ಬೆಂಗಳೂರು: ಬಲಿಷ್ಠ ದಕ್ಷಿಣ ಆಫ್ರಿಕಾ ವಿರುದ್ಧ 243 ರನ್ ಗಳ ಬೃಹತ್ ಗೆಲುವು ದಾಖಲಿಸಿ ಟಾಪ್ 1 ತಂಡವಾಗಿ ಸೆಮಿಫೈನಲ್ ಗೆ ಲಗ್ಗೆ ಇಟ್ಟಿರುವ ಟೀಮ್ ಇಂಡಿಯಾ, ಸೆಮಿಫೈನಲ್ ಪಂದ್ಯದಲ್ಲಿ ಮುಗ್ಗರಿಸಿ ಚಾಂಪಿಯನ್ಸ್ ಪಟ್ಟ ಅಲಂಕರಿಸುವ ಅವಕಾಶ ಕೈಚೆಲ್ಲಲಿದೆ ಎಂದು ಪಾಕಿಸ್ತಾನದ ಮಾಜಿ ನಾಯಕ ಮಿಸ್ಬಾ ಉಲ್ ಹಕ್ ವಾರ್ನಿಂಗ್ ಕೊಟ್ಟಿದ್ದಾರೆ. ಭಾನುವಾರ ಕೋಲ್ಕತ್ತಾದ ಈಡೆನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆದಿದ್ದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ್ದ ಟೀಮ್ ಇಂಡಿಯಾ, ವಿರಾಟ್ ಕೊಹ್ಲಿ (101* ರನ್) ಶತಕ ಹಾಗೂ ಶ್ರೇಯಸ್ ಅಯ್ಯರ್ (77 ರನ್) ಅರ್ಧ ಶತಕ ನೆರವಿನಿಂದ 50 ಓವರ್ ಗಳ ಅಂತ್ಯಕ್ಕೆ 5 ವಿಕೆಟ್ ಕಳೆದುಕೊಂಡು 326 ರನ್ ಗಳಿಸಿತ್ತು. ಪಾಕಿಸ್ತಾನ ತಂಡದ ಸಹ ಆಟಗಾರ ಶೋಯಿಬ್ ಮಲಿಕ್ ರೊಂದಿಗೆ ಎ ಸ್ಪೋರ್ಟ್ಸ್ ಗಾಗಿ ನಡೆಸಿರುವ ಸಂಭಾಷಣೆಯಲ್ಲಿ ಸೆಮಿಫೈನಲ್ ಹಂತದಲ್ಲಿ ಟೀಮ್ ಇಂಡಿಯಾ ಸೋಲು ಕಾಣಲಿದೆ ಎಂದು ಮಿಸ್ಬಾ ಉಲ್ ಹಕ್ ಎಚ್ಚರಿಕೆ…
Author: AIN Author
ದೋಹಾ: ಕತಾರ್ ನಲ್ಲಿರುವ ಕರ್ನಾಟಕ ಸಂಘವು 68ನೇ ಕನ್ನಡ ರಾಜ್ಯೋತ್ಸವನ್ನು ನವೆಂಬರ್ 3 ರಂದು ಅದ್ದೂರಿ ಕಾರ್ಯಕ್ರಮದ ಮೂಲಕ ಆಚರಿಸಿತು. ಕಾರ್ಯಕ್ರಮದಲ್ಲಿ ಗೌರವಾನ್ವಿತ ಮುಖ್ಯ ಅತಿಥಿಗಳಾಗಿ ಕನ್ನಡದ ಪ್ರಸಿದ್ಧ ಬರಹಗಾರರು ಹಾಗೂ ಪತ್ರಕರ್ತರಾದ ಜೋಗಿ ಖ್ಯಾತಿಯ ಗಿರೀಶ್ ರಾವ್ ಹತ್ವಾರ್ ಹಾಗೂ ಸ್ಯಾಂಡಲ್ ವುಡ್‍ನ ಕ್ರೇಜಿ ಸ್ಟಾರ್ ವಿ ರವಿಚಂದ್ರನ್ ಅವರು ಭಾಗವಹಿಸಿದ್ದರು. ಭಾರತೀಯ ಸಾಂಸ್ಕೃತಿಕ ಕೇಂದ್ರದ ಅಧ್ಯಕ್ಷ ಮಣಿಕಂಠನ್, ಉಪಾಧ್ಯಕ್ಷ ಸುಬ್ರಮಣ್ಯ ಹೆಬ್ಬಾಗೆಲು, ಐಸಿಬಿಫ್ ನ ಅಧ್ಯಕ್ಷ ಶಾನವಸ್ ಬವ, ಕರ್ನಾಟಕ ಸಂಘದ ಸಲಹಾ ಮಂಡಳಿ ಸದಸ್ಯರು, ಸೋದರ ಸಂಸ್ಥೆಗಳ ಅಧ್ಯಕ್ಷರು ರಾಜ್ಯೋತ್ಸವದ ಆಚರಣೆಯಲ್ಲಿ ಪಾಲ್ಗೊಂಡರು. ರವಿಚಂದ್ರನ್ (Ravichandran) ಅವರು ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ, ಮಹೇಶ್ ಗೌಡ ಅವರ ಪ್ರೀತಿಯ ಕರೆ ಅವರನ್ನು ಕತಾರ್‍ಗೆ ಬರುವಂತೆ ಪ್ರೇರೇಪಿಸಿದ್ದು ಹಾಗೂ ಅವರ ಕತಾರ್ ನ ಪ್ರವಾಸ ನೆನಪಿನಲ್ಲಿ ಉಳಿಯುವಂತದ್ದು ಎಂದು ಸಭೆಗೆ ತಿಳಿಸಿದರು. ಅವರ ತಂದೆಯ ಜೀವನ ಶೈಲಿಯನ್ನು ನೆನೆಸಿಕೊಂಡ ಅವರು, ಮುಂಬರುವ ದಿನಗಳಲ್ಲಿ ಪ್ರೇಮಲೋಕ ಚಿತ್ರದ ಭಾಗ-2 ನಿರ್ಮಿಸಿ ಬಿಡುಗಡೆಗೊಳಿಸುವ ಭರವಸೆ…
8000 ಕಿಲೋಮೀಟರ್ ಯಶ್ (Yash) ಪ್ರಯಾಣ ಯಾರಿಗಾಗಿ? ಯಾಕಾಗಿ? 40 ರಿಂದ 50 ದಿನಗಳ ವೃತ ಆ ಊರಲ್ಲಿ ಯಾರ ಜೊತೆಯಲ್ಲಿ? ಶ್ರೀಲಂಕಾದಲ್ಲಿ ಅದೇನು ಕೆಲಸ ರಾಕಿಂಗ್ ಸ್ಟಾರ್‌ಗೆ? ಹಗಲು-ರಾತ್ರಿ ಯಶ್ ಹಾಕಿಕೊಂಡಿರುವ ಗುರಿ ಮುಂದು. ಕಳೆದ ಕೆಲ ದಿನಗಳಲ್ಲಿ ರಾಕಿಂಗ್ ಸ್ಟಾರ್ ಎಲ್ಲೆಲ್ಲಿಗೆ ಹೋಗಿ ಬಂದ್ರು? ಯಾರನ್ನ ಭೇಟಿ ಮಾಡಿದ್ರು? ರಾಮಾಚಾರಿಯ ಈ ಶರವೇಗದ ಓಟದ ಹಿಂದಿರುವ ಅಸಲಿ ಕತೆ ಏನು? ಇಲ್ಲಿದೆ ಮಾಹಿತಿ. ಕೆಜಿಎಫ್ (KGF) ಹಿಟ್ ಆಯ್ತು, ಮತ್ಯಾಕೆ ಸಿನಿಮಾ ಅನೌನ್ಸ್ ಮಾಡ್ತಿಲ್ಲ ಜನ ಕೇಳ್ತಿದ್ದಾರೆ. ನಿರ್ಮಾಪಕರು ಸೂಟ್ ಕೇಸ್ ಹಿಡಿದು ವೆಸ್ಟ್ಎಂಡ್ ಯಶ್ ಆಫೀಸ್‌ಗೆ ಸುತ್ತಿ ಸುತ್ತಿ ಸುಸ್ತಾಗಿದ್ದಾರೆ. ಯಾವ ಪ್ರಶ್ನೆಗಳನ್ನೂ ಯಶ್ ತಮ್ಮ ಕೋಟೆಯೋಳಗೆ ಬಿಟ್ಟು ಕೊಂಡಿಲ್ಲ ಯಾರ ಸೂಟ್‌ಕೇಸ್‌ನಿಂದಲೂ ರಾಕಿಂಗ್ ಸ್ಟಾರ್ ಒಂದು ಕಿಲುಬು ಕಾಸು ಎತ್ತಿಕೊಂಡಿಲ್ಲ. ಕಾರಣ ಮೊದಲು ಕತೆ ರೆಡಿಯಾಗಬೇಕು. ಒಳ್ಳೆಯ ಕತೆಗೆ ಮಾತ್ರ ಗೆಲ್ಲೋ ಯೋಗ್ಯತೆ ಇರೋದು ಅನ್ನೊ ಸತ್ಯದ ಬೆನ್ನು ಬಿದ್ದಿದ್ದಾರೆ. ಈಗ ಎಲ್ಲವೂ ಫೈನಲ್ ಆಗಿದೆ.…
ತೆಲುಗಿನ ಖ್ಯಾತ ನಟ ರಾಮ್ ಚರಣ್ (Ram Charan) ನಟನೆಯ ಗೇಮ್ ಚೇಂಜರ್ ಸಿನಿಮಾದ ಹಾಡೊಂದು ಸೋಷಿಯಲ್ ಮೀಡಿಯಾದಲ್ಲಿ ಲೀಕ್ ಆಗಿದೆ. ಯಾವುದೇ ವಿಷಯ ಸೋರಿಕೆ ಆಗದಂತೆ ಎಚ್ಚರಿಕೆ ತೆಗೆದುಕೊಂಡಿದ್ದರೂ, ಹಾಡಿಗೇ ಹಾಡೇ ಸೋರಿಕೆ (Song Leak) ಆಗಿರುವುದು ಚಿತ್ರತಂಡಕ್ಕೆ ತಲೆ ನೋವುದಾಗಿ ಈ ಕಾರಣದಿಂದಾಗಿಯೇ ನಿರ್ಮಾಪಕರು ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಈಗಾಗಲೇ ಒಬ್ಬರನ್ನು ಅರೆಸ್ಟ್ ಕೂಡ ಮಾಡಿದ್ದಾರೆ. https://ainlivenews.com/knee-pain-treatment-joint-pain-treatment/ ಗೇಮ್ ಚೇಂಜರ್’ (Game Changer) ಸಿನಿಮಾದ ಯಾವ ವಿಷಯಗಳನ್ನೂ ಲೀಕ್ ಆಗಬಾರದು ಎಂದು ಎಷ್ಟೇ ಕಟ್ಟೆಚರಿಕೆ ತೆಗೆದುಕೊಂಡಿದ್ದರೂ, ಚಿತ್ರೀಕರಣ ಯಾವುದೇ ಫೋಟೋ ಲೀಕ್ ಆಗದಂತೆ ನೋಡಿಕೊಂಡಿದ್ರು ಕೂಡ ಎಲ್ಲವೂ ವ್ಯರ್ಥವಾಗಿದೆ. ಈ ಹಿಂದೆ ಚರಣ್- ಕಿಯಾರಾ ಲುಕ್ ರಿವೀಲ್ ಆಗಿತ್ತು. ಡೈರೆಕ್ಟರ್ ಶಂಕರ್ (Shankar) ನಿರ್ದೇಶನದ ‘ಗೇಮ್ ಚೇಂಜರ್’ನಲ್ಲಿ(Game Changer) ಕಿಯಾರಾ ಅಡ್ವಾಣಿ- ರಾಮ್ ಚರಣ್ ಜೋಡಿಯಾಗಿ ನಟಿಸಿದ್ದಾರೆ. ಈ ಸಿನಿಮಾಗೆ ಸೋರಿಕೆ ಕಾಟ ಶುರುವಾಗಿದೆ. ಸಾಕಷ್ಟು ಎಚ್ಚರಿಕೆ ವಹಿಸಿದ ಹೊರತಾಗಿಯೂ ಸಿನಿಮಾ…
ಲಕ್ನೋ: ಉತ್ತರ ಪ್ರದೇಶದ ಅಲಿಗಢ (Aligarh) ನಗರದ ಹೆಸರು ಹರಿಗಢ(Harigarh) ಎಂದು ಬದಲಾಗುತ್ತಾ ಹೀಗೊಂದು ಪ್ರಶ್ನೆ ಈಗ ಎದ್ದಿದೆ. ಅಲಿಗಢ ಮಹಾನಗರ ಪಾಲಿಕೆ (Aligarh Municipal Corporation) ಕೈಗೊಂಡ ನಿರ್ಧಾರದಿಂದ ಈ ಪ್ರಶ್ನೆ ಈಗ ಎದ್ದಿದೆ. ಅಲಿಗಢ ಹೆಸರಿನ ಬದಲು ಹರಿಗಢ ಹೆಸರನ್ನು ನಾಮಕರಣ ಮಾಡಲು ಪಾಲಿಕೆ ನಿರ್ಣಯವನ್ನು ಪಾಸ್ ಮಾಡಿದೆ. ಬಿಜೆಪಿಯ (BJP) ಪಾಲಿಕೆ ಸದಸ್ಯ ಸಂಜಯ್ ಪಂಡಿತ್ ಮಂಡಿಸಿದ ಪ್ರಸ್ತಾಪವನ್ನು ಪಾಲಿಕೆ ಒಪ್ಪಿಗೆ ಸೂಚಿಸಿದೆ. ಪಾಲಿಕೆಯಲ್ಲಿ ನಿರ್ಧಾರ ಕೈಗೊಂಡ ಮಾತ್ರಕ್ಕೆ ಹೆಸರು ಬದಲಾಗುವುದಿಲ್ಲ. ಇದು ಮೊದಲ ಹೆಜ್ಜೆಯಾಗಿದ್ದು ರಾಜ್ಯ ಸರ್ಕಾರ ಹೆಸರು ಬದಲಾವಣೆಗೆ ಒಪ್ಪಿಗೆ ನೀಡಿದ ಬಳಿಕವಷ್ಟೇ ಹೆಸರು ಅಧಿಕೃತವಾಗಿ ಬದಲಾಗಿದೆ. https://ainlivenews.com/supreme-ray-healing-centre-reiki-treatment/ ಈ ಬಗ್ಗೆ ಪ್ರತಿಕ್ರಿಯಿಸಿದ ಮೇಯರ್ ಪ್ರಶಾಂತ್ ಸಿಂಘಾಲ್, ಸಂಜಯ್ ಪಂಡಿತ್ ಮಂಡಿಸಿದ ಪ್ರಸ್ತಾಪದ ಬಗ್ಗೆ ಸಭೆ ನಡೆಯಿತು. ಈ ಪ್ರಸ್ತಾಪಕ್ಕೆ ಎಲ್ಲಾ ಸದಸ್ಯರು ಬೆಂಬಲ ವ್ಯಕ್ತಪಡಿಸಿದರು. ಈ ನಿರ್ಣಯವನ್ನು ನಾವು ರಾಜ್ಯ ಸರ್ಕಾರಕ್ಕೆ ಕಳುಹಿಸಿಕೊಡುತ್ತೇವೆ. ಸರ್ಕಾರ ನಮ್ಮ ಮನವಿಯನ್ನು ಪುರಸ್ಕರಿಸಿ ಹರಿಗಢ ಹೆಸರನ್ನು ಇಡಲು ಒಪ್ಪಿಗೆ…
ದೇವನಹಳ್ಳಿ: ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ ಕೊಳತೂರು ಗ್ರಾಮದಲ್ಲಿ ಮನಕಲಕುವ ಘಟನೆಯೊಂದು ನಡೆದಿದೆ. ಪೊಲೀಸ್ ಗಂಡನಿಂದಲೇ 11 ದಿನಗಳ ಬಾಣಂತಿ ಪತ್ನಿಯ ಕೊಲೆ ನಡೆದಿದೆ. ಚಾಮರಾಜನಗರದಲ್ಲಿ ಪೊಲೀಸ್ ಪೇದೆಯಾಗಿರುವ ಕಿಶೋರ್ ತಮ್ಮ ಬಾಣಂತಿ ಹೆಂಡತಿಯನ್ನೇ ಕೊಲೆ ಮಾಡಿ ಎಸ್ಕೇಪ್ ಆಗಿದ್ದಾನೆ. ಅನುಮಾನ ಹಾಗೂ ಸೈಕೋ ವರ್ತನೆಯಿಂದ ಕೊಲೆ ನಡೆದಿದೆ ಎಂಬ ಆರೋಪ ಕೇಳಿ ಬಂದಿದೆ. ಕೊಳತೂರು ನಿವಾಸಿ ಪ್ರತಿಭಾ ಮೃತ ಬಾಣಂತಿ. 11 ದಿನಗಳ ಮಗುವನ್ನು ಅನಾಥ ಮಾಡಿ ಹೋದ ಮಗಳಿಗಾಗಿ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಆದಷ್ಟು ಬೇಗ ಅಳಿಯನ್ನು ಬಂಧಿಸುವಂತೆ ಆಕ್ರೋಶ ಹೊರಹಾಕಿದ್ದಾರೆ. https://ainlivenews.com/knee-pain-treatment-joint-pain-treatment/ ಚಾಮರಾಜನಗರದಲ್ಲಿ ಪೊಲೀಸ್ ಪೇದೆಯಾಗಿರುವ ಕಿಶೋರ್ಗೂ ಪ್ರತಿಭಾಗೆ ಕೇವಲ ಬಂದು ವರ್ಷದ ಹಿಂದಷ್ಟೇ ಮದುವೆಯಾಗಿತ್ತು. ಆರೋಪಿ ಕಿಶೋರ್ಗೆ ತನ್ನ ಪ್ರತಿ ಮೇಲೆ ಅನುಮಾನ ಇತ್ತು. ಆ ಅನುಮಾನವೇ ಇಂದು ಕೊಲೆಗೆ ಕಾರಣವಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಕಿಶೋರ್, ಯಾವಾಗಲೂ ಅನುಮಾನ ಹಾಗೂ ಅವರ ಕಡೆಯವರು ಸರಿಯಾಗಿ ತನ್ನನ್ನು ಉಪಚಾರ ಮಾಡಲ್ಲ ಎಂಬ ಬಗ್ಗೆ…
ತಲೆನೋವು ಇತ್ತೀಚಿನ ದಿನಗಳಲ್ಲಿ ಎಲ್ಲರಿಗೂ ಕಾಡುವ ಸಾಮಾನ್ಯ ಸಮಸ್ಯೆಯಾಗಿದೆ. ತಲೆನೋವು ಬಂದರೆ ಸಾಕಪ್ಪ ಎನ್ನುವಷ್ಟು ನಮ್ಮನ್ನು ಬಾಧಿಸುತ್ತದೆ. ಇದರ ನಿವಾರಣೆಗೆ ನಾವು ಮಾತ್ರೆ ಹಾಗೇ ಕ್ಲಿನಿಕ್ ಮೊರೆ ಹೋಗುತ್ತೇವೆ. ನಾನಾ ಪ್ರಯೋಗಗಳನ್ನು ಮಾಡುತ್ತೇವೆ. https://ainlivenews.com/knee-pain-treatment-joint-pain-treatment/ ಏನೇ ಮಾಡಿದರೂ ನಿಮ್ಮ ತಲೆ ನೋವು ಸರಿ ಹೋಗಿರುವುದಿಲ್ಲ. ಒತ್ತಡ , ಅತೀ ಯೋಚನೆಯಿಂದಲೂ ನಿಮಗೆ ತಲೆ ನೋವು ಕಾಣಿಸುತ್ತದೆ. ಮನೆಯಲ್ಲಿ ಸಿಗುವ ವಸ್ತುಗಳನ್ನು ಉಪಯೋಗಿಸಿ ನಿಮ್ಮ ತಲೆ ನೋವಿಗೆ ಪ್ರಾಥಮಿಕ ಚಿಕಿತ್ಸೆ ಮಾಡಿಕೊಳ್ಳಬಹುದು. ನೋವು ಕಡಿಮೆಯಾಗಲು ನೀವು ಈ ರೀತಿಯ ಪರಿಹಾರವನ್ನು ಅನುಸರಿಸಬಹುದು. ಎಲ್ಲರ ಅಡುಗೆ ಮನೆಯಲ್ಲಿ ಲವಂಗವಿರುತ್ತದೆ. ಲವಂಗ ಮತ್ತು ಉಪ್ಪನ್ನು ಬಳಸಿ ಪರಿಹಾರ ಕಾಣಬಹುದು. ಈ ಮನೆಮದ್ದನ್ನು ತಯಾರಿಸಲು ಲವಂಗ ಪುಡಿ ಮತ್ತು ಉಪ್ಪಿನ ಮಿಶ್ರಣವನ್ನು ಸಿದ್ಧಪಡಿಸಬೇಕು. ಈ ಮಿಶ್ರಣವನ್ನು ಹಾಲಿನೊಂದಿಗೆ ಸೇರಿಸಿ ಕುಡಿದರೆ ನಿಮ್ಮ ತಲೆನೋವು ಶೀಘ್ರವಾಗಿ ಕಡಿಮೆಯಾಗುತ್ತದೆ. ಹಾಗೆಯೇ ಉಪ್ಪಿನಲ್ಲಿರುವ ಹೈಗ್ರಾಕೊಪಿಕ್ ಅಂಶಗಳು ತಲೆನೋವಿಗೆ ಪರಿಣಾಮಕಾರಿಯಾಗಿ ಫಲಿಸುತ್ತದೆ. ಹೀಗಾಗಿ ಈ ಮನೆಮದ್ದನ್ನು ಬಳಸಿ ಶ್ರೀಘ್ರದಲ್ಲೇ ತಲೆನೋವನ್ನು ನಿವಾರಿಸಿಕೊಳ್ಳಬಹುದು. ಇನ್ನೂ…
ಒಟ್ಟಾವಾ: ಖಲಿಸ್ಥಾನಿಗಳ ಕಾರಣದಿಂದ ಭಾರತ-ಕೆನಡಾ (India- Canada) ನಡ್ವೆ ರಾಜತಾಂತ್ರಿಕ ಬಿಕ್ಕಟ್ಟು ಸೃಷ್ಟಿಯಾಗಿದೆ. ಕೆನಡಾದಲ್ಲಿರುವ ಖಲಿಸ್ಥಾನಿ ಉಗ್ರರು ಹಿಂದೂಗಳಿಗೆ ಬೆದರಿಕೆ ಹಾಕುವ ಕೆಲಸ ಮಾಡುತ್ತಿದ್ದಾರೆ. ಇದೀಗ ಅಂತಹ ಕೆನಡಾದಲ್ಲಿ, ಅದರಲ್ಲೂ ಅಲ್ಲಿನ ಸಂಸತ್‍ನಲ್ಲಿಯೇ (Parliament) ಕನ್ನಡಿಗರೊಬ್ಬರು ದೀಪಾವಳಿ ಆಚರಿಸಿದ್ದಾರೆ. ಹೌದು. ಸಂಸದ ಚಂದ್ರ ಆರ್ಯ (MP Chandra Arya) ಅವರು ಪಾರ್ಲಿಮೆಂಟ್ ಹಿಲ್‍ನಲ್ಲಿ ದೀಪಾವಳಿ ಆಯೋಜಿಸಿದ್ದರು. ಈ ವೇಳೆ ಓಂ ಎಂದು ಬರೆದಿರುವ ಹಿಂದೂ ಧ್ವಜವನ್ನು ಹಾರಿಸಿದ್ದಾರೆ. ಈ ಕ್ಷಣಕ್ಕೆ ನೂರಾರು ಹಿಂದೂಗಳು ಸಾಕ್ಷಿಯಾಗಿದ್ದಾರೆ. https://ainlivenews.com/knee-pain-treatment-joint-pain-treatment/ ಪಾರ್ಲಿಮೆಂಟ್ ಹಿಲ್‍ನಲ್ಲಿ ದೀಪಾವಳಿ ಆಯೋಜಿಸಿದ್ದಕ್ಕೆ ನನಗೆ ಸಂತಸವಾಗಿದೆ. ಈ ಸಂದರ್ಭದಲ್ಲಿ ನಾವು ‘ಓಂ’ ಚಿಹ್ನೆ ಒಳಗೊಂಡ ಹಿಂದೂ ಧ್ವಜವನ್ನು (Hindu Flag) ಹಾರಿಸಿದೆವು. ಈ ಆಚರಣೆಗೆ ಕೆನಡಾದಲ್ಲಿರುವ 67 ಹಿಂದೂ ಮತ್ತು ಇಂಡೋ-ಕೆನಡಾ ಸಂಘಟನೆಗಳು ಬೆಂಬಲ ನಿಡಿದ್ದವು ಎಂದು ತಿಳಿಸಿದ್ದಾರೆ. ಮತ್ತೊಂದ್ಕಡೆ ಪ್ಯಾರೀಸ್ ಏರ್‍ಪೋರ್ಟ್‍ನಲ್ಲಿ 30 ಮುಸ್ಲಿಮವರು ಸಾಮೂಹಿಕವಾಗಿ ನಮಾಜ್ ಮಾಡಿರೋದು ವಿವಾದಕ್ಕೆ ಕಾರಣವಾಗಿದೆ. ಫ್ರಾನ್ಸ್ ರಾಜಕಾರಣಿಗಳು, ನೆಟ್ಟಿಗರಿಂದ ಆಕ್ರೋಶ ವ್ಯಕ್ತವಾಗಿದೆ. ಆದ್ರೆ, ಇದನ್ನು ಫ್ರಾನ್ಸ್…
ಹಬ್ಬದ ಸೀಸನ್ ಶುರುವಾಗಿದೆ. ಈಗಾಗಲೇ ಪ್ರಸಿದ್ಧ ಇ ಕಾಮರ್ಸ್ ತಾಣಗಳಲ್ಲಿ ಸೇಲ್ಗಳು ನಡೆಯುತ್ತಿದೆ. ಬಿಗ್ ದಿವಾಳಿ ಸೇಲ್ ಲೈವ್ ಆಗಿದೆ. ಹಾಗಾದರೆ ಸ್ಮಾರ್ಟ್ ಫೋನ್‌ಗಳನ್ನೂ ಪ್ರೀತಿ ಪಾತ್ರರಿಗೆ ಉಡುಗೊರೆಯಾಗಿ ನೀಡಬಹುದು. ಒಂದೊಮ್ಮೆ ಯಾವ ಸ್ಮಾರ್ಟ್ ಫೋನ್ ಕೊಳ್ಳಬಹುದು ಎಂಬ ಗೊಂದಲ ನಿಮಗಿದ್ದರೆ 30 ಸಾವಿರ ರೂಪಾಯಿಯೊಳಗಿನ ಕೆಲ 5 ಜಿ ಸ್ಮಾರ್ಟ್‌ಫೋನ್‌ಗಳ ಮಾಹಿತಿ ಇಲ್ಲಿದೆ. ರೆಡ್ಮಿ ನೋಟ್ 12 ಪ್ರೋ 5 ಜಿ (Redmi Note 12 Pro 5G): ಈ ಫೋನ್ 6.67 ಇಂಚಿನ ಎಫ್‌ಎಚ್‌ಡಿ ಡಿಸ್‌ಪ್ಲೇಯೊಂದಿಗೆ ಬರುತ್ತದೆ. 5000mAh ಬ್ಯಾಟರಿಯನ್ನು ಇದು ಹೊಂದಿದ್ದು, ಈ ಫೋನ್‌ನ ಬೆಲೆ 22,192 ರೂಪಾಯಿ. ರಿಯಲ್ ಮಿ 11 ಪ್ರೋ 5 ಜಿ (Realme 11 Pro 5G) : ಈ ಫೋನ್ 5000mAh ಬ್ಯಾಟರಿಯೊಂದಿಗೆ ಬರುತ್ತದೆ. ಇದರ ಬೆಲೆ 23,838 ರೂಪಾಯಿ. ರಿಯಲ್ ಮಿ ನರ್ಝೋ 60 ಪ್ರೋ (Realme Narzo 60 Pro) : ಈ ಫೋನ್ 6.7 ಇಂಚಿನ…
ಹೈದರಾಬಾದ್: ಪ್ರೀತಿಗೆ ಕಣ್ಣಿಲ್ಲ… ಪ್ರೀತಿ ಕುರುಡು ಅಂತಾರೆ. ಅಂತೆಯೇ ಇಲ್ಲೊಂದು ಇಂಥದ್ದೇ ವಿಚಿತ್ರ ಘಟನೆ ನಡೆದಿದೆ. ಯುವಕನೊಬ್ಬ ಪ್ರೀತಿ ಮಾಡಿ ಮದುವೆಯಾದ ಹೃದಯಸ್ಪರ್ಶಿ ಪ್ರಕರಣವೊಂದು ನಡೆದಿರುವ ಬಗ್ಗೆ ತೆಲಂಗಾಣದಲ್ಲಿ (Telangana) ಬೆಳಕಿಗೆ ಬಂದಿದೆ. ಹೌದು. ತೆಲಂಗಾಣ ಮೂಲದ ಯುವಕನೊಬ್ಬ ಮಂಗಳಮುಖಿಯನ್ನು ಪ್ರೀತಿಸಿ ಮದುವೆಯಾಗಿ (Love Marriage) ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾನೆ. ಯುವಕನನ್ನು ಗಣೇಶ್ ಎಂದು ಗುರುತಿಸಲಾಗಿದ್ದು, ತೆಲಂಗಾಣದ ಖಮ್ಮಮ್ ನಿವಾಸಿ. ಈತ ಆಂಧ್ರಪ್ರದೇಶದ ನಂದಿಗಮ ಮೂಲದ ದೀಪು ಎಂಬಾಕೆಯನ್ನು ಮದುವೆಯಾಗಿದ್ದಾನೆ. ಹೈದರಾಬಾದ್‍ನಲ್ಲಿ ಇಬ್ಬರ ಪರಿಚಯವಾಗಿದ್ದು, ಪರಿಚಯ ಪ್ರೀತಿಗೆ ತಿರುಗಿದೆ. ಅಂತೆಯೇ ಕಳೆದ ಒಂದು ವರ್ಷದಿಂದ ಇವರಿಬ್ಬರು ಪರಸ್ಪರ ಪ್ರೀತಿಸುತ್ತಿದ್ದು, ಕಳೆದ ವಾರವಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮದುವೆಯಾದ ಬಳಿಕ ಇವರಿಬ್ಬರು ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ. ನಮ್ಮಿಬ್ಬರ ಮದುವೆಗೆ ಮನೆಯವರು ಒಪ್ಪಿರಲಿಲ್ಲ. ಹೀಗಾಗಿ ಮನೆಯವರ ವಿರೋಧದ ನಡುವೆಯೂ ಮದುವೆಯಾಗಿದ್ದೇವೆ. ಹೀಗಾಗಿ ಸದ್ಯ ಮನಗೆ ಜೀವ ಭಯವಿದೆ. ನಮಗೆ ರಕ್ಷಣೆ ಬೇಕು ಎಂದು ಪೊಲೀಸರಿಗೆ ಮನವಿ ಮಾಡಿದ್ದಾರೆ.