Author: AIN Author

ಬೆಂಗಳೂರು: ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯದಲ್ಲಿ 8 ಎಂಆರ್​ಐ ಉಪಕರಣಗಳ ಖರೀದಿಯ ಟೆಂಡರ್​ನಲ್ಲಿ ಬೃಹತ್​ ಅಕ್ರಮ ನಡೆಯುತ್ತಿದೆ ಎಂದು ವಿಧಾನಪರಿಷತ್ತಿನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಆರೋಪಿಸಿದ್ದಾರೆ. https://ainkannada.com/rowdy-activity-tejaswi-appeals-for-formation-of-special-police-team-in-mysore/ ನಿಯಮದಂತೆ ಸರ್ಕಾರ ಅತ್ಯಾಧುನಿಕ ಉಪಕರಣಗಳನ್ನು ತೆಗೆದುಕೊಳ್ಳಬೇಕು. ಆದರೆ, ಈ ಟೆಂಡರ್​ನಲ್ಲಿ ರ್ನಿದಿಷ್ಟ ಕಂಪನಿಗೆ ಅನುಕೂಲ ಮಾಡಿಕೊಳ್ಳಲು ಅಧಿಕಾರಿಗಳು ಮುಂದಾಗಿದ್ದಾರೆ. ಟೆಂಡರ್​ನಲ್ಲಿ ಬಿಡ್​ ಸಲ್ಲಿಸಿರುವ ಫಿಲಿಪ್ಸ್​​ ಕಂಪನಿಯ ಹಳೆಯ ಮೆಷಿನ್​ ತೆಗೆದುಕೊಳ್ಳಲು ಅಧಿಕಾರಿಗಳು ಒಳಗೊಳಗೆ ಶಾಮೀಲಾಗಿದ್ದಾರೆ. ಫಿಲಿಪ್ಸ್​​ ಕಂಪನಿಯ ಸಲ್ಲಿಸಿರುವ ಸ್ಪೆಷಿಫಿಕೇಷನ್​ ಅನ್ನು ಟೆಂಡರ್​ನಲ್ಲಿಯೇ ಯಥವತ್ತಾಗಿ ನಮೂದಿಸಿದ್ದಾರೆ. ಇದೇ ಕಂಪನಿಯ ಸ್ಪೆಷಿಫಿಕೇಷನ್​ ಮತ್ತು ಟೆಂಡರ್​ನಲ್ಲಿ ನಮೂದಿಸಿರುವ ಸ್ಪೆಷಿಫಿಕೇಷನ್​ ಒಂದೇ ರೀತಿಯಲ್ಲಿದೆ. ಈ ಟೆಂಡರ್​ನಲ್ಲಿ ಸಚಿವ ಶರಣ ಪ್ರಕಾಶ್​ ಪಾಟೀಲ್​ ಮೂಗಿನ ಕೆಳಗಡೆ ನಡೆಯುತ್ತಿದೆ. ಈ ಟೆಂಡರ್​ ಮೊತ್ತ 90 ಕೋಟಿ ರೂ.ಇದೆ ಎಂದು ದಾಖಲೆಗಳ ಸಮೇತ ಆರೋಪಿಸಿದರು. ಜಾಗತಿಕ ಮಟ್ಟದ ಟೆಂಡರ್ ಇದಾಗಿದೆ. ಆದರೆ, ಈ ಟೆಂಡರ್‌‌ನ್ನು ತರಾತುರಿಯಲ್ಲಿ ಮುಗಿಸಲು ಅಧಿಕಾರಿಗಳು ಯತ್ನಿಸಿದ್ದಾರೆ.ರೋಗಿಗಳಿಗೆ ವೇಗವಾಗಿ ಗುಣಮಟ್ಟ ಸೇವೆ ನೀಡುವುದಕ್ಕಾಗಿಯೇ ನಿರ್ದೇಶನಾಲಯ ಹಿಂದೇ ಅತ್ಯಾಧುನಿಕ…

Read More

ಹುಬ್ಬಳ್ಳಿ: ಮಂಗಳೂರಿನಲ್ಲಿ ನಡೆದ ರೌಡಿ ಶೀಟರ್ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದಲ್ಲಿ ರಚನೆ ಮಾಡಿದ ಮಾದರಿಯಲ್ಲೇ ಮೈಸೂರಿನಲ್ಲೂ ವಿಶೇಷ ಪೋಲಿಸ್ ತಂಡ ರಚನೆ ಮಾಡುವಂತೆ ಕನ್ನಡ ಚಳವಳಿಗಾರ ತೇಜಸ್ವಿ ನಾಗಲಿಂಗ ಸ್ವಾಮಿ ಗೃಹಸಚಿವರನ್ನು ಆಗ್ರಹಿಸಿದ್ದಾರೆ. https://ainkannada.com/kannadigas-are-terrorists-complaint-filed-against-sonu-nigam-in-mandya/ ದಕ್ಷಿಣ ಕನ್ನಡ ಜಿಲ್ಲೆಯ ರೀತಿಯಲ್ಲೇ ಮೈಸೂರಿನಲ್ಲಿ ಯೂ ಸಹ ಈ ಹಿಂದೆ ಅನೇಕ ಕೋಮು ಸೌಹಾರ್ದತೆಗೆ ಧಕ್ಕೆ ಉಂಟಾಗುವಂತಹ ಘಟನೆಗಳು ನಡೆದಿತ್ತು ಅಲ್ಲದೆ ಹತ್ಯೆ ಗಳೂ ನಡೆದಿತ್ತು ಎಂದು ತೇಜಸ್ವಿ ಸ್ಮರಿಸಿದ್ದಾರೆ. ಮೈಸೂರು ಕೂಡ ಸೂಕ್ಷ್ಮಾತಿ ಸೂಕ್ಷ್ಮ ಪ್ರದೇಶ ವಾಗಿದ್ದು ಕ್ಯಾತಮಾರನಹಳ್ಳಿಯಲ್ಲಿ ರಾಜು ಹತ್ಯೆ ಪ್ರಕರಣ ಮತ್ತು ಮೊನ್ನೆ ನಡೆದಂತಹ ಉದಯಗಿರಿ ಪೋಲಿಸ್ ಠಾಣೆಯ ಮೇಲೆ ಕಲ್ಲು ತೂರಾಟ ಮತ್ತು ಮಸಿದಿ ಘಟನೆಗಳು ನಡೆದಿದ್ದವು. ಇದನ್ನು ಮೀರಿ ಮೈಸೂರು ನಗರ ಮತ್ತು ಜಿಲ್ಲೆಯಲ್ಲಿ ಮಿತಿಮೀರಿದ ರೌಡಿ ಶೀಟರ್ ಗಳ ಗ್ಯಾಂಗ್ ವಾರ್ ಮತ್ತು ರೌಡಿ ಶೀಟರ್ ಗಳಿಂದ ಬರುತ್ತಿರುವ ಹಫ್ತಾ ವಸೂಲಿ ಬೆದರಿಕೆ ಪ್ರಕರಣಗಳು ಕಳೆದ ಕೆಲವು ವರ್ಷಗಳಲ್ಲಿ ಹತ್ಯೆ ಮಾಡಿರುವ ಘಟನೆಗಳು ಇನ್ನೂ…

Read More

ಮಂಡ್ಯ:- ಕನ್ನಡಿಗರು ಭಯೋತ್ಪಾದಕರು ಎಂದು ಬಿಂಬಿಸಿದ್ದ ಸೋನು ನಿಗಮ್ ಗೆ ವಿರುದ್ಧ ಮಂಡ್ಯದಲ್ಲಿ ದೂರು ದಾಖಲಾಗಿದೆ. https://ainkannada.com/terrible-car-accident-three-members-of-the-same-family-die/ ಗಾಯಕ ಸೋನು ನಿಗಮ್ ಅವರನ್ನು ಬಂಧಿಸಬೇಕು ಎಂದು ಆಗ್ರಹಿಸಿ ಕನ್ನಡ ಸೇನೆ ಕಾರ್ಯಕರ್ತರು ಆಗ್ರಹಿಸಿದರು. ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ತೆರಳಿದ ಕಾರ್ಯಕರ್ತರು ಹೆಚ್ಚುವರಿ ಪೊಲೀಸ್ ಅಧೀಕ್ಷಕ ತಿಮ್ಮಯ್ಯರಿಗೆ ದೂರು ಸಲ್ಲಿಸಿದ ನಂತರ ಗಾಯಕ ಸೋನು ನಿಗಮ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕರ್ನಾಟಕದ ನೆಲದಲ್ಲಿ ಸೋನು ನಿಗಮ್ ಕನ್ನಡಿಗರನ್ನು ಭಯೋತ್ಪಾದಕರಿಗೆ ಹೋಲಿಸಿ ಅವಮಾನಿಸಿದ್ದಾರೆ. ಕನ್ನಡಿಗರನ್ನು ಕೀಳಾಗಿ ಕಂಡಿರುವುದು ಮಾತ್ರವಲ್ಲ. ಕನ್ನಡಿಗರನ್ನು ದೇಶದ್ರೋಹಿಗಳೆಂದು ಬಿಂಬಿಸಿ, ಅವರನ್ನು ಖಳನಾಯಕರನ್ನಾಗಿ ಮಾಡಿರುವ ಹುನ್ನಾರ ನಡೆಯುತ್ತಿದೆ. ಕೂಡಲೇ ಅವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಬಂಧಿಸಬೇಕು ಎಂದು ಒತ್ತಾಯಿಸಿದರು. ಇನ್ನೂ ಈಗಾಗಲೇ ಕರ್ನಾಟಕದಲ್ಲಿ ಸೋನು ನಿಗಮ್ ವಿರುದ್ಧ ಆಕ್ರೋಶ ಭುಗಿಲೆದ್ದಿದ್ದು, ಬೆಂಗಳೂರಿನಲ್ಲಿ ಈಗಾಗಲೇ FIR ಕೂಡ ದಾಖಲಾಗಿದೆ. ಅಷ್ಟೇ ಅಲ್ಲದೇ ಗಾಯಕನ ಮೇಲೆ ಕಠಿಣ ಕ್ರಮ ಕೈಗೊಂಡಿರುವ ಫಿಲ್ಮ್ ಚೇಂಬರ್ ಕನ್ನಡ ಚಿತ್ರರಂಗದಿಂದ ಬ್ಯಾನ್ ಕೂಡ ಮಾಡಿದೆ.

Read More

ಬೆಳಗಾವಿ:- ಭೀಕರ ಕಾರು ಅಪಘಾತದಲ್ಲಿ ಒಂದೇ ಕುಟುಂಬದ ಮೂವರು ದುರ್ಮರಣ ಹೊಂದಿರುವ ಘಟನೆ ಬೈಲಹೊಂಗಲ ತಾಲೂಕಿನ ಚಿಕ್ಕಬಾಗೇವಾಡಿ ಗ್ರಾಮದ ಹೊರ ವಲಯದ ಬೈಲಹೊಂಗಲ-ಬೆಳಗಾವಿಗೆ ಸಂಪರ್ಕಿಸುವ ಹೆದ್ದಾರಿಯಲ್ಲಿ ಜರುಗಿದೆ. https://ainkannada.com/do-potatoes-and-onions-go-bad-in-the-summer-if-so-store-them-like-this/ ಬೆಳಗಾವಿಯಿಂದ ಬೈಲಹೊಂಗಲ ಹೋಗುತ್ತಿದ್ದ ಕೀಯಾ ಕಾರು ಓವರ್ ಟೆಕ್ ಮಾಡಲು ಹೋಗಿ ಎದುರಗಡೆ ಬರುತ್ತಿದ್ದ ಅಲ್ಟೋ ಕಾರಿಗೆ ಡಿಕ್ಕಿ ಹೊಡೆದಿದೆ. ಅಲ್ಟೋ ಕಾರಿನಲ್ಲಿದ್ದ ಗಂಡ ಅಯುಮ್, ಹೆಂಡತಿ, ಒಂದು ಮಗು ಸ್ಥಳದಲ್ಲೇ ಮೃತಪಟ್ಟಿದೆ. ಮತ್ತೊಂದು ಮಗುವಿಗೆ ಗಂಭೀರವಾಗಿ ಗಾಯವಾಗಿದ್ದು, ಆಸ್ಪತ್ರೆಗೆ ರವಾನಿಸಲಾಗಿದೆ. ಕೀಯಾ ಕಾರಿನಲ್ಲಿದ್ದ ಮಾಜಿ ಶಾಸಕ ಆರ್.ವಿ ಪಾಟೀಲ್ ಪುತ್ರ ಸೇರಿದಂತೆ ಮತ್ತೊಬ್ಬರು ಗಾಯಗೊಂಡಿದ್ದು ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತರ ಶವಗಳು ಸ್ಥಳೀಯ ಆಸ್ಪತ್ರೆಗೆ ಪೊಲೀಸರು ರವಾನಿಸಲಾಗಿದೆ.

Read More

ಹಲವಾರು ಮನೆಗಳಲ್ಲಿ ಈರುಳ್ಳಿ ಮತ್ತು ಆಲೂಗಡ್ಡೆ ಇಲ್ಲದೇ ಅಡುಗೆ ಮಾಡುವುದೇ ಇಲ್ಲ. ಈರುಳ್ಳಿ ಮತ್ತು ಆಲೂಗಡ್ಡೆ ಆಹಾರದ ರುಚಿಯನ್ನು ಹೆಚ್ಚಿಸುತ್ತದೆ. ಹಾಗಾಗಿ ಅನೇಕ ಮಂದಿ ಆರು ತಿಂಗಳವರೆಗೆ ಬೇಕಾಗುವಷ್ಟು ಈರುಳ್ಳಿ ಮತ್ತು ಆಲೂಗಡ್ಡೆಗಳನ್ನು ಖರೀದಿಸಿ ಸಂಗ್ರಹಿಸುತ್ತಾರೆ. ಆದರೆ ಮಳೆಗಾಲದಲ್ಲಿ ಈರುಳ್ಳಿ ಮತ್ತು ಆಲೂಗಡ್ಡೆ ಬೇಗ ಹಾಳಾಗುತ್ತದೆ. ಹಾಗಾಗಿ ಈರುಳ್ಳಿ ಮತ್ತು ಆಲೂಗಡ್ಡೆ ಬೇಗ ಕೆಡದಿರಲು ನಾವು ಕೆಲ ಟಿಪ್ಸ್ ಫಾಲೋ ಮಾಡಬೇಕು. ಅವು ಯಾವುವು ಎಂದು ನಾವು ನಿಮಗೆ ತಿಳಿಸುತ್ತೇವೆ. https://ainkannada.com/where-are-your-house-keys-you-should-never-keep-them-in-this-direction-astrology-says-so/ ಬೇಸಿಗೆ ಕಾಲ ಶುರುವಾಗಿದೆ. ಬಿಸಿಲಿನಿಂದಾಗಿ ಸಾಕಷ್ಟು ಆಹಾರಗಳು ಬೇಗ ಹಾಳಾಗುತ್ತದೆ. ಇಂತಹ ಸಮಯದಲ್ಲಿ ತರಕಾರಿಗಳನ್ನು ಹೆಚ್ಚಾಗಿ ಹೊರಗೆ ಸಂಗ್ರಹಿಸಲು ಸಾಧ್ಯವಾಗುವುದಿಲ್ಲ. ವಿಶೇಷವಾಗಿ ಈರುಳ್ಳಿ ಮತ್ತು ಆಲೂಗಡ್ಡೆ ಬೇಗ ಕೆಟ್ಟು ಹೋಗುತ್ತದೆ. ಆದರೆ ಕೆಲವು ಸಿಂಪಲ್ ಟಿಪ್ಸ್ ಫಾಲೋ ಮಾಡುವ ಮೂಲಕ ಇವುಗಳನ್ನು ತಿಂಗಳುಗಟ್ಟಲೇ ಫ್ರೆಶ್ ಆಗಿಯೇ ಇರಿಸಬಹುದು. ಇದರಿಂದಾಗಿ ಮತ್ತೆ ತರಕಾರಿ ಖರೀದಿ ಮಾಡುವುದು ತಪ್ಪುತ್ತದೆ. ಜೊತೆಗೆ ಹಣ ಕೂಡ ಉಳಿತಾಯವಾಗುತ್ತದೆ ತರಕಾರಿಗಳು ಏಕೆ ಹಾಳಾಗುತ್ತವೆ?: ತರಕಾರಿಗಳು ಬೇಗ…

Read More

ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ವಾಸ್ತುವನ್ನು ಬಹಳ ಮುಖ್ಯವೆಂದು ಪರಿಗಣಿಸಲಾಗುತ್ತದೆ. ವಾಸ್ತು ಪ್ರಕಾರ ಕೆಲವು ವಿಷಯಗಳನ್ನು ಅನುಸರಿಸಿದರೆ ಜೀವನದಲ್ಲಿ ಅನೇಕ ಸಮಸ್ಯೆಗಳು ಪರಿಹಾರವಾಗುತ್ತವೆ ಎಂದು ನಂಬಲಾಗಿದೆ. https://ainkannada.com/it-is-my-responsibility-to-give-a-befitting-reply-to-those-who-cast-a-negative-light-on-india-minister-rajnath-singh/ ಜನರು ತಮ್ಮ ಮನೆಯ ಕೀಲಿಗಳನ್ನು ಸುರಕ್ಷಿತವಾಗಿಡಲು ಅನೇಕ ಸ್ಥಳಗಳನ್ನು ಬಳಸುತ್ತಾರೆ. ಆದರೆ ಬೀಗ ಹಾಕುವ ಸಮಯದಲ್ಲಿ ವಾಸ್ತುವಿನತ್ತ ಗಮನ ಹರಿಸುವುದನ್ನು ಮರೆತುಬಿಡುತ್ತಾರೆ. ಇದರಿಂದ ಅವರು ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ನಿಮಗೂ ಮನೆಯಲ್ಲಿ ಎಲ್ಲೇ ಇದ್ದರೂ ಬೀಗ ಹಾಕುವ ಅಭ್ಯಾಸವಿದ್ದರೆ.. ಕೂಡಲೇ ಆ ಅಭ್ಯಾಸ ಬದಲಿಸಿಕೊಳ್ಳಿ. ಇಲ್ಲವಾದರೆ ನೀವು ಪರಿಣಾಮಗಳನ್ನು ಅನುಭವಿಸಬೇಕಾಗಬಹುದು ಮನೆಯಲ್ಲಿ ಕೀಲಿಗಳು ಸರಿಯಾದ ದಿಕ್ಕಿನಲ್ಲಿದ್ದರೆ, ಅದು ಮನೆಯಲ್ಲಿ ಸಕಾರಾತ್ಮಕ ಶಕ್ತಿಯನ್ನು ತರುತ್ತದೆ ಮತ್ತು ಮನೆಯ ಸುರಕ್ಷತೆಯು ಸಿಗುವುದು. ವಾಸ್ತು ಶಾಸ್ತ್ರದ ಪ್ರಕಾರ, ಕೀಗಳನ್ನು ಎಲ್ಲಿಡಬೇಕು, ಯಾವ ದಿಕ್ಕಿನಲ್ಲಿ ಇಡಬಾರದು ಎನ್ನುವ ಮಾಹಿತಿ ಈ ಕೆಳಗಿದೆ ನೋಡಿ. ಮನೆ, ಕಪಾಟುಗಳು, ಸೇಫ್‌ಲಾಕರ್‌, ವಾಹನಗಳನ್ನು ಸುರಕ್ಷಿತವಾಗಿಡಲು ಕೀಗಳನ್ನು ಬಳಸಲಾಗುತ್ತದೆ. ಪ್ರತಿಯೊಬ್ಬರೂ ಕೀಗಳನ್ನು ಹೊಂದಿರುತ್ತಾರೆ, ಆದರೆ ಕೆಲವೇ ಜನರು ಅವುಗಳನ್ನು ಎಲ್ಲಿ ಇಡಬೇಕೆಂದು ತಿಳಿದಿದ್ದೃಆಎ. ಹೆಚ್ಚಿನ ಜನರು…

Read More

ಮಂಗಳೂರು:- ಇತ್ತೀಚೆಗೆ ದುಷ್ಕರ್ಮಿಗಳಿಂದ ಹತ್ಯೆಹೀಡಾಗಿದ್ದ ಸುಹಾಸ್ ಶೆಟ್ಟಿ ಕೊಲೆ ಹಿಂದೆ ಅನೇಕ ಕಾಣದ ಕೈಗಳ ಕೈವಾಡ ಶಂಕೆ ವ್ಯಕ್ತವಾಗಿದ್ದು, ವಿವಿಧ ಬ್ಯಾಂಕ್ ಖಾತೆಗಳ ಪರಿಶೀಲನೆಗೆ ಪೊಲೀಸರು ಮುಂದಾಗಿದ್ದಾರೆ. ಹತ್ಯೆ ನಡೆಸಲು ನೆರವು ನೀಡುವಂತೆ ಪ್ರಮುಖ ಆರೋಪಿ ಸಫ್ವಾನ್ ಅನೇಕರನ್ನು ಸಂಪರ್ಕಿಸಿದ್ದ. ಆ ಸಂದರ್ಭದಲ್ಲಿ ಜೈಲು, ಜಾಮೀನಿಗೆ ನೆರವಿಗಾಗಿ ಕೈಚಾಚಿದ್ದ ಎನ್ನಲಾಗಿದೆ. https://ainkannada.com/drink-kale-water-get-these-health-benefits-along-with-sugar-control/ ಕೊಲೆ ಮಾಡಿದ ಕೂಡಲೇ ಪೊಲೀಸರಿಗೆ ಶರಣಾಗುವ ಬಗ್ಗೆಯೂ ಹಂತಕರ ಗುಂಪು ಚರ್ಚೆ ನಡೆಸಿತ್ತು. ಹಂತಕರಿಗೆ ಬೇಕಾದ ಎಲ್ಲಾ ವ್ಯವಸ್ಥೆಯನ್ನೂ ಕಾಣದ ಕೈಗಳ ಗುಂಪು ಮಾಡಿತ್ತೇ ಎಂಬ ಬಲವಾದ ಅನುಮಾನ ಸೃಷ್ಟಿಯಾಗಿದೆ. ಸುಹಾಸ್ ಶೆಟ್ಟಿ ಕೊಲೆಗೆ ಮೂರು ತಿಂಗಳ ಹಿಂದೆಯೇ ಸಂಚು ಹೂಡಲಾಗಿತ್ತು. ಜನವರಿಯಲ್ಲೇ ಸಫ್ವಾನ್ ತಂಡಕ್ಕೆ ಫಾಜಿಲ್ ತಮ್ಮ ಆದಿಲ್ 3 ಲಕ್ಷ ರೂಪಾಯಿ ಹಣ ಕೊಟ್ಟಿದ್ದ. ಕೃತ್ಯಕ್ಕಾಗಿ ಒಂದು ಪಿಕ್ ಅಪ್ ವಾಹನ, ಸ್ವಿಫ್ಟ್ ಕಾರ್ ಬಳಕೆ ಮಾಡಿದ್ದ. ಅಕಸ್ಮಾತ್ ಸುಹಾಸ್ ಶೆಟ್ಟಿ ತಪ್ಪಿಸಿಕೊಂಡರೆ ಪ್ಲಾನ್ ಬಿಯನ್ನೂ ರೆಡಿ ಮಾಡಿಕೊಳ್ಳಲಾಗಿತ್ತು ಎಂಬುದು ತಿಳಿದುಬಂದಿದೆ. ಸುಹಾಸ್ ಶೆಟ್ಟಿ ಹತ್ಯೆ…

Read More

ಮಧುಮೇಹ ಇಂದು ವಿಶ್ವದ ಕೋಟ್ಯಂತರ ವ್ಯಕ್ತಿಗಳನ್ನು ಕಾಡುತ್ತಿರುವ ಸಮಸ್ಯೆಯಾಗಿದೆ. ನಮ್ಮ ಆಹಾರದಲ್ಲಿರುವ ಸಕ್ಕರೆಯನ್ನು ಬಳಸಿಕೊಳ್ಳಲು ನಮ್ಮ ಮೇದೋಜೀರಕ ಗ್ರಂಥಿ ಸ್ರವಿಸುವ ಇನ್ಸುಲಿನ್ ಎಂಬ ದ್ರವ ಅವಶ್ಯಕವಾಗಿದೆ. ಈ ದ್ರವ ಸಾಕಷ್ಟು ಪ್ರಮಾಣದಲ್ಲಿ ಉತ್ಪತ್ತಿಯಾಗದೇ ಇದ್ದರೆ ಅಥವಾ ಉತ್ಪತ್ತಿಯಾದರೂ ಬಳಸಲು ಸಾಧ್ಯವಾಗದೇ ಹೋದಾದ ಸಕ್ಕರೆಯನ್ನು ದೇಹ ಬಳಸಿಕೊಳ್ಳಲಾಗದೇ ಹೋಗುವ ಸ್ಥಿತಿಯೇ ಮಧುಮೇಹ. ಈ ಪದ ಸಂಸ್ಕೃತದ ಮಧು ಅಥವಾ ಸಕ್ಕರೆ ಮತ್ತು ಮೇಹನ ಅಥವಾ ರೋಗ ಎಂಬ ಪದಗಳನ್ನು ಕೂಡಿಸಿ ಆಗಿದೆ https://ainkannada.com/do-you-know-who-was-the-first-person-to-get-an-aadhaar-card-in-the-country/ ಮಧುಮೇಹಕ್ಕೆ ಹಲವು ಮನೆಮದ್ದುಗಳು ಪರಿಣಾಮಕಾರಿ. ಇವುಗಳನ್ನು ನಿರಂತರವಾಗಿ ಬಳಸುವುದರಿಂದ ದೇಹದಲ್ಲಿನ ರಕ್ತದಲ್ಲಿನ ಸಕ್ಕರೆ ನಿಯಂತ್ರಣಕ್ಕೆ ಬರುತ್ತದೆ. ಇಂತಹ ಒಂದು ಒಣಗಿದ ಎಲೆ ಬೇ ಎಲೆಯಾಗಿದ್ದು, ಇದನ್ನು ಗರಂ ಮಸಾಲದಲ್ಲಿ ಬಳಸಲಾಗುತ್ತದೆ. ಬೇ ಎಲೆ ತುಂಬಾ ಪರಿಮಳಯುಕ್ತವಾಗಿದೆ. ಮಧುಮೇಹ ರೋಗಿಗಳು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಬೇ ಎಲೆಯ ಚಹಾ ಕುಡಿದರೆ, ಅದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. https://ainkannada.com/do-you-know-who-was-the-first-person-to-get-an-aadhaar-card-in-the-country/ ಬೇ ಎಲೆ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ…

Read More

ಪಂಜಾಬ್ ವಿರುದ್ಧದ ಐಪಿಎಲ್ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಸೋಲು ಒಪ್ಪಿಕೊಂಡಿದೆ. ಲಕ್ನೋ ಸೂಪರ್ ಜೈಂಟ್ಸ್ ತಂಡವು 20 ಓವರ್​ಗಳಲ್ಲಿ 199 ರನ್​ ಬಾರಿಸಿ 37 ರನ್​ಗಳಿಂದ ಸೋಲೊಪ್ಪಿಕೊಂಡಿತು. https://ainkannada.com/rules-break-bmrcl-fines-passenger-for-spitting-at-metro-station/ ಸೋಲಿನ ಬಳಿಕ ಮಾತನಾಡಿದ ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕ ರಿಷಭ್ ಪಂತ್, ಪ್ಲೇಆಫ್​ಗೇರಲು ನಮಗೆ ಇನ್ನೂ ಉತ್ತಮ ಅವಕಾಶವಿದೆ ಎಂದಿದ್ದಾರೆ. ಏಕೆಂದರೆ ಮುಂದಿನ ಮೂರು ಪಂದ್ಯಗಳು ನಿರ್ಣಾಯಕ ಈ ಮ್ಯಾಚ್​ಗಳಲ್ಲಿ ಗೆಲುವು ದಾಖಲಿಸಿ ಪ್ಲೇಆಫ್​ಗೇರುವ ವಿಶ್ವಾಸವಿದೆ ಎಂದು ಪಂತ್ ಹೇಳಿದ್ದಾರೆ. ಇನ್ನು ಈ ಸೋಲನ್ನು ವಿಮರ್ಶಿಸಿದ ಪಂತ್, ನಾವು ಹೆಚ್ಚು ರನ್ ಬಿಟ್ಟು ಕೊಟ್ಟಿದ್ದು ದುಬಾರಿಯಾಯಿತು. ಅದರಲ್ಲೂ ಕೆಲ ನಿರ್ಣಾಯಕ ಕ್ಯಾಚ್​ಗಳನ್ನು ಕೈ ಬಿಟ್ಟೆವು. ಇವೆಲ್ಲವೂ ನೋವುಂಟು ಮಾಡುತ್ತದೆ. ಆದರೆ ಏನೂ ಮಾಡಕ್ಕಾಗಲ್ಲ. ಅವೆಲ್ಲವೂ ಪಂದ್ಯದ ಒಂದು ಭಾಗ ಇದಾಗ್ಯೂ ನಮ್ಮ ಬೌಲರ್​ಗಳುಆರಂಭದಲ್ಲಿಯೇ ಲೆಂಗ್ತ್ ಅನ್ನು ಸರಿಯಾಗಿ ಆಯ್ಕೆ ಮಾಡಲಿಲ್ಲ. ಇದರಿಂದ ಆರಂಭದಲ್ಲೇ ಹೆಚ್ಚಿನ ರನ್​ಗಳ ಸೋರಿಕೆಯಾಯಿತು. ಆದರೆ ಮುಂದಿನ ಮೂರು ಪಂದ್ಯಗಳ ಮೂಲಕ ನಾವು ಕಂಬ್ಯಾಕ್ ಮಾಡುವ…

Read More

ಬೆಂಗಳೂರು:- ಬೆಂಗಳೂರು ಮೆಟ್ರೋದಲ್ಲಿ ಉಗುಳುವುದು ಮತ್ತು ಕಸ ಎಸೆಯುವುದನ್ನು ತಡೆಯಲು ದಂಡ ವಿಧಿಸುವ ಮೂಲಕ BMRCL ಕಠಿಣಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಆದರೂ ಇಂತಹ ಘಟನೆಗಳು ಮತ್ತೆ-ಮತ್ತೆ ಮರುಕಳಿಸುತ್ತಿವೆ. https://ainkannada.com/drunk-hooliganism-bringing-a-car-onto-the-highway-and-causing-chaos-attacking-the-police-three-arrested/ ಮೆಟ್ರೊ ನಿಲ್ದಾಣದ ಆವರಣದಲ್ಲಿ ಉಗುಳಿದ ಪ್ರಯಾಣಿಕನಿಗೆ BMRCL ದಂಡ ವಿಧಿಸಿದೆ. ಮೇ 2 2025ರ ಸಂಜೆ ಸುಮಾರು 6:30ಕ್ಕೆ ಗ್ರೀನ್ ಲೈನ್‌ ಕನಕಪುರ ರಸ್ತೆಯಲ್ಲಿರುವ ದೊಡ್ಡಕಲಸಂದ್ರ ಮೆಟ್ರೋ ನಿಲ್ದಾಣದ ಪ್ಲಾಟ್ ಫಾರ್ಮ್ 01ರ ಲಿಫ್ಟ್ ಬಳಿಯಲ್ಲಿ ಪಾನ್ ಮಸಾಲಾ ಉಗುಳುತ್ತಿದ್ದ ಪ್ರಯಾಣಿಕನನ್ನು ಪತ್ತೆ ಹಚ್ಚಿ ಮೆಟ್ರೋ ಅಧಿಕಾರಿಗಳು ದಂಡ ವಿಧಿಸಿರುವುದಾಗಿ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ ತಿಳಿಸಿದೆ. ಮೆಟ್ರೋ ಆವರಣದಲ್ಲಿ ಉಗುಳುವುದು ಮತ್ತು ಕಸದಂಚುಗಳನ್ನು ಎಸೆಯುವುದು ಪರಿಸರ ಹಾಳಾಗುವುದಲ್ಲದೆ, ಇತರೆ ಪ್ರಯಾಣಿಕರ ಆರೋಗ್ಯಕ್ಕೂ ಅಪಾಯವನ್ನು ಉಂಟುಮಾಡುತ್ತದೆ. ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ ಸ್ವಚ್ಛ, ಆರೋಗ್ಯಕರ ಮತ್ತು ಸುರಕ್ಷಿತ ಸಾರ್ವಜನಿಕ ಸಾರಿಗೆಯ ವ್ಯವಸ್ಥೆಗಾಗಿ ಕಟಿಬದ್ಧವಾಗಿದೆ. ಸ್ವಚ್ಛತೆ ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಎಲ್ಲ ಪ್ರಯಾಣಿಕರು ಸಹಕರಿಸಿ, ಇಂತಹ ಘಟನೆಗಳು…

Read More