ರಾಜ್ಯದ ಬಿಜೆಪಿ ನೂತನ ಅಧ್ಯಕ್ಷರಾಗಿ ವಿಜಯೇಂದ್ರರ ನೇಮಕ ಕಾರ್ಯಕರ್ತರಿಗೆ ಉತ್ಸಾಹ ಇಮ್ಮಡಿಗೊಳಿಸಿದೆ. ಅಷ್ಟೇಅಲ್ಲ ಹೊಸ ಅಲೆ ಸೃಷ್ಟಿಸಿದೆ ಅಂತ ಬಿಜೆಪಿ ರಾಜ್ಯ ವಕ್ತಾರ ಹಾಗೂ ಸೇಡಂ ಮಾಜಿ ಶಾಸಕ ರಾಜಕುಮಾರ ಪಾಟೀಲ್ ತೇಲ್ಕೂರ ತಿಳಿಸಿದ್ದಾರೆ. ಪಕ್ಷವನ್ನು ವ್ಯಾಪಕವಾಗಿ ಸಂಘಟಿಸುವ ಅದರಲ್ಲೂ ಕ್ರಿಯಾಶೀಲತೆ ಉಳ್ಳವರನ್ನು ನೇಮಕ ಮಾಡಬೇಕು ಅನ್ನೋದು ಕಾರ್ಯಕರ್ತರ ಬಹುದಿನಗಳ ಬಯಕೆ ಆಗಿತ್ತು. ಪಕ್ಷದ ವರಿಷ್ಠ ಮಂಡಳಿ ಈ ಮೂಲಕ ಸಾಕಾರಗೊಳಿದೆಯಲ್ಲದೇ ಒಬ್ಬ ಸೂಕ್ತ ಯುವ ನಾಯಕನಿಗೆ ಅಧ್ಯಕ್ಷರನ್ನಾಗಿ ಗುರುತಿಸಿದ್ದು ಕೂಡ ಒಂದು ಆಶಾದಾಯಕ ಸಂಗತಿ ಎಂದು ಮಾಧ್ಯಮ ಹೇಳಿಕೆಯಲ್ಲಿ ತೆಲ್ಕೂರ್ ತಿಳಿಸಿದ್ದಾರೆ.
Author: AIN Author
ಬಳ್ಳಾರಿ: ಬಳ್ಳಾರಿ ತಾಲೂಕಿನ ಡಿ.ಕಗ್ಗಲ್ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಸೇವೆ ಸಲ್ಲಿಸಿದ 4 ಶಿಕ್ಷಕರಿಗೆ ಏಕಕಾಲದಲ್ಲಿ ವರ್ಗಾವಣೆಗೊಂಡ ಹಿನ್ನೆಲೆ, ಡಿಜೆ ಹಾಕಿ, ಬೆಳ್ಳಿ ರಥದಲ್ಲಿ ಮೈದಾನದಿಂದ ಡಿ.ಕಗ್ಗಲ್ ಗ್ರಾಮದ ಬೀದಿಗಳಲ್ಲಿ ಶಾಲಾ ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರು ಮೆರವಣಿಗೆ ಮಾಡುವ ಮೂಲಕ ಅದ್ದೂರಿ ಬೀಳ್ಕೊಡುಗೆ ನೀಡಿದ್ದಾರೆ. ಏಕಕಾಲದಲ್ಲಿ ವರ್ಗಾವಣೆಗೊಂಡ ಒಂದೇ ಶಾಲೆಯಲ್ಲಿ 16 ವರ್ಷ ಸೇವೆ ಸಲ್ಲಿಸಿದ 4 ಶಿಕ್ಷಕರಿಗೆ ವಿಶೇಷ ಬೀಳ್ಕೊಡುಗೆ ಕಾರ್ಯಕ್ರಮ ಮಾಡಲಾಗಿದೆ. ಡಿ.ಕೆ.ವಿನಯ್, ರಾಘವ, ಸಾಗರ್, ಬಸಪ್ಪ ವರ್ಗಾವಣೆಗೊಂಡ ನಾಲ್ವರು ಶಿಕ್ಷಕರು. ಬಳ್ಳಾರಿ ತಾಲೂಕಿನ ಡಿ.ಕಗ್ಗಲ್ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಸೇವೆ ಸಲ್ಲಿಸಿದ ಈ 4 ಶಿಕ್ಷಕರ ಬಿಳ್ಕೋಡಿಗೆ ಸಮಾರಂಭಕ್ಕೆ ಗ್ರಾಮದ ಜನರು ಪಾಲ್ಗೊಂಡು ಶಿಕ್ಷಕರಿಗೆ ಸನ್ಮಾನಿಸಿ ಸಂಭ್ರಮದಿಂದ ಬಿಳ್ಕೋಡಿಗೆ ಸಮಾರಂಭವನ್ನು ವಿದ್ಯಾರ್ಥಿಗಳ ಜೊತೆಗೂಡಿ ನೇರವೇರಿಸಿದರು.
ಹುಬ್ಬಳ್ಳಿ: ಐದು ರಾಜ್ಯಗಳ ಪೈಕಿ ಮೂರು ರಾಜ್ಯಗಳಲ್ಲಿ ಬಿಜೆಪಿ ಗೆಲ್ಲುತ್ತೆ ಎಂದುಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ನಾಡಿನ ಜನತೆಗೆ ದೀಪಾವಳಿ ಹಬ್ಬದ ಶುಭಾಶಯ ತಿಳಿಸಿದ ಅವರು, https://ainlivenews.com/did-sending-a-message-to-a-girl-lead-to-murder-what-does-igp-ravikante-gowda-say/ ‘ ರಾಜಸ್ತಾನ, ಮಧ್ಯಪ್ರದೇಶ, ಛತ್ತೀಸಗಡ ಮಾಹಿತಿ ಪಡೆದುಕೊಂಡಿದ್ದೇನೆ. ನಾನು ರಾಜಸ್ಥಾನದ ಚುನಾವಣೆಯ ಉಸ್ತುವಾರಿ ಇದ್ದೆ. ಈ ಹಿನ್ನಲೆ ಮೂರು ರಾಜ್ಯಗಳಲ್ಲಿ ಪೂರ್ತಿ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ ಎಂದಿದ್ದಾರೆ.
ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಕೈ ಹಿಡಿದಿದ್ದು ಪಂಚ ಗ್ಯಾರಂಟಿ ಯೋಜನೆಗಳು. ಇದನ್ನೆ ಪಂಚರಾಜ್ಯಗಳ ಚುನಾವಣೆಯಲ್ಲಿ ಅಸ್ತ್ರವನ್ನಾಗಿ ಮಾಡಿಕೊಳ್ಳೊಕೆ ಕಾಂಗ್ರೆಸ್ ನಾಯಕರು ಹೊರಟಿದ್ದಾರೆ. ಇದಕ್ಕೆ ಬ್ರೇಕ್ ಹಾಕೋದಕ್ಕೆ ಮಾಜಿ ಸಿಎಂ ಕುಮಾರಸ್ವಾಮಿ ಮುಂದಾಗಿದ್ದಾರೆ. ತೆಲಾಂಗಣದಲ್ಲಿ ಸಿಎಂ, ಡಿಸಿಎಂ ಪ್ರಚಾರ ಮಾಡಿದಕ್ಕೆ HDK ಟಾಂಕ್ ಕೊಟ್ಟಿದ್ದು ಡ್ಯೂಪ್ಲಿಕೇಟ್ ಸಿಎಂ ಅಂತ ಡಿಕೆಶಿಯನ್ನ ವ್ಯಂಗ್ಯವಾಡಿದ್ದಾರೆ. ಈ ಮಧ್ಯೆ ಸಿಎಂ ಸಿದ್ದರಾಮಯ್ಯ ವಿರುದ್ಧ ಹ್ಯೂಬ್ಲೆಟ್ ವಾಚ್ ನ ಅಪ್ಡೇಟ್ ವರ್ಷನ್ ಬಾಂಬಗ ಸಿಡಿಸಿರೋದು ರಾಜಕೀಯ ವಲಯದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸುವಂತಿದೆ.. https://ainlivenews.com/hdk-sparks-the-cms-statement-that-the-country-is-bankrupt-due-to-debt/ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿಂದ ಮಾಜಿ ಸಿಎಂ ಕುಮಾರಸ್ವಾಮಿ ಒಂದಲ್ಲಾ ಒಂದು ಆರೋಪಗಳನ್ನ ಮಾಡ್ತಾ ಸರ್ಕಾರವನ್ನ ಇಕ್ಕಟಿಗೆ ಸಿಲುಕಿಸ್ತಿದ್ದಾರೆ. ವರ್ಗಾವಣೆ ದಂದೆಯನ್ನ ಸರ್ಕಾರದ ವಿರುದ್ದ ಹೋರಾಟ ಅಸ್ತ್ರವನ್ನಾಗಿ ಮಾಡಿಕೊಂಡಿದ್ದ ಕುಮಾರಸ್ವಾಮಿ ಇದೀಗ ಗ್ಯಾರಂಟಿ ಯೋಜನೆಗಳನ್ನ ಸಮರ್ಪಕವಾಗಿ ಜಾರಿಗೆ ತರದೇ ಜನರನ್ನ ದಾರಿತಪ್ಪಿಸಿದ್ದಾರೆ ಅಂತಾ ಕಾಂಗ್ರೆಸ್ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸ್ತಿದ್ದಾರೆ. ಕರ್ನಾಟಕದ ಸಕ್ಸಸ್ ಮಂತ್ರ ಪಂಚ ಗ್ಯಾರಂಟಿ ಯೋಜನೆಗಳನ್ನೇ ಕಾಂಗ್ರೆಸ್…
ಬೆಂಗಳೂರು: ಟೀಂ ಇಂಡಿಯಾ (Team India) ಬ್ಯಾಟರ್‌ಗಳ ಅಬ್ಬರಕ್ಕೆ ವಿಶ್ವದಾಖಲೆಗಳು ನುಚ್ಚುನೂರಾಗುತ್ತಿವೆ. ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲಿ (ODI) ಭಾರತದ ಪರ 300ಕ್ಕೂ ಅಧಿಕ ಸಿಕ್ಸರ್ ಸಿಡಿಸಿದ ಮೊದಲ ಬ್ಯಾಟರ್ ಎನಿಸಿಕೊಂಡಿದ್ದ ರೋಹಿತ್ ಶರ್ಮಾ (Rohit Sharma) ಇದೀಗ ಸಿಕ್ಸರ್‌ನಿಂದಲೇ ಮತ್ತೊಂದು ದಾಖಲೆ ಸಿಡಿಸಿದ್ದಾರೆ. ಭಾನುವಾರ ಬೆಂಗಳೂರು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನೆದರ್ಲೆಂಡ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ನೊದಲು ಬ್ಯಾಟಿಂಗ್ ಮಾಡಿತು. ಆರಂಭದಿಂದಲೇ ಸಿಕ್ಸರ್, ಬೌಂಡರಿ ಅಬ್ಬರಿಸಿದ ರೋಹಿತ್ ಶರ್ಮಾ 54 ಎಸೆತಗಳಲ್ಲಿ 61 ರನ್ ಬಾರಿಸಿದರು. ಈ ವೇಳೆ 8 ಬೌಂಡರಿ, 4 ಸಿಕ್ಸರ್‌ಗಳನ್ನೂ ಸಿಡಿಸಿದರು. ಈ ಮೂಲಕ ಕ್ಯಾಲೆಂಡರ್ ವರ್ಷದಲ್ಲಿ ಅತಿಹೆಚ್ಚು ಸಿಕ್ಸರ್ ಸಿಡಿಸಿದ ವಿಶ್ವದ ನಂ.1 ಬ್ಯಾಟರ್ ಎಂಬ ಖ್ಯಾತಿಯನ್ನು ಗಳಿಸಿದ್ದಾರೆ
ಬೆಂಗಳೂರು: ಚಲಿಸುತ್ತಿದ್ದBMTC ಬಸ್ಸಿನಲ್ಲಿ ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಅವಘಡ ಸಂಭವಿಸಿದ್ದು, ಚಾಲಕನ ಸಮಯ ಪ್ರಜ್ಞೆಯಿಂದ ಭಾರಿ ಅವಘಡ ತಪ್ಪಿದೆ. https://ainlivenews.com/what-kumaraswamy-knows-about-our-guarantee/ ಹೌದು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಟೌನ್ನಲ್ಲಿ ಈ ಘಟನೆ ನಡೆದಿದ್ದು,ಕೂಡಲೇ ಚಾಲಕ ಸೋಮಶೇಖರ್ ಎಂಬುವವರು ಬಸ್ಸಿನಲ್ಲಿದ್ದ ಸಿಲಿಂಡರ್ ಬಳಿಸಿ ಬೆಂಕಿ ನಂದಿಸಿದ್ದಾರೆ.
ಬೆಂಗಳೂರು: ಸಾಲದಿಂದ ದೇಶ ದಿವಾಳಿಯಾಗಿದೆ ಎಂಬ ಸಿಎಂ ಹೇಳಿಕೆ ವಿಚಾರ ‘ ಪ್ರಧಾನಿ ಬಗ್ಗೆ ಮಾತನಾಡುವ ನೈತಿಕತೆ ಸಿಎಂ ಸಿದ್ದರಾಮಯ್ಯಗೆ ಇಲ್ಲವೆಂದು ಹೆಚ್ಡಿ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ. https://ainlivenews.com/what-kumaraswamy-knows-about-our-guarantee/ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನನ್ನ 20 ತಿಂಗಳ ಅವಧಿಯಲ್ಲಿ 3,500 ಕೋಟಿ ಸಾಲ ಮಾಡಿದ್ದೆ. ಹಿಂದೆ ಸಿದ್ದರಾಮಯ್ಯ ಸರ್ಕಾರ 2 ಲಕ್ಷ 45 ಸಾವಿರ ಕೋಟಿ ಸಾಲ ಮಾಡಿತ್ತು. ಈಗ 5 ಲಕ್ಷ 71 ಸಾವಿರ ಕೋಟಿಗೂ ಅಧಿಕ ಸಾಲ ಇದೆ. ನಿಮಗೆ ಪ್ರಧಾನಿ ಮೋದಿ ಬಗ್ಗೆ ಮಾತಾಡುವ ಯಾವ ನೈತಿಕತೆ ಇದೆ ಎಂದು ಪ್ರಶ್ನಿಸಿದ್ದಾರೆ. ಕಾಂಗ್ರೆಸ್ ಹೈಕಮಾಂಡ್ ಸಿಎಂ, ಡಿಸಿಎಂ ಹಾಗೂ ಮಂತ್ರಿಗಳಿಗೆ ಟಾರ್ಗೆಟ್ ಕೊಟ್ಟಿದ್ದಾರೆ. ಯಾರು ಹೆಚ್ಚಿಗೆ ಹಣ ಕೊಡುತ್ತಾರೆ ಅವರು ಮಂತ್ರಿ ಸ್ಥಾನದಲ್ಲಿ ಮುಂದುವರೆಯುತ್ತಾರೆ. ಯಾರು ಕೊಡಲ್ಲಾ ಅವರು ಮಂತ್ರಿಗಳಾಗುವುದಿಲ್ಲ. ಹೆಚ್ಚು ಹಣ ಕೊಟ್ಟು ಅವರು ಅಧಿಕಾರದಲ್ಲಿ ಇರುತ್ತಾರೆ. ಯಾವುದೆ ಪವರ್ ಶೇರಿಂಗ್ ಇಲ್ಲ. ಯಾರು ಹಣ ಕೊಡುತ್ತಾರೆ ಅವರು ಅಧಿಕಾರದಲ್ಲಿ ಇರುತ್ತಾರೆ. ಈಗಾಗಲೇ…
ಡೆಹ್ರಾಡೂನ್: ಸುರಂಗ ನಿರ್ಮಾಣ ಕಾರ್ಯದ ವೇಳೆ ಭೂಕುಸಿತ ಉಂಟಾಗಿ 36 ಕಾರ್ಮಿಕರು ಸಿಲುಕಿರುವ ಘಟನೆ ಉತ್ತರಾಖಂಡದ ಉತ್ತರಕಾಶಿಯಲ್ಲಿ ನಡೆದಿದೆ. ರಾಷ್ಟ್ರೀಯ ಹಾಗೂ ರಾಜ್ಯ ವಿಪತ್ತು ನಿರ್ವಹಣಾ ತಂಡಗಳು ಮತ್ತು ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದು, ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ. ಮಣ್ಣಿನಡಿಗೆ ಸಿಲುಕಿರುವರ ರಕ್ಷಣೆಗಾಗಿ ಡ್ರಿಲ್ಲಿಂಗ್ ಯಂತ್ರಗಳನ್ನು ಬಳಸಿ ಆಮ್ಲಜನಕ ಪೈಪ್‍ಗಳನ್ನು ಒಳಗೆ ಕಳುಹಿಸಲಾಗಿದೆ. https://ainlivenews.com/did-sending-a-message-to-a-girl-lead-to-murder-what-does-igp-ravikante-gowda-say/ ಕಾರ್ಯಾಚರಣೆ ಇನ್ನೂ 2-3 ದಿನಗಳ ಕಾಲ ಮುಂದುವರಿಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬ್ರಹ್ಮಖಾಲ್-ಯಮುನೋತ್ರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಿಲ್ಕ್ಯಾರಾದಿಂದ ದಾಂಡಲ್‍ಗಾಂವ್‍ಗೆ ಸಂಪರ್ಕಿಸುವ ಸುರಂಗದಲ್ಲಿ ಪ್ರಸ್ತುತ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಸುರಂಗದಲ್ಲಿ ಸಿಲುಕಿದ್ದವರನ್ನು ಸುರಕ್ಷಿತವಾಗಿ ರಕ್ಷಿಸಲು ಪ್ರಯತ್ನಿಸಲಾಗುತ್ತಿದೆ. ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿರುವ ಬಗ್ಗೆ ವರದಿಯಾಗಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮೈಸೂರು: ಜೂನ್ ನಂತರ ಬಿವೈ ವಿಜಯೇಂದ್ರ ಅಧ್ಯಕ್ಷರಾಗಿ ಉಳಿಯಲ್ಲ. ಲಿಂಗಾಯತರು ಬಿಜೆಪಿ ಬಿಟ್ಟಿದ್ದಾರೆ ಅಂತ ಅಮಿತ್ ಶಾ ಮೋದಿ ಮಾಡಿರುವ ನಾಟಕ. ನಾಟಕದ ಸ್ಕ್ರೀಪ್ಟ್ ರಚನೆ ಮಾಡಿ ಅಧ್ಯಕ್ಷ ಸ್ಥಾನಕೊಟ್ಟಿದ್ದಾರೆ. https://ainlivenews.com/did-sending-a-message-to-a-girl-lead-to-murder-what-does-igp-ravikante-gowda-say/ ಜೂನ್ ನಂತರ ಬಿಜೆಪಿ ಅಧ್ಯಕ್ಷರಾಗಲು ಬಿಡಲ್ಲ. ಬಿವೈ ವಿಜಯೇಂದ್ರ ತಾತ್ಕಾಲಿಕ ಅಧ್ಯಕ್ಷ. ಲಿಂಗಾಯತ ಸಮುದಾಯವನ್ನು ಸಮಾಧಾನ ಮಾಡಲು ಆಡಿರುವ ನಾಟಕ. ನಾಟಕವನ್ನ ನಂಬಿ ಲಿಂಗಾಯತರು ಯಾಮಾರಬೇಡಿ ಎಂದು ಕೆ.ಪಿ.ಸಿ.ಸಿ ವಕ್ತಾರ ಎಂ ಲಕ್ಷ್ಮಣ್ ಹೇಳಿದ್ದಾರೆ.
ದೊಡ್ಮನೆ (Bigg Boss Kannada 10) ಆಟ 5ನೇ ವಾರ ಪೂರೈಸಿದೆ. ಕಳೆದ ವಾರ ಬಳೆ ಜಗಳ ಹೈಲೆಟ್ ಆಗಿದ್ರೆ, ಈ ವಾರ ಉಸ್ತುವಾರಿ ನಿರ್ಣಯ ಬೇಸರ ತರಿಸಿದೆ. ಇದರ ನಡುವೆ ಇಶಾನಿ (Eshani) ಅವರು ಸುದೀಪ್ (Sudeep) ಮುಂದೆಯೇ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಮೈಕಲ್ (Michael) ಅವರು ಎಲ್ಲ ತಪ್ಪಿಗೆ ನಾನೇ ಕಾರಣ ಅಂತ ಹೇಳಿದ್ದಕ್ಕೆ ಬೇಸರ ಆಯ್ತು ಎಂದು ಈಶಾನಿ ಕಣ್ಣೀರು ಹಾಕಿದ್ದಾರೆ. ನನ್ನ ಹಳೇ ರಿಲೇಶನ್‌ಶಿಪ್‌ನಲ್ಲಿಯೂ ನಾನೇ ತಪ್ಪು ಮಾಡಿದೆ ಅಂತ ಬಾಯ್‌ಫ್ರೆಂಡ್ಸ್ ಹೇಳಿದ್ರು, ನನಗೆ ಯಾರ ಮನಸ್ಸಿಗೂ ನೋವು ಮಾಡುವ ಉದ್ದೇಶ ಇಲ್ಲ ಎಂದು ಇಶಾನಿ ಕಣ್ಣೀರಿಟ್ಟಿದ್ದಾರೆ. ನಾವಿಬ್ಬರೂ ಪ್ರೀತಿ ಮಾಡುತ್ತಿದ್ದೇವೆ ಅಂತ ಈಶಾನಿ, ಮೈಕಲ್ ಅಧಿಕೃತವಾಗಿ ಹೇಳಿಕೊಂಡಿದ್ದಾರೆ. ಆಟವೊಂದರಲ್ಲಿ ಇಶಾನಿ, ಮೈಕಲ್ ಎರಡು ತಂಡಗಳಿಗೆ ಉಸ್ತುವಾರಿಯಾಗಿದ್ದರು. ಈಶಾನಿ ಉಳಿಯಬೇಕು ಅಂತ ಮೈಕಲ್ ಅವರು ತಮ್ಮ ಟೀಂ ಬಿಟ್ಟು, ಇಶಾನಿ ಟೀಂಗೆ ಹೇಗೆ ಆಟ ಆಡಬೇಕು, ತಂತ್ರ ಮಾಡಬೇಕು ಅಂತ ಸಲಹೆ ನೀಡಿದ್ದರು. ಅಷ್ಟೇ ಅಲ್ಲದೆ…