ಮಂಗಳೂರು: ಕಲ್ಲೆಗ ಟೈಗರ್ಸ್… ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾಕಷ್ಟು ಫೇಮಸ್ ಆಗಿರೋ ಹುಲಿ ವೇಷದ ತಂಡ. ಅಕ್ಷಯ್ ಕಲ್ಲೆಗ ಈ ಹುಲಿವೇಷ ತಂಡದ ನಾಯಕನಾಗಿ ಒಂದು ರೀತಿಯಲ್ಲಿ ಫೇಮಸ್ ಫಿಗರ್ ಕೂಡಾ ಆಗಿದ್ದ. ಆದರೆ ರಾತ್ರಿ ಅದೊಂದು ಸಣ್ಣ ವಿಚಾರಕ್ಕೆ ಕಲ್ಲೆಗ ಟೈಗರ್ಸ್ ನಾಯಕ ಮಚ್ಚಿನೇಟಿಗೆ ಬಲಿಯಾಗಿ ಹೋಗಿದ್ದಾನೆ. ಕಲ್ಲೆಗ ಟೈಗರ್ಸ್… ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಕಳೆದ ಕೆಲ ವರ್ಷಗಳ ಹಿಂದೆ ಹುಟ್ಟಿಕೊಂಡ ಹುಲಿ ವೇಷ ತಂಡ. ಮಂಗಳೂರು ದಸರಾ ಸಮಯದಲ್ಲಿ ನಡೆಯೋ ಹುಲಿ ವೇಷದ ಕಾಂಪಿಟೇಷನ್ನಲ್ಲಿ ಇತರೇ ತಂಡಗಳಿಗೆ ಟೈಟ್ ಫೈಟ್ ಕೊಡ್ತಾ ಇದ್ದ ತಂಡ. ಪುತ್ತೂರು ನಗರಕ್ಕೆ ಎಂಟ್ರಿ ಕೊಡ್ತಾ ಇದ್ದಂತೆ ನಗರೆದಲ್ಲೆಡೆ ಕೂಡಾ ಕಲ್ಲೆಗ ಟೈಗರ್ಸ್ ಬ್ಯಾನರ್ಗಳು ಈ ತಂಡ ಅದೆಷ್ಟು ಫೇಮಸ್ ಅನ್ನೋದಿಕ್ಕೆ ಸಾಕ್ಷಿ. ಕಳೆದ ಬಿಗ್ ಬಾಸ್ ರಿಯಾಲಿಟಿ ಶೋ ಒಳಗೆ ಕೂಡಾ ಇದೆ ತಂಡ ಎಂಟ್ರಿ ಕೊಟ್ಟು ರಾಜ್ಯದ ಜನರ ಗಮನ ಸೆಳೆದಿತ್ತು. ಆದ್ರೆ ಅದೇ ತಂಡದ ನಾಯಕ ಅಕ್ಷಯ್ ಕಲ್ಲೆಗ…
Author: AIN Author
ಉಳಗನಾಯಗನ್ ಕಮಲ್ ಹಾಸನ್ ಹಾಗೂ ವಿಷನರಿ ಡೈರೆಕ್ಟರ್ ಮಣಿರತ್ನಂ 37 ವರ್ಷದ ಬಳಿಕ ಮತ್ತೆ ಕೈ ಜೋಡಿಸಿರುವುದು ಗೊತ್ತೇ ಇದೆ. ಕಮಲ್ ನಟಿಸ್ತಿರುವ ಮಣಿರತ್ನಂ ನಿರ್ದೇಶಿಸ್ತಿರುವ ಈ ಚಿತ್ರದ ಟೈಟಲ್ ರಿವೀಲ್ ಆಗಿದೆ. 2.55 ನಿಮಿಷದ ವಿಡಿಯೋ ಝಲಕ್ ಮೂಲಕ ಉಳಗನಾಯಗನ್ 234ನೇ ಸಿನಿಮಾದ ಶೀರ್ಷಿಕೆ ಏನು? ಯಾವ ಜಾನರ್ ಎಂಬ ಬಗ್ಗೆ ಸಣ್ಣದೊಂದು ಇಂಟ್ ಸಿಕ್ಕಿದೆ. ಕಮಲ್ ಹಾಗೂ ಮಣಿರತ್ನಂ ಜೋಡಿಯ ಸಿನಿಮಾಗೆ ಥಗ್ ಲೈಫ್ ಎಂಬ ಶೀರ್ಷಿಕೆ ಇಡಲಾಗಿದೆ. ರಂಗರಾಯ ಸತ್ಯವೇಲ್ ನಾಯಕನ್ ಆಗಿ ಎಂಟ್ರಿ ಕೊಟ್ಟಿರುವ ಕಮಲ್ ಹಾಸನ್ ತಾನೊಬ್ಬ ಗ್ಯಾಂಗ್ ಸ್ಟರ್ ಅಂತಾ ಪರಿಚಯ ಮಾಡಿಕೊಳ್ಳುತ್ತಾರೆ. ಭರ್ಜರಿ ಆಕ್ಷನ್ ಮೂಲಕ ವಿರೋಧಿಗಳಿಗೆ ಟಕ್ಕರ್ ಕೊಡುವ ಉಳಗನಾಯಗನ್ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಎ.ಆರ್.ರೆಹಮಾನ್ ಮ್ಯೂಸಿಕ್ ಟೈಟಲ್ ಅನೌನ್ಸ್ ಮೆಂಟ್ ವಿಡಿಯೋದಲ್ಲಿ ಹೈಲೆಟ್ ಆಗಿದೆ. ಪಕ್ಕ ಆಕ್ಷನ್ ಎಂಟರ್ ಟೈನರ್ ಕಥಾನಕ ‘ಥಗ್ ಲೈಫ್’ ಸಿನಿಮಾದಲ್ಲಿ ತ್ರಿಷಾ ಕೃಷ್ಣನ್, ದುಲ್ಕರ್ ಸಲ್ಮಾನ್, ಜಯಂರವಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ರಾಜ್…
ಟೆಹ್ರಾನ್: ಗಾಜಾ (Gaza) ಮೇಲಿನ ಇಸ್ರೇಲ್ (Israel) ದಾಳಿಗಳನ್ನು ಕೊನೆಗೊಳಿಸಲು ಭಾರತ ತನ್ನ ಎಲ್ಲಾ ಸಾಮರ್ಥ್ಯಗಳನ್ನು ಬಳಸಬೇಕು ಎಂದು ಪ್ರಧಾನಿ ಮೋದಿಗೆ (Narendra Modi) ಕರೆ ಮಾಡಿ ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ (Ebrahim Raisi) ಒತ್ತಾಯಿಸಿದ್ದಾರೆ. ಮೋದಿ ಜೊತೆಗೆ ಫೋನ್ ಕರೆ ಮಾತುಕತೆ ವೇಳೆ ಇರಾನ್ (Iran) ಅಧ್ಯಕ್ಷ, ಪಾಶ್ಚಿಮಾತ್ಯ ವಸಾಹತುಶಾಹಿ ವಿರುದ್ಧ ಭಾರತದ ಹೋರಾಟಗಳು ಹಾಗೂ ವಿಶ್ವದ ಅಲಿಪ್ತ ಚಳವಳಿಯ ಸಂಸ್ಥಾಪಕರ ದೇಶವಾದ ಭಾರತದ ಸ್ಥಾನವನ್ನು ನೆನಪಿಸಿಕೊಂಡಿದ್ದಾರೆ. https://ainlivenews.com/supreme-ray-healing-centre-reiki-treatment/ ಗಾಜಾದ ತುಳಿತಕ್ಕೊಳಗಾದ ಜನರ ವಿರುದ್ಧ ಜಿಯೋನಿಸ್ಟ್ ಅಪರಾಧಗಳನ್ನು ಕೊನೆಗೊಳಿಸಲು ಭಾರತವು ತನ್ನೆಲ್ಲಾ ಸಾಮರ್ಥ್ಯ ಬಳಸುವ ನಿರೀಕ್ಷಿ ಇದೆ. ಕದನ ವಿರಾಮಕ್ಕಾಗಿ ಯಾವುದೇ ಜಾಗತಿಕ ಜಂಟಿ ಪ್ರಯತ್ನವನ್ನು ಟೆಹ್ರಾನ್ ಬೆಂಬಲಿಸುತ್ತದೆ. ಸಂಕಷ್ಟದಲ್ಲಿರುವ ಗಾಜಾದ ಜನರಿಗೆ ನೆರವು ನೀಡುತ್ತದೆ ಎಂದು ರೈಸಿ ತಿಳಿಸಿದ್ದಾರೆ. ಪ್ಯಾಲೆಸ್ತೀನ್ ಜನರ ಹತ್ಯೆಯು ಪ್ರಪಂಚದ ಎಲ್ಲಾ ಸ್ವತಂತ್ರ ರಾಷ್ಟ್ರಗಳನ್ನು ಕೆರಳಿಸಿದೆ. ಅಮಾಯಕ ಮಹಿಳೆಯರು ಮತ್ತು ಮಕ್ಕಳ ಹತ್ಯೆ, ಆಸ್ಪತ್ರೆಗಳು, ಶಾಲೆಗಳು, ಮಸೀದಿಗಳು, ಚರ್ಚ್‌ಗಳು ಮತ್ತು ವಸತಿ ಪ್ರದೇಶಗಳ ಮೇಲಿನ…
ಹಾಸನ: ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸಿಎಂ ಪ್ರಗತಿ ಪರಿಶೀಲನಾ ಸಭೆ ನಡೆಸಿದ್ದು, ಕಾಫಿ ಬೆಳೆಗಾರರಿಗೆ ಗುಡ್‌ನ್ಯೂಸ್ ನೀಡಿದ್ದಾರೆ. ಹೌದು, ಪೆಂಡಿಂಗ್ ವಿದ್ಯುತ್ ಬಿಲ್ ದರದ ಅಸಲು ಕಟ್ಟಿದರೆ, ಬಡ್ಡಿ ಮನ್ನಾ ಮಾಡುವ ಬಗ್ಗೆ ಘೋಷಣೆ ಮಾಡಿದ್ದಾರೆ. https://ainlivenews.com/supreme-ray-healing-centre-reiki-treatment/ ಕಾಫಿ ಬೆಳೆಗಾರರಿಗೆ ನೀಡಿರುವ ವಿದ್ಯುತ್ ಬಿಲ್ ಬಡ್ಡಿ ಅಥವಾ ಅಸಲು ಮನ್ನಾ ಮಾಡಲು ಸಕಲೇಶಪುರ ಶಾಸಕ ಸಿಮೆಂಟ್ ಮಂಜು ಮನವಿ ಮಾಡಿದ್ದರು. ಜೊತೆಗೆ ಕಾಫಿ ತೋಟದ ಬಿಲ್ ಪೆಂಡಿಂಗ್ಗೆ ಮನೆಯ ಕರೆಂಟ್ ಕಟ್ ಮಾಡಿದ್ದಾರೆ ಎಂದಿದ್ದರು. ಈ ಹಿನ್ನಲೆ ಮನೆಯ ಕರೆಂಟ್ ಕಟ್ ಮಾಡದಿರಲು ಸೂಚನೆ ನೀಡಿದ್ದಾರೆ.
ಬಿಗ್‌ಬಾಸ್ ಮನೆಯ ವಾತಾವರಣ ದಿನದಿಂದ ದಿನಕ್ಕೆ ಬದಲಾಗುತ್ತಿದೆ. ದಿನಕಳೆದಂತೆ ಸ್ನೇಹಗಳು, ಸಂಬಂಧಗಳೆಲ್ಲ ಮೆಲ್ಲಗೆ ಹಿನ್ನೆಲೆಗೆ ಸರಿದು ಸ್ಪರ್ಧಿಗಳ ಅಸಲಿ ಬಣ್ಣ ಹೊರಬರುತ್ತಿದೆ. ಹೊಸ ಹೊಸ ರೀತಿಯ ಟಾಸ್ಕ್‌ಗಳ ಮೂಲಕ ಬಿಗ್‌ಬಾಸ್ ಸ್ಪರ್ಧಿಗಳಿಗೆ ಶಾಕ್ ಕೊಡುತ್ತಲೇ ಇದ್ದಾರೆ. ಹಾಗಾದರೆ ಬಿಗ್‌ಬಾಸ್ ಮನೆಯಲ್ಲಿ ಇಂದು ಏನು ನಡೆಯುತ್ತಿದೆ? JioCinema ಬಿಡುಗಡೆ ಮಾಡಿರುವ ಬೆಳಗಿನ ವಿಡಿಯೊದಲ್ಲಿ ಹೊಸದೊಂದು ಟ್ವಿಸ್ಟ್ ಬಹಿರಂಗಗೊಂಡಿದೆ. ಈ ಟ್ವಿಸ್ಟ್ ಅಷ್ಟೇ ಶಾಕಿಂಗ್ ಕೂಡ ಆಗಿದೆ. ಅವರು ಒಂದೊಂದು ಚೇರ್‍ನಲ್ಲಿ ಕೂತಿದ್ದಾರೆ. ಮನೆಯ ಉಳಿದ ಸ್ಪರ್ಧಿಗಳೆಲ್ಲ ಅವರ ಎದುರಿಗೆ ಬಂದು ಅವರನ್ನು ಹೀನಾಮಾನವಾಗಿ ಬೈಯುತ್ತಿದ್ದಾರೆ. ಅವರ ವ್ಯಕ್ತಿತ್ವದ ಬಗ್ಗೆ, ಅವರು ಹಿಂದೆ ಆಡಿದ ಮಾತುಗಳ ಬಗ್ಗೆಯೆಲ್ಲ ಹೇಳಿ ಕೆಣಕುತ್ತಿದ್ದಾರೆ. ಆದರೂ ಸಂಗೀತಾ ಮತ್ತು ಕಾರ್ತಿಕ್ ಇಬ್ಬರೂ ತಲೆಬಗ್ಗಿಸಿ, ಒಂದೂ ಮಾತಾಡದೆ ಕೂತಿದ್ದಾರೆ. ತಲೆತಗ್ಗಿಸಿ ಕೂತಿದ್ದ ಕಾರ್ತಿಕ್ ಬಳಿಗೆ ಬಂದು ವಿನಯ್, ‘ಫ್ರೆಂಡಾ ನೀನು? ಒಬ್ಬ ಒಂಟಿ ಮನುಷ್ಯನಾಗೇ ಉಳಿಯೋದು ನಿನ್ ಜೀವನದಲ್ಲಿ’ ಎಂದು ಗುಡುಗಿದ್ದಾರೆ. ಸಂಗೀತಾ ಎದುರಿಗೆ ನಿಂತ ನಮ್ರತಾ, ‘ಯಾವೊಳು ಬಕೆಟ್…
ಬೆಳಗಾವಿ: ಆ ಊರಲ್ಲಿ ಮಹಾ ಮಾರಿ ಕರೋನಾದಂತ ಕ್ಲಿಷ್ಟ ಸಮಯದಲ್ಲಿ ಕೇವಲ 3 ಜನ ಕರೋನದಿಂದ ಸಾವನ್ನಪ್ಪಿದರು. ಆದರೆ ಈಗ ದೇವಿಯ ಶಾಪಕ್ಕೆ ಒಂದೇ ತಿಂಗಳಿನಲ್ಲಿ 30 ಜನ ಬಲಿ ಆಗಿದ್ದಾರೆ. 10 ವರ್ಷದ ಮಕ್ಕಳಿಂದ ಹಿಡಿದು 60 ವರ್ಷದ ವಯಸ್ಕರು ಸಹ ಸಾವನ್ನಪ್ಪುತ್ತಿದ್ದು ದೇವಿಯ ಶಾಪ ಊರಿಗೆ ತಗುಲಿದೆ ಎನ್ನಲಾಗ್ತಿದೆ. ಅಷ್ಟಕ್ಕೂ ದೇವಿಯ ಶಾಪ ತಟ್ಟಿರೋದು ನಿಜವಾ..? ದೇವಿ ಯಾಕೆ ಊರ ಜನಕ್ಕೆ ಶಾಪ ಕೊಡ್ತಾಳೆ ಅಂದ್ರಾ.. ಈ ಸ್ಟೋರಿ ನೋಡಿ. ಚಿಂತಾಕ್ರಾಂತರಾಗಿ ಕುಳಿತಿರುವ ಊರ ಜನ. ವಿರೂಪಗೊಂಡಿರುವ ದೇವರ ವಿಗೃಹ. ಸಾವಿನ ಮನೆಯಂತಾದ ಗ್ರಾಮ. ಈ ದೃಶ್ಯಗಳು ಕಂಡು ಬಂದಿದ್ದು ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ತೂರನೂರು ಗ್ರಾಮದಲ್ಲಿ. ಈ ಗ್ರಾಮದಲ್ಲಿ ಕಳೆದ ಒಂದು ತಿಂಗಳಿನಿಂದ ಪ್ರತಿ ಮನೆಯಲ್ಲೂ ಸಹ ಸಾವು ಸಂಭವಿಸುತ್ತಿದೆ. ಚಿಕ್ಕ ವಯಸ್ಸಿನ ಮಕ್ಕಳೂ ಸೇರಿದಂತೆ ದೊಡ್ಡವರ ವರೆಗೂ ಸಹ ಬೇರೆ ಬೇರೆ ಕಾರಣಗಳಿಂದ ತೀರಿ ಹೋಗುತ್ತಿದ್ದಾರೆ. ಇದು ಗ್ರಾಮಸ್ಥರನ್ನು ಆತಂಕಕ್ಕೆ ಎಡೆ ಮಾಡಿದ್ದು, ಸಾವಿಗೆ…
ಕಲಬುರಗಿ:- ಕಲಬುರಗಿಯಲ್ಲಿ ನಡೆದ KEA ಅಕ್ರಮ ಪ್ರಕರಣದ ತನಿಖೆ ಸಿಐಡಿ ಕೊಡುವ ವಿಚಾರ ಸದ್ಯಕ್ಕಿಲ್ಲ ಅಂತ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಕಲಬುರಗಿಯಲ್ಲಿಂದು ಮಾತನಾಡಿದ ಪ್ರಿಯಾಂಕ್ ಅಕ್ರಮ ಪ್ರಕರಣದ ತನಿಖೆ ಚುರುಕಾಗಿ ನಡೀತಿದೆ ಮೊದಲು ಪ್ರಾಥಮಿಕ ತನಿಖೆ ವರದಿ ಬರಲಿ ನಂತ್ರ ಸಿಐಡಿಗೆ ಕೊಡೋ ವಿಚಾರ ಮಾಡೋಣ ಅಂದ್ರು. ಇದೇವೇಳೆ ಆರೋಪಿ RD ಪಾಟೀಲ್ ತಪ್ಪಿಕೊಳ್ಳಲು ಯಾರೇ ಸಹಕಾರ ಮಾಡಿದ್ರೂ ಅಂತಹವರ ವಿರುದ್ಧ ಕ್ರಮ ಖಂಡಿತ ಅಂತ ಹೇಳಿದ್ರು.ತನಿಖೆ ವೇಳೆ ಒಂದು ಮೊಬೈಲ್ ಪತ್ತೆಯಾಗಿದೆ ಆದ್ರೆ ಗೌಪ್ಯತೆ ಕಾಪಾಡುವ ನಿಟ್ಟಿನಲ್ಲಿ ಆ ಮೊಬೈಲ್ ಯಾರದ್ದು ಅಂತ ಹೇಳೋದಿಲ್ಲ ಅಂದ್ರು.
ಮುಂಬೈ: ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಇತಿಹಾಸದಲ್ಲಿ ಅಫಘಾನಿಸ್ತಾನ ತಂಡದ ಪರ ಶತಕ ಬಾರಿಸಿದ ಮೊದಲ ಬ್ಯಾಟ್ಸ್‌ಮನ್ ಎಂಬ ಇತಿಹಾಸ ಬರೆದಿದ್ದಾರೆ. ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ನವೆಂಬರ್ 7ರಂದು (ಮಂಗಳವಾರ) ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಅಫಘಾನಿಸ್ತಾನ ತಂಡದ ಪರ ಮಿಂಚಿನ ಆಟವಾಡಿದ ಝದ್ರಾನ್, 143 ಎಸೆತಗಳಲ್ಲಿ 8 ಫೋರ್ ಮತ್ತು 3 ಸಿಕ್ಸರ್‌ಗಳೊಂದಿಗೆ ಅಜೇಯ 129 ರನ್ ಬಾರಿಸಿದರು. ವೇಗದ ಬೌಲರ್ ಜಾಶ್ ಹೇಝಲ್‌ವುಡ್ ಎದುರು 44ನೇ ಓವರ್‌ನಲ್ಲಿ ಇಬ್ರಾಹಿಮ್ ಝದ್ರಾನ್ ಶತಕ ಬಾರಿಸಿದರು. 131 ಎಸೆತಗಳಲ್ಲೇ ಶತಕ ದಕ್ಕಿಸಿಕೊಂಡ ಝದ್ರಾನ್ ವಿಶೇಷ ದಾಖಲೆ ತಮ್ಮದಾಗಿಸಿಕೊಂಡರು. ಇದಕ್ಕೂ ಮುನ್ನ 2015ರ ವಿಶ್ವಕಪ್‌ನಲ್ಲಿ ಸ್ಕಾಟ್ಲೆಂಡ್ ಎದುರು ಶಮಿಯುಲ್ಲಾ ಶಿನ್ವಾರಿ 147 ಎಸೆತಗಳಲ್ಲಿ ಬಾರಿಸಿದ್ದ 96 ರನ್ ಅಫಘಾನಿಸ್ತಾನ ಪರ ವಿಶ್ವಕಪ್‌ನಲ್ಲಿ ಬೆಸ್ಟ್ ಬ್ಯಾಟಿಂಗ್ ಪ್ರದರ್ಶನವಾಗಿತ್ತು. ಆ ದಾಖಲೆಯನ್ನು ಈಗ ಝದ್ರಾನ್ ಮುರಿದು ಹಾಕಿದ್ದಾರೆ. ಇಬ್ರಾಹಿಮ್ ಝದ್ರಾನ್, ಪಾಕಿಸ್ತಾನ ವಿರುದ್ಧ ನಡೆದ ಪಂದ್ಯದಲ್ಲಿ 87 ರನ್ ಬಾರಿಸುವ ಮೂಲಕ…
ಮುಂಬೈ: ಒಂದು ಕಡೆ 7 ಮಂದಿ ಬ್ಯಾಟ್ಸ್‌ಮ್‌ಗಳು ಔಟ್, ಮತ್ತೊಂದು ಕಡೆ ಸ್ನಾಯು ಸೆಳೆತದ ನೋವು, ಇದರ ನಡುವೆಯೂ ಅಸಾಧ್ಯವಾದದ್ದು ಯಾವುದೂ ಇಲ್ಲ ಎಂಬುದನ್ನು ಆಸ್ಟ್ರೇಲಿಯಾ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ತೋರಿಸಿಕೊಟ್ಟರು. ಮಂಗಳವಾರ ಅಫಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಚೊಚ್ಚಲ ದ್ವಿಶತಕ ಸಿಡಿಸುವ ಮೂಲಕ ಮ್ಯಾಕ್ಸ್‌ವೆಲ್ ಆಸ್ಟ್ರೇಲಿಯಾ ತಂಡಕ್ಕೆ 3 ವಿಕೆಟ್ ರೋಚಕ ಗೆಲುವು ತಂದುಕೊಟ್ಟರು. 292 ರನ್‌ಗಳ ಗುರಿ ಹಿಂಬಾಲಿಸಿದ ಆಸ್ಟ್ರೇಲಿಯಾ ತಂಡ 91 ರನ್‌ಗಳಿಗೆ ಪ್ರಮುಖ 7 ವಿಕೆಟ್‌ಗಳನ್ನು ಕಳೆದುಕಂಡು ಸೋಲಿನ ದವಡೆಗೆ ಸಿಲುಕಿತ್ತು. ಈ ವೇಳೆ ಜೊತೆಯಾದ ಪ್ಯಾಟ್ ಕಮಿನ್ಸ್ ಹಾಗೂ ಗ್ಲೆನ್ ಮ್ಯಾಕ್ಸ್‌ವೆಲ್ ಜೋಡಿ 8ನೇ ವಿಕೆಟ್‌ಗೆ 202 ರನ್‌ಗಳ ದಾಖಲೆಯ ಜೊತೆಯಾಟವನ್ನು ಆಡಿತು. ಆ ಮೂಲಕ ಆಸ್ಟ್ರೇಲಿಯಾ ತಂಡವನ್ನು ಅಪಾಯದಿಂದ ಪಾರು ಮಾಡಿತ್ತು. ವಿಶೇಷವಾಗಿ ಆಸ್ಟ್ರೇಲಿಯಾದ ಗೆಲುವಿನ ಶ್ರೇಯ ಗ್ಲೆನ್ ಮ್ಯಾಕ್ಸ್‌ವೆಲ್‌ಗೆ ಸಿಗಬೇಕು. ಏಕೆಂದರೆ, ಒಂದು ತುದಿಯಲ್ಲಿ ಕಮಿನ್ಸ್ ರಕ್ಷಣಾತ್ಮಕ ಆಟವಾಡುತ್ತಿದ್ದರೆ, ಮತ್ತೊಂದು ತುದಿಯಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್ ಫೋರ್-ಸಿಕ್ಸರ್‌ಗಳ ಮೂಲಕ ಹಬ್ಬ ಮಾಡಿದರು. ಇದರ ನಡುವೆ ಅವರು…
ಬೆಂಗಳೂರು;- ಪೊಲೀಸ್ ಇನ್ ಫಾರ್ಮರ್ ಎಂದು ಪೊಲೀಸರಿಗೆಯೇ ವಂಚನೆ ಮಾಡ್ತಿದ್ದ ಕಿಲಾಡಿಯನ್ನು ಸಿಸಿಬಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಕಳೆದ ನಾಲ್ಕು ವರ್ಷದಿಂದ ಪೊಲೀಸರಿಗೆ ವಂಚಿಸಿ ಪಬ್ ಬಾರ್ಗಳಲ್ಲಿ ಮೋಜುಮಸ್ತಿ ಮಾಡುತ್ತಿದ್ದ ವಸೀಂ ಎಂಬ ಆರೋಪಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಆರೋಪಿ ವಸೀಂ, ಪೊಲೀಸರ ಜೊತೆಯಲ್ಲಿ ಇದ್ದುಕೊಂಡೇ ಅವರಿಗೆ ಸಹಾಯ ಮಾಡುವಂತೆ ಅವರ ಬಳಿಯಿಂದಲೇ ಹಣ ಪಡೆದು ವಂಚಿಸಿದ್ದಾನೆ. ಅಲ್ಲಿ ಇಲ್ಲಿ ಸುತ್ತಾಡುತ್ತ ಮೋಜು ಮಸ್ತಿ ಮಾಡುತ್ತ, ಹಾಯಾದ ಜೀವನ ನಡೆಸುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಅಲ್ಲೊಂದು ದಂಧೆ ನಡೀತಿದೆ, ನಾನು ಅಲ್ಲಿಗೆ ಹೋಗಿ ಲೊಕೇಶನ್ ಕಳಿಸ್ತೀನಿ. ದಂಧೆಯಲ್ಲಿ ಏನೇನು ನಡೆಯುತ್ತೆ ಎಂದು ಮಾಹಿತಿ ನೀಡ್ತಿನಿ ಎಂದು ಪೊಲೀಸರಿಗೆ ಆರೋಪಿ ವಸೀಂ ನಂಬಿಸುತ್ತಿದ್ದ. ಪೊಲೀಸರು ಈಗ್ಲೇ ಬರ್ತೀವಿ ಅಂದ್ರೆ ಬೇಡ ನಾನು ಅಲ್ಲಿಗೆ ಹೋಗಿ ಸ್ಪಾಟ್ ಲೊಕೇಶನ್ ಕಳಿಸ್ತೀನಿ ಅಂತಿದ್ದ. ಸರ್ ಆಟೋ ಪ್ರಾಬ್ಲಂ ಆಗ್ಬಿಟ್ಟಿದೆ, ಪೆಟ್ರೋಲ್ ಬೇಕಿತ್ತು, ಬೈಕ್ ಇಲ್ಲ. ಮನೆಯಲ್ಲಿ ಸಮಸ್ಯೆ ಎಂದು ನಂಬಿಸಿ ಎರಡ್ಮೂರು ಸಾವಿರ ಫೋನ್ ಪೇ…