ಬೆಂಗಳೂರು:- ಯುವತಿ ಸ್ನಾನ ಮಾಡುವಾಗ ವಿಡಿಯೋ ರೆಕಾರ್ಡ್ ಮಾಡಿದ ಜಿಮ್ ಕೋಚ್ ಅರೆಸ್ಟ್ ಆಗಿದ್ದಾನೆ. ಸಿಲಿಕಾನ್ ಸಿಟಿಯಲ್ಲಿ ಫಿಟ್ನೆಸ್ ಸೆಂಟರ್ ನಲ್ಲಿ ಯುವತಿ ಸ್ನಾನ ಮಾಡೋದನ್ನು ಸೆರೆ ಹಿಡಿದ ಕಾಮುಕ ಜಿಮ್ ಕೋಚ್ನನ್ನು ಪೊಲೀಸರು ಬಂಧಿಸಿರುವ ಘಟನೆ ಜರುಗಿದೆ. ರಾಮಮೂರ್ತಿನಗರ ಪೊಲೀಸ್ ಠಾಣಾ ವ್ಯಾಪ್ತಿಯ ಫಿಟ್ನೆಸ್ ಸೆಂಟರ್ನಲ್ಲಿ ವರ್ಕ್ ಔಟ್ ಮುಗಿಸಿದ್ದ ಯುವತಿ ಸ್ನಾನಕ್ಕೆಂದು ಬಾತ್ ರೂಮ್ ತೆರಳಿದ್ದರಂತೆ. ಈ ವೇಳೆ ಜಿಮ್ ಕೋಚ್ ಬಾತ್ ರೂಮ್ನ ಕಿಟಕಿಯಲ್ಲಿ ಮೊಬೈಲ್ ಇಟ್ಟು ವಿಡಿಯೋ ಮಾಡಲು ಯತ್ನಿಸಿದ್ದನಂತೆ. ಏನೋ ಶಬ್ದ ಆಯ್ತು ಅಂತ ಬಾತ್ ರೂಮ್ನಿಂದ ಯುವತಿ ಹೊರ ಬಂದು ನೋಡಿದ ಸಂದರ್ಭದಲ್ಲಿ ಅಲ್ಲಿ ಯಾರು ಇರಲಿಲ್ಲವಂತೆ. ಇದರಿಂದ ಅನುಮಾನಗೊಂಡ ಯುವತಿ ಜಿಮ್ನಲ್ಲಿ ಅಳವಡಿಸಿದ್ದ ಸಿಸಿಟಿವಿ ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ಆರೋಪಿ ವಿಡಿಯೋ ಮಾಡಲು ಯತ್ನಿಸಿದ್ದು ಬೆಳಕಿಗೆ ಬಂದಿದೆ ಎನ್ನಲಾಗಿದೆ. ಘಟನೆ ಸಂಬಂಧ ಕೂಡಲೇ ಯುವತಿ ರಾಮಮೂರ್ತಿನಗರ ಪೊಲೀಸರಿಗೆ ದೂರು ನೀಡಿದ್ದಾರೆ. ದೂರು ದಾಖಲಾಗುತ್ತಿದ್ದಂತೆ ತನಿಖೆ ಆರಂಭಿಸಿದ ಪೊಲೀಸರು ಪಿಟ್ನೆಸ್ ಕೋಚ್ ಸಿಬಿಯಾಚನ್…
Author: AIN Author
ಶಿವಮೊಗ್ಗ: ಬಿಜೆಪಿಯವರನ್ನು ಬೈದರೆ ಮಾತ್ರ ಕಾಂಗ್ರೆಸ್ ಶಾಸಕರಿಗೆ ರಾಜಕೀಯ ಸ್ಥಾನಮಾನಗಳು ಸಿಗುವುದೆಂಬ ಭಾವನೆ ಬೇಳೂರಿಗೆ ಇರಬೇಕು ಎಂದು ಶಿವಮೊಗ್ಗ ಸಂಸದ ಬಿವೈ ರಾಘವೇಂದ್ರ ಕುಟುಕಿದ್ದಾರೆ. ಸಂಸದ ರಾಘವೇಂದ್ರ ಅವರು ಚುನಾವಣಾ ಸಮಯದಲ್ಲಿ ಮಾತ್ರ ಜಿಲ್ಲಾ ಪ್ರವಾಸ ಮಾಡುತ್ತಾರೆ ಎಂದು ಸಾಗರ ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿಕೆ ಕುರಿತು ನಗರದಲ್ಲಿ ಸುದ್ದಿಗಾರರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಅವರು, ಗೋಪಾಲಕೃಷ್ಣ ಗೌರವಾನ್ವಿತ, ಸೀನಿಯರ್ ಎಂಎಲ್ ಎ ಆಗಿದ್ದಾರೆ. https://ainlivenews.com/knee-pain-treatment-joint-pain-treatment/ ಮಂತ್ರಿ ಆಗಬೇಕು, ನಿಗಮ ಮಂಡಳಿ ಅಧ್ಯಕ್ಷ ಆಗಬೇಕು ಅನ್ನೋ ಆಸೆ ಇದೆ. ವಿಪಕ್ಷಗಳಿಗೆ ಯಾರು ಹೆಚ್ಚು ಬೈಯ್ತಾರೋ ಅದರ ಮೇಲೆ ಪ್ರಮೋಷನ್ ಸಿಗುತ್ತೆ ಇರಬೇಕು. ಹಾಗಾಗಿ ಈ ತರಹದ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದರು. ನನ್ನ ಮೇಲೆ ನನ್ನ ಕ್ಷೇತ್ರದ ಜನ ವಿಶ್ವಾಸ ಇಟ್ಟಿದ್ದಾರೆ. ಅವರಿಗೆ ಮಾತ್ರ ನಾನು ಉತ್ತರದಾಯಿ. ಇಷ್ಟು ವರ್ಷ ನನಗೆ ಹಾರೈಸಿದ್ದಾರೆ. ಸೇವೆ ಮಾಡುವ ಅವಕಾಶ ನೀಡಿದ್ದಾರೆ. ಹಾಗಾಗಿ ಅವರಿಗೆ ಮಾತ್ರ ನಾನು ಉತ್ತರ ನೀಡಬೇಕು ಎಂದು ತಿಳಿಸಿದರು.
ಮಂಡ್ಯ:- ಹಿರಿಯ ನಾಯಕರು ಚುನಾವಣಾ ರಾಜಕಾರಣದಿಂದ ದೂರಾದರೆ ಪಕ್ಷದ ಮೇಲೆ ಪರಿಣಾಮ ಬೀರುತ್ತದೆ ಎಂದು ಮಾಜಿ ಸಿಎಂ ಸದಾನಂದಗೌಡ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು, ಹಿರಿಯ ನಾಯಕರು ಚುನಾವಣಾ ರಾಜಕಾರಣದಿಂದ ದೂರಾದರೆ ಪಕ್ಷದ ಮೇಲೆ ಪರಿಣಾಮ ಬೀರುತ್ತದೆ ಎಂಬುದನ್ನು ಹಿರಿಯ ನಾಯಕರು ಆಲೋಚನೆ ಮಾಡಬೇಕು ಎಂದರು. ಹಿರಿಯ ನಾಯಕರ ಅನುಭವ ಹಾಗೂ ಅವರ ಹಿಂಬಾಲಕರ ಪಡೆಯನ್ನು ಹೈಕಮಾಂಡ್ ಸಮರ್ಥವಾಗಿ ಬಳಸಿಕೊಳ್ಳಬೇಕು ಎಂಬುದರ ಕುರಿತು ಚಿಂತನೆ ನಡೆಸಬೇಕು ಎಂದಿದ್ದಾರೆ. ಹಿರಿಯ ನಾಯಕರಿಗೆ ಹೆಚ್ಚಿನ ಅನುಭವ ಇರುತ್ತದೆ. ಅವರಿಗೆ ಅವರದ್ದೆ ಆದ ಹಿಂಬಾಲಕರ ಪಡೆ ಇರುತ್ತದೆ. ಅವರನ್ನು ಹೇಗೆ ಬಳಸಿಕೊಳ್ಳಬೇಕು ಎಂಬುದರ ಬಗ್ಗೆ ವರಿಷ್ಠರು ಚಿಂತನೆ ನಡೆಸಬೇಕು. ನನ್ನನ್ನು ಉಪಯೋಗಿಸಿಕೊಂಡರೆ ಪಕ್ಷಕ್ಕಾಗಿ ದುಡಿಯುತ್ತೇನೆ ಇಲ್ಲವಾದಲ್ಲಿ ಸುಖ ಜೀವನದಲ್ಲಿ ಇರುತ್ತೇನೆ ಎಂದು ಪರೋಕ್ಷವಾಗಿ ಬಿಜೆಪಿ ಹೈಕಮಾಂಡ್ ವಿರುದ್ಧ ಗುಡುಗಿದ್ದಾರೆ. ಸತ್ತಾಗ ನನ್ನ ದೇಹದ ಮೇಲೆ ಬಿಜೆಪಿ ಬಾವುಟ ಹಾಕಬೇಕು ಎಂಬ ರಾಜನೀತಿ ನನ್ನದಲ್ಲ. ಹೊಸ ಅಭ್ಯರ್ಥಿ ಹುಡುಕಲು ಸಾಧ್ಯವಾಗುತ್ತದೆ ಎಂಬ ಕಾರಣಕ್ಕೆ ಚುನಾವಣೆಗೂ ಆರು…
ಹಾಸನ: ಜೆಡಿಎಸ್ ಶಾಸಕರನ್ನು ಕಾಂಗ್ರೆಸ್ ನಾಯಕರು ಸೆಳೆಯುತ್ತಿರುವ ವಿಚಾರವಾಗಿ ಕಾಂಗ್ರೆಸ್ ನಾಯಕರ ಮೇಲೆ ಟೀಕಾಪ್ರಹಾರ ನಡೆಸಿದ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರು, ಸರಕಾರದ ಭವಿಷ್ಯದ ಬಗ್ಗೆ ಮಾರ್ಮಿಕವಾಗಿ ಹೇಳಿದರು. ಹಾಸನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಎಲ್ಲರನ್ನೂ ಕರೆದುಕೊಂಡು ಹೋಗಿ ಏನಾಗುತ್ತಿದೆ ಎನ್ನುವುದನ್ನು ನೋಡುತ್ತಿದ್ದೇವೆ. I.N.D.I.A ಮೈತ್ರಿಕೂಟದಿಂದಲೇ ಒಬ್ಬೊಬ್ಬರಾಗಿ ಕಿತ್ತುಕೊಂಡು ಹೋಗುತ್ತಿದ್ದಾರೆ. ಕಾಂಗ್ರೆಸ್ ನವರು ಕುತಂತ್ರಿಗಳು ಎಂದು ಹೇಳಿ ಅಖಿಲೇಶ್ ಯಾದವ್ ಹೊರಗೆ ಕಾಲಿಟ್ಟಿದ್ದಾರೆ. ಮೊದಲು ಅದನ್ನು ಸರಿಪಡಿಸಿಕೊಳ್ಳಿ. ಆಮೇಲೆ ನಮ್ಮನ್ನು ಕರೆದೊಯ್ಯವಿರಂತೆ’ ಎಂದು ಟೀಕಿಸಿದರು. ನಂತರ ಮಾತು ಮುಂದುವರಿಸಿದ ಅವರು, “ಇದೆಲ್ಲ ಬಹಳ ದಿನಗಳ ಕಾಲ ನಡೆಯುವುದಿಲ್ಲ. ಈ ಹಿಂದೆ ಏನೆಲ್ಲ ಆಗಿದೆ ಎಂದು ನೋಡಿದ್ದೇವೆ. https://ainlivenews.com/knee-pain-treatment-joint-pain-treatment/ ಎಸ್ ಎಂ ಕೃಷ್ಣ ಮುಖ್ಯಮಂತ್ರಿಯಾದಾಗ ಬಿಜೆಪಿಯಿಂದ ಅಂದು ಯಾರನ್ನೆಲ್ಲ ಪಕ್ಷಕ್ಕೆ ಸೆಳೆಯುವ ಪ್ರಯತ್ನ ಮಾಡಿದರು, 2013ರಲ್ಲಿ ಮುಖ್ಯಮಂತ್ರಿಯಾದ ಸಿದ್ದರಾಮಯ್ಯನವರು ಯಾರನ್ನೆಲ್ಲ ಪಕ್ಷಕ್ಕೆ ಸೇರಿಸಿಕೊಂಡರು? ಕೊನೆಗೆ 78 ಸ್ಥಾನಗಳಿಗೆ ಬಂದು ನಿಂತರು. 1989ರಲ್ಲಿ 180 ಸ್ಥಾನ ಪಡೆದು ಆಳ್ವಿಕೆ ಮಾಡಿದ್ದ ನೀವು, 1994ರಲ್ಲಿ 38 ಸಂಖ್ಯೆಗಳಿಗೆ…
ದಾವಣಗೆರೆ:- ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಗೆ ಆಗ್ರಹಿಸಿ ದಾವಣಗೆರೆಯಲ್ಲಿ ಇಂದು ಬೃಹತ್ ಹೋರಾಟ ನಡೆಯಲಿದೆ. ಜಯಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಹೋರಾಟ ನಡೆಯಲಿದ್ದು, ರಾ.ಹೆದ್ದಾರಿ 48ರಲ್ಲಿ ಸ್ವಾಮೀಜಿಗಳು ಇಷ್ಟಲಿಂಗ ಪೂಜೆ ನಡೆಸಲಿದ್ದಾರೆ. ಮೊದಲು ಇಷ್ಟಲಿಂಗ ಪೂಜೆ ಬಳಿಕ ಹೆದ್ದಾರಿ ತಡೆದು ಜಯಮೃತ್ಯುಂಜಯ ಶ್ರೀ ಪ್ರತಿಭಟನೆ ನಡೆಸಲಿದ್ದು, ಸರ್ಕಾರಕ್ಕೆ ಬಿಸಿ ಮುಟ್ಟಿಸಲಿದ್ದಾರೆ. ಲೋಕಸಭೆ ಚುನಾವಣೆಯೊಳಗೆ ನಮಗೆ 2ಎ ಮೀಸಲಾತಿ ಘೋಷಣೆ ಮಾಡುವಂತೆ ಸ್ವಾಮೀಜಿ ಒತ್ತಾಯಿಸುತ್ತಿದ್ದು, ಈಗಾಗಲೇ ಝಳಕಿ, ನಿಪ್ಪಾಣಿ, ಗದಗ, ಬೆಳಗಾವಿ, ಹುಬ್ಬಳ್ಳಿಯಲ್ಲಿ ಸ್ವಾಮೀಜಿ ಹೋರಾಟ ನಡೆಸಿದ್ದಾರೆ. ಇಂದು ಬೃಹತ್ ಹೋರಾಟಕ್ಕೆ ಮೀಸಲಾತಿ ವಿಚಾರ ಸಾಕ್ಷಿಯಾಗಲಿದೆ. ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಹಾಗೂ ಶಾಸಕ ವಿಜಯಾನಂದ ಕಾಶಪ್ಪನವರ, ವಿನಯ್ ಕುಲಕರ್ಣಿ ಸೇರಿದಂತೆ ಹಲವರು ಭಾಗಿಯಾಗುವ ಸಾಧ್ಯತೆ ಇದೆ.
ಕಲಬುರಗಿ;- ಇಲ್ಲಿ ನಡೆದ KEA ಪರೀಕ್ಷೆ ಅಕ್ರಮ ಪ್ರಕರಣದ ಕಿಂಗ್ ಪಿನ್ RD ಪಾಟೀಲ್ ಗೆ ಆಶ್ರಯ ನೀಡಿದ್ದ ಇಬ್ಬರನ್ನ ಬಂಧಿಸುವಲ್ಲಿ ಪೋಲೀಸರು ಯಶಸ್ವಿಯಾಗಿದ್ದಾರೆ. ಅಪಾರ್ಟ್‌ಮೆಂಟಿನ ಮಾಲಿಕ ಶಂಕರಗೌಡ & ಮ್ಯಾನೇಜರ್ ದಿಲೀಪ್ ಬಂಧಿತರು. ಪೋಲೀಸ್ ದಾಳಿವೇಳೆ RD ಪಾಟೀಲ್ ಕೈಗೆ ಸಿಗದೇ ಜಸ್ಟ್ ಮಿಸ್ ಆಗಿದ್ದ.ಆ ವೇಳೆ ಗೇಟ್ ಜಿಗಿದು ಎಸ್ಕೇಪ್ ಆಗಿದ್ದ CCTV ಎಲ್ಲೆಡೆ ವೈರಲ್ ಆಗಿತ್ತು. ಹೀಗಾಗಿ ಕಿಂಗ್ ಪಿನ್ ಗೆ ಅಪಾರ್ಟಮೆಂಟ್ ದಲ್ಲಿ ಬಾಡಿಗೆ ಆಧಾರದ ಮೇಲೆ ಆಶ್ರಯ ಕೊಟ್ಟ ಆರೋಪದ ಹಿನ್ನಲೆ ಇದೀಗ ಇಬ್ಬರು ಲಾಕ್ ಆಗಿದ್ದಾರೆ ಎನ್ನಲಾಗಿದೆ..
ಬಾಗಲಕೋಟೆ: ಕಾಂಗ್ರೆಸ್ ಸರ್ಕಾರ ಲೋಕಸಭಾ ಚುನಾವಣೆ ಮುಂಚೆಯೇ ಬಿದ್ದು ಹೋಗುತ್ತದೆ ಎಂದು ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು. ಬಾಗಲಕೋಟೆ ಜಿಲ್ಲೆಯಲ್ಲಿ ಮಾತನಾಡಿದ ಅವರು, ” ಕಾಂಗ್ರೆಸ್ ಪಕ್ಷದಲ್ಲಿ ಉಂಟಾಗಿರುವ ಸಿಎಂ ಸ್ಥಾನ ವಿವಾದವನ್ನು ಅವರು ಮೊದಲು ಸರಿ ಮಾಡಿಕೊಳ್ಳಲಿ, ಸರ್ಕಾರ ಪತನ ಬಗ್ಗೆ ನಾವು ಕಾಯುತ್ತಿಲ್ಲ. ಬಿಜೆಪಿ ಪಕ್ಷವು ರೈತರ ಪರವಾಗಿದೆ, ರೈತರಿಗೆ ಸರ್ಕಾರ ನ್ಯಾಯ ಕೊಡದೇ ಇದ್ದಲ್ಲಿ ಹೋರಾಟ ಮಾಡಿ ನ್ಯಾಯ ಒದಗಿಸುವ ಕೆಲಸ ಬಿಜೆಪಿ ಪಕ್ಷ ಮಾಡುತ್ತದೆ ” ಎಂದರು. ಆಪರೇಷನ್ ಹಸ್ತದಿಂದಲೇ ಕಾಂಗ್ರೆಸ್ ಸರ್ಕಾರ ಪತನವಾಗಲಿದೆ ಎಂದು ಭವಿಷ್ಯ ನುಡಿದರು. https://ainlivenews.com/knee-pain-treatment-joint-pain-treatment/ ಸಿಎಂ ಸಿದ್ದರಾಮಯ್ಯನವರು ರಾಜ್ಯದಲ್ಲಿ ಬರ ಇದ್ದರೂ ರೈತರ ಕಣ್ಣೀರು ಒರೆಸುವ ಬದಲು ತಮ್ಮ ಶಾಸಕರ, ಸಚಿವರ ಕಣ್ಣೀರು ಒರೆಸುತ್ತಿದ್ದಾರೆ. ರೈತರ ಶಾಪ ಸರ್ಕಾರಕ್ಕೆ ತಟ್ಟುತ್ತದೆ ಸರ್ಕಾರ ಪತನವಾಗುತ್ತದೆ ಎಂದು ತಿಳಿಸಿದ ಕಟೀಲ್, ರಾಜ್ಯದಲ್ಲಿ ಭೀಕರ ಬರಗಾಲದಿಂದ ಮುಖ್ಯಮಂತ್ರಿ ಅವರು ರೈತರೊಂದಿಗೆ, ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಚರ್ಚೆ ಮಾಡುವ ರೈತರ ಸಮಸ್ಯೆ ಬಗೆ ಹರಿಸಬೇಕಾಗಿತ್ತು.…
ಬೆಂಗಳೂರು:- ಗೊಂಬೆ ಮಾಸ್ಕ್ ಧರಿಸಿ ಪುಂಡರು ಪುಂಡಾಟ ನಡೆಸಿರುವ ಘಟನೆ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ. ಏರಿಯಾ ಒಂದರಲ್ಲಿ ಮನೆ ಮುಂದೆ ನಿಲ್ಲಿಸಿದ್ದ 15 ವಾಹನಗಳ ಗಾಜನ್ನು ಕಿಡಿಗೇಡಿಗಳು ಪುಡಿಪುಡಿ ಮಾಡಿದ್ದಾರೆ. ಲಗ್ಗೆರೆ ರಾಜೀವ್ ಗಾಂಧಿನಗರ ಬಳಿ ಘಟನೆ ಜರುಗಿದೆ. ಡಿಯೋ ದ್ವಿಚಕ್ರ ವಾಹನದಲ್ಲಿ ಬಂದು ಲಾಂಗು ಮಚ್ಚಿನಿಂದ ಅಟ್ಯಾಕ್ ನಡೆದಿದೆ. 15 ವಾಹನಗಳಿಗೆ ಹಾನಿ ಮಾಡಿ ಪುಂಡರು ಪರಾರಿ ಆಗಿದ್ದಾರೆ. ಮದ್ಯ ರಾತ್ರಿ ಮೂವರು ಪುಂಡರಿಂದ ಕೃತ್ಯ ನಡೆದಿದೆ. ರಾಜಗೋಪಾಲ್‌ನಗರ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆದಿದ್ದು, ರಾಜಗೋಪಾಲ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರು:- ಖ್ಯಾತ ನಿರ್ದೇಶಕರೊಬ್ಬರ ವಿರುದ್ಧ ವಂಚನೆ ದೂರು ದಾಖಲಾಗಿದೆ. ಪೃಥ್ವಿ, ಸವಾರಿ, ಸವಾರಿ-2, ಚಂಬಲ್ ಚಿತ್ರಗಳ ನಿರ್ದೇಶಕ ಜಾಕೋಬ್ ವರ್ಗೀಸ್ ಮೇಲೆ ದೂರು ದಾಖಲಾಗಿದೆ. ಸಾಕ್ಷ್ಯಚಿತ್ರದ ಕಾಪಿರೈಟ್ಸ್ ನೀಡದೆ (ಬೆಂಗಳೂರು ಸ್ಕೂಲ್ ಸ್ಪೋರ್ಟ್ಸ್ ಫೌಂಡೇಶನ್‌ಗೆ ವಂಚನೆ ಮಾಡಲಾಗಿದೆ ಎಂದು ದೂರಲಾಗಿದೆ. ಎಚ್‌ಐವಿ ಬಾಧಿತ ಮಕ್ಕಳ ಜೀವನ ಕ್ರಮದ ಬಗ್ಗೆ ಸಂಸ್ಥೆ ಜಾಕೋಬ್ ಬಳಿ ವಿಡಿಯೋ ಮಾಡಿಸಿತ್ತು. ʼರನ್ನಿಂಗ್ ಪಾಸಿಟಿವ್ʼ ಎನ್ನುವ ಸಾಕ್ಷ್ಯಚಿತ್ರ ಮಾಡಲು ಫೌಂಡೇಶನ್ ಹಣ ನೀಡಿತ್ತು. ವಿಡಿಯೋ ಚಿತ್ರೀಕರಣ ಮಾಡಿದ್ದ ಜಾಕೋಬ್ ವರ್ಗೀಸ್ ಕಾಪಿರೈಟ್ಸ್ ಅನ್ನು ಸಂಸ್ಥೆಗೆ ನೀಡಿಲ್ಲ ಎಂದು ದೂರಲಾಗಿದೆ. 4 ವರ್ಷದ ಇಬ್ಬರು ವಿದ್ಯಾರ್ಥಿಗಳ ಬಗ್ಗೆ ವಿಡಿಯೋ ಚಿತ್ರಿಕರಣ ಮಾಡಿದ್ದ ಜಾಕೋಬ್‌ಗೆ ವಿಡಿಯೋ ಚಿತ್ರಿಕರಣ ಮಾಡಲು ಹಂತ ಹಂತವಾಗಿ ಫೌಂಡೇಶನ್ ಹಣ ನೀಡಿತ್ತು. ಇದೀಗ ಕಾಪಿರೈಟ್ಸ್ ಸಂಸ್ಥೆಗೆ ನೀಡದೆ ತಾನೇ ಸಾಕ್ಷ್ಯಚಿತ್ರವನ್ನು ಪ್ರಸಾರ ಮಾಡಿರುವ ಆರೋಪ ಬಂದಿದೆ. ಆಸ್ಕರ್ ಅಕಾಡೆಮಿ ಅವಾರ್ಡ್ ವಿಭಾಗದಲ್ಲಿ ತಾನೇ ಕಾಪಿರೈಟ್ಸ್ ಮಾಲೀಕ ಎಂದು ಮಾಹಿತಿ ನೀಡಿದ್ದಾರೆ. ಆಯುಷ್ಮಾನ್ ಚಲನಚಿತ್ರ ಪ್ರಶಸ್ತಿಗೂ ಈ…
ಭೋಪಾಲ್: ಜನಸಂಖ್ಯಾ ನಿಯಂತ್ರಣದ ಕುರಿತು ಮಾತನಾಡುವ ವೇಳೆ ಮಹಿಳೆಯರ ಕುರಿತು ವಿವಾದಾತ್ಮಕ ಹೇಳಿಕೆ ನೀಡಿರುವ ಬಿಹಾರ ಸಿಎಂ ನಿತೀಶ್ ಕುಮಾರ್ (Nitish Kumar) ವಿರುದ್ಧ ಪ್ರಧಾನಿ ನರೇಂದ್ರ ಮೋದಿ (Narendra Modi) ಗುಡುಗಿದ್ದಾರೆ. ಮಧ್ಯಪ್ರದೇಶ (Madhya Pradesh) ಗುಣ ಎಂಬಲ್ಲಿ ಚುನಾವಣಾ ರ‍್ಯಾಲಿಯಲ್ಲಿ ಮಾತನಾಡಿದ ಪ್ರಧಾನಿ, ಮಹಿಳೆಯರ ವಿರುದ್ಧ ನೀಡುವ ಹೇಳಿಕೆಗಳು ದೇಶವನ್ನೇ ಅವಮಾನಿಸುವಂತಿದೆ ಎಂದು ಕಿಡಿಕಾರಿದ್ದಾರೆ. ಭಾರತೀಯ ಮೈತ್ರಿಕೂಟದ ದೊಡ್ಡ ನಾಯಕರೊಬ್ಬರು ಬಿಹಾರ ವಿಧಾನಸಭೆಯೊಳಗೆ ಮಹಿಳೆಯರಿಗೆ ಅವಾಚ್ಯ ಶಬ್ದಗಳನ್ನು ಬಳಸಿದ್ದಾರೆ. https://ainlivenews.com/knee-pain-treatment-joint-pain-treatment/ ಇಂಡಿಯಾ ಒಕ್ಕೂಟದ ಯಾವೊಬ್ಬ ನಾಯಕನೂ ಇದರ ವಿರುದ್ಧ ಒಂದೇ ಒಂದು ಮಾತನ್ನೂ ಆಡಲಿಲ್ಲ. ಅವರಿಗೆ ನಾಚಿಕೆಯಾಗಬೇಕು. ಮಹಿಳೆಯರ ಬಗ್ಗೆ ಈ ರೀತಿ ಯೋಚಿಸುವರು ನಿಮಗೆ ಏನಾದರೂ ಒಳ್ಳೆಯದನ್ನು ಮಾಡುವುದು ಸಾಧ್ಯವೇ ಎಂದು ಪ್ರಧಾನಿ ಮೋದಿ ಪ್ರಶ್ನಿಸಿದರು. ತಾಯಂದಿರು ಮತ್ತು ಸಹೋದರಿಯರ ಬಗ್ಗೆ ಕೆಟ್ಟ ಮನೋಭಾವವನ್ನು ಹೊಂದಿರುವವರು ಇಂದು ನಮ್ಮ ದೇಶವನ್ನು ಅವಮಾನಿಸುತ್ತಿದ್ದಾರೆ. ಇದರಿಂದಲೇ ಗೊತ್ತಾಗುತ್ತೇ ನೀವು ಎಷ್ಟು ಕೆಳಮಟ್ಟಕ್ಕೆ ಇಳಿದಿದ್ದೀರಿ ಎಂದು ಅವರು ಹೇಳಿದರು.