ಮಂಡ್ಯ: ಬಸ್ ನಿಲ್ಲಿಸುವ ವಿಚಾರಕ್ಕೆ ಯುವಕರು ದಾಂಧಲೆ ನಡೆಸಿರುವ ಘಟನೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಗಂಜಾಂ ರಸ್ತೆಯಲ್ಲಿ ನಡೆದಿದೆ. ಬಸ್ ನಿಲ್ಲಿಸಲಿಲ್ಲ ಎಂದು ಸರ್ಕಾರಿ ಬಸ್ ಮೇಲೆ ಅನ್ಯಕೋಮಿನ ಯುವಕರ ಗುಂಪು ಕಲ್ಲು ತೂರಾಟ ನಡೆಸಿದೆ. ಬಳಿಕ ಯುವಕರನ್ನು ಹಿಡಿದು ಥಳಿಸಿದ ಸಾರ್ವಜನಿಕರು ಪೊಲೀಸರಿಗೊಪ್ಪಿಸಿದ್ದಾರೆ. https://ainkannada.com/youths-attack-buddi-for-telling-him-not-to-smoke-cigarettes/ ಆಗಿದ್ದೇನು..? ಸಾರಿಗೆ ಬಸ್‌ವೊಂದು ಶ್ರೀರಂಗಪಟ್ಟಣದ ಕಡೆಯಿಂದ ಗಂಜಾಂಗೆ ತೆರಳುತ್ತಿತ್ತು. ಈ ವೇಳೆ ಯುವಕರ ಕುಟುಂಬ ಮೈಸೂರಿಗೆ ಹೋಗುವ ಬಸ್ ಬದಲು ಗಂಜಾಂಗೆ ತೆರಳುತ್ತಿದ್ದ ಬಸ್ ಹತ್ತಿದೆ. ಕಂಡಕ್ಟರ್ ಬಳಿ ನಾವು ಮೈಸೂರಿಗೆ ಹೋಗಬೇಕು ಎಂದು ಕುಟುಂಬಸ್ಥರು ಹೇಳಿದ್ದಾರೆ. ಇದು ಮೈಸೂರಿನ ಬಸ್ ಅಲ್ಲ ಎಂದು ನಿರ್ವಾಹಕ ಹೇಳ್ತಿದ್ದಂತೆ ಬಸ್ ನಿಲ್ಲಿಸುವಂತೆ ವಾಗ್ವಾದಕ್ಕಿಳಿದಿದ್ದಾರೆ. ಆಗ ಕಂಡಕ್ಟರ್ ಇಲ್ಲಿ ಸ್ಟಾಪ್ ಇಲ್ಲ, ಮುಂದೆ ನಿಲ್ಲಿಸೋದಾಗಿ ಹೇಳಿದ್ದಾರೆ. ಅಷ್ಟಕ್ಕೆ ಡ್ರೈವರ್, ಕಂಡಕ್ಟರ್ ಮೇಲೆ ಹಲ್ಲೆ ನಡೆಸಿ ದರ್ಪ ತೋರಿದ್ದಾರೆ. ಅಲ್ಲದೇ ಬಸ್ ಮೇಲೆ ಕಲ್ಲೆಸೆದು, ಕಿಟಕಿ ಗಾಜುಗಳನ್ನು ಪುಡಿಪುಡಿ ಮಾಡಿದ್ದಾರೆ. ನಂತರ ಕಲ್ಲೆಸೆದ ಅನ್ಯಕೋಮಿನ ಯುವಕರನ್ನ ಹಿಡಿದು…
Author: AIN Author
ಚಾಮರಾಜನಗರ : ಮಲೆಮಹದೇಶ್ವರ ಬೆಟ್ಟದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಭಯೋತ್ಪಾದನೆ ಕುರಿತು ಖಂಡನಾ ನಿರ್ಣಯ ಮಂಡಿಸಲಾಯಿತು. ಜಮ್ಮು ಕಾಶ್ಮೀರದ ಪಹಲ್ಗಾಮ್ ನಲ್ಲಿ ನಡೆದ ಮುಗ್ಧ ನಾಗರಿಕರ ಮೇಲೆ ಉಗ್ರರು ನಡೆಸಿದ ದಾಳಿಯನ್ನು ರಾಜ್ಯ ಸರ್ಕಾರವು ತೀವ್ರವಾಗಿ ಖಂಡಿಸಿದ್ದು, ಎಲ್ಲ ಮೃತರಿಗೆ ರಾಜ್ಯದ ಜನರ ಪರವಾಗಿ ನೋವಿನ ಸಂತಾಪಗಳನ್ನು ಸಲ್ಲಿಸಲು ತೀರ್ಮಾನಿದೆ. https://ainkannada.com/funeral-of-manjunath-rao-who-died-in-the-terrorist-attack/ ಸಭೆಯಲ್ಲಿ ಉಗ್ರರ ದಾಳಿಗಳು ಮನುಷ್ಯ ಕುಲದ ಮೇಲೆ ನಡೆಸುತ್ತಿರುವ ಭೀಬತ್ಸ ಕೃತ್ಯಗಳು ಎಂದು ತೀರ್ಮಾನಿಸಬೇಕು. ಎಲ್ಲ ರೀತಿಯ ಉಗ್ರವಾದವನ್ನು ಬುಡಸಮೇತ ಕಿತ್ತು ಹಾಕಲು ಇಡೀ ದೇಶ ಒಂದಾಗಿ ನಿಂತು ಶ್ರಮಿಸಬೇಕು. ಈ ಘಟನೆಗೆ ಕಾರಣವಾಗಿರುವ ವೈಫಲ್ಯಗಳ ಕುರಿತು ಸಮರ್ಥವಾಗಿ ಮತ್ತು ಸಮರ್ಪಕವಾಗಿ ತನಿಖೆ ನಡೆಸಬೇಕು ಎಂದು ಆಗ್ರಹಿಸಲು ತೀರ್ಮಾನಿಸಲಾಗಿದೆ. ಮುಂದೆ ಈ ರೀತಿಯ ಯಾವುದೇ ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸಬೇಕು ಎಂದು ನಮ್ಮ ಸರ್ಕಾರವು ರಾಜ್ಯದ ಜನರ ಪರವಾಗಿ ಕೇಂದ್ರ ಸರ್ಕಾರವನ್ನು ಒತ್ತಾಯಿಸುತ್ತದೆ.
ಚಾಮರಾಜನರ : ಮಲೆಮಹದೇಶ್ವರ ಸನ್ನಿಧಿಯಲ್ಲಿ ಸಚಿವ ಸಂಪುಟ ಸಭೆ ನಡೆದಿದ್ದು, ಈ ಐತಿಹಾಸಿಕ ಸಂಪುಟ ಸಭೆಯಲ್ಲಿ ಸುಮಾರು 3647 ಕೋಟಿ 42 ಲಕ್ಷ ಮೌಲ್ಯದ ಅಭಿವೃದ್ಧಿ ಕಾಮಗಾರಿಗಳಿಗೆ ಅಂಗೀಕಾರ ನೀಡಲಾಯಿತು. ಸಭೆಯಲ್ಲಿ ಕಾಶ್ಮೀರ ಭಯೋತ್ಪಾದಕ ದಾಳಿಯಲ್ಲಿ ಮೃತರಾದ ಎಲ್ಲ ಹುತಾತ್ಮರಿಗೆ ಶ್ರದ್ಧಾಂಜಲಿ ಮತ್ತು ಧರ್ಮಗುರು ಪೋಪ್ ಅವರ ನಿಧನಕ್ಕೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಮಲೆ ಮಹದೇಶ್ವರ ಬೆಟ್ಟದಲ್ಲಿ ನಡೆದ ಸಚಿವ ಸಂಪುಟ ಸಭೆಯ ಬಳಿಕ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ಕಲಬುರಗಿ ವಿಭಾಗದ ಕ್ಯಾಬಿನೆಟ್ ಸಭೆ ಬಳಿಕ ಇಂದು ಮೈಸೂರು ವಿಭಾಗದ ಸಂಪುಟ ಸಭೆ ನಡೆಸಿದ್ದೇವೆ. ಇದೇ ರೀತಿ ಬೆಳಗಾವಿ ವಿಭಾಗದ ಸಂಪುಟ ಸಭೆ ಬಿಜಾಪುರದಲ್ಲಿ, ಬೆಂಗಳೂರು ವಿಭಾಗದ ಸಭೆ ನಂದಿ ಬೆಟ್ಟದಲ್ಲಿ ನಡೆಯಲಿದದೆ ಎಂದರು. https://ainkannada.com/only-congress-government-has-developed-religious-places-in-the-state-dcm-d-k-shivakumar/ ಪಿಡಬ್ಲ್ಯೂಡಿ, ಬೃಹತ್-ಸಣ್ಣ ನೀರಾವರಿ ಇಲಾಖೆ, ಇಂಧನ ಇಲಾಖೆ, ಆರೋಗ್ಯ ಇಲಾಖೆ, ಗ್ರಾಮೀಣಾಭಿವೃದ್ಧಿ, ಬುಡಕಟ್ಟು ಅಭಿವಧ್ಧಿ, ಟ್ರೈಬಲ್ ಹಳ್ಳಿಗಳಿಗೆ ರಸ್ತೆಗಳಿಗೆ ಅನುದಾನ ನೀಡಲಾಗುವುದು. 1787 ಕೋಟಿ ನೀರಾವರಿಗೆ ಮತ್ತು sc/st ಜನರ ವಸತಿ,…
ಚಾಮರಾಜನಗರ : ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿ ವಿಜೇತ, ನಟ ಸಾರ್ವಭೌಮ, ವರನಟ ಡಾ.ರಾಜಕುಮಾರ್ ರವರ 97 ನೇ ಹುಟ್ಟುಹಬ್ಬದ ಪ್ರಯುಕ್ತ ಮುಖ್ಯಮಂತ್ರಿ ಸಿದ್ದರಾಮಯ್ಯ ಡಾ.ರಾಜ್‌ಕುಮಾರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದರು. ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನಲ್ಲಿರುವ ಮಲೆಮಹದೇಶ್ವರಬೆಟ್ಟದಲ್ಲಿ ನಡೆದ ಸಂಪುಟ ಸಭೆ ಮುಕ್ತಾಯ ಬಳಿ ನಡೆದ ಮಾಧ್ಯಮ ಸುದ್ದಿಗೋಷ್ಟಿಯ ವೇಳೆಯಲ್ಲಿ ಡಾ.ರಾಜಕುಮಾರ್‌ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. https://ainkannada.com/cm-siddaramaiah-instructs-home-department-to-be-vigilant-about-foreigners-who-have-overstayed-their-stay/ ಈ ವೇಳೆ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ಸಚಿವ ಹೆಚ್‌ಸಿ.ಮಹದೇವಪ್ಪ, ಹೆಚ್.ಕೆ.ಪಾಟೀಲ್, ಕೆ.ವೆಂಕಟೇಶ್, ಶಾಸಕರಾದ ಎ.ಆರ್.ಕೃಷ್ಣಮೂರ್ತಿ, ಆರ್.ಮಂಜುನಾಥ್, ಶಾಸಕ ಸಿ.ಪುಟ್ಟರಂಗಶೆಟ್ಟಿ , ತಿಮ್ಮಯ್ಯ, ಜಿಲ್ಲಾಧಿಕಾರಿ ಶಿಲ್ಪಾನಾಗ್, ಎಸ್‌ಪಿ ಕವಿತಾ ಸೇರಿದಂತೆ ವಿವಿಧ ಇಲಾಖಾ ಅಧಿಕಾರಿಗಳು ಭಾಗಿಯಾಗಿದ್ದರು.
ಶಿವಮೊಗ್ಗ: ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಭಯೋತ್ಪಾದಕರ ಗುಂಡಿನ ದಾಳಿಗೆ ಬಲಿಯಾಗಿದ್ದ ಉದ್ಯಮಿ ಮಂಜುನಾಥ್ ರಾವ್ ಅವರ ಅಂತ್ಯಕ್ರಿಯೆ ನೆರವೇರಿತು. ಗುರುವಾರ ಬೆಳಗ್ಗೆ ಮೃತದೇಹ ಬೆಂಗಳೂರಿಗೆ ತರಲಾಯಿತು. ಬಳಿಕ ಆಂಬುಲೆನ್ಸ ಮೂಲಕ ಶಿವಮೊಗ್ಗಕ್ಕೆ ಮಂಜುನಾತ್‌ಥ್ ಅವರ ಮೃತದೇಹ ರವಾನಿಸಲಾಯಿತು. ಶಿವಮೊಗ್ಗದಲ್ಲಿರುವ ಮಂಜುನಾಥ್ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ಇಡಲಾಗಿತ್ತು. ಬಳಿಕ ಶಿವಮೊಗ್ಗದ ಚಿತಾಗಾರದಲ್ಲಿ ವಿಧಿವಿಧಾನಗಳೊಂದಿಗೆ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು. ಮಂಜುನಾಥ್ ರಾವ್ ಅವರ ಮಗ ಅಭಿ ಜೈನಿಂದ ಅಗ್ನಿ ಸ್ಪರ್ಶ ಮಾಡಿದರು. ಮೃತರಿಗೆ ಜಿಲ್ಲಾಡಳಿತ ವತಿಯಿಂದ ಸರ್ಕಾರಿ ಗೌರವ ಸಲ್ಲಿಸಲಾಯಿತು. ರಾಷ್ಟ್ರಗೀತೆಯೊಂದಿಗೆ ಮೂರು ಸುತ್ತು ಕುಶಾಲ ತೋಪು ಹಾರಿಸಿ ಪೊಲೀಸರು ಗೌರವ ವಂದನೆ ಸಲ್ಲಿಸಿದರು. https://ainkannada.com/terrorist-attack-in-pahalgam-178-kannadigas-stranded-in-srinagar-airlifted/ ಬ್ರಾಹ್ಮಣ ಸಮುದಾಯದಂತೆ ವಿಧಿ ವಿಧಾನ ನೆರವೇರಿದ್ದು, ಅಂತ್ಯಸಂಸ್ಕಾರದ ವೇಳೆ ಮಂಜುನಾಥ್ ರಾವ್ ಪಲ್ಲವಿ ಪಾದದ ಮೇಲೆ ತಲೆ ಇಟ್ಟು ಕಣ್ಣೀರು ಹಾಕಿ, ವಿದಾಯ ಹೇಳಿದರು.
ಬೆಂಗಳೂರು: ಆದಿತ್ಯ ಬಿರ್ಲಾ ಗ್ರೂಪ್ ಅಡಿಯಲ್ಲಿ ಗ್ರಾಸಿಂ ಇಂಡಸ್ಟ್ರೀಸ್ ಭಾಗವಾಗಿರುವ ಬಿರ್ಲಾ ಓಪಸ್ ಪೇಂಟ್ಸ್ ಇಂದು ಬೆಂಗಳೂರಿನಲ್ಲಿ ತನ್ನ ಹೊಸ ಬಿರ್ಲಾ ಓಪಸ್ ಪೇಂಟ್ ಸ್ಟುಡಿಯೋ ಪ್ರಾರಂಭಿಸಿದೆ. ಗುರುಗ್ರಾಮ್, ಲಖನೌ, ಮುಂಬೈ ಮತ್ತು ನವಿ ಮುಂಬೈಗಳಲ್ಲಿ ಯಶಸ್ವಿಯಾಗಿ ತನ್ನ ಪೇಂಟ್ ಸ್ಟುಡಿಯೋಗಳ ಯಶಸ್ವಿ ಪ್ರಾರಂಭದ ನಂತರ ಇದೀಗ ಬೆಂಗಳೂರಿನಲ್ಲಿ ಕಂಪನಿ ಮಾಲೀಕತ್ವದ ಮತ್ತು ಕಂಪನಿ ನಿರ್ವಹಣೆಯ ಎಕ್ಸ್ಪೀರಿಯೆನ್ಸ್ ಸ್ಟೋರ್ ಆರಂಭಿಸಿದೆ. ಪೇಂಟ್ ಸ್ಟುಡಿಯೋಗಳನ್ನು ಸೃಜನಶೀಲತೆಯ ಕೇಂದ್ರಗಳಾಗಿ ವಿನ್ಯಾಸಗೊಳಿಸಿದ್ದು, ಅವು ಸಾಂಪ್ರದಾಯಿಕ ಪೇಂಟ್ ಮಳಿಗೆಗಳಿಗೂ ವಿಭಿನ್ನವಾಗಿವೆ. ಇದು ಎಕ್ಸ್ಪೀರಿಯೆನ್ಸ್ ಸೆಂಟರ್ ಆಗಿದ್ದು ಇದು ಗ್ರಾಹಕರಿಗೆ ಹೊಸ ಐಡಿಯಾಗಳನ್ನು ಕಂಡುಕೊಳ್ಳಲು ಅವಕಾಶ ಕಲ್ಪಿಸುವುದೇ ಅಲ್ಲದೆ ಬಣ್ಣಗಳನ್ನು ನಿಜ ಜೀವನದ ಪರಿಸರದಲ್ಲಿ ಮುಟ್ಟುವ, ಭಾವಿಸುವ ಮತ್ತು ಅನುಭವ ಪಡೆದುಕೊಳ್ಳಲು ಅವಕಾಶ ನೀಡುತ್ತದೆ. ಗ್ರಾಹಕರು ತಮ್ಮ ನೆಚ್ಚಿನ ಬಣ್ಣದ ಆಯ್ಕೆ, ರಚನೆಗಳು ಮತ್ತು ಬಳಕೆಯ ತಂತ್ರಗಳ ಕುರಿತು ವೈಯಕ್ತಿಕಗೊಳಿಸಿದ ಸಲಹೆಗಳು ಮೂಲಕ ಉಚಿತ ಪರಿಣಿತರ ಮಾರ್ಗದೆರ್ಶನ ಪಡೆದುಕೊಳ್ಳಬಹುದು. ಸುಧಾರಿತ ವಿಶುಯಲೈಸೇಷನ್ ಸಾಧನಗಳು ಗೃಹ ಮಾಲೀಕರಿಗೆ ಅವರ ಆಯ್ಕೆ…
ಚಾಮರಾಜನಗರ : ರಾಜ್ಯದ ಪ್ರಮುಖ ಧಾರ್ಮಿಕ ಕ್ಷೇತ್ರಗಳ ಅಭಿವೃದ್ಧಿಗೆ ನಾವು ಪ್ರಾಧಿಕಾರಗಳನ್ನು ರಚನೆ ಮಾಡಿದ್ದೇವೆ, ಮಾಡುತ್ತಿದ್ದೇವೆ. ಧಾರ್ಮಿಕ ಕ್ಷೇತ್ರಗಳ ಅಭಿವೃದ್ಧಿ ಮಾಡಿದ್ದು ಕಾಂಗ್ರೆಸ್ ಸರಕಾರ ಮಾತ್ರ. ಈ ಕೆಲಸಗಳನ್ನು ಹಿಂದಿನ ಬಿಜೆಪಿ, ಜೆಡಿಎಸ್ ಸರ್ಕಾರಗಳು ಏಕೆ ಮಾಡಲಿಲ್ಲ? ನಾವು ಸರ್ವ ಜನಾಂಗಕ್ಕೂ ಒಳಿತು ಬೇಡಿಕೊಳ್ಳುತ್ತೇವೆ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು. ಚಾಮರಾಜನಗರದ ಮಲೆ ಮಹದೇಶ್ವರ ಬೆಟ್ಟದಲ್ಲಿ ದೇವರ ದರ್ಶನದ ಬಳಿಕ ಮಾಧ್ಯಮಗಳಿಗೆ ಗುರುವಾರ ಪ್ರತಿಕ್ರಿಯೆ ನೀಡಿದ ಅವರು, ಹೊಸದಾಗಿ ಸವದತ್ತಿ ಎಲ್ಲಮ್ಮ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ, ಈ ಹಿಂದೆ ಮಲೆಮಹದೇಶ್ವರ, ಚಾಮುಂಡಿ ಬೆಟ್ಟ ಪ್ರಾಧಿಕಾರ ರಚನೆ ಮಾಡಿದ್ದೆವು. ಮಲೆ ಮಹದೇಶ್ವರ ಸನ್ನಿಧಾನದ ಇತಿಹಾಸ ತೆಗೆದುಕೊಂಡರೆ ಈ ಹಿಂದೆ ಹೇಗಿತ್ತು ಈಗ ಹೇಗಿದೆ ಎನ್ನುವುದಕ್ಕೆ ಸಾಕ್ಷಿ ಕಣ್ಣ ಮುಂದಿದೆ. ಜನರು ದೇವಸ್ಥಾನಕ್ಕೆ ಬಂದಾಗ ಪ್ರಾರ್ಥನೆ ಮಾಡಲು ಪ್ರಶಾಂತವಾದ, ಉತ್ತಮವಾದ ವಾತಾವರಣ ನಿರ್ಮಾಣ ಮಾಡಿಕೊಡಬೇಕು ಎಂಬುದು ನಮ್ಮ ಆಶಯ ಎಂದರು. https://ainkannada.com/cm-siddaramaiah-instructs-home-department-to-be-vigilant-about-foreigners-who-have-overstayed-their-stay/ ಮಹದೇಶ್ವರನ ದರ್ಶನ ಮಾಡಿ ಪೂಜೆ ಸಲ್ಲಿಸಬೇಕು ಎಂದೇ ಬುಧವಾರ ರಾತ್ರಿಯೇ…
ಚಾಮರಾಜನಗರ : ಕರ್ನಾಟಕದಲ್ಲಿ ಅವಧಿ ಮೀರಿ ನೆಲೆಸಿರುವ ವಿದೇಶಿಗರ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ಗೃಹ ಇಲಾಖೆಗೆ ಸೂಚನೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಇಂದು ಮಲೆ ಮಹದೇಶ್ವರ ಹೆಲಿಪ್ಯಾಡ್‌ನಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಉಗ್ರರನ್ನು ಮಟ್ಟ ಹಾಕಬೇಕಿರುವುದು ಕೇಂದ್ರ ಸರ್ಕಾರದ ಜವಾಬ್ದಾರಿ. ಉಗ್ರರ ಚಟುವಟಿಕೆಗಳಿಗೆ ಅವಕಾಶ ಕೊಡಕೂಡದು. ಪಹಲ್ಗಾಮ್ ಘಟನೆ ಅತ್ಯಂತ ಖಂಡನೀಯವಾದ ಹಾಗೂ ಅಮಾನುಷವಾದ ಘಟನೆ. ಇದನ್ನು ತೀವ್ರವಾಗಿ ಖಂಡಿಸುತ್ತೇನೆ. ಪುಲ್ವಾಮಾ ಘಟನೆಯೂ ಇದೇ ಜಿಲ್ಲೆಯಲ್ಲಿ ನಡೆದಿದ್ದರಿಂದ ಎಚ್ಚರಿಕೆಯಿಂದ ಇರಬೇಕಾಗಿತ್ತು. ಬಂದೋಬಸ್ತು ಸಡಿಲಗೊಳಿಸಬಾರದಿತ್ತು. ಇಲ್ಲಿ ಗುಪ್ತಚರ ವ್ಯವಸ್ಥೆಯ ವೈಫಲ್ಯವಾಗಿದೆ ಎಂದರು. https://www.youtube.com/watch?v=vTLfCXpeRNo ಉಗ್ರರನ್ನು ಹಾಕಲು ಎಲ್ಲ ಸಹಕಾರ ಘಟನೆ ನಡೆದ ಬಳಿಕ ಕ್ರಮ ತೆಗೆದುಕೊಳ್ಳುವುದು ಬೇರೆ. ಘಟನೆಯಾಗದಂತೆ ತೆಗೆದುಕೊಳ್ಳುವ ಕ್ರಮಗಳು ಬೇರೆ. ಅದನ್ನು ಕೇಂದ್ರ ಸರ್ಕಾರ ಮಾಡಬೇಕಿತ್ತು. ಪುಲ್ವಾಮಾ 40 ಸೈನಿಕರು ಪ್ರಾಣತೆತ್ತರು. ಈ ಘಟನೆಯಲ್ಲಿ 28 ಜನ ನಾಗರಿಕರು ಮೃತರಾಗಿದ್ದಾರೆ. ಇದನ್ನು ತಪ್ಪಿಸಲು ಕ್ರಮ ವಹಿಸಬೇಕಿತ್ತು.ಇಂಥ ಘಟನೆ ಮರುಕಳಿಸದಂತೆ ಎಚ್ಚರ ವಹಿಸಬೇಕು.ಉಗ್ರರು ಯಾವುದೇ ಧರ್ಮ ಜಾರಿಗೆ…
ವಿಜಯಪುರ: ಇತ್ತೀಚಿಗೆ ಗಂಡು ಮಕ್ಕಳಿಗೆ ಮದ್ವೆಗೆ ಹೆಣ್ಣು ಹುಡುಕೋದೇ ಕಷ್ಟವಾಗಿದೆ. ಹುಡ್ಗಿಗೆ ಹುಡುಕೋಕೆ ಒಂದಲ್ಲಾ ಒಂದು ಪ್ರಯತ್ನ ಮಾಡುತ್ತಿರುತ್ತಾರೆ. ಆದರೆ ಇಲ್ಲೊಂದು ಯುವಕರ ತಂಡ ಹುಡ್ಗಿನ ಹುಡ್ಕೋಕೆ ಒಂದು ಜಬರ್ದಸ್ತ್ ಪ್ಲಾನ್ ಮಾಡಿದ್ದಾರೆ. ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಶೇಗುಣಸಿ ಗ್ರಾಮದಲ್ಲಿ ಜಾತ್ರೆ ನಡೆಯುತ್ತಿದ್ದು. ಜಾತ್ರೆಗಾಗಿ ಸಾವಿರಾರು ಜನ ಬಂದಿದ್ದಾರೆ. ಇದೇ ಒಳ್ಳೆ ಚಾನ್ಸ್ ಅಂದುಕೊಂಡ ಯುವಕರು ಜಾತ್ರೆಯ ಫ್ಲೆಕ್ಸ್ನಲ್ಲಿ ವಿಶೇಷ ಬೇಡಿಕೆ ಇಟ್ಟಿದ್ದಾರೆ. ಸದ್ಯ ಈ ಫೋಟೋ ಎಲ್ಲಾ ಕಡೆ ವೈರಲ್ ಆಗುತ್ತಿದೆ. https://ainkannada.com/lics-best-scheme-just-save-rs-50-a-day-and-you-can-get-rs-6-lakh/ 20 ಜನ ಯುವಕರು ಬ್ರ್ಯಾಂಡ್ ಬಾಯ್ಸ್ ಹೆಸರಿನಲ್ಲಿ ಬ್ಯಾನರ್ ಹಾಕಿದ್ದಾರೆ. ಬ್ಯಾನರ್ನಲ್ಲಿ ತಮ್ಮೆಲ್ಲರ ಫೋಟೋಗಳನ್ನು ಹಾಕಿ, ಬ್ಯಾನರ್ ನೋಡಿ ಹಾಗೇ ಹೋಗಬೇಡಿ. ಎಲ್ಲರಿಗೂ ಹುಡುಗಿ ನೋಡಿ” ಎಂದು ಬರೆಸಿದ್ದಾರೆ. ಈ ಬ್ಯಾಚುಲರ್ ಬಾಯ್ಸ್ ಹಾಕಿರುವ ಬ್ಯಾನರ್ ಇದೀಗ ಜಾತ್ರೆಗೆ ಬಂದವರ ಗಮನ ಸೆಳೆಯುತ್ತಿದೆ. ಜೊತೆಗೆ ಫೋಟೋಗಳು ಕೂಡ ವೈರಲ್ ಆಗುತ್ತಿವೆ.
ಚಾಮರಾಜನಗರ : ಉಗ್ರರು ಎಲ್ಲೇ ಇರಲಿ, ಯಾವುದೇ ರಾಜ್ಯದಲ್ಲಿರಲಿ ಅವರನ್ನ ಮಟ್ಟ ಹಾಕಬೇಕು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಇಂದು ಮಲೆಮಹದೇಶ್ವರ ಬೆಟ್ಟದಲ್ಲಿ ನಡೆಯಲಿರುವ ಸಂಪುಟ ಸಭೆಗಾಗಿ ಚಾಮರಾಜನಗರಕ್ಕೆ ಆಗಮಿಸಿರುವ ಸಿಎಂ ಸಿದ್ದರಾಮಯ್ಯ ಮಾಧ್ಯಮಗಳೊಂದಿಗೆ ಮಾತನಾಡಿದರು. ಈ ವೇಳೆ ಪಹಲ್ಗಾಮ್‌ನಲ್ಲಿನ ಉಗ್ರ ದಾಳಿ ಬಗ್ಗೆ ಪ್ರತಿಕ್ರಿಯಿಸಿ, ಉಗ್ರ ಚಟುವಟಿಕೆ ಬೆಳೆಯಲು, ನಡೆಸಲು ಕೇಂದ್ರ ಸರ್ಕಾರ ಅವಕಾಶ ಕೊಡಬಾರದು. ಮೊನ್ನೆ ನಡೆದ ಘಟನೆ ಅತ್ಯಂತ ಅಮಾನವೀಯ, ಹೇಯ ಕೃತ್ಯವಾಗಿದೆ. ಪುಲ್ವಾಮ ಘಟನೆ ನಡೆದಿತ್ತು, ಈಗ ಇದು ನಡೆದಿದೆ, ಮತ್ತೊಮ್ಮೆ ಈ ರೀತಿ ಘಟನೆ ಆಗದಂತೆ ಎಚ್ಚರಿಕೆ ವಹಿಸಬೇಕು ಎಂದರು. https://ainkannada.com/terrorist-attack-in-pahalgam-178-kannadigas-stranded-in-srinagar-airlifted/ ಪುಲ್ವಾಮ ಘಟನೆ ಬಳಿಕ ಸ್ವಲ್ಪವೂ ವಿಶ್ರಮಿಸಬಾರದಿತ್ತು. ಕೇಂದ್ರ ಸರ್ಕಾರದ ಇಂಟಲಿಜೆನ್ಸ್ ವೈಫಲ್ಯ ಇದೆ ಅನ್ಸುತ್ತೆ. ಉಗ್ರರು ಯಾವುದೇ ಜಾತಿ ಧರ್ಮಕ್ಕೆ ಸೇರಿದವರಾಗಲಿ ಅವರನ್ನ ಮಟ್ಟ ಹಾಕಬೇಕು. ಈ ವಿಚಾರದಲ್ಲಿ ಕೇಂದ್ರ ಸರ್ಕಾರಕ್ಕೆ ನಮ್ಮ ಸರ್ಕಾರ, ಪಕ್ಷ ಬೆಂಬಲ ನೀಡಲಿದೆ. ಎಲ್ಲರ ಜೊತೆ ನಾವೀದ್ದೇವೆ. 10 ಲಕ್ಷ ಪರಿಹಾರ ಕೊಟ್ಟಿದ್ದೇವೆ. ಬಹಳ…