Author: AIN Author

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಐಪಿಎಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಎರಡು ರನ್ ಗಳಿಂದ ಗೆದ್ದು ಬೀಗಿತ್ತು. https://ainkannada.com/ipl-2025-punjab-beat-lucknow-by-37-runs/ ಮ್ಯಾಚ್​ನಲ್ಲಿ ಟಾಸ್ ಗೆದ್ದ ಮಹೇಂದ್ರ ಸಿಂಗ್ ಧೋನಿ ಬೌಲಿಂಗ್ ಆಯ್ದುಕೊಂಡರು. ಅದರಂತೆ ಮೊದಲು ಬ್ಯಾಟ್ ಮಾಡಿದ ಆರ್​ಸಿಬಿ ಪರ ವಿರಾಟ್ ಕೊಹ್ಲಿ (62), ಜೇಕಬ್ ಬೆಥೆಲ್ (55) ಹಾಗೂ ರೊಮಾರಿಯೊ ಶೆಫರ್ಡ್ (53) ಅರ್ಧಶತಕ ಬಾರಿಸಿ ಮಿಂಚಿದ್ದರು. ಈ ಅರ್ಧಶತಕಗಳ ನೆರವಿನೊಂದಿಗೆ ಆರ್​ಸಿಬಿ ತಂಡ 20 ಓವರ್​ಗಳಲ್ಲಿ 213 ರನ್ ಕಲೆಹಾಕಿತು. ಗುರಿಯನ್ನು ಬೆನ್ನತ್ತಿದ ಚೆನ್ಣೈ ಸೂಪರ್ ಕಿಂಗ್ಸ್ ಪರ ಆಯುಷ್ ಮ್ಹಾತ್ರೆ 94 ರನ್ ಬಾರಿಸಿದರೆ, ರವೀಂದ್ರ ಜಡೇಜಾ ಅಜೇಯ 77 ರನ್ ಸಿಡಿಸಿದ್ದರು. ಇದಾಗ್ಯೂ ಅಂತಿಮ ಓವರ್​ನಲ್ಲಿ 15 ರನ್​ಗಳ ಗುರಿ ಪಡೆದ ಸಿಎಸ್​ಕೆ ತಂಡವು 2 ರನ್​​ನಿಂದ ಸೋಲೊಪ್ಪಿಕೊಂಡಿತು. ಈ ವಿರೋಚಿತ ಸೋಲನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಜಿ ಆಟಗಾರ ಹಾಡಿ ಹೊಗಳಿದ್ದಾರೆ. ಆರ್​ಸಿಬಿ ವಿರುದ್ಧ ಚೆನ್ನೈ…

Read More

ಲಕ್ನೋ ವಿರುದ್ಧ 37 ರನ್ ಗಳಿಂದ ಪಂಜಾಬ್ ಕಿಂಗ್ಸ್ ಗೆದ್ದು ಬೀಗಿದೆ. 11 ಪಂದ್ಯಗಳಲ್ಲಿ 7ರಲ್ಲಿ ಗೆಲುವು ಸಾಧಿಸಿ 15 ಅಂಕ ಪಡೆದಿರುವ ಪಂಜಾಬ್‌ ಪ್ಲೇ ಆಫ್‌ ಹಾದಿಯನ್ನು ಬಹುತೇಕ ಖಚಿತಪಡಿಸಿಕೊಂಡಿದೆ. ಇತ್ತ 11 ಪಂದ್ಯಗಳಲ್ಲಿ ಕೇವಲ 5ರಲ್ಲಿ ಮಾತ್ರ ಗೆಲುವು ಸಾಧಿಸಿರುವ ಲಕ್ನೋ ಸೂಪರ್‌ ಜೈಂಟ್ಸ್‌ 10 ಅಂಕಗಳೊಂದಿಗೆ 7ನೇ ಸ್ಥಾನದಲ್ಲೇ ಉಳಿದಿದೆ. ಅಲ್ಲದೇ ಪ್ಲೇ ಆಫ್‌ ಹಾದಿ ಬಹುತೇಕ ಮುಚ್ಚಿದಂತಾಗಿದೆ. https://ainkannada.com/do-you-know-how-much-benefit-is-a-regular-buttermilk/ ಪಂಜಾಬ್ ಕಿಂಗ್ಸ್ ನೀಡಿದ 237 ರನ್ ಗಳ ಗುರಿ ಬೆನ್ನಟ್ಟಿದ ಲಕ್ನೋಗೆ ಆರಂಭಿಕ ಆಘಾತ ಎದುರಾಯಿತು. ಮಾರ್ಕ್ರಮ್ 13 ರನ್ ಗಳಿಸಿ ಔಟಾದರೆ ಮಿಚೆಲ್ ಮಾರ್ಷ್‌ ಶೂನ್ಯಕ್ಕೆ ಔಟಾದರು. ಸ್ಫೋಟಕ ಬ್ಯಾಟಿಂಗ್ ಮಾಡುತ್ತಿದ್ದ ನಿಕೋಲಸ್‌ ಪೂರನ್ ಸಹ 6 ರನ್ ಗಳಿಗೆ ಔಟಾಗಿದ್ದು ಲಕ್ನೋ ತೀವ್ರ ಹಿನ್ನಡೆಯಾಗುವಂತೆ ಮಾಡಿತು. ಆದರೆ ಆಯೂಷ್ ಬದೋನಿ ಸ್ಫೋಟಕ ಬ್ಯಾಟಿಂಗ್ ಮಾಡಿದ್ದು 74 ರನ್ ಗಳಿಸಿದ್ದು ತಂಡದ ಗೆಲುವಿಗೆ ಸಾಕಷ್ಟು ಪ್ರಯತ್ನಿಸಿದರು. ಆದರೆ ಲಕ್ನೋ ಅಂತಿಮವಾಗಿ 7 ವಿಕೆಟ್ ನಷ್ಟಕ್ಕೆ…

Read More

ಬೇಸಿಗೆ ಶುರುವಾಗಿದೆ. 9 ಗಂಟೆ ಆಗ್ತಿದ್ದಂತೆ ಅಬ್ಬಾ ಬಿಸಿಲು ಅಂತ ಜನ ಸುಸ್ತಾಗುವಂತಾಗಿದೆ. ಹೀಗಿರುವಾಗ ನಿಮ್ಮ ಊಟದಲ್ಲಿ ಒಂದಷ್ಟು ಬದಲಾವಣೆ ಮಾಡಿಕೊಳ್ಳೋದು ನಿಮ್ಮ ದೇಹ ತಂಪಾಗಿರೋಕೆ ನೆರವಾಗುತ್ತದೆ. ಅದಕ್ಕಾಗಿ ಏನ್ ಮಾಡ್ಬೇಕು? https://ainkannada.com/action-on-those-who-removed-the-neet-exam-on-cet/ ಗೋಬಿ ಚಿಲ್ಲಿ, ಚಿಕನ್ ಮಸಾಲೆ, ಸ್ಫೈಸಿ ಸ್ಯಾಂಡ್​ವಿಚ್, ಖಾರ ಚಟ್ನಿ ಜೊತೆಗಿನ ಮೊಮೊಸ್ ಇಂತಹ ಆಹಾರಗಳೆಲ್ಲ ನಿಮ್ಮ ಫೇವರಿಟ್ ಲಿಸ್ಟ್​ನಲ್ಲಿರಬಹುದು. ಆದರೆ ಮುಂದಿನ ಮೂರು ನಾಲ್ಕು ತಿಂಗಳು ಇದನ್ನು ಅವಾಯ್ಡ್ ಮಾಡಿದಷ್ಟು ನಿಮ್ಮ ಆರೋಗ್ಯಕ್ಕೆ ಒಳ್ಳೆಯದು ಮಜ್ಜಿಗೆ.. ಇದು ಹುಳಿ ಮತ್ತು ಕಟುವಾದ ಪಾನೀಯವಾಗಿದೆ, ಇದು ರುಚಿಕರ ಮಾತ್ರವಲ್ಲದೆ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಗಳನ್ನು ಹೊಂದಿದೆ. ಜೀರ್ಣಕ್ರಿಯೆಗೆ ಸಹಾಯ ಮಾಡುವುದರಿಂದ ಹಿಡಿದು ಮೂಳೆಯ ಆರೋಗ್ಯವನ್ನು ಉತ್ತೇಜಿಸುವವರೆಗೆ ಸಾಕಷ್ಟು ಪ್ರಯೋಜನಗಳಿವೆ. ಮಜ್ಜಿಗೆ ಅಗತ್ಯ ಪೋಷಕಾಂಶಗಳ ಶಕ್ತಿಕೇಂದ್ರವಾಗಿದೆ. ಇದು ಪ್ರೋಟೀನ್‌ನ ಕಡಿಮೆ-ಕೊಬ್ಬಿನ ಮೂಲವಾಗಿದೆ, ಜೀವಕೋಶದ ದುರಸ್ತಿ ಮತ್ತು ಬೆಳವಣಿಗೆಗೆ ಅಗತ್ಯವಾದ ಅಮೈನೋ ಆಮ್ಲಗಳನ್ನು ಇದು ನೀಡುತ್ತದೆ. ಮಜ್ಜಿಗೆ B12, ರಿಬೋಫ್ಲಾವಿನ್ ಮತ್ತು ಕ್ಯಾಲ್ಸಿಯಂನಂತಹ ವಿಟಮಿನ್‌ಗಳಲ್ಲಿ ಸಮೃದ್ಧವಾಗಿದೆ, ಇದು ಆರೋಗ್ಯಕರ ಮೂಳೆಗಳನ್ನು ಕಾಪಾಡಿಕೊಳ್ಳಲು,…

Read More

ಕಲಬುರ್ಗಿ:- CET ಬೆನ್ನಲ್ಲೆ ನೀಟ್‌ ಪರೀಕ್ಷೆಯಲ್ಲೂ ಜನಿʻವಾರ್‌ʼ ಛಯ ಜನಿವಾರ ತೆಗೆಸಿದ ಸಿಬಂದಿ ವಿರುದ್ಧ ಕ್ರಮಕ್ಕೆ ಆಗ್ರಹ ಕೇಳಿ ಬಂದಿದೆ. https://ainkannada.com/indian-military-information-leak-for-pak-isi-for-retail-cass-two-arrest/ ಬೀದರ್-ಶಿವಮೊಗ್ಗದಲ್ಲಿ ಸಿಇಟಿ ಪರೀಕ್ಷೆ ) ವೇಳೆ ವಿದ್ಯಾರ್ಥಿಗಳ ಜನಿವಾರ ತೆಗೆಸಿದ ಪ್ರಕರಣ ರಾಜ್ಯದಲ್ಲಿ ಸದ್ದು ಮಾಡಿತ್ತು. ಇದೀಗ ಆ ಪ್ರಕರಣ ಮಾಸುವ ಮುನ್ನವೆ ಕಲಬುರಗಿಯಲ್ಲಿ ನೀಟ್ ಪರೀಕ್ಷೆ ಬರೆಯಲು ಬಂದ ವಿದ್ಯಾರ್ಥಿಯ ಜನಿವಾರ ತೆಗೆದ ಪರಿಣಾಮ ಬ್ರಾಹ್ಮಣರ ತಾಳ್ಮೆ ಕಟ್ಟೆ ಒಡೆದಿದೆ. ಮೇ 3ರಂದು ನಡೆದ ನೀಟ್ ಪರೀಕ್ಷೆಗೆ ಕಲಬುರಗಿಯ ಸಂತ ಮೇರಿ ಪರೀಕ್ಷಾ ಕೇಂದ್ರಕ್ಕೆ ಬಂದ ಶ್ರೀಪಾದ ಎಂಬ ವಿದ್ಯಾರ್ಥಿಯ ಜನಿವಾರ ತೆಗೆದ್ರೆ ಮಾತ್ರ ಪರೀಕ್ಷೆಗೆ ಅವಕಾಶ ಕೊಡುವುದಾಗಿ ಅಧಿಕಾರಿಗಳು ಹೇಳಿದ್ದಾರಂತೆ, ಹೀಗಾಗಿ ಒಲದ ಮನಸ್ಸಿನಿಂದ ಶ್ರೀಪಾದ ತನ್ನ ಜನಿವಾರ ತೆಗೆದು ತಂದೆ ಸುಧೀರ ಅವರ ಕೈಗೆ ಕೊಟ್ಟು ನೀಟ್ ಪರೀಕ್ಷೆ ಬರೆದಿದ್ದಾನೆ. ಇನ್ನೂ ನೀಟ್ ಪರೀಕ್ಷೆ ವೇಳೆ ಜನಿವಾರ ತೆಗೆಸಿದ ವಿಷಯಕ್ಕೆ ತಿಳಿಯುತ್ತಿದ್ದಂತೆ ಸಂತ ಮೇರಿ ಪರೀಕ್ಷಾ ಮುಂಭಾಗದಲ್ಲಿ ಬ್ರಾಹ್ಮಣ ಸಭಾ ಹಾಗೂ ಎಬಿವಿಪಿ ಕಾರ್ಯಕರ್ತರು…

Read More

ಚಂಡೀಗಢ:- ಚಿಲ್ಲರೆ ಕಾಸಿಗಾಗಿ ಪಾಕ್ ಐಎಸ್‌ಐಗೆ ಭಾರತೀಯ ಮಿಲಿಟರಿ ಮಾಹಿತಿ ಲೀಕ್ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಪಂಜಾಬ್ ಪೊಲೀಸರು ಅರೆಸ್ಟ್ ಮಾಡಿದ್ದಾರೆ. https://ainkannada.com/heavy-rains-in-karnataka-for-a-week-from-tomorrow/ ಶೇರ್ ಮಸಿಹ್ ಮತ್ತು ಸೂರಜ್ ಮಸಿಹ್ ಬಂಧಿತರು. ಇವರಿಬ್ಬರು ಪಂಜಾಬ್‌ನ ಅಮೃತಸರದಲ್ಲಿರುವ ಸೇನಾ ಸೂಕ್ಷ್ಮ ವಲಯ ಮತ್ತು ವಾಯುನೆಲೆಯ ಸೂಕ್ಷ್ಮ ಮಾಹಿತಿಗಳು ಮತ್ತು ಫೋಟೋಗಳನ್ನು ಪಾಕಿಸ್ತಾನದ ಐಎಸ್‌ಐಗೆ ಸೋರಿಕೆ ಮಾಡುತ್ತಿದ್ದರು. ಈ ಕುರಿತು ಮಾಹಿತಿ ನೀಡಿರುವ ಅಮೃತಸರದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಮಣೀಂದರ್ ಸಿಂಗ್, ಭಾರತದ ವಾಯುನೆಲೆ ಮತ್ತು ಸೂಕ್ಷ್ಮ ಪ್ರದೇಶಗಳ ಬಗ್ಗೆ ಪಾಕ್‌ನ ಐಎಸ್‌ಐಗೆ ಮಾಹಿತಿ ಸೋರಿಕೆ ಮಾಡುತ್ತಿದ್ದ ಆರೋಪದ ಮೇಲೆ ಪಾಲಕ್‌ ಶೇರ್‌ ಮಸಿಹ್‌ ಮತ್ತು ಸೂರಜ್‌ ಮಸಿಹ್‌ ಇಬ್ಬರನ್ನು ಬಂಧಿಸಿದ್ದೇವೆ ಎಂದು ತಿಳಿಸಿದ್ದಾರೆ. ಹರ್‌ಪ್ರೀತ್‌ ಎಂಬ ಸಹವರ್ತಿ ಇವರಿಬ್ಬರನ್ನು ಪಾಕ್‌ನ ಐಎಸ್‌ಐ ಜೊತೆಗೆ ಲಿಂಕ್‌ ಮಾಡಿಸಿದ್ದಾನೆ. ಆತನ ವಿರುದ್ಧ ಈಗಾಗಲೇ ಎನ್‌ಡಿಪಿಎಸ್‌ ಪ್ರಕರಣ ದಾಖಲಾಗಿದೆ ಎಂದು ವಿವರಿಸಿದ್ದಾರೆ. ಅಲ್ಲದೇ ಆರೋಪಿಗಳಿಗೆ ಸಣ್ಣ ಮಾಹಿತಿಗಾಗಿ 5,000 ರೂ. ಮತ್ತು ಮಿಲಿಟರಿ ಚಲನವಲನಗಳ ಬಗ್ಗೆ ಸೂಕ್ಷ್ಮ…

Read More

ಬೆಂಗಳೂರು:-ಬೆಂಗಳೂರು ಸೇರಿ ಕರ್ನಾಟಕದ ಹಲವೆಡೆ ನಾಳೆಯಿಂದ ಒಂದು ವಾರಗಳು ಭಾರೀ ಮಳೆ ಆಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ವಿಜಯನಗರ, ಶಿವಮೊಗ್ಗ, ರಾಮನಗರ, ಮೈಸೂರು, ಮಂಡ್ಯ, ಕೋಲಾರ, ಕೊಡಗು, ದಾವಣಗೆರೆ, ಚಿತ್ರದುರ್ಗ, ಚಿಕ್ಕಬಳ್ಳಾಪುರ, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಬಳ್ಳಾರಿ, ಯಾದಗಿರಿ, ವಿಜಯಪುರ, ರಾಯಚೂರು, ಕೊಪ್ಪಳ, ಕಲಬುರಗಿ, ಹಾವೇರಿ, ಗದಗ, ಧಾರವಾಡ, ಬೀದರ್, ಬೆಳಗಾವಿ, ಬಾಗಲಕೋಟೆ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿಯಲ್ಲಿ ಇಂದು ಮಳೆಯಾಗಲಿದೆ. ಕಲಬುರಗಿ, ರಾಯಚೂರು, ವಿಜಯಪುರ, ಯಾದಗಿರಿ, ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ದಾವಣಗೆರೆ, ಕೋಲಾರ, ವಿಜಯನಗರ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್​ ಘೋಷಿಸಲಾಗಿದ್ದು, ಮೇ 6ರಿಂದ ಭಾರಿ ಮಳೆಯಾಗಲಿದೆ.

Read More

ಸೂರ್ಯೋದಯ – 5:51ಬೆ. ಸೂರ್ಯಾಸ್ತ – 6:34 ಸಂಜೆ. ಶಾಲಿವಾಹನ ಶಕೆ -1947 ಸಂವತ್-2081 ವಿಶ್ವಾವಸು ನಾಮ ಸಂವತ್ಸರ, ಉತ್ತರ ಅಯಣ, ಶುಕ್ಲ ಪಕ್ಷ, ವೈಶಾಖ ಮಾಸ, ವಸಂತ ಋತು, ತಿಥಿ – ಅಷ್ಟಮಿ ನಕ್ಷತ್ರ – ಆಶ್ಲೇಷ ಯೋಗ – ವೃದ್ಢಿ ಕರಣ – ಬವ 7:37 ಮಳೆ ನಕ್ಷತ್ರ ಭರಣಿ ರಾಹು ಕಾಲ – 07:30 ದಿಂದ 09:00 ವರೆಗೆ ಯಮಗಂಡ – 10:30 ದಿಂದ 12:00 ವರೆಗೆ ಗುಳಿಕ ಕಾಲ – 01:30 ದಿಂದ 03:00 ವರೆಗೆ ಬ್ರಹ್ಮ ಮುಹೂರ್ತ – 4:15 ಬೆ. ದಿಂದ 5:03 ಬೆ. ವರೆಗೆ ಅಮೃತ ಕಾಲ – 12:19 ಮ.ದಿಂದ 2:00 ಮ. ವರೆಗೆ ಅಭಿಜಿತ್ ಮುಹುರ್ತ – 11:47 ಬೆ. ದಿಂದ 12:38 ಮ. ವರೆಗೆ ಮೇಷ ರಾಶಿ ( ಅಶ್ವಿನಿ ಭರಣಿ ಕೃತಿಕ 1) ವಿದೇಶ ಭಾಗ್ಯ, ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಜಯ, ಎಣ್ಣೆ,, ನೀರು, ಮಾರಾಟಗಾರರಿಗೆ ಧನ…

Read More

ಚಾಮರಾಜನಗರ:- ಜಿಲ್ಲೆಯ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಜಿ.ಎಸ್.ಬೆಟ್ಟ ವಲಯ ಹಿರಿಕೆರೆ ಅರಣ್ಯ ಪ್ರದೇಶದಲ್ಲಿ ಗಂಡು ಕಾಡಾನೆಯೊಂದರ ಕಳೇಬರ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. https://ainkannada.com/if-there-is-a-war-i-will-flee-to-england-pakistani-leader/ ಮೃತ ಗಂಡಾನೆಗೆ ಅಂದಾಜು 35 ರಿಂದ 40 ವರ್ಷ ವಯಸ್ಸಾಗಿದ್ದು, ಅರಣ್ಯ ಸಿಬಂದಿ ಜಿ.ಎಸ್.ಬೆಟ್ಟ ವಲಯದ ಹಂಗಳ ಸೌತ್ ಶಾಖೆಯ, ಸೋಮನಾಥಪುರ ಸ್ಯಾಂಡಲ್ ರಿಸರ್ವನ ಹಿರಿಕೆರೆ ಅರಣ್ಯ ಪ್ರದೇಶದ ಬಳಿ ಗಸ್ತು ತಿರುಗುತ್ತಿದ್ದಾಗ ಕಂಡು ಬಂದಿದೆ ಕಾಡಾನೆಯ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ಇಲಾಖಾ ಪಶು ವೈದ್ಯಾಧಿಕಾರಿಯವರಿಂದ ಮರಣೋತ್ತರ ಶವ ಪರೀಕ್ಷೆ ನಡೆಸಿ ಮಾದರಿ ಸಂಗ್ರಹಿಸಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಎಸಿಎಫ್ ನವೀನ್ ಕುಮಾರ್ ಮಾಹಿತಿ ನೀಡಿದರು. ಮರಣೋತ್ತರ ಪರೀಕ್ಷೆ ನಂತರ ಮೃತ ಕಾಡಾನೆಯ ಕಳೆಬರಹವನ್ನು ಅರಣ್ಯ ಇಲಾಖೆ ನಿಯಮಾನುಸಾರ ಅಂತ್ಯಕ್ರಿಯೆ ಮಾಡಲಾಯಿತು. ಈ ಸಂದರ್ಭದಲ್ಲಿ ಬಂಡೀಪುರ ಅರಣ್ಯ ಸಂರಕ್ಷಣಾಧಿಕಾರಿ ಎಸ್. ಪ್ರಭಾಕರನ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ನವೀನ್ ಕುಮಾರ್, ಜಿ.ಎಸ್.ಬೆಟ್ಟ ವಲಯ ಅರಣ್ಯಾಧಿಕಾರಿ ಮಲ್ಲೇಶ್, ವನ್ಯಜೀವಿ ಪರಿಪಾಲಕ ನಂಜುಂಡರಾಜೆ ಅರಸ್…

Read More

ಇಸ್ಲಾಮಾಬಾದ್:- ಒಂದು ವೇಳೆ ಯುದ್ಧ ನಡೆದರೆ ಇಂಗ್ಲೆಂಡ್ ಗೆ ಪಲಾಯನ ಆಗುತ್ತೇನೆ ಎಂದು ಪಾಕ್ ಮುಖಂಡ ಸಂಸದ ಶೇರ್ ಅಫ್ಜಲ್ ಖಾನ್ ಮಾರ್ವತ್ ಹೇಳಿದ್ದಾರೆ. https://ainkannada.com/hadonahalli-panchayat-pdo-who-insulted-the-chief-ministers-office-officer-public-outrage-over-the-officers-action/ ಇದೀಗ ಪಾಕ್‌ ಸಂಸದ ನೀಡಿದ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಒಂದು ವೇಳೆ ಯುದ್ಧ ನಡೆದರೆ ಗನ್‌ ಹೊತ್ತುಕೊಂಡು ಗಡಿಗೆ ಹೋಗುತ್ತೀರಾ ಎಂದು ಸಂಸದ ಶೇರ್ ಅಫ್ಜಲ್ ಖಾನ್ ಮಾರ್ವತ್ ಅವರಿಗೆ ಪತ್ರಕರ್ತರು ಪ್ರಶ್ನೆ ಕೇಳಿದ್ದಾರೆ. ಈ ಪ್ರಶ್ನೆಗೆ, ಒಂದು ವೇಳೆ ಯುದ್ಧ ನಡೆದರೆ ನಾನು ಇಂಗ್ಲೆಂಡ್‌ಗೆ ಪಲಾಯನ ಮಾಡುತ್ತೇನೆ ಎಂದು ಉತ್ತರಿಸಿದರು. ಎರಡು ದೇಶಗಳ ಮಧ್ಯೆ ಇರುವ ಉದ್ವಿಗ್ನತೆಯನ್ನು ಕಡಿಮೆ ಮಾಡಲು ನರೇಂದ್ರ ಮೋದಿ ಹಿಂದೆ ಸರಿಯಬೇಕು ಎಂದು ಭಾವಿಸುತ್ತೀರಾ ಎಂದು ಕೇಳಿದ್ದಕ್ಕೆ, ನಾನು ಹೇಳಿದ್ದಕ್ಕೆ ಅವರು ಹಿಂದೆ ಸರಿಯಲು ಮೋದಿ ನನ್ನ ಚಿಕ್ಕಮ್ಮನ ಮಗನೇ ಎಂದು ಪ್ರಶ್ನಿಸಿ ವ್ಯಂಗ್ಯವಾಡಿದರು.

Read More

ದೊಡ್ಡಬಳ್ಳಾಪುರ:ತಾಲೂಕಿನ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಯೊಬ್ಬರು ರಾಜ್ಯದ ಮುಖ್ಯಮಂತ್ರಿ ಕಚೇರಿಯ ಕುಂದು ಕೊರತೆ ವಿಭಾಗದ ವಿಶೇಷ ಕರ್ತವ್ಯ ಅಧಿಕಾರಿಯನ್ನೆ ಯಾಮಾರಿಸಿರುವ ಘಟನೆ ಬೆಳಕಿಗೆ ಬಂದಿದೆ.. ಕಳೆದ ಎರಡು ತಿಂಗಳಿನಿಂದ ದೊಡ್ಡಬಳ್ಳಾಪುರ ತಾಲೂಕಿನ ತಿರುಮಗೊಂಡನಹಳ್ಳಿ ಗ್ರಾಮದ ಗ್ರಾಮಸ್ಥರು ಚರಂಡಿ ,ಕುಡಿಯುವ ನೀರು ಇನ್ನು ಹಲವಾರು ಸಮಸ್ಯೆಗಳನ್ನು ಕುರಿತು ಸಾರ್ವಜನಿಕ ಸಂಪರ್ಕ ಇಲಾಕೆಗೆ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಿದ್ದರು. ಕೂಡಲೇ ಹೆಚ್ಚೆತ್ತ ಮುಖ್ಯಮಂತ್ರಿ ಕಚೇರಿಯ ಕುಂದುಕೊರತೆ ವಿಭಾಗದ ವಿಶೇಷ ಅಧಿಕಾರಿಗಳು ಗ್ರಾಮಕ್ಕೆ ಬಂದು ಸಮಸ್ಯೆಯನ್ನು ನೋಡಿ ಹಾಡೋನಹಳ್ಳಿ ಗ್ರಾಮ ಪಂಚಾಯ್ತಿ ಪಿಡಿಓ ಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ. ಆದರೆ ಪಂಚಾಯ್ತಿ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡದೆ ಎರಡು ತಿಂಗಳಿನ ಹಿಂದೆಯೆ ನೀರಿನ ಸಮಸ್ಯೆ ಬಗೆಹರಿಸಿದ್ದೇವೆ ಗ್ರಾಮದಲ್ಲಿ ಯವುದೇ ಸಮಸ್ಯೆ ಇಲ್ಲ ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಕೆಗೆ ವರದಿ ನೀಡಿ ಕ್ಲೀನ್ ಚಿಟ್ ನೀಡಿ ಹಾಡೋನಹಳ್ಳಿ ಪಂಚಾಯ್ತಿ ಪಿಡಿಓ ಅಧಿಕಾರಿಗಳನ್ನೇ ಯಾಮರಿಸಿದ್ದಾರೆ ಎಂದು ಗ್ರಾಮಸ್ತರು ಆರೋಪ ಮಾಡಿದ್ದಾರೆ. ಗ್ರಾಮಸ್ಥ ಹರ್ಷ AIN…

Read More