Author: AIN Author

ನವದೆಹಲಿ:- ಇತ್ತೀಚೆಗೆ ಪಹಲ್ಗಾಮ್ ನಲ್ಲಿ ಹಿಂದುಗಳ ಮೇಲೆ ಉಗ್ರರು ನಡೆಸಿದ ಕ್ರೌರ್ಯ ಅದು ಭಾರತ ಮರೆಯುವಂತದ್ದಲ್ಲ. ಇದೇ ಪ್ರತೀಕಾರದ ಜ್ವಾಲೆಯಲ್ಲಿ ಉರಿಯುತ್ತಿರುವ ಭಾರತ ಪಾಕಿಸ್ತಾನದ ಮೇಲೆ ಹಲವು ಕಠಿಣ ಕ್ರಮಗಳನ್ನು ಕೈಗೊಂಡಿದೆ. ಅಲ್ಲದೇ ಯಾವುದೇ ಕ್ಷಣದಲ್ಲಾದರೂ ಎರಡು ದೇಶಗಳ ಮಧ್ಯೆ ಯುದ್ಧ ನಡೆಯುವ ಸಾಧ್ಯತೆ ಇದೆ. https://ainkannada.com/mock-drill-across-the-country-today-siran-of-the-war-heres-a-complete-information/ ಅದರ ಭಾಗವಾಗಿ ತಡರಾತ್ರಿ ಭಾರತ ಪಾಕಿಸ್ತಾನದಲ್ಲಿರುವ ಉಗ್ರರ ನೆಲೆಗಳ ಮೇಲೆ ದಾಳಿ ನಡೆಸುವ ಮೂಲಕ ಪಹಲ್ಗಾಮ್‌ ನರಮೇಧಕ್ಕೆ ಪ್ರತೀಕಾರ ತೀರಿಸಿದೆ. ಉಗ್ರರ 9 ನೆಲೆಗಳ ಮೇಲೆ ಆಪರೇಷನ್‌ ಸಿಂಧೂರ ಹೆಸರಿನಲ್ಲಿ ಪಾಕಿಸ್ತಾನ ಮತ್ತು ಪಾಕ್‌ ಆಕ್ರಮಿತ ಕಾಶ್ಮೀರದ ಒಳಗಡೆ ನುಗ್ಗಿ ಏರ್‌ಸ್ಟ್ರೈಕ್‌ ಮಾಡಿ ಧ್ವಂಸ ಮಾಡಿದೆ. ಭಾರತ ಪಾಕಿಸ್ತಾನದ ಯಾವುದೇ ಮಿಲಿಟರಿ ನೆಲೆಗಳನ್ನು ಗುರಿಯಾಗಿಸದೇ ಕೇವಲ ಉಗ್ರರ ನೆಲೆಗಳನ್ನು ಮಾತ್ರ ಗುರಿಯಾಗಿಸಿ ದಾಳಿ ನಡೆಸಿದ್ದು ವಿಶೇಷ. ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರಬಲ ಪ್ರತಿಕಾರವಾಗಿ, ಭಾರತೀಯ ಸಶಸ್ತ್ರ ಪಡೆಗಳು ಇಂದು ಮುಂಜಾನೆ ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಒಕೆ) ದಲ್ಲಿರುವ 9 ಭಯೋತ್ಪಾದಕ…

Read More

ಮಂಡ್ಯ:- ಚಲಿಸುತ್ತಿದ್ದಾಗಲೇ ಕಾರೊಂದು ಹೊತ್ತಿ ಉರಿದಿದ್ದು, ಅದೃಷ್ಟವಶಾತ್ ಕುಟುಂಬವೊಂದು ಬಚಾವ್ ಆಗಿರುವ ಘಟನೆ ಜಿಲ್ಲೆಯ ನಾಗಮಂಗಲ ತಾಲೂಕಿನ ಆದಿಚುಂಚನಗಿರಿ ಮಠದ ಬಳಿ ಜರುಗಿದೆ. https://ainkannada.com/mock-drill-across-the-country-today-siran-of-the-war-heres-a-complete-information/ ಬೆಂಗಳೂರಿನಿಂದ ಆದಿಚುಂಚನಗಿರಿಗೆ ಕುಟುಂಬವೊಂದು ಕಾರಿನಲ್ಲಿ ಹೊರಟಿತ್ತು. ಕಾರನ್ನು ಮಹಿಳೆ ಚಲಾಯಿಸುತ್ತಿದ್ದರು. ಕಾರು ಆದಿಚುಂಚನಗಿರಿ ಸಮೀಪ ಬಂದಿದ್ದಾಗ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಕಾರಿನಲ್ಲಿದ್ದ ಮಹಿಳೆ, ಹಾಗೂ ಆಕೆಯ ಪತಿ ಮಗುವನ್ನು ಕರೆದುಕೊಂಡು ಕಾರಿನಿಂದ ಇಳಿದಿದ್ದಾರೆ. ಅದೃಷ್ಟವಶಾತ್ ಪ್ರಾಣಾಪಾಯದಿಂದ ಕುಟುಂಬ ಪಾರಾಗಿದೆ. ಶಾರ್ಟ್ ಸರ್ಕ್ಯೂಟ್ ನಿಂದ ಏಕಾಏಕಿ ಬೆಂಕಿ ಕಾಣಿಸಿಕೊಂಡಿರುವ ಶಂಕೆ ವ್ಯಕ್ತವಾಗಿದೆ.

Read More

ನವದೆಹಲಿ/ ಬೆಂಗಳೂರು:- ಭಾರತ-ಪಾಕಿಸ್ತಾನ ನಡುವೆ ಯುದ್ಧ ಕಾರ್ಮೋಡ ದಟ್ಟವಾಗಿ ಆವರಿಸ್ತಿದೆ. ಉಗ್ರರು ಪಹಲ್ಗಾಮ್​ನಲ್ಲಿ 26 ಹಿಂದೂಗಳ ನರಮೇಧ ಮಾಡ್ತಿದ್ದಂತೆ ಎರಡೂ ದೇಶಗಳ ನಡುವಿನ ಉದ್ವಿಗ್ನತೆ ಹೆಚ್ಚಾಗಿದೆ. ಪಾಕಿಸ್ತಾನ ಸತತ 11ನೇ ರಾತ್ರಿಯೂ ನಿಯಂತ್ರಣ ರೇಖೆಯ ಉದ್ದಕ್ಕೂ ಭಾರತೀಯ ಸ್ಟೇಷನ್​ಗಳ ಮೇಲೆ ಗುಂಡಿನ ದಾಳಿ ನಡೆಸಿದೆ. ಪಾಕಿಸ್ತಾನದ ಗುಂಡಿನ ದಾಳಿಗೆ ಭಾರತ ಪ್ರತಿದಾಳಿ ಕೂಡ ನಡೆಸಿದೆ. ಈಗ ಮತ್ತೊಂದು ಲೆವೆಲ್​ಗೆ ಪ್ರತೀಕಾರವನ್ನು ಕೊಂಡೊಯ್ಯಲು ಭಾರತ ಸರ್ಕಾರ ಮುಂದಾಗಿದೆ. ಇಂದು ದೇಶಾದ್ಯಂತ ಮಾಕ್ ಡ್ರಿಲ್‌ ನಡೆಸುವಂತೆ ಕೇಂದ್ರ ಸರ್ಕಾರ ಎಲ್ಲಾ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚನೆ ನೀಡಿದೆ https://ainkannada.com/mock-drill-around-the-country-power-is-not-in-bangalore-this-evening/ ಎಸ್, ಜಮ್ಮು ಮತ್ತು ಕಾಶ್ಮೀರದ ಪೆಹಲ್ಗಾಮ್​ನಲ್ಲಿ ಉಗ್ರರ ದಾಳಿ ಬೆನ್ನಲ್ಲೇ ಭಾರತ ಹಾಗೂ ಪಾಕ್ ಮಧ್ಯೆ ಯುದ್ಧದ ಕಾರ್ಮೋಡ ಆವರಿಸಿದೆ. ಪಾಪಿ ಪಾಕಿಸ್ತಾನದ ವಿರುದ್ಧ ಸಮರ ಸಾರಲು ಭಾರತ ಸರ್ವ ಸನ್ನದ್ಧವಾಗಿದ್ದು, ಇಂದು ದೇಶಾದ್ಯಂತ 259 ಸ್ಥಳಗಳಲ್ಲಿ ಮಾಕ್​ ಡ್ರಿಲ್​ಗೆ ಕೇಂದ್ರ ಸರ್ಕಾರ ಸೂಚನೆ ಕೊಟ್ಟಿದೆ. ಹಿನ್ನೆಲೆಯಲ್ಲಿ ಕರ್ನಾಟಕದಲ್ಲೂ ಮಾಕ್​ ಡ್ರಿಲ್​ಗೆ ಸಿದ್ಧತೆಗಳು ನಡೆದಿವೆ.…

Read More

ಬೆಂಗಳೂರು:- ಯುದ್ಧ.. ಭಾರತ-ಪಾಕಿಸ್ತಾನ ನಡುವೆ ಯುದ್ಧ ಕಾರ್ಮೋಡ ದಟ್ಟವಾಗಿ ಆವರಿಸ್ತಿದೆ. ಉಗ್ರರು ಪಹಲ್ಗಾಮ್​ನಲ್ಲಿ 26 ಹಿಂದೂಗಳ ನರಮೇಧ ಮಾಡ್ತಿದ್ದಂತೆ ಎರಡೂ ದೇಶಗಳ ನಡುವಿನ ಉದ್ವಿಗ್ನತೆ ಹೆಚ್ಚಾಗಿದೆ. ಪಾಕಿಸ್ತಾನ ಸತತ 11ನೇ ರಾತ್ರಿಯೂ ನಿಯಂತ್ರಣ ರೇಖೆಯ ಉದ್ದಕ್ಕೂ ಭಾರತೀಯ ಸ್ಟೇಷನ್​ಗಳ ಮೇಲೆ ಗುಂಡಿನ ದಾಳಿ ನಡೆಸಿದೆ. ಪಾಕಿಸ್ತಾನದ ಗುಂಡಿನ ದಾಳಿಗೆ ಭಾರತ ಪ್ರತಿದಾಳಿ ಕೂಡ ನಡೆಸಿದೆ. ಈಗ ಮತ್ತೊಂದುಲೆವೆಲ್​ಗೆ ಪ್ರತೀಕಾರವನ್ನು ಕೊಂಡೊಯ್ಯಲು ಭಾರತ ಸರ್ಕಾರ ಮುಂದಾಗಿದೆ. https://ainkannada.com/if-you-get-nervous-pain-when-you-go-to-bed-at-night-dont-neglect-do-these-3-tests/ ಅದರಂತೆ ಕೇಂದ್ರ ಗೃಹ ಸಚಿವಾಲಯ ಮೇ 7ರಂದು ದೇಶಾದ್ಯಂತ ಮಾಕ್ ಡ್ರಿಲ್‌ ನಡೆಸಲು ರಾಜ್ಯಗಳಿಗೆ ಸೂಚನೆ ಕೊಟ್ಟಿದೆ. ಅದರಂತೆ ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಮಾಕ್​ ಡ್ರಿಲ್​ ನಡೆಯಲಿದೆ. ಮಾಕ್​ ಡ್ರಿಲ್​ ಸಂಬಂಧ ಬೆಂಗಳೂರು ನಗರದಾದ್ಯಂತ ಇಂದು ಸಂಜೆ 6.40ರ ಸುಮಾರಿಗೆ ವಿದ್ಯುತ್​ ಸ್ಥಗಿತಗೊಳ್ಳಲಿದೆ. ಬೆಂಗಳೂರಿನಲ್ಲಿ ಸಂಜೆ 5.30ರಿಂದ ಸಂಜೆ 7 ಗಂಟೆಯವರೆಗೆ ಮಾಕ್​ ಡ್ರಿಲ್​ ನಡೆಯುವ ಸಾಧ್ಯತೆ ಇದೆ. ಸಂಜೆ 6.40ರ ಸುಮಾರಿಗೆ ನಗರದಾದ್ಯಂತ ವಿದ್ಯುತ್​ ಸ್ಥಗಿತಗೊಳ್ಳಲಿದೆ. ದೊಡ್ಡ ದೊಡ್ಡ ಕಟ್ಟಡಗಳನ್ನು ರಕ್ಷಣೆ…

Read More

ಅನೇಕ ಜನರು ನರನೋವು ನೋವಿನಿಂದ ಬಳಲುತ್ತಿದ್ದಾರೆ. ಸಾಮಾನ್ಯವಾಗಿ ಈ ನೋವು 30 ರಿಂದ 50ವರ್ಷದ ಮಧ್ಯ ವಯಸ್ಸಿನವರಲ್ಲಿ ಕಾಣಬಹುದು. ನಮ್ಮ ಶರೀರದಲ್ಲಿ ಅತಿ ದೊಡ್ಡ ನರವಾದ ಸಯಾಟಿಕಾ ನರವು ಬೆನ್ನುಮೂಳೆಯಿಂದ ಪ್ರಾರಂಭವಾಗಿ ತೊಡೆಗಳ ಹಿಂಭಾಗದೊಳಗೆ ಅಲ್ಲಿಂದ ಮೊಣಕಾಲು ಸ್ನಾಯುಗಳಿಗೆ ಹಾಗೂ ಪಾದಗಳಿಗೆ ಪ್ರಯಾಣಿಸುತ್ತದೆ. ಕಾಲುಗಳ ಮತ್ತು ಪಾದಗಳ ಸ್ಪರ್ಶ ಜ್ಞಾನವನ್ನು ಸಯಾಟಿಕಾ ನರವು ನಿಯಂತ್ರಿಸುತ್ತದೆ. ಸಯಾಟಿಕಾ ನರವು ಐದು ನರಗಳ ಸಮೂಹದಿಂದ ಏರ್ಪಟ್ಟಿದೆ. ಯಾವಾಗ ಈ ನರಗಳ ಮೇಲೆ ಒತ್ತಡ ಬೀಳುತ್ತದೋ ಅದನ್ನು ಸಯಾಟಿಕಾ ನೋವು ಎಂದು ಕರೆಯುತ್ತಾರೆ. ಸಯಾಟಿಕಾ ನರವು ಸಂಚರಿಸುವ ಮಾರ್ಗದಲ್ಲಿ ಎಲ್ಲಿಯಾದರೂ ನೋವಾಗಬಹುದು. https://ainkannada.com/the-number-of-enemies-for-these-piles-is-high-wednesdays-fate-07-may-2025/ ರಾತ್ರಿ ಮಲಗುವಾಗ ಕಾಲುಗಳು ಅಥವಾ ತೋಳುಗಳಲ್ಲಿ ರಕ್ತನಾಳಗಳು ಜುಮ್ಮೆನಿಸುವುದು ಅಥವಾ ಒಡಮೂಡುವಂತಹ ಸಮಸ್ಯೆಯನ್ನು ಅನೇಕರು ಎದುರಿಸಿರಬಹುದು. ಇದನ್ನು ಸಾಮಾನ್ಯವೆಂದು ಭಾವಿಸಿ ನಿರ್ಲಕ್ಷಿಸುವವರು ಸಾಕಷ್ಟಿದ್ದಾರೆ. ಆದರೆ, ತಜ್ಞರ ಪ್ರಕಾರ, ಈ ಲಕ್ಷಣವು ಕೇವಲ ಆಯಾಸ ಅಥವಾ ನಿರ್ಜಲೀಕರಣದಿಂದ ಮಾತ್ರವಲ್ಲ, ದೇಹದಲ್ಲಿ ಅಡಗಿರುವ ಗಂಭೀರ ಕಾಯಿಲೆಗಳ ಎಚ್ಚರಿಕೆಯ ಸಂಕೇತವಾಗಿರಬಹುದು. ರಕ್ತನಾಳಗಳ ಉಬ್ಬುವಿಕೆಯ ಹಿಂದಿನ ಕಾರಣಗಳು…

Read More

ಸೂರ್ಯೋದಯ – 5:51 ಬೆ ಸೂರ್ಯಾಸ್ತ – 6:34 ಸಂಜೆ ಶಾಲಿವಾಹನ ಶಕೆ -1947 ಸಂವತ್-2081 ವಿಶ್ವಾವಸು ನಾಮ ಸಂವತ್ಸರ, ಉತ್ತರ ಅಯಣ, ಶುಕ್ಲ ಪಕ್ಷ, ವೈಶಾಖ ಮಾಸ, ವಸಂತ ಋತು, ತಿಥಿ – ದಶಮಿ ನಕ್ಷತ್ರ – ಪುಬ್ಬೆ ಯೋಗ – ವ್ಯಾಘಾತ ಕರಣ – ಗರಜೆ ಮಳೆ ನಕ್ಷತ್ರ :ಭರಣಿ ರಾಹು ಕಾಲ – 12:00 ದಿಂದ 01:30 ವರೆಗೆ ಯಮಗಂಡ – 07:30 ದಿಂದ 09:00 ವರೆಗೆ ಗುಳಿಕ ಕಾಲ – 10:30 ದಿಂದ 12:00 ವರೆಗೆ ಬ್ರಹ್ಮ ಮುಹೂರ್ತ – 4:15 ಬೆ. ದಿಂದ 5:03 ಬೆ. ವರೆಗೆ ಅಮೃತ ಕಾಲ – 11:14 ಬೆ. ದಿಂದ 12:59 ಮ. ವರೆಗೆ ಅಭಿಜಿತ್ ಮುಹುರ್ತ – ಇಲ್ಲ ಸಮಾಲೋಚನೆಗಾಗಿ ಕರೆ ಮಾಡಿರಿ. “ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು” ಸೋಮಶೇಖರ್ ಗುರೂಜಿB.Sc ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು. Mob. 93534 88403…

Read More

ಕಾರವಾರ:- ಪಹಲ್ಗಾಮ್ ದಾಳಿ ಖಂಡಿಸಿ ಕಾರವಾರದಲ್ಲಿ ನಾಳೆ ಕರ್ನಾಟಕ ರಾಜ್ಯ ಸನಾತನ ಧರ್ಮ ರಕ್ಷಣಾ ವೇದಿಕೆ ಕಾರವಾರ ಬಂದ್ ಗೆ ಕರೆ ನೀಡಿತ್ತು. ಆದರೆ, ಇದೀಗ ನಾಳೆ ಬಂದ್ ಇರುವುದಿಲ್ಲ ಎಂದು ಎಸ್.ಪಿ ಎಂ.ನಾರಾಯಣ್ ತಿಳಿಸಿದ್ದಾರೆ. https://ainkannada.com/a-huge-tree-fell-on-it-auto-car-damaged-drivers-hand-fractured/ ಕಾರವಾರದಲ್ಲಿ ನಾಳೆ ಬಂದ್ ಇರುವುದಿಲ್ಲ. ಸಂಘಟನೆಗಳು ಬಂದ್‌ಗೆ ಕರೆಕೊಟ್ಟಿದ್ದವು. ಸಂಘಟಕರ ಜೊತೆ ಮಾತನಾಡಲಾಗಿದ್ದು, ಬಂದ್ ಇರುವುದಿಲ್ಲ. ಬದಲಾಗಿ ಮೆರವಣಿಗೆಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ. ಬಂದ್ ಮಾಡಿದ್ರೆ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.

Read More

ಚಿಕ್ಕಮಗಳೂರು:- ಇಲ್ಲಿನ ಕಲ್ಲತ್ತಿಗಿರಿಯಲ್ಲಿ ಭಾರೀ ಗಾಳಿಗೆ ಅನಾಹುತವೊಂದು ಸಂಭವಿಸಿದೆ. ಭಾರೀ ಗಾಳಿಗೆ ಬೃಹದಾಕಾರದ ಮರ ಧರೆಗುರುಳಿದಿದೆ. ಘಟನೆಯಲ್ಲಿ ಆಟೋ ಹಾಗೂ ಕಾರು ಜಖಂಗೊಂಡಿದೆ. https://ainkannada.com/rowdysheeter-santosh-kumar-murder-case-10-accused-surrender-before-the-police/ ಆಟೋ ಹಾಗೂ ಕಾರಿನಲ್ಲಿದ್ದವರು ಅದೃಷ್ಟವಶಾತ್ ಜೀವಪಾಯದಿಂದ ಪಾರಾಗಿದ್ದಾರೆ. ಗಾಯಗೊಂಡ ಚಾಲಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಗೊಂಡ ಚಾಲಕ ತರೀಕೆರೆ ತಾಲೂಕಿನ ಗೇರಮರಡಿ ಮೂಲದವರು ಎಂದು ತಿಳಿದು ಬಂದಿದೆ. ಕಾರಿನಲ್ಲಿದ್ದವರು ದಾವಣಗೆರೆ ಮೂಲಪಾರಾಗಿದ್ದಾರೆ ಎನ್ನಲಾಗಿದೆ.

Read More

ದಾವಣಗೆರೆ:- ರೌಡಿಶೀಟರ್​ ಸಂತೋಷ್​ ಕುಮಾರ್​ ಹತ್ಯೆ ಕೇಸ್ ಗೆ ಸಂಬಂಧಿಸಿದಂತೆ 10 ಮಂದಿ ಆರೋಪಿಗಳು ಪೊಲೀಸರ ಮುಂದೆ ಶರಣಾಗಿದ್ದಾರೆ. https://ainkannada.com/mandya-karnatakas-grand-kondotsava-in-full-swing/ ಕಾರ್ತಿಕ್​(22), ಚವಳಿ ಸಂತು(30), ನವೀನ್(26) ನವೀನ್(26), ಗುಂಡಪ್ಪ(32), ಬಸವರಾಜ್(22), ಹನುಮಂತಪ್ಪ(23), ಗಿಡ್ಡ ವಿಜಿ(27), ಚಿಕ್ಕಮ್ಮನಹಳ್ಳಿ ಶಿವು(30), ಕಡ್ಡಿ ರಾಘು(27), ಪ್ರಶಾಂತ್(28) ಮತ್ತು ನಿಟ್ಟುವಳ್ಳಿಯ ಗಣಿ ಸೇರಿದಂತೆ ಇತರರ ವಿರುದ್ಧ ಎಫ್​ಐಆರ್ ದಾಖಲಾಗಿದೆ. ಬಹುತೇಕ ಆರೋಪಿಗಳು ಹತ್ಯೆಯಾದ ಸಂತೋಷ್​ ಕುಮಾರ್​ನ ಆಪ್ತರಾಗಿದ್ದಾರೆ. ರೌಡಿಶೀಟರ್ ಬುಳ್ಳ ನಾಗನ ಹತ್ಯೆಯಲ್ಲೂ ಇದೇ ಆರೋಪಿಗಳು ಭಾಗಿಯಾಗಿದ್ದರು. ಇದೇ ಗ್ಯಾಂಗ್​ನಿಂದ ಸಂತೋಷ್​ ಕುಮಾರ್ ಅಲಿಯಾಸ್ ಕಣುಮಾ ಹತ್ಯೆಯಾಗಿದೆ. ರೌಡಿಶೀಟರ್ ಬುಳ್ಳ ನಾಗನ ಹತ್ಯೆಯಲ್ಲೂ ಇದೇ ಆರೋಪಿಗಳು ಭಾಗಿಯಾಗಿದ್ದರು. ಇದೇ ಗ್ಯಾಂಗ್​ನಿಂದ ಸಂತೋಷ್​ ಕುಮಾರ್ ಅಲಿಯಾಸ್ ಕಣುಮಾ ಹತ್ಯೆಯಾಗಿದೆ. ಸೋಮವಾರ ದಾವಣಗೆರೆಯ ಸೋಮೇಶ್ವರ ಆಸ್ಪತ್ರೆ ಬಳಿ ಮಾರಕಾಸ್ತ್ರಗಳಿಂದ ಕೊಚ್ಚಿ ಸಂತೋಷ್​ ಕುಮಾರ್​ನನ್ನು ಆರೋಪಿಗಳು ಹತ್ಯೆಗೈದಿದ್ದರು.

Read More

ಮಂಡ್ಯ:- ಮಂಡ್ಯದ ಆಲಕೆರೆ ಗ್ರಾಮದ ಬೃಹತ್ ವೀರಭದ್ರೇಶ್ಚರ ಕೊಂಡೋತ್ಸವಕ್ಕೆ ಅದ್ದೂರಿಯಾಗಿ ಚಾಲನೆ ದೊರೆತಿದೆ. https://ainkannada.com/car-collides-with-bike-rider-dies/ ಸಾವಿರಾರು ಜನರ ಸಮ್ಮುಖದಲ್ಲಿ ಶಾಸ್ತ್ರೋಕ್ತವಾಗಿ ಪೂಜೆ ಸಲ್ಲಿಸಿ ಅಗ್ನಿಸ್ಪರ್ಶ ಮಾಡಲಾಗಿದೆ. ಶಾಸಕ ರವಿಕುಮಾರ್ ಡಿಸಿ,ಎಸ್ಪಿ, ಸೇರಿ ಹಲವು ಗಣ್ಯರು ಕೊಂಡೋತ್ಸವದಲ್ಲಿ ಭಾಗಿಯಾದರು. ರಾಜ್ಯದ ಬೃಹತ್ ಕೊಂಡೋತ್ಸವ ಎಂಬ ಹೆಗ್ಗಳಿಕೆ ಇರುವ ಆಲಕೆರೆ ವೀರಭದ್ರೇಶ್ವರ ಕೊಂಡೋತ್ಸವ ಇದಾಗಿದೆ. 72 ಅಡಿ ಉದ್ದ,25 ಅಡಿ ಎತ್ತರ,12 ಅಡಿ ಅಗಲದ ಬೃಹತ್ ಕೊಂಡೋತ್ಸವ ಬಹಳ ವಿಜೃಂಭಣೆಯಿಂದ ನಡೀತಾಯಿದೆ.

Read More