ಕನ್ನಡ ಸಾಹಿತ್ಯ ಪರಿಷತ್ ಗದಗ ತಾಲೂಕಾ ಘಟಕ ಹಾಗೂ ಮಹಾಂತ ಕಲಾ ಬಳಗದ ಸಂಯುಕ್ತ ಆಶ್ರಯದಲ್ಲಿ ಗದಗ ನಗರದ ಟ್ಯಾಗೋರ್ ರಸ್ತೆಯ 2 ನೇ ಕ್ರಾಸ್ ನಲ್ಲಿರುವ ಶ್ರೀ ಮಹಾಂತೇಶ್ವರ ದೇವಾಲಯದ ಆವರಣದಲ್ಲಿ ಕರ್ನಾಟಕ ನಾಮಕರಣ ಸುವರ್ಣ ಸಂಭ್ರಮ -50 ರ ಸರಣಿ ಕಾರ್ಯಕ್ರಮದ ಮೊದಲ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು. ಮಹಿಳೆಯರಿಂದ ಜ್ಯೋತಿ ಬೆಳಗಿಸೋ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಕರ್ನಾಟಕ ಏಕೀಕರಣ ಮತ್ತು ನಾಮಕರಣ ಹೋರಾಟದ ಕುರಿತಾಗಿ ಜೆಸಿ ಪ್ರೌಢ ಶಾಲೆಯ ಶಿಕ್ಷಕಿ ಜ್ಯೋತಿ ಹೇರಲಗಿ ಉಪನ್ಯಾಸವನ್ನು ನೀಡಿದ್ರು. ಕನ್ನಡ ನಾಡು, ನುಡಿ ಬಗ್ಗೆ ಕನ್ನಡ ಸಾಹಿತ್ಯ ಪರಿಷತ್ತಿನ ಗದಗ ತಾಲೂಕಾ ಘಟಕದ ಅಧ್ಯಕ್ಷೆ ಡಾ. ರಶ್ಮಿ ಅಂಗಡಿ ಅವರು ಮಾತನಾಡಿದ್ರು. ಕಾರ್ಯಕ್ರಮದಲ್ಲಿ ಆದರ್ಶ ಶಿಕ್ಷಣ ಸಮಿತಿ ಕಾಲೇಜಿನ ಉಪನ್ಯಾಸಕರಾದ ಬಾಹುಬಲಿ ಜೈನರ್ ಸೇರಿದಂತೆ ಟ್ಯಾಗೋರ್ ರಸ್ತೆಯ ಹಿರಿಯರಿಗೆ ಸನ್ಮಾನಿಸಲಾಯಿತು. ಇನ್ನು ಚಿಣ್ಣರಿಗಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿತ್ತು. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ ಪ್ರತಿಯೊಬ್ಬರಿಗೂ ಪ್ರಮಾಣ ಪತ್ರ ನೀಡಲಾಯಿತು.
Author: AIN Author
ಅಮೆರಿಕ: ಇಸ್ರೇಲ್-ಹಮಾಸ್ ಯುದ್ಧದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ, ಎರಡೂ ಕಡೆಗಳಿಂದ ನಡೆಯುತ್ತಿರುವ ಹಿಂಸಾಚಾರದ ಕೃತ್ಯಗಳನ್ನು ಸಮಾನವಾಗಿ ಖಂಡಿಸಿದ್ದಾರೆ. ತಮ್ಮ ಮಾಜಿ ಸಿಬ್ಬಂದಿ ‘Pod Save America’ ಸಂಸ್ಥೆಗಾಗಿ ನಡೆಸಿದ ಪಾಡ್ಕಾಸ್ಟ್ನಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇಸ್ರೇಲ್ – ಹಮಾಸ್ ಸಮಸ್ಯೆ ನೂರು ವರ್ಷ ಹಳೆಯದಾಗಿದ್ದು, ಸದ್ಯ ಸಾಮಾಜಿಕ ಮಾಧ್ಯಮಗಳು ಈ ಬೆಂಕಿಗೆ ತುಪ್ಪ ಸುರಿಯುತ್ತಿವೆ ಮತ್ತು ದ್ವೇಷ ಹೆಚ್ಚಿಸುತ್ತಿವೆ ಎಂದು ಹೇಳಿದ್ದಾರೆ. https://ainlivenews.com/suprem-ray-healing-center-reiki/ ಈ ವಿಷಯದಲ್ಲಿ ನಾನು ಹಿಂದಿನ ದಿನಗಳನ್ನು ನೆನಪಿಸಿಕೊಳ್ಳುತ್ತೇನೆ. ನನ್ನ ಅಧ್ಯಕ್ಷತೆಯ ಅವಧಿಯಲ್ಲಿ ಈ ಸಮಸ್ಯೆಯ ನಿವಾರಣೆಗೆ ನಾನು ಮತ್ತೇನು ಮಾಡಬಹುದಿತ್ತು ಎಂದು ಪ್ರಶ್ನಿಸಿಕೊಳ್ಳುತ್ತೇನೆ. ನಾನು ಈ ವಿಚಾರದಲ್ಲಿ ಸಾಕಷ್ಟು ಪ್ರಯತ್ನಗಳನ್ನು ಮಾಡಿದ್ದು ನಿಜವಾದರೂ, ಅವುಗಳೆಲ್ಲದರ ಹೊರತಾಗಿ ನಾನು ಮತ್ತೇನೋ ಮಾಡಬಹುದಿತ್ತಾ ಎಂದು ನನ್ನ ಮನಸ್ಸು ನನಗೆ ಕೇಳುತ್ತಿರುತ್ತದೆ ಎಂದು ಹೇಳಿದ್ದಾರೆ.
ಬೆಂಗಳೂರು;- ನಗರದಲ್ಲಿ ನಿನ್ನೆ ಸುರಿದ ಭಾರೀ ಮಳೆ ಹಿನ್ನಲೆ ಪ್ರಸಿದ್ದ ಗಾಳಿ ಆಂಜನೇಯ ದೇವಸ್ಥಾನಕ್ಕೆ ಮಳೆ ನೀರು ನುಗ್ಗಿದೆ. https://ainlivenews.com/supreme-ray-healing-centre-reiki-treatment/ ನೀರು ಹೊರಹಾಕಲು ದೇವಾಲಯದ ಅರ್ಚಕರು ಹಾಗೂ ಸಿಬ್ಬಂದಿಗಳು ಹರಸಾಹಸ ಪಡುತ್ತಿದ್ದಾರೆ. ಮುಂಜಾನೆಯಿಂದಲೆ ಸ್ವಚ್ಚತಾ ಕಾರ್ಯದಲ್ಲಿ ಸಿಬ್ಬಂದಿಗಳು ತೊಡಗಿದ್ದಾರೆ. ಇಂದು ೧೦.೩೦ ಕ್ಕೆ ದೇವಾಲಯಕ್ಕೆ ಭಕ್ತರ ದರ್ಶನಕ್ಕೆ ಅವಕಾಶ ಕೊಡಲಾಗಿದೆ, ನಿತ್ಯ ಬೆಳಿಗ್ಗೆ ೯.೩೦ರಿಂದ ಭಕ್ತರಿಗೆ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗ್ತಿತ್ತು. ಆದ್ರೆ ಮಳೆ ಅವಾಂತರದಿಂದ ದೇವರ ದರ್ಶನ ಸಮಯ ಬದಲಾವಣೆ ಮಾಡಲಾಗಿದ್ದು, ದೇವರ ದರ್ಶನಕ್ಕೆ ಬಂದಿರುವ ಭಕ್ತರಿಗೆ ನಿರಾಸೆ ಉಂಟಾಗಿದೆ.
ದೆಹಲಿ: ವಿಶ್ವಕಪ್ ಕ್ರಿಕೆಟ್‌ನಲ್ಲಿ (World Cup Cricket) ಶ್ರೀಲಂಕಾ (Srilanka) ವಿರುದ್ಧ ಬಾಂಗ್ಲಾದೇಶ (Bangladesh) 3 ವಿಕೆಟ್ ಜಯ ಸಾಧಿಸಿದೆ. ಗೆಲ್ಲಲು 280 ರನ್‌ಗಳ ಗುರಿಯನ್ನು ಪಡೆದ ಬಾಂಗ್ಲಾದೇಶ ಇನ್ನೂ 53 ಎಸೆತ ಬಾಕಿ ಇರುವಂತೆಯೇ 7 ವಿಕೆಟ್ ಕಳೆದುಕೊಂಡು 283 ರನ್ ಹೊಡೆಯುವ ಮೂಲಕ ಗುರಿಯನ್ನು ತಲುಪಿತು. ಈ ಮೂಲಕ ಟೂರ್ನಿಯಲ್ಲಿ ಬಾಂಗ್ಲಾ ಎರಡನೇ ಗೆಲುವು ಸಾಧಿಸಿದರೆ, ಶ್ರೀಲಂಕಾ 6 ಬಾರಿ ಸೋಲು ಕಂಡಿತು. ಬಾಂಗ್ಲಾ ಪರ ನಜ್ಮುಲ್ ಹೊಸೈನ್ ಮತ್ತು ನಾಯಕ ಶಕೀಬ್ ಉಲ್ ಹಸನ್ (Shakib Al Hasan) ಅವರು ಮೂರನೇ ವಿಕೆಟಿಗೆ 149 ಎಸೆತಗಳಲ್ಲಿ 169 ರನ್ ಜೊತೆಯಾಟವಾಡುವಾಗಲೇ ಬಾಂಗ್ಲಾದ ಗೆಲುವು ಖಚಿತವಾಗಿತ್ತು. ನಜ್ಮುಲ್ ಹೊಸೈನ್ 90 ರನ್ (101 ಎಸೆತ, 12 ಬೌಂಡರಿ) ಶಕೀಬ್ ಉಲ್ ಹಸನ್ 82 ರನ್ (65 ಎಸೆತ, 12 ಬೌಂಡರಿ) ಗಳಿಸಿ ಔಟಾದರು. ಲಂಕಾ ಪರ ಚರಿತ ಅಸಲಂಕ 108 ರನ್ (105 ಎಸೆತ, 6 ಬೌಂಡರಿ, 5 ಸಿಕ್ಸರ್)…
ಹುಬ್ಬಳ್ಳಿ: ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆದರೆ ಕುಮಾರಸ್ವಾಮಿ ಬೆಂಬಲ ನೀಡುತ್ತಾರೆಂದು ಹೃದಯದಿಂದ ಹೇಳಿಲ್ಲ, ಅವರ ತುಟಿಯಿಂದ ಬಂದಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕಾರಣದಲ್ಲಿ ಎರಡು ರೀತಿಯ ಕೆಲಸ ಮಾಡುತ್ತಾರೆ. ಒಂದು ಮೆದುಳಿನಿಂದ, ಮತ್ತೊಂದು ಹೃದಯದಿಂದ. ಹಾಗಾಗಿ ಹೃದಯದಿಂದ ಮಾಡೋ ಕೆಲಸ ಸತ್ಯ, ಮೆದುಳಿನಿಂದ ಮಾಡೋ ಕೆಲಸ ಅಸತ್ಯ. https://ainlivenews.com/suprem-ray-healing-center-reiki/ ಹೀಗಿರುವಾಗ ಕುಮಾರಸ್ವಾಮಿ ಮತ್ತು ಡಿ.ಕೆ.ಶಿವಕುಮಾರ್ ಸಂಬಂಧ ಹೇಗಿದೆ ಎಂದು ಎಲ್ಲರಿಗೂ ಗೊತ್ತಿದೆ. ಅವರ ಸಂಬಂಧದ ಬಗ್ಗೆ ಕುಮಾರಸ್ವಾಮಿ ಅವರ ತಂದೆಯವರ ಕಾಲದಿಂದಲೂ ನಾಡಿನ ಜನರಿಗೆ ಗೊತ್ತಿದೆ ಎಂದರು. ಈಗಾಗಲೇ ಕುಮಾರಸ್ವಾಮಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದ್ದಾರೆ. ಹೀಗಾಗಿ ಡಿ.ಕೆ.ಶಿವಕುಮಾರ್’ಗೆ ಬೆಂಬಲ ಕೊಡತ್ತಾರೆ ಎಂದು ಹೇಳಲು ಆಗುವುದಿಲ್ಲ. ಕುಮಾರಸ್ವಾಮಿ ಹೃದಯದಿಂದ ಆ ಮಾತನ್ನು ಹೇಳಿಲ್ಲ ಎಂದು ತಿಳಿಸಿದ ಅವರು, ಕುಮಾರಸ್ವಾಮಿ ಅವರು ದುಬೈಗೆ ಹೋಗಿ ಬಂದ ನಂತರ ಹೇಳಿಕೆ ಬದಲಾಗಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು.
ಕಲಬುರಗಿ;- ನಗರದಲ್ಲಿ ನಡೆದ KEA ಪರೀಕ್ಷೆ ಅಕ್ರಮ ಪ್ರಕರಣದ ಪ್ರಮುಖ ಆರೋಪಿ RD ಪಾಟೀಲ್ ಪೋಲೀಸರ ಕೈಗೆ ಸಿಗದೇ ಕಣ್ಣಾಮುಚ್ಚಾಲೆ ಆಟ ಆಡ್ತಿದ್ದಾನಾ.? ಹೌದು ಅನ್ನೋದಕ್ಕೆ ಇಲ್ಲಿದೆ ನೋಡಿ ಪುರಾವೆ. ಅಂದಹಾಗೆ RD ಪಾಟೀಲ್ ಕಂಪೌಂಡ್ ಗೇಟ್ ಜಿಗಿದು ಎಸ್ಕೇಪ್ ಆಗಿರೋ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.ಕಲಬುರಗಿ ನಗರದ ಜೇವರ್ಗಿ ಕಾಲನಿಯ ಅಪಾರ್ಟ್‌ಮೆಂಟಿನ ಸಿಸಿಟಿವಿಯಲ್ಲಿ ಎಸ್ಕೇಪ್ ಸೀನ್ ರೆಕಾರ್ಡ್ ಆಗಿದ್ದು ಬೆಳಕಿಗೆ ಬಂದಿದೆ. ಈಗಾಗಲೇ RD ಪಾಟೀಲ್ ಬಂಧನಕ್ಕೆ ವಿಶೇಷ ತಂಡ ರಚನೆಯಾಗಿದೆ. ಪ್ರಕರಣ ದಾಖಲಾಗಿ 10 ದಿನಗಳೇ ಕಳೆದಿವೆ.ಆದ್ರೂ ಬಂಧನವಾಗಿಲ್ಲ. ಇದೇವೇಳೆ ಭಾನುವಾರ ಮಧ್ಯಾನದಿಂದ ಸೋಮವಾರ ರಾತ್ರಿಯವರೆಗೆ ಅಪಾರ್ಟಮೆಂಟ್ ದಲ್ಲಿ ತಂಗಿದ್ದ ಎನ್ನಲಾಗಿದೆ. ಮಾಹಿತಿ ಪಡೆದ ಪೋಲೀಸರು ಬಂಧಿಸಲು ಹೋದಾಗ ಆರೋಪಿ ಹಿಂದಿನ ಗೇಟ್ ದಿಂದ ಜಿಗಿದು ರೈಟ್ ಹೇಳಿದ್ದಾನೆ.. ಒಟ್ಟಾರೆ ಬಂಧನಕ್ಕಾಗಿ ಪೋಲೀಸರು ಹಾಕಿದ ಲೆಕ್ಕಾಚಾರ ಸದ್ಯಕ್ಕೆ ವಿಫಲ ಆದಂತಾಗಿದೆ ಅನ್ನೋ ಮಾತುಗಳು ಎಲ್ಲೆಡೆ ಕೇಳಿಬರ್ತಿವೆ…
ಬಳ್ಳಾರಿ :ಖಾಸಗಿ ಕ್ರಸರ್ಗಳ ವಸ್ತು ರವಾನೆಗೆ ಸರ್ಕಾರಿ ಕಾಲುವೆಯ ರಸ್ತೆಗೆ ದೋಖಾ ಬಿದ್ದಿದೆ. ನಿರಂತರ ಬೃಹತ್ ಗಾಡಿಗಳ ಒಡಾಟದಿಂದ ಕಾಲುವೆಯ ರಸ್ತೆ ಸಂಪೂರ್ಣ ಹಾಳಾಗಿದ್ದು, ಬೃಹತ್ ಲಾರಿಗಳಲ್ಲಿ ಕಲ್ಲು, ಬಿಂಚೆ ಸಾಗಾಟ ರಾಜಾರೋಷವಾಗಿ ಸಾಗಾಟ ಮಾಡಲಾಗುತ್ತಿದೆ. ವಾಹನಗಳ ಓಡಾಟಕ್ಕೆ ಸಂಪೂರ್ಣ ನಿಷೇಧವಿದ್ದರು, ರಾಜಾರೋಷವಾಗಿ ಕ್ರಷರ್ ವಾಹನಗಳ ಓಡಾಟ ನಡೆಸಿದ್ದಾರೆ. ಸಂಬಂಧ ಪಟ್ಟ ಇಲಾಖೆಯ ಅಧಿಕಾರಿಗಳು ಮಾತ್ರ ಕಣ್ಮುಚ್ಚಿ ಕುಳಿತಿದ್ದಾರೆ. ಸ್ಥಳೀಯ ನಿವಾಸಿಗಳು ಹಲವು ಬಾರಿ ಈ ಕುರಿತು ಸಂಬಂಧ ಪಟ್ಟ ಅಧಿಕಾರಿಗಳ ಗಮನಕ್ಕೆ ತಂದರು ಯಾವುದೇ ಪ್ರಯೋಜನವಿಲ್ಲ…. ಜಿಲ್ಲೆಯ ನೂತನ ತಾಲೂಕಾದ ಕುರುಗೋಡಿನ ಶ್ರೀನಿವಾಸಪುರದಲ್ಲಿ ಬಳಿ ಘಟನೆ ಜರುಗಿದೆ. ಶ್ರೀನಿವಾಸಪುರ ಗ್ರಾಮದ ಬಳಿ ಇರುವ ಸುಮಾರು 3 ಕ್ರಷರ್ಗಳಿಂದಾಗಿ ಕಾಲುವೆಗೆ ಧಕ್ಕೆ ಉಂಟಾಗಿದೆ. ಬಾರಿ ತೂಕದ ಲೋಡ್ಗಳಿಂದಾಗಿ ಕಾಲುವೆ ಗಡ್ಡೆ ಕುಸಿತವಾಗಿದೆ. ರಸ್ತೆಯ ತುಂಬಾ ಕುಣಿಗಳ ರಾಶಿ, ಅಲ್ಲಲ್ಲಿ ಕಾಲುವೆಯ ಕಟ್ಟಡ ಬಿರುಕು ಬಿಟ್ಟಿದೆ. ಈ ಕುರಿತು ಹಲವು ಬಾರು ಎಚ್ ಎಲ್ ಸಿ ಕಾಲುವೆಯ ಅಧಿಕಾರಿಗಳ ಗಮನಕ್ಕೆ ತಂದರು ಪ್ರಯೋಜನವಿಲ್ಲ……
ಜೋಹಾ ಒಂದು ಸಣ್ಣ-ಧಾನ್ಯದ ಚಳಿಗಾಲದ ಭತ್ತವಾಗಿದ್ದು, ಅದರ ಗಮನಾರ್ಹ ಪರಿಮಳ ಮತ್ತು ಗಮನಾರ್ಹ ರುಚಿಗೆ ಹೆಸರುವಾಸಿಯಾಗಿದೆ. ಜೋಹಾ ಅಕ್ಕಿಯ ಸೇವನೆಗಾರರು ಮಧುಮೇಹ ಮತ್ತು ಹೃದಯರಕ್ತನಾಳದ ಕಾಯಿಲೆಗಳ ಕಡಿಮೆ ಸಂಭವವನ್ನು ಹೊಂದಿದ್ದಾರೆ ಎಂದು ಸಾಂಪ್ರದಾಯಿಕ ಸಮರ್ಥನೆಗಳು, ಆದರೆ ಇವುಗಳಿಗೆ ವೈಜ್ಞಾನಿಕ ದೃಢೀಕರಣದ ಅಗತ್ಯವಿದೆ. ಸುವಾಸನೆಯ ಜೋಹಾ ಅಕ್ಕಿಯು ಒಮೆಗಾ-6 ಮತ್ತು ಒಮೆಗಾ-3 ಯ ಹೆಚ್ಚು ಸಮತೋಲಿತ ಅನುಪಾತವನ್ನು ವ್ಯಾಪಕವಾಗಿ ಸೇವಿಸುವ ನಾನ್-ಸೆಂಟ್ಡ್ ವೈವಿಧ್ಯಕ್ಕೆ ಹೋಲಿಸಿದರೆ ಸಂಶೋಧಕರು ಕಂಡುಕೊಂಡಿದ್ದಾರೆ. ಒಮೆಗಾ-6 ಮತ್ತು ಒಮೆಗಾ-3 ಅಗತ್ಯ ಕೊಬ್ಬಿನಾಮ್ಲಗಳ (ಇಎಫ್‌ಎ) ಅನುಪಾತವು ಸರಿಯಾದ ಆಹಾರವನ್ನು ಕಾಪಾಡಿಕೊಳ್ಳಲು ಮಾನವರಿಗೆ ಅವಶ್ಯಕವಾಗಿದೆ. ಅವರು ಈ ಜೋಹಾ ಅಕ್ಕಿಯನ್ನು ಅಕ್ಕಿ ಹೊಟ್ಟು ಎಣ್ಣೆಯನ್ನು ತಯಾರಿಸಲು ಬಳಸಿದ್ದಾರೆ, ಇದು ಮಧುಮೇಹ ನಿರ್ವಹಣೆಯಲ್ಲಿ ಪರಿಣಾಮಕಾರಿ ಎಂದು ಅವರು ಹೇಳಿಕೊಳ್ಳುವ ಪೇಟೆಂಟ್ ಉತ್ಪನ್ನವಾಗಿದೆ. ಇದಲ್ಲದೆ, ಜೋಹಾ ಅಕ್ಕಿಯು ಹಲವಾರು ಆಂಟಿಆಕ್ಸಿಡೆಂಟ್‌ಗಳು, ಫ್ಲೇವನಾಯ್ಡ್‌ಗಳು ಮತ್ತು ಫೀನಾಲಿಕ್‌ಗಳಲ್ಲಿ ಸಮೃದ್ಧವಾಗಿದೆ. ವರದಿಯಾದ ಕೆಲವು ಜೈವಿಕ ಸಕ್ರಿಯ ಸಂಯುಕ್ತಗಳೆಂದರೆ ಒರಿಜನಾಲ್, ಫೆರುಲಿಕ್ ಆಮ್ಲ, ಟೊಕೊಟ್ರಿಯೆನಾಲ್, ಕೆಫೀಕ್ ಆಮ್ಲ, ಕ್ಯಾಟೆಚುಯಿಕ್ ಆಮ್ಲ, ಗ್ಯಾಲಿಕ್ ಆಮ್ಲ, ಟ್ರೈಸಿನ್,…
ದಾವಣಗೆರೆ: ಆ ವಿಚಾರದ ಬಗ್ಗೆ ದಯವಿಟ್ಟು ಪ್ರಶ್ನೆಯನ್ನ ಕೇಳಬೇಡಿ ಎಂದು ಮಾಧ್ಯಮಗಳಿಗೆ ಕಾರ್ಮಿಕ ಸಚಿವ ಸಂತೋಷ್ ಲಾಡ್ ಮನವಿ ಮಾಡಿಕೊಂಡಿದ್ದಾರೆ. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ ಕೆ ಶಿವಕುಮಾರ್ ಅವರೇ ಪ್ರತಿಕ್ರಿಯೆ ನೀಡುತ್ತಾರೆ ಎಂದು ಪ್ರತಿಕ್ರಿಯೆಗೆ ನಿರಾಕರಿಸಿದ್ದಾರೆ. ದಾವಣಗೆರೆಗೆ ಆಗಮಿಸಿದ್ದ ವೇಳೆ ಸಚಿವ ಸಂತೋಷ್ ಲಾಡ್ ಸಿಎಂ ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಶ್ನೆ ಕೇಳಿದಾಗ ಸಂತೋಷ್ ಲಾಡ್, ದಯವಿಟ್ಟು ಆ ವಿಚಾರದ ಬಗ್ಗೆ ಪ್ರಶ್ನೆ ಕೇಳಬೇಡಿ. ಈ ವಿಷಯದ ಬಗ್ಗೆ ಮಾತನಾಡಬಾರದು ಅಂತ ನಾವೆಲ್ಲ ಸೇರಿ ಅಂತಿಮ ನಿರ್ಣಯ ಕೈಗೊಂಡಿದ್ದೇವೆ. ಹೀಗಾಗಿ ಇನ್ನು ಮುಂದೆ ಇದರ ಬಗ್ಗೆ ಸಿಎಂ ಹಾಗೂ ಡಿಸಿಎಂ ಅವರೇ ಮಾತನಾಡುತ್ತಾರೆ ಎಂದು ಆ ವಿಷಯದ ಬಗ್ಗೆ ಯಾವುದೇ ಪ್ರಶ್ನೆಗೆ ಉತ್ತರ ನೀಡಲ್ಲ ಎಂದಿದ್ದಾರೆ. ಇನ್ನು, ಕಾರ್ಮಿಕ ಇಲಾಖೆಯಲ್ಲಿನ ಭ್ರಷ್ಟಾಚಾರ ತನಿಖೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿರುವ ಅವರು, ಎಲ್ಲವು ನಡೆಯುತ್ತಿದ್ದು, ಇನ್ನೊಂದು ಮುರ್ನಾಲ್ಕು ತಿಂಗಳಲ್ಲಿ ಎಲ್ಲ ತನಿಖೆಗಳು ಬರತ್ತೆ ಎಂದು ಹೇಳಿದ್ದಾರೆ. https://ainlivenews.com/suprem-ray-healing-center-reiki/ ಶಿಕ್ಷಣದ…
ತುಮಕೂರು;- ಗಾಂಜಾ ಸಾಗಾಟ ಮಾಡ್ತಿದ್ದ ನಾಲ್ವರು ಆರೋಪಿಗಳನ್ನು ಅರೆಸ್ಟ್ ಮಾಡಲಾಗಿದೆ. ಬಂಧಿತರಿಂದ 1,20,000 ರೂ ಬೆಲೆ ಬಾಳುವ ಗಾಂಜಾ ಮತ್ತು ಕಾರು ವಶಕ್ಕೆ ಪಡೆಯಲಾಗಿದೆ https://ainlivenews.com/supreme-ray-healing-centre-reiki-treatment/ ತುಮಕೂರಿನ ಸಿ.ಇ.ಎನ್ ಪೊಲೀಸರು ಕಾರ್ಯಾಚರಣೆ ನಡೆಸಿ, ಅಮಾನ್,ಮುದಾಸೀರ್ ಅಹಮದ್ ಷರೀಫ್, ಪ್ರಶಾಂತ್, ಮುಬಾರಕ್ ಪಾಷ ಬಂಧಿತರು. ಬಂಧಿತರಿಂದ 4 ಕೆಜಿ 330 ಗ್ರಾಮ ಒಣಗಿದ ಗಾಂಜಾ ವಶಕ್ಕೆ ಪಡೆಯಲಾಗಿದೆ. ತುಮಕೂರು ಸಿ.ಇ.ಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.