ನವದೆಹಲಿ: ದೇಶಾದ್ಯಂತ ಭಾರತ್ ಅಟ್ಟಾ (Bharat Atta) ಹೆಸರಿನ ಹಿಟ್ಟು ವಿತರಣಾ ವಾಹನಗಳಿಗೆ ಚಾಲನೆ ನೀಡಲಾಗಿದೆ. ಕೇಂದ್ರ ಆಹಾರ ಸಚಿವ ಪಿಯೂಷ್ ಗೋಯಲ್ (Piyush Goyal) ಅವರು ದೆಹಲಿಯಲ್ಲಿ ಮೊಬೈಲ್ ವ್ಯಾನ್‌ಗಳ ಸಂಚಾರಕ್ಕೆ ಹಸಿರು ನಿಶಾನೆ ತೋರಿಸಿದರು. ದೇಶಾದ್ಯಂತ 2 ಸಾವಿರ ಕಡೆ ಈ ಹಿಟ್ಟು ಲಭ್ಯವಾಗಲಿದೆ ಎಂದು ಸರ್ಕಾರದ ಮೂಲಗಳು ಹೇಳಿವೆ. ನ್ಯಾಷನಲ್ ಅಗ್ರಿಕಲ್ಚರಲ್ ಕೋಆಪರೇಟಿವ್ ಮಾರ್ಕೆಟಿಂಗ್ ಫೆಡರೇಶನ್ ಆಫ್ ಇಂಡಿಯಾ ಲಿಮಿಟೆಡ್ (NAFED), ನ್ಯಾಷನಲ್ ಕೋಆಪರೇಟಿವ್ ಕನ್ಸೂಮರ್ಸ್ ಫೆಡರೇಶನ್ ಆಫ್ ಇಂಡಿಯಾ (NCCF), ಸಫಲ್, ಮದರ್ ಡೈರಿ ಮತ್ತು ಇತರ ಸಹಕಾರಿ ಸಂಸ್ಥೆಗಳ ಮೂಲಕ ಮಾರಾಟ ಮಾಡಲಾಗುತ್ತದೆ. ಕೆಜಿಗೆ 27.50 ರೂಪಾಯಿಯಲ್ಲಿ ಗೋಧಿ ಹಿಟ್ಟು ಲಭ್ಯವಾಗಲಿದೆ. ಈ ಯೋಜನೆಗಾಗಿ 2.5 ಲಕ್ಷ ಮೆಟ್ರಿಕ್ ಟನ್ ಗೋಧಿಯನ್ನು ವಿವಿಧ ಸರ್ಕಾರಿ ಸಂಸ್ಥೆಗಳಿಗೆ ಹಂಚಿಕೆ ಮಾಡಲಾಗಿದೆ ಎಂದು ಕೇಂದ್ರ ಸಚಿವ ಪಿಯೂಷ್ ಗೋಯಲ್ ಹೇಳಿದರು. ಗ್ರಾಹಕರ ವ್ಯವಹಾರಗಳ ಇಲಾಖೆಯ ಪ್ರಕಾರ, ಪ್ರಸ್ತುತ ದೇಶದಲ್ಲಿ ಹಿಟ್ಟಿನ ಸರಾಸರಿ ಬೆಲೆ ಕೆಜಿಗೆ 35 ರೂ.ಇದೆ. ಹಣದುಬ್ಬರ…
Author: AIN Author
ನಮಗೆ ಒಣ ದ್ರಾಕ್ಷಿ, ಬಾದಾಮಿ, ಗೋಡಂಬಿ ಇವುಗಳ ಉಪಯೋಗದ ಬಗ್ಗೆ ಗೊತ್ತಿದೆ ಆದರೆ, ಕಪ್ಪು ಒಣದ್ರಾಕ್ಷಿಯ ಬಗೆಗಿನ ಮಾಹಿತಿ ಹೆಚ್ಚು ಜನರಿಗೆ ತಿಳಿದಿಲ್ಲ. ಅಂತಹ ಮಹತ್ವಪೂರ್ಣ ಮಾಹಿತಿಯನ್ನ ನಾವು ನಿಮಗೆ ತಿಳಿಸಿಕೊಡ್ತೀವಿ. https://ainlivenews.com/knee-pain-treatment-joint-pain-treatment/ ದ್ರಾಕ್ಷಿ ಹಣ್ಣನ್ನ ಹಾಗೆ ತಿಂದರು ಕೂಡ ರುಚಿ ಎನಿಸುತ್ತೆ, ಹಾಗೆ ಸಿಹಿ ತಿಂಡಿಗಳಲ್ಲಿ ಬಳಸಿ ತಿಂದ್ರು ಕೂಡ ಚೆನ್ನ. ನಮಗೆ ಗೊತ್ತೊ ಗೊತ್ತಿಲ್ಲದೇನೊ ನಾವು ಕಪ್ಪು ದ್ರಾಕ್ಷಿಯನ್ನ ಬಳಕೆಮಾಡುತ್ತೇವೆ. ಯಾವ ಪದಾರ್ಥವನ್ನಾದರೂ ಸರಿ ಅದರ ಲಾಭಾಂಶಗಳನ್ನ ತಿಳಿದುಕೊಂಡು ಅದನ್ನ ಸರಿಯಾದ ರೀತಿಯಲ್ಲಿ ಸೇವಿಸಿದರೆ ಬಹಳಷ್ಟು ಉಪಯುಕ್ತ. ಹಾಗೆಯೇ ಕಪ್ಪು ಒಣದ್ರಾಕ್ಷಿಯಿಂದ ನಮ್ಮ ಆರೋಗ್ಯಕ್ಕೆ ಆಗುವ ಪ್ರಯೋಜನವನ್ನ ತಿಳಿದರೆ ನಿಜಕ್ಕೂ ಅಚ್ಚರಿಯಾಗೋದು ಖಂಡಿತ. ಕಪ್ಪು ಒಣ ದ್ರಾಕ್ಷಿಯನ್ನ ತಿನ್ನೋದ್ರಿಂದ ಸಿಗುವ ಲಾಭಗಳು: 1. ರಕ್ತದ ಶುದ್ಧೀಕರಣ 2. ಕೂದಲಿನ ಆರೋಗ್ಯ 3. ಮೂಳೆಗಳ ಆರೋಗ್ಯ 4. ಅಧಿಕ ರಕ್ತದ ಒತ್ತಡದ ನಿಯಂತ್ರಣ 5. ಕೊಲೆಸ್ಟ್ರಾಲ್ ನಿಯಂತ್ರಣ 6. ಹಲ್ಲುಗಳ ಆರೋಗ್ಯ
ಸೈಬರ್ ಕ್ರೈಮ್ ಎನ್ನುವುದು ಈಗೀಗ ಹೆಚ್ಚಾಗುತ್ತಿದೆ. ಅಮಾಯಕರನ್ನು ವಂಚಿಸಲು ಕ್ರಿಮಿನಲ್‌ಗಳು ನಾನಾ ರೀತಿಯಲ್ಲಿ ತಂತ್ರಗಳನ್ನು ಹೆಣೆಯುತ್ತಿದ್ದಾರೆ, ಅಂತೆಯೇ ಸೈಬರ್ ಸೆಕ್ಯುರಿಟಿ ಕಂಪನಿಗಳ ವರದಿಗಳ ಪ್ರಕಾರ ಇಮೇಲ್‌ಗಳ ಮೂಲಕ ಫಿಶಿಂಗ್ ದಾಳಿಯ ಸಂಖ್ಯೆ ಹೆಚ್ಚಳವಾಗುತ್ತಿದೆ. ಫಿಶಿಂಗ್ ಮತ್ತು ಸ್ಕ್ಯಾಮ್ ಪೇಜ್‌ಗಳಿಗೆ ಲಿಂಕ್‌ಗಳನ್ನು ಎನ್‌ಕೋಡ್ ಮಾಡಲು ವಂಚಕರು QR ಕೋಡ್‌ಗಳನ್ನು ಬಳಸುತ್ತಿದ್ದಾರೆ ಎಂಬುದು ಈಗ ಗಮನಕ್ಕೆ ಬಂದಿದೆ. ಹೀಗಾಗಿ ಬಳಕೆದಾರರು ಈ ಬಗ್ಗೆ ಹೆಚ್ಚಿನ ಜಾಗರೂಕತೆ ವಹಿಸಬೇಕಾಗಿದೆ. ಫಿಶಿಂಗ್ ದಾಳಿ ಎನ್ನುವುದು ಕೂಡಾ ಒಂದು ರೀತಿಯ ಸೈಬರ್ ದಾಳಿಯಾಗಿದೆ. ಇದರಲ್ಲಿ ಹ್ಯಾಕರ್‌ಗಳು ಪ್ರತಿಷ್ಠಿತ ಮೂಲದಿಂದ ಬಂದಿದೆ ಎನ್ನುವಂತೆ ತೋರಿಸುವ ಮೋಸದ ಸಂದೇಶಗಳನ್ನು ಕಳಿಸುತ್ತಾರೆ. ಈ ಪ್ರತಿಷ್ಠಿತ ಹೆಸರನ್ನೇ ಅಸಲಿ ಎಂದು ನಂಬಿ ಮೋಸ ಹೋದರೆ ಕಷ್ಟ ಕಟ್ಟಿಟ್ಟ ಬುತ್ತಿ. ಈ ರೀತಿಯ ದಾಳಿಗಳನ್ನು ಸಾಮಾನ್ಯವಾಗಿ ಇಮೇಲ್ ಮೂಲಕ ಮಾಡಲಾಗುತ್ತದೆ. ಸೈಬರ್ ದಾಳಿಯನ್ನು ಪ್ರಾರಂಭಿಸಲು ಸೈಬರ್ ಅಪರಾಧಿಗಳು ಲಿಂಕ್‌ಗಳನ್ನು ಕಳುಹಿಸುವುದು ಈಗೀಗ ಸಾಮಾನ್ಯವಾಗಿದೆ. ಅಮಾಯಕರನ್ನು ಗುರಿಯಾಗಿಸಿಕೊಂಡು ಸೈಬರ್ ಕ್ರೈಮ್ ವಂಚಕರು ಬಳಸುವ ತಂತ್ರಗಳ ಬಗ್ಗೆ ಸಾಕಷ್ಟು…
ನವದೆಹಲಿ: ಶಕೀಬ್ ಅಲ್ ಹಸನ್ (Shakib Al Hasan) ಮತ್ತು ಬಾಂಗ್ಲಾದೇಶ ತಂಡ ಮಾಡಿದ್ದು ನಿಜಕ್ಕೂ ಅವಮಾನಕರ ಕೃತ್ಯ. ಅವರು ಕ್ರಿಕೆಟ್ ಆಡಬೇಕೆಂದು ಬಯಸಿದ್ರೆ. ಇಂತಹ ಕೀಳುಮಟ್ಟದ ಮನಸ್ಥಿತಿಯಿಂದ ಹೊರಬರಬೇಕು ಎಂದು ಏಂಜಲೋ ಮಾಥ್ಯೂಸ್ (Angelo Mathews) ಕಿಡಿ ಕಾರಿದ್ದಾರೆ. ಸೋಮವಾರ ನಡೆದ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಶ್ರೀಲಂಕಾ (Sri Lanka) ತಂಡವು ಸೋಲನುಭವಿಸಿದ ನಂತರ ಪೋಸ್ಟ್ ಪ್ರೆಸೆಂಟೇಷನ್‌ನಲ್ಲಿ ಮಾತನಾಡಿದ ಅವರು, ಬಾಂಗ್ಲಾದೇಶದ ನಾಯಕ ಶಕೀಬ್ ಅಲ್ ಹಸನ್ ಅವರನ್ನ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. ಶಕೀಬ್ ಅಲ್ ಹಸನ್ ಮಾಡಿದ್ದು, ನಿಜಕ್ಕೂ ಅವಮಾನಕರ ಕೃತ್ಯ. ಅವರ ಸಾಮಾನ್ಯ ಜ್ಞಾನ ಎಲ್ಲಿ ಹೋಯ್ತು ಅನ್ನೋದು ನನಗೆ ಗೊತ್ತಾಗಲಿಲ್ಲ. ಅವರು ಕ್ರಿಕೆಟ್ ಆಡಬೇಕೆಂದು ಬಯಸಿದ್ರೆ. ಇಂತಹ ಕೀಳುಮಟ್ಟದ ಮನಸ್ಥಿತಿಯಿಂದ ಹೊರಬರಬೇಕು ಎಂದು ಜಾಡಿಸಿದ್ದಾರೆ. ಯಾವುದೇ ಒಬ್ಬ ಆಟಗಾರ ಔಟಾದ ಬಳಿಕ ಮುಂದಿನ ಆಟಗಾರ 2 ನಿಮಿಷದ ಒಳಗೆ ಕ್ರೀಸ್‌ನಲ್ಲಿ ಇರಬೇಕು ಏಂದು ಐಸಿಸಿ ನಿಯಮ ಹೇಳುತ್ತದೆ. ನಾನೂ ಕೂಡ 2 ನಿಮಿಷದಲ್ಲೇ ಕ್ರೀಸ್‌ನಲ್ಲಿ ಇದ್ದೆ. ಆದ್ರೆ…
ಮಂಗಳೂರಿನ ಬೆಡಗಿ ಅನುಷ್ಕಾ ಶೆಟ್ಟಿ (Anushka Shetty) ಅವರು 42ನೇ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಬರ್ತ್‌ಡೇ ದಿನ ಅಭಿಮಾನಿಗಳಿಗೆ ಸ್ವೀಟಿ, ಬಿಗ್ ಸರ್ಪ್ರೈಸ್ ಕೊಟ್ಟಿದ್ದಾರೆ. ‘ಮಿಸ್ ಶೆಟ್ಟಿ & ಮಿಸ್ಟರ್ ಪೋಲಿ ಶೆಟ್ಟಿ’ ನಂತರ ಹೊಸ ಸಿನಿಮಾ ಬಗ್ಗೆ ಅಪ್‌ಡೇಟ್‌ವೊಂದು ಸಿಕ್ಕಿದೆ. ಸ್ವೀಟಿ ಹುಟ್ಟುಹಬ್ಬದಂದು ಫ್ಯಾನ್ಸ್‌ಗೆ ಸ್ವೀಟ್ ನ್ಯೂಸ್ ಸಿಕ್ಕಿದೆ. ‘ಭಾಗಮತಿ’ (Bhaagamathie) ಸಿನಿಮಾದಲ್ಲಿ ಅನುಷ್ಕಾ ನಟಿಸಿ ಎಲ್ಲರ ಮನ ಗೆದ್ದಿದ್ದರು. ಖಡಕ್ ಆಗಿ ಅನುಷ್ಕಾ ನಟಿಸಿದ್ದರು. ಇದೀಗ ಇದರದೇ ಸೀಕ್ವೆಲ್‌ನಲ್ಲಿ ನಟಿಸಲು ಕರಾವಳಿ ಬ್ಯೂಟಿ ತಯಾರಿ ಮಾಡ್ತಿದ್ದಾರೆ ಎನ್ನಲಾಗುತ್ತಿದೆ ಯಾವುದೇ ಪಾತ್ರ ಕೊಟ್ಟರೂ ಕೂಡ ಆ ಪಾತ್ರವೇ ತಾವಾಗಿ ಅನುಷ್ಕಾ ಶೆಟ್ಟಿ ನಟಿಸುತ್ತಾರೆ. ಹಾಗಾಗಿ ‘ಭಾಗಮತಿ 2’ ಸೀಕ್ವೇಲ್ ಸುದ್ದಿ ಕೇಳಿ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ. ಸಿನಿಮಾ ಬಗೆಗಿನ ನಿರೀಕ್ಷೆ ಡಬಲ್ ಆಗಿದೆ.
ಸೌತ್ ನಟಿ ಪಾಯಲ್ (Payal) ಸದ್ಯ ‘ಮಂಗಳವಾರಂ’ ಸಿನಿಮಾದ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ ಮೊದಲ ಪ್ರೀತಿಯ ಬಗ್ಗೆ ನಟಿ ಬಾಯ್ಬಿಟ್ಟಿದ್ದಾರೆ. ರಿಜೆಕ್ಷನ್ ಬಗ್ಗೆ ಮಾತನಾಡಿದ್ದಾರೆ. ಪಾಯಲ್, ತಾವು ಹೈಸ್ಕೂಲಿನಲ್ಲಿ ಇದ್ದಾಗಲೇ ಒಬ್ಬ ಹುಡುಗನನ್ನು ನೋಡಿ ಇಷ್ಟಪಟ್ಟಿದ್ದೆ. ಆದರೆ ಆತ ನನ್ನನ್ನು ರಿಜೆಕ್ಟ್ ಮಾಡಿಬಿಟ್ಟ ಎಂದು ಮಾತನಾಡಿದ್ದಾರೆ. ಎಸ್‌ಎಸ್‌ಎಲ್‌ಸಿ ಕಡೆಯ ದಿನಗಳಲ್ಲಿ ನಾನು ನನ್ನ ಪ್ರೀತಿಯನ್ನು ಆತನ ಬಳಿ ವ್ಯಕ್ತಪಡಿಸಿದಾಗ ಅವನು ನನ್ನನ್ನು ತಿರಸ್ಕರಿಸಿದ. ನನಗೆ ಪ್ರೇಮ, ಪ್ರೀತಿಯಲ್ಲಿ ಆಸಕ್ತಿಯಿಲ್ಲ ಎಂದುಬಿಟ್ಟ. ಆ ನೋವಿನಿಂದ ಅಂದು ನನಗೆ ಓದಿನತ್ತ ಗಮನ ಹರಿಸಲು ಸಾಧ್ಯವಾಗಲಿಲ್ಲ. ಹಾಗಾಗಿ ಪರೀಕ್ಷೆಗಳಲ್ಲಿ ಫೇಲ್ ಆಗಿದ್ದೆ. ಈ ವಿಚಾರವನ್ನು ನನ್ನ ತಾಯಿಯ ಬಳಿ ಹೇಳಿಕೊಂಡು ಅತ್ತುಬಿಟ್ಟಿದ್ದೆ. ಅಂದು ತಾಯಿ ನನ್ನ ಬೆಂಬಲಕ್ಕೆ ನಿಂತರು ಎಂದು ಕನ್ನಡದ ‘ಹೆಡ್‌ಬುಷ್’ (Headbush) ನಟಿ ತಮ್ಮ ಹಳೆಯ ದಿನಗಳನ್ನ ಸ್ಮರಿಸಿದ್ದಾರೆ. ‘ಮಂಗಳವಾರಂ’ ಸಿನಿಮಾದಲ್ಲಿ ಪಾಯಲ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ನವೆಂಬರ್ 17ರಂದು ಬಹುಭಾಷೆಗಳಲ್ಲಿ ಸಿನಿಮಾ ರಿಲೀಸ್ ಆಗುತ್ತಿದೆ.
ಬೆಂಗಳೂರು: ಆಸೀಸ್ ಆಲ್ರೌಂಡರ್ ಗ್ಲೆನ್ (Glenn Maxwell) ಮ್ಯಾಕ್ಸ್‌ವೆಲ್ ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ (Australia vs Afghanistan) ಸಿಡಿಲಬ್ಬರದ ದ್ವಿಶತಕ ಸಿಡಿಸಿ ಏಕಾಂಗಿಯಾಗಿ ತಂಡವನ್ನು ಗೆಲುವಿನ ದಡ ಸೇರಿಸಿದ್ದಾರೆ. https://ainlivenews.com/knee-pain-treatment-joint-pain-treatment/ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಮ್ಯಾಕ್ಸ್‌ವೆಲ್ ಸುನಾಮಿ ಎಬ್ಬಿಸಿ ಕಪಿಲ್ ದೇವ್ ದಾಖಲೆಯನ್ನು ಉಡೀಸ್ ಮಾಡಿದ್ದಾರೆ. ಕಪಿಲ್ ದೇವ್ ದಾಖಲೆ ಉಡೀಸ್ ಪಂದ್ಯದಲ್ಲಿ 6ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಇಳಿದ ಗ್ಲೆನ್ ಮ್ಯಾಕ್ಸ್‌ವೆಲ್, ವಿಶ್ವಕಪ್ ಆವೃತ್ತಿಯಲ್ಲಿ ನಂ. 5 ಅಥವಾ ಅದಕ್ಕಿಂತ ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಇಳಿದು ದ್ವಿಶತಕ ಸಿಡಿಸಿದ ಮೊದಲ ಆಟಗಾರ ಎನಿಸಿಕೊಂಡರು. ಈ ಮೂಲಕ ಏಕದಿನ ವಿಶ್ವಕಪ್ ಪಂದ್ಯದಲ್ಲಿ ಕಪಿಲ್ ದೇವ್ ಹೊಂದಿದ್ದ ಹಿಂದಿನ ದಾಖಲೆಯನ್ನು ಮ್ಯಾಕ್ಸ್‌ವೆಲ್ ಮುರಿದರು. ಮ್ಯಾಕ್ಸ್‌ವೆಲ್ ಬರೆದ ದಾಖಲೆಗಳು * ಏಕದಿನದಲ್ಲಿ ದ್ವಿಶತಕ ಸಿಡಿಸಿದ ಆಸ್ಟ್ರೇಲಿಯಾದ ಮೊದಲ ಆಟಗಾರ * ಏಕದಿನದ ಚೇಸ್‌ನಲ್ಲಿ ಅತಿ ಹೆಚ್ಚು ವೈಯಕ್ತಿಕ ರನ್ ದಾಖಲು * 200ಕ್ಕೂ ಹೆಚ್ಚು ರನ್ ಗಳಿಸಿದ ಮೊದಲ ನಾನ್ ಓಪನರ್ * 5 ಅಥವಾ…
ಕಲಬುರಗಿ: ಬ್ಲೂಟೂತ್ ಅಕ್ರಮದ ಕಿಂಗ್‌ಪಿನ್ ಆರ್.ಡಿ.ಪಾಟೀಲ್‌ಗೆ ಆಡಳಿತ ಪಕ್ಷದ ಘಟಾನುಘಟಿಗಳ ಬೆಂಬಲವಿದೆ ಎಂಬ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಮಾಡಿರುವ ಆರೋಪಗಳಿಗೆ ಸಚಿವ ಪ್ರಿಯಾಂಕ್ ಖರ್ಗೆ ತಿರುಗೇಟು ನೀಡಿದ್ದಾರೆ. ಇಡೀ ಸರ್ಕಾರ ಹಗರಣದ ತನಿಖೆಗೆ ಬೆಂಬಲವಾಗಿ ನಿಂತಿದೆ. ನಾವು ಪರೀಕ್ಷೆ ನಡೆಯುವಾಗಲೇ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದೇವೆ. 4 ದಿನದಲ್ಲಿ 20ಕ್ಕೂ ಹೆಚ್ಚು ಆರೋಪಿಗಳ ಬಂಧನವಾಗಿದೆ. https://ainlivenews.com/knee-pain-treatment-joint-pain-treatment/ ಬಿಜೆಪಿ ಸರಕಾರವಿದ್ದಾಗ ಗೃಹ ಸಚಿವರೇ ಪಿಎಸ್‌ಐ ಹಗರಣದ ಮುಖ್ಯ ಆರೋಪಿ ಮನೆಗೆ ಹೋಗಿ ಕಾಜು- ಬದಾಮ್ ತಿಂದು ಬಂದಂತೆ ನಾವಂತೂ ತಿಂದಿಲ್ಲ. ಅಕ್ರಮದಲ್ಲಿ ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ ಅಂತ ಸ್ಪಷ್ಟಪಡಿಸಿದ್ದಾರೆ. ಮುಖ್ಯ ಆರೋಪಿ ಆರ್.ಡಿ.ಪಾಟೀಲ್ ನನ್ನು ಹಿಡಿಯುತ್ತೇವೆ. ಬಿಜೆಪಿಯವರು ಗಾಳಿಯಲ್ಲಿ ಗುಂಡು ಹೊಡೆಯದೆ ವಾಸ್ತವ ಅರಿತು ಮಾತನಾಡಲಿ. ವಿಜಯೇಂದ್ರ ಸರಿಯಾಗಿ ಹೋಮ್ ವರ್ಕ್ ಮಾಡಿಕೊಂಡು ಬಂದು ಮಾತನಾಡಲಿ ಎಂದು ತಿರುಗೇಟು ನೀಡಿದ್ದಾರೆ.
ತೆಲುಗಿನ ಖ್ಯಾತ ನಟ ಪ್ರಭಾಸ್ ಮೊಣಕಾಲು ನೋವಿನಿಂದ ಬಳಲುತ್ತಿದ್ದರು. ಶಸ್ತ್ರ ಚಿಕಿತ್ಸೆಗಾಗಿ ಅವರು ಇಟಲಿಗೆ (Italy) ಹಾರಿದ್ದರು. ಇದೀಗ ಯಶಸ್ವಿ ಶಸ್ತ್ರ ಚಿಕಿತ್ಸೆ (Surgery) ನೆರವೇರಿದ್ದು, ಚಿಕಿತ್ಸೆ ನಂತರ ಹೈದರಾಬಾದ್ (Hyderabad) ಗೆ ವಾಪಸ್ಸು ಆಗಿದ್ದಾರೆ. ಆತಂಕದಲ್ಲಿದ್ದ ಅವರ ಅಭಿಮಾನಿಗಳು ನೆಚ್ಚಿನ ನಟ ಕಂಡು ಸಂಭ್ರಮಿಸಿದ್ದಾರೆ. ಸಲಾರ್ (Salaar) ಸಿನಿಮಾದ ರಿಲೀಸ್ ಗೆ ದೊಡ್ಡಮಟ್ಟದಲ್ಲೇ ಪ್ಲ್ಯಾನ್ ಮಾಡಲಾಗುತ್ತಿದೆ. ಕನ್ನಡ, ತಮಿಳು, ತೆಲುಗು, ಹಿಂದಿ, ಮಲಯಾಳಂ ಹೀಗೆ ನಾನಾ ಭಾಷೆಗಳಲ್ಲಿ ಈ ಸಿನಿಮಾ ಬಿಡುಗಡೆ ಆಗುತ್ತಿದ್ದು, ಮಲಯಾಳಂ ಭಾಷೆಯ ಸಲಾರ್ ಸಿನಿಮಾಗೆ ಪೃಥ್ವಿರಾಜ್ (Prithviraj Sukumaran) ಸಾಥ್ ನೀಡುತ್ತಿದ್ದಾರೆ. ಸಿನಿಮಾದ ಪೋಸ್ಟರ್ ವೊಂದನ್ನು ಅವರು ರಿಲೀಸ್ ಮಾಡಿದ್ದಾರೆ. ಭಾರತೀಯ ಸಿನಿಮಾ ರಂಗ ಡಿಸೆಂಬರ್ ನಲ್ಲಿ ಮೆಗಾ ಕಾಳಗಕ್ಕೆ ಸಾಕ್ಷಿಯಾಗಲಿದೆ. ಚಿತ್ರೋದ್ಯಮದ ಮೂವರು ಭಾರೀ ಬಜೆಟ್ ಚಿತ್ರಗಳು ಬಿಡುಗಡೆ ಆಗುತ್ತಿವೆ. ತೆಲುಗಿನ ಪ್ರಭಾಸ್, ಬಾಲಿವುಡ್ ಶಾರುಖ್ ಖಾನ್ ಮತ್ತು ಮಲಯಾಳಂ ಸಿನಿಮಾ ರಂಗದ ದಿಗ್ಗಜ ಮೋಹನ್ ಲಾಲ್ (Mohanlal) ನಟನೆಯ ಚಿತ್ರಗಳು ಒಂದೇ ದಿನದಲ್ಲಿ…
ಬಾಗಲಕೋಟೆ: ಹಿಂಗಾರು ಮಳೆ ಕೂಡ ಕೈ ಕೊಟ್ಟಿದ್ದು, ರೈತರ ಬದುಕು ಭರವಸೆಯಿಲ್ಲದ ದೋಣಿಯಂತಾಗಿದೆ. ಈ ಮಧ್ಯೆ ಇದೀಗ ಗೋವಿನ ಜೋಳ ಬೆಳೆ ಫಸಲು ಬಂದಿದೆ. ಉತ್ತಮ ಬೆಲೆ ಕೂಡ ಸಿಕ್ಕಿದೆ. ಆದರೆ ರೈತರು ಮಾತ್ರ ಬೆಲೆ ಏರಿದೆ ಅಂತ ಖುಷಿಪಡುವ ಹಾಗಿಲ್ಲ. ಮುಂಗಾರು ಮಳೆ ಸಂಪೂರ್ಣ ಕೈ ಕೊಟ್ಟಿದೆ. ಎಲ್ಲ ಬೆಳೆಗಳು ಮಳೆಯಿಲ್ಲದೆ ಹಾಳಾಗಿವೆ. ಹಿಂಗಾರು ಮಳೆ ಕೂಡ ನಿರಾಸೆ ಮೂಡಿಸಿದೆ. ಇದರಿಂದ ಕೃಷಿ ಉತ್ಪನ್ನದಲ್ಲಿ ಭಾರಿ ಇಳಿಮುಖವಾಗಿ ಧಾನ್ಯಗಳ ಬೆಲೆ ಏರುತ್ತಿದೆ. ಇದೀಗ ಗೋವಿನಜೋಳ ರೇಟ್ ಕೂಡ ಚೆನ್ನಾಗಿದೆ. ಒಂದು ಕ್ವಿಂಟಲ್ಗೆ 2300 ರೂ. ಇದ್ದು ಇದು ಗೋವಿನ ಜೋಳದ ಮಟ್ಟಿಗೆ ಒಂದೊಳ್ಳೆ ಬೆಲೆಯಾಗಿದೆ. ಆದರೆ ಇಷ್ಟು ಒಳ್ಳೆಯ ಬೆಲೆ ಇದ್ದರೂ ರೈತರು ಸಂಭ್ರಮ ಪಡದಂತಾಗಿದೆ. ಇದಕ್ಕೆ ಕಾರಣ ಹೊಲದಲ್ಲಿ ಬಾರಿ ಪ್ರಮಾಣದಲ್ಲಿ ಇಳುವರಿ ಕಡಿಮೆಯಾಗಿರೋದು. ಒಣಬೇಸಾಯ ಗೋವಿನ ಜೋಳವಂತೂ ಎಲ್ಲವೂ ಲಾಸ್ ಆಗಿದೆ. ನೀರಾವರಿ ಗೋವಿನಜೋಳ ಮಾರುಕಟ್ಟೆಗೆ ಬಂದಿದೆ. ಆದರೆ ಅದರಲ್ಲೂ ಇಳುವರಿ ಕಡಿಮೆ ಆಗಿದೆ. ಬಾಗಲಕೋಟೆ ತಾಲ್ಲೂಕಿನ…