ಬೆಂಗಳೂರು:- ಪ್ರವಾಸಕ್ಕೆಂದು ಕಾಶ್ಮೀರಕ್ಕೆ ತೆರಳಿದ್ದ 28 ಪ್ರವಾಸಿಗರು ಉಗ್ರರ ಭೀಕರ ಗುಂಡಿನ ದಾಳಿಗೆ ಬಲಿ ಆಗಿದ್ದಾರೆ. ಇದೇ ದಾಳಿಯಲ್ಲಿ ಮೃತಪಟ್ಟ ಕನ್ನಡಿಗರ ಮೃತದೇಹ ಬೆಂಗಳೂರಿಗೆ ಶಿಫ್ಟ್ ಆಗಿದೆ. https://ainkannada.com/cabinet-meeting-at-mahadeshwara-hill-today-dk-shivakumar-pooja-at-the-temple-in-the-morning/ ಸಿಎಂ ಸಿದ್ದರಾಮಯ್ಯ ಅವರು ಪಹಲ್ಗಾಮ್‌ನಲ್ಲಿ ಉಗ್ರರಿಂದ ಹತ್ಯೆಯಾದ ನಗರದ ಭರತ್ ಭೂಷಣ್ ಅವರ ಅಂತಿಮ ದರ್ಶನ ಪಡೆದರು. ಸಿಎಂ ಭೇಟಿಯ ವೇಳೆ, ಮಗುವನ್ನು ತೋರಿಸಿ ಘಟನೆಯ ಭೀಕರತೆಯನ್ನು ಹೇಳಿ ಭರತ್ ಪತ್ನಿ ಸುಜಾತ ಅವರು ಕಣ್ಣಿರಿಟ್ಟರು. ಸಿಎಂ ಮುಂದೆ ಕುಟುಂಬಸ್ಥರು ಬಿಕ್ಕಿ ಬಿಕ್ಕಿ ಅತ್ತಿದ್ದು, ಮಗುವಿನ ಮುಖ ನೋಡಿ ಸಿಎಂ ಸಹ ಭಾವುಕರಾದರು. ಭರತ್ ಪತ್ನಿ, ಸೋದರಮಾವ ಸೀತಾರಾಮ್ ಹಾಗೂ ಭರತ್ ತಂದೆಯವರಿಗೆ ಸಿಎಂ ಸಾಂತ್ವನ ಹೇಳಿದರು
Author: AIN Author
ಚಾಮರಾಜನಗರ:- ಕೆಪಿಸಿಸಿ ಅಧ್ಯಕ ಹಾಗೂ ಉಪಮುಖ್ಯಮಂತ್ರಿಗಳಾಗಿರುವ ಡಿಕೆ ಶಿವಕುಮಾರ್ ಅವರು ಇಂದು ಚಾಮರಾಜನಗರದ ಇತಿಹಾಸ ಪ್ರಸಿದ್ಧ ಮಲೆ ಮಹದೇಶ್ವರ ಬೆಟ್ಟಕ್ಕೆ ಭೇಟಿ ನೀಡಿದರು. https://ainkannada.com/rcb-vs-rr-chinnaswamy-the-iron-man-rcb-to-get-a-win-at-home-today/ ಭೇಟಿ ವೇಳೆ ಮಹದೇಶ್ವರ ದೇಗುಲದಲ್ಲಿ ಇಂದು ಮುಂಜಾನೆಯೇ ಪೂಜೆ ಸಲ್ಲಿಸಿದರು. ಬಳಿಕ ಮಹದೇಶ್ವರ ಬೆಟ್ಟದಲ್ಲಿ ಹುಲಿವಾಹನ ಮಹದೇಶ್ವರ ಬೆಳ್ಳಿರಥ ಪ್ರದಕ್ಷಿಣೆಯಲ್ಲಿ ದಂಡುಕೋಲು ಸೇವೆ ಸಲ್ಲಿಸಿದರು. ಇದೆ ವೇಳೆ ಮಹದೇಶ್ವರ ಬಳಿ ನಾಡಿನ ಒಳಿತಿಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಹಲವು ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು. ಇನ್ನೂ ಬೆಂಗಳೂರು ಗಡಿ ಜಿಲ್ಲೆ ಚಾಮರಾಜನಗರದ ಮಲೈ ಮಹದೇಶ್ವರ ಬೆಟ್ಟದಲ್ಲಿ ಗುರುವಾರ ಸಿಎಂ ಸಿದ್ದರಾಮಯ್ಯ ಅಧ್ಯಕ್ಷತೆ ಯಲ್ಲಿ ಮಹತ್ವದ ಸಚಿವ ಸಂಪುಟ ಸಭೆ ನಡೆಯಲಿದೆ. ಡಿಸಿಎಂ ಡಿಕೆ ಶಿವಕುಮಾರ್ ಈಗಾಗಲೇ ತಲುಪಿದ್ದು, ಪೂಜೆಯಲ್ಲಿ ಭಾಗಿಯಾಗಿದ್ದಾರೆ. ಬಹಳಷ್ಟು ಸಚಿವರು ಬುಧವಾರ ರಾತ್ರಿಯೇ ಮಹದೇಶ್ವರ ಬೆಟ್ಟ ತಲುಪಿದ್ದು, ಮೈಸೂರಿನಲ್ಲಿ ವಾಸ್ತವ್ಯ ಮಾಡಿರುವ ಕೆಲವು ಸಚಿವರು ಗುರುವಾರ ತೆರಳಲಿದ್ದಾರೆ. ಸಿಎಂ ಸಿದ್ದರಾಮಯ್ಯ ಬೆಳಗ್ಗೆ ಎಚ್‌ಎಲ್ ಏರ್‌ಪೋರ್ಟ್ ನಿಂದ ಹೆಲಿಕಾಪ್ಟರ್‌ನಲ್ಲಿ ಬೆಟ್ಟಕ್ಕೆ ತೆರಳಲಿದ್ದಾರೆ. ಮಧ್ಯಾಹ್ನ…
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ರಾಜಸ್ಥಾನ್ ರಾಯಲ್ಸ್ ನಡುವೆ ಮುಖಾಮುಖಿ ಪಂದ್ಯ ನಡೆಯಲಿದೆ. ತವರಿನಲ್ಲಿ ನಡೆಯುತ್ತಿರುವ ನಾಲ್ಕನೇ ಪಂದ್ಯವನ್ನಾಡದರೂ ಗೆಲ್ಲುವ ಮೂಲಕ ಆರ್ಸಿಬಿ ಪ್ಲೇಆಫ್‌ಗೆ ಇನ್ನಷ್ಟು ಸನಿಹವಾಗಲು ಮತ್ತು ತವರಿನಲ್ಲಿ ಸೋಲಿನ ಸರಣಿಯನ್ನು ಮುಂದುವರೆಸಲು ಯತ್ನಿಸಲಿದೆ. ಏಕೆಂದರೆ ತವರಿನಲ್ಲಿ ಆಡಿರುವ 3 ಪಂದ್ಯಗಳನ್ನು ಸೋತಿರುವ ಆರ್ಸಿಬಿಗೆ ನಾಳಿನ ಪಂದ್ಯ ಅತ್ಯಂತ ಮಹತ್ವದಾಗಿದೆ. ಇತ್ತ ರಾಜಸ್ಥಾನ್ ಕೂಡ ಕಳೆದ ಮುಖಾಮುಖಿಯ ಸೋಲಿಗೆ ಸೇಡು ತೀರಿಸಿಕೊಳ್ಳಲು ಹಾಗೂ ಪ್ಲೇ ಆಫ್ ರೇಸ್ನಲ್ಲಿ ಜೀವಂತವಾಗಿರಲು ಹೋರಾಡಲಿದೆ. https://ainkannada.com/did-you-know-these-foods-are-the-best-for-removing-fat-stuck-around-the-liver/ ಇಲ್ಲಿಯವರೆಗೆ ಎರಡೂ ತಂಡಗಳ ನಡುವೆ ನಡೆದ 32 ಪಂದ್ಯಗಳಲ್ಲಿ, ಆರ್ಸಿಬಿ 16 ರಲ್ಲಿ ಗೆದ್ದಿದ್ದರೆ, ರಾಜಸ್ಥಾನ್ 14 ರಲ್ಲಿ ಗೆದ್ದಿದೆ. ಉಳಿದಂತೆ ಎರಡು ಪಂದ್ಯಗಳು ಯಾವುದೇ ಫಲಿತಾಂಶವಿಲ್ಲದೆ ಅಂತ್ಯಗೊಂಡಿವೆ. ಆದಾಗ್ಯೂ, ಬೆಂಗಳೂರಿನಲ್ಲಿ ನಡೆದ ಪಂದ್ಯಗಳಲ್ಲಿ ರಾಜಸ್ಥಾನ್ ನಾಲ್ಕು ಪಂದ್ಯಗಳನ್ನು ಗೆದ್ದಿದ್ದರೆ, ಆರ್ಸಿಬಿ ಮೂರು ಪಂದ್ಯಗಳನ್ನು ಗೆದ್ದಿದೆ. ಉಳಿದಂತೆ ಎರಡು ಪಂದ್ಯಗಳು ಫಲಿತಾಂಶವಿಲ್ಲದೆ ಕೊನೆಗೊಂಡಿವೆ. ಕಳೆದ ಬಾರಿ ಜೈಪುರದಲ್ಲಿ ಎರಡೂ ತಂಡಗಳು ಮುಖಾಮುಖಿಯಾದಾಗ ಆರ್ಸಿಬಿ…
ಯಕೃತ್ ಅಥವಾ ಲಿವರ್ ನಮ್ಮ ದೇಹದ ಅತಿ ದೊಡ್ಡ ಅಂಗವಾಗಿದ್ದು ಹಲವಾರು ಕಾರ್ಯಗಳನ್ನು ಏಕಕಾಲದಲ್ಲಿ ನಿರ್ವಹಿಸುವ ಮುಖ್ಯ ಅಂಗವಾಗಿದೆ. ಈ ಅಂಗದ ಇನ್ನೊಂದು ವೈಶಿಷ್ಟ್ಯವೆಂದರೆ ಇದರ ಒಂದು ಭಾಗವನ್ನು ಕತ್ತರಿಸಿ ಇನ್ನೊಬ್ಬರಿಗೆ ದಾನ ಮಾಡಿದರೂ ಶೀಘ್ರದಲ್ಲಿಯೇ ದಾನಿಯ ಕತ್ತರಿಸಲ್ಪಟ್ಟ ಯಕೃತ್ ಮತ್ತೆ ಬೆಳೆದು ಮೊದಲಿನ ಗಾತ್ರ ಪಡೆಯುತ್ತದೆ. ಈ ಕ್ಷಮತೆ ನಮ್ಮ ದೇಹದ ಇನ್ನಾವುದೇ ಅಂಗಕ್ಕಿಲ್ಲ. https://ainkannada.com/terrible-terrorist-attack-act-by-terrorists-who-cannot-tolerate-development-in-kashmir-ta-sharavana-slams/ ಯಕೃತ್‍ನ ಕಾರ್ಯಗಳು ಜೀರ್ಣಕ್ರಿಯೆ, ಸ್ವಚ್ಛತೆ, ಸೋಸುವಿಕೆ, ಪಿತ್ತರಸ ಸ್ರವಿಸುವಿಕೆ ಮೊದಲಾದವು ಗಳಲ್ಲೆಲ್ಲಾ ಪ್ರಮುಖ ಪಾತ್ರ ವಹಿಸುತ್ತವೆ. ಇನ್ನೊಂದು ಅಚ್ಚರಿಯ ಸಂಗತಿ ಎಂದರೆ ನಾವು ಸೇವಿಸುವ ಆಹಾರದ ಬಣ್ಣ ಯಾವುದೇ ಆಗಿದ್ದರೂ ಬಹಿರ್ದೆಸೆ ಯಲ್ಲಿ ಕಾಣಬರುವ ಬಣ್ಣ ಬಹುತೇಕ ಒಂದೇ ಆಗಿರಲು ಯಕೃತ್, ಪಿತ್ತಕೋಶ ಮತ್ತು ಮೇದೋಜೀರಕ ಗ್ರಂಥಿಗಳ ಸ್ರಾವ ಕಾರಣವಾಗಿದ್ದು ಇದರಲ್ಲಿ ಸಿಂಹಪಾಲು ಯಕೃತ್ ಸ್ರವಿಸುವ ಪಿತ್ತರಸವೇ ಕಾರಣವಾಗಿದೆ. ಕೆಟ್ಟ ಆಹಾರ ಪದ್ಧತಿ ಮತ್ತು ಕೆಟ್ಟ ಜೀವನಶೈಲಿಯಿಂದಾಗಿ, ಜನರು ಕೊಬ್ಬಿನ ಯಕೃತ್ತಿನ ಸಮಸ್ಯೆ ಸೇರಿದಂತೆ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಯಕೃತ್ತಿನ ಸುತ್ತಲೂ ಕೊಬ್ಬು…
ಬೆಂಗಳೂರು:- ಕಾಶ್ಮೀರದ ಅಭಿವೃದ್ಧಿ ಸಹಿಸದ ಭಯೋತ್ಪಾದಕರಿಂದ ಪಹಲ್ಗಾಮ್ ನಲ್ಲಿ ಮಂಗಳವಾರ ಭೀಕರ ದಾಳಿ ನಡೆದಿದೆ ಎಂದು ಪರಿಷತ್ ಶಾಸಕ TA ಶರವಣ ಆಕ್ರೋಶ ಹೊರ ಹಾಕಿದ್ದಾರೆ. https://ainkannada.com/terrible-terrorist-attack-bodies-of-kannadigas-shifted-to-bengaluru-final-respects-paid-in-hometown/ ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ಪಹಲ್ಗಾಮ್ ನಲ್ಲಿ ಉಗ್ರರು ನಡೆಸಿದ ಪೈಶಾಚಿಕ ದಾಳಿ ಭಾರತದ ಸಾರ್ವಭೌಮತೆಗೆ ಮತ್ತು ಸಮಗ್ರತೆಗೆ ಉಂಟಾದ ಧಕ್ಕೆ. ಹೀಗಾಗಿ ಇದನ್ನು ಬಲವಾಗಿ ಖಂಡಿಸುತ್ತೇನೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಮಂತ್ರಿ ಅಮಿತ್ ಶಾ ನೇತೃತ್ವದ ಕೇಂದ್ರದ ಎನ್.ಡಿ. ಎ ಸರ್ಕಾರ, ಅಧಿಕಾರಕ್ಕೆ ಬಂದು ಕಾಶ್ಮೀರದಲ್ಲಿ ರಾಜಕೀಯ ಪರಿವರ್ತನೆ ಆದ ಬಳಿಕ ಶಾಂತಿಯ ಹೊಸ ಕಳೆಯೇ ಅಲ್ಲಿ ಬಂದಿತ್ತು. ಕಾಶ್ಮೀರದ ಅಭಿವೃದ್ಧಿ ಸಹಿಸದ ಭಯೋತ್ಪಾದಕರು ಈ ಭೀಕರ ದಾಳಿ ನಡೆಸಿದ್ದು, ಇದರ ಹಿಂದಿನ ಸಂಚುಕೋರರನ್ನು ಸದೆಬಡಿಯಬೇಕೆಂದು ಶರವಣ ಅವರು ಒತ್ತಾಯಿಸಿದ್ದಾರೆ. ಇದರಲ್ಲಿ ಕರ್ನಾಟಕದ ಮೂವರು ಬಲಿಯಾಗಿದ್ದು, ಅತ್ಯಂತ ನೋವಿನ ಸಂಗತಿ ಆಗಿದೆ. ಈ ಕುಟುಂಬಗಳಿಗೆ ಇಂಥ ದಾರುಣ ದುಃಖ ಭರಿಸುವ ಶಕ್ತಿ ಭಗವಂತ ಕರುಣಿಸಲಿ ಎಂದು ಶರವಣ…
ಬೆಂಗಳೂರು:- ಮಂಗಳವಾರ ನಡೆದ ಭೀಕರ ಉಗ್ರರ ದಾಳಿಯಲ್ಲಿ ಒಟ್ಟು 26 ಮಂದಿ ರಕ್ಕಸರ ದಾಳಿಗೆ ಉಸಿರು ಚೆಲ್ಲಿದ್ದಾರೆ. ಇದರಲ್ಲಿ ಕನ್ನಡಿಗರು ಮೂವರು ದುರ್ಮರಣ ಹೊಂದಿದ್ದಾರೆ. https://ainkannada.com/ipl-2025-big-shock-for-rcb-as-mumbai-wins-against-hyderabad-what-happened/ ಜಮ್ಮು-ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಗೆ ಜೀವ ಕಳೆದುಕೊಂಡ ಕನ್ನಡಿಗರ ಮೃತದೇಹ ಬೆಂಗಳೂರಿಗೆ ಶಿಫ್ಟ್ ಆಗಿವೆ. ಶಿವಮೊಗ್ಗದ ಮಂಜುನಾಥ್ ಹಾಗೂ ಹಾವೇರಿ ಮೂಲದ ಭರತ್ ಭೂಷಣ್ ಮೃತದೇಹಗಳು ತಾಯ್ನಾಡು ತಲುಪಿದ್ದು, ಬೆಂಗಳೂರು ಏರ್ಫೋರ್ಟ್ಗೆ ಬಂದ ಮೃತದೇಹಗಳನ್ನು ಆ್ಯಂಬುಲೆನ್ಸ್ ಮೂಲಕ ತವರೂರಿಗೆ ಕಳುಹಿಸಲಾಗಿದೆ. ಶಿವಮೊಗ್ಗ ಉದ್ಯಮಿ ಮಂಜುನಾಥ್ ರಾವ್ ಮತ್ತು ಹಾವೇರಿ ಮೂಲದ ಬೆಂಗಳೂರು ನಿವಾಸಿ ಭರತ್ ಭೂಷಣ್ ಪಾರ್ಥಿವ ಶರೀರ ಬೆಳಗಿನ ಜಾವ 3 ಗಂಟೆ ಸುಮಾರಿಗೆ ದೆಹಲಿಯಿಂದ ಬೆಂಗಳೂರು ಏರ್‌ಪೋರ್ಟ್ ತಲುಪಿದೆ. ವಿಮಾನ ನಿಲ್ದಾಣದಲ್ಲೇ ಎಲ್ಲಾ ಪ್ರಕ್ರಿಯೆ ಮುಗಿಸಿ ಮೃತದೇಹವನ್ನು ಸಂಬಂಧಿಕರಿಗೆ ಹಸ್ತಾಂತರಿಸಲಾಯಿತು. ಬಳಿಕ ಆ್ಯಂಬುಲೆನ್ಸ್ ಮೂಲಕ ಎಸ್ಕಾರ್ಟ್ ಭದ್ರತೆಯಲ್ಲಿ ಮಂಜುನಾಥ್ ಮೃತದೇಹ ಶಿವಮೊಗ್ಗದತ್ತ ಸಾಗಿದೆ. ಕುಟುಂಬದಲ್ಲಿ ಶೋಕ ಮಡುಗಟ್ಟಿದೆ. ಕಾರ್ಗೋ ವಿಮಾನದ ಮೂಲಕ ಮೃತದೇಹವನ್ನು ಬೆಂಗಳೂರಿಗೆ ತರಲಾಯಿತು. ಕೆಂಪೇಗೌಡ ಅಂತಾರಾಷ್ಟ್ರೀಯ ಏರ್‌ಪೋರ್ಟ್‌ನಲ್ಲಿ…
ರೋಹಿತ್ ಶರ್ಮಾ ಹಾಗೂ ಸೂರ್ಯಕುಮಾರ್ ಯಾದವ್ ಅವರ ಅಬ್ಬರದ ಬ್ಯಾಟಿಂಗ್ ನೆರವಿನಿಂದ ಮುಂಬೈ ಇಂಡಿಯನ್ಸ್ ತಂಡವು ಹೈದರಾಬಾದ್ ವಿರುದ್ಧ ಗೆಲುವು ಸಾಧಿಸಿದೆ. “ಬ್ಯಾಟಿಂಗ್ ದೈತ್ಯ’ ಸನ್‌ರೈಸರ್ ಹೈದರಾಬಾದ್ ತಂಡವನ್ನು ಅವರದೇ ಅಂಗಳದಲ್ಲಿ 7 ವಿಕೆಟ್‌ಗಳಿಂದ ಮಗುಚಿದ ಮುಂಬೈ ಇಂಡಿಯನ್ಸ್ ಒಮ್ಮೆಲೇ ಆರರಿಂದ ಮೂರನೇ ಸ್ಥಾನಕ್ಕೆ ನೆಗೆದಿದೆ. ಇದು 9 ಪಂದ್ಯಗಳಲ್ಲಿ ಪಾಂಡ್ಯ ಪಡೆಗೆ ಒಲಿದ 5ನೇ ಜಯವಾಗಿದೆ. ಆದರೆ ಮುಂಬೈ ಗೆಲುವಿನಿಂದ RCB ಅಂಕಪಟ್ಟಿಯಲ್ಲಿ ಕುಸಿತ ಕಂಡಿದೆ. ಅಂದ್ರೆ 3ನೇ ಸ್ಥಾನದಿಂದ ನಾಲ್ಕನೇ ಸ್ಥಾನಕ್ಕೆ ಕುಸಿದಿದೆ. ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಬುಧವಾರ ನಡೆದ IPL ಪಂದ್ಯದಲ್ಲಿ ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಅದರಂತೆಯೇ ಮೊದಲು ಬ್ಯಾಟ್ ಮಾಡಿದ ಸನ್‌ರೈಸರ್ಸ್ ಹೈದರಾಬಾದ್ ನಿಗದಿತ 20 ಓವರ್‌ಗಳ್ಲಿ 8 ವಿಕೆಟ್‌ಗಳ ಕಳೆದುಕೊಂಡು 143 ರನ್‌ಗಳನ್ನು ಕಲೆಹಾಕಿ 144 ರನ್‌ಗಳ ಗುರಿ ನೀಡಿತು. ಈ ಗುರಿ ಬೆನ್ನತ್ತಿದ್ದ ಮುಂಬೈ ಇಂಡಿಯನ್ಸ್ ಕೇವಲ 15.4 ಓವರ್‌ಗಳಿಗೆ 3 ವಿಕೆಟ್…
ಬೆಂಗಳೂರು:- ನಗರದ ಹಳೆ ತಹಸೀಲ್ದಾರ್ ಕಚೇರಿ ಓಣಿಯಲ್ಲಿ RSS ಮುಖಂಡನ ಮನೆಗೆ ನುಗ್ಗಿ ಮುಸ್ಲಿಂ ಯುವಕರು ಹಲ್ಲೆ ಮಾಡಿರುವ ಘಟನೆ ಜರುಗಿದೆ. https://ainkannada.com/terrible-terrorist-attack-india-has-put-a-damper-on-pakistan-relations-what-happened-in-the-3-hour-high-voltage-meeting/ ಸಿರೀಶ್ ಬಳ್ಳಾರಿ ಹಲ್ಲೆಗೊಳಗಾದ ಆರ್ಎಸ್ಎಸ್ ಮುಖಂಡ ಎಂದು ಗುರುತಿಸಲಾಗಿದೆ. ಯುವಕರು ಸಿಗರೇಟ್ ಸೇದುತ್ತಾ ನಿಂತಿದ್ದರು. ಈ ವೇಳೆ, ಸಿರೀಶ್ ಬಳ್ಳಾರಿಯವರು ದೂರಕ್ಕೆ ಹೋಗಿ ಸಿಗರೇಟು ಸೇದುವಂತೆ ಹೇಳಿದ್ದಾರೆ. ಇಷ್ಟಕ್ಕೆ ಆಕ್ರೋಶಗೊಂಡ ನಾಲ್ವರು ಮುಸ್ಲಿಂ ಯುವಕರು, ಸಿರೀಶ್ ಬಳ್ಳಾರಿಯವರ ಮನೆಯೊಳಗೆ ಹೊಕ್ಕು ಹಲ್ಲೆ ಮಾಡಿದ್ದಾರೆ. ಇದರಿಂದ, ಸಿರೀಶ್ ಬಳ್ಳಾರಿಯವರ ಕೈ ಹಾಗೂ ಮುಖಕ್ಕೆ ತೀವ್ರ ಗಾಯವಾಗಿದೆ. ಸಿರೀಶ್ ಬಳ್ಳಾರಿಯವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಧಾರವಾಡ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ನವದೆಹಲಿ:- ಕಾಶ್ಮೀರದಲ್ಲಿ ಮಂಗಳವಾರ ನಡೆದ ಉಗ್ರರ ಭೀಕರ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬುಧವಾರ ಕೇಂದ್ರ ಸಚಿವರೊಂದಿಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಸತತ 3 ಗಂಟೆಗಳ ಕಾಲ ಕೇಂದ್ರ ಸಂಪುಟ ಸಮಿತಿ ಸಭೆ ನಡೆದಿದ್ದು, ಪಾಕ್ ಸಂಬಂಧಕ್ಕೆ ಎಳ್ಳುನೀರು ಬಿಡಲಾಗಿದೆ. ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಪೈಶಾಚಿಕ ಕೃತ್ಯಕ್ಕೆ ದೇಶದಾದ್ಯಂತ ತೀವ್ರ ಖಂಡನೆ ವ್ಯಕ್ತವಾಗುತ್ತಿದೆ. ಈ ಬೆನ್ನಲ್ಲೇ ಮೋದಿ ನೇತೃತ್ವದಲ್ಲಿ ಸಭೆ ನಡೆದಿದ್ದು, ಹಲವು ತೀರ್ಮಾನಕ್ಕೆ ಬರಲಾಗಿದೆ. https://ainkannada.com/double-profit-from-real-estate-dairy-poultry-and-goat-farming-thursdays-fate-on-thursday-24-april-2025/ ಹಲವು ಮಹತ್ವದ ನಿರ್ಧಾರಗಳನ್ನು ಕೇಂದ್ರ ಸಂಪುಟ ಸಮಿತಿ ತೆಗೆದುಕೊಂಡಿದೆ ಅವುಗಳೆಂದರೆ… ಭಾರತ ಮತ್ತು ಪಾಕಿಸ್ತಾನ ಗಡಿಯಲ್ಲಿರುವ ಅಟ್ಟಾರಿ-ವಾಘಾ ಗಡಿ ಚೆಕ್‌ಪೋಸ್ಟ್ ಅನ್ನು ತಕ್ಷಣದಿಂದ ಮುಚ್ಚುವುದು, ಸಾರ್ಕ್ ವಿಸಾ ವಿನಾಯಿತಿ ಯೋಜನೆ ಪಾಕಿಸ್ತಾನದವರಿಗೆ ರದ್ದು, ರಾಯಭಾರ ಕಚೇರಿ ಸಿಬ್ಬಂದಿ ಹಂತಹಂತವಾಗಿ ಕಡಿತಗೊಳಿಸುವುದು ಮತ್ತು 1960ರ ಸಿಂಧು ನದಿ ಒಪ್ಪಂದವನ್ನು ರದ್ದು ಮಾಡುವುದು. ಸಭೆಯಲ್ಲಿ ಕೇಂದ್ರ ಗೃಹಸಚಿವ ಅಮಿತ್ ಶಾ, ರಾಜನಾಥ್ ಸಿಂಗ್, ನಿರ್ಮಲಾ ಸೀತಾರಾಮನ್, ಎಸ್. ಜೈಶಂಕರ್ ಸೇರಿದಂತೆ ಹಲವು ಸಚಿವರು…
ಸೂರ್ಯೋದಯ – 5:57ಬೆ. ಸೂರ್ಯಾಸ್ತ – 6:30 ಸಂಜೆ. ಶಾಲಿವಾಹನ ಶಕೆ -1947 ಸಂವತ್-2081 ವಿಶ್ವಾವಸು ನಾಮ ಸಂವತ್ಸರ, ಉತ್ತರ ಅಯಣ, ಶುಕ್ಲ ಪಕ್ಷ, ವಸಂತ ಋತು, ಚೈತ್ರ ಮಾಸ, ತಿಥಿ – ಏಕಾದಶಿ ನಕ್ಷತ್ರ – ಶತಭಿಷೆ 10:37 ಯೋಗ – ಬ್ರಹ್ಮ ಕರಣ – ಬಾಲವ *ಮಳೆ ನಕ್ಷತ್ರ :ಅಶ್ವಿನಿ* ರಾಹು ಕಾಲ – 01:30 ದಿಂದ 03:00 ವರೆಗೆ ಯಮಗಂಡ – 06:00 ದಿಂದ 07:30 ವರೆಗೆ ಗುಳಿಕ ಕಾಲ – 09:00 ದಿಂದ 10:30 ವರೆಗೆ ಬ್ರಹ್ಮ ಮುಹೂರ್ತ – 4:21 ಬೆ. ದಿಂದ 5:09 ಬೆ. ವರೆಗೆ ಅಮೃತ ಕಾಲ – 1:53 ಬೆ. ದಿಂದ 3:21 ಬೆ. ವರೆಗೆ ಅಭಿಜಿತ್ ಮುಹುರ್ತ – 11:49 ಬೆ. ದಿಂದ 12:39 ಮ. ವರೆಗೆ ನಿಮ್ಮ ಹೆಸರು, ಜನ್ಮ ದಿನಾಂಕ, ಜನ್ಮ ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು ಅದರ ಜೊತೆಗೆ ಭಾವ ಚಿತ್ರ…