ಶಿವಮೊಗ್ಗ:- ಶಾಲೆಗಳಲ್ಲಿ ಶೂ ಬದಲು ಚಪ್ಪಲಿ ನೀಡಿದ್ದರೆ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಮಧು ಬಂಗಾರಪ್ಪ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಶಾಲಾ ಮಕ್ಕಳಿಗೆ ಶೂ ಬದಲು ಚಪ್ಪಲಿ ನೀಡಿದ್ದರೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು. ಮೊಟ್ಟೆ ಮತ್ತು ಶೂ ವಿತರಣೆ ವಿಚಾರದಲ್ಲಿ ಯಾರೇ ತಪ್ಪು ಮಾಡಿದ್ದರೂ ಕ್ರಮ ಕೈಗೊಳ್ಳುವುದು ಪಕ್ಕಾ. ಬರಗಾಲದಲ್ಲಿ ರೈತರ ಸಾಲ ಮನ್ನಾ ಬಗ್ಗೆ ಈಗಲೇ ಚಿಂತನೆ ಮಾಡುವ ಅಗತ್ಯ ಇಲ್ಲ, ಮುಂದೆ ನೋಡೋಣ. ಮಲೆನಾಡಿನಲ್ಲಿ ಕಾಡಾನೆ ಹಾವಳಿ ನಿಯಂತ್ರಣಕ್ಕೆ ಅರಣ್ಯಾಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಿದ್ದು, ಅಧಿಕಾರಿಗಳು ಕ್ರಮ ಕೈಗೊಳ್ಳಲಿದ್ದಾರೆ ಎಂದರು.
Author: AIN Author
ಬಿಗ್ಬಾಸ್ ಸ್ಪರ್ಧಿ, ನಟಿ ತನಿಷಾ ಕುಪ್ಪಂಡ ಅವಹೇಳನಕಾರಿಯಾಗಿ ಮಾತನಾಡಿದ್ದಾರ ಎಂದು ಆರೋಪಿಸಿ ಅವರ ವಿರುದ್ಧ ಪ್ರಕರಣ ದಾಖಲಾಗಿದೆ. ಎಸ್ಸಿ-ಎಸ್ಟಿ ದೌರ್ಜನ್ಯ ತಡೆ ಕಾಯ್ದೆಯಡಿ ನಟಿ ತನಿಷಾ ವಿರುದ್ಧ ಕುಂಬಳಗೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಇತ್ತೀಚಿನ ಸಂಚಿಕೆಯೊಂದರಲ್ಲಿ ನಟಿ ತನಿಷಾ ಡ್ರೋನ್ ಪ್ರತಾಪ್ ಅವರೊಂದಿಗೆ ಮಾತನಾಡುವ ವೇಳೆ ಬೋವಿ ಜನಾಂಗದ ಬಗ್ಗೆ ಅವಮಾನಕರ ಪದ ಬಳಸಿದ್ದಾರೆ ಎಂದು ಆರೋಪಿಸಿ ದೂರು ದಾಖಲಿಸಲಾಗಿದೆ. ಅಖಿಲ ಕರ್ನಾಟಕ ಬೋವಿ ಸಮಾಜದ ರಾಜ್ಯಾಧ್ಯಕ್ಷೆ ಪಿ.ಪದ್ಮಾ ಎಂಬುವವರು ಕುಂಬಳಗೋಡು ಪೊಲೀಸ್ ಠಾಣೆಯಲ್ಲಿ ಜಾತಿ ನಿಂದನೆ, ಎಸ್ಸಿ-ಎಸ್ಟಿ ದೌರ್ಜನ್ಯ ತಡೆ ಕಾಯ್ದೆಯಡಿ ದೂರು ದಾಖಲಿಸಿದ್ದಾರೆ. ಬಿಗ್ ಬಾಸ್ ಸ್ಪರ್ಧಿ ತನಿಷಾ ಅವರು, ವಡ್ಡ ಎಂಬ ಪದ ಬಳಸುವ ಮೂಲಕ ಭೋವಿ ಸಮುದಾಯಕ್ಕೆ ಅಪಮಾನ ಎಸಗಿದ್ದಾರೆ. ಭೋವಿ ಸಮುದಾಯವು ಪರಿಶಿಷ್ಟ ಜಾತಿಗೆ ಸೇರಿದೆ ಎಂದು ತಿಳಿದೂ ಸಹ ಅಪಮಾನ ಮಾಡಲಾಗಿದೆ. ತನಿಷಾ ಅವರನ್ನು ಈ ಕೂಡಲೇ ಬಿಗ್ಬಾಸ್ ಮನೆಯಿಂದ ಹೊರಗೆ ಕಳಿಸಬೇಕು, ಪೊಲೀಸರು ತನಿಷಾರನ್ನು ಬಂಧಿಸಬೇಕು ಎಂದು…
ಟೀಂ ಇಂಡಿಯಾಗೆ ವಿಶ್ವಕಪ್ ಟೂರ್ನಿಯಲ್ಲಿ ಬೇಕಾಗುವಂತೆ ಪಿಚ್, ಭಾರತದ ಬೌಲರ್‌ಗಳಿಗೆ ನೆರವಾಗುವ ಬಾಲ್ ನೀಡಲಾಗುತ್ತಿದೆ. ಡಿಆರ್‌ಎಸ್, ಆಂಪೈರ್ ನಿರ್ಧಾರಗಳು ಭಾರತದ ಪರವಾಗಿ ಬರುತ್ತಿದೆ ಅನ್ನೋ ಆರೋಪ ಪಾಕಿಸ್ತಾನದ ಮಾಜಿ ಕ್ರಿಕೆಟಿಗರು ಸೇರಿದಂತೆ ಕೆಲವರು ಮಾಡಿದ್ದಾರೆ. ಈ ಆರೋಪ-ಟೀಕೆಗಳ ನಡುವೆ ಮುಂಬೈ ಪಿಚ್ ವಿವಾದ ಶುರುವಾಗಿದೆ. ಭಾರತ ನ್ಯೂಜಿಲೆಂಡ್ ನಡುವಿನ ಸೆಮಿಫೈನಲ್ ಪಂದ್ಯಕ್ಕೆ ಬಿಸಿಸಿಐ ಅಂತಿಮ ಕ್ಷಣದಲ್ಲಿ ಪಿಚ್ ಬದಲಾಯಿಸಿದೆ ಅನ್ನೋ ಆರೋಪ ಗಂಭೀರ ಸ್ವರೂಪ ಪಡೆದುಕೊಂಡಿದೆ. ವಿರಾಟ್ ಕೊಹ್ಲಿ ದಾಖಲೆಯ ಶತಕ ಹಾಗೂ ಶ್ರೇಯಸ್ ಅಯ್ಯರ್ ಸ್ಫೋಟಕ ಸೆಂಚುರಿ ಬಳಿಕ ಈ ಪಿಚ್ ವಿವಾದ ಜೋರಾಗಿದೆ. ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಸೆಮಿಫೈನಲ್ ಪಂದ್ಯಕ್ಕೆ ವಾಂಖೆಡೆ ಕ್ರೀಡಾಂಗಣದಲ್ಲಿ ಪಿಚ್‌ಗಳ ಪೈಕಿ ಹೊಸ ಪಿಚ್ ಅಂತಿಮಗೊಳಿಸಲಾಗಿತ್ತು. ಐಸಿಸಿ ಪಿಚ್ ಕನ್ಸಲ್ಟೆಂಟ್ ಆಯಂಡಿ ಅಟ್ಕಿನ್ಸನ್ ಈ ಪಿಚ್ ಅಂತಿಮಗೊಳಿಸಿದ್ದರು. ಆದರೆ ಅಂತಿಮ ಕ್ಷಣದಲ್ಲಿ ಬಿಸಿಸಿಐ ಪಿಚ್ ಬದಲಿಸಿದೆ. ಮುಂಬೈನ ವಾಂಖೆಡೆಯಲ್ಲಿ ಐಸಿಸಿ ಲೀಗ್ ಪಂದ್ಯಕ್ಕೆ ಬಳಸಲಾದ ಪಿಚನ್ನು ಸೆಮಿಫೈನಲ್ ಪಂದ್ಯಕ್ಕೆ ಬಳಸಲಾಗಿದೆ ಎಂದು ಡೈಲ್…
ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಬುಧವಾರ ನಡೆಯುತ್ತಿರುವ ವಿಶ್ವಕಪ್ ಸೆಮಿಫೈನಲ್ ಮೊದಲ ಪಂದ್ಯದಲ್ಲಿ ಭಾರತ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನಡೆಸಿದೆ. ವಿರಾಟ್ ಕೊಹ್ಲಿ ಅವರು ಸ್ಮರಣೀಯ 50 ನೇ ಏಕದಿನ ಶತಕ, ಶ್ರೇಯಸ್ ಅಯ್ಯರ್ ಅವರ ಸ್ಪೋಟಕ ಶತಕ ಮತ್ತು ಆಗ್ರ ಕ್ರಮಾಂಕಾದ ಅತ್ಯಮೋಘ ಬ್ಯಾಟಿಂಗ್ ಬಲ ಪ್ರದರ್ಶನದಿಂದಾಗಿ ಭಾರತ ತಂಡ ನ್ಯೂಜಿಲ್ಯಾಂಡ್ ಗೆಲುವಿಗೆ 398 ರನ್ ಗಳ ಬೃಹತ್ ಗುರಿ ಮುಂದಿಟ್ಟಿದೆ. ಭಾರತ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡು ಉತ್ತಮ ಆರಂಭ ಪಡೆಯಿತು. 50 ಓವರ್ ಗಳಲ್ಲಿ4 ವಿಕೆಟ್ ನಷ್ಟಕ್ಕೆ 397 ರನ್ ಗಳಿಸಿ ಬೃಹತ್ ಗುರಿಯನ್ನು ಕೇನ್ ವಿಲಿಯಮ್ಸನ್ ಪಡೆಯ ಮುಂದಿಟ್ಟಿದೆ. ಆರಂಭದಲ್ಲಿ ಅಬ್ಬರಿಸಿದ ನಾಯಕ ರೋಹಿತ್ ಶರ್ಮ29 ಎಸೆತಗಳಲ್ಲಿ 47 ರನ್ ಗಳಿಸಿ ನಿರ್ಗಮಿಸಿದರು. ಅವರು ತಲಾ 4 ಭರ್ಜರಿ ಬೌಂಡರಿ ಮತ್ತು ಸಿಕ್ಸರ್ ಬಾರಿಸಿದ್ದರು. ಇನ್ನೊಂದು ಅತ್ಯಮೋಘ ಇನ್ನಿಂಗ್ಸ್ ಆಡಿದ ಶುಭ್ ಮನ್ ಗಿಲ್ 79 ರನ್ ಗಳಿಸಿದ್ದ ವೇಳೆ ಗಾಯಾಳಾಗಿ ನಿವೃತ್ತಿಯಾಗಿದ್ದು ಅಭಿಮಾನಿಗಳು ತೀವ್ರವಾಗಿ…
ದಕ್ಷಿಣದ ಹೆಸರಾಂತ ತಾರೆ ಸಮಂತ್ ರುತ್ ಪ್ರಭು (Samant) ಕಾಲಿಗೆ ಚಕ್ರಕಟ್ಟಿಕೊಂಡು ದೇಶ ದೇಶಗಳನ್ನು ಸುತ್ತುತ್ತಿದ್ದಾರೆ. ಅಲ್ಲಿನ ಪ್ರವಾಸಿ ತಾಣಗಳು, ಸುಂದರ ಜಾಗಗಳಿಗೆ ಭೇಟಿ ನೀಡಿ, ಆ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳಿಗಾಗಿ ಹಂಚಿಕೊಳ್ಳುತ್ತಾರೆ. ಇದೀಗ ಸಮಂತಾ ಭೂತಾನ್ (Bhutan) ಪ್ರವಾಸದಲ್ಲಿ ಇದ್ದಾರೆ. ಫ್ರೆಂಡ್ಸ್ ಜೊತೆ ಭೂತಾನ್ ಗೆ ಹೋಗಿರುವ ಸಮಂತಾ, ಅಲ್ಲಿ ಕಳೆದ ಕ್ಷಣಗಳನ್ನು ಫೋಟೋದಲ್ಲಿ ಸೆರೆ ಹಿಡಿದು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಅದರಲ್ಲೂ ಬಾತ್ ರೂಮ್ ನಲ್ಲಿ ಸಖತ್ ರೊಮ್ಯಾಂಟಿಕ್ ಆಗಿ ಮಲಗಿರುವ ಫೋಟೋ (Hot Photo) ವೈರಲ್ ಆಗಿದೆ. ಒಂದು ಕಡೆ ಕಾಯಿಲೆ ಮತ್ತೊಂದು ಕಡೆ ಒಂಟಿತನ.. ಇವೆರಡೂ ತಮ್ಮನ್ನು ಇನ್ನಷ್ಟು ಕುಗ್ಗಿಸುತ್ತಿವೆ ಎಂದು ಹೇಳಿದ್ದರು. ಕುಗ್ಗುವಿಕೆಯಿಂದಾಗಿ ಮತ್ತಿನ್ನೇನು ದೇಹಕ್ಕೆ ಆಗದಿರಲಿ ಎಂದು ಅವರು ಹೆಚ್ಚೆಚ್ಚು ಪ್ರವಾಸ ಮಾಡುತ್ತಿದ್ದಾರೆ ಎನ್ನುವುದು ಅವರ ಆಪ್ತರ ಕೊಡುವ ಮಾಹಿತಿ.
ಬೆಂಗಳೂರು:- ಜೆಡಿಎಸ್ ಬಿಜೆಪಿಯ ಬಿ ಟೀಮ್ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು, ಹಿಂದೆಯೂ ಬಿಜೆಪಿ ಜತೆ ಕೈ ಜೋಡಿಸಿದ್ದ ಕಾರಣಕ್ಕೆ ಜನತಾ ಪರಿವಾರದಲ್ಲಿ ಸೆಕ್ಯುಲರ್ ಸಿದ್ಧಾಂತದವರೆಲ್ಲ ಪ್ರತ್ಯೇಕವಾಗಿ ಉಳಿದೆವು. ಈಗ ಜೆಡಿಎಸ್ ಮತ್ತೆ ಬಿಜೆಪಿ ಜತೆ ಬೆರೆಯುತ್ತಿದೆ. ನಾನು ಈ ಜೆಡಿಎಸ್ ಅನ್ನು ಬಿಜೆಪಿಯ ಬಿ ಟೀಮ್ ಅಂದಿದ್ದಕ್ಕೆ ಸಿಟ್ಟಾಗಿದ್ದರು. ಅಂದು ನಾನು ಹೇಳಿದ್ದನ್ನು ಇಂದು ಅವರೇ ಸಾಬೀತುಪಡಿಸಿದ್ದಾರೆ ಎಂದು ಸಿದ್ದರಾಮಯ್ಯ ಟೀಕಿಸಿದರು. ಜೆಡಿಎಸ್ ಈಗ ತನ್ನ ಸ್ವರೂಪದಲ್ಲಿ ಜನಸಮುದಾಯದ ರಾಜಕೀಯ ಪಕ್ಷ ಆಗಿ ಉಳಿದಿಲ್ಲ. ಕೇವಲ ಕುಟುಂಬಕ್ಕೆ ಸೀಮಿತವಾಗಿದೆ. ಜೆಡಿಎಸ್ನ ಡಬಲ್ ಗೇಮ್ ಅನ್ನು ಸರಿಯಾಗಿ ಅರ್ಥ ಮಾಡಿಕೊಂಡಿರುವ ಗೌರಿಶಂಕರ್ ಮತ್ತು ಮಂಜುನಾಥ್ ಸೇರಿದಂತೆ ಇನ್ನೂ ಬಹಳ ಮಂದಿ ಕಾಂಗ್ರೆಸ್ ಸೇರುತ್ತಿದ್ದಾರೆ. ಆ ಮೂಲಕ ತಮ್ಮ ರಾಜಕೀಯ ಜೀವನವನ್ನು ಭದ್ರ ಮಾಡಿಕೊಳ್ಳುತ್ತಿದ್ದಾರೆ ಎಂದರು ನಾವು ಗ್ಯಾರಂಟಿ ಕಾರ್ಯಕ್ರಮ ಕೊಟ್ಟಾಗ ಅವನ್ನು ಟೀಕಿಸಿದ್ದ ಪ್ರಧಾನಿಯವರು, ಈಗ ಮೋದಿ ಗ್ಯಾರಂಟಿ ಹೆಸರಿನಲ್ಲಿ ಪ್ರಚಾರ ಮಾಡುತ್ತಿದ್ದಾರೆ ಎಂದು ಪ್ರಸ್ತಾಪಿಸಿದ…
ಬಿಗ್ ಬಾಸ್ ಮನೆಯಲ್ಲಿ ವರ್ತೂರು ಸಂತೋಷ್ ಅವರ ಡ್ರಾಮಾ ಮುಗಿದ ಬಳಿಕ ಇದೀಗ ಡ್ರೋನ್ ಪ್ರತಾಪ್ ಅಳುವ ಸರದಿ. ಮೂರು ವರ್ಷಗಳಿಂದ ಅಪ್ಪ-ಅಮ್ಮನನ್ನು ನೋಡಲಿಲ್ಲವಂತೆ ಪ್ರತಾಪ್. ಇದೀಗ ಬಿಗ್ಬಾಸ್ ಮನೆಯಲ್ಲಿ ಅವರ ನೆನಪಾಗಿ ಬಿಕ್ಕಿಬಿಕ್ಕಿ ಅತ್ತಿದ್ದಾರೆ. ಅವರ ಜೊತೆ ಮಾತನಾಡಬೇಕು ಎಂದು ಕಣ್ಣೀರು ಹಾಕಿದ್ದಾರೆ. ಇದರ ಪ್ರೊಮೋ ಬಿಡುಗಡೆಯಾಗಿದ್ದ ಪ್ರತಾಪ್ ಅಭಿಮಾನಿಗಳೂ ಭಾವುಕರಾಗಿದ್ದಾರೆ. ಅಯ್ಯೋ ಪ್ರತಾಪ್ಗೆ ಏನಾಯ್ತು, ಅವರನ್ನು ಅಪ್ಪ-ಅಮ್ಮನ ಜೊತೆ ಮಾತನಾಡಲು ಬಿಡಿ ಎಂದು ಗೋಗರೆಯುತ್ತಿದ್ದಾರೆ. ಅಷ್ಟಕ್ಕೂ ಆಗಿರುವುದು ಏನೆಂದರೆ, ಮನೆಯ ಮೂವರು ಸದಸ್ಯರಿಗೆ ತಮ್ಮ ಮನೆಯಿಂದ ಬಂದಿರುವ ಪತ್ರವನ್ನು ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಹಬ್ಬದ ಉಡುಗೊರೆಯಾಗಿ ಈ ಅವಕಾಶ ಕಲ್ಪಿಸಲಾಗಿದೆ. ಮೂವರಲ್ಲಿ ಯಾರಿಗೆ ಅದು ಕೊಡಬೇಕು ಎಂಬ ಬಗ್ಗೆ ಚರ್ಚೆ ನಡೆದಿದೆ. ಅದಕ್ಕೆ ಬಹುತೇಕ ಮಂದಿ ತಮಗೇ ಈ ಅವಕಾಶ ನೀಡುವಂತೆ ಗೋಗರೆದಿದ್ದಾರೆ. ಈ ಮೊದಲು ದೀಪಾವಳಿ ಹಬ್ಬಕ್ಕೆ ಮನೆಯಿಂದ ಮಾಡಿರುವ ಸ್ವೀಟ್ಸ್ ತಿನ್ನಲು ಸ್ಪರ್ಧಿಗಳಿಗೆ ಅವಕಾಶ ನೀಡಲಾಗಿತ್ತು. ಆಗ ತನೀಷಾ ಅವರಿಗೆ ರೆಡಿಮೇಡ್ ಸ್ವೀಟ್ ಬಂದಿತ್ತು. ಇದರಿಂದ…
ಬೆಂಗಳೂರು: ರಾಜ್ಯದಲ್ಲಿ ಆಡಳಿತಾರೂಢ ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವಣ ವಾಕ್ಸಮರ ತಾರಕಕ್ಕೇರಿದೆ. ಜೆಡಿಎಸ್ ನಾಯಕ ಹೆಚ್ಡಿ ಕುಮಾರಸ್ವಾಮಿ ವಿರುದ್ಧ ಡಿಸಿಎಂ ಡಿ.ಕೆ.ಶಿವಕುಮಾರ್ ಕಿಡಿ ಕಾರಿದ್ದಾರೆ. https://ainlivenews.com/former-cm-kumaraswamy-simply-makes-false-statement-cm-siddaramaiah/ ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು,, ‘ನನ್ನ ಸಿಎಂ ಮಾಡಿದ್ರೆ ವಾಪಸ್ ಬರುವುದಾಗಿ ಮುಂಬೈಗೆ ತೆರಳಿದ್ದ ಶಾಸಕರು ಹೇಳಿದ್ದರು. ಮುಂಬೈನಲ್ಲಿದ್ದ ಎಸ್.ಟಿ.ಸೋಮಶೇಖರ್, ಗೋಪಾಲಯ್ಯ ಹಾಗೆ ಹೇಳಿದ್ದರು. ಅಂದಿನ ಸಿಎಂ ಕುಮಾರಸ್ವಾಮಿಗೆ ಖುದ್ದು ಕರೆ ಮಾಡಿ ಹೇಳಿದ್ದರು. ಡಿಕೆ ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಮಾಡುವುದಾದರೆ ವಾಪಸ್ ಬರುತ್ತೇವೆ ಎಂದು ಹೇಳಿದ್ದರು. ಆದರೆ, ಶಾಸಕರ ಬೇಡಿಕೆ ಬಗ್ಗೆ ಕುಮಾರಸ್ವಾಮಿ ಆಗ ಬಾಯಿ ಬಿಡಲೇ ಇಲ್ಲ’ ಎಂದು ಹೇಳಿದ್ದಾರೆ. ಶಾಸಕರ ಬೇಡಿಕೆ ಬಗ್ಗೆ ಆಗ ಬಾಯಿ ಬಿಡದೇ ಇದ್ದ ಕುಮಾರಸ್ವಾಮಿ ಈಗ ಬೇಕಿದ್ದರೆ 19 ಶಾಸಕರು ಬೆಂಬಲ ಕೊಡ್ತೀವಿ ಎಂದು ಹೇಳ್ತಾರೆ. ಡಿ.ಕೆ.ಶಿವಕುಮಾರ್ ಸಿಎಂ ಆದರೆ ಬೆಂಬಲ ಕೊಡುತ್ತೇವೆ ಅಂತಾರೆ. ಹೆಚ್.ಡಿ.ಕುಮಾರಸ್ವಾಮಿ ಮಾತನ್ನು ನಂಬುವುದಕ್ಕೆ ನಾವು ದಡ್ಡರಾ ಎಂದು ಪ್ರಶ್ನಿಸಿದ್ದಾರೆ.
ಬಳ್ಳಾರಿ,ನ.14: ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ತಾಲ್ಲೂಕು ಆಡಳಿತ ಸಂಡೂರು ಮತ್ತು ವಿವಿಧ ಕನ್ನಡಪರ ಸಂಘಟನೆಗಳು ಇವರ ವತಿಯಿಂದ ಜಿಲ್ಲೆಯ ಗಡಿಭಾಗ ಗ್ರಾಮವಾದ ಶ್ರೀರಾಮಶೆಟ್ಟಿ ಹಳ್ಳಿಯಲ್ಲಿ ಕರ್ನಾಟಕ ಸಂಭ್ರಮ-50ರ ಜ್ಯೋತಿ ರಥಯಾತ್ರೆಗೆ ಮಂಗಳವಾರ ಅದ್ದೂರಿಯಾಗಿ ಸ್ವಾಗತ ದೊರೆಯಿತು. ಹಲಗೆ, ತಾಷೆ-ರಾಂಡೋಲ್, ಕಂಸಾಳೆ, ವೀರಗಾಸೆ, ಡೊಳ್ಳು, ವಿವಿಧ ವಾದ್ಯಗಳು ಹಾಗೂ ವಿವಿಧ ಸಾಂಸ್ಕೃತಿಕ ಕಲಾ ತಂಡಗಳಿಂದ ಭರ್ಜರಿ ಮೆರವಣಿಗೆಯೊಂದಿಗೆ ತಾಲ್ಲೂಕು ಆಡಳಿತವು ಅದ್ದೂರಿಯಾಗಿ ಬರಮಾಡಿಕೊಂಡರು. ಕರ್ನಾಟಕ ಸಂಭ್ರಮ-50ರ ಜ್ಯೋತಿ ರಥಯಾತ್ರೆಯ ಮೆರವಣಿಗೆಯಲ್ಲಿ ಅಧಿಕಾರಿಗಳು, ಶಾಲಾ ಮಕ್ಕಳು, ಸಾರ್ವಜನಿಕರು, ಹಿರಿಯರು-ಕಿರಿಯರು ಸೇರಿದಂತೆ ಸೇರಿದಂತೆ ಎಲ್ಲರೂ ಕುಣಿದು, ಕುಪ್ಪಳಿಸಿ, ನೃತ್ಯ ಮಾಡುವುದರ ಮೂಲಕ ಸಂಭ್ರಮದಿಂದ ಪಾಲ್ಗೊಂಡಿದ್ದರು. ಕರ್ನಾಟಕ ಸಂಭ್ರಮ-50ರ ಜ್ಯೋತಿ ರಥಯಾತ್ರೆಯು ಸಂಡೂರು ತಾಲ್ಲೂಕಿನ ಶ್ರೀರಾಮ ಶೆಟ್ಟಿ ಹಳ್ಳಿಯಿಂದ ಬಂಡ್ರಿ ಗ್ರಾಮದ ಮೂಲಕ ಯಶವಂತ ನಗರ ಮಾರ್ಗವಾಗಿ ವಿವಿಧ ಹೋಬಳಿ, ಗ್ರಾಮ ಪಂಚಾಯತಿ ವತಿಯಿಂದ ಸಂಭ್ರಮದಿಂದ ಹೊರಟು, ಸಂಡೂರಿಗೆ ಆಗಮಿಸಿತು. ಸಂಡೂರು ಶಾಸಕ ಈ.ತುಕಾರಾಂ ಅವರು, ಅದ್ದೂರಿಯಾಗಿ ಬರಮಾಡಿಕೊಂಡರು. ನಂತರದಲ್ಲಿ ವೇದಿಕೆ ಕಾರ್ಯಕ್ರಮವನ್ನು ಸಂಡೂರು…
ತುಮಕೂರು: ತಹಶೀಲ್ದಾರ್ ಮತ್ತು ತಾಲೂಕು ಸಮಾಜಕಲ್ಯಾಣ ಇಲಾಖೆ ಅಧಿಕಾರಿ ವಿರುದ್ಧ ದಲಿತ ಸಂಘಟನೆಗಳಿಂದ ಪ್ರತಿಭಟನೆ ನಡೆಸಲಾಯಿತು. ಸ್ಮಶಾನ ಜಾಗ ಕೇಳಲು ಹೋದ ದಲಿತರನ್ನ ಗುಬ್ಬಿ ತಹಶಿಲ್ದಾರ್ ಆರತಿ ಬಿ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ವೀಣಾ ನಿಂದಿಸಿ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಪ್ರತಿಭಟನೆ ನಡೆಸಿದರು. https://ainlivenews.com/joint_pain_suprem_ray_treatment_reiki/ ದಲಿತರಿಗೆ ಸರಿಯಾಗಿ ಸ್ಪಂದಿಸದೆ ನ್ಯಾಯ ಕೇಳಲು ಹೋದ ದಲಿತರ ಮೇಲೆ TSW ವೀಣಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ ಎಂದು ದಲಿತ ಸಂಘಟನೆಗಳಿಂದ ಆರೋಪ ಕೇಳಿಬಂದಿದೆ. ಸ್ಥಳಕ್ಕೆ ಜಿಲ್ಲಾಧಿಕಾರಿ ಬರುವವರೆಗೂ ಪ್ರತಿಭಟನೆ ನಿಲ್ಲಲ್ಲ ಎನ್ನುತ್ತಿರುವ ಪ್ರತಿಭಟನಾಕಾರರು..