ಹುಬ್ಬಳ್ಳಿ: ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆ ಸರಿದೂಗಿಸುವ ಸಲುವಾಗಿ ತಮಿಳುನಾಡಿನ ನಾಗರಕೋಯಿಲ್ ಮತ್ತು ಎಸ್‌ಎಂವಿಟಿ ಬೆಂಗಳೂರು ನಿಲ್ದಾಣಗಳ ನಡುವೆ ಮೂರು ಟ್ರಿಪ್‌ಗಳಿಗಾಗಿ ವಿಶೇಷ ರೈಲುಗಳನ್ನು ಓಡಿಸಲು ದಕ್ಷಿಣ ರೈಲ್ವೆ ವಲಯವು ನಿರ್ಧರಿಸಿದೆ. ಈ ಕುರಿತು ಬುಧವಾರ ನೈರುತ್ಯ ರೈಲ್ವೆ ಇಲಾಖೆ ಮಾಹಿತಿ ನೀಡಿದ್ದು, ನ.7, 14 ಮತ್ತು 21ರಂದು ನಾಗರಕೋಯಿಲ್-ಎಸ್‌ಎಂವಿಟಿ ಬೆಂಗಳೂರು ವಿಶೇಷ ಎಕ್ಸ್‌ಪ್ರೆಸ್ (06083) ರೈಲು ಸಂಜೆ 7:35 ಗಂಟೆಗೆ ನಾಗರ ಕೋಯಿಲ್‌ನಿಂದ ಹೊರಟು ಮರುದಿನ ಮಧ್ಯಾಹ್ನ 12:40 ಗಂಟೆಗೆ ಬೆಂಗಳೂರು ತಲಿಪಲಿದೆ. ಅದೇರೀತಿ ನ. 8, 15ಮತ್ತು22ರಂದು ಎಸ್‌ಎಂವಿಟಿ ಟರ್ಮಿನಲ್‌ಬೆಂಗಳೂರು-ನಾಗರಕೋಯಿಲ್ ವಿಶೇಷ ಎಕ್ಸ್‌ಪ್ರೆಸ್ (06084) ರೈಲು ಮಧ್ಯಾಹ್ನ 2 ಗಂಟೆಗೆ ಬೆಂಗಳೂರಿನಿಂದ ಹೊರಟು ಮರುದಿನ ಬೆಳಗ್ಗೆ 6:10 ಗಂಟೆಗೆ ನಾಗರಕೋಯಿಲ್ ತಲುಪಲಿದೆ. ಈ ವಿಶೇಷ ರೈಲುಗಳು ವಲ್ಲಿಯೂರ್, ತಿರುನೆಲ್ವೇಲಿ, ಕೋವಿಲ್ಪಟ್ಟಿ, ಸತೂರ್, ವಿರುಧುನಗರ, ಮಧುರೈ, ದಿಂಡಿಗಲ್, ತಿರುಚ್ಚಿರಾಪಳ್ಳಿ, ಕರೂರ, ನಮಕ್ಕಲ್, ಸೇಲಂ, ಮೊರಪ್ಪೂರ್, ತಿರುಪತ್ತೂರು, ಬಂಗಾರಪೇಟೆ, ಕೃಷ್ಣರಾಜಪುರಂಗಳಲ್ಲಿ ನಿಲುಗಡೆಗೊಳ್ಳಲಿವೆ. ವಿಶೇಷ ರೈಲುಗಳಲ್ಲಿ ಒಂದು ಎಸಿ ಟು-1ಟೈರ್,…
Author: AIN Author
ಮಡಿಕೇರಿ: ವಿವಾಹಿತ ಮಹಿಳೆಯಿಂದ ಹಾನಿಟ್ಯ್ರಾಪ್‌ಗೆ ಒಳಗಾದ ನಿವೃತ್ತ ಯೋಧ ಡೆತ್ ನೋಟ್ ಬರೆದಿಟ್ಟು ಮಂಗಳವಾರ ರಾತ್ರಿಯಿಂದ ನಾಪತ್ತೆಯಾಗಿದ್ದರು. ಅವರ ಮೃತದೇಹ ಇದೀಗ ಅವರ ಮನೆ ಸಮೀಪದ ಪಂಪಿನ ಕೆರೆಯಲ್ಲಿ ಪತ್ತೆಯಾಗಿದೆ. ಮೃತ ಮಾಜಿ ಯೋಧನನ್ನು ಸಂದೇಶ್ ಎಂದು ಗುರುತಿಸಲಾಗಿದೆ. ಮಾಜಿ ಯೋಧ ಕಣ್ಮರೆಯಾಗಿ 30 ಗಂಟೆಗಳ ಬಳಿಕ ಮೃತದೇಹ ಪತ್ತೆಯಾಗಿದೆ. ಬುಧವಾರ ರಾತ್ರಿ 8:20 ರ ಸುಮಾರಿಗೆ ಕೆರೆಯ 40 ಆಡಿ ಆಳದಲ್ಲಿ ಸಂದೇಶ್ ಮೃತದೇಹ ಪತ್ತೆಯಾಗಿದೆ. ಬೆಳಗ್ಗೆಯಿಂದಲೂ ಅಗ್ನಿಶಾಮಕ ದಳ, ಸ್ಥಳೀಯರು ಕೆರೆಯಲ್ಲಿ ಹುಡುಕಾಟ ನಡೆಸಿದ್ದರು. ಯಾವುದೇ ಪ್ರಯೋಜನ ಆಗದೇ ಇದ್ದ ಸಂದರ್ಭದಲ್ಲಿ ಮಲ್ಪೆಯ ಹೆಸರಾಂತ ಮುಳುಗು ತಜ್ಞ ಈಶ್ವರ್ ಮತ್ತು ತಂಡದವರನ್ನು ಕರೆಸಿ ಮೃತದೇಹದ ಶೋಧ ಕಾರ್ಯವನ್ನು ಮಾಡಲಾಗಿತ್ತು. 1 ಗಂಟೆಗೂ ಅಧಿಕ ಕಾಲ ಕರೆಯಲ್ಲಿ ಆಕ್ಸಿಜನ್‌ನೊಂದಿಗೆ ಶೋಧ ಕಾರ್ಯ ನಡೆಸಲಾಗಿದ್ದು, ಈ ವೇಳೆ ಮಾಜಿ ಯೋಧನ ಮೃತ ದೇಹ ಪತ್ತೆಯಾಗಿದೆ. ಹನಿಟ್ರ್ಯಾಪ್ ಬಲೆಗೆ ಬಿದ್ದಿದ್ದ ಮಾಜಿ ಸೈನಿಕ ಸಂದೇಶ್ ತನ್ನ ಸಾವಿಗೆ ಜೀವಿತ, https://ainlivenews.com/knee-pain-treatment-joint-pain-treatment/ ಆಕೆಯನ್ನು ಬೆಂಬಲಿಸುತ್ತಿದ್ದ ಪೊಲೀಸ್ ಸತೀಶ್…
ಕಲಬುರಗಿ: ಕೆಇಎ ಪರೀಕ್ಷೆ ಅಕ್ರಮದ ಆರೋಪಿ R.D.ಪಾಟೀಲ್ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿ ಇಂದು ಕಲಬುರಗಿ ಹೈಕೋರ್ಟ್ನಲ್ಲಿ ಜಾಮೀನು ಅರ್ಜಿ ವಿಚಾರಣೆ ಸಾಧ್ಯತೆ. ಈ ಹಿಂದೆ ಕಲಬುರಗಿ ಜಿಲ್ಲಾ 1ನೇ ಸತ್ರ ನ್ಯಾಯಾಲಯ ಅರ್ಜಿ ತಿರಸ್ಕರಿಸಿತ್ತು. ಹೀಗಾಗಿ ರುದ್ರಗೌಡ ಜಾಮೀನಿಗಾಗಿ ಹೈಕೋರ್ಟ್ ಮೊರೆ ಹೋಗಿದ್ದ. ಹೊರಗಡೆ ಇದ್ದುಕೊಂಡೇ ಜಾಮೀನು ಪಡೆಯಲು ಯತ್ನಿಸುತ್ತಿದ್ದಾನೆ. ಇಂದು ಜಾಮೀನು ಸಿಗದಿದ್ರೆ ಕೋರ್ಟ್ಗೆ ರುದ್ರಗೌಡ ಶರಣಾಗುವ ಸಾಧ್ಯತೆ ಇದೆ.
ಬೆಂಗಳೂರು: ಚುನಾವಣಾ ರಾಜಕೀಯದಿಂದ ಡಿ.ವಿ.ಸದಾನಂದಗೌಡ ನಿವೃತ್ತಿ ವಿಚಾರ ಸಂಬಂಧ ಬೆಂಗಳೂರಿನಲ್ಲಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಪ್ರತಿಕ್ರಿಯೆ ನೀಡಿದ್ದಾರೆ. ಹೈಕಮಾಂಡ್ ಸೂಚನೆ ಮೇರೆಗೆ ಸದಾನಂದಗೌಡ ನಿವೃತ್ತಿ ಘೋಷಣೆ ಮಾಡಿದ್ದಾರೆ. ಸಂಸದ ಡಿ.ವಿ.ಸದಾನಂದಗೌಡಗೆ ಹೈಕಮಾಂಡ್ ಸೂಚನೆ ಕೊಟ್ಟಿದೆ. ಪಕ್ಷದ ಕೆಲಸಗಳಲ್ಲಿ ಸಕ್ರಿಯರಾಗಿ ಇರಲು ಹೈಕಮಾಂಡ್ ಹೇಳಿದೆ. ಚುನಾವಣೆಗೆ ನಿಲ್ಲದಂತೆ ಸದಾನಂದಗೌಡಗೆ ಹೈಕಮಾಂಡ್ ಸೂಚಿಸಿದೆ ಎಂದು ತಿಳಿಸಿದರು.
ಮಧುಗಿರಿ;- ಕೇಂದ್ರದ ಬಿಜೆಪಿಗೆ ಕರ್ನಾಟಕದ ಬಗ್ಗೆ ಕೇಂದ್ರಕ್ಕೆ ಕಾಳಜಿ ಇಲ್ಲ ಎಂದು ಸಚಿವ ಜಿ ಪರಮೇಶ್ವರ್ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಕೇಂದ್ರ ಸರ್ಕಾರ ರಾಜ್ಯದ ರೈತರ ಬಗ್ಗೆ ಮಲತಾಯಿ ಧೋರಣೆ ಅನುಸರಿಸುತ್ತಿದೆ. ಕೇಂದ್ರದ ಬರ ಅದ್ಯಯನ ತಂಡ ರಾಜ್ಯದಲ್ಲಿ ಬರ ಪರಿಸ್ಥಿತಿ ಪರಿಶೀಲಿಸಿ ವರದಿ ನೀಡಿದ ನಂತರವೂ ಕೇಂದ್ರದಿಂದ ನಯಾಪೈಸೆ ಹಣ ಬಿಡುಗಡೆ ಮಾಡಿಲ್ಲ’ ಎಂದರು. ರಾಜ್ಯದ 223 ತಾಲ್ಲೂಕುಗಳನ್ನು ಬರಪೀಡಿತ ಎಂದು ರಾಜ್ಯ ಸರ್ಕಾರ ಘೋಷಿಸಿದೆ. ರಾಜ್ಯದ ರೈತರ ಕಷ್ಟಗಳಿಗೆ ಕೇಂದ್ರ ಸರ್ಕಾರ ಸ್ಪಂದಿಸುತ್ತಿಲ್ಲ. ರಾಜಕೀಯಕ್ಕಾಗಿ ಬಿಜೆಪಿ ಬರ ಅಧ್ಯಯನ ಮಾಡುತ್ತಿದೆ. ರಾಜ್ಯದಿಂದ ಆಯ್ಕೆಯಾಗಿರುವ ಬಿಜೆಪಿ ಸಂಸದರು ಹಣ ಕೊಡಿಸುವ ಕೆಲಸ ಮಾಡಬೇಕು ಎಂದರು. ಶೇ 75 ಮಳೆ ಕುಂಠಿತವಾಗಿದೆ. ₹37 ಸಾವಿರ ಕೋಟಿ ನಷ್ಟವಾಗಿದೆ. ಕೆಂದ್ರ ಸರ್ಕಾರಕ್ಕೆ ₹17 ಸಾವಿರ ಕೋಟಿ ನಷ್ಟ ಬರಿಸಿ ಕೊಡಲು ಪ್ರಸ್ತಾವನೆ ಸಲ್ಲಿಸಲಾಗಿದೆ. ಆದರೆ ಈವರೆಗೆ ಹಣ ಬಿಡುಗಡೆ ಮಾಡಿಲ್ಲ. ರಾಜ್ಯದ ಬರ ಪರಿಸ್ಥಿತಿ ವಿವರಿಸಲು ಕೃಷಿ ಸಚಿವ ಕೃಷ್ಣ ಬೈರೇಗೌಡ…
ವಾಷಿಂಗ್ಟನ್: ಗಾಜಾ ಪಟ್ಟಿಯನ್ನು (Gaza Strip) ಆಕ್ರಮಿಸುವ ಇಸ್ರೇಲ್ (Israel) ನಡೆಗೆ ಅಮೆರಿಕ ವಿರೋಧ ವ್ಯಕ್ತಪಡಿಸಿದೆ. ಇದು ಇಸ್ರೇಲಿ ಜನರಿಗೆ ಒಳ್ಳೆಯದಲ್ಲ ಎಂದು ಅಮೆರಿಕ (America) ಎಚ್ಚರಿಕೆ ನೀಡಿದೆ. ಇಸ್ರೇಲಿ ಯೋಧರು ಗಾಜಾ ನಗರದ ಹೃದಯ ಭಾಗದಲ್ಲಿದ್ದಾರೆ ಎಂದು ಈಚೆಗೆ ಘೋಷಿಸಲಾಗಿದೆ. ಇದರ ಬೆನ್ನಲ್ಲೇ ಅಮೆರಿಕ ಎಚ್ಚರಿಕೆ ಸಂದೇಶ ರವಾನಿಸಿದೆ. ಶ್ವೇತಭವನದ ರಾಷ್ಟ್ರೀಯ ಭದ್ರತಾ ಮಂಡಳಿಯ ವಕ್ತಾರ ಜಾನ್ ಕಿರ್ಬಿ, ಇಸ್ರೇಲಿ ಪಡೆಗಳಿಂದ ಗಾಜಾವನ್ನು ಮರು ಆಕ್ರಮಣ ಮಾಡುವುದು ಒಳ್ಳೆಯದಲ್ಲ ಎಂದು ಅಧ್ಯಕ್ಷರು (ಜೋ ಬೈಡೆನ್) ಭಾವಿಸಿದ್ದಾರೆ. ಇದು ಇಸ್ರೇಲ್ ಹಾಗೂ ದೇಶದ ಜನತೆಗೆ ಒಳ್ಳೆಯದಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. https://ainlivenews.com/knee-pain-treatment-joint-pain-treatment/ ಭವಿಷ್ಯದ ದಾಳಿಗಳನ್ನು ತಡೆಗಟ್ಟಲು ಹೋರಾಟ ಮುಗಿದ ನಂತರ ಇಸ್ರೇಲ್, ಗಾಜಾ ಪಟ್ಟಿಯ ಭದ್ರತೆಯನ್ನು ಮೇಲ್ವಿಚಾರಣೆ ಮಾಡಬೇಕಾಗುತ್ತದೆ ಎಂದು ನೆತನ್ಯಾಹು ಹೇಳಿಕೆ ನೀಡಿದ್ದಾರೆ. ಇದಕ್ಕೆ ಅಮೆರಿಕ ಆಕ್ಷೇಪ ವ್ಯಕ್ತಪಡಿಸಿದ್ದು, ಎಚ್ಚರಿಕೆಯ ಮಾತನ್ನಾಡಿದೆ. ಗಾಜಾವನ್ನು ಇಸ್ರೇಲ್ ಆಕ್ರಮಿಸಿಕೊಳ್ಳುವುದು ದೊಡ್ಡ ತಪ್ಪು ಎಂದು ಕೆಲ ದಿನಗಳ ಹಿಂದೆ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಅಭಿಪ್ರಾಯಪಟ್ಟಿದ್ದರು. ಇದೇ…
ರಾಮನಗರ : ರಾಜ್ಯದಲ್ಲಿ ಲೋಕಸಭಾ ಚುನಾವಣೆಗೂ ಮುನ್ನ ಪ್ರತಿನಿತ್ಯ ನೀವು ಬನ್ನಿ ನೀವು ಬನ್ನಿ.. ಅಂತ ಎಲ್ಲರನ್ನೂ ಕರಿತಿದಾರೆ. ಕಾಂಗ್ರೆಸ್ ಸಭೆಯಲ್ಲಿ ಕನಿಷ್ಠ 50 ಜನರನ್ನಾದರೂ ಪಕ್ಷಕ್ಕೆ ಕರೆತರಬೇಕು ಎಂದು ಮುಖ್ಯಮಂತ್ರಿಗಳೇ ಶಾಸಕರಿಗೆ ಟಾರ್ಗೆಟ್ ನೀಡಿದ್ದರು. ಹೀಗಾಗಿ ಪ್ರತಿನಿತ್ಯ ಕಾಂಗ್ರೆಸ್‌ನವರು ನಮ್ಮ ಶಾಸಕರ ಮನೆ ಬಾಗಿಲು ಕಾಯೋದು ಬೇಡ. ಅವರು ಒಳ್ಳೆಯ ಕೆಲಸ ಮಾಡಿದ್ರೆ, ನಾನೇ ಎಲ್ಲರನ್ನೂ ಕಳಿಸಿಕೊಡ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹೇಳಿದರು. https://ainlivenews.com/knee-pain-treatment-joint-pain-treatment/ ರಾಮನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಕುಮಾರಸ್ವಾಮಿ ಅವರು, ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಯಾದರೆ ನಮ್ಮ ಬೆಂಬಲವಿದೆ ಎಂದು ನಾನು ವ್ಯಂಗ್ಯವನ್ನು ಮಾಡಿದ್ದೇನೆ. ಅವರು ದಿನ ನೀವು ಬನ್ನಿ.. ನೀವು ಬನ್ನಿ ಅಂತ ಎಲ್ಲರನ್ನೂ ಕರಿತಾ ಇದಾರೆ. ಮುಖ್ಯಮಂತ್ರಿಗಳೆ ಹೇಳಿದ್ದಾರಲ್ವಾ.? ಕನಿಷ್ಠ 50 ಜನನನ್ನಾದ್ರು ಪಕ್ಷ ಕರೆ ತರಬೇಕು ಅಂತ ಅವರ ಪಕ್ಷದ ಶಾಸಕರಿಗೆ ಹೇಳಿದ್ದಾರೆ. ಹೀಗಾಗಿ, ಪ್ರತಿ ನಿತ್ಯ ನಮ್ಮ ಶಾಸಕರ ಮನೆ ಮುಂದೆ ಯಾಕೆ ಹೋಗ್ತೀರಾ. ಒಳ್ಳೆ ಕೆಲಸ ಮಾಡ್ತೀರಾ ಅಂದ್ರೆ ಎಲ್ಲರನ್ನು ಕಳುಹಿಸುತ್ತೇನೆ…
ಚಾಮರಾಜನಗರ: ಮುಖ್ಯಮಂತ್ರಿ ಬದಲಾವಣೆ ವಿಚಾರವನ್ನ ನಾನು ಹೇಳುತ್ತಿಲ್ಲ. ಕಾಂಗ್ರೆಸ್ ನವರೇ ಪ್ರಸ್ತಾಪಿಸುತ್ತಿದ್ದಾರೆ ಎಂದು ಮುಖ್ಯಮಂತ್ರಿ ಬದಲಾವಣೆ ವಿಚಾರದ ತಮ್ಮ ಹೇಳಿಕೆಗೆ ಗರಂ ಆಗಿದ್ದ ಸಿದ್ದರಾಮಯ್ಯನವರಿಗೆ ಈ ಮೂಲಕ ಯತ್ನಾಳ್ ತಿರುಗೇಟು ನೀಡಿದರು. ಹೈಕಮಾಂಡ್ ಹೂಂ ಅಂದ್ರೆ ನಾನು ಮುಖ್ಯಮಂತ್ರಿ ಆಗ್ತೀನಿ ಎಂದು ಸಚಿವ ಪ್ರಿಯಾಂಕ ಖರ್ಗೆ ಒಂದು ಕಡೆ ಹೇಳಿದರೆ, ಸಿದ್ದರಾಮಯ್ಯರಿಗೆ ಮಾನಸಿಕವಾಗಿ ಚಿತ್ರ ಹಿಂಸೆ ಕೊಟ್ಟರೆ ನಾವು ಡಾ.ಪರಮೇಶ್ವರವರನ್ನು ಶಿಫಾರಸ್ಸು ಮಾಡುತ್ತೇವೆ ಎಂದು ಸಚಿವ ರಾಜಣ್ಣನವರೇ ಮತ್ತೊಂದು ಕಡೆ ಹೇಳಿದ್ದಾರೆ ಎಂದರು. https://ainlivenews.com/knee-pain-treatment-joint-pain-treatment/ 5 ವರ್ಷ ಸಿದ್ದರಾಮಯ್ಯರೇ ಮುಖ್ಯಮಂತ್ರಿ ಅಂತ ಹೇಳಿದವರು ಈಗ ಯಾಕೆ ಪರಮೇಶ್ವರ್ ಹೆಸರನ್ನ ತೆಗೆದು ಕೊಂಡರು? 2013 ರ ಚುನಾವಣೆಯಲ್ಲಿ ಪರಮೇಶ್ವರ್ ರನ್ನು ಸೋಲಿಸಿದವರು ಯಾರು? ಪರಮೇಶ್ವರ್ ಮನೆಗೆ ತೆರಳಿ ಮಾಡಿಕೊಂಡ ಒಳ ಒಪ್ಪಂದ ಏನಾಯ್ತು? ಹಾಗೇ ಉಪಾಹಾರ ಮಾಡಬೇಕಿದ್ರೆ ಎಲ್ಲಾ ಸಚಿವರನ್ನ ಕರೆಯಬೇಕಿತ್ತಲ್ವಾ? ನೀವು ಡಿಕೆಶಿ ಇಬ್ಬರೂ ಕೂಡ ಕರೆದು ಮುಖ್ಯಮಂತ್ರಿ ವಿಚಾರ ಕುರಿತು ಮಾತನಾಡಬಾರದು ಎಂದು ವಾರ್ನಿಂಗ್ ನೀಡಿದರೂ ಮದ್ದೂರು ಶಾಸಕ ಉದಯ್ ಡಿಕೆಶಿ…
ಬಾಗಲಕೋಟೆ: ಪ್ರಧಾನಿ ಹೇಳಿಕೆ ಗಮನಿಸಿದರೆ ಅವರು ನಮ್ಮ ಸರ್ಕಾರವನ್ನು ಅಲುಗಾಡಿಸುವ ಆಲೋಚನೆ ಮಾಡಿದಂತೆ ಭಾಸವಾಗುತ್ತಿದೆ ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ಹೇಳಿದರು. ಬಾಗಲಕೋಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಎಷ್ಟು ದಿನ ಸಿಎಂ ಆಗಿರುತ್ತಾರೆ ಎಂಬುದು ಅವರಿಗೇ ಗೊತ್ತಿಲ್ಲ, ಸಿಎಂ, ಡಿಸಿಎಂ ಸೇರಿ ಕರ್ನಾಟಕ ರಾಜ್ಯವನ್ನು ಲೂಟಿ ಮಾಡುತ್ತಿದ್ದಾರೆ ಎಂಬ ಮೋದಿ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಹಿಂದೆಯೂ ಒಮ್ಮೆ ಪ್ರಧಾನಿ ನಮ್ಮ ಸರ್ಕಾರವನ್ನು ಅಲುಗಾಡಿಸುವ ಆಲೋಚನೆ ಮಾಡಿದ್ದರು. ಈಗಲೂ ನಾವು ಅದೇ ರೀತಿ ಅರ್ಥ ಮಾಡಿಕೊಳ್ಳಬೇಕಾಗುತ್ತದೆ. ಆದರೆ, ಪ್ರಧಾನಿಯವರ ಯಾವ ಪ್ರಯತ್ನವೂ ಈಡೇರುವುದಿಲ್ಲ. ನಮ್ಮಲ್ಲಿ ಒಗ್ಗಟ್ಟಿದೆ, ಸಹಮತವಿದೆ, ನಾವೆಲ್ಲರೂ ಒಂದಾಗಿದ್ದೇವೆ ಎಂದು ಹೇಳಿದರು. ರಾಜ್ಯ-ಕೇಂದ್ರ ಸರ್ಕಾರಗಳ ಸಂಘರ್ಷದಲ್ಲಿ ರಾಜ್ಯದ ಜನರಿಗೆ ಅನ್ಯಾಯ ಆಗುತ್ತಿದೆಯಾ ಎಂಬ ಪ್ರಶ್ನೆಗೆ ಉತ್ತರಿಸಿದ ಕಂದಾಯ ಸಚಿವರು, https://ainlivenews.com/knee-pain-treatment-joint-pain-treatment/ ಕೇಂದ್ರ ಸರ್ಕಾರದೊಂದಿಗೆ ಯಾವುದೇ ರೀತಿಯ ಸಂಘರ್ಷ ಮಾಡುವ ಉದ್ದೇಶ ನಮಗಿಲ್ಲ. ನಿಯಮಬದ್ಧವಾಗಿ ನಮಗೆ ಬರಬೇಕಾದ ಹಣದ ಪ್ರತಿ ಪೈಸೆಯನ್ನು ಪಡೆಯುವುದು ನಮ್ಮ ಹಕ್ಕು. ಅದನ್ನು ನಾವು ರಾಜ್ಯದ…
ಬೆಂಗಳೂರು: ಶ್ರೀಲಂಕಾದ ಏಂಜಲೋ ಮಾಥ್ಯೂಸ್ (Angelo Mathews) ಮತ್ತು ಬಾಂಗ್ಲಾದೇಶ ಶಕಿಬ್ ಉಲ್ ಹಸನ್ (Shakib Al Hasan) ಕಿತ್ತಾಟದ ಮಧ್ಯೆ ವೀರೇಂದ್ರ ಸೆಹ್ವಾಗ್ ಸುದ್ದಿಯಾಗುತ್ತಿದ್ದಾರೆ. ದೆಹಲಿಯಲ್ಲಿ ನಡೆದ ವಿಶ್ವಕಪ್ ಕ್ರಿಕೆಟ್ ಪಂದ್ಯದಲ್ಲಿ ಏಂಜಲೋ ಮಾಥ್ಯೂಸ್ ಒಂದು ಎಸೆತ ಎದುರಿಸದೇ ಟೈಮ್ಡ್ ಔಟ್‌ಗೆ (timed out) ಬಲಿಯಾಗಿದ್ದರು. ಈ ಮೂಲಕ ಟೈಮ್ಡ್ ಔಟ್‌ಗೆ ಬಲಿಯಾದ ವಿಶ್ವದ ಮೊದಲ ಬ್ಯಾಟರ್ ಎಂಬ ಕುಖ್ಯಾತಿಗೆ ಪಾತ್ರವಾಗಿದ್ದಾರೆ. ಟೈಮ್ಡ್ ಔಟ್ ಮನವಿ ಮಾಡಿದ್ದಕ್ಕೆ ಶಕಿಬ್ ಉಲ್ ಹಸನ್ ಸೇರಿದಂತೆ ಬಾಂಗ್ಲಾ (Bangladesh) ತಂಡದ ಕ್ರೀಡಾ ಸ್ಪೂರ್ತಿಯ ಬಗ್ಗೆ ಹಲವು ಮಂದಿ ಪ್ರಶ್ನೆ ಮಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ಭಾರತ ಕ್ರಿಕೆಟ್ (Team India) ಅಭಿಮಾನಿಗಳು 2010 ಪಂದ್ಯದಲ್ಲಿ ಸೆಹ್ವಾಗ್ (Virender sehwag) ಅವರ ಉದಾಹರಣೆ ನೀಡಿ ಶ್ರೀಲಂಕಾ ತಂಡದ ಕ್ರೀಡಾ ಸ್ಪೂರ್ತಿಯ ಬಗ್ಗೆ ಪ್ರಶ್ನೆ ಕೇಳುತ್ತಿದ್ದಾರೆ. 2010ರಲ್ಲಿ ಏನಾಗಿತ್ತು? ಶ್ರೀಲಂಕಾ, ಭಾರತ, ನ್ಯೂಜಿಲೆಂಡ್ ಮಧ್ಯೆ ಶ್ರೀಲಂಕಾದಲ್ಲಿ ತ್ರಿಕೋನ ಏಕದಿನ ಸರಣಿ ಆಯೋಜನೆಗೊಂಡಿತ್ತು. ಸರಣಿಯ ಮೂರನೇ ಪಂದ್ಯದಲ್ಲಿ ಮೊದಲ ಬ್ಯಾಟ್…