ಬೆಂಗಳೂರು:- ಬಹು ನಿರೀಕ್ಷಿತ ಬೆಂಗಳೂರು ಹವಾಮಾನ ಕ್ರಿಯಾ ಯೋಜನೆಯು ಶೀಘ್ರವೇ ಅನುಷ್ಠಾನಗೊಳ್ಳಲಿದ್ದು, ಈ ಕುರಿತಂತೆ ಡಿಸಿಎಂ ಡಿ.ಕೆ ಶಿವಕುಮಾರ್ ಅವರ ಅಧ್ಯಕ್ಷತೆಯಲ್ಲಿ ಇಂದು ಮಹತ್ವದ ಸಭೆ ನಡೆಯಿತು. ಸಭೆಯಲ್ಲಿ ನಗರಾಭಿವೃದ್ಧಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಮುಖ್ಯ ಆಯುಕ್ತರಾದ ತುಷಾರ್ ಗಿರಿ ನಾಥ್, ಬಿ.ಎಂ.ಆರ್.ಸಿ.ಎಲ್ ವ್ಯವಸ್ತಾಪಕ ನಿರ್ದೇಶಕರಾದ ಅಂಜುಂ ಫರ್ವೇಜ್ , ಸಿ-40 ಸಂಸ್ಥೆಯ ರೀಜಿನಲ್ ಡೈರೆಕ್ಟರ್(ಸೌತ್ & ವೆಸ್ಟ್ ಏಶಿಯಾ) ಶೃತಿ ನಾರಾಯಣ್, WRI ಇಂಡಿಯಾದ ಎಕ್ಸಿಕ್ಯೂಟಿವ್ ಪ್ರೋಗ್ರಾಂ ಡೈರೆಕ್ಟರ್ ಜಯದಿಂದ್ವ ಸೇರಿದಂತೆ ಇನ್ನಿತರೆ ಹಿರಿಯ ಅಧಿಕಾರಿಗಳು ಹಾಗೂ ಸಂಸ್ಥೆಯ ಪ್ರತಿನಿಧಿಗಳು ಹಾಜರಿದ್ದರು.
Author: AIN Author
ಚಾಮರಾಜನಗರ:- ಚಲಿಸುತ್ತಿದ್ದ ಬಸ್ ಗೆ ವ್ಯಕ್ತಿಯೋರ್ವ ಹಾರಿ ಆತ್ಮಹತ್ಯೆ ಮಾಡಿಕೊಂಡ ಆಘಾತಕಾರಿ ಘಟನೆ ಚಾಮರಾಜನಗರದ ಕೆಎಸ್ಆರ್ ಟಿಸಿ ಬಸ್ ನಿಲ್ದಾಣದ ಮುಂಭಾಗ ನಡೆದಿದೆ. ಚಾಮರಾಜನಗರ ತಾಲೂಕಿನ ಯಾಲಕ್ಕೂರು ಗ್ರಾಮದ ರಂಗಸ್ವಾಮಿ(34) ಮೃತ ದುರ್ದೈವಿ. ಚಾಮರಾಜನಗರ ಬಸ್ ನಿಲ್ದಾಣದಿಂದ ಗುಂಡ್ಲುಪೇಟೆಯತ್ತ ತೆರಳುತ್ತಿದ್ದಾಗ ರಸ್ತೆ ಬದಿ ನಿಂತಿದ್ದ ರಂಗಸ್ವಾಮಿ ಹಿಂಬದಿ ಚಕ್ರಕ್ಕೆ ಹಾರಿದ್ದಾನೆ. ಇದನ್ನು ಚಾಲಕ ಗಮನಿಸಿ ಬ್ರೇಕ್ ಹಾಕಿದರಾದರೂ ಈತನ ಮೇಲೆ ಚಕ್ರ ಉರುಳಿದ್ದರಿಂದ ಸ್ಥಳದಲ್ಲೇ ಆತ ಅಸುನೀಗಿದ್ದಾನೆ. ಆತ್ಮಹತ್ಯೆಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಈ ಘಟನೆಯನ್ನು ಕಂಡ ಸಾರ್ವಜನಿಕರು ಕ್ಷಣ ಕಾಲ ವಿಚಲಿತರಾಗಿದ್ದಾರೆ. ಮಾಹಿತಿ ಅರಿತ ಚಾಮರಾಜನಗರ ಟ್ರಾಫಿಕ್ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನಂತರ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ರವಾನಿಸಿದ್ದು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ. ಇನ್ನು, ಆತ್ಮಹತ್ಯೆ ದೃಶ್ಯ ಅಂಗಡಿಯೊಂದರ ಮುಂಭಾಗ ಅಳವಡಿಸಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಕಲಬುರಗಿ:- ಇಲ್ಲಿ ನಡೆದ KEA ಪರೀಕ್ಷೆ ಅಕ್ರಮ ಪ್ರಕರಣದ ತನಿಖೆ ಚುರುಕುಗೊಳಿಸಿರುವ CID ಇದೀಗ ನೀರಾವರಿ ಇಲಾಖೆಯ ಇಂಜಿನಿಯರ್ ರುದ್ರಗೌಡ ಎಂಬಾತನನ್ನ ಖೆಡ್ಡಾಗೆ ಕೆಡವಿದ್ದಾರೆ. ಪರೀಕ್ಷಾ ಅಕ್ರಮದಲ್ಲಿ ಭಾಗಿಯಾದ ಆರೋಪ ಹೊಂದಿರುವ ರುದ್ರಗೌಡ ಮೂಲತ ಜೇವರ್ಗಿ ತಾಲೂಕಿನ ನೆಲೋಗಿ ಗ್ರಾಮದವನು. ಸದ್ಯ ಅಥಣಿಯಲ್ಲಿ ಇಂಜಿನಿಯರ್ ಆಗಿ ಕೆಲಸ ಮಾಡ್ತಿದ್ದ ಎನ್ನಲಾಗಿದೆ.. ವಿಶೇಷ ಅಂದ್ರೆ ಬಂಧಿತ ರುದ್ರಗೌಡ ಬಳಿ 17 ಹಾಲ್ಟಿಕೇಟ್ ಗಳು ಪತ್ತೆಯಾಗಿದ್ದು ಬೆಳಕಿಗೆ ಬಂದಿದೆ..ಹೀಗಾಗಿ ಹಾಲ್ಟಿಕೇಟ್ ಹಿಂದಿನ ಕಥೆ ಏನೂಂತ ಬಾಯ್ಬಿಡಿಸಲು ಮುಂದಾಗಿದ್ದಾರೆ…
ಕಲಬುರ್ಗಿ:- ಎಲೆಕ್ಟ್ರಾನಿಕ್ಸ್ ಐಟಂ ಇಡುವಂತಿಲ್ಲ ಮಂಗಲಸೂತ್ರ ಕಾಲುಂಗುರ ತೆಗೆಯುವಂತಿಲ್ಲ..ಇದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಕಟ್ಟುನಿಟ್ಟಾಗಿ ಹೊರಡಿಸಿರುವ ಹೊಸ ಗೈಡ್ ಲೈನ್ಸ್..ಯಾವುದೇ ಅವಾಂತರ ಮರುಕಳಿಸದಂತೆ ಪರೀಕ್ಷಾ ಸಿಬ್ಬಂದಿಗಳು ಎಚ್ಚರವಹಿಸಬೇಕು ಅಂತ ಕಲಬುರಗಿ ಜಿಲ್ಲಾಡಳಿತ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಹೌದು ಇದೇ 17 ಮತ್ತು 18 ರಂದು ಎರಡು ದಿನಗಳ ಕಾಲ ಸ್ಪರ್ಧಾತ್ಮಕ ಪರೀಕ್ಷೆ ನಡೆಯಲಿವೆ.. 14058 ನಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಹೀಗಾಗಿ ಪರೀಕ್ಷಾ ಕೇಂದ್ರದಲ್ಲಿರುವ ಸಿಬ್ಬಂದಿಗಳು KEA ಹೊರಡಿಸಿರುವ ನಿಯಮಾವಳಿಗಳನ್ನ ಪಾಲಿಸತಕ್ಕದ್ದು ಅಂತ ADC ರಾಯಪ್ಪ ಹುಣಸಿಗಿ ಸೂಚಿಸಿದ್ದಾರೆ. ಇತ್ತೀಚಿಗೆ ನಡೆದ ಪರೀಕ್ಷೆ ವೇಳೆ ಮಂಗಲಸೂತ್ರ ಕಾಲುಂಗುರ ತೆಗೆಸಿ ಪರೀಕ್ಷೆ ಬರೆಸಿದ್ದು ರಾಜ್ಯಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿತ್ತು..
ದಾವಣಗೆರೆ:- ಪೋಕ್ಸೊ ಪ್ರಕರಣದಲ್ಲಿ ಈ ಹಿಂದೆ ಬಂಧಿತರಾಗಿದ್ದ ಮುರುಘಾ ಶರಣರಿಗೆ ಇದೀಗ ಜಾಮೀನು ಮಂಜೂರಾಗಿದೆ. ಮುರುಘಾ ಶರಣರ ಬಿಡುಗಡೆ ಹಿನ್ನೆಲೆ, ದಾವಣಗೆರೆಯಲ್ಲಿ ಮುರುಘಾ ಮಠದ ಭಕ್ತರಿಂದ ಸಂಭ್ರಮಾಚರಣೆ ಮನೆ ಮಾಡಿದೆ. ಬಸವಣ್ಣನವರ ಭಾವಚಿತ್ರಕ್ಕೆ ಹಾಲಿನ ಅಭಿಷೇಕ ಮಾಡಿ ಪಟಾಕಿ ಸಿಡಿಸಿ ಭಕ್ತರು ಸಂಭ್ರಮಿಸಿದ್ದಾರೆ. ದಾವಣಗೆರೆ ಜಯದೇವ ವೃತ್ತದ ಬಳಿ ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಾಚರಣೆ ಮಾಡಿದ್ದಾರೆ. ದಾವಣಗೆರೆಗೆ ಆರೋಪಿ ಮುರುಘಾ ಶರಣರನ್ನ ಬರ ಮಾಡಿಕೊಳ್ಳುಲು ಭಕ್ತರು ಸಿದ್ದತೆ ಮಾಡಿದ್ದಾರೆ. ಎರಡು ಪೊಕ್ಸೊ ಪ್ರಕರಣದಲ್ಲಿ ಆರೋಪಿಯಾಗಿದ್ದ ಮುರುಘಾಮಠದ ಶಿವಮೂರ್ತಿ ಮುರುಘಾ ಶರಣರು, ಮೊನ್ನೆ ಮೊದಲನೆ ಪೋಕ್ಸೊ ಪ್ರಕರಣದಲ್ಲಿ ಹೈಕೋರ್ಟ್ ಷರತ್ತು ಬದ್ದ ಜಾಮೀನು ನೀಡಿತ್ತು. ನಾಳೆ ಬೆಳಿಗ್ಗೆ ಮುರುಘಾ ಶರಣರು ಜೈಲಿನಿಂದ ಬಿಡುಗಡೆಯಾಗುವ ಸಾಧ್ಯತೆ ಇದೆ. ಚಿತ್ರದುರ್ಗ ಜಿಲ್ಲೆಗೆ ತೆರಳದಂತೆ ಷರತ್ತು ಹಾಕಿರುವ ಹಿನ್ನಲೆ, ಆರೋಪಿ ಮುರುಘಾ ಶರಣರು ದಾವಣಗೆರೆಯಲ್ಲಿ ವಾಸ್ತವ್ಯ ಹೂಡುವ ಸಾಧ್ಯತೆ ಇದೆ ಎನ್ನಲಾಗಿದೆ.
ಚಿತ್ರದುರ್ಗ:- ಮುರುಘಾ ಮಠದ ಪೀಠಾಧಿಪತಿ ಶಿವಮೂರ್ತಿ ಮುರುಘಾ ಶರಣರ ಬಿಡುಗಡೆಗೆ ಜಿಲ್ಲಾ ನ್ಯಾಯಾಲಯ ಆದೇಶಿಸಿದೆ. ಕಳೆದ 14 ತಿಂಗಳಿಂದ ಜಿಲ್ಲಾ ಕಾರಾಗೃಹದಲ್ಲಿದ್ದ ಮುರುಘಾ ಮಠದ ಪೀಠಾಧಿಪತಿ ಶಿವಮೂರ್ತಿ ಮುರುಘಾ ಶರಣರ ಬಿಡುಗಡೆಗೆ ಜಿಲ್ಲಾ ನ್ಯಾಯಾಲಯ ಆದೇಶಿಸಿದೆ. ಮೊದಲ ಪೋಕ್ಸೋ ಪ್ರಕರಣದಲ್ಲಿ ಹೈಕೋರ್ಟ್ ಜಾಮೀನು ಮಂಜೂರು ಮಾಡಿದ್ದು, ಶ್ಯೂರಿಟಿಗಳ ಪರಿಶೀಲನೆ ನಂತರ ಬಿಡುಗಡೆಗೆ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಬಿ.ಕೆ.ಕೋಮಲ ಆದೇಶ ಮಾಡಿದರು.ಮುರುಘಾ ಶರಣರ ಪರವಾಗಿ ಹೈಕೋರ್ಟ್ ನ್ಯಾಯವಾದಿ ಸಂದೀಪ್ ಪಾಟೀಲ್ ನ್ಯಾಯಾಲಯಕ್ಕೆ ಹಾಜರಾಗಿ ವಾದ ಮಂಡಿಸಿದರು. ನ್ಯಾಯಾಲಯದ ಎಲ್ಲ ಪ್ರಕ್ರಿಯೆಗಳು ಮುಗಿದು ಕಾರಾಗೃಹಕ್ಕೆ ಆದೇಶ ಪ್ರತಿ ತಲುಪಿದರೆ ಶರಣರು ಇಂದೇ ಹೊರಗೆ ಬರಲಿದ್ದಾರೆ. ನ್ಯಾಯಾಲಯದ ಕಲಾಪಗಳ ನಂತರ ಮಾಧ್ಯಮಗಳ ಜೊತೆಗೆ ಮಾತನಾಡಿದ ಸಂದೀಪ್ ಪಾಟೀಲ್, ಹೈಕೋರ್ಟ್ ಜಾಮೀನು ಆದೇಶದಂತೆ ಇಂದು ಮೊದಲನೇ ಪ್ರಕರಣದಲ್ಲಿ ಶಿವಮೂರ್ತಿ ಮುರುಘಾ ಶರಣರಿಗೆ ಜಾಮೀನು ಮಂಜೂರಾಗಿದ್ದು, ಜಿಲ್ಲಾ ನ್ಯಾಯಾಲಯ ಬಿಡುಗಡೆ ಆಗಲಿದ್ದಾರೆ ಎಂದು ತಿಳಿಸಿದರು. ಇನ್ನೂ ಎರಡನೇ ಪ್ರಕರಣದಲ್ಲಿ ಅರೆಸ್ಟ್ ಅಥವಾ ಕಸ್ಟಡಿಗೆ ಹೋಗಿರಲಿಲ್ಲ.…
ಚಾಮರಾಜನಗರ:- ಬಿಜೆಪಿಯವರ ಜತೆ ಲಿಂಗಾಯತರಿರುವುದು ಸತ್ಯ, ಇದರಲ್ಲಿ ನೋ ಡೌಟ್ ಎಂದು ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಲಿಂಗಾಯತರು ಮೊದಲಿಂದಲೂ ಹೆಚ್ಚು ಬಿಜೆಪಿ ಪರ ಇದ್ದಾರೆ. ನಮ್ಮ ಜತೆ ಇರುವವರು ಇದ್ದಾರೆ. ಅವರು ಬಂದ ತಕ್ಷಣ ಏನು ವ್ಯತ್ಯಾಸ ಆಗಲ್ಲ ಎಂದು ಹೇಳಿದ್ದಾರೆ. ಬಿಜೆಪಿಯವರ ಜತೆ ಹೆಚ್ಚಿನ ಲಿಂಗಾಯತರು ಇದ್ದಾರೆ ಅಷ್ಟೇ. ಬಿಜೆಪಿ ರಾಜ್ಯ ಘಟಕದ ನೂತನ ಅಧ್ಯಕ್ಷ ವಿಜಯೇಂದ್ರ ಅವರಿಗೆ ಮುಂದೆ ಹೆಚ್ಚಿನ ಹೋರಾಟಗಳಿವೆ. ಆ ಎಲ್ಲ ಜವಾಬ್ದಾರಿ ನಿರ್ವಹಿಸುತ್ತಾರೆ ಎಂದು ಅವರಿಗೆ ಆ ಸ್ಥಾನ ಕೊಟ್ಟಿದ್ದಾರೆ. ನೋಡೋಣ, ಮುಂದೆ ಲೋಕಸಭಾ ಚುನಾವಣೆ ಇದೆ. ಅದಾದ ಮೇಲೆ ಫೈನಲ್ ಮ್ಯಾಚ್, 2028 ರ ವಿಧಾನಸಭಾ ಚುನಾವಣೆ ಇದೆ. ಅವರು ಯಾವ ರೀತಿ ಸಂಘಟನೆ ಮಾಡ್ತಾರೆ, ಪಕ್ಷ ಯಾವರೀತಿ ಸಹಕಾರ ನೀಡುತ್ತಾರೆ ಕಾದು ನೋಡಬೇಕು ಎಂದು ಸತೀಶ್ ಜಾರಕಿಹೊಳಿ ಹೇಳಿದರು. ಸಿಎಂ ಬದಲಾವಣೆ ವಿಚಾರ ಮುಗಿದು ಹೋದ ಕಥೆ. ಆ ಬಗ್ಗೆ ಪದೇ ಪದೇ ಹೇಳೋದು ಏನು ಇಲ್ಲ.…
ಬೆಂಗಳೂರು:- ಜೆಡಿಎಸ್ ಹಾಗೂ ಕಾಂಗ್ರೆಸ್ ಮೈತ್ರಿ ಸರ್ಕಾರದ ಅವಧಿಯಲ್ಲಿ ನಡೆದ ವಿದ್ಯಮಾನಗಳ ಬಗ್ಗೆ ಡಿಕೆ ಶಿವಕುಮಾರ್ ಸ್ಫೋಟಕ ಮಾಹಿತಿ ಬಹಿರಂಗಪಡಿಸಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ನನ್ನ ಸಿಎಂ ಮಾಡಿದ್ರೆ ವಾಪಸ್ ಬರುವುದಾಗಿ ಮುಂಬೈಗೆ ತೆರಳಿದ್ದ ಶಾಸಕರು ಹೇಳಿದ್ದರು. ಮುಂಬೈನಲ್ಲಿದ್ದ ಎಸ್.ಟಿ.ಸೋಮಶೇಖರ್, ಗೋಪಾಲಯ್ಯ ಹಾಗೆ ಹೇಳಿದ್ದರು. ಅಂದಿನ ಸಿಎಂ ಕುಮಾರಸ್ವಾಮಿಗೆ ಖುದ್ದು ಕರೆ ಮಾಡಿ ಹೇಳಿದ್ದರು. ಡಿಕೆ ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಮಾಡುವುದಾದರೆ ವಾಪಸ್ ಬರುತ್ತೇವೆ ಎಂದು ಹೇಳಿದ್ದರು. ಆದರೆ, ಶಾಸಕರ ಬೇಡಿಕೆ ಬಗ್ಗೆ ಕುಮಾರಸ್ವಾಮಿ ಆಗ ಬಾಯಿ ಬಿಡಲೇ ಇಲ್ಲ’ ಎಂದು ಹೇಳಿದ್ದಾರೆ. ಶಾಸಕರ ಬೇಡಿಕೆ ಬಗ್ಗೆ ಆಗ ಬಾಯಿ ಬಿಡದೇ ಇದ್ದ ಕುಮಾರಸ್ವಾಮಿ ಈಗ ಬೇಕಿದ್ದರೆ 19 ಶಾಸಕರು ಬೆಂಬಲ ಕೊಡ್ತೀವಿ ಎಂದು ಹೇಳ್ತಾರೆ. ಡಿ.ಕೆ.ಶಿವಕುಮಾರ್ ಸಿಎಂ ಆದರೆ ಬೆಂಬಲ ಕೊಡುತ್ತೇವೆ ಅಂತಾರೆ. ಹೆಚ್.ಡಿ.ಕುಮಾರಸ್ವಾಮಿ ಮಾತನ್ನು ನಂಬುವುದಕ್ಕೆ ನಾವು ದಡ್ಡರಾ ಎಂದು ಪ್ರಶ್ನಿಸಿದ್ದಾರೆ
ಕೊಪ್ಪಳ:- ಆಪರೇಷನ್’ ಹಸ್ತ ಇದು ಕೇವಲ ಕಾಂಗ್ರೆಸ್‌ನ ನಾಟಕ ಎಂದು ಶ್ರೀರಾಮುಲು ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಬಿಜೆಪಿಯಿಂದ ಹಲವು ಶಾಸಕರು ಬರುತ್ತಾರೆಂದು ಶಾಸಕ ರವಿ ಗಣಿಗರಂಥವರಿಂದ ಕಾಂಗ್ರೆಸ್‌ನ ಮುಖಂಡರು ಹೇಳಿಸಿ ಹೊಸ ನಾಟಕ ಶುರು ಮಾಡಿದ್ದಾರೆ ಎಂದರು. ಕಾಂಗ್ರೆಸ್‌ನವರು ತಮ್ಮ ಪಕ್ಷದವರಿಂದಲೇ ಈ ರೀತಿ ಹೇಳಿಸುತ್ತಿದ್ದಾರೆ. ಅವರಿಗೆ ಬೇರೆ ವಿಷಯ ಕೇಳಬಾರದು ಎಂಬ ಕಾರಣಕ್ಕೆ ಈ ರೀತಿ ನಾಟಕ ಶುರು ಮಾಡಿದ್ದಾರೆ ಎಂದು ಟೀಕಿಸಿದರು. ಬಿಜೆಪಿ ನೂತನ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರಿಗೆ ಪಕ್ಷ ಹೊಸ ಅವಕಾಶ ಮಾಡಿಕೊಟ್ಟಿದೆ. ಅವರ ಆಯ್ಕೆ ಎಲ್ಲ ಕಾರ್ಯಕರ್ತರಲ್ಲೂ ಖುಷಿ ತರಿಸಿದೆ. ನಾಯಕರು ತೆಗೆದುಕೊಳ್ಳುವ ನಿರ್ಧಾರಕ್ಕೆ ನಾವೆಲ್ಲರೂ ಬದ್ಧರಾಗಿದ್ದೇವೆ. ನಾನು ಸಹ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಪ್ರಯತ್ನ ಮಾಡಿದ್ದೆ. ಆದರೆ, ಪಕ್ಷಕ್ಕೆ ಯಡಿಯೂರಪ್ಪ ಕೊಡುಗೆ ದೊಡ್ಡದಿದೆ. ನನಗೆ ಸ್ಥಾನ ಸಿಕ್ಕಿಲ್ಲ ಎನ್ನುವ ಅಸಮಾಧಾನವಿಲ್ಲ. ಪಕ್ಷ ತೆಗೆದುಕೊಂಡ ನಿರ್ಧಾರಕ್ಕೆ ಬದ್ಧರಾಗಿದ್ದೇವೆ. ಮಾಧ್ಯಮದಲ್ಲಿ ಹೇಳಿದ ತಕ್ಷಣ ಅಸಮಾಧಾನವಿದೆ ಎಂಬ ಭಾವನೆಯಲ್ಲ. ಪಕ್ಷದಲ್ಲಿ ಕುಳಿತು ಈ ಬಗ್ಗೆ ಚರ್ಚಿಸುತ್ತೇವೆ. ವಿರೋಧ ಪಕ್ಷದ…
ಕ್ರಿಕೆಟ್ ದೇವರೆಂದೇ ಖ್ಯಾತರಾಗಿರುವ ಸಚಿನ್ ತೆಂಡುಲ್ಕರ್ ಅವರ ಎರಡು ದಾಖಲೆಗಳನ್ನು ಇಂದು ಒಂದೇ ಇನ್ನಿಂಗ್ಸ್ನಲ್ಲಿ ವಿರಾಟ್ ಕೊಹ್ಲಿ ಮುರಿದಿದ್ದು, ಅದಕ್ಕೆ ಸ್ವತಃ ಸಚಿನ್ ತೆಂಡುಲ್ಕರ್ ಅವರೇ ಮೆಚ್ಚಿ ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ. ವಿರಾಟ್ ಕೊಹ್ಲಿಯ ರೆಕಾರ್ಡ್ ಬ್ರೇಕಿಂಗ್ ಆಟದ ಬೆನ್ನಿಗೇ ಸಚಿನ್ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. https://twitter.com/sachin_rt/status/1724760546342486345?ref_src=twsrc%5Etfw%7Ctwcamp%5Etweetembed%7Ctwterm%5E1724760546342486345%7Ctwgr%5E11d16bcea6afcd548f8921418db4d87571fbc9d8%7Ctwcon%5Es1_c10&ref_url=http%3A%2F%2Fapi-news.dailyhunt.in%2F ನಾನು ನಿಮ್ಮನ್ನು ಮೊದಲ ಬಾರಿಗೆ ಭಾರತೀಯ ಡ್ರೆಸ್ಸಿಂಗ್ ರೂಮ್‌ನಲ್ಲಿ ಭೇಟಿಯಾದಾಗ ನನ್ನ ಪಾದಗಳನ್ನು ಮುಟ್ಟುವಂತೆ ತಂಡದ ಇತರ ಸದಸ್ಯರು ನಿಮ್ಮನ್ನು ತಮಾಷೆ ಮಾಡಿದ್ದರು. ಆ ದಿನ ನನಗೆ ನಗು ತಡೆಯಲಾಗಲಿಲ್ಲ. ಆದರೆ ಶೀಘ್ರದಲ್ಲೇ ನಿಮ್ಮ ಉತ್ಸಾಹ ಮತ್ತು ಕೌಶಲ್ಯದಿಂದ ನೀವು ನನ್ನ ಹೃದಯವನ್ನು ತಟ್ಟಿದ್ದೀರಿ. ಆ ಚಿಕ್ಕ ಹುಡುಗ ‘ವಿರಾಟ್’ ಆಟಗಾರನಾಗಿ ಬೆಳೆದಿದ್ದಕ್ಕೆ ನನಗೆ ತುಂಬಾ ಖುಷಿಯಾಗಿದೆ ಎಂದು ಸಚಿನ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಒಬ್ಬ ಭಾರತೀಯ ನನ್ನ ದಾಖಲೆ ಮುರಿದಿದ್ದಕ್ಕೆ ನಾನು ಹೆಚ್ಚು ಸಂತೋಷಪಡಲು ಸಾಧ್ಯವಿಲ್ಲ. ಅದನ್ನು ವಿಶ್ವಕಪ್ನ ಸೆಮಿಫೈನಲ್ನಂಥ ದೊಡ್ಡ ವೇದಿಕೆಯಲ್ಲಿ ಅದೂ ನನ್ನ ತವರು ಮೈದಾನದಲ್ಲಿ ಮಾಡಿರುವುದು…