ಬೆಂಗಳೂರು” ದುಬಾರಿ ದುನಿಯಾದ ನಡುವೆ ಜೀವನ ಮಾಡೋದೆ ಕಷ್ಟ ಆಗಿದೆ. ಜನಸಾಮಾನ್ಯರು ಅಂತೂ ಬದುಕೋಕೆ ಆಗ್ತಿಲ್ಲ.ಏಪ್ರಿಲ್ ಮೇ ತಿಂಗಳು ಬಂದ್ರೆ ಸಾಕು ಟಣ್ ಅಂತ ಕರೆಂಟ್ ಬಿಲ್ ಏರಿಕೆ ಆಗೇ ಬಿಡುತ್ತೆ. ಇದೀಗ ಇಷ್ಟು ಸಲದು ಅಂತ ಸಾರಿಗೆ ಇಲಾಖೆನೂ ವರ್ಷಕ್ಕೊಮ್ಮೆ ಬಸ್ ದರ ಪರಿಷ್ಕರಣೆ ಮಾಡಿ ಅಂತ ಸರ್ಕಾರದ ಕದ ತಟ್ಟಿದೆ.ಬೆಲೆ ಏರಿಕೆಯಿಂದ ಬೆಂದುಹೋಗ್ತಿರೋ ಜನರಿಗೆ ಇದು ಟೆನ್ಷನ್ ಹೆಚ್ಚಿಸಿದೆ. ರಾಜ್ಯದ ಜನರಿಗೆ ಶಾಕ್ ಮೇಲೆ ಶಾಕ್ ಕಾಡ್ತನೇ ಇದೆ. ಸಾಮಾನ್ಯ . ಮಧ್ಯಮ ವರ್ಗದ ಜನರಂತೂ ಈ ದುಬಾರಿ ದುನಿಯಾದಲ್ಲಿ ಜೀವನ ಮಾಡೋಕೆ ಆಗ್ತಾ ಇಲ್ಲ. ಎಲ್ಲಾವೂ ತುಂಬಾನೇ ಕಾಸ್ಟ್ಲಿಸರ್ಕಾರಿ ಇಲಾಖೆಗಳು ಅಂತೂ ನಷ್ಟದ ನೆಪವೊಡ್ಡಿ ವಿದ್ಯುತ್ ದರ, ಹಾಲಿನ ದರ ಏರಿಸ್ತಾ ಬಂದಿದ್ದಾರೆ.ಇದೀಗ ಸಾರಿಗೆ ನಿಗಮಗಳು ನಮಗೆ ನಷ್ಟ ಕೆಇಆರ್ಸಿ ಮಾದರಿ ನಮಗೂ ವರ್ಷಕ್ಕೊಮ್ಮೆ ಬಸ್ ಪ್ರಯಾಣ ದರ ಹೆಚ್ಚಿಸಿದ ಅಂತ ಪ್ರಸ್ತಾಪ ಇಟ್ಟಿವೆ. ಹೌದು.. ರಾಜ್ಯದ ಜನರ ನಾಡಿ ಮಿಡಿತವಾಗಿರೋದು ನಮ್ಮ ರಾಜ್ಯ ಸರ್ಕಾರದ ಸಾರಿಗೆ…
Author: AIN Author
ಕಲಬುರಗಿ: ಸರ್ಕಾರದ ಮಾರ್ಗಸೂಚಿ ಉಲ್ಲಂಘಿಸಿ ಕರ್ತವ್ಯ ಲೋಪ ಎಸಗಿದ ಹಿನ್ನಲೆ ಕಲಬುರಗಿ ಜಿಲ್ಲಾ ಕಾರ್ಮಿಕ ಅಧಿಕಾರಿ ರಮೇಶ್ ಸುಂಬಡ್ ರನ್ನು ಅಮಾನತು ಮಾಡಿ ಸರ್ಕಾರ ಆದೇಶಿಸಿದೆ. ಜೇಷ್ಠತೆ ಇಲ್ಲದ ಅರ್ಜಿಗಳ ಪರಿಗಣನೆ ಹೆಚ್ಚುವರಿ ಮೊತ್ತ ಸಹಾಯಧನ ಪಾವತಿ ಮಾಡಿದ ಆರೋಪ ರಮೇಶ್ ಮೇಲಿದೆ. https://ainlivenews.com/knee-pain-treatment-joint-pain-treatment/ ಕಾರ್ಮಿಕ ಆಯುಕ್ತರ ಕಚೇರಿ ನೀಡಿದ ವರದಿ ಅನ್ವಯ ಸರ್ಕಾರ ಅಮಾನತು ಮಾಡಿದೆ. ಕಾರ್ಮಿಕರ ಕಲ್ಯಾಣ ಮಂಡಳಿಯ ಫಲಾನುಭವಿಯೊಬ್ಬರಿಗೆ 9 ಸಾವಿರ ಬದಲು 90 ಸಾವಿರ ಜಮೆ ಮಾಡಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ಕೆಲ ಸಂಘಟನೆಯವರು ಸಚಿವ ಸಂತೋಷ್ ಲಾಡ್ ಗೆ ಮನವಿ ಸಹ ಸಲ್ಲಿಸಿದ್ದಾರೆ.
ಕಲಬುರಗಿ: ಕಲಬುರಗಿಯ ಪೂಜ್ಯ ದೊಡ್ಡಪ್ಪ ಅಪ್ಪ ಇಂಜಿನಿಯರಿಂಗ್ ಕಾಲೇಜಿನ ಪದವಿ ಪ್ರದಾನ ಸಮಾರಂಭ ಶನಿವಾರ ನವೆಂಬರ್ 11 ರಂದು ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ವಿಜ್ಞಾನಿಗಳಾದ ಎಂ.ಸಂಕೀರನ್ ರವರು ಮುಖ್ಯ ಅತಿಥಿಗಳಾಗಿ ಆಗಮಿಸುತ್ತಿರುವುದು ವಿಶೇಷ ಅಂತ HKE ಅಧ್ಯಕ್ಷರಾದ ಭೀಮಾಶಂಕರ ಬಿಲಗುಂದಿ ತಿಳಿಸಿದ್ದಾರೆ.. ಕಲಬುರಗಿಯಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಭೀಮಾಶಂಕರ್ 2022 ರಲ್ಲಿ ಪದವಿ ಮುಗಿಸಿದ 947 ವಿದ್ಯಾರ್ಥಿಗಳು 26 viದ್ಯಾರ್ಥಿಗಳು ಸ್ವರ್ಣಪದಕಕ್ಕೆ ಭಾಜನರಾಗಿದ್ದಾರೆ.. ಇದರಲ್ಲಿ 12 ಪದಕ ಕುಮಾರಿ ಮಾಯಾವತಿ ಪಡೆದಿದ್ದು ಕಾಲೇಜಿಗೆ ಹೆಗ್ಗಳಿಕೆ ಅಂತ ಹೇಳಿದ್ರು.
ಚೆನ್ನೈ: ತಮಿಳುನಾಡಿನಲ್ಲಿ (Tamil Nadu) ಈಶಾನ್ಯ ಮಾನ್ಸೂನ್ ತೀವ್ರಗೊಂಡಿದೆ. ಭಾರೀ (Rain) ಮಳೆಯ ಹಿನ್ನೆಲೆ ರಾಜ್ಯದ ಕೊಯಮತ್ತೂರು, ತಿರುಪ್ಪೂರ್, ಮಧುರೈ, ಥೇಣಿ, ದಿನಿಡಿಗಲ್ ಸೇರಿದಂತೆ 5 ಜಿಲ್ಲೆಗಳಲ್ಲಿ ಹಾಗೂ ನೀಲಗಿರಿಯ ಕೆಲವು ತಾಲೂಕುಗಳಲ್ಲಿ ಗುರುವಾರ ಶಾಲೆಗಳಿಗೆ (School) ರಜೆ ಘೋಷಿಸಲಾಗಿದೆ. ಭಾರೀ ಮಳೆಯಿಂದಾಗಿ ಕಲ್ಲರ್ ಮತ್ತು ಅಡ್ಡೆರ್ಲಿ ನಡುವಿನ ಹಳಿಯ ಕೆಳಭಾಗದ ಮಣ್ಣು ಕೊಚ್ಚಿ ಹೋಗಿದೆ. ಈ ಹಿನ್ನೆಲೆ ನೀಲಗಿರಿ ಬೆಟ್ಟದ ರೈಲ್ವೆ ವಿಭಾಗದಲ್ಲಿ 2 ರೈಲುಗಳನ್ನು ರದ್ದುಗೊಳಿಸಲಾಗಿದೆ. https://ainlivenews.com/knee-pain-treatment-joint-pain-treatment/ ಭಾರತೀಯ ಹವಾಮಾನ ಇಲಾಖೆ (IMD) ಗುರುವಾರ ಕೇರಳ ಮತ್ತು ತಮಿಳುನಾಡಿನಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ ನೀಡಿದೆ. ಭಾರತದ ದಕ್ಷಿಣ ಭಾಗದಲ್ಲಿ ವ್ಯಾಪಕ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಕಳೆದ ಕೆಲವು ದಿನಗಳಿಂದ ಕೇರಳದಲ್ಲಿ ಭಾರೀ ಮಳೆಯಾಗಿದ್ದು, ಕಣ್ಣೂರು ಜಿಲ್ಲೆಯಲ್ಲಿ ಬುಧವಾರ 7 ಸೆಂ.ಮೀ ಮಳೆ ದಾಖಲಾಗಿದೆ. ಐಎಂಡಿ ಪ್ರಕಾರ ಕೇರಳದಲ್ಲಿ ಮುಂದಿನ 2 ದಿನಗಳವರೆಗೆ ವ್ಯಾಪಕ ಮಳೆಯಾಗಲಿದೆ. ತಮಿಳುನಾಡಿನಲ್ಲೂ ಮುಂದಿನ 2 ದಿನ ಭಾರೀ ಮಳೆಯಾಗುವ ನಿರೀಕ್ಷೆಯಿದೆ.
ರಾಯ್ಪುರ: ಅಯೋಧ್ಯೆ ರಾಮಮಂದಿರದ (Ayodhya RamaMandir) ವಿಚಾರದಲ್ಲಿ ಕ್ರೆಡಿಟ್ ಪಾಲಿಟಿಕ್ಸ್ ಶುರುವಾಗಿದೆ. ಮೊನ್ನೆಯಷ್ಟೇ ಕಮಲ್‍ನಾಥ್ ಮಾತಾಡ್ತಾ, ರಾಜೀವ್ ಗಾಂಧಿಗೂ ಇದರ ಕ್ರೆಡಿಟ್ ಕೊಡಬೇಕು ಎಂದು ಆಗ್ರಹಿಸಿದ್ದರು. ಇದಕ್ಕೆ ನಾವೇ ಕ್ರೆಡಿಟ್ ತಗೋತಿಲ್ಲ ಅಂತಾ ಅಮಿತ್ ಶಾ (AmitShah) ಹೇಳಿದ್ದರು. ಈ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿಯವರು ನನ್ನಿಂದಾಗಿಯೇ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಸಾಧ್ಯವಾಗಿದೆ ಎಂದು ಹೇಳಿದ್ದಾರೆ. ಛತ್ತೀಸ್‍ಘಡದ ಬಿಶ್ರಮ್‍ಪುರ ರ‍್ಯಾಲಿಯಲ್ಲಿ ಮೋದಿ ಈ ಮಾತನ್ನು ಹೇಳಿದ್ದಾರೆ. https://ainlivenews.com/knee-pain-treatment-joint-pain-treatment/ ವಾಜಪೇಯಿ ಅವರ ಕಾಲದಲ್ಲಿ ಛತ್ತೀಸ್ ಗಢದಲ್ಲಿ ಬಿಜೆಪಿ ಸರ್ಕಾರ ರಚನೆಯಾಗಿತ್ತು. ಈಗ ಮತ್ತೆ ಇಲ್ಲಿನ ಜನ ಬಿಜೆಪಿ ಸರ್ಕಾರ (BJP Govt) ಬರಬೇಕು ಎಂದು ಹೇಳುತ್ತಿದ್ದಾರೆ ಅಂತ ಮೋದಿ ಹೇಳಿದರು. ಸ್ವಾತಂತ್ರ್ಯ ಬಂದಾಗಿನಿಂದ ಆದಿವಾಸಿಗಳು ಕಾಂಗ್ರೆಸ್ ಕಣ್ಣಿಗೆ ಬಿದ್ದಿರಲಿಲ್ಲ. ನಿಮ್ಮ ಮತ್ತು ನಿಮ್ಮ ಮಕ್ಕಳ ಬಗ್ಗೆ ಅವರು ತಲೆಕೆಡಿಸಿಕೊಂಡಿಲ್ಲ. ಆದರೆ ಆದಿವಾಸಿಗಳ ಅಭಿವೃದ್ಧಿಗೆ ಬಿಜೆಪಿ ಹೆಚ್ಚಿನ ಆದ್ಯತೆ ನೀಡುತ್ತದೆ. ಆದಿವಾಸಿ ಸಮುದಾಯದ ಮಹಿಳೆಯೊಬ್ಬರು ರಾಷ್ಟ್ರಪತಿಯಾಗಬಹುದೆಂದು ನೀವು ಎಂದಾದರೂ ಊಹಿಸಿದ್ದಿರೇ ಎಂದು ಇದೇ ವೇಳೆ ಪ್ರಧಾನಿ (PM…
ಜೈಪುರ: ರಾಜಸ್ಥಾನ ವಿಧಾನಸಭಾ ಚುನಾವಣಾ ಪ್ರಚಾರದಲ್ಲಿರುವ ಗೃಹ ಸಚಿವ ಅಮಿತ್ ಶಾ ಅಪಾಯದಿಂದ ಸ್ವಲ್ಪದರಲ್ಲಿ ಪಾರಾಗಿದ್ದಾರೆ. ರಾಜಸ್ಥಾನದ ನಾಗೌರ್‌ನಲ್ಲಿ ಅಮಿತ್ ಶಾ ರಥದಲ್ಲಿ (Chariot) ನಿಂತು ಪಕ್ಷದ ಪರ ಪ್ರಚಾರ ನಡೆಸುತ್ತಿದ್ದರು. ಈ ವೇಳೆ ವಿಶೇಷವಾಗಿ ವಿನ್ಯಾಸ ಮಾಡಲಾಗಿರುವ ರಥದ ಮೇಲಿನ ಭಾಗ ವಿದ್ಯುತ್ ತಂತಿಗೆ ಸ್ಪರ್ಶಿಸಿದೆ. https://ainlivenews.com/knee-pain-treatment-joint-pain-treatment/ ರಥ ತಾಗಿದ ಕೂಡಲೇ ಕಿಡಿ ಹೊತ್ತಿಕೊಂಡಿದೆ. ಕೂಡಲೇ ರಥದ ಹಿಂದೆ ಇದ್ದ ಇತರ ವಾಹನಗಳನ್ನು ತಕ್ಷಣವೇ ನಿಲ್ಲಿಸಿ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಯಿತು. ಪರ್ಬತ್‌ಸರ್‌ನಲ್ಲಿ ಎರಡೂ ಬದಿಗಳಲ್ಲಿ ಅಂಗಡಿಗಳು ಮತ್ತು ಮನೆಗಳಿರುವ ಸಾಲಿನಲ್ಲಿ ಸಂಚರಿಸುತ್ತಿದ್ದಾಗ ಈ ಘಟನೆ ನಡೆದಿದೆ. ಈ ಘಟನೆಯ ಬಳಿಕ ಶಾ ಅವರು ಮತ್ತೊಂದು ವಾಹನದ ಮೂಲಕ ಪರ್ಬತ್ಸರ್‌ಗೆ ತೆರಳಿ ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಿದರು.
ಕನ್ನಡ ಚಿತ್ರರಂಗದ ಇವೆಂಟ್ ಹಾಗೂ ಪತ್ರಿಕಾಗೋಷ್ಠಿಗಳನ್ನು ನಡೆಸಲು ಸುಸಜ್ಜಿತವಾದ ಸಭಾಂಗಣ MMB legacy ಆರಂಭವಾಗಿ ಒಂದು ವರ್ಷಗಳಾಗಿದೆ. ಈ ಸಂಭ್ರಮವನ್ನು ಸಂಭ್ರಮಿಸಲು ಎಂ.ಎಂ.ಬಿ ಲೆಗಸಿಯ ಮುಖ್ಯಸ್ಥ ನವರಸನ್ ಅದ್ದೂರಿ ಸಮಾರಂಭ ಆಯೋಜಿಸಿದ್ದರು. ಇದೇ ಸಂದರ್ಭದಲ್ಲಿ ಮೈ ಮೂವೀ ಬಜಾರ್ ಪ್ರಶಸ್ತಿ ಲೋಗೊ ಸಹ ಅನಾವರಣವಾಯಿತು. ವಿನೋದ್ ಪ್ರಭಾಕರ್, ಅಭಿಷೇಕ್ ಅಂಬರೀಶ್, ಚಂದನ್ ಶೆಟ್ಟಿ, ಸಂಜನಾ ಆನಂದ್, ಅಪೂರ್ವ ಸೇರಿ ಮೈ ಮೂವೀ ಬಜಾರ್ ನ ಪ್ರಶಸ್ತಿ ಅನಾವರಣ ಮಾಡಿದರು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಎನ್ ಎಂ ಸುರೇಶ್, ಮಾಜಿ ಅಧ್ಯಕ್ಷರಾದ ಕೆ.ವಿ.ಚಂದ್ರಶೇಖರ್, ಭಾ.ಮ.ಹರೀಶ್, ನಿರ್ಮಾಪಕರಾದ ಸಂಜಯ್ ಗೌಡ, ರಮೇಶ್ ರೆಡ್ಡಿ, ದೇವೇಂದ್ರ, ಭಾ.ಮ.ಗಿರೀಶ್, ಜಗದೀಶ್, ಕೃಷ್ಣ ಸಾರ್ಥಕ್, ರಾಜೇಶ್, ಗಿರೀಶ್ ಕುಮಾರ್, ಗೋವಿಂದರಾಜು, ಚೇತನ್ ಗೌಡ, ರವಿರಾಜ್, ಶ್ರೀನಿವಾಸ್ (ಹೈದರಾಬಾದ್) ಹಾಗೂ ನಿರ್ದೇಶಕರಾದ ಹರಿ ಸಂತು, ಮಹೇಶ್ ಕುಮಾರ್ ಮುಂತಾದ ಗಣ್ಯರು ಸಮಾರಂಭಕ್ಕೆ ಆಗಮಿಸಿ ಪ್ರೋತ್ಸಾಹದ ಮಾತುಗಳ ಮೂಲಕ ಶುಭಾಶಯ ಕೋರಿದರು. ಈ ಸಂದರ್ಭದಲ್ಲಿ ಮಾತನಾಡಿದ ನವರಸನ್, MMB…
ಬೆಂಗಳೂರು: ಈ ತಿಂಗಳ ಅಂತ್ಯದಲ್ಲಿ ಮೂರು ದಿನ ಸತ್ಯಾಗ್ರಹ ಮಾಡುತ್ತೇನೆ. ವಿಧಾನಸೌಧ ಅಥವಾ ಫ್ರೀಡಂಪಾರ್ಕ್ನಲ್ಲಿ ಸತ್ಯಾಗ್ರಹ ಮಾಡ್ತೇನೆ. ನಾಳೆ ಸತ್ಯಾಗ್ರಹದ ದಿನಾಂಕ ನಿಗದಿ ಮಾಡುತ್ತೇನೆ ಎಂದು ಬೆಂಗಳೂರಿನಲ್ಲಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ತಿಳಿಸಿದರು. ಚುನಾವಣಾ ರಾಜಕೀಯದಿಂದ ಡಿ.ವಿ.ಸದಾನಂದಗೌಡ ನಿವೃತ್ತಿ ವಿಚಾರ ಸಂಬಂಧ ಬೆಂಗಳೂರಿನಲ್ಲಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಪ್ರತಿಕ್ರಿಯೆ ನೀಡಿದ್ದಾರೆ. ಹೈಕಮಾಂಡ್ ಸೂಚನೆ ಮೇರೆಗೆ ಸದಾನಂದಗೌಡ ನಿವೃತ್ತಿ ಘೋಷಣೆ ಮಾಡಿದ್ದಾರೆ. ಸಂಸದ ಡಿ.ವಿ.ಸದಾನಂದಗೌಡಗೆ ಹೈಕಮಾಂಡ್ ಸೂಚನೆ ಕೊಟ್ಟಿದೆ. ಪಕ್ಷದ ಕೆಲಸಗಳಲ್ಲಿ ಸಕ್ರಿಯರಾಗಿ ಇರಲು ಹೈಕಮಾಂಡ್ ಹೇಳಿದೆ. ಚುನಾವಣೆಗೆ ನಿಲ್ಲದಂತೆ ಸದಾನಂದಗೌಡಗೆ ಹೈಕಮಾಂಡ್ ಸೂಚಿಸಿದೆ ಎಂದು ತಿಳಿಸಿದರು.
ಚಿಕ್ಕಬಳ್ಳಾಪುರ: KSRTC ಬಸ್ ಹಾಗೂ ಮಿನಿ ಬಸ್ ನಡುವೆ ಭೀಕರ ಅಪಘಾತ (Road accident) ಸಂಭವಿಸಿದ್ದು, ಓರ್ವ ಸ್ಥಳದಲ್ಲೇ ಸಾವು ಮೂವರ ಸ್ಥಿತಿ ಗಂಭೀರ 30ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯವಾಗಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕು ಚಿನ್ನಸಂದ್ರ ಗೇಟ್ ಬಳಿ ಘಟನೆ ನಡೆದಿದೆ. ಮಿನಿ ಬಸ್‌ನಲ್ಲಿದ್ದ ಒಬ್ಬ ಮೃತಪಟ್ಟಿದ್ದು, ಮೂವರ ಸ್ಥಿತಿ ಚಿಂತಾಜನಕವಾಗಿದೆ. https://ainlivenews.com/knee-pain-treatment-joint-pain-treatment/ ಗಾಯಾಳುಗಳನ್ನು ಚಿಂತಾಮಣಿಯ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಅಪಘಾತದ ರಭಸಕ್ಕೆ ಮಿನಿ ಬಸ್ ನಜ್ಜುಗುಜ್ಜಾಗಿ ಛಿದ್ರ ಛಿದ್ರವಾಗಿದೆ. ಕೈವಾರ ಮೂಲದ ಇಲ್ಲು (40) ಮೃತ ವ್ಯಕ್ತಿ. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಅಪಘಾತದಿಂದಾಗಿ ಚಿಂತಾಮಣಿ – ಬೆಂಗಳೂರು ಮಾರ್ಗದಲ್ಲಿ ಟ್ರಾಫಿಕ್ ಜಾಮ್ ಉಂಟಾಯಿತು.
ಬೆಂಗಳೂರು: ಉಸಿರುಗಟ್ಟಿಸಿ ಮಹಿಳೆಯನ್ನು ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಕೂಡ್ಲು ಬಳಿಯ ನಂಜಾರೆಡ್ಡಿ ಲೇಔಟ್ ನಲ್ಲಿ ನಡೆದಿದೆ. ಅನುರಾಧ ಅಲಿಯಾಸ್ ಅಲೀಮಾ ಅಸಹಜ ರೀತಿಯಲ್ಲಿ ಕೊಲೆಯಾದ ಮಹಿಳೆ ಎಂದು ಗುರುತಿಸಲಾಗಿದೆ. ರಾಜಶೇಖರ ಮಹಿಳೆಯನ್ನು ಕೊಲೆ ಮಾಡಿದ್ದ ಆರೋಪಿ, ಆರಂಭದಲ್ಲಿ ಈ ಘಟನೆ ಸಂಬಂಧಿಸಿ ಅಸಹಜ ಸಾವು ಎಂದು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಆದರೇ ಮರಣೋತ್ತರ ಪರೀಕ್ಷೆ ವರದಿ ಬಂದ ನಂತರ ಮಹಿಳೆಯನ್ನು ಕೊಲೆ ಮಾಡಲಾಗಿದೆ ಎಂಬ ಸಾವಿನ ಸಿಕ್ರೇಟ್ ಬಯಲಾಗಿದೆ. ರಾಜಶೇಖರನ ಜೊತೆ ಅನುರಾಧ ಎರಡನೇ ಮದುವೆಯಾಗಿದ್ದಳು. ರಾಜಶೇಖರಗೆ ಬೇರೊಬ್ಬ ಮಹಿಳೆ ಜೊತೆಗೆ ಸಂಬಂಧ ಇದೆ ಅನ್ನೋ ವಿಚಾರಕ್ಕೆ ಗಲಾಟೆ ತೀವ್ರಗೊಂಡು, ಕೈಗಳಿಂದ ಕುತ್ತಿಗೆ ಹಿಸುಕಿ ನಂತರ ವೇಲ್ನಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದಾನೆ. ಬಳಿಕ ಅವನೇ ಮಹಿಳೆಯನ್ನ ಆಸ್ಪತ್ರೆಗೆ ದಾಖಲು ಮಾಡಿದ್ದಾನೆ. ಪೊಲೀಸ್ ಠಾಣೆಗೆ ಅಗಮಿಸಿದ ಆರೋಪಿ ಆತ್ಮಹತ್ಯೆ ಎಂದು ಪೊಲೀಸರನ್ನು ನಂಬಿಸಿದ್ದಾನೆ. ಇದರ ಪ್ರಕಾರ ಪರಪ್ಪನ ಅಗ್ರಹಾರ ಪೊಲೀಸರು ಆತ್ಮಹತ್ಯೆ ಪ್ರಕರಣ ಎಂದು ದಾಖಲು ಮಾಡಿಕೊಂಡಿದ್ದರು. ಮರಣೋತ್ತರ ಪರೀಕ್ಷೆ ವರದಿ…