನು ಖರೀದಿ ಮಾಡಿದ್ದೇವೆ. ಯಾವುದೇ ಗ್ರ್ಯಾಂಟ್ ಜಮೀನು ಪಡೆದರೆ ಅಥವಾ ಒತ್ತುವರಿ ಮಾಡಿದರೆ ಅದು…
ಬೆಂಗಳೂರು:- ಚಕ್ರವರ್ತಿ ಸೂಲಿಬೆಲೆ ವಿರುದ್ಧ ದಾಖಲಾಗಿದ್ದ ಎಫ್‌ಐಆರ್‌ಗೆ ಧಾರವಾಡದ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ. ಅಕ್ಟೋಬರ್ 3 ರಂದು ದೇವಸ್ಥಾನಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಚಕ್ರವರ್ತಿ ಸೂಲಿಬೆಲೆ ಮಾತನಾಡಿ, ಸಿದ್ದರಾಮಯ್ಯ ಅವರು ಅಧಿಕಾರಕ್ಕೆ ಬಂದಾಗಲೆಲ್ಲಾ ಹಿಂದೂಗಳು ತೊಂದರೆ ಎದುರಿಸುತ್ತಿದ್ದಾರೆ ಮತ್ತು ಅವರು ಮುಸ್ಲಿಮರನ್ನು ಬೆಂಬಲಿಸುವವರೆಗೂ ಇಂಥ ಘಟನೆಗಳು ನಡೆಯುತ್ತಲೇ ಇರುತ್ತವೆ ಎಂದು ಆರೋಪಿಸಿದ್ದರು. ಹೀಗಾಗಿ ಕಾರವಾರ ಗ್ರಾಮಾಂತರ ಠಾಣೆಯಲ್ಲಿ ಅ. 5 ರಂದು ಪೊಲೀಸರು ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಂಡಿದ್ದರು. ಸೂಲಿಬೆಲೆ ತಮ್ಮ ವಿರುದ್ಧ ದಾಖಲಾದ ಎಫ್‌ಐಆರ್‌ನ್ನು ರದ್ದುಪಡಿಸುವಂತೆ ಸೂಲಿಬೆಲೆ ಅರ್ಜಿ ಸಲ್ಲಿಸಿದ್ದಾರೆ. ಪ್ರಕರಣದ ವಿಚಾರಣೆ ನಡೆಸಿದ ನ್ಯಾ. ಶಿವಶಂಕರ ಅಮರಣ್ಣನವರ್ ಅವರಿದ್ದ ಏಕಸದಸ್ಯ ಪೀಠ, ಪ್ರಕರಣದ ಕುರಿತು ಹೆಚ್ಚಿನ ವಿಚಾರಣೆ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟು, ಎಫ್‌ಐಆರ್‌ಗೆ ಮಧ್ಯಂತರ ತಡೆಯಾಜ್ಞೆ ನೀಡಿ ವಿಚಾರಣೆ ಮುಂದೂಡಿದೆ.