ಶಿವಮೊಗ್ಗ:- ಕೊಟ್ಟಿರುವ ಜವಾಬ್ದಾರಿ ವಿಜಯೇಂದ್ರ ಸವಾಲಾಗಿ ಸ್ವೀಕರಿಸುತ್ತಾನೆ ಎಂದು ಸಂಸದ ಬಿವೈ ರಾಘವೇಂದ್ರ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಇದೊಂದು ದೊಡ್ಡ ಜವಾಬ್ದಾರಿ, ಇದೊಂದು ಯೋಗ, ಕೇಂದ್ರದಲ್ಲಿ ಮೋದಿ ಪ್ರಧಾನಮಂತ್ರಿ, ನಡ್ಡಾ ರಾಷ್ಟ್ರೀಯ ಅಧ್ಯಕ್ಷರಿದ್ದಾರೆ. ಬಿಎಸ್ ಯಡಿಯೂರಪ್ಪ ಅವರ ರಾಜಕಾರಣವನ್ನು ಹತ್ತಿರದಿಂದ ನೋಡಿ ಬೆಳೆದಿದ್ದಾನೆ. ಕಾರ್ಯಕರ್ತರ ಶಕ್ತಿ ಸಂಘಟನೆ ಲೋಕಸಭೆ, ಜಿ.ಪಂ ತಾ.ಪಂ ಚುನಾವಣೆಯಲ್ಲಿ ಹೆಚ್ಚಿನ ಶಕ್ತಿ ತುಂಬುವ ಕೆಲಸ ಮಾಡ್ತಾನೆ. ವಿಜಯೇಂದ್ರ ಕೊಟ್ಟಿರುವ ಜವಾಬ್ದಾರಿ ಸವಾಲಾಗಿ ಸ್ವೀಕರಿಸ್ತಾನೆ ಯಶಸ್ವಿಯಾಗಿ ನಿರ್ವಹಣೆ ಮಾಡ್ತಾನೆ ಎಂದು ಭರವಸೆ ವ್ಯಕ್ತಪಡಿಸಿದರು. ಹಿಂದೆ ಕಟೀಲ್ ಸಹ ಒಳ್ಳೆಯ ಕೆಲಸ ಮಾಡಿದ್ದರು. ಈಶ್ವರಪ್ಪ, ಅನಂತಕುಮಾರ್ ಬಿ.ಬಿ.ಶಿವಪ್ಪ ಅಂತಹವರು ಪಕ್ಷ ಸಂಘಟನೆ ಮಾಡಿದ್ದಾರೆ. ಇದೀಗ ಬಿವೈ ವಿಜಯೇಂದ್ರರನ್ನು ರಾಜ್ಯಾಧ್ಯಕ್ಷರನ್ನಾಗಿ ಆಯ್ಕೆ ಮಾಡಿರುವ ನಾಯಕರು. ರಾಜಕಾರಣ ಒಂದು ಸವಾಲು ನಮ್ಮ ಉದ್ದೇಶ ಸ್ಪಷ್ಟವಾಗಿದೆ. ಅಧಿಕಾರ ಬಂದಾಗ ಸನಿಹಕ್ಕೆ ಬರೋದು ಸಹಜ. ಅದೇ ಅಧಿಕಾರ ಇಲ್ಲದಿದ್ದಾಗ ಹಿಂದೆ ಮುಂದೆ ನೋಡೋದು ಸಹಜ. ಹಿರಿಯರ ಜೊತೆ ಪಕ್ಷ ಸಂಘಟನೆ ಯಶಸ್ವಿಯಾಗಿ ಮಾಡುತ್ತಾನೆ. ಕೊಟ್ಟಿರುವ…
Author: AIN Author
ಬೆಂಗಳೂರು:- ಬಿಜೆಪಿ ಹೈಕಮಾಂಡ್ ವಿರುದ್ಧ ಮಾಜಿ ಮುಖ್ಯಮಂತ್ರಿ ಡಿವಿ ಸದಾನಂದ ಗೌಡ ಶುಕ್ರವಾರ ಅಸಮಾಧಾನ ವ್ಯಕ್ತಪಡಿಸಿದರು. ರಾಜ್ಯ ಬಿಜೆಪಿ ನಾಯಕರ ಮೇಲೆ ಕೋಪಗೊಳ್ಳಬೇಡಿ ಎಂದು ಹೈಕಮಾಂಡ್‌ಗೆ ಮನವಿ ಮಾಡಿದ ಅವರು, ಬಾಕಿ ಇರುವ ವಿರೋಧ ಪಕ್ಷದ ನಾಯಕ ಹಾಗೂ ರಾಜ್ಯಾಧ್ಯಕ್ಷರ ನೇಮಕಾತಿಗಳನ್ನು ಶೀಘ್ರವಾಗಿ ಮಾಡುವಂತೆ ಒತ್ತಾಯ ಮಾಡಿದರು. ಸದಾನಂದ ಗೌಡರು ಚುನಾವಣಾ ರಾಜಕೀಯದಿಂದ ನಿವೃತ್ತಿ ಘೋಷಿಸಿದ ಎರಡು ದಿನಗಳ ನಂತರ ಮತ್ತು ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ಬಿಜೆಪಿ ನಾಯಕರ ವರ್ತನೆಯಿಂದ ನನಗೆ ನೋವಾಗಿದೆ. ನಾವು ವಿಧಾನಸಭೆ ಚುನಾವಣೆಯಲ್ಲಿ ಸೋತ ನಂತರ ರಾಜ್ಯ ಬಿಜೆಪಿ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದ ಕೇಂದ್ರ ನಾಯಕರ ವಿರುದ್ಧ ನನಗೆ ಅಸಮಾಧಾನವಿದೆ ಎಂದರು. ಇಂದಿಗೂ ನಾನು ಕೇಂದ್ರ ನಾಯಕರಲ್ಲಿ ಕೇಳಿಕೊಳ್ಳುತ್ತೇನೆ. ಕರ್ನಾಟಕದ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವಂತೆ ನಾನು ಮನವಿ ಮಾಡುತ್ತೇನೆ. ವಿಧಾನಸಭೆ ಚುನಾವಣೆಯಲ್ಲಿ ನಾವು ಏನನ್ನು ಕಳೆದುಕೊಂಡಿದ್ದೇವೆ, ಅದನ್ನು ಲೋಕಸಭೆ ಚುನಾವಣೆಯಲ್ಲಿ ಆಸಕ್ತಿಯಿಂದ ನಿಮಗೆ ಹಿಂತಿರುಗಿಸುತ್ತೇವೆ. ನಮ್ಮ ಮೇಲೆ ಕೋಪ ಮಾಡಿಕೊಳ್ಳಬೇಡಿ ಎಂದು ಹೇಳಿದ್ದಾರೆ.
ಬೆಂಗಳೂರು:- ಬಿಜೆಪಿಯ ರಾಜ್ಯಾಧ್ಯಕ್ಷ ಪಟ್ಟ ಸಿಕ್ಕ ಬೆನ್ನಿಗೇ ಬಿ.ವೈ. ವಿಜಯೇಂದ್ರ ಅವರು ಪ್ರತಿಕ್ರಿಯೆ ನೀಡಿ ಧನ್ಯವಾದಗಳನ್ನು ತಿಳಿಸಿದ್ದಾರೆ. ರಾಜ್ಯಾಧ್ಯಕ್ಷರಾಗಿ ತಮ್ಮನ್ನು ನೇಮಕ ಮಾಡಿದ ಹಿನ್ನೆಲೆಯಲ್ಲಿ ಅವರು ಪ್ರಮುಖವಾಗಿ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಗೃಹ ಸಚಿವ ಅಮಿತ್ ಷಾ ಹಾಗೂ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರ ಹೆಸರುಗಳನ್ನು ಉಲ್ಲೇಖಿಸಿ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ. ಅಚಲ ವಿಶ್ವಾಸವಿಟ್ಟು ಪಕ್ಷ ಸಂಘಟನೆಯ ಬಹುದೊಡ್ಡ ಜವಾಬ್ದಾರಿ ವಹಿಸಿದ ತಮಗೆಲ್ಲ ತುಂಬು ಹೃದಯದ ಕೃತಜ್ಞತೆಗಳು ಎಂದು ವಿಜಯೇಂದ್ರ ತಮ್ಮ ಅಧಿಕೃತ ಸೋಷಿಯಲ್ ಮೀಡಿಯಾ ಖಾತೆ ಮುಖಾಂತರ ಹೇಳಿಕೊಂಡಿದ್ದಾರೆ. ಸಂಘದ ಹಾಗೂ ಪಕ್ಷದ ಹಿರಿಯರ ಮಾರ್ಗದರ್ಶನದಲ್ಲಿ ಸರ್ವರ ನಿರೀಕ್ಷೆ ಹಾಗೂ ಜನರ ಅಪೇಕ್ಷೆಗೆ ಪೂರಕವಾಗಿ ರಾಜ್ಯದಲ್ಲಿ ಭಾರತೀಯ ಜನತಾ ಪಾರ್ಟಿಗೆ ಹೊಸ ಚೈತನ್ಯ ತುಂಬಲು ಕಾರ್ಯಕರ್ತರೊಂದಿಗೆ ಕಾರ್ಯಕರ್ತನಾಗಿ ಅಹರ್ನಿಶಿ ದುಡಿಯುವ ಸಂಕಲ್ಪ ತೊಟ್ಟಿರುವೆ. ನಾಡಿನ ಜನರ ಆಶೀರ್ವಾದವೇ ನನಗೆ ಶ್ರೀರಕ್ಷೆ ಎಂಬುದಾಗಿ ವಿಜಯೇಂದ್ರ ಪ್ರತಿಕ್ರಿಯೆ ನೀಡಿದ್ದಾರೆ.
ಹಾಸನ :- ವ್ಯಂಗ್ಯದ ಮಾತು ನಿಲ್ಲಿಸದಿದ್ದರೆ ನನ್ನ ಶಕ್ತಿ ತೋರಿಸುವೆ ಎಂದು ಶಾಸಕ ಕೆ.ಎಂ. ಶಿವಲಿಂಗೇಗೌಡ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಎಚ್.ಡಿ. ಕುಮಾರಸ್ವಾಮಿ ಅವರು ಈಗಾಗಲೇ 2-3 ಬಾರಿ ಸಾರ್ವಜನಿಕವಾಗಿ ನನ್ನ ಹಿಂದಿನ ವೃತ್ತಿ ಜೀವನದ ಬಗ್ಗೆ ಮಾತನಾಡಿದ್ದು, ಮಜ್ಜಿಗೆ ಮಾರಾಟ ಮಾಡುತ್ತಿದ್ದವರು ಎಂದು ಅಪಹಾಸ್ಯ ಮಾಡಿದ್ದಾರೆ’ ಎಂದರು. ಈ ರೀತಿ ಹೇಳುವ ಮೂಲಕ ಅವರ ಗೌರವವನ್ನು ಅವರೇ ಕಳೆದುಕೊಳ್ಳುತ್ತಿದ್ದಾರೆ. ನಾನು ರಾಜಕೀಯಕ್ಕೂ ಮುನ್ನ ಜೀವನೋಪಾಯಕ್ಕೆ ಈ ರೀತಿ ವ್ಯವಹಾರ ಮಾಡಿರಬಹುದು. ಅದನ್ನೇ ನೆಪವಾಗಿ ಇಟ್ಟುಕೊಂಡು ಹಿಯಾಳಿಸುವ ಕೆಲಸ ಮಾಡಬಾರದು. ಮತ್ತೊಬ್ಬರ ತೇಜೋವಧೆ ಬೇಡ’ ಎಂದು ಹೇಳಿದರು. ‘ನನ್ನ ಬಗ್ಗೆ ಮಾತನಾಡುವ ಅವರು. ಈ ಹಿಂದೆ ಬಿಬಿಎಂಪಿಯಲ್ಲಿ ಕಸ ಎತ್ತುವ ಟೆಂಡರ್ ಪಡೆದಿದ್ದರು. ಅದನ್ನು ನಾನು ಹೇಳಿದರೆ, ನನಗೂ ಅವರಿಗೂ ವ್ಯತ್ಯಾಸ ಇರುವುದಿಲ್ಲ’ ಎಂದರು. ‘ಕ್ಷೇತ್ರದ ಜನರ ಆಶಯದಂತೆ ನಾನು ಪಕ್ಷಾಂತರ ಮಾಡಿ ಕಾಂಗ್ರೆಸ್ ಸೇರಿದ್ದೇನೆ. ಆದರೆ ಇವರು ಬಿಜೆಪಿ ಜೊತೆ ಸಖ್ಯ ಬೆಳೆಸಿದ್ದಾರೆ. ಅವರು ದೊಡ್ಡವರು. ನಾವು ಅದನ್ನು…
ಬೆಂಗಳೂರು:- ವಿಜಯದ ನಿರೀಕ್ಷೆಯಲ್ಲಿ ವಿಜಯೇಂದ್ರಗೆ ರಾಜ್ಯಾಧ್ಯಕ್ಷ ಪಟ್ಟ ಲಭಿಸಿದ್ದು, ರಾಜ್ಯದಲ್ಲಿ ರಾಜಾಹುಲಿ ಪ್ರಭಾವ ಮಾತ್ರ ತಗ್ಗಿಲ್ಲ. ಲೋಕಸಭಾ ಚುನಾವಣೆಯಲ್ಲಿ ಹೇಗಾದರೂ ವಿಜಯ ಸಾಧಿಸಲೇಬೇಕು ಎಂಬ ಹಠಕ್ಕೆ ಬಿದ್ದಿರುವ ಬಿಜೆಪಿ, ಆ ನಿಟ್ಟಿನಲ್ಲಿ ರಾಜ್ಯಾಧ್ಯಕ್ಷರ ನೇಮಕವನ್ನು ಪ್ರಮುಖ ದಾಳವಾಗಿ ಪ್ರಯೋಗಿಸಿದೆ. ಲೋಕಸಭೆ ಚುನಾವಣೆಯಲ್ಲಿ ಗರಿಷ್ಠ ಸ್ಥಾನ ಗೆಲ್ಲುವ ನಿಟ್ಟಿನಲ್ಲಿ ಈಗಾಗಲೇ ನಾನಾ ಪಟ್ಟುಗಳನ್ನು ಹಾಕುತ್ತಿರುವ ಕಮಲಪಡೆ, ಅದರ ಮೊದಲ ಹಂತವಾಗಿ ವಿಜಯೇಂದ್ರಗೆ ರಾಜ್ಯಾಧ್ಯಕ್ಷರ ಪಟ್ಟ ನೀಡಿದೆ ಎನ್ನಲಾಗಿದೆ. ನಳಿನ್ ಕುಮಾರ್ ಕಟೀಲ್ ಅವರ ಅಧ್ಯಕ್ಷತೆಯಲ್ಲಿ ಬಿಜೆಪಿ ಕಳೆದ ವಿಧಾನಸಭೆ ಚುನಾವಣೆಯಲ್ಲಿ ನಿರೀಕ್ಷಿತ ಜಯ ಗಳಿಸಲು ಸಾಧ್ಯವಾಗದಿರುವುದು ಹಾಗೂ ರಾಜ್ಯದಲ್ಲಿ ಅಧಿಕಾರ ತಪ್ಪಿ ಹೋಗಿರುವುದು ಬಿಜೆಪಿಗೆ ನುಂಗಲಾರದ ತುತ್ತಾಗಿತ್ತು. ಅವೆಲ್ಲ ನಕಾರಾತ್ಮಕ ಸಂಗತಿಗಳನ್ನು ಮರೆಮಾಚುವ ನಿಟ್ಟಿನಲ್ಲಿ ಮುಂದಿನ ಚುನಾವಣೆಯಲ್ಲಿ ಭರ್ಜರಿ ವಿಜಯದ ನಿರೀಕ್ಷೆಯಲ್ಲಿರುವ ಬಿಜೆಪಿ ಅದನ್ನು ವಿಜಯೇಂದ್ರ ಮೂಲಕ ಸಾಧಿಸಲು ತಂತ್ರ ಹೂಡಿದೆ. ಬಿ.ಎಸ್.ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಸಿ, ಬಸವರಾಜ ಬೊಮ್ಮಾಯಿ ಅವರನ್ನು ಸಿಎಂ ಆಗಿಸಿದ ಬೆನ್ನಿಗೇ ರಾಜ್ಯ ಬಿಜೆಪಿಯಲ್ಲಿ ಒಂದು ಆಂತರಿಕ…
ಬೆಂಗಳೂರು:- ಹಾಸನಾಂಬೆ ದರ್ಶನದ ವೇಳೆ ವಿದ್ಯುತ್ ಪ್ರವಹಿಸಿದ ವಿಚಾರವಾಗಿ ಮಾಜಿ ಸಚಿವ ಶಾಸಕ ರೇವಣ್ಣ ಪ್ರತಿಕ್ರಿಯೆ ನೀಡಿದ್ದಾರೆ. ಈ ಸಂಬಂಧ ವಿಧಾನಸೌಧದಲ್ಲಿ ಮಾತನಾಡಿದ ಅವರು, ಬೆಳಗ್ಗೆ ಘಟನೆ ನಡೆದದ್ದು ವಿಷಯ ಗೊತ್ತಾಯಿತು. ಸಂಬಂಧಿಸಿದವರ ಜೊತೆ ಮಾತಾಡಿದೆ. ಮೆಡಿಕಲ್ ಕಾಲೇಜು ವೈದ್ಯಾಧಿಕಾರಿ ಜೊತೆ ಮಾತಾಡಿದೆ. ಅಸ್ವಸ್ಥ ಹೆಣ್ಣು ಮಗಳಿಗೆ ಚಿಕಿತ್ಸೆ ಕೊಡುತ್ತಿರೋದಾಗಿ ಹೇಳಿದ್ದಾರೆ. ದಿನಾ ಒಂದು ಲಕ್ಷ ಜನ ಬರ್ತಿದ್ದಾರೆ. ಹಲವು ಇಲಾಖೆ ಅಧಿಕಾರಿಗಳು ಹಗಲು ರಾತ್ರಿ ಕೆಲಸ ಮಾಡ್ತಿದ್ದಾರೆ. ಕೆಲ ಅಧಿಕಾರಿಗಳು ಅವರೇ ಆಸ್ಪತ್ರೆಗೆ ಸೇರುವಂತಾಗಿದೆ. ಇಲ್ಲಿಯವರೆಗೂ ಯಾವುದೇ ಅಹಿತಕರ ಘಟನೆ ನಡೆದಿರಲಿಲ್ಲ. ಆದ್ರೆ ಈಗ ಅಂತ ಘಟನೆ ಆಗಿದೆ. ಮುಂದೆ ಆಗದಂತೆ ತಾಯಿ ಕಾಪಾಡಲಿ. ಜಿಲ್ಲಾಧಿಕಾರಿ ಗಮನಕ್ಕೆ ತಂದಿದ್ದೇನೆ. ಇಂಧನ ಇಲಾಖೆ ಅಧಿಕಾರಿಗಳು ಗಮನ ಹರಿಸಬೇಕು. ಜಿಲ್ಲಾಧಿಕಾರಿ ಬೆಂಗಳೂರಿಗೆ ಬಂದಿದ್ರು. ಅವರಿಗೂ ವಿಚಾರ ಗೊತ್ತಿಲ್ಲ ಎಂದರು. ಜೆಡಿಎಸ್-ಬಿಜೆಪಿ ಮೈತ್ರಿ ವಿಚಾರವಾಗಿ ಮಾತನಾಡಿ, ಮೈತ್ರಿ ಬಗ್ಗೆ, ಜೆಡಿಎಸ್ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳೋದು ಬೇಡ. ಯಾರೂ ಜೆಡಿಎಸ್ ಮುಳುಗೋಯ್ತು ಅಂತ ತಿಳಿಯೋದು ಬೇಡ.…
ಬೆಂಗಳೂರು:- ನಗರದಲ್ಲಿ ಪುಟ್ ಪಾಥ್ ತೆರವು ಕಾರ್ಯ ಮತ್ತೆ ಮುಂದುವರಿದಿದೆ. ಮಲ್ಲೇಶ್ವರಂನಲ್ಲಿ ಪಾಟ್ ಪಾಥ್ ಮೇಲೆ ವ್ಯಾಪಾರ ಮಾಡುತ್ತಿದ್ದವರ ಮೇಲೆ ಪಾಲಿಕೆ ಅಧಿಕಾರಿಗಳ ಏಕಾಏಕಿ ದಬ್ಬಾಳಿಕೆ ಮಾಡಿದ್ದಾರೆ. ಪಾಲಿಕೆ ಅಧಿಕಾರಿಗಳು ಏಕಾಏಕಿ ಬಂದು ರಸ್ತೆಗೆ ಹೂ ಚೆಲ್ಲಿ ಹೊರಟು ಹೋಗಿದ್ದಾರೆ. ಸಾಲ ಮಾಡಿ ಬಂಡವಾಳ ಹಾಕಿದ್ದೇವೆ ಅಂತಾ ರಸ್ತೆಯಲ್ಲೇ ವ್ಯಾಪಾರಗಾರರು ಕೂತಿದ್ದಾರೆ. ಹಬ್ಬ ಇದೆ ದಯವಿಟ್ಟು ಮೂರು ದಿನ ಅವಕಾಶ ಮಾಡಿ ಕೊಡಿ ಬೀದಿ ಬದಿ ವ್ಯಾಪಾರಗಾರರು ಕೇಳಿಕೊಂಡರೂ, ಅಧಿಕಾರಿಗಳು ಮಾತ್ರ ತೆರವು ಮಾಡಿ ತೆರಳಿದ್ದಾರೆ.
ಬೆಂಗಳೂರು: ಸರಕಾರವು ರಾಜ್ಯವನ್ನು ದೇಶದ ವಿದ್ಯುತ್ ಚಾಲಿತ ವಾಹನಗಳ ಕ್ಷೇತ್ರದಲ್ಲಿ ದೇಶಕ್ಕೇ `ನಂಬರ್ 1’ ಮಾಡುವ ಗುರಿಯೊಂದಿಗೆ ಕರಡು ನೀತಿ ರೂಪಿಸಿದ್ದು, ಮುಂದಿನ 5 ವರ್ಷಗಳಲ್ಲಿ 50 ಸಾವಿರ ಕೋಟಿ ರೂ. ಬಂಡವಾಳ ಆಕರ್ಷಿಸುವ ಮತ್ತು 1 ಲಕ್ಷ ಉದ್ಯೋಗ ಸೃಷ್ಟಿಸುವ ಉದ್ದೇಶಗಳನ್ನು ಹೊಂದಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ ಬಿ ಪಾಟೀಲ ಹೇಳಿದ್ದಾರೆ. 2023ರಿಂದ 2028ರವರೆಗಿನ ಐದು ವರ್ಷಗಳ ಅವಧಿಯನ್ನು ಗಮನದಲ್ಲಿ ಇಟ್ಟುಕೊಂಡು ರೂಪಿಸಿರುವ ನೀತಿಯ ಕರಡಿನ ಬಗ್ಗೆ ಚರ್ಚಿಸಲು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಉದ್ಯಮ ಪ್ರತಿನಿಧಿಗಳೊಂದಿಗಿನ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದರು. ಮುಂಬರುವ ದಿನಗಳಲ್ಲಿ ವಿದ್ಯುತ್ ಚಾಲಿತ ವಾಹನಗಳು ನಮ್ಮ ಸಂಚಾರ ಕ್ಷೇತ್ರವನ್ನು ಆಳಲಿವೆ. ಕರಡು ನೀತಿಯಲ್ಲಿ ಬಂಡವಾಳ ಸಬ್ಸಿಡಿಯನ್ನು ಹೆಚ್ಚಿಸಬೇಕೆನ್ನುವ ಸಲಹೆ ಕೊಡಲಾಗಿದೆ. ಜೊತೆಗೆ, ಉತ್ಪಾದನೆ ಆಧರಿಸಿ ಕೊಡುವ ಪ್ರೋತ್ಸಾಹ ಭತ್ಯೆಯನ್ನು ಈಗಿನಂತೆ ಶೇಕಡ 1ರ ಪ್ರಮಾಣದಲ್ಲೇ ಮುಂದುವರಿಸಿಕೊಂಡು ಹೋಗುವ ಚಿಂತನೆಯೂ ಇದರಲ್ಲಿದೆ ಎಂದು ಅವರು ತಿಳಿಸಿದರು. ಕರಡು ನೀತಿಯು…
ಡಿಸೆಂಬರ್ 19ಕ್ಕೆ ಇದೇ ಮೊದಲ ಬಾರಿಗೆ ದುಬೈನಲ್ಲಿ ಐಪಿಎಲ್ IPL ಹರಾಜು ನಡೆಯಲಿದ್ದು, ನ್ಯೂಜಿಲೆಂಡ್ ತಂಡದ ಸೆನ್ಸೇಷನಲ್ ಬ್ಯಾಟ್ಸ್ಮನ್ ಹಾಗೂ ಕನ್ನಡಿಗ ರಚಿನ್ ರವೀಂದ್ರ ಇದೀಗ ಟಾಕ್ ಆಫ್ ದಿ ಟೌನ್ ಆಗಿದ್ದಾರೆ. ಪ್ರಸಕ್ತ ವಿಶ್ವಕಪ್ನಲ್ಲಿ ಅತ್ಯಧಿಕ ರನ್ ಗಳಿಸಿದ ಪಟ್ಟಿಯಲ್ಲಿ ರಚಿನ್ ಮೊದಲ ಸ್ಥಾನದಲ್ಲಿದ್ದು, ಮುಂಬರುವ ಐಪಿಎಲ್ ಟೂರ್ನಿಯ ತಮ್ಮ ಆದ್ಯತೆಯ ತಂಡದ ಬಗ್ಗೆ ಸುಳಿವು ನೀಡಿದ್ದು, ಕ್ರಿಕೆಟ್ ಲೋಕದಲ್ಲಿ ಸಂಚಲನ ಸೃಷ್ಟಿ ಮಾಡಿದೆ. ವಿಶ್ವಕಪ್ನಲ್ಲಿ ತಮ್ಮ ಅಮೋಘ ಪ್ರದರ್ಶನದ ಮೂಲಕ ರಚಿನ್ ಎಲ್ಲರ ಮನಸ್ಸನ್ನು ಕದ್ದಿದ್ದಾರೆ. ಕೇವಲ 9 ಪಂದ್ಯಗಳಲ್ಲಿ 3 ಶತಕದೊಂದಿಗೆ 565 ರನ್ ವೈಯಕ್ತಿಕ ರನ್ ಕಲೆಹಾಕುವ ಮೂಲಕ ಅಗ್ರ ಕ್ರಮಾಂಕದ ಬ್ಯಾಟರ್ ಆಗಿ ತಮ್ಮ ಪರಾಕ್ರಮವನ್ನು ಪ್ರದರ್ಶಿಸಿದ್ದಾರೆ. ನಿನ್ನೆ (ನ.09) ಲಂಕಾ ವಿರುದ್ಧ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ನ್ಯೂಜಿಲೆಂಡ್ ಭರ್ಜರಿ ಗೆಲುವು ದಾಖಲಿಸಿ, ಸೆಮಿಫೈನಲ್ ಸ್ಥಾನವನ್ನು ಖಚಿತಪಡಿಸಿಕೊಂಡಿದೆ. ಈ ಪಂದ್ಯದಲ್ಲಿ ರಚಿನ್ ಅವರನ್ನು ಆಟವನ್ನು ಮರೆಯುವಂತಿಲ್ಲ. ಕೇವಲ 34 ಎಸೆತಗಳಲ್ಲಿ 3…
ಬೆಂಗಳೂರು :- ರಾಜ್ಯ ಬಿಜೆಪಿಗೆ ನೂತನ ಸಾರಥಿ ಕೊನೆಗೂ ಸಿಕ್ಕಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ರಾಗಿ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ಪುತ್ರ ಬಿವೈ ವಿಜಯೇಂದ್ರ ನೇಮಕವಾಗಿದ್ದಾರೆ. ಈ ಮೂಲಕ ಲಿಂಗಾಯತ ಸಮುದಾಯಕ್ಕೆ ರಾಜ್ಯಾಧ್ಯಕ್ಷ ಪಟ್ಟ ಒಲಿದಿದೆ. ಬಿಜೆಪಿಯಲ್ಲಿ ಮತ್ತೆ ಮಾಜಿ ಸಿಎಂ ಯಡಿಯೂರಪ್ಪ ಅಧಿಪತ್ಯ ಸಾಧಿಸಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷರ ಆಯ್ಕೆ ವಿಚಾರ ಸದ್ಯ ರಾಜ್ಯ ರಾಜಕಾರಣದಲ್ಲಿ ದಿನದಿಂದ ದಿನಕ್ಕೆ ಭಾರೀ ಕುತೂಹಲ ಮೂಡಿಸಿತ್ತು. ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರೇ ಕರ್ನಾಟಕ ಬಿಜೆಪಿಯ ಅಧ್ಯಕ್ಷರಾಗುವುದು ಬಹುತೇಕ ಪಕ್ಕಾ ಎಂದೂ ಈ ಹಿಂದೆ ಹೇಳಲಾಗುತ್ತಿತ್ತು. ಆದರೆ ಇದೀಗ ಬಿವೈ ವಿಜಯೇಂದ್ರ ಅವರಿಗೆ ರಾಜ್ಯಾಧ್ಯಕ್ಷ ಸ್ಥಾನ ಸಿಕ್ಕಿರುವುದು ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ.