ಕಾರವಾರ:- ಪಹಲ್ಗಾಮ್ ದಾಳಿ ಖಂಡಿಸಿ ಕಾರವಾರದಲ್ಲಿ ನಾಳೆ ಕರ್ನಾಟಕ ರಾಜ್ಯ ಸನಾತನ ಧರ್ಮ ರಕ್ಷಣಾ ವೇದಿಕೆ ಕಾರವಾರ ಬಂದ್ ಗೆ ಕರೆ ನೀಡಿತ್ತು. ಆದರೆ, ಇದೀಗ ನಾಳೆ ಬಂದ್ ಇರುವುದಿಲ್ಲ ಎಂದು ಎಸ್.ಪಿ ಎಂ.ನಾರಾಯಣ್ ತಿಳಿಸಿದ್ದಾರೆ. https://ainkannada.com/a-huge-tree-fell-on-it-auto-car-damaged-drivers-hand-fractured/ ಕಾರವಾರದಲ್ಲಿ ನಾಳೆ ಬಂದ್ ಇರುವುದಿಲ್ಲ. ಸಂಘಟನೆಗಳು ಬಂದ್ಗೆ ಕರೆಕೊಟ್ಟಿದ್ದವು. ಸಂಘಟಕರ ಜೊತೆ ಮಾತನಾಡಲಾಗಿದ್ದು, ಬಂದ್ ಇರುವುದಿಲ್ಲ. ಬದಲಾಗಿ ಮೆರವಣಿಗೆಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ. ಬಂದ್ ಮಾಡಿದ್ರೆ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
Author: AIN Author
ಚಿಕ್ಕಮಗಳೂರು:- ಇಲ್ಲಿನ ಕಲ್ಲತ್ತಿಗಿರಿಯಲ್ಲಿ ಭಾರೀ ಗಾಳಿಗೆ ಅನಾಹುತವೊಂದು ಸಂಭವಿಸಿದೆ. ಭಾರೀ ಗಾಳಿಗೆ ಬೃಹದಾಕಾರದ ಮರ ಧರೆಗುರುಳಿದಿದೆ. ಘಟನೆಯಲ್ಲಿ ಆಟೋ ಹಾಗೂ ಕಾರು ಜಖಂಗೊಂಡಿದೆ. https://ainkannada.com/rowdysheeter-santosh-kumar-murder-case-10-accused-surrender-before-the-police/ ಆಟೋ ಹಾಗೂ ಕಾರಿನಲ್ಲಿದ್ದವರು ಅದೃಷ್ಟವಶಾತ್ ಜೀವಪಾಯದಿಂದ ಪಾರಾಗಿದ್ದಾರೆ. ಗಾಯಗೊಂಡ ಚಾಲಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಗೊಂಡ ಚಾಲಕ ತರೀಕೆರೆ ತಾಲೂಕಿನ ಗೇರಮರಡಿ ಮೂಲದವರು ಎಂದು ತಿಳಿದು ಬಂದಿದೆ. ಕಾರಿನಲ್ಲಿದ್ದವರು ದಾವಣಗೆರೆ ಮೂಲಪಾರಾಗಿದ್ದಾರೆ ಎನ್ನಲಾಗಿದೆ.
ದಾವಣಗೆರೆ:- ರೌಡಿಶೀಟರ್ ಸಂತೋಷ್ ಕುಮಾರ್ ಹತ್ಯೆ ಕೇಸ್ ಗೆ ಸಂಬಂಧಿಸಿದಂತೆ 10 ಮಂದಿ ಆರೋಪಿಗಳು ಪೊಲೀಸರ ಮುಂದೆ ಶರಣಾಗಿದ್ದಾರೆ. https://ainkannada.com/mandya-karnatakas-grand-kondotsava-in-full-swing/ ಕಾರ್ತಿಕ್(22), ಚವಳಿ ಸಂತು(30), ನವೀನ್(26) ನವೀನ್(26), ಗುಂಡಪ್ಪ(32), ಬಸವರಾಜ್(22), ಹನುಮಂತಪ್ಪ(23), ಗಿಡ್ಡ ವಿಜಿ(27), ಚಿಕ್ಕಮ್ಮನಹಳ್ಳಿ ಶಿವು(30), ಕಡ್ಡಿ ರಾಘು(27), ಪ್ರಶಾಂತ್(28) ಮತ್ತು ನಿಟ್ಟುವಳ್ಳಿಯ ಗಣಿ ಸೇರಿದಂತೆ ಇತರರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಬಹುತೇಕ ಆರೋಪಿಗಳು ಹತ್ಯೆಯಾದ ಸಂತೋಷ್ ಕುಮಾರ್ನ ಆಪ್ತರಾಗಿದ್ದಾರೆ. ರೌಡಿಶೀಟರ್ ಬುಳ್ಳ ನಾಗನ ಹತ್ಯೆಯಲ್ಲೂ ಇದೇ ಆರೋಪಿಗಳು ಭಾಗಿಯಾಗಿದ್ದರು. ಇದೇ ಗ್ಯಾಂಗ್ನಿಂದ ಸಂತೋಷ್ ಕುಮಾರ್ ಅಲಿಯಾಸ್ ಕಣುಮಾ ಹತ್ಯೆಯಾಗಿದೆ. ರೌಡಿಶೀಟರ್ ಬುಳ್ಳ ನಾಗನ ಹತ್ಯೆಯಲ್ಲೂ ಇದೇ ಆರೋಪಿಗಳು ಭಾಗಿಯಾಗಿದ್ದರು. ಇದೇ ಗ್ಯಾಂಗ್ನಿಂದ ಸಂತೋಷ್ ಕುಮಾರ್ ಅಲಿಯಾಸ್ ಕಣುಮಾ ಹತ್ಯೆಯಾಗಿದೆ. ಸೋಮವಾರ ದಾವಣಗೆರೆಯ ಸೋಮೇಶ್ವರ ಆಸ್ಪತ್ರೆ ಬಳಿ ಮಾರಕಾಸ್ತ್ರಗಳಿಂದ ಕೊಚ್ಚಿ ಸಂತೋಷ್ ಕುಮಾರ್ನನ್ನು ಆರೋಪಿಗಳು ಹತ್ಯೆಗೈದಿದ್ದರು.
ಮಂಡ್ಯ:- ಮಂಡ್ಯದ ಆಲಕೆರೆ ಗ್ರಾಮದ ಬೃಹತ್ ವೀರಭದ್ರೇಶ್ಚರ ಕೊಂಡೋತ್ಸವಕ್ಕೆ ಅದ್ದೂರಿಯಾಗಿ ಚಾಲನೆ ದೊರೆತಿದೆ. https://ainkannada.com/car-collides-with-bike-rider-dies/ ಸಾವಿರಾರು ಜನರ ಸಮ್ಮುಖದಲ್ಲಿ ಶಾಸ್ತ್ರೋಕ್ತವಾಗಿ ಪೂಜೆ ಸಲ್ಲಿಸಿ ಅಗ್ನಿಸ್ಪರ್ಶ ಮಾಡಲಾಗಿದೆ. ಶಾಸಕ ರವಿಕುಮಾರ್ ಡಿಸಿ,ಎಸ್ಪಿ, ಸೇರಿ ಹಲವು ಗಣ್ಯರು ಕೊಂಡೋತ್ಸವದಲ್ಲಿ ಭಾಗಿಯಾದರು. ರಾಜ್ಯದ ಬೃಹತ್ ಕೊಂಡೋತ್ಸವ ಎಂಬ ಹೆಗ್ಗಳಿಕೆ ಇರುವ ಆಲಕೆರೆ ವೀರಭದ್ರೇಶ್ವರ ಕೊಂಡೋತ್ಸವ ಇದಾಗಿದೆ. 72 ಅಡಿ ಉದ್ದ,25 ಅಡಿ ಎತ್ತರ,12 ಅಡಿ ಅಗಲದ ಬೃಹತ್ ಕೊಂಡೋತ್ಸವ ಬಹಳ ವಿಜೃಂಭಣೆಯಿಂದ ನಡೀತಾಯಿದೆ.
ಚಾಮರಾಜನಗರ:- ಬೈಕ್ ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಸವಾರ ಸಾವನ್ನಪ್ಪಿರುವ ಘಟನೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಲಕ್ಕೂರು ಸಮೀಪ ಜರುಗಿದೆ. https://ainkannada.com/chitradurga-couple-dies-after-going-to-wash-their-sheep/ ಸಕಲೇಶಪುರ ಮೂಲದ ಜಗದೀಶ್ ಸಾವಿಗೀಡಾದ ದುರ್ದೈವಿ. ಕೇರಳ ಮೂಲದ ಕಾರು ಡಿಕ್ಕಿ ಹೊಡೆದು ಈ ಅವಘಡ ಸಂಭವಿಸಿದೆ. ಚಾಮರಾಜನಗರದಿಂದ ಗುಂಡ್ಲುಪೇಟೆ ಪಟ್ಟಣದತ್ತ ತೆರಳುವಾಗ ದುರ್ಘಟನೆ ಸಂಭವಿಸಿದೆ. ತೆರಕಣಾಂಬಿ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಿತ್ರದುರ್ಗ: ಕುರಿಗಳ ಮೈ ತೊಳೆಯಲು ಹಳ್ಳಕ್ಕೆ ಹೋಗಿದ್ದ ದಂಪತಿ ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಹೊಸದುರ್ಗ ತಾಲೂಕಿನ ಅತ್ತಿಮಗೆ ಗ್ರಾಮದಲ್ಲಿ ನಡೆದಿದೆ. https://ainkannada.com/congress-workers-angry-against-central-price-hike/ ಅತ್ತಿಮಗೆ ಗ್ರಾಮದ ಕುತರಿಗಾಯಿ ತಿಮ್ಮೇಶ, ಪತ್ನಿ ಪುಟ್ಟಮ್ಮ ಮೃತ ದಂಪತಿಗಳಾಗಿದ್ದಾರೆ. ಕುರಿಗಳ ಮೈ ತೊಳೆಯಲು ಗ್ರಾಮದ ಹೊರವಲಯದ ಕಾನಿ ಹಳ್ಳಕ್ಕೆ ದಂಪತಿ ಕುರಿಗಳನ್ನು ಹೊಡೆದುಕೊಂಡು ಹೋಗಿದ್ರು. ಈ ವೇಳೆ ಆಕಸ್ಮಿಕವಾಗಿ ಕಳ್ಳದ ಆಳವಾದ ನೀರಿಗೆ ಜಾರಿ ದಂಪತಿ ಸಾವನ್ನಪ್ಪಿದ್ದಾರೆ. ಮೃತತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಸ್ಥಳಕ್ಕೆ ಹೊಸದುರ್ಗ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದು, ಅಗ್ನಿಶಾಮಕ ದಳದ ಸಿಬ್ಬಂದಿ ಮೃತ ದೇಹ ಹೊರತೆಗೆದು, ಮರಣೋತ್ತರ ಪರೀಕ್ಷೆಗೆ ಕಳಿಸಲಾಗಿದೆ.
ಬೈಂದೂರು :ಮೋದಿ ಅವರು ಪ್ರಧಾನಿಯಾದ ಮೇಲೆ ಚುನಾವಣೆಗೂ ಮುಂಚೆ ಅವರು ಕೊಟ್ಟ ಮಾತಿನಂತೆ ನಡೆದುಕೊಂಡಿದ್ದಾರೆಯೇ? ಬಡಜನರಿಗೆ, ಸಾಮಾನ್ಯ ಜನರಿಗೆ ಅಚ್ಛೇ ದಿನಗಳು ಬಂದಿವೆಯೇ’ ಎಂದು ರಾಜ್ಯ ಬಂದರು ಮತ್ತು ಮೀನುಗಾರಿಕಾ ಸಚಿವ ಮಂಕಾಳ್ ಎಸ್ ವೈದ್ಯ ಪ್ರಶ್ನಿಸಿದರು. ಇಲ್ಲಿನ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಜೆ.ಎನ್.ಆರ್ ಕಲಾಮಂದಿರದ ಆವರಣದಲ್ಲಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರಾದ ಅರವಿಂದ ಪೂಜಾರಿ ಮತ್ತು ಮಾಜಿ ಶಾಸಕ ಗೋಪಾಲ ಪೂಜಾರಿಯವರ ನೇತ್ರತ್ವದಲ್ಲಿ ಕಾಂಗ್ರೆಸ್ ಆಯೋಜಿಸಿದ್ದ ‘ಬೆಲೆ ಏರಿಕೆ ನಿಯಂತ್ರಿಸದ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಬೃಹತ್ ಪ್ರತಿಭಟನಾ ಸಮಾವೇಶ’ದಲ್ಲಿ ಅವರು ಮಾತನಾಡಿದರು. ಮೋದಿ ಪ್ರಧಾನಿ ಆದಮೇಲೆ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಈ ತಪ್ಪನ್ನು ಮುಚ್ಚಿಕೊಳ್ಳಲು ಬಿಜೆಪಿಯವರು ರಾಜ್ಯ ಸರ್ಕಾರದ ವಿರುದ್ಧ ಜನಾಕ್ರೋಶ ಮಾಡುತ್ತಿದ್ದಾರೆ’ ಎಂದು ಟೀಕಿಸಿದರು. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಕಡಿಮೆಯಾದ ಮೇಲೆಯೂ ಕೇಂದ್ರ ಸರ್ಕಾರ ಪೆಟ್ರೋಲ್, ಡೀಸೆಲ್, ಎಲ್ಪಿಜಿ ದರ ಇಳಿಸಿಲ್ಲ. ಇದರಿಂದಾಗಿ ಪ್ರತಿಯೊಂದು ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದೆ. ಬೆಲೆ ಏರಿಕೆಗೆ…
ಕೊಡಗು:- ಕಾಫಿ ತೋಟದಲ್ಲಿ ಅಣ್ಣನೇ ಸ್ವಂತ ತಮ್ಮನಿಗೆ ಗುಂಡಿಕ್ಕಿ ಕೊಲೆಗೈದ ಘಟನೆ ಮಡಿಕೇರಿ ತಾಲೂಕಿನ ಅಭ್ಯತ್ ಮಂಗಲ ಗ್ರಾಮದ ಬಳಿ ಜರುಗಿದೆ. 47 ವರ್ಷದ ಕೊಳಂಬೆ ವಿನು ಬೆಳ್ಯಪ್ಪ. https://ainkannada.com/you-have-no-moral-right-to-speak-on-the-mahadayi-issue-minister-hk-patil-taunts-joshi-2/ ಸ್ಥಳಕ್ಕೆ ಮಡಿಕೇರಿ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೊಳಂಬೆ ವಿನು ಬೆಳ್ಯಪ್ಪ ತಮ್ಮ ತೋಟದಲ್ಲಿ ಕೆಲಸಮಾಡುತ್ತಿದ್ದ ವೇಳೆ ಗುಂಡಿನ ದಾಳಿ ಮಾಡಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.
ಗದಗ:- ಮಹದಾಯಿ ವಿಚಾರದಲ್ಲಿ ಕೆಂದ್ರ ಸಚಿವ ಪ್ರಲ್ಹಾದ್ ಜೋಶಿ ನೀಡಿರುವ ಹೇಳಿಕೆಗೆ ಸಂಬಂಧಿಸಿದಂತೆ ಕಾನೂನು ಸಚಿವ ಎಚ್ ಕೆ ಪಾಟೀಲ್ ಪ್ರತಿಕ್ರಿಯೆ ಕೊಟ್ಟಿದ್ದಾರೆ. https://ainkannada.com/congresss-appeasement-for-suhas-shettys-murder-is-a-political-reason-ct-ravi/ ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ಮಹದಾಯಿ ವಿಚಾರದಲ್ಲಿ ಮಾತನಾಡುವ ನೈತಿಕ ಹಕ್ಕು ಜೋಶಿಯವರಿಗೆ ಇಲ್ಲ. ಫಾರೆಸ್ಟ್, ಎನ್ವಿರಾನ್ಮೆಂಟ್ ಕ್ಲಿಯರೆನ್ಸ್ ಗೆ ಸಭೆ ಮಾಡಿ ಈ ವಿಷಯ ತೆಗೆದುಕೊಳ್ಳೋದಿಲ್ಲ. ಸಭೆ ಮುಂದೆ ಹಾಕ್ತಾ ಇದ್ದೀರಿ, ಆರು ತಿಂಗಳಾದ್ರೂ ಸಭೆ ಮಾಡಿಲ್ಲ ನೀವು. ನಿಮ್ಮ ಮಂತ್ರಿಮಂಡಲದ ಮಂತ್ರಿಯೊಬ್ಬರೂ ಸಭೆ ಮಾಡೋದು ಅಗತ್ಯ ಇರೋದಿಲ್ಲಾ?, ಅವರಿಗೆ ಒತ್ತಾಯ ಮಾಡೋದಿಲ್ಲ ನೀವು.. ಅಷ್ಟೇ ಯಾಕೆ ಪ್ರಧಾನ ಮಂತ್ರಿಗೆ ಹೇಳೊದಿಲ್ಲ. ಕೃಷ್ಣಾ ವಿಚಾರದಲ್ಲಿ 15 ವರ್ಷ ಆಯ್ತು ನೋಟಿಫಿಕೇಶನ್ ಯಾಕೆ ಮಾಡಿಲ್ಲ. ಕೆಯುಡಬ್ಲೂಡಿಟಿ ಟೂ ಬ್ರಿಜೇಶ್ ಕುಮಾರ್ ವರದಿ ಯಾಕೆ ನೀವು ಗೆಜೆಟ್ ನೋಟಿಫಿಕೇಶನ್ ಮಾಡಿಲ್ಲ. ಮೊನ್ನೆ ಪಾರ್ಲಿಮೆಂಟ್ ನಲ್ಲಿ ಬೊಮ್ಮಾಯಿ ಹೇಳಿದ್ರಲ್ಲ ಏನು ಉತ್ತರ ನಿಮ್ಮದು. ಉತ್ತರ ಕರ್ನಾಟಕದ ಜನ 15 ವರ್ಷದಿಂದ ನೋವನ್ನ ಸಹಿಸುತ್ತಾ ಕೂತಿದ್ದಾರೆ. ಪ್ರತೀ ಸಂದರ್ಭದಲ್ಲೂ…
ಬೆಂಗಳೂರು:- ಸುಹಾಸ್ ಶೆಟ್ಟಿ ಹತ್ಯೆಗೆ ಕಾಂಗ್ರೆಸ್ನ ಓಲೈಕೆ ರಾಜಕೀಯ ಕಾರಣ ಎಂದು CT ರವಿ ಹೇಳಿದ್ದಾರೆ. https://ainkannada.com/power-will-not-be-available-in-all-parts-of-kodagu-tomorrow-where-here-are-the-complete-details/ ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು,ಕಾಂಗ್ರೆಸ್ನವ್ರು ದನಗಳ್ಳರು ಸತ್ತಾಗ ಅವರ ಮನೆಗೆ ಹೋಗಿ ಸಾಂತ್ವನ ಹೇಳಿ ಪರಿಹಾರ ಕೊಟ್ಟಿದ್ರು ಎಂದು ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಮನೆಗೆ ಭೇಟಿ ಕೊಡದ ಕಾಂಗ್ರೆಸ್ ನಾಯಕರ ನಡೆಗೆ ಪರಿಷತ್ ಸದಸ್ಯ ಸಿಟಿ ರವಿ ಕಿಡಿಕಾರಿದ್ದಾರೆ. ದನಗಳ್ಳರಾಗಿದ್ದ ಇದ್ರಿಸ್ ಪಾಷ ಹಾಗೂ ಕಬೀರ್ ಸತ್ತಾಗ ಕಾಂಗ್ರೆಸ್ ನಾಯಕರು ಅವರ ಮನೆಗಳಿಗೆ ಹೋಗಿ ಸಾಂತ್ವನ ಹೇಳಿ, ಒಬ್ರಿಗೆ 10 ಲಕ್ಷ ರೂ. ಇನ್ನೊಬ್ಬರಿಗೆ 25 ಲಕ್ಷ ರೂ. ಪರಿಹಾರವನ್ನೂ ಕೊಟ್ಟು ಬಂದ್ರು. ಪಿಎಫ್ಐ, ಎಸ್ಡಿಪಿಐ ಕಾರ್ಯಕರ್ತರ ಕೇಸ್ಗಳನ್ನು ವಾಪಸ್ ಪಡೆದ್ರಲ್ಲ, ಅವ್ರೇನು ದೇಶ ಭಕ್ತರಾಗಿದ್ರಾ? ಅವರ ಮೇಲೆ ದೊಂಬಿ ಗಲಭೆ, ಠಾಣೆಗೆ ಬೆಂಕಿ ಹಾಕಿದ ಕೇಸ್ಗಳಿವೆ. ಯಾರ್ಯಾರು ಯಾವ್ಯಾವ ಕಾರಣಕ್ಕೆ ರೌಡಿಶೀಟ್ ಓಪನ್ ಮಾಡಿದ್ದಾರೆ ಅಂತ ಬಿಚ್ಚಿ ಹೇಳಬೇಕಾ ಎಂದು ತಿರುಗೇಟು ನೀಡಿದರು. ಸುಹಾಸ್ ಶೆಟ್ಟಿ ಹತ್ಯೆ ನಂತರ…