ಮೊದಲು ತುಕಾಲಿ ಸಂತೋಷ್ ಅವರ ಹಾಸ್ಯದ ಹೊನಲಿನ ಝಲಕ್ ಕೊಟ್ಟಿದ್ದ JioCinema ಇದೀಗ ಟಾಸ್ಕ್ ಕ್ಲ್ಯಾಶ್ ಅನ್ನು ಕಾಣಿಸಿದೆ. ನಿನ್ನೆ ಎದುರಾಳಿ ತಂಡದ ಸ್ಫರ್ಧಿಗಳ ಮುಖದ ಮೇಲೆ ವಿವಿಧ ಭಾವಗಳನ್ನು ಮೂಡಿಸುವ ಟಾಸ್ಕ್ ಅನ್ನು ಬಿಗ್‌ಬಾಸ್ ನೀಡಿದ್ದರು. ಹಾಗೆ ನೋಡಿದರೆ ಕೃತಕವಾಗಿ ಪ್ರಯತ್ನಿಸಿ ಆಯಾ ಭಾವವನ್ನು ಮೂಡಿಸಲು ಯಾರೂ ಯಶಸ್ವಿಯಾಗಿರಲಿಲ್ಲ. ಆದರೆ ಇಂದಿನ ಟಾಸ್ಕ್‌ನಲ್ಲಿ ತುಂಬ ಸಹಜವಾಗಿಯೇ ಎಲ್ಲ ಭಾವಗಳೂ ವ್ಯಕ್ತವಾಗುತ್ತಿರುವ ಹಾಗಿದೆ. ಒಂದು ಪ್ಲ್ಯಾಸ್ಟಿಕ್ ಬಾಕ್ಸ್‌ನ ಎರಡೂ ಬದಿಯಲ್ಲಿ ಹಗ್ಗಗಳಿಂದ ಕಟ್ಟಲಾಗಿದೆ. ಅದನ್ನು ಎರಡು ಸ್ಪರ್ಧಿಗಳ ಸೊಂಟಕ್ಕೆ ಬಿಗಿಯಲಾಗಿದೆ. ಅದನ್ನು ಇಟ್ಟುಕೊಂಡು ಓಡುವ ಟಾಸ್ಕ್ ಅನ್ನು ಬಿಗ್‌ಬಾಸ್ ಮನೆಯ ಸ್ಪರ್ಧಿಗಳಿಗೆ ನೀಡಿರುವಂತಿದೆ. ಈ ಟಾಸ್ಕ್‌ನಲ್ಲಿಯೇ ಪರಸ್ಪರ ತಳ್ಳಿಕೊಳ್ಳುವ, ಕಿರುಚಾಡಿಕೊಳ್ಳುವ ಸನ್ನಿವೇಶಗಳು ಸೃಷ್ಟಿಯಾಗಿವೆ. ವಿನಯ್-ಕಾರ್ತಿಕ್ ನಡುವೆ ತಳ್ಳಾಡುವಿಕೆಗಳು ನಡೆದಿದ್ದರೆ, ಸಂಗೀತಾ ಅವರನ್ನು ಪರೋಕ್ಷವಾಗಿ ಅಣುಕಿಸುವ ಮೂಲಕ ವಿನಯ್ ಇನ್ನಷ್ಟು ಕೆಣಕಿದ್ದಾರೆ. ಮತ್ತದೇ ‘ಫೇರ್ ಗೇಮ್’ ಚರ್ಚೆ ಏರುದನಿಯಲ್ಲಿಯೇ ಮುನ್ನೆಲೆಗೆ ಬಂದಿದೆ. ಅಷ್ಟಕ್ಕೂ ಈ ಟಾಸ್ಕ್‌ನ ಸ್ವರೂಪವೇನು? ಸ್ಪರ್ಧಿಗಳು ಜಿದ್ದಾಜಿದ್ದಿಗೆ ಬಿದ್ದು ಜಗಳವಾಡಲು…
Author: AIN Author
ಕಳೆದ ಕೆಲವು ದಿನಗಳಿಂದ ತುಕಾಲಿ ಸಂತೋಷ್ ಗಂಭೀರವಾಗಿಬಿಟ್ಟಿದ್ದರು. ಮೊದಲ ವಾರದಲ್ಲಿ ಅವರು ಮಾಡಿದ ಕಾಮಿಡಿಯ ಕ್ವಾಲಿಟಿ ಬಗ್ಗೆ ಸ್ವತಃ ಕಿಚ್ಚ ಸುದೀಪ್ ಅವರೇ ತರಾಟೆಗೆ ತೆಗೆದುಕೊಂಡಿದ್ದರು. ‘ನಿಮ್ಮ ಕಾಮಿಡಿ ಬೇರೆಯವರ ಮನಸ್ಸನ್ನು ನೋಯಿಸುತ್ತದೆ’ ಎಂಬ ಮಾತು ಪದೇ ಪದೇ ಮನೆಮಂದಿಯ ಬಾಯಲ್ಲಿ ಬರುತ್ತಿತ್ತು. ಇದರಿಂದ ಹಾಸ್ಯ ಮಾಡಲೇ ಹಿಂಜರಿಯುತ್ತಿದ್ದ ತುಕಾಲಿ ಅವರು ಗಂಭೀರವಾಗಿಬಿಟ್ಟಿದ್ದರು. ಮನೆಯೊಳಗಿನ ಸನ್ನಿವೇಶಗಳು, ಟಾಸ್ಕ್‌ಗಳು ಮತ್ತು ಜಗಳಗಳೂ ಅವರು ಗಂಭೀರವಾಗಲು ಕಾರಣವಿರಬಹುದು. ಆದರೆ ಈವತ್ತು ಬಿಗ್‌ಬಾಸ್ ಮನೆಯಲ್ಲಿ ಮತ್ತೆ ನಗೆಯ ಹೊನಲು ಹರಡಿದೆ. ಆ ನಗೆಯ ಅಲೆಯಲ್ಲಿ ಮನೆಯ ಸದಸ್ಯರು ಪರಸ್ಪರ ಭಿನ್ನಾಭಿಪ್ರಾಯಗಳನ್ನು ಮರೆತು ನಕ್ಕು ನಲಿದಿದ್ದಾರೆ. ಆ ನಗುವಿಗೆ ಕಾರಣವಾದವರು ತುಕಾಲಿ ಸಂತೋಷ್. ಈವತ್ತಿನ ಎಪಿಸೋಡ್ ಸಖತ್ ಎಂಟರ್‍ಟೈನಿಂಗ್ ಆಗಿರುತ್ತದೆ ಎಂಬುದರ ಸೂಚನೆ JioCinema ಬಿಡುಗಡೆ ಮಾಡಿರುವ ಬೆಳಗಿನ ಪ್ರೋಮೊದಲ್ಲಿಯೇ ಸಿಕ್ಕಿದೆ. ‘ಬಾರೇ ರಾಜಕುಮಾರಿ’ ಎಂದು ಕಾರ್ತಿಕ್ ಅವರು ತುಕಾಲಿ ಸಂತೋಷ್ ಹೆಗಲ ಮೇಲೆ ಕೈ ಹಾಕಿ ಕರೆದುಕೊಂಡು ಬಂದಾಗ ಇಡೀ ಮನೆಯೇ ದಂಗಾಬಿಟ್ಟಿತ್ತು. ಯಾಕೆಂದರೆ ತುಕಾಲಿ…
ಬೆಂಗಳೂರು:- ನಗರದ ಹಲವೆಡೆ ರಾತ್ರಿ ಧಾರಾಕಾರ ಮಳೆಯಾಗಿದೆ. ಪ್ರಮುಖ ರಸ್ತೆ ಹಾಗೂ ಜಂಕ್ಷನ್‌ಗಳಲ್ಲಿ ಹೊಳೆಯಂತೆ ಮಳೆ ನೀರು ಹರಿಯಿತು. ಬೆಂಗಳೂರಿನ ಸಹಕಾರ ನಗರ ವ್ಯಾಪ್ತಿಯಲ್ಲಿ ಸುರಿದ ಭಾರಿ ಮಳೆಯಿಂದ ಹಲವು ಅಂಗಡಿ ಹಾಗೂ ಮನೆಗಳಿಗೆ ನೀರು ನುಗ್ಗಿ ಸಮಸ್ಯೆ ಸೃಷ್ಟಿಸಿತ್ತು. ಮನೆಗಳಲ್ಲಿದ್ದ ಸಾಮಗ್ರಿ ನೀರಿನಲ್ಲಿ ತೊಯ್ದವು. ಸ್ಥಳಕ್ಕೆ ಬಂದ ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಸ್ಥಳೀಯರು ಆಕ್ರೋಶ ಹೊರಹಾಕಿ ಪ್ರತಿಭಟನೆ ನಡೆಸಿದರು. ಭಾರಿ ಮಳೆ ಸುರಿದ ವೇಳೆ ಮನೆಗಳಿಗೆ ನೀರು ನುಗ್ಗುವುದು ಸಾಮಾನ್ಯ ಸಂಗತಿಯಾಗಿದೆ. ಬಿಬಿಎಂಪಿ ಶಾಶ್ವತವಾಗಿ ಸಮಸ್ಯೆ ಪರಿಹರಿಸುತ್ತಿಲ್ಲ. ಸಮಸ್ಯೆಯಾದಾಗ ಮಾತ್ರ ಅಧಿಕಾರಿಗಳು ಈ ಪ್ರದೇಶಕ್ಕೆ ಭೇಟಿ ನೀಡುತ್ತಾರೆ. ಬಳಿಕ ಈ ಪ್ರದೇಶಕ್ಕೆ ಬರುವುದಿಲ್ಲ ಎಂದು ಆಪಾದಿಸಿದರು. ಪೀಣ್ಯ, ಯಶವಂತಪುರ, ಶೇಷಾದ್ರಿಪುರ, ಮೆಜಿಸ್ಟಿಕ್, ಆಡುಗೋಡಿ, ಇಂದಿರಾನಗರ, ಹೆಬ್ಬಾಳ, ಯಲಹಂಕ, ರಾಜಾಜಿನಗರ ಭಾಗದಲ್ಲಿ ಮಳೆಯಾಗಿದೆ. ಬುಧವಾರ ಸಹ ಕೆಲವು ಕೆಳಸೇತುವೆಗಳಲ್ಲಿ ನೀರು ನಿಂತು ವಾಹನ ಸವಾರರು ಪರದಾಡಬೇಕಾಯಿತು. ಮಳೆ ಹಾಗೂ ಗಾಳಿಯ ಅಬ್ಬರಕ್ಕೆ ಜಾಲಹಳ್ಳಿ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯ ರಾಜರತ್ನಂ ವೃತ್ತದಲ್ಲಿ…
ಬೆಂಗಳೂರು;- ಅಮೆರಿಕದ ಕರೆನ್ಸಿ ಚಿಂದಿ ಆಯುವ ವ್ಯಕ್ತಿಯೊಬ್ಬರಿಗೆ ಸಿಕ್ಕ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ₹30 ಲಕ್ಷ ಮೌಲ್ಯದ ಅಮೆರಿಕನ್ ಡಾಲರ್ ಸಿಕ್ಕಿದೆ ಎಂದು ಪೊಲೀಸರಿಗೆ bಕರೆ ಮಾಡಿ ಮಾಹಿತಿ ತಿಳಿಸಲಾಗಿತ್ತು. ಪರಿಶೀಲಿಸಿದಾಗ ನಕಲಿ ಎಂಬುದು ಗೊತ್ತಾಗಿದೆ. ಆದರೂ ಪರಿಶೀಲನೆಗಾಗಿ ಭಾರತೀಯ ರಿಸರ್ವ್ ಬ್ಯಾಂಕ್‌ಗೆ ಕಳುಹಿಸಲಾಗಿದೆ’ ಎಂದು ಪೊಲೀಸರು ಹೇಳಿದರು. ಪಶ್ಚಿಮ ಬಂಗಾಳದ ಸುಲೇಮಾನ್ ಶೇಕ್(39) ಅವರು ಹೆಬ್ಬಾಳ, ನಾಗವಾರ ಸುತ್ತಮುತ್ತ ತ್ಯಾಜ್ಯ ಆಯ್ದು ಜೀವನ ನಡೆಸುತ್ತಿದ್ದಾರೆ. ನ.3ರಂದು ವೀರಣ್ಯಾಪಾಳ್ಯದ ರೈಲ್ವೆ ಗೇಟ್ ಬಳಿ ಕಪ್ಪು ಬಣ್ಣದ ಚೀಲವೊಂದು ಅವರಿಗೆ ಸಿಕ್ಕಿದೆ. ಆ ಚೀಲದಲ್ಲಿ ಈ ಕರೆನ್ಸಿಗಳು ಪತ್ತೆಯಾಗಿವೆ. ಅದರ ಬಗ್ಗೆ ತಿಳಿಯದ ಸುಲೇಮಾನ್ ಶೇಕ್, ತನಗೆ ಆಶ್ರಯ ನೀಡಿದ್ದ ಟೇಕೆದಾಸ್ ಎಂಬುವರಿಗೆ ಮಾಹಿತಿ ನೀಡಿದ್ದರು. ಬಳಿಕ ಟೇಕೆದಾಸ್ ಆ ಚೀಲ ಪರಿಶೀಲಿಸಿದರು. ಸ್ಥಳೀಯರಾದ ಆರ್.ಕಲೀಂ ಉಲ್ಲಾಗೂ ಮಾಹಿತಿ ನೀಡಿದ್ದರು. ಕರೀಂ ಅವರು ನಗರ ಪೊಲೀಸ್ ಕಮಿಷನರ್ ಬಿ.ದಯಾನಂದ ಅವರನ್ನು ಭೇಟಿಯಾಗಿ ಮಾಹಿತಿ ನೀಡಿದ್ದರು. ಕೂಡಲೇ ನೋಟುಗಳ ಬಗ್ಗೆ ಪರಿಶೀಲಿಸುವಂತೆ ಹೆಬ್ಬಾಳ ಪೊಲೀಸರಿಗೆ…
ಬೀದರ್:- ರಾಜ್ಯದ ಪೌರಾಡಳಿತ ಸಚಿವರಿಗೆ ಎಷ್ಟು ಸಂಸದರಿದ್ದಾರೆ ಅನ್ನುವ ಬೇಸಿಕ್ ನಾಲೆಡ್ಜ್ ಇಲ್ಲದಿರುವುದು ಆಶ್ಚರ್ಯ ಸಂಗತಿ. ಹೌದು, ರಾಜ್ಯದ ಪೌರಾಡಳಿತ ಸಚಿವ ರಹೀಂ ಖಾನ್ ಅವರು ಭಾಷಣದ ವೇಳೆ ಎಡವಟ್ಟು ಮಾಡಿಕೊಂಡಿದ್ದಾರೆ. ಭಾಷಣದ ವೇಳೆ ರಾಜ್ಯದಲ್ಲಿ 25 ಸಂಸದ ಸ್ಥಾನಗಳಿವೆ ಎಂದು ಹೇಳಿ ಪೇಚಿಗೆ ಸಿಲುಕಿದ್ದಾರೆ. ಸಂಪುಟದ ಉನ್ನತ ಖಾತೆ ಪೌರಾಡಳಿತ ಸಚವರಿಂದ ಮಹಾ ಎಡವಟ್ಟು ಉಂಟಾಗಿದೆ. ಸಾಮಾನ್ಯ ಮಾಹಿತಿಯೇ ಇಲ್ಲದ ಸಚಿವರು, ರಾಜ್ಯವನ್ನೇಗೆ ನಿಭಾಯಿಸ್ತಾರೆ..? ಎನ್ನುವ ಪ್ರಶ್ನೆಗಳು ಸಾರ್ವಜನಿಕರಲ್ಲಿ ಕೇಳಿ ಬರುತ್ತಿದೆ. ಶಾಲಾ ಮಕ್ಕಳಿಗೆ ಇರುವ ಜ್ಞಾನವು ಸಚಿವರಿಗಿಲ್ವಾ..?ಎರಡು ಬಾರಿ ಸಚಿವ, ನಾಲ್ಕು ಬಾರೊ ಶಾಸಕರಾಗಿ ಆಯ್ಕೆ ಆಗಿರೋ ರಹೀಂ ಖಾನ್ ಗೆ ಸಾಮಾನ್ಯ ಜ್ಞಾನವೇ ಇಲ್ಲದಿರುವುದು ಬೆಳಕಿಗೆ ಬಂದಿದೆ. ಕಾಂಗ್ರೆಸ್ ಪಕ್ಷದ ಸಭೆಯಲ್ಲಿ ಪೌರಾಡಳಿತ ಸಚಿವ ರಹೀಂ ಖಾನ್ ಎಡವಟ್ಟು ಮಾಡಿಕೊಂಡಿದ್ದು, ಕಾಂಗ್ರೆಸ್ ಪಕ್ಷದ ಸಭೆಯಲ್ಲಿ 25 ಕ್ಕೆ 25 ಸ್ಥಾನ ಗೆಲ್ತೇವೆ ಎಂದು ಹೇಳಿದ್ದಾರೆ. ಸಚಿವ ಈಶ್ವರ ಖಂಡ್ರೆ, ಸಚಿವ ಸಂತೋಷ್ ಲಾಡ್ ಎದುರಲ್ಲೆ ಸಚಿವ ರಹೀಂ…
ಹುಬ್ಬಳ್ಳಿ:- ಅನೈತಿಕ ಸಂಬಂಧದ ಹಿನ್ನೆಲೆ, ಮಹಿಳೆಯನ್ನು ಅಟ್ಟಾಡಿಸಿ ಇಟ್ಟಂಗಿಯಿಂದ ಹಲ್ಲೆ ಮಾಡಿರುವ ಘಟನೆ ಹುಬ್ಬಳ್ಳಿಯ ವಿದ್ಯಾನಗರದ ಕಿಮ್ಸ್ ಹಿಂಭಾಗ ಜರುಗಿದೆ. ಗಂಡನ ಜೊತೆ ಈ ಮಹಿಳೆ ಅನೈತಿಕ ಸಂಬಂಧ ಹೊಂದಿದ್ದರು ಎಂದು ಆರೋಪಿಸಲಾಗಿದೆ. ಇದರಿಂದ ಬೇಸತ್ತ ವ್ಯಕ್ತಿಯ ಹೆಂಡತಿ ಮತ್ತು ಮಕ್ಕಳು ಮಹಿಳೆಯ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಹೇಳಲಾಗಿದೆ. ಈ ಮಹಿಳೆ ತನ್ನ ಪತಿಗೆ ಮಾನಸಿಕವಾಗಿ ಹಿಂಸೆ ನೀಡುತ್ತಿದ್ದರು ಎಂದು ವ್ಯಕ್ತಿಯ ಕುಟುಂಬಸ್ಥರು ಆರೋಪಿಸಿದ್ದಾರೆ. ಹಲ್ಲೆಗೊಳಗಾದ ಮಹಿಳೆ ಸುಮಾರು 10 ವರ್ಷಗಳಿಂದ ಕಿಮ್ಸ್ ನಲ್ಲಿ ಆಯಾ ಕೆಲಸ ಮಾಡುತ್ತಿದ್ದಾರೆ ಎನ್ನಲಾಗಿದೆ. ಕೆಲಸ ಮುಗಿಸಿ ಮಹಿಳೆ ಮನೆಗೆ ಹೋಗುತ್ತಿದ್ದಾಗ ವ್ಯಕ್ತಿಯ ಕುಟುಂಬಸ್ಥರು ಹಲ್ಲೆ ಮಾಡಿದ್ದಾರೆ. ಮಹಿಳೆ ಮೇಲೆ ಕುಟುಂಬಸ್ಥರೊಂದಿಗೆ ವ್ಯಕ್ತಿ ಸಹ ಹಲ್ಲೆ ಮಾಡಿದ್ದಾನೆ. ಕಳೆದ ಹತ್ತು ವರ್ಷಗಳಿಂದ ಇಬ್ಬರ ನಡುವೆ ಅನೈತಿಕ ಸಂಬಂಧ ಇತ್ತು ಎಂಬ ಆರೋಪ ಕೇಳಿ ಬಂದಿದೆ. ಹಲ್ಲೆಗೊಳಗಾದ ತಂಗಿಯನ್ನು ಬಿಡಿಸಲು ಬಂದ ಅಕ್ಕನನ್ನೂ ಥಳಿಸಿದ್ದಾರೆ. ಇಬ್ಬರನ್ನೂ ಸಾರ್ವಜನಿಕ ಸ್ಥಳದಲ್ಲೇ ಹಿಗ್ಗಾಮುಗ್ಗ ಥಳಿಸಿದ್ದಾರೆ. ಚಪ್ಪಲಿ ಹಾಗೂ ಇಟ್ಟಂಗಿಯಿಂದ…
ಕೋಲ್ಕತ್ತಾ: ಇತ್ತೀಚಿನ ದಿನಗಳಲ್ಲಿ ಮೆಟ್ರೋ ರೈಲುಗಳು, ರೈಲ್ವೆ ಪ್ಲಾಟ್‌ಫಾರ್ಮ್‌ಗಳು ಮತ್ತು ಇತರ ಸಾರ್ವಜನಿಕ ಸ್ಥಳಗಳಲ್ಲಿ ಜನರು ರೀಲ್ಸ್ ಮಾಡುವ ಪ್ರವೃತ್ತಿ ವೇಗವಾಗಿ ಹೆಚ್ಚಾಗಿದೆ. ಪಶ್ಚಿಮ ಬಂಗಾಳದಲ್ಲಿ ಕಿಕ್ಕಿರಿದ ಮತ್ತು ಚಲಿಸುವ ರೈಲು ಕಂಪಾರ್ಟ್‌ಮೆಂಟ್‌ನಲ್ಲಿ ಹುಡುಗಿಯೊಬ್ಬಳು ಭೋಜ್‌ಪುರಿ ಹಾಡಿಗೆ ನೃತ್ಯ ಮಾಡುತ್ತಿರುವ ಇಂತಹ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಯುವತಿಯನ್ನು ಸಹೇಲಿ ರುದ್ರ ಎಂದು ಗುರುತಿಸಲಾಗಿದೆ. ವೀಡಿಯೊದಲ್ಲಿ, ಆಕೆ ಶರ್ಟ್ ಮತ್ತು ರಿಪ್ಡ್ ಜೀನ್ಸ್ ಧರಿಸಿದ್ದಾರೆ. ಪ್ರಯಾಣಿಕರು ಕಿಕ್ಕಿರಿದು ತುಂಬಿದ್ದ ಆಸನಗಳ ನಡುವೆ ಖೇಸರಿ ಲಾಲ್ ಯಾದವ್ ಅವರ ‘ಸಾಜ್ ಕೆ ಸವಾರ್ ಕೆ’ ಹಾಡಿಗೆ ಯುವತಿ ನೃತ್ಯ ಮಾಡಿದ್ದಾಳೆ. ಅಲ್ಲಿ ಅನೇಕರು ಅವನನ್ನು ಕುತೂಹಲದಿಂದ ನೋಡುತ್ತಿದ್ದರು. ಇನ್ನು ಕೆಲವರು ತಮ್ಮ ಮೊಬೈಲ್‌ನಲ್ಲಿ ವಿಡಿಯೋ ರೆಕಾರ್ಡ್ ಮಾಡುತ್ತಿರುವುದು ಕಂಡುಬಂದಿದೆ.ವಿಡಿಯೋ ವೈರಲ್ ಬಳಿಕ 2.5 ಲಕ್ಷಕ್ಕೂ ಹೆಚ್ಚು ಲೈಕ್ ಗಳು ಮತ್ತು 11 ದಶಲಕ್ಷಕ್ಕೂ ಹೆಚ್ಚು ವೀಕ್ಷಣೆ ಪಡೆದುಕೊಂಡಿದೆ. ಸಾಮಾಜಿಕ ಮಾಧ್ಯಮ ಬಳಕೆದಾರರು ಈ ವಿಡಿಯೋಗೆ ವಿಭಿನ್ನ ಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸಿದ್ದಾರೆ. ಕೆಲವರು ಖುಷಿ…
ನೆಲಮಂಗಲ;- ಕಳೆದ ೩೦ ವರ್ಷಗಳಿಂದ ಬೈರನಾಯ್ಕನಹಳ್ಳಿ ಗ್ರಾಮದಲ್ಲಿದ್ದ ನ್ಯಾಯಬೆಲೆ ಅಂಗಡಿಯನ್ನು ಯಾವುದೇ ನೋಟೀಸ್ ನೀಡದೇ ಏಕಾಏಕಿ ಆಡಳಿತ ಸರಕಾರದ ಪ್ರಭಾವದಿಂದ ಹಸಿರುವಳ್ಳಿಗೆ ಹೊಸದಾಗಿ ನೀಡಿದ್ದು, ಅನುಮಾನಕ್ಕೆ ಕಾರಣವಾಗಿದೆ ಹಾಗೂ ಅಧಿಕಾರ ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ಕರ್ನಾಟಕ ಯುವ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಸುನೀಲ್ ಆರೋಪಿಸಿದರು. ನೆಲಮಂಗಲ ತಾಲೂಕಿನ ಕೆಂಗಲ್ ಕೆಂಪೋಹಳ್ಳಿ ಬಳಿಯ ಖಾಸಗಿ ಹೋಟೆಲ್ ನಲ್ಲಿ ಕರ್ನಾಟಕ ಯುವರಕ್ಷಣಾ ವೇದಿಕೆ ಹಾಗೂ ಬೈರನಾಯ್ಕನಹಳ್ಳಿ ಗ್ರಾಮಸ್ಥರು ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ತಾಲೂಕು ಕಚೇರಿಯ ಆಹಾರ ಸರಬರಾಜು ಇಲಾಖೆಯ ವಿರುದ್ಧ ಆರೋಪಿಸಿದರು ಈ ಕುರಿತು ಒಂದು ವರದಿ ಇಲ್ಲಿದೆ. ಬೈರನಾಯ್ಕನಹಳ್ಳಿ ಸೇರಿದಂತೆ ಹಸಿರುವಳ್ಳಿ, ಲಕ್ಕಪ್ಪನಹಳ್ಳಿ, ಚಿಕ್ಕನಹಳ್ಳಿ, ಚಿಕ್ಕನಹಳ್ಳಿ ಬಂಡೆ, ದೊಡ್ಡ ಹುಚ್ಚಯ್ಯನಪಾಳ್ಯ ಗ್ರಾಮದ ೭೦೦ಕ್ಕೂ ಹೆಚ್ಚು ಪಡಿತರ ಚೀಟಿ ಹೊಂದಿದ್ದು, ಕಳೆದ ೩೦ ವರ್ಷದಿಂದ ಭೈರನಾಯಕನಹಳ್ಳಿ ಗ್ರಾಮದಲ್ಲಿ ಆಹಾರ ಧಾನ್ಯಗಳನ್ನು ವಿತರಿಸಲಾಗುತ್ತಿತ್ತು, ಆದರೆ ಕಳೆದ ಕೆಲ ತಿಂಗಳ ಹಿಂದೆ ಏಕಾಏಕಿ ಯಾವುದೇ ಸೂಚನೆ, ಆದೇಶ ನೀಡದೆ ನ್ಯಾಯ ಬೆಲೆ ಅಂಗಡಿಯನ್ನು ಹಸಿರುವಳ್ಳಿ ಗ್ರಾಮದಲ್ಲಿ ತೆರೆಯಲು ಅರ್ಜಿ…
ಧಾರವಾಡ;- ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಧಾರವಾಡ ಜಿಲ್ಲಾ ಸಮಿತಿಯಿಂದ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗಿದೆ. ಜಿಲ್ಲೆಯಲ್ಲಿ ಅಲೆಮಾರಿ, ಆರೆ ಅಲೆವಾರಿ ಜನಾಂಗಗಳನ್ನು ವಾಲ್ಮೀಕಿ, ನಿಗಮದಿಂದ ಬೇರ್ಪಡಿಸಿ ಅಲೆಮಾರಿ ನಿಗಮ ಅಂತಾ ಸಮಾಜ ಕಲ್ಯಾಣ ಇಲಾಖೆಯಲ್ಲಿ ವಿಲೀನಗೊಳಿಸಿರುತ್ತಾರೆ, ಆದ್ದರಿಂದ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯವರು ವಿವಿಧ ಸಾಲ ಮಂಜೂರಾತಿ ಮಾಡಲು ಆಯ್ಕೆ ಪಟ್ಟಿ ತಯಾರಿಸುವುದಾಗಿ ಕೇವಲ ‘ಭಜಂತ್ರಿ’ ಜನಾಂಗದವರನ್ನು ಮಾತ್ರ ಆಯ್ಕೆ ಮಾಡಿದ್ದು ಇದರಲ್ಲಿ ‘ಹರಣಶಿಕಾರಿ’ ಜನಾಂಗದವರು ಧಾರವಾಡ ಜಿಲ್ಲೆಯಲ್ಲಿ ಸುಮಾರು 20.ಜನ ಫಲಾನುಭವಿಗಳು ಅರ್ಜಿ ನೀಡಿದ್ದರೂ ಒಬ್ಬರನ್ನೂ ಆಯ್ಕೆ ಮಾಡದೇ ಈ ಸಮಾಜವನ್ನು ಕಡೆಗಣಿಸಿ ಅನ್ಯಾಯ ಮಾಡಿರುತ್ತಾರೆ. ಹಾಗೂ ಕಲಘಟಗಿ ತಾಲೂಕಿನ ಆರೇಬಸನಕೋಪ್ಪ ಗ್ರಾಮದ ಜಮೀನಿನಲ್ಲಿ 60 ವರ್ಷಗಳಿಂದ ತಮ್ಮ ತಮ್ಮ ಸ್ವಂತ ಸ್ವಾಧೀನ ಅನುಭೋಗ ಇದ್ದ ರೈತರಿಗೆ ನ್ಯಾಯಾ ನೀಡಲು ಮನವಿ ಮಾಡಿದ್ದಾರೆ.
ನವದೆಹಲಿ: ಪ್ರಶ್ನೆಗಾಗಿ ಕಾಸು (Cash for Query) ಆರೋಪ ಎದುರಿಸುತ್ತಿರುವ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ (TMC MP Mahua Moitra) ಅವರ ವಿರುದ್ಧ ಸಿಬಿಐ (CBI) ತನಿಖೆ ನಡೆಯುವ ಸಾಧ್ಯತೆಯಿದೆ. ಭ್ರಷ್ಟಾಚಾರ ಪ್ರಕರಣದ ಕುರಿತು ತನಿಖೆ ನಡೆಸುವಂತೆ ಲೋಕಪಾಲ್(Lokpal) ಕೇಂದ್ರ ತನಿಖಾ ದಳಕ್ಕೆ (CBI) ಸೂಚಿಸಿರುವ ಮಾಹಿತಿಯನ್ನು ಬಿಜೆಪಿ ಸಂಸದ ನಿಶಿಕಾಂತ್ ದುಬೆ (BJP MP Nishikant Dubey) ಅವರು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಸಂಬಂಧ ಪೋಸ್ಟ್ ಮಾಡಿರುವ ನಿಶಿಕಾಂತ್ ದುಬೆ, ನಾನು ನೀಡಿದ ದೂರಿನ ಆಧಾರದ ಹಿನ್ನೆಲೆಯಲ್ಲಿ ಲೋಕಪಾಲ್ ಸಂಸ್ಥೆಯು, ರಾಷ್ಟ್ರೀಯ ಭದ್ರತೆಗೆ ಸವಾಲೊಡ್ಡಿದ ಮಹುವಾ ಮಯಿತ್ರಾ ಅವರ ಭ್ರಷ್ಟಾಚಾರ ಪ್ರಕರಣದ ತನಿಖೆಯನ್ನು ಕೈಗೊಳ್ಳುವಂತೆ ಸಿಬಿಐಗೆ ಸೂಚಿಸಿದೆ ಎಂದು ಹೇಳಿದ್ದಾರೆ. https://ainlivenews.com/knee-pain-treatment-joint-pain-treatment/ ಪ್ರಧಾನಿ ನರೇಂದ್ರ ಮೋದಿ ಮತ್ತು ಅದಾನಿ ಗ್ರೂಪ್ ವಿರುದ್ಧ ಪ್ರಶ್ನೆ ಕೇಳಲು ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಉದ್ಯಮಿಯೊಬ್ಬರಿಂದ ಲಂಚ ಸ್ವೀಕರಿಸಿದ್ದಾರೆ ಎಂದು ಬಿಜೆಪಿ ಸಂಸದ ನಿಶಿಕಾಂತ್ ದುಬೆ ಅವರು ಆರೋಪಿಸಿದ್ದರು. ಈ ಆರೋಪಕ್ಕೆ ಪೂರಕ…