Author: AIN Author

ಬಾಗಲಕೋಟೆ :- ಕಂದಾಯ ವಿಭಾಗಕ್ಕೆ ಒಬ್ಬರಂತೆ ಮುಖ್ಯಮಂತ್ರಿ ನೇಮಿಸಿಬಿಡಲಿ ಎಂದು ಮಾಜಿ ಡಿಸಿಎಂ ಗೋವಿಂದ ಕಾರಜೋಳ ವ್ಯಂಗ್ಯವಾಡಿದ್ದಾರೆ. ಕಾಂಗ್ರೆಸ್‌ ನಲ್ಲಿ ನಾಲ್ಕೈದು ಜನ ಸಿಎಂ ಆಕಾಂಕ್ಷಿಗಳು ಇದ್ದಾರೆ. ಅದಕ್ಕೆ ಕಾಂಗ್ರೆಸ್‌ನವರು ಸಿಎಂ ಸ್ಥಾನವನ್ನು ಪಾಲು ಮಾಡಿಕೊಂಡು ಬಿಡಲಿ. ಹೇಗಿದ್ದರೂ ರಾಜ್ಯದಲ್ಲಿ ನಾಲ್ಕು ಕಂದಾಯ ವಿಭಾಗಗಳಿವೆ. ನಾಲ್ಕೂ ಕಂದಾಯ ವಿಭಾಗಕ್ಕೆ ಒಬ್ಬರಂತೆ ಮುಖ್ಯಮಂತ್ರಿ ನೇಮಿಸಿಬಿಡಲಿ ಎಂದರು. ಕಾಂಗ್ರೆಸ್‌ನಲ್ಲಿ ನಾಲ್ಕು ಗುಂಪುಗಳಾಗಿವೆ. ಸಿದ್ದರಾಮಯ್ಯನವರದ್ದು ಅಹಿಂದ ಗುಂಪು, ಡಿಕೆ ಶಿವಕುಮಾರದ್ದು ಗೌಡರ ಗುಂಪು, ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ, ಮಹಾದೇವಪ್ಪ ಅವರದ್ದು ಇನ್ನೊಂದು ಗುಂಪು, ಕೆ.ಎಚ್.ಮುನಿಯಪ್ಪ, ಆರ್.ಬಿ.ತಿಮ್ಮಾಪುರ ಅವರದ್ದು ಮತ್ತೊಂದು ಗುಂಪು. ಹೀಗಾಗಿ, ಕಾಂಗ್ರೆಸ್‌ನವರು ಸಿಎಂ ಸ್ಥಾನವನ್ನು ಪಾಲು ಮಾಡಿಕೊಂಡು ಬಿಡುವುದು ಒಳಿತು ಎಂದು ಕಾರಜೋಳ ಕಾಂಗ್ರೆಸ್‌ನ ಕಾಲೆಳೆದರು. ಸತೀಶ್ ಜಾರಕಿಹೊಳಿ ಸಿಎಂ ಆಗಬೇಕೆಂಬ ವಾಲ್ಮೀಕಿ ಸ್ವಾಮೀಜಿ ಹೇಳಿದ್ದು, ಒಂದು ಸಿಎಂ ಸ್ಥಾನ ಎಸ್‌ಸಿಗೆ ಇನ್ನೊಂದು ಎಸ್‌ಟಿಗೆ, ಒಂದು ಗೌಡ್ರಿಗೆ, ಒಂದು ಲಿಂಗಾಯತರಿಗೆ ಈ ರೀತಿ ಪಾಲು ಮಾಡಿಕೊಂಡು ನಾಲ್ಕು ಜನ ಮುಖ್ಯಮಂತ್ರಿಗಳನ್ನು ಮಾಡಿ, ನಾಲ್ಕು ಮಾಂಡಲೀಕರ…

Read More

ವಾಟ್ಸ್​ಆ್ಯಪ್ ಅಪ್‌ಡೇಟ್‌ಗಳ ಟ್ರ್ಯಾಕರ್, WabetaInfo ನ ವರದಿಯ ಪ್ರಕಾರ, ಮೆಟಾ-ಮಾಲೀಕತ್ವದ ಇನ್‌ಸ್ಟಂಟ್ ಮೆಸೇಜಿಂಗ್ ಅಪ್ಲಿಕೇಶನ್ ಬಳಕೆದಾರರಿಗೆ ಚಾಟ್ ಪಟ್ಟಿಯನ್ನು ಫಿಲ್ಟರ್ ಎಂಬ ಹೊಸ ವೈಶಿಷ್ಟ್ಯವನ್ನು ನೀಡಲು ಮುಂದಾಗಿದೆ. ವಾಟ್ಸ್​ಆ್ಯಪ್ ಬೀಟಾ 2.23.14.17 ಅಪ್ಡೇಟ್​ನಲ್ಲಿ ಇದು ಕಂಡುಬಂದಿದೆ. ಈ ಹೊಸ ಟೂಲ್ ಬಗ್ಗೆ ಸ್ಕ್ರೀನ್ ಶಾಟ್ ಕೂಡ ಹರಿದಾಡುತ್ತಿದೆ. ಈ ಆಯ್ಕೆಯ ಮೂಲಕ ಚಾಟ್ ಲಿಸ್ಟ್​ ಅನ್ನು ಸುಲಭವಾಗಿ ನಿರ್ವಹಿಸಲು ಸಾಧ್ಯವಾಗುತ್ತದೆ. ಮಾಹಿತಿಯ ಪ್ರಕಾರ, ಫಿಲ್ಟರ್​ನಲ್ಲಿ ಮೂರು ಆಯ್ಕೆಗಳು ಇರಲಿದೆ. ಅನ್​ರೀಡ್ ಮೆಸೇಜೆಸ್, ವೈಯಕ್ತಿಕ ಸಂಭಾಷಣೆಗಳು ಮತ್ತು ವ್ಯವಹಾರ ಸಂಭಾಷಣೆಗಳು ಹೀಗೆ ಮೂರು ಆಯ್ಕೆಗಳು ಇರಲಿದೆ. ವಾಟ್ಸ್​ಆ್ಯಪ್​ ಮೇಲ್ಬಾಗದ ಬಲ ಮೂಲೆಯಲ್ಲಿ ಈ ಫಿಲ್ಟನ್ ಬಟನ್ ಇರಲಿದೆ ಎಂದು ಹೇಳಲಾಗಿದೆ. ಈ ವೈಶಿಷ್ಟ್ಯದ ಮೂಲಕ ಬಳಕೆದಾರರು ಸೆಕೆಂಡುಗಳಲ್ಲಿ ಪ್ರಮುಖ ಚಾಟ್‌ಗಳನ್ನು ಪ್ರವೇಶಿಸಬಹುದು. ಆದರೆ, ಗ್ರೂಪ್ ಚಾಟ್​ಗಳಿಗೆ ಇದು ಅನ್ವಯ ಆಗುವುದಿಲ್ಲ. ಇದಕ್ಕಾಗಿ ಯಾವುದೇ ಆಯ್ಕೆ ಕಂಡುಬಂದಿಲ್ಲ.

Read More

ಕೂದಲು ಉದುರುವುದು, ತಲೆಹೊಟ್ಟು, ಅಕಾಲಿಕವಾಗಿ ಕೂದಲು ಬಿಳಿಯಾಗುವುದು ಮುಂತಾದ ಸಮಸ್ಯೆಗಳು ಇತ್ತೀಚಿನ ದಿನಗಳಲ್ಲಿ ಕಾಮನ್ ಆಗೋಗಿದೆ. ಸಾಮಾನ್ಯವಾಗಿ ಜನರು ದುಬಾರಿ ಶ್ಯಾಂಪೂಗಳು ಮತ್ತು ಸೌಂದರ್ಯವರ್ಧಕ ಉತ್ಪನ್ನಗಳಲ್ಲಿ ಕೂದಲಿಗೆ ಚಿಕಿತ್ಸೆಯನ್ನು ಹುಡುಕುತ್ತಲೇ ಇರುತ್ತಾರೆ. ಆದರೆ ಈ ಕೂದಲಿನ ಸಮಸ್ಯೆಗಳಿಗೆ ರಾಮಬಾಣವಾಗಿರುವಂತಹ ಅದ್ಭುತ ವಸ್ತುಗಳು ನಮ್ಮ ಅಡುಗೆಮನೆಯಲ್ಲಿರುತ್ತವೆ. ಕರಿಬೇವಿನ ಸೊಪ್ಪು ಕೂದಲಿಗೆ ಬಹಳ ಮುಖ್ಯವಾಗಿದೆ. ಕರಿಬೇವಿನ ಸೊಪ್ಪಿನಿಂದ ಕೂದಲಿನ ಅನೇಕ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದು. ಆಗಿನ ಕಾಲದ ಅಜ್ಜಿಯಂದಿರು ಇದನ್ನೇ ಉಪಯೋಗಿಸುತ್ತಿದ್ದರು. ನೀವು ಅವುಗಳನ್ನು ಕರಿಬೇವನ್ನ ಸರಿಯಾಗಿ ಬಳಸಿದರೆ, ನಿಮ್ಮ ಕೂದಲಿಗೆ ತುಂಬಾ ಪರಿಣಾಮಕಾರಿ ಎಂದು ಸಾಬೀತುಪಡಿಸಬಹುದು. ಕೂದಲು ಉದುರುವಿಕೆಗೆ ಕರಿಬೇವಿನ ಎಲೆಗಳು : ಕೂದಲು ಉದುರುವ ಸಮಸ್ಯೆಯಿಂದ ನೀವು ತೊಂದರೆಗೀಡಾಗಿದ್ದರೆ ಮತ್ತು ಹಲವಾರು ರೀತಿಯ ಸೌಂದರ್ಯವರ್ಧಕಗಳನ್ನು ಪ್ರಯತ್ನಿಸಿದ್ದರೆ, ಅಂತವರು ಈ ಮನೆ ಮದ್ದನ್ನ ಉಪಯೋಗಿಸಿದರೆ ಕೂದಲು ಉದುರುವುದು ಕಡಿಮೆಯಾಗಿ ಕೂದಲು ಬೆಳೆಯೋದಕ್ಕೆ ಕರಿಬೇವಿನ ಎಲೆಗಳು ರಾಮಬಾಣ. ಕರಿಬೇವಿನ ಎಲೆಗಳಲ್ಲಿ ವಿಟಮಿನ್ ಸಿ, ಕಬ್ಬಿನಾಂಶ, ಕ್ಯಾಲ್ಸಿಯಂ, ಪೋಸ್ಪರಸ್, ನಿಕೊಟಿನಿಕ್ ಆಮ್ಲವಿದೆ. ಕರಿಬೇವಿನ ಎಲೆಗಳನ್ನು ಕೂದಲಿಗೆ ಬಳಸಿಕೊಳ್ಳುವುದು…

Read More

ಕಂಪ್ಲಿ:- ಅಡುಗೆಗೆಂದು ಒಲೆಯ ಮೇಲಿಟ್ಟಿದ್ದ ಕುಕ್ಕರ್ ಒಂದು ಸ್ಫೋಟಗೊಂಡ ಘಟನೆ ತಾಲೂಕಿನ ಮೆಟ್ರಿ ಗ್ರಾಮದ ಹೊನ್ನಳ್ಳಿ ಸಿದ್ದಪ್ಪನವರ ಪಿರಿಯ ಪ್ರಾಥಮಿಕ ಶಾಲೆಯಲ್ಲಿ ಜರುಗಿದೆ. ಶಾಲೆಯ ಬಿಸಿಯೂಟ ಅಡುಗೆ ಕೊಠಡಿಯಲ್ಲಿ ಗ್ಯಾಸ್ ಒಲೆ ಮೇಲೆ 20 ಲೀಟರ್ ಕುಕ್ಕರ್‌ನಲ್ಲಿ 3 ಸೇರು ತೊಗರಿಬೇಳೆ ಬೇಯಿಸುತ್ತಿದ್ದಾಗ ವಿಜಿಲ್ ಬಾರದೇ ಏಕಾಏಕಿ ಸ್ಫೋಟಗೊಂಡಿತು ಅದರಿಂದ ಕೊಠಡಿಯ ಚಾವಣಿ, ಅಕ್ಕಪಕ್ಕದ ಗೋಡೆಗೆ ತೊಗರಿಬೇಳೆ ಸಿಡಿದಿರುವುದು ಕಂಡು ಬಂತು. ಇನ್ನು ಅಡುಗೆ ಕೆಲಸದಲ್ಲಿ ತೊಡಗಿಕೊಂಡಿದ್ದ ಲೋಕಮ್ಮ ಎಂಬುವವರ ಮುಖಕ್ಕೆ ಬಿಸಿನೀರು ಸಿಡಿದಿದೆ. ಇನ್ನುಳಿದ ಮೂವರು ಅಡುಗೆಯವರು ತಕ್ಷಣ ಹೊರಗಡೆ ಬಂದಿದ್ದು ಅಪಾಯದಿಂದ ಪಾರಾಗಿದ್ದಾರೆ. ಬಿಸಿಯೂಟ ತಯಾರಿಸುವ ಪಾತ್ರೆ, ಇತರೆ ಸಾಮಾನುಗಳು ತುಂಬಾ ಹಳತಾಗಿವೆ. ಸುಸ್ಥಿತಿಯಲ್ಲಿ ಇಲ್ಲದ ಕಾರಣ ಒಂದಿಲ್ಲೊಂದು ಸಮಸ್ಯೆ ಎದುರಿಸುವಂತಾಗಿದೆ. 600 ವಿದ್ಯಾರ್ಥಿಗಳು ಇಲ್ಲಿ ಅಭ್ಯಾಸ ಮಾಡುತ್ತಿದ್ದು, ಶಿಕ್ಷಕರು ಪಾಠದ ಕಡೆ ಗಮನಹರಿಸಲು ಆಗದೇ ಬಿಸಿಯೂಟದ ಕಡೆಗೆ ಹೆಚ್ಚಿನ ಲಕ್ಷ್ಯ ಕೊಡಬೇಕಾದ ಸ್ಥಿತಿ ಇದೆ. ಶಿಕ್ಷಕರು ಶಾಲೆಯಲ್ಲಿ ಗುಣಾತ್ಮಕ ಶಿಕ್ಷಣ ನೀಡಲು ಇಸ್ಕಾನ್ ಬಿಸಿಯೂಟ ಸೌಲಭ್ಯ ಒದಗಿಸಬೇಕು…

Read More

ಅಮೀರ್ ಖಾನ್ ಅವರ ಮಗಳು, ಇರಾ ಖಾನ್, ಅವರ ಮೊದಲ ಪತ್ನಿ ರೀನಾ ದತ್ತಾ, 2024 ರ ಜನವರಿ 3 ರಂದು ನಿಶ್ಚಿತ ವರ ನೂಪುರ್ ಶಿಖರೆ ಅವರನ್ನು ಮದುವೆಯಾಗಲು ಸಿದ್ಧರಾಗಿದ್ದಾರೆ. ಕಳೆದ ವರ್ಷ ನವೆಂಬರ್ನಲ್ಲಿ ದಂಪತಿಗಳು ನಿಶ್ಚಿತಾರ್ಥ ಮಾಡಿಕೊಂಡರು. ಅವರ ಮದುವೆಯ ಪೂರ್ವದ ಹಬ್ಬಗಳು ಕೆಲ್ವನ್ ಸಮಾರಂಭದೊಂದಿಗೆ ಪ್ರಾರಂಭವಾಯಿತು. ನವೆಂಬರ್ 6 ರಂದು, ಅವರು ತಮ್ಮ ಎರಡನೇ ಕೆಲ್ವನ್ ಸಮಾರಂಭವನ್ನು ಹೊಂದಿದ್ದರು. ಇರಾ ಈಗ ಸಿಹಿ ಟಿಪ್ಪಣಿಯೊಂದಿಗೆ ಅದೇ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ನವೆಂಬರ್ 6 ರಂದು, ಇರಾ ತಮ್ಮ ಎರಡನೇ ಕೆಲ್ವನ್ ಅವರ ಹೊಸ ಚಿತ್ರಗಳನ್ನು ಹಂಚಿಕೊಳ್ಳಲು ತನ್ನ Instagram ಖಾತೆಗೆ ಕರೆದೊಯ್ದರು. ಫೋಟೋಗಳಲ್ಲಿ, ಇರಾ ಚಿನ್ನದ ಕಸೂತಿ ಹೊಂದಿರುವ ಕೆಂಪು ಸೀರೆ ಮತ್ತು ತೋಳಿಲ್ಲದ ಕಪ್ಪು ಕುಪ್ಪಸವನ್ನು ಧರಿಸಿರುವುದನ್ನು ಕಾಣಬಹುದು. ನೆಕ್ಪೀಸ್ ಮತ್ತು ಸೊಗಸಾದ ಕಿವಿಯೋಲೆಗಳು ಸೇರಿದಂತೆ ಹೂವಿನ ಆಭರಣಗಳೊಂದಿಗೆ ಅವಳು ತನ್ನ ನೋಟವನ್ನು ಪ್ರವೇಶಿಸಿದಳು. ವಧು-ವರರು ಹಣೆಯ ಮೇಲೆ ಕೆಂಪು ಬಿಂದಿಯೊಂದಿಗೆ ತಮ್ಮ ನೋಟವನ್ನು ಪೂರ್ಣಗೊಳಿಸಿದರು. ಇದೇ…

Read More

ಹೆಸರಾಂತ ನಟ ಧನುಷ್ (Dhanush) ಮತ್ತು ಕನ್ನಡದ ಸೆಂಚ್ಯೂರಿ ಸ್ಟಾರ್ ಶಿವರಾಜ್ ಕುಮಾರ್ (Shivraj Kumar) ಕಾಂಬಿನೇಷನ್ ನ ಕ್ಯಾಪ್ಟನ್ ಮಿಲ್ಲರ್ ಸಿನಿಮಾದ ರಿಲೀಸ್ ಡೇಟ್ ಫಿಕ್ಸ್ ಆಗಿದೆ. ಸಂಕ್ರಾಂತಿ (ಪೊಂಗಲ್) (Sankranti) ಹಬ್ಬಕ್ಕೆ ಸಿನಿಮಾ ಬಿಡುಗಡೆ ಮಾಡುವುದಾಗಿ ಚಿತ್ರತಂಡ ಘೋಷಣೆ ಮಾಡಿದೆ. ಇತ್ತೀಚೆಗಷ್ಟೇ ಸಿನಿಮಾದ ಪೋಸ್ಟರ್ (Poster) ರಿಲೀಸ್ ಆಗಿತ್ತು, ವಿವಿಧ ಬಗೆಯ ಬಂದೂಕು ಹಿಡಿದುಕೊಂಡಿರುವ ಇಬ್ಬರು ಸ್ಟಾರ್ ನಟರು ತೆರೆಯ ಮೇಲೆ ಕಾಳಗ ಮಾಡಲಿದ್ದಾರೆ ಎನ್ನುವ ಕುತೂಹಲವನ್ನು ಉಂಟು ಮಾಡಿತ್ತು. ಧನುಷ್ ಕೈಯಲ್ಲಿ ಒಂದು ಬಗೆಯ ಬಂದೂಕು ಇದ್ದರೆ, ಶಿವರಾಜ್ ಕುಮಾರ್ ಮತ್ತೊಂದು ಬಗೆಯ ಬಂದೂಕು ಹಿಡಿದಿದ್ದಾರೆ. ಇಬ್ಬರ ಲುಕ್ ಕೂಡ ಸಖತ್ ಕ್ಯಾಚಿ ಆಗಿದೆ. ಹೀಗಾಗಿ ತೆರೆಯ ಮೇಲೆ ಇಬ್ಬರೂ ಯಾವ ರೀತಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವುದು ಅಭಿಮಾನಿಗಳಿಗೆ ಇರುವ ಕಾತರ. ಆಕಸ್ಮಿಕ ಎನ್ನುವಂತೆ ಧನುಷ್ ಜೊತೆ ಮಾಡುತ್ತಿದ್ದ ಕ್ಯಾಪ್ಟನ್ ಮಿಲ್ಲರ್ (Captain Miller) ಸಿನಿಮಾದ ಕೆಲವು ವಿಷಯಗಳು ಸೋರಿಕೆಯಾಗಿವೆ. ಅಂದರೆ, ಶಿವರಾಜ್ ಕುಮಾರ್ ಅವರಿಗೆ ಕೇಶವಿನ್ಯಾಸ ಮಾಡುತ್ತಿರುವ…

Read More

ಸಲಾರ್ (Salaar) ಟೀಸರ್ನಲ್ಲಿ ನಮ್ಮ ಡಾರ್ಲಿಂಗ್ ಸರಿಯಾಗಿ ಕಾಣಿಸ್ತಿಲ್ಲ ಅಂತ ಬೇಸರವಾಗಿದ್ದ ಫ್ಯಾನ್ಸ್ಗೆ ಖುಷಿ ವಿಷ್ಯ ಇಲ್ಲಿದೆ. ಟೀಸರ್ ಆಯ್ತು ಟ್ರೈಲರ್ ರಿಲೀಸ್ಗೆ ಮುಹೂರ್ತ ಫಿಕ್ಸ್ ಆಗಿದೆ. ಯಾವಾಗ ಬರುತ್ತಿದೆ ಸಲಾರ್ ಟ್ರೈಲರ್? ಸಿನಿಮಾ ರಿಲೀಸ್ ಬಗ್ಗೆ ಏನು ಟಾಕ್? ಇಲ್ಲಿದೆ ಮಾಹಿತಿ ಟೀಸರ್ನಲ್ಲಿ ಪ್ರಭಾಸ್ (Prabhas) ಇನ್ನೂ ಸ್ವಲ್ಪ ಜಾಸ್ತಿ ಕಾಣಿಸ್ಬೇಕಿತ್ತು ಅಂತ ಫ್ಯಾನ್ಸ್ ಮರುಗಿದ್ರು. ಅದೇನೋ ಟೀಸರ್ನಲ್ಲಿ ಕಪ್ಪು ಬಣ್ಣ ಜಾಸ್ತಿ ಆಯ್ತು ಅಂತ ಮತ್ತಷ್ಟು ಜನ ಕಾಮೆಂಟ್ ಮಾಡಿದ್ರು. ಟೀಸರ್ ಆಯ್ತು, ಟ್ರೈಲರ್ ಹೇಗಿರುತ್ತೆ ಅಂತ ಅಲ್ಲಿಂದ ಕಾಯೋಕೆ ಶುರು ಮಾಡಿದ್ರು ಪ್ರಭಾಸ್ ಫ್ಯಾನ್ಸ್. ಸದ್ಯಕ್ಕೆ ಡಾರ್ಲಿಂಗ್ ಅಭಿಮಾನಿಗಳಿಗೆ ಆಶಾಕಿರಣದಂತೆ ಕಾಣ್ತಿರೋದು ಒನ್ & ಓನ್ಲಿ ಸಲಾರ್ ಮಾತ್ರ. ಬ್ಯಾಕ್ ಟು ಬ್ಯಾಕ್ ಸೋಲಿನಿಂದ ನಿರಾಸೆಯಲ್ಲಿ ಫ್ಯಾನ್ಸ್ ಪ್ರಶಾಂತ್ ನೀಲ್ ಮೇಲೆ ಬೆಟ್ಟದಷ್ಟು ಆಸೆ ಇಟ್ಟುಕೊಂಡಿದ್ದಾರೆ. ಅಭಿಮಾನಿಗಳ ಲೆಕ್ಕಾಚಾವನ್ನ ನೀಲ್ ಪರಿಗಣಿಸಿದ್ದಾರೆ. ಹಾಲಿವುಡ್ ಸ್ಟೈಲಿನಲ್ಲಿ ಆ್ಯಕ್ಷನ್ ಸೀನ್ಸ್ ಮಾಡಿಸಿದ್ದಾರೆ. ಸಾಲು ಸಾಲು ಕಾರುಗಳನ್ನ ನಿಲ್ಲಿಸಿ ಅದ್ದೂರಿ ಫೈಟ್…

Read More

ನವದೆಹಲಿ: ಇತರ ರಾಜ್ಯಗಳಲ್ಲಿ ನೋಂದಾಯಿಸಲಾದ (Registration) ಅಪ್ಲಿಕೇಶನ್ ಆಧಾರಿತ ಕ್ಯಾಬ್‌ಗಳ (Cab) ಪ್ರವೇಶವನ್ನು ನಿಷೇಧಿಸುವುದಾಗಿ ದೆಹಲಿ ಸರ್ಕಾರ ಘೋಷಿಸಿದೆ. ದೆಹಲಿ ಸಾರಿಗೆ ಇಲಾಖೆಯಿಂದ ನಿಷೇಧವು ಯಾವಾಗ ಪ್ರಾರಂಭವಾಗುತ್ತದೆ ಎಂಬುದರ ಕುರಿತು ಪ್ರತ್ಯೇಕ ಆದೇಶವನ್ನು ಹೊರಡಿಸಲಾಗುತ್ತದೆ ಎಂದು ಹೇಳಿದೆ. ಮಾಲಿನ್ಯಕ್ಕೆ (Pollution) ಸಂಬಂಧಿಸಿದಂತೆ ಸುಪ್ರೀಂಕೋರ್ಟ್ (Supreme Court) ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಬಳಿಕ ಈ ಆದೇಶ ಹೊರಡಿಸಿದೆ. ದೆಹಲಿ ಸರ್ಕಾರದ ಆದೇಶದ ಪ್ರಕಾರ, ದೆಹಲಿಯ ನೋಂದಣಿ ಸಂಖ್ಯೆಯನ್ನು ಹೊಂದಿರುವ ಕ್ಯಾಬ್‌ಗಳನ್ನು ಮಾತ್ರ ನಗರದೊಳಗೆ ಓಡಿಸಲು ಅನುಮತಿಸಲಾಗುವುದು. ಕಳೆದ ಐದು ದಿನಗಳ ಬಳಿಕ ವಾಯು ಮಾಲಿನ್ಯವು ತೀವ್ರ ಕಳಪೆಯಿಂದ ಕಳಪೆ ಗುಣಮಟ್ಟಕ್ಕೆ ಮರಳಿದೆ. ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (CPCB) ಅಂಕಿಅಂಶಗಳ ಪ್ರಕಾರ, ನಗರದ ಒಟ್ಟಾರೆ ವಾಯು ಗುಣಮಟ್ಟ ಸೂಚ್ಯಂಕವು (IQA) ಬೆಳಗ್ಗೆ 7 ಗಂಟೆಗೆ 421ಕ್ಕೆ ದಾಖಲಾಗಿದೆ. https://ainlivenews.com/knee-pain-treatment-joint-pain-treatment/ ಅಪಾಯಕಾರಿ ಗಾಳಿಯ ಗುಣಮಟ್ಟದ ದೃಷ್ಟಿಯಿಂದ ಜಿಆರ್‌ಎಪಿ ಹಂತದ ಐವಿ ಅಡಿಯಲ್ಲಿ ನಿರ್ಬಂಧಗಳನ್ನು ಹೊಂದಿದ್ದರೂ ಮಾಲಿನ್ಯಕಾರಕ ವಾಹನಗಳು ಮುಕ್ತವಾಗಿ ನಗರವನ್ನು ಪ್ರವೇಶಿಸುತ್ತಿವೆ, ಮತ್ತು ಗಡಿಗಳಲ್ಲಿ…

Read More

ಕುಂದಾಣ : ರಾಜ್ಯದಲ್ಲಿ ತೀವ್ರ ಬರಗಾಲ ಕಾಡಿದೆ. ರಾಜ್ಯದಲ್ಲಿ ಬರೋಬ್ಬರಿ 39 ಲಕ್ಷ ಹೆ. ಕೃಷಿ ಭೂಮಿ ಒಣಗಿಹೋಗಿದೆ. ಬರ ಪರಿಸ್ಥಿತಿ ಹಿಡಿತ ತಪ್ಪಿದೆ. ಸರಿಸುಮಾರು 33 ಸಾವಿರ ಕೋಟಿಯಷ್ಟು ನಷ್ಟವಾಗಿದೆ ಎಂದು ಮೇಲ್ನೋಟದಲ್ಲಿ ಅಂದಾಜಿಸಲಾಗಿದೆ. ರಾಜ್ಯ ಸರಕಾರ ರೈತರ ನೆರವಿಗೆ ಕೂಡಲೇ ಧಾವಿಸಬೇಕು ಎಂದು ಮಾಜಿ ಸಚಿವ ಕೋಟಾ ಶ್ರೀನಿವಾಸ್‌ ಪೂಜಾರಿ ಒತ್ತಾಯಿಸಿದರು. ತಾಲೂಕಿನ ಕೊಯಿರ ಗ್ರಾಪಂ ವ್ಯಾಪ್ತಿಯ ಮಾಯಸಂದ್ರ ಮತ್ತು ಕೆ.ಹೊಸೂರು ಗ್ರಾಮದ ರೈತರ ಹೊಲಗಳಿಗೆ ಭೇಟಿ ನೀಡಿ ಬರ ವೀಕ್ಷಣೆ ಮಾಡಿದರು. ನಂತರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ರಾಜ್ಯ ಸರಕಾರ ರೈತರ ಮತ್ತು ಜನಸಾಮಾನ್ಯರ ಕಷ್ಟಗಳಿಗೆ ಸ್ಪಂದಿಸುವ ಕೆಲಸ ಮಾಡುತ್ತಿಲ್ಲ. ಈಗಾಗಲೇ ಮೇಲ್ಮನೆಯ ಶಾಸಕರು ಮತ್ತು ಬಿಜೆಪಿ ತಂಡ ಒಟ್ಟಾಗಿ ಸೇರಿ ಬರ ಅಧ್ಯಯನಕ್ಕೆ ಹೋದಾಗ 20-25 ಎಕರೆ ಜೋಳದ ಬೆಳೆ ಬೆಳೆದವರು ಒಂದೇ ಒಂದು ತೆನೆ ರೈತನ ಕೈಸೇರಿಲ್ಲ. ರಾಗಿ ಬೆಳೆ ಸಂಪೂರ್ಣ ಬತ್ತಿಹೋಗಿದೆ. ಕಡಲೆ ಹಾಕಿದವರು ಭೂಮಿಯಲ್ಲಿ ಇಂಗಿ ಹೋಗಿದೆ. https://ainlivenews.com/knee-pain-treatment-joint-pain-treatment/  ಇಂತಹ ದಾರುಣ…

Read More

ದಕ್ಷಿಣ ಆಫ್ರಿಕಾ ಏಕದಿನ ವಿಶ್ವಕಪ್‌ನಲ್ಲಿ ತನ್ನ 9ನೇ ಹಾಗೂ ಅಂತಿಮ ಲೀಗ್ ಪಂದ್ಯದಲ್ಲಿ ದೈತ್ಯಸಂಹಾರಿ ಎನಿಸಿರುವ ಅಫ್ಘಾನಿಸ್ತಾನ ತಂಡವನ್ನು ಎದುರಿಸಲಿದೆ. ಕಳೆದ ಪಂದ್ಯದಲ್ಲಿ ಆತಿಥೇಯ ಭಾರತದ ಎದುರು ಮುಗ್ಗರಿಸಿರುವ ಹರಿಣಗಳ ತಂಡ ಉಪಾಂತ್ಯದ ಸವಾಲಿಗೂ ಮುನ್ನ ಗೆಲುವಿನ ಹಳಿ ಏರುವ ತವಕದಲ್ಲಿದೆ. ಇತ್ತ ಆಘನ್‌ಗೆ ಇನ್ನೂ ಸೆಮೀಸ್‌ಗೇರುವ ಅವಕಾಶವಿದ್ದರೂ, ಅದು ಕಾಗದದ ಮೇಲೆ ಮಾತ್ರ. ಯಾಕೆಂದರೆ ಆಫ್ರಿಕಾ ವಿರುದ್ಧ ಗೆದ್ದರೂ, ಆಫ್ಘನ್ ತಂಡ ರನ್‌ರೇಟ್ ಲೆಕ್ಕಾಚಾರದಲ್ಲಿ ಕಿವೀಸ್ ತಂಡವನ್ನು ಹಿಂದಿಕ್ಕುವುದು ಬಹುತೇಕ ಅಸಾಧ್ಯವೆನಿಸಿದೆ. ಇದರ ಹೊರತಾಗಿಯೂ, ಮತ್ತೊಂದು ಅಚ್ಚರಿಯ ಲಿತಾಂಶದೊಂದಿಗೆ ಟೂರ್ನಿಯಿಂದ ನಿರ್ಗಮಿಸುವುದು ಆಘನ್ ಹಂಬಲವಾಗಿದೆ. ಹರಿಣಗಳ ಪಡೆ ಆಡಿರುವ 8 ಪಂದ್ಯಗಳಲ್ಲಿ 6ರಲ್ಲಿ ಗೆದ್ದು, 2ರಲ್ಲಿ ಸೋತು 12 ಅಂಕದೊಂದಿಗೆ ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದ್ದರೆ, ಇಷ್ಟೇ ಪಂದ್ಯಗಳನ್ನಾಡಿರುವ ಅಘಾನಿಸ್ತಾನ ತಲಾ 4ರಲ್ಲಿ ಗೆಲುವು-ಸೋಲುಂಡು 6ನೇ ಸ್ಥಾನದಲ್ಲಿದೆ. ಹಿಂದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ಎದುರು 243 ರನ್‌ಗಳಿಂದ ಮುಗ್ಗರಿಸಿರುವ ಟೆಂಬಾ ಬವುಮಾ ಪಡೆ ಪುಟಿದೇಳುವ ವಿಶ್ವಾಸದಲ್ಲಿದೆ. ಕ್ವಿಂಟನ್ ಡಿಕಾಕ್, ರಸ್ಸೀ ವಾನ್…

Read More