Author: AIN Author

ಬಾಗಲಕೋಟೆ:- ಇತ್ತೀಚಿನ ದಿನಗಳಲ್ಲಿ ಕ್ಷುಲ್ಲಕ ವಿಚಾರಕ್ಕೆ ಗಲಾಟೆ, ಹಲ್ಲೆ ಯತ್ನಗಳು ವರದಿ ಆಗಿತ್ತಿದೆ. ಅದರಂತೆ ಜಮಖಂಡಿ ತಾಲೂಕಿನ ಸಾವಳಗಿ ಗ್ರಾಮದಲ್ಲಿ ಕ್ರಿಕೆಟ್ ಬಾಲ್ ವಿಚಾರಕ್ಕೆ ಜಗಳ ತೆಗೆದು ಯುವಕ ಒಡೆದ ಬಿಯರ್ ಬಾಟಲ್​ನಿಂದ ಶಿಕ್ಷಕನಿಗೆ ಇರಿದ ಘಟನೆ ಜರುಗಿದೆ. https://ainkannada.com/car-bike-head-on-collision-two-young-women-die/ ಘಟನೆ ಪರಿಣಾಮ 36 ವರ್ಷದ ಶಿಕ್ಷಕ ರಾಮಪ್ಪ ಪೂಜಾರಿಗೆ ಗಂಭೀರ ಗಾಯವಾಗಿದೆ. ಹಲ್ಲೆ ಮಾಡಿರುವ ಯುವಕನನ್ನು ಪವನ್ ಎಂದು ಗುರುತಿಸಲಾಗಿದೆ. ಬಿಎಲ್​ಡಿಇ ಖಾಸಗಿ ಸಂಸ್ಥೆಯ ಪ್ರಾಥಮಿಕ ಶಾಲಾ ಶಿಕ್ಷಕರಾಗಿರುವ ರಾಮಪ್ಪ ಪೂಜಾರಿ ಮತ್ತು ಪವನ್ ಜಾಧವ್ ಅಕಪಕ್ಕದ ಮನೆಯವರು. ಕ್ರಿಕೆಟ್ ಆಡುವಾಗ ಬಾಲ್ ಶಿಕ್ಷಕ ರಾಮಪ್ಪ ಪೂಜಾರಿ ಮನೆ‌ಯಲ್ಲಿ ಬಿದ್ದಿತ್ತು. ನಿಮ್ಮ ಮನೆಯಲ್ಲಿ ಬಾಲ್ ಹೋಗಿದೆ ಕೊಡಿ ಎಂದು ಆರೋಪಿ ಪವನ್​ ಜಾಧವ್​, ರಾಮಪ್ಪ ಪೂಜಾರಿಯವರಿಗೆ ಕೇಳಿದ್ದಾರೆ. ಅದಕ್ಕೆ, ರಾಮಪ್ಪ ಪೂಜಾರಿ ಇಲ್ಲಿ ಬಾಲ್ ಬಂದಿಲ್ಲ ಎಂದಿದ್ದಾರೆ. ಈ ವಿಚಾರವಾಗಿ ಇಬ್ಬರ ನಡುವೆ ಕಿರಿಕ್ ಆಗಿದೆ. ನಂತರ ಶಾಲೆಗೆ ಬಂದ ಪವನ್​ ಸ್ಟಾಫ್​ ರೂಂ ಒಳಗೆ ನುಗ್ಗಿ ಬಿಯರ್​ ಬಾಟಲ್​ನಿಂದ…

Read More

ದಾವಣಗೆರೆ:- ಕಾರು-ಬೈಕ್ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಯುವತಿಯರು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಹರಿಹರ ತಾಲೂಕಿನ ಕಡರನಾಯ್ಕನಹಳ್ಳಿ ಗ್ರಾಮದಲ್ಲಿ ಜರುಗಿದೆ. https://ainkannada.com/annoying-and-heavy-loss-in-employment-for-these-piles-thursdays-prediction-15-may-2025/ ಸುಮಾ, ಪಲ್ಲವಿ ಮೃತ ದುರ್ದೈವಿಗಳು. ರಾಣೇಬೆನ್ನೂರು ತಾಲೂಕಿನ ತುಮ್ಮಿನಕಟ್ಟಿ ಗ್ರಾಮದ ಬೈಕ್ ಸವಾರ ಸಚಿನ್‌ಗೆ ಗಂಭೀರ ಗಾಯಗಳಾಗಿವೆ. ಸಚಿನ್ ಬುಧವಾರ ಸಂಜೆ ಸಂಬಂಧಿಗಳಾದ ಸುಮಾ ಮತ್ತು ಪಲ್ಲವಿಯನ್ನು ಬೈಕ್‌ನಲ್ಲಿ ಕರೆದುಕೊಂಡು ಬರುವಾಗ ಎದುರುಗಡೆಯಿಂದ ಬಂದ ಕಾರು ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ಇಬ್ಬರು ಯುವತಿಯರು ರಸ್ತೆಗೆ ಎಸೆಯಲ್ಪಟ್ಟಿದ್ದರು. ಸುಮಾ ಸ್ಥಳದಲ್ಲೇ ಸಾವನ್ನಪ್ಪಿದ್ದು, ಗಂಭೀರ ಗಾಯಗಳಾಗಿದ್ದ ಪಲ್ಲವಿಯನ್ನು ಆಸ್ಪತ್ರೆಗೆ ಸಾಗಿಸುವ ವೇಳೆ ಮಾರ್ಗಮಧ್ಯೆ ಕೊನೆಯುಸಿರೆಳೆದಿದ್ದಾಳೆ.

Read More

ಸೂರ್ಯೋದಯ – 5:47 ಬೆ. ಸೂರ್ಯಾಸ್ತ – 6:37 ಸಂಜೆ. ಶಾಲಿವಾಹನ ಶಕೆ -1947 ಸಂವತ್-2081 ವಿಶ್ವಾವಸು ನಾಮ ಸಂವತ್ಸರ, ಉತ್ತರ ಅಯಣ, ಶುಕ್ಲ ಪಕ್ಷ, ವೈಶಾಖ ಮಾಸ, ವಸಂತ ಋತು, ತಿಥಿ – ತದಿಗೆ ನಕ್ಷತ್ರ – ಜ್ಯೇಷ್ಠ ಯೋಗ – ಶಿವ ಕರಣ – ವಣಿಜ ರಾಹು ಕಾಲ – 01:30 ದಿಂದ 03:00 ವರೆಗೆ ಯಮಗಂಡ – 06:00 ದಿಂದ 07:30 ವರೆಗೆ ಗುಳಿಕ ಕಾಲ – 09:00 ದಿಂದ 10:30 ವರೆಗೆ ಬ್ರಹ್ಮ ಮುಹೂರ್ತ – 4:11 ಬೆ. ದಿಂದ 4:59 ಬೆ.ವರೆಗೆ ಅಮೃತ ಕಾಲ – 4:27 ಬೆ. ದಿಂದ 6:12ಬೆ. ವರೆಗೆ ಅಭಿಜಿತ್ ಮುಹುರ್ತ – 11:46 ಬೆ. ದಿಂದ 12:38 ಮ.ವರೆಗೆ ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ. ಸೋಮಶೇಖರ್ ಗುರೂಜಿB.Sc ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು. Mob. 93534 88403 ಮೇಷ :…

Read More

ಬೆಂಗಳೂರು:- ಭಾರತದ ಅತ್ಯಂತ ಸುರಕ್ಷಿತ ನಗರ ಬೆಂಗಳೂರು. ನಿಜನಾ? ಅಂತಾ ಹುಬ್ಬೇರಿಸಬೇಡಿ. ಖಂಡಿತ ಸತ್ಯ. ಯೂನಿವರ್ಸಿಟಿ ಆಫ್ ಹೈದರಾಬಾದ್ ನಡೆಸಿದ ಸರ್ವೇಯಲ್ಲಿ ಬೆಂಗಳೂರು ಅತಂತ್ಯ ಸುರಕ್ಷಿತ ನಗರವಾಗಿ ಹೊರಹೊಮ್ಮಿದೆ. https://ainkannada.com/justice-from-the-government-for-the-family-of-the-abandoned-girl-dcm-d-k-shivakumar-promises/ ಬೇರೆ ನಗರಗಳಿಗೆ ಹೊಸ ಹೋಲಿಕೆ ಮಾಡಿದರೆ ಕಳೆದ‌ ಸಾಲಿನ 3 ತಿಂಗಳಲ್ಲಿ ರಾಜಧಾನಿಯಲ್ಲಿ ಅಪರಾಧ ಪ್ರಕರಣಗಳ ಸಂಖ್ಯೆ ಇಳಿಕೆಯಾಗಿದ್ದು, ಈ ಮೂಲಕ ರಾಷ್ಟ್ರದಲ್ಲೇ ಅತ್ಯಂತ ಸುರಕ್ಷಿತ ನಗರ ಎಂಬ ಹೆಗ್ಗಳಿಕೆಗೆ ಬೆಂಗಳೂರು ಪಾತ್ರವಾಗಿದೆ. ಕಳೆದ ವರ್ಷಕ್ಕೆ ಹೋಲಿಕೆ‌ ಮಾಡಿ ನೋಡುವುದಾದರೆ ಬೆಂಗಳೂರಿನಲ್ಲಿ ಅಪರಾಧ ಪ್ರಕರಣಗಳು ಶೇಕಡ 12ರಷ್ಟು ಇಳಿಕೆ‌‌ ಕಂಡು ಬಂದಿದೆ. ಸೈಬರ್ ವಂಚನೆ ಪ್ರಕರಣಗಳಲ್ಲಿ 39% ರಷ್ಟು ಕಡಿಮೆಯಾಗಿದೆ. ಡಕಾಯಿತಿ ಶೇ. 71 ರಷ್ಟು, ದರೋಡೆ ಶೇ. 73 ರಷ್ಟು, ಸರಗಳ್ಳತನ ಶೇ. 57 ರಷ್ಟು ಕಡಿಮೆಯಾಗಿದೆ.

Read More

ರಾಮನಗರ, ಮೇ 14: “ಜಿಲ್ಲೆಯ ಭದ್ರಾಪುರ ಗ್ರಾಮದ ಅಪ್ರಾಪ್ತ ಬಾಲಕಿ ಖುಷಿ ಹತ್ಯೆಯ ವಿಚಾರದಲ್ಲಿ ಅವರ ಕುಟುಂಬಸ್ಥರಿಗೆ ನ್ಯಾಯ ದೊರಕಿಸಿ ಕೊಡಲಾಗುವುದು. ತಪ್ಪಿತಸ್ಥರ ವಿರುದ್ಧ ಪೊಲೀಸರು ಕಠಿಣ ಕ್ರಮ ಜರುಗಿಸಲಿದ್ದಾರೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು. ರಾಮನಗರ ಜಿಲ್ಲೆ ಬಿಡದಿಯ ಭದ್ರಾಪುರದ ಖುಷಿ ಎನ್ನುವ ಹಕ್ಕಿಪಿಕ್ಕಿ ಬುಡಕಟ್ಟು ಜನಾಂಗದ ಬಾಲಕಿಯ ಶವ ರೈಲ್ವೇ ಹಳಿ ಬಳಿ ಪತ್ತೆಯಾಗಿತ್ತು. ಆಕೆಯ ಕುಟುಂಬ ಸದಸ್ಯರಿಗೆ ಬುಧವಾರ ಸಾಂತ್ವನ ಹೇಳಿ, ಜಿಲ್ಲಾಡಳಿತ ಪರವಾಗಿ ₹4,12,500 ಹಾಗೂ ಪಂಚಾಯ್ತಿ ವತಿಯಿಂದ ₹50,000 ಪರಿಹಾರ ಚೆಕ್ ವಿತರಿಸಿ ನಂತರ ಮಾಧ್ಯಮಗಳ ಜತೆ ಮಾತನಾಡಿದರು. https://ainkannada.com/it-is-not-right-to-talk-about-social-justice-and-join-forces-with-opponents-of-social-justice/ “ಈ ಅನುಮಾನಾಸ್ಪದ ಸಾವಿನ ಪ್ರಕರಣದ ಬಗ್ಗೆ ಪೊಲೀಸರು ತನಿಖೆ ಮಾಡುತ್ತಿದ್ದಾರೆ. ಈ ವಿಚಾರದಲ್ಲಿ ಯಾರ ಒತ್ತಡಕ್ಕೂ ಒಳಗಾಗದೆ ನ್ಯಾಯಪರ, ನಿಷ್ಠುರವಾಗಿ ತನಿಖೆ ನಡೆಯಲಿದೆ” ಎಂದರು. “ಯಾರ‌ ಮೇಲಾದರೂ ಅನುಮಾನವಿದೆಯೇ ಎಂದು ಬಾಲಕಿಯ ಕುಟುಂಬಸ್ಥರ ಬಳಿ ಕೇಳಿದೆ. ಅವರು ಇಲ್ಲ ಎಂದು ಹೇಳುತ್ತಿದ್ದಾರೆ. ತನಿಖೆ ಮಾಡುವುದು ಪೊಲೀಸ್ ಇಲಾಖೆ ಕರ್ತವ್ಯ” ಎಂದರು. ಬಾಲಕಿಯ…

Read More

ಧಾರವಾಡ, ಮೇ, 14:  ಅಧಿಕಾರಿಗಳು ಪರಸ್ಪರ ಸಮನ್ವಯತೆಯಿಂದ ಹಾಗೂ ಜವಾಬ್ದಾರಿಯುತವಾಗಿ ಕೆಲಸಮಾಡಿ ಎಂದು ಕೃಷಿ ಸಚಿವರು ಸೂಚಿಸಿದ್ದಾರೆ. https://ainkannada.com/it-is-not-right-to-talk-about-social-justice-and-join-forces-with-opponents-of-social-justice/ ರೈತರಿಗೆ ಸರ್ಕಾರದ ಯೋಜನೆಗಳ ಬಗ್ಗೆ ಮಾಹಿತಿ ನೀಡುವ ಜೊತೆಗೆ ಹೊಸ ಆವಿಷ್ಕಾರ, ವಿಜ್ಞಾನ, ತಂತ್ರಜ್ಞಾನಗ ಬಗ್ಗೆ ಅರಿವು ಮೂಡಿಸಿ, ಕೃಷಿ ಜಮೀನುಗಳಿಗೆ ಅವುಗಳನ್ನು ವರ್ಗಾವಣೆ ಮಾಡಿ ಎಂದು ಸಚಿವರು ತಿಳಿಸಿದರು.. ಧಾರವಾಡ ಕೃಷಿ ವಿಜ್ಞಾನ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಬೆಳಗಾವಿ ವಿಭಾಗದ 7 ಜಿಲ್ಲೆಗಳ ಅಧಿಕಾರಿಗಳ ಜೊತೆ ಪ್ರಗತಿ ಪರಿಶೀಲನೆ ನಡೆಸಿದ ಕೃಷಿ ಸಚಿವ ಎನ್. ಚಲುವರಾಯಸ್ವಾಮಿಯವರು, ಹೈಟೆಕ್ ಹಾರ್ವೆಸ್ಟ್‌ ಹಬ್ ,ಕೃಷಿ ಭಾಗ್ಯ ಯೋಜನೆಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ.ಇದರಿಂದಾಗುವ ಪರಿಣಾಮಕಾರಿ ಬದಲಾವಣೆಗಳ ಬಗ್ಗೆ ಕೃಷಿಕರಿಗೆ ಮಾಹಿತಿ ನೀಡಿ ಎಂದು ಅವರು ಹೇಳಿದರು.. ಅಂತರಾಷ್ಟೀಯ ಮಾರುಕಟ್ಟೆಯಲ್ಲಿ ಫಾಸ್ಪರಿಕ್ ಆಮ್ಲದ ಬೆಲೆ ಹೆಚ್ಚಿರುವುದರಿಂದ,ಡಿಎಪಿಗೆ ಪರ್ಯಾಯಾವಾಗಿ ಕಾಂಪ್ಲೆಕ್ಸ್ ಗೊಬ್ಬರ, 15 15 15, 17 17 17 ಹಾಗೂ 19 19 19 ಪರ್ಯಾಯಾವಾಗಿ ಎಲ್ಲಾ ಬೆಳೆಗಳಿಗೂ ಉಪಯೋಗಿಸಬೇಕು.. ಪೊಟಾಷ್ ಇರುವುದರಿಂದ ಸಮತೋಲನ ಗೊಬ್ಬರ ಒದಗಿಸಲಿದ್ದು,…

Read More

ಬೆಂಗಳೂರು ಮೇ 14 : ಬಾಯಲ್ಲಿ ಸಾಮಾಜಿಕ ನ್ಯಾಯ ಹೇಳೋದು, ಸಾಮಾಜಿಕ ನ್ಯಾಯದ ವಿರೋಧಿಗಳ ಜೊತೆ ಹೋಗಿ ಸೇರೋದು ಸರಿಯಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಭಿಪ್ರಾಯಪಟ್ಟರು.‌ ಕಾವೇರಿ ನಿವಾಸದಲ್ಲಿ ಹಿರಿಯ ಪತ್ರಕರ್ತ ಡಾ.ಎಂ.ಎಸ್.ಮಣಿ ಅವರ “ಒಳಕೋವೆ” ಕೃತಿ ಬಿಡುಗಡೆಗೊಳಿಸಿ, ಐದು ಮಂದಿ ಸಾಧಕರಿಗೆ ವಿ.ಪಿ.ಸಿಂಗ್ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು. ಸಾಮಾಜಿಕ ನ್ಯಾಯದ ಬಗ್ಗೆ ಬದ್ಧತೆ ಇರಬೇಕು. ತೋರಿಕೆ ಇರಬಾರದು. ಇವತ್ತಿನ‌ ಸಂದರ್ಭದಲ್ಲಿ ಸಾಮಾಜಿಕ ನ್ಯಾಯದ ಬಗ್ಗೆ ಭಾಷಣ ಮಾಡುವವರು, ಮಾತಾಡುವವರು ಬಹಳ ಮಂದಿ ಸಿಗ್ತಾರೆ. ಆದರೆ ಬದ್ಧತೆ ಇರುವವರು ಕಡಿಮೆ ಎಂದರು. ಇವತ್ತಿನ‌ ವ್ಯವಸ್ಥೆ ಸುಧಾರಣೆಗೆ ವಿರುದ್ಧವಾದದ್ದು. ವ್ಯವಸ್ಥೆ ಜೊತೆ ರಾಜಿ ಮಾಡಿಕೊಂಡರೆ ಏನಾಗತ್ತೆ, ರಾಜಿ ಮಾಡಿಕೊಳ್ಳದಿದ್ದರೆ ಏನಾಗುತ್ತದೆ ಎನ್ನುವ ಅರಿವು ನನಗೆ ಇದೆ ಎಂದರು. ಈ ಅರಿವು ಎಲ್ಲರಿಗೂ ಇರಬೇಕು. ಜಾತಿ ವ್ಯವಸ್ಥೆಗೆ ಚಲನೆ ಇಲ್ಲ, ವರ್ಗ ವ್ಯವಸ್ಥೆಗೆ ಚಲನೆ ಇದೆ. ಅದಕ್ಕೇ ಬುದ್ದ, ಬಸವ ಅಂಬೇಡ್ಕರ್ ಎಷ್ಟು ಹೋರಾಡಿದರೂ ಜಾತಿ ಹೋಗಿಲ್ಲ. ಜಾತಿ ಎನ್ನುವುದು ಸಾಮಾಜಿಕ‌…

Read More

ಚಾಮರಾಜನಗರ: ಜಿಲ್ಲೆಯಲ್ಲಿ ರೇಷ್ಮೆ ಬೆಳೆಗಾರರನ್ನು (ನೇಕಾರರು) ಪ್ರೋತ್ಸಾಹಿಸಿ, ರೇಷ್ಮೆ ಉತ್ಪಾದನೆ ಹೆಚ್ಚಿಸುವ ಸಲುವಾಗಿ ಪಶುಸಂಗೋಪನೆ, ರೇಷ್ಮೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ. ವೆಂಕಟೇಶ್ ಅವರು ಬಿಳಿಗಿರಿರಂಗನಬೆಟ್ಟಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. https://ainkannada.com/complete-the-drinking-water-project-work-quickly-minister-k-venkatesh/ ಬಿಳಿಗಿರಿರಂಗನಬೆಟ್ಟದ ರೇಷ್ಮೆ ಕೃಷಿ ಕೇಂದ್ರಕ್ಕೆ ಭೇಟಿ ನೀಡಿದ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ. ವೆಂಕಟೇಶ್ ಅವರು ರೇಷ್ಮೆ ಕೃಷಿ ಕೇಂದ್ರ ಹಾಗೂ ಕೇಂದ್ರದ ಅವರಣ ಸ್ಥಳ ಪರಿಶೀಲನೆ ನಡೆಸಿ ಅಲ್ಲಿನ ಕಾರ್ಯವೈಖರಿ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ಬೆಟ್ಟದಲ್ಲಿ ರೇಷ್ಮೆ ಕೃಷಿ ಕೇಂದ್ರದ ಒಟ್ಟು 38 ಎಕರೆ ವಿಸ್ತೀರ್ಣದ ಜಾಗ ಒತ್ತುವರಿಯಾಗಿದೆ. ಕಾಡುಪ್ರಾಣಿಗಳ ಹಾವಳಿಯು ಇದೆ. ಕಾಡುಪ್ರಾಣಿಗಳ ಉಪಟಳ ತಡೆಯಲು ರೈಲ್ವೆ ಬ್ಯಾರಿಕೇಡ್ ಅವಶ್ಯವಿದೆ. ಆವರಣದಲ್ಲಿರುವ ರೇಷ್ಮೆ ಕಾರ್ಖಾನೆಗಳು ತುಂಬಾ ಹಳೇಯದಾಗಿ ಶಿಥಿಲಗೊಂಡಿವೆ. ಕೇಂದ್ರದ ನಿರ್ವಹಣೆಗಾಗಿ ಸಿಬ್ಬಂದಿ ಕೊರತೆ ಇದೆ. ಪ್ರಸ್ತುತ ಇಲ್ಲಿನ ರೇಷ್ಮೆ ಕೃಷಿ ಕೇಂದ್ರವನ್ನು ಪುನಶ್ಛೇತನಗೊಳಿಸುವ ಅಗತ್ಯವಿದೆ ಎಂದು ಅಧಿಕಾರಿಗಳು ಸಚಿವರಿಗೆ ಮನವರಿಕೆ ಮಾಡಿದರು. ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಜಿಲ್ಲಾ…

Read More

ಚಾಮರಾಜನಗರ:- ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮರ್ಪಕ ಪೂರೈಕೆಗೆ ಮೊದಲ ಆದ್ಯತೆ ನೀಡಬೇಕು. ಕುಡಿಯುವ ನೀರಿನ ಯೋಜನೆ ಕಾಮಗಾರಿಗಳಿಗೆ ಯಾವುದೇ ವಿಳಂಬ ಮಾಡದೇ ತ್ವರಿತವಾಗಿ ಪೂರ್ಣಗೊಳಿಸಬೇಕು ಎಂದು ಪಶುಸಂಗೋಪನೆ, ರೇಷ್ಮೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ. ವೆಂಕಟೇಶ್ ಅವರು ಸೂಚಿಸಿದರು. https://ainkannada.com/inhuman-act-14-year-old-girl-raped-and-murdered/ ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿಂದು ಹವಾಮಾನ, ಕುಡಿಯುವ ನೀರು ನಿರ್ವಹಣೆ, ಜಾನುವಾರುಗಳ ಮೇವು ಹಾಗೂ ಅರಣ್ಯ ಇಲಾಖೆಗೆ ಸಂಬಂಧಿಸಿದ ಪ್ರಸ್ತಾವನೆಗಳು ಮತ್ತು ಇತರೆ ಇಲಾಖೆ ವಿಷಯಗಳ ಕುರಿತು ಜಿಲ್ಲಾಮಟ್ಟದ ಅಧಿಕಾರಿಗಳೊಂದಿಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕುಡಿಯುವ ನೀರಿಗೆ ಅಧಿಕಾರಿಗಳು ಪ್ರಥಮ ಪ್ರಾಶಸ್ತ್ಯ ನೀಡಬೇಕು. ಜಲ ಜೀವನ್ ಮಿಷನ್ (ಜೆಜೆಎಂ) ಅಡಿ ಗ್ರಾಮಗಳಲ್ಲಿ ಕೈಗೊಂಡಿರುವ ಕುಡಿಯುವ ನೀರಿನ ಕಾಮಗಾರಿಯನ್ನು ಸಂಪೂರ್ಣವಾಗಿ ಮುಗಿಸಿದ ಬಳಿಕವಷ್ಟೇ ಆಯಾಯ ಗ್ರಾಮ ಪಂಚಾಯಿತಿಗಳಿಗೆ ಹಸ್ತಾಂತರಿಸಬೇಕು. ಈ ಬಗ್ಗೆ ದೂರು ಕೇಳಿ ಬರುತ್ತಿದೆ. ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು ಪರಿಶೀಲಿಸಿ ಕ್ರಮವಹಿಸಬೇಕು ಎಂದು ನಿರ್ದೇಶನ ನೀಡಿದರು. ಹೊಂಗನೂರು, ಇರಸವಾಡಿ, ಕೆಂಪನಪುರ ಗ್ರಾಮ…

Read More

ರಾಮನಗರ:- 14 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿರುವ ಘಟನೆ ಜಿಲ್ಲೆಯ ಭದ್ರಾಪುರ ಗ್ರಾಮ ಸಮೀಪದ ರೈಲು ಹಳಿ ಪಕ್ಕದಲ್ಲಿ ಜರುಗಿದೆ. ಕೊಲೆಯಾದ ಬಾಲಕಿಯನ್ನು ಖುಷಿ ಎಂದು ಗುರುತಿಸಲಾಗಿದೆ. https://ainkannada.com/countdown-to-ipl-second-half-bcci-changes-the-rules-what-is-it/ ಬಾಲಕಿಯ ಪೋಷಕರ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡಿರುವ ಬಿಡದಿ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ. ಇನ್ನು, ಖುಷಿ ಮೇಲೆ ಅತ್ಯಾಚಾರ ಎಸಗಲಾಗಿದೆ ಎಂದು ಕುಟುಂಬಸ್ಥರು ಶಂಕೆ ವ್ಯಕ್ಯಪಡಿಸಿದ ಹಿನ್ನೆಲೆಯಲ್ಲಿ ಪೊಲೀಸರು ಕೆಲ ಸಾಕ್ಷ್ಯಗಳನ್ನ ಎಫ್ಎಸ್​ಎಲ್​ಗೆ ಕಳುಹಿಸಿದ್ದು, ವರದಿಗಾಗಿ ಕಾಯುತ್ತಿದ್ದಾರೆ. ಅಲ್ಲದೆ, ಕೆಲವು ಸಂಶಯಾಸ್ಪದ ವ್ಯಕ್ತಿಗಳನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ವಿಕಲಚೇತನ ಬಾಲಕಿ ಖುಷಿಯ ಮೇಲೆ ಅತ್ಯಾಚಾರ ಎಸಗಿ, ಕೊಲೆ ಮಾಡಿದ ಆರೋಪಿಗಳನ್ನು ಗಲ್ಲಿಗೇರಿಸಬೇಕೆಂದು ಕುಟುಂಬಸ್ಥರು ಆಗ್ರಹಿಸಿದ್ದಾರೆ.

Read More