ಬಳ್ಳಾರಿ: ಕಾಂಗ್ರೆಸ್ ಪಕ್ಷದಲ್ಲಿ ಇರುವವರೆಲ್ಲ ಮುಖ್ಯಮಂತ್ರಿ ಆಗುವವರೇ? ನಾನು ಸಿಎಂ, ನಾನು ಸಿಎಂ ಎಂದು 224 ಜನರೂ ಹೇಳುತ್ತಿದ್ದಾರೆ ಎಂದು ಬಳ್ಳಾರಿಯಲ್ಲಿ ಕಾಂಗ್ರೆಸ್ ವಿರುದ್ಧ ಮಾಜಿ ಶಾಸಕ ಈಶ್ವರಪ್ಪ ವಾಗ್ದಾಳಿ ನಡೆಸಿದರು. ಇನ್ನೂ ರಾಜಕಾರಣದಲ್ಲಿ ಕಣ್ಣು ಬಿಡದ ಪ್ರಿಯಾಂಕ್ ಸಿಎಂ ಅಂತಿದ್ದಾರೆ. ಇನ್ನು ಪ್ರಿಯಾಂಕ್ ಖರ್ಗೆ ತಂದೆ ಹೆಸರು ಹೇಳಿದ್ದರೆ ಒಪ್ಪಿಕೊಳ್ಳುತ್ತಿದ್ದೆ. https://ainlivenews.com/supreme-ray-healing-centre-reiki-treatment/ ಮಲ್ಲಿಕಾರ್ಜುನ ಖರ್ಗೆಯನ್ನೇ ಸಿಎಂ ಆಗಲು ಬಿಟ್ಟಿಲ್ಲ, ಇವರನ್ನು ಬಿಡ್ತಾರಾ? ಸತೀಶ್ ಜಾರಕಿಹೊಳಿ ಕೂಡ ಮುಖ್ಯಮಂತ್ರಿ ರೇಸ್ನಲ್ಲಿದ್ದಾರೆ ಅಂತಾರೆ. ಡಾ.ಜಿ.ಪರಮೇಶ್ವರ್ ಮುಖ್ಯಮಂತ್ರಿಯಾಗಲಿ ಎಂದು ರಾಜಣ್ಣ ಹೇಳ್ತಾರೆ. ಪರಮೇಶ್ವರ್ ದೇವರು ಅನುಗ್ರಹ ಇದ್ರೆ ಸಿಎಂ ಆಗ್ತೇನೆ ಅಂತಾ ಹೇಳ್ತಾರೆ ಎಂದು ವಾಗ್ದಾಳಿ ನಡೆಸಿದರು.
Author: AIN Author
ತನುಷ್ ಸಿನಿಮಾಸ್ ಲಾಂಛನದಲ್ಲಿ ತನುಷ್ ಶಿವಣ್ಣ ನಿರ್ಮಿಸಿ, ನಾಯಕನಾಗಿ ನಟಿಸಿರುವ ಹಾಗೂ ವಿ.ಲವ ನಿರ್ದೇಶನದ “Mr ನಟ್ವರ್ ಲಾಲ್” ಚಿತ್ರದ ಯುಗಳಗೀತೆಯೊಂದು ಬಿಡುಗಡೆಯಾಗಿದೆ. ಈ ಚಿತ್ರಕ್ಕಾಗಿ ಬಹದ್ದೂರ್ ಚೇತನ್ ಕುಮಾರ್ ಬರೆದಿರುವ “ಅಚ್ಚಚ್ಚಚ್ಚು ಅಚ್ಚುಮೆಚ್ಚು” ಎಂಬ ಪ್ರೇಮಗೀತೆ ಆನಂದ್ ಆಡಿಯೋ ಮೂಲಕ ಹೊರಬಂದಿದ್ದು ಎಲ್ಲರ ಮನ ಗೆಲ್ಲುತ್ತಿದೆ. ಧರ್ಮವಿಶ್ ಸಂಗೀತ ಸಂಯೋಜಿಸಿರುವ ಈ ಯುಗಳಗೀತೆ ಗಾಯಕ ಸಾಯಿವಿಘ್ನೇಶ್ ಕಂಠಸಿರಿಯಲ್ಲಿ ಸುಮಧುರವಾಗಿ ಮೂಡಿಬಂದಿದೆ. ತನುಷ್ ಶಿವಣ್ಣ ಹಾಗೂ ಸೋನಾಲ್ ಮೊಂತೆರೊ ಈ ಹಾಡಿನಲ್ಲಿ ಅಭಿನಯಿಸಿದ್ದಾರೆ. ವಿಭಿನ್ನ ಕಥಾಹಂದರ ಹೊಂದಿರುವ ಈ ಚಿತ್ರವನ್ನು ವಿ.ಲವ ನಿರ್ದೇಶಿಸಿದ್ದಾರೆ. ವಿಲಿಯಂ ಡೇವಿಡ್ ಛಾಯಾಗ್ರಹಣ, ಧರ್ಮವಿಶ್ ಸಂಗೀತ ನಿರ್ದೇಶನ, ಕೆ.ಎಂ.ಪ್ರಕಾಶ್ ಸಂಕಲನ ಹಾಗೂ ಡಿಫರೆಂಟ್ ಡ್ಯಾನಿ, ಥ್ರಿಲ್ಲರ್ ಮಂಜು, ರಾ ಪುಷ್ಪರಾಜು ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ. ತನುಷ್ ಶಿವಣ್ಣ, ಸೋನಾಲ್ ಮೊಂತೆರೊ, ನಾಗಭೂಷಣ, ಕಾಕ್ರೋಜ್ ಸುಧಿ, ಯಶ್ ಶೆಟ್ಟಿ, ರಾಜೇಶ್ ನಟರಂಗ, ರಘು ರಾಮನಕೊಪ್ಪ, ಹರಿಣಿ ಶ್ರೀಕಾಂತ್, ಸುಂದರರಾಜ್, ಕಾಂತರಾಜು ಕಡ್ಡಿಪುಡಿ ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ಈಗಾಗಲೇ…
ಬೆಂಗಳೂರು: ರಾಜ್ಯದಲ್ಲಿ ಮಳೆ ಇಲ್ಲದೇ ಬರಗಾಲದಿಂದ ತತ್ತರಿಸಿದ ರೈತರಿಗೆ ಸಿಎಂ ಸಿದ್ದರಾಮಯ್ಯ ಸಿಹಿ ಸುದ್ದಿ ಕೊಟ್ಟಿದ್ದಾರೆ. ಇಂಧನ ಇಲಾಖೆಯ ಪ್ರಗತಿಪರಿಶೀಲನೆ ಸಭೆ ನಡೆಸಿದ ಬಳಿಕ ರೈತರಿಗೆ ಅನುಕೂಲವಾಗುವಂತೆ 7 ಗಂಟೆ 3ಫೇಸ್ ವಿದ್ಯುತ್ ನೀಡೋ ಮಹತ್ವದ ಆದೇಶವನ್ನ ಹೊರಡಿಸಿದ್ದಾರೆ ಸಿದ್ದರಾಮಯ್ಯ. ಮಧ್ಯರಾತ್ರಿಯ ಕತ್ತಲಲ್ಲಿ ಜೀವ ಭಯದಿಂದ ನೀರು ಹಾಯಿಸ್ತಿದ್ದ ರೈತರ ಮೊಗದಲ್ಲಿ ಇದೀಗ ಮಂದಹಾಸ ಮೂಡುವಂತಾಗಿದೆ…. ಕರ್ನಾಟಕದಲ್ಲಿ ಮಳೆಯ ಕೊರತೆ ಹಿನ್ನೆಲೆ ರೈತರು ಸಂಕಷ್ಟಕ್ಕೀಡಾಗಿದ್ದಾರೆ,ಮಳೆಯಿಲ್ಲದೆ ತೀವ್ರ ಬರಗಾಲ ಎದುರಾಗಿದ್ದು ಬಿತ್ತಿದ ಬೆಳೆಗಳೆಲ್ಲಾ ಒಣಗಿಹೋಗಿವೆ. ಇತ್ತ ಬೋರ್ ವೆಲ್ ಗಳನ್ನು ನಂಬಿ ಬಿತ್ತನೆ ಮಾಡಿದ್ದ ರೈತರು ವಿದ್ಯುತ್ ಇಲ್ಲದೆ ಸಂಕಷ್ಟದಲ್ಲಿದ್ದಾರೆ, ರಾತ್ರಿವೇಳೆ ಕಣ್ಣಾಮುಚ್ಚಾಲೆಯಂತೆ 3-5 ಗಂಟೆ ಕೊಡೋ ಕರೆಂಟ್ ನೆಚ್ಚಿಕೊಂಡು ಅನ್ನದಾತ ಜೀವಕ್ಕೆ ಕುತ್ತು ತಂದುಕೊಳ್ತಿದ್ದಾನೆ. ಸರ್ಕಾರದ ವಿರುದ್ಧ ರೈತರು ಕೆಂಡ ಕಾರ್ತಿದ್ದಂತೆ ಎಚ್ಚೆತ್ತ ಸಿಎಂ ಸಿದ್ದರಾಮಯ್ಯ ಇಂದು ಇಂಧನ ಇಲಾಖೆಯ ಸಭೆ ನಡೆಸಿ ರೈತರಿಗೆ ಬಂಫರ್ ಗಿಫ್ಟ್ ಕೊಟ್ಟಿದ್ದಾರೆ…. ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಸಚಿವ ಕೆಜೆ ಜಾರ್ಜ್ ಸೇರಿದಂತೆ ಇಲಾಖೆಯ ಹಿರಿಯ…
ಬೆಂಗಳೂರು: ಹಬ್ಬ ಬಂತು ಅಂದರೆ ಖಾಸಗಿ ಬಸ್ಗಳಿಂದ ಹಗಲು ದರೋಡೆ ಶುರುವಾಗುತ್ತೆ. ಸಾಲು ಸಾಲು ರಜೆ ಅಂತ ಗೊತ್ತಾದ್ರೆ ಎರಡ್ಮೂರು ಪಟ್ಟು ದರ ಏರಿಕೆ ಮಾಡಿ, ಜನರಿಂದ ಸುಲಿಗೆ ಶುರುವಾಗುತ್ತೆ. ದೀಪಾವಳಿಗೆ ಅಂತ ಮನೆ ಕಡೆ ಹೊಗಲು ಸಿದ್ದವಾಗಿರೋರಿಗೆ ಶಾಕ್ ಎದುರಾಗಿದೆ.. ಪ್ರವೈಟ್ ಬಸ್ನಲ್ಲಿ ಟಿಕೆಟ್ ಬುಕ್ ಮಾಡಲು ಹೋದವರು ಡಬಲ್, ತ್ರಿಬಲ್ ರೇಟ್ ಕೊಡಬೇಕಿದೆ. ಹಬ್ಬ, ಸಾಲು ಸಾಲು ರಜೆ ಬಂದ್ರೆ ಸಾಕು ಖಾಸಗಿ ಬಸ್ ಗಳ ಸುಲಿಗೆ ಶುರುವಾಗುತ್ತೆ. ಕಣ್ಣುಮುಂದೆ ಸಿಕ್ಕಾಪಟ್ಟೆ ಪ್ರಯಾಣಿಕರಿಂದ ಸುಲಿಗೆ ನಡೆಯುತ್ತಿದ್ರೂ ಸಾರಿಗೆ ಇಲಾಖೆ ಮಾತ್ರ ತಲೆನೇಕೆಡಿಸಿಕೊಳ್ಳಲ್ಲ.ಪ್ರತಿ ಹಬ್ಬ ಹರಿದಿನದ ವೇಳೆ ಹೆಸರಿಗೆ ಮಾತ್ರ ಖಾಸಗಿ ಬಸ್ ಗಳ ಮೇಲೆ ದಾಳಿ ಮಾಡೋ ಇಲಾಖೆ ಶಾಶ್ವತವಾಗಿ ಏರಿಕೆಗೆ ಕಡಿವಾಣ ಹಾಕಲು ಪ್ರಯತ್ನ ನಡೆಯುತ್ತಿಲ್ಲ.ಇದೀಗ ದೀಪಾವಳಿ ಬರುತ್ತಿದ್ದು, ಇದನ್ನ ಬಂಡವಾಳ ಮಾಡಿಕೊಂಡ ಖಾಸಗಿ ಬಸ್ ಮಾಲೀಕರು ಯರಬಿರ್ರಿ ಟಿಕೆಟ್ ದರವನ್ನ ಹೆಚ್ಚಸಿದ್ದಾರೆ. ಹೌದು ದೀಪಾವಳಿ ಹೀಗೆ ಹಬ್ಬಗಳ ಸೀಜನ್ ಬಂತು ಅಂದರೆ ಖಾಸಗಿ ಬಸ್…
ತುಮಕೂರು: ಗಾಳಿ ಮಳೆ ಸಹಿತ ಭರ್ಜರಿ ಮಳೆ ಸುರಿದ ಪರಿಣಾಮ ವಾಹನ ಸವಾರರು ಪರದಾಡುವಂತಾಗಿದೆ. ಮಳೆಯಿಂದಾಗಿ ಚಾಲಕನ ನಿಯಂತ್ರಣ ತಪ್ಪಿ ಕೆಎಸ್‌ಆರ್‌ಟಿಸಿ ಬಸ್ ಚರಂಡಿಗೆ ಇಳಿದಿರುವ ಘಟನೆ ನಡೆದಿದೆ. ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನಲ್ಲಿ ನಿಟ್ಟರಹಳ್ಳಿ ಗ್ರಾಮದಲ್ಲಿ KSRTC ಬಸ್ ಚಾಲಕನ ನಿಯಂತ್ರಣ ಕಳೆದುಕೊಂಡು ಚರಂಡಿಗೆ ಇಳಿದಿರುವ ಘಟನೆ ನಡೆದಿದೆ. ಮಧುಗಿರಿಯಿಂದ ಕೊಂಡವಾಡಿಗೆ ತೆರಳುತ್ತಿದ್ದ ಸರ್ಕಾರಿ ಬಸ್ ಆಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಬಸ್ ಚರಂಡಿಗೆ ಸಿಲುಕಿಕೊಂಡಿದ್ದರಿಂದ ಶಾಲಾ -ಕಾಲೇಜುಗಳಿಗೆ ಹೋಗಲು ಬಸ್ ಇಲ್ಲದೆ ವಿದ್ಯಾರ್ಥಿಗಳು ಪರದಾಡುವಂತಾಗಿತ್ತು.
ಬೆಂಗಳೂರು: ಹಿರಿಯ ರಾಜಕೀಯ ಮುತ್ಸದ್ದಿ ಡಿ.ಬಿ. ಚಂದ್ರೇಗೌಡ ಅವರ ನಿಧನದ ಸುದ್ದಿ ಕೇಳಿ ಅತ್ಯಂತ ದುಃಖವಾಗಿದೆ ಎಂದು ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಅವರು ಸಂತಾಪ ಸೂಚಿಸಿದರು. ರಾಜ್ಯ ರಾಜಕಾರಣದಲ್ಲಿ ತಮ್ಮದೇ ಆದ ವ್ಯಕ್ತಿತ್ವದಿಂದ ಗುರುತಿಸಿಕೊಂಡಿದ್ದ ಚಂದ್ರೇಗೌಡರು ನನ್ನ ನೆರೆ ಮನೆಯಲ್ಲಿಯೇ ಇದ್ದು ನನಗೆ ಅತ್ಯಂತ ಆತ್ಮೀಯರಾಗಿದ್ದರು. ಕಳೆದ ತಿಂಗಳು ಅವರ ಮನೆಗೆ ತೆರಳಿ ಆರೋಗ್ಯ ವಿಚಾರಿಸಿದ್ದೆ, ಈಗ ಅವರು ನಮ್ಮನ್ನು ಅಗಲಿರುವುದು ಮನೆಯ ಹಿರಿಯರೊಬ್ಬರನ್ನು ಕಳೆದುಕೊಂಡಂತೆ ಆಗುತ್ತಿದೆ. ಚಂದ್ರೇಗೌಡರ ಅಗಲಿಕೆಯಿಂದ ರಾಜ್ಯ ಒಬ್ಬ ಪ್ರಾಮಾಣಿಕ ಹಿರಿಯ ನಾಯಕನನ್ನು ಕಳೆದುಕೊಂಡಂತಾಗಿದೆ. ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ, ಅವರ ಅಗಲಿಕೆಯ ದುಖವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬ ವರ್ಗ ಹಾಗೂ ಅವರ ಅಭಿಮಾನಿಗಳಿಗೆ ನೀಡಲಿ ಎಂದು ಪ್ರಾರ್ಥಿಸುತ್ತೇನೆ.
ಹುಬ್ಬಳ್ಳಿ, ನ. 07: ಸರಳ ಸಜ್ಜನಿಕೆಯ ವ್ಯಕ್ತಿತ್ವದ ಹಿರಿಯ ರಾಜಕಾರಣಿ ಡಿ.ಬಿ.ಚಂದ್ರೇಗೌಡರ ಅಗಲಿಕೆಗೆ ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ತಮ್ಮ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಶಾಸಕರಾಗಿ,ವಿಧಾನ ಪರಿಷತ್ ಸದಸ್ಯರಾಗಿ, ಸಂಸದರಾಗಿ, ರಾಜ್ಯ ಸಭಾಸದಸ್ಯರಾಗಿ, ಸಚಿವರಾಗಿ ಸೇವೆ ಸಲ್ಲಿಸಿದ್ದ ಡಿ.ಬಿ.ಚಂದ್ರೇಗೌಡರು ಸದಾ ಸಮಾಜದ ಹಿತ ಚಿಂತನೆ ಮಾಡುವವರಾಗಿದ್ದರು.ಶ್ರೀ ಜಗದ್ಗುರು ರಂಭಾಪುರಿ ಮಹಾಪೀಠದೊಂದಿಗೆ ಅತ್ಯಂತ ಆತ್ಮೀಯ ಸಂಬಂಧ ಹೊಂದಿದ್ದ ಅವರು ಶ್ರೀ ಪೀಠದ ಮೂವರು ಜಗದ್ಗುರುಗಳವರೊಡನೆ ನಿಕಟ ಸಂಪರ್ಕ ಹೊಂದಿದವರಾಗಿದ್ದರು. ಪ್ರಸ್ತುತ ಜಗದ್ಗುರುಗಳ ಹಲವಾರು ಸಮಾರಂಭಗಳಲ್ಲಿ ಪಾಲ್ಗೊಂಡಿದ್ದ ಅವರ ಅಗಲಿಕೆ ತಮ್ಮ ಮನಸ್ಸಿಗೆ ನೋವನ್ನುಂಟು ಮಾಡಿದೆ. ಅವರ ಅಗಲಿದ ಪವಿತ್ರ ಆತ್ಮಕ್ಕೆ ದಯಾಘನನಾದ ಪರಮಾತ್ಮನು ಚಿರಶಾಂತಿಯನ್ನು ಅನುಗ್ರಹಿಸಲಿ ಹಾಗೂ ಅವರ ಕುಟುಂಬ ವರ್ಗದವರಿಗೆ ಅವರ ಅಗಲಿಕೆಯ ನೋವನ್ನು ಸಹಿಸುವ ಶಕ್ತಿ ನೀಡಲಿ ಎಂದು ಶ್ರೀ ರಂಭಾಪುರಿ ಜಗದ್ಗುರುಗಳು ತಮ್ಮ ಸಂತಾಪ ಸೂಚಕ ಸಂದೇಶದಲ್ಲಿ ತಿಳಿಸಿದ್ದಾರೆ.
ಬೆಂಗಳೂರು: ಹಿರಿಯ ರಾಜಕೀಯ ಮುತ್ಸದ್ದಿ ಡಿ.ಬಿ. ಚಂದ್ರೇಗೌಡ ಅವರ ನಿಧನದ ಸುದ್ದಿ ಕೇಳಿ ಅತ್ಯಂತ ದುಖವಾಗಿದೆ. ರಾಜ್ಯ ರಾಜಕಾರಣದಲ್ಲಿ ತಮ್ಮದೇ ಆದ ವ್ಯಕ್ತಿತ್ವದಿಂದ ಗುರುತಿಸಿಕೊಂಡಿದ್ದ ಚಂದ್ರೇಗೌಡರು ನನ್ನ ನೆರೆ ಮನೆಯಲ್ಲಿಯೇ ಇದ್ದು ನನಗೆ ಅತ್ಯಂತ ಆತ್ಮೀಯರಾಗಿದ್ದರು. ಕಳೆದ ತಿಂಗಳು ಅವರ ಮನೆಗೆ ತೆರಳಿ ಆರೋಗ್ಯ ವಿಚಾರಿಸಿದ್ದೆ, ಈಗ ಅವರು ನಮ್ಮನ್ನು ಅಗಲಿರುವುದು ಮನೆಯ ಹಿರಿಯರೊಬ್ಬರನ್ನು ಕಳೆದುಕೊಂಡಂತೆ ಆಗುತ್ತಿದೆ. ಚಂದ್ರೇಗೌಡರ ಅಗಲಿಕೆಯಿಂದ ರಾಜ್ಯ ಒಬ್ಬ ಪ್ರಾಮಾಣಿಕ ಹಿರಿಯ ನಾಯಕನನ್ನು ಕಳೆದುಕೊಂಡಂತಾಗಿದೆ. ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ, ಅವರ ಅಗಲಿಕೆಯ ದುಖವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬ ವರ್ಗ ಹಾಗೂ ಅವರ ಅಭಿಮಾನಿಗಳಿಗೆ ನೀಡಲಿ ಎಂದು ಪ್ರಾರ್ಥಿಸುತ್ತೇನೆ.
ಬೆಂಗಳೂರು: ಬ್ರಾಂಡೆಡ್ ಕಂಪನಿಯ ಹೆಸರಲ್ಲಿ ನಕಲಿ ಬಟ್ಟೆಗಳನ್ನು ತಯಾರಿಕ ಕಂಪನಿ ಮೇಲೆ ಬೊಮ್ಮನಹಳ್ಳಿ ಪೊಲೀಸರು ದಾಳಿ ನಡೆಸಿ ಲಕ್ಷಾಂತರ ಮೌಲ್ಯದ ಬಟ್ಟೆಗಳನ್ನು ವಶಪಡಿಸಿಕೊಂಡಿರುವ ಘಟನೆ ನಡೆದಿದೆ.. ಬೊಮ್ಮನಹಳ್ಳಿ ಹೊಸೂರು ಮುಖ್ಯ ರಸ್ತೆಯಲ್ಲಿರುವ ರಾಜು ಅಂಡ್ ಕಂಪನಿಯಲ್ಲಿ ಗಾರ್ಮೆಂಟ್ಸ್ ನಲ್ಲಿLINEN CLUB, Armani, Gant, Levis, RL-POLO, Hugo-Boss, UNDER-ARMOUR ಏಳು ಬ್ರಂಡೆಟ್ ಕಂಪನಿಗಳ ನಕಲಿ ಮಾಡಿ ಮಾರಾಟ ಮಾಡುತ್ತಿದ್ದ ಅಸಾಮಿಗಳು . ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಮಾಲ್ ವಶಕ್ಕೆ ಪಡೆಯಲಾಗಿದೆ.. ಇನ್ನು ಕಾಲ ಸಂತೆಯಲ್ಲಿ ನಕಲಿ ಬ್ಯಾಂಡೆಡ್ ಗಳ ಹಾವಳಿ ಹೆಚ್ಚಾಗಿದೆ..ಇನ್ನುಹೊಸೂರು ಮುಖ್ಯ ರಸ್ತೆಯ ಬಾನು ನರ್ಸಿಂಗ್ ಹೋಮ್ ಸಮೀಪವಿರುವ ರಾಜ ಅಂಡ್ ಕಂಪನಿ ಬ್ರಾಂಡೆಡ್ ಕಂಪನಿಗೆ ಸೇರಿದ ನಕಲಿ, ಹೆಸರುಗಳನ್ನು ಬಟ್ಟೆ ಮೇಲೆ ಹಾಕಿ ಡಿಸ್ಟ್ರಿಬ್ಯೂಟರ್ ಗೆ ಮಾರಾಟ ಮಾಡುತ್ತಿದ್ದರು . ಹೀಗಾಗಿ ಸಾಕಷ್ಟು ದೂರು ಕೇಳಿಬಂದಿದ್ದು ಬೊಮ್ಮನಹಳ್ಳಿ ಪೊಲೀಸರು ದಾಳಿ ನಡೆಸಿದ್ದಾರೆ.. ಇನ್ನು ಬೆಂಗಳೂರುನ ಮಹಾನಗರದಲ್ಲಿ. ವಿಶ್ವ ದರ್ಜೆಯ ಬ್ರಾಂಡ್‌ಗಳನ್ನು ರಚಿಸಲು ಬಹುರಾಷ್ಟ್ರೀಯ…
ಚಿಕ್ಕಬಳ್ಳಾಪುರ: ತಂದೆಯ ತಿಥಿ ಕಾರ್ಯ ಮುಗಿಸಿ ವಾಪಸ್ ಬೆಂಗಳೂರಿಗೆ ತೆರಳುವ ವೇಳೆ ನಿಯಂತ್ರಣ ತಪ್ಪಿ ಕಾರು ಪಲ್ಟಿ ಹೊಡೆದ ಪರಿಣಾಮ ತಾಯಿ ಮೃತಪಟ್ಟ ಧಾರುಣ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲ್ಲೂಕಿನ ಬೆಂಗಳೂರು – ಹಿಂದೂಪುರ ಹೆದ್ದಾರಿ ಅಲಕಾಪುರ ಗೇಟ್ ಬಳಿ ನಡೆದಿದೆ. ತುಮಕೂರು ಜಿಲ್ಲೆ ಮಧುಗಿರಿ ತಾಲ್ಲೂಕಿನ ಗುಂಡಗಲ್ಲು ಗ್ರಾಮದ 56 ವರ್ಷದ ಸುಶೀಲಮ್ಮ ಮೃತ ದುರ್ದೈವಿಯಾಗಿದ್ದು. ಬೆಂಗಳೂರಿನಲ್ಲಿ ವಾಸವಾಗಿರುವ ಮುರಳಿ ಎನ್ನುವಾತ ತನ್ನ ತಂದೆ ಅಶ್ವತ್ಥರೆಡ್ಡಿ ಇತ್ತೀಚೆಗೆ ಅನಾರೋಗ್ಯದಿಂದ ಮೃತಪಟ್ಟಿದ್ದರು. ಅವರ ತಿಥಿ ಕಾರ್ಯವನ್ನು ನೆನ್ನೆ ಗುಂಡಗಲ್ಲು ಗ್ರಾಮದಲ್ಲಿ ನೆರವೇರಿಸಿ ಇಂದು ಬೆಳಗ್ಗೆ ಕುಟುಂಬಸ್ಥರೊಂದಿಗೆ ಬೆಂಗಳೂರಿಗೆ ತೆರಳಲು ಸುಜುಕಿ ಗ್ರಾಂಡ್ ವಿಟಾರ ಕಾರಿನಲ್ಲಿ ತೆರಳುತ್ತಿದ್ದ ವೇಳೆ ಕಾರು ನಿಯಂತ್ರಣ ತಪ್ಪಿ ಪಲ್ಟಿ ಹೊಡೆದಿದೆ. ಸ್ಥಳದಲ್ಲೇ ಸುಶೀಲಮ್ಮ ಮೃತಪಟ್ಟು ಆಕೆಯ ಮಗ ಮುರಳಿ ಸೋಸೆ ಗುಣವತಿ ಗಂಭೀರ ಗಾಯಗೊಂಡಿದ್ದಾರೆ. ಗಾಯಾಳುಗಳನ್ನ ಗೌರಿಬಿದನೂರು ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಘಟನೆಯಲ್ಲಿ ಕಾರು ನಜ್ಜುಗುಜ್ಜಾಗಿದ್ದು ಘಟನೆ ಸಂಬಂಧ ಮಂಚೇನಹಳ್ಳಿ ಠಾಣೆಯ ಪೊಲೀಸರು ಬೇಟೆ…