ಕಲಬುರಗಿ: ಈಗಾಗಲೇ 10 ಮ್ಯಾಚ್ ಗೆದ್ದಿರೋ ಟೀಂ ಇಂಡಿಯಾ ಇದೀಗ ಫೈನಲ್ ಮ್ಯಾಚ್ ಆಡಲು ರೆಡಿಯಾಗಿದ್ದು 11 ಅಂದ್ರೆ ವಿಕ್ಟರಿ ಹೀಗಾಗಿ ಕಪ್ ನಮ್ದೆ ಅಂತ ಮಾಜಿ ಸಚಿವ ಶ್ರೀರಾಮುಲು ಹೇಳಿದ್ರು. ಕಲಬುರಗಿಯಲ್ಲಿಂದು ಮಾತನಾಡಿದ ಶ್ರೀರಾಮುಲು ಒಂದನೇ ಬೌಲರ್ ಒಂದನೇ ಬ್ಯಾಟ್ಸಮನ್ ಹಿಡಿದು 11ನೇ ಆಟಗಾರರವರೆಗೂ ಫುಲ್ ಫಾಮಲ್ಲಿದ್ದಾರೆ.. ನಾನು ಎಷ್ಟು ವರ್ಷಗಳಿಂದ ಮ್ಯಾಚ್ ನೋಡ್ತಿದ್ದೇನೆ ಈತರ ನೋಡೇ ಇಲ್ಲ. ಎಲ್ಲ ಮ್ಯಾಚ್ ಗೆದ್ದಿದ್ದಾರೆ ಫೈನಲ್ ಸಹ ಖಂಡಿತ ಗೆಲ್ತಾರೆ ಅಂತ ಹೇಳಿದ್ರು..ಒಟ್ಟಾರೆ ಈ ಬಾರಿ ವಲ್ಡ್ ಕಪ್ ನಮ್ಮದೇ ಅಂದ್ರು..
Author: AIN Author
ದಾವಣಗೆರೆ: ಪೋಕ್ಸೋ ಪ್ರಕರಣದಲ್ಲಿ ಸಂಬಂಧ ಜೈಲು ಪಾಲಾಗಿದ್ದ ಚಿತ್ರದುರ್ಗದ ಮುರುಘಾಶ್ರೀಗೆ ಜಾಮೀನು ಸಿಕ್ಕಿದ್ದು, ಇದೀಗ ಚಿತ್ರದುರ್ಗ ಜಿಲ್ಲಾ ಕಾರಾಗೃಹದಿಂದ ಮುರುಘಾಶ್ರೀ ಬಿಡುಗಡೆಯಾಗಿದ್ದಾರೆ. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸದ್ಯಕ್ಕೆ ಈ ಪ್ರಕರಣ ಬಗ್ಗೆ ನಾನು ಮಾತನಾಡುವುದಿಲ್ಲ. ಆರೋಪಕ್ಕೆ ಸಂಬಂಧಿಸಿದಂತೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಎಲ್ಲದಕ್ಕೂ ವಕೀಲರು ಹೇಳ್ತಾರೆ, ಮೌನವಾಗಿರುವುದೇ ಒಳ್ಳೆಯದು ಎಂದು ಹೇಳಿದ್ದಾರೆ.
ಕಲಬುರಗಿ: ಸತತ ಮೂರು ಬಾರಿ ಮುಂದೂಡಿದ್ದ ಕಲಬುರಗಿ KDP ಸಭೆ ನಾಲ್ಕನೇ ಬಾರಿಗೂ ಮುಂದೋಯ್ತು. ಅಂತೂ ಇಂತೂ ನಾಲ್ಕನೇ ಬಾರಿಗೆ ಫಿಕ್ಸ್ ಆಯ್ತಲ್ಲ ಅಂತ ಅನ್ನುಕೊಂಡ್ರೆ ಇದೀಗ ಅನಿವಾರ್ಯ ಕಾರಣಗಳಿಂದ ಮುಂದೂಡಲಾಗಿದೆ ಅಂತ ಮಾಹಿತಿ ಹೊರಹಾಕಿದೆ.. ಎಲ್ಲವೂ ಅಂದುಕೊಂಡಂತೆ ಆದ್ರೆ ಇದೇ 17 ರಂದು ಡಿಸಿ ಕಚೇರಿಯಲ್ಲಿ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಪ್ರಗತಿ ಪರಿಶೀಲನಾ ಸಭೆ ಮಾಡಬೇಕಿತ್ತು..ಆದ್ರೆ ಏನಾಯ್ತೋ ಗೊತ್ತಿಲ್ಲ KDP ಮುಂದೂಡಿಕೆ ಆಗಿದೆ..
ದಾವಣಗೆರೆ: ಪೋಕ್ಸೋ ಪ್ರಕರಣದಲ್ಲಿ ಸಂಬಂಧ ಜೈಲು ಪಾಲಾಗಿದ್ದ ಚಿತ್ರದುರ್ಗದ ಮುರುಘಾಶ್ರೀಗೆ ಜಾಮೀನು ಸಿಕ್ಕಿದ್ದು, ಇದೀಗ ಚಿತ್ರದುರ್ಗ ಜಿಲ್ಲಾ ಕಾರಾಗೃಹದಿಂದ ಮುರುಘಾಶ್ರೀ ಬಿಡುಗಡೆಯಾಗಿದ್ದಾರೆ. ದಾವಣಗೆರೆ ಜಯದೇವ ಗದ್ದುಗೆ ದರ್ಶನ ಪಡೆದುಕೊಂಡಿದ್ದಾರೆ. ಮೂರು ಗಂಟೆಯಿಂದ ಕೋರ್ಟ ವಿಸಿಗೆ ಹಾಜರಾಗಲಿರುವ ಸ್ವಾಮೀಜಿ, ಒಂದು ವರ್ಷದ ಬಳಿಕ ಮಠದಲ್ಲಿ ಊಟ ಮಾಡಿದ್ದಾರೆ. ಈ ವೇಳೆ ಸ್ವಾಮೀಜಿಗಳನ್ನ ಭೇಟಿ ಆಗಲು ವೈದ್ಯರು, ವ್ಯಾಪಾರಿಗಳು ಸೇರಿದಂತೆ ನೂರಾರು ಭಕ್ತರು ಆಗಮಿಸಿದ್ದಾರೆ. ಬಳಿಕ ದಾವಣಗೆರೆಯ ವಿರಕ್ತ ಮಠದಲ್ಲಿ ವಾಸ್ತವ್ಯ ಹೂಡಲಿದ್ದಾರೆ.
ಕಲಬುರಗಿ: ಯತೀಂದ್ರ ಸೂಪರ್ ಸಿಎಂ ಆಗಿ ಮಾತಾಡ್ತಿರೋದು ನೋಡಿದ್ರೆ ಈ ಸರ್ಕಾರ ಎಷ್ಟು ಭ್ರಷ್ಟಾಚಾರದಲ್ಲಿ ಮುಳುಗಿದೆ ಅಂತ ಗೊತ್ತಾಗುತ್ತೆ.ಹೀಗಂತ ಮಾಜಿ ಸಚಿವ ಶ್ರೀರಾಮುಲು ಹೇಳಿದ್ದಾರೆ.. ಕಲಬುರಗಿಯಲ್ಲಿಂದು ಮಾತನಾಡಿದ ಶ್ರೀರಾಮುಲು ಕೈ ಸರ್ಕಾರದ ವಿರುದ್ಧ ಕಿಡಿಕಾರಿದರು. ಅಧಿಕಾರಿಗಳಿಗೆ ಫೋನ್ ಮಾಡಿ ಆ ಕೆಲಸಗಳ ಆಗ್ಬೇಕು ಈ ಕೆಲಸಗಳು ಆಗಬೇಕು ಅಂತ ಯತೀಂದ್ರ ಸರ್ಕಾರದ ಆದೇಶದಂತೆ ಮಾತಾಡ್ತಿದ್ದಾರೆ..ಅದಕ್ಕಾಗಿ ಇದು 60-70 ಪರ್ಸೆಂಟ್ ಸರ್ಕಾರ..ಹೀಗಾಗಿ ಈ ವಿಚಾರಕ್ಕೆ ಸಿಎಂ ಸಿದ್ರಾಮಯ್ಯ ಸ್ಪಷ್ಟನೆ ಕೊಡಬೇಕು ಅಂತ ಆಗ್ರಹಿಸಿದ್ರು.
ಬೆಂಗಳೂರು: ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿಯವರು ಮನೆಯ ದೀಪಾಲಂಕಾರಕ್ಕೆ ಅಕ್ರಮ ವಿದ್ಯುತ್ ಸಂಪರ್ಕದ ವಿಚಾರ ಕುರಿತು ಕಾಂಗ್ರೆಸ್ ನವರು ಬಹಳ ಕೀಳು ಮಟ್ಟದ ಟೀಕೆಗೆ ಗುರಿಮಾಡಿದ್ದರು. ಈ ಸಂಬಂಧ ಇಂದು ಜೆಡಿಎಸ್ ಪಕ್ಷದ ವತಿಯಿಂದ ಪ್ರತಿಭಟನೆ ನಡೆಸಲಾಯಿತು ಜೆಡಿಎಸ್ ವಿಧಾನಪರಿಷತ್ ಸದಸ್ಯ ಟಿ.ಎ.ಶರವಣ ಅವರ ನೇತೃತ್ವದಲ್ಲಿ ಇಂದು ರಾಜ್ಯ ಕಾಂಗ್ರೆಸ್ ವಿರುದ್ಧ ಪ್ರತಿಭಟನೆ ನಡೆಸಲಾಗಿದ್ದು ಮಾಜಿ ಮುಖ್ಯಮಂತ್ರಿಗಳಾದ ಎಚ್.ಡಿ.ಕುಮಾರಸ್ವಾಮಿ ಅವರ ಬಗ್ಗೆ ಕೀಳು ಮಟ್ಟದಲ್ಲಿ ಟೀಕೆಗಳನ್ನು ಮಾಡಿಲಾಗಿದ್ದು ಹಾಗೆ ಕಾಂಗ್ರೆಸ್ ಕಾರ್ಯಕರ್ತರು ಜೆಡಿಎಸ್ ಕಚೇರಿಯ ಗೋಡೆಗೆ ವಿದ್ಯುತ್ ಕಳ್ಳ ಎಂದು ಕುಮಾರಸ್ವಾಮಿ ಅವರ ಭಾವಚಿತ್ರ ಇರುವ ಪೋಸ್ಟರ್ ಅಂಟಿಸಿದ್ದ ವಿಚಾರಕ್ಕೆ ಬೃಹತ್ ಪ್ರತಿಭಟನೆ ನಡೆಸಲಾಯಿತು ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಇದು ಕಾಂಗ್ರೆಸ್ʼನ ಕೀಳುಮಟ್ಟದ ರಾಜಕಾರಣ ತೋರಿಸುತ್ತದೆ ಹಾಗೆ ಎಚ್.ಡಿ.ಕುಮಾರಸ್ವಾಮಿ ಅವರ ಬಗ್ಗೆ ಕೀಳು ಮಟ್ಟದಲ್ಲಿ ಟೀಕೆಗಳನ್ನು ಮಾಡಿಡ್ಡು ಮಾತ್ರ ಸರಿಯಲ್ಲ ಇದಕ್ಕೆ ಮುಂದಿನ ಲೋಕಸಭಾ ಚುನಾವಣೆ ವೇಳೆ ಸರಿಯಾದ ಪಾಠ ಕಲಿಸಬೇಕು ಹಾಗೆ ಗ್ಯಾರಂಟಿ ಹೆಸರಲ್ಲಿ ಜನರನ್ನು ಮೋಸ ಮಾಡುತ್ತಿದ್ದಾರೆ ಎಂದು ಕಿಡಿ…
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಗೂ ಶ್ರೀನಿ ಜೋಡಿಯ ಘೋಸ್ಟ್ ಸಿನಿಮಾ ಯಶಸ್ವಿಯಾಗಿ 25 ದಿನ ಪೂರೈಸಿದೆ. ಅಕ್ಟೋಬರ್ 19ರಂದು ಕನ್ನಡ, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ಚಿತ್ರ ತೆರೆಕಂಡಿತ್ತು. ವಿಶ್ವಾದ್ಯಂತ ಭರ್ಜರಿ ಕಲೆಕ್ಷನ್ ಮಾಡಿರುವ ಘೋಸ್ಟ್ ಒಟಿಟಿಗೆ ಎಂಟ್ರಿ ಕೊಡಲು ಸಜ್ಜಾಗಿದೆ. ನ.17ರಿಂದ ಜೀ5ನಲ್ಲಿ ಘೋಸ್ಟ್ ಸ್ಟ್ರೀಮಿಂಗ್ ಶಿವರಾಜ್‌ಕುಮಾರ್ ‘ಘೋಸ್ಟ್’ ಸಿನಿಮಾ ಓಟಿಟಿಗೆ ಲಗ್ಗೆ ಇಡುವುದಕ್ಕೆ ರೆಡಿಯಾಗಿದೆ. ಜೀ5ನಲ್ಲಿ ನವೆಂಬರ್ 17ರಿಂದ ಪ್ರಸಾರ ಆಗಲಿದೆ. ಈ ಸಂಬಂಧ ಸ್ಪೆಷಲ್ ಪ್ರೋವೋ ಬಿಡುಗಡೆ ಮಾಡಲಾಗಿದೆ. ಇಲಿಯೊಂದು ಬಾಯಲ್ಲಿ ಚೀಟಿ ಹಿಡಿದು ಬಂದಿದೆ. ಅದನ್ನು ಅದು ಶಿವಣ್ಣನ ಕೈಗೆ ಇಟ್ಟಿದೆ. ಆ ಚೀಟಿಯ ಹಿಂಭಾಗದಲ್ಲಿ ಬೆಂಕಿ ಹಿಡಿದು ಶಿವರಾಜ್ ಕುಮಾರ್ ಅವರು ನೋಡಿದಾಗ ಅದರಲ್ಲಿ ಒಂದು ಮೆಸೇಜ್ ಕಂಡಿದೆ. ಅದನ್ನು ನೋಡಿ ಫ್ಯಾನ್ಸ್ ಕುಣಿದು ಕುಪ್ಪಳಿಸುತ್ತಿದ್ದಾರೆ. ಅಷ್ಟಕ್ಕೂ ಆ ಮೆಸೇಜ್ ಏನೆಂದರೆ, ಘೋಸ್ಟ್ ಚಿತ್ರವು ಜೀ-5ನಲ್ಲಿ ನವೆಂಬರ್ 17ರಿಂದ ನೋಡಬಹುದು ಎಂಬ ಮೆಸೇಜ್ ಅದು. ನನ್ನ ಗ್ಯಾಂಗ್ ಅಲ್ಲಿ ಇರೋ Informer…
ಮಂಡ್ಯ: ನಾನು ನೀಡಿದ ಲಿಸ್ಟ್ನದ್ದು ಮಾತ್ರ ಮಾಡಿ ಎಂದು ಸಿಎಂ ಸಿದ್ದರಾಮಯ್ಯ ವಿಶೇಷ ಕರ್ತವ್ಯಾಧಿಕಾರಿ ಮಹದೇವ್ ಅವರಿಗೆ ಯತೀಂದ್ರ ಸಿದ್ದರಾಮಯ್ಯ ಸೂಚಿಸಿರುವ ವಿಡಿಯೋ ವೈರಲ್ ಆಗಿದೆ. ಈ ಬಗ್ಗೆ ಮಾತನಾಡಿದ ಸಚಿವ ಚಲುವರಾಯಸ್ವಾಮಿ, ಯತೀಂದ್ರ ಪರ ಬ್ಯಾಟ್ ಬೀಸಿದ್ದಾರೆ. ಡಾ.ಯತೀಂದ್ರ ಒಬ್ಬ ಮಾಜಿ ಎಂಎಲ್‌ಎ, ಖಾಲಿ ಮನುಷ್ಯ ಅಲ್ಲ. ಸಿದ್ದರಾಮಯ್ಯ ವರುಣದಲ್ಲಿ ಸ್ಪರ್ಧಿಸಿದ್ದರಿಂದ ಅವರು ನಿಲ್ಲಲು ಆಗಿಲ್ಲ. ಮೈಸೂರು ಜಿಲ್ಲೆ, ಪಕ್ಷದಲ್ಲಿ ಡಾ.ಯತೀಂದ್ರ ಪ್ರಮುಖ ನಾಯಕ. https://ainlivenews.com/joint_pain_suprem_ray_treatment_reiki/ ಮಾಜಿ ಶಾಸಕರು ಕೆಲಸ ಮಾಡುವುದನ್ನು ತಪ್ಪು ಅನ್ನೋಕೆ ಆಗುತ್ತಾ? ವಿಡಿಯೋದಲ್ಲಿ ಯಾವ ವಿಚಾರದ ಬಗ್ಗೆ ಅವರು ಹೇಳಿದರೋ ಗೊತ್ತಿಲ್ಲ. ಯಾರು ಆ ವಿಡಿಯೋ ಕಟ್ ಆ್ಯಂಡ್ ಪೇಸ್ಟ್ ಮಾಡಿದರೋ ಗೊತ್ತಿಲ್ಲ. ಸೋಶಿಯಲ್ ಮಿಡಿಯಾದಲ್ಲಿ ಕಟ್ ಆ್ಯಂಡ್ ಪೇಸ್ಟ್ ಮಾಡುತ್ತಾರೆ. ಮಾತಾಡಿದ ರೀತಿ ಬೇರೆ ಇರುತ್ತೆ, ತೋರಿಸುವುದೇ ಬೇರೆ ಇರುತ್ತದೆ. ಯತೀಂದ್ರ ಸಾರ್ವಜನಿಕ ಸೇವೆಯಲ್ಲಿ ಇರೋದು ಅಪರಾಧವಲ್ಲ. ವರುಣ ಅಲ್ಲ ಇಡೀ ರಾಜ್ಯದಲ್ಲಿ ಕೆಲಸ ಮಾಡಲಿ ಬಿಡಿ, ತಪ್ಪೇನಿದೆ? ಕಾಂಗ್ರೆಸ್ ಮುಖಂಡರು ಕೆಲ ಸಮಸ್ಯೆ ಗಮನಕ್ಕೆ ತಂದರೆ…
ದೆಹಲಿ: ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ವೈರಲ್ ಆಗಿದ್ದ ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅವರ ಡೀಪ್‍ಫೇಕ್ (Deepfake) ವೀಡಿಯೋ ವಿಚಾರವಾಗಿ ದೆಹಲಿ (Delhi) ಪೊಲೀಸರು (Police) ಬಿಹಾರ ಮೂಲದ 19 ವರ್ಷದ ಯುವಕನನ್ನು ವಿಚಾರಣೆ ನಡೆಸಿದ್ದಾರೆ. ಶಂಕಿತ ಯುವಕ ಮೊದಲು ಸಾಮಾಜಿಕ ಜಾಲತಾಣದಲ್ಲಿ ವೀಡಿಯೋವನ್ನು ಅಪ್‍ಲೋಡ್ ಮಾಡಿದ್ದಾನೆ. ಅಲ್ಲದೇ ನಂತರ ಅದನ್ನು ಇತರ ವೇದಿಕೆಗಳಲ್ಲಿ ವ್ಯಾಪಕವಾಗಿ ಹಂಚಿಕೊಂಡಿದ್ದಾನೆ ಎಂದು ಪೊಲೀಸರು ಶಂಕಿಸಿದ್ದಾರೆ. ಯುವಕನ ಸಾಮಾಜಿಕ ಜಾಲತಾಣದಲ್ಲಿ ವೀಡಿಯೋವನ್ನು ಮೊದಲು ಅಪ್‍ಲೋಡ್ ಮಾಡಿದ್ದರಿಂದ ತನಿಖೆಗೆ ಹಾಜರಾಗುವಂತೆ ಯುವಕನಿಗೆ ನೋಟಿಸ್ ನೀಡಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ ಯಾರನ್ನೂ ಬಂಧಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ ಬಿಹಾರ ಮೂಲದ ಯುವಕನಿಗೆ ಐಎಫ್‍ಎಸ್‍ಒ ಘಟಕದ ಮುಂದೆ ಹಾಜರಾಗಲು ಮತ್ತು ತನ್ನ ಮೊಬೈಲ್ ಫೋನ್ ತರಲು ಸೂಚಿಸಲಾಗಿತ್ತು. ಎಫ್‍ಐಆರ್ ದಾಖಲಿಸಿದ ಕೂಡಲೇ ಐಎಫ್‍ಎಸ್‍ಒ ಘಟಕವು ಆರೋಪಿಯನ್ನು ಗುರುತಿಸಲು ಯುಆರ್‍ಎಲ್ ಮತ್ತು ಇತರ ವಿವರಗಳನ್ನು ಪಡೆಯಲು ಮೆಟಾಗೆ ಪತ್ರ ಬರೆದಿತ್ತು. ಆ ಮಾಹಿತಿ ಆಧಾರದ ಮೇಲೆ ನೋಟಿಸ್ ನೀಡಲಾಗಿತ್ತು…
ಬೆಂಗಳೂರು: ಯತೀಂದ್ರ ಅವರು ವರ್ಗಾವಣೆ ವಿಚಾರವಾಗಿ ಮಾತಾಡಿಲ್ಲ. ಸಿಎಸ್‍ಆರ್ ಫಂಡ್ (ಕಾರ್ಪೋರೇಟ್ ಸೋಶಿಯಲ್ ರೆಸ್ಪಾನ್ಸಿಬಿಲಿಟಿ ಫಂಡ್) ಬಗ್ಗೆ ಮಾತಾಡಿರುವುದು ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪುತ್ರ ಯತೀಂದ್ರ ಅವರ ವೈರಲ್ ಆದ ವೀಡಿಯೋ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಈ ವೇಳೆ ನಾನು ರಾಜಕೀಯ ಜೀವನದಲ್ಲಿ ವರ್ಗಾವಣೆ ದಂಧೆ ಮಾಡಿಲ್ಲ. ವರ್ಗಾವಣೆ ದಂಧೆ ಮಾಡಿದ್ದೇನೆ ಎಂದು ಸಾಬೀತುಪಡಿಸಿದರೆ ರಾಜಕೀಯದಿಂದ ನಿವೃತ್ತಿ ಪಡೆಯುತ್ತೇನೆ ಎಂದಿದ್ದಾರೆ ಪತ್ರಕರ್ತರ ಪ್ರಶ್ನೆಗೆ, ಐದು ಹೆಸರು ಎಂದರೆ ವರ್ಗ ಏನಯ್ಯ? ಅದು ಸಿಎಸ್‍ಆರ್ ಲಿಸ್ಟ್. ಶಾಲೆ ಕಟ್ಟಡಗಳನ್ನು ಸಿಎಸ್‍ಆರ್ ಫಂಡ್‍ನಿಂದ ರಿಪೇರಿ ಮಾಡಿಸಲಾಲಾಗುತ್ತಿದೆ. ಈ ಬಗ್ಗೆ ಯತೀಂದ್ರ ಅವರು ಹೇಳಿದ್ದಾರೆ. ಕುಮಾರಸ್ವಾಮಿ ರಾಜಕೀಯವಾಗಿ ಆರೋಪ ಮಾಡ್ತಿದ್ದಾರೆ ಎಂದು ಕಿಡಿಕಾರಿದರು. ಬುಧವಾರ ಯತೀಂದ್ರ ಅವರು ವರುಣ ಕ್ಷೇತ್ರ ವ್ಯಾಪ್ತಿಯ ಮೈಸೂರು ತಾಲೂಕಿನ ಚಟ್ನಹಳ್ಳಿಪಾಳ್ಯ ಗ್ರಾಮದಲ್ಲಿ ಸಾರ್ವಜನಿಕ ಕುಂದುಕೊರತೆ ವಿಚಾರಣೆ ಸಭೆ ನಡೆಸಿ ಗ್ರಾಮದ ಜನರ ಅಹವಾಲು ಸ್ವೀಕರಿಸುತ್ತಿದ್ದರು. ಈ ವೇಳೆ ಅವರು ತಂದೆಗೆ ಕರೆ…