Author: AIN Admin

ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನವೀಕರಣಗೊಳಿಸಿದ ಅನ್ನಪೂರ್ಣ ಭೋಜನಶಾಲೆಯನ್ನ ಧರ್ಮಾಧಿಕಾರಿ ಪದ್ಮವಿಭೂಷಣ ಡಾ. ವೀರೇಂದ್ರ ಹೆಗ್ಗಡೆ ಅವರು ಉದ್ಘಾಟಿಸಿದ್ರು. ಈ ಕಾರ್ಯಕ್ರಮದಲ್ಲಿ ಪ್ರಜಾಟಿವಿ ಮುಖ್ಯಸ್ಥ  ಪುಟ್ಟರಾಜ್ ಹಾಗೂ ಉದ್ಯಮಿ ಸ್ವಾಮಿಗೌಡ ಭಾಗವಹಿಸಿದ್ರು. ಪ್ರತಿ ದಿನ 40 ರಿಂದ 50 ಸಾವಿರ ಜನಕ್ಕೆ ಅನ್ನ ಪ್ರಸಾದ ನೀಡುವ ನವೀಕರಣಗೊಂಡ  ಅನ್ನಪೂರ್ಣ ಭೋಜನಶಾಲೆಯ ಕುರಿತು ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರು ಅನೇಕ  ವಿಚಾರಗಳನ್ನ ಪ್ರಜಾಟಿವಿ ಮುಖ್ಯಸ್ಥ  ಪುಟ್ಟರಾಜ್ ಅವರ ಜೊತೆ ಹಂಚಿಕೊಂಡರು. ಇದೆ ಸಂದರ್ಭದಲ್ಲಿ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರನ್ನ ಪ್ರಜಾಟಿವಿ ಮುಖ್ಯಸ್ಥ  ಪುಟ್ಟರಾಜ್  ಅವರು ಸನ್ಮಾನಿಸಿದರು. ಒಂದು ದಿನಕ್ಕೆ ಸುಮಾರು ಎಂಟೂವರೆ ಸಾವಿರ ಕೆಜಿ ಅಕ್ಕಿ ಬಳಸಿ ಊಟ ತಯಾರು ಮಾಡುತ್ತಾರೆ. ಜೊತೆಗೆ, ಮೂರುವರೆ ಸಾವಿರ ಕೆಜಿ ತರಕಾರಿ ಬಳಸಿ ಸಾಂಬಾರು ಮಾಡಲಾಗುತ್ತದೆ. ಇಲ್ಲಿರುವ ವಿಶಾಲವಾದ ಭೋಜನ ಶಾಲೆಯಲ್ಲಿ ಒಂಬತ್ತು ಸಾಲುಗಳಲ್ಲಿ ಭಕ್ತಾದಿಗಳು ಕೂತು ಊಟ ಮಾಡಬಹುದು. ಒಂದು ಸಾಲಿನಲ್ಲಿ ಕಡಿಮೆ ಎಂದರೂ 400 ಜನ ಕುಳಿತು ಊಟ ಮಾಡಬಹುದು. ಇನ್ನೊಂದು…

Read More

ಬೆಂಗಳೂರು :  ಎಲ್ಲಾ ಆರೋಗ್ಯಕರ ಟೀಕೆಗಳನ್ನು ಸ್ವಾಗತಿಸುತ್ತೇನೆ. ತಿದ್ದಿಕೊಳ್ಳುತ್ತೇನೆ. ಆದರೆ ರಾಜಕೀಯ ಕಾರಣಕ್ಕೆ ಸುಳ್ಳು ಸುಳ್ಳೇ  ಟೀಕಿಸಿದರೆ ಐ ಡೋಂಟ್ ಕೇರ್ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಖಡಕ್ ಆಗಿ ನುಡಿದರು. ಪ್ರೆಸ್ ಕ್ಲಬ್ ಆಫ್ ಬೆಂಗಳೂರು ಕೊಡಮಾಡುವ 2024ನೇ ಸಾಲಿನ ವರ್ಷದ ವ್ಯಕ್ತಿ, ವಿಶೇಷ ಪ್ರಶಸ್ತಿ, ಸುವರ್ಣ ಮಹೋತ್ಸವ ಪ್ರಶಸ್ತಿ ಹಾಗೂ ವಾರ್ಷಿಕ ಪ್ರಶಸ್ತಿಗಳನ್ನು ಪ್ರದಾನ ಮಾಡಿ ಮಾತನಾಡಿದರು. ನಮ್ಮ ಗ್ಯಾರಂಟಿ ಯೋಜನೆಗಳನ್ನು ಟೀಕಿಸುತ್ತಿದ್ದ ಬಿಜೆಪಿಯವರೇ ನಮ್ಮ ಗ್ಯಾರಂಟಿಗಳನ್ನು ಕಾಪಿ ಮಾಡಿದ್ದಾರೆ. ನಮ್ಮ ಗ್ಯಾರಂಟಿಗಳನ್ನು ಬೇರೆ ಹೆಸರಲ್ಲಿ ಅವರು ಘೋಷಿಸಿದ್ದಾರೆ. ಆದರೂ ಮಹಾರಾಷ್ಟ್ರ ಚುನಾವಣೆ ವೇಳೆ ಕರ್ನಾಟಕದಲ್ಲಿ ಗ್ಯಾರಂಟಿಗಳು ಜಾರಿಯೇ ಆಗಿಲ್ಲ ಎಂದು ಸುಳ್ಳು ಜಾಹಿರಾತು ನೀಡಿದರು ಎಂದು ಸಿಎಂ ವ್ಯಂಗ್ಯವಾಡಿದರು. ಇವತ್ತು “ಊಹಾ ಪತ್ರಿಕೋದ್ಯಮ ವ್ಯಾಪಕವಾಗುತ್ತಿದೆ. ಇದು ಅಪಾಯಕಾರಿ. ನಾನು ಇವತ್ತಿನವರೆಗೂ ಯಾವ ಮಾಧ್ಯಮದವರಿಗೂ ಯಾಕೆ ಹೀಗೆ ಬರಿದ್ರಿ ಅಂತ ಕೇಳಿಲ್ಲ. ಆದರೆ ನೀವು ಜನರ ಧ್ವನಿಯಾಗಿ ಕೆಲಸ ಮಡಬೇಕು. ಸಾಧ್ಯವಾದರೆ ಸತ್ಯ ಬರೆಯೋಕೆ ಟ್ರೈ ಮಾಡಿ ನೋಡೋಣ ಎಂದರು.…

Read More

ಸ್ಯಾಂಡಲ್ ವುಡ್ ಪಟಾಕಾ ಫುಲ್ ಖುಷಿಯಲಿದ್ದಾರೆ. ಕನ್ನಡದಿಂದ ನಟನಾ ಜರ್ನಿ ಆರಂಭಿಸಿದ್ದ ನಭಾ ನಟೇಶ್ ಈಗ ಪ್ಯಾನ್ ಇಂಡಿಯಾ ಪ್ರಾಜೆಕ್ಟ್ ಗಳಲ್ಲಿ ಬ್ಯುಸಿಯಾಗಿದ್ದಾರೆ. ಶೃಂಗೇರಿ ಮೂಲದ ಈ ನಟಿ ಸದ್ಯ ತೆಲುಗು ಚಿತ್ರರಂಗದ ಟಾಪ್ ನಟಿಯರಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದಾರೆ. ಒಂದರ ಹಿಂದೊಂದು ಸಿನಿಮಾಗಳಲ್ಲಿ ನಟಿಸುತ್ತಿರುವ ನಭಾ, ಔಟ್ ಲುಕ್ ಇಂಡಿಯನ್ ಬ್ಯುಸಿನೆಸ್ ಕೊಡುವ ಮಾಡುವ 2024ರ ಸ್ಟೈಲ್ ಐಕಾನ್ ಪ್ರಶಸ್ತಿಗೆ ಭಜನರಾಗಿದ್ದಾರೆ. ಮಹಾನಟಿ ಖ್ಯಾತಿಯ ಕೀರ್ತಿ ಸುರೇಶ್ ನಭಾಗೆ ಈ ಪ್ರಶಸ್ತಿ ನೀಡಿ ಗೌರವಿಸಿದರು. ಸ್ಟೈಲೀಶ್ ಲುಕ್ ನಲ್ಲಿ ಅವಾರ್ಡ್ ಸ್ವೀಕರಿಸಿ ಕ್ಯಾಮೆರಾಗೆ ಪಟಾಕಾ ಪೋಸ್ ಕೊಟ್ಟಿದ್ದಾರೆ.ನಭಾ ನಟೇಶ್ ತೆಲುಗಿನಲ್ಲಿ ಸಾಲು ಸಾಲು ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ತೊಡಗಿಸಿಕೊಂಡಿದ್ದಾರೆ. ನಿಖಿಲ್ ನಾಯಕನಾಗಿ ನಟಿಸುತ್ತಿರುವ ಸ್ವಯಂಭೂ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದು, ಅವರು ಚಿತ್ರದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ಇದರ ಜೊತೆಗೆ ಮತ್ತೊಂದು ಪ್ಯಾನ್ ಇಂಡಿಯಾ ಮೂವೀ ನಾಗಬಂಧಂನಯಲ್ಲಿಯೂ ಅಭಿನಯಿಸುತ್ತಿದ್ದಾರೆ. ಈ ಎರಡು ಚಿತ್ರಗಳೊಂದಿಗೆ, ನಭಾ ನಟೇಶ್ ಮತ್ತೊಮ್ಮೆ ಎಲ್ಲರ ಗಮನವನ್ನು ಸೆಳೆಯುಲು ಕಾತರರಾಗಿದ್ದಾರೆ.

Read More

ಬೆಂಗಳೂರು: ಭಾರತದಲ್ಲಿ ಪ್ರತಿ ಮನೆಗೆ ಗ್ಯಾಸ್ ಸಿಲಿಂಡರ್ ಸಂಪರ್ಕ ಕಲ್ಪಿಸುವ ಪ್ರಧಾನ ಮಂತ್ರಿ ಉಜ್ವಲ ಯೋಜನೆ ಅತ್ಯಂತ ಯಶಸ್ವಿಯಾಗಿದೆ. ಕೇಂದ್ರ ಸರ್ಕಾರ ದೇಶದ ಆರ್ಥಿಕವಾಗಿ ಹಿಂದುಳಿದವರಿಗೆ ಉಚಿತವಾಗಿ ಗ್ಯಾಸ್ ಸಿಲಿಂಡರ್ ನೀಡುತ್ತಿದೆ. ಬಡವರಿಗೆ ಅನುಕೂಲವಾಗುವಂತೆ ಹಲವಾರು ಯೋಜನೆಗಳನ್ನು ಹಮ್ಮಿಕೊಂಡಿರುವ ಸರ್ಕಾರ ಪ್ರಧಾನಮಂತ್ರಿ ಉಜ್ವಲ ಯೋಜನೆಯಡಿ ಉಚಿತ ಗ್ಯಾಸ್ ಸಂಪರ್ಕ ನೀಡುತ್ತಿದೆ. ಈ ಯೋಜನೆಯಡಿ ಮನೆಯ ಮಹಿಳೆಯರಿಗೆ ಉಚಿತ LPG ಸಂಪರ್ಕವನ್ನು ಒದಗಿಸಲಾಗುವುದು. ನವವಿವಾಹಿತ ದಂಪತಿಗಳಿಗೆ ಈ ಯೋಜನೆಯು ತುಂಬಾ ಉಪಯುಕ್ತವಾಗಿದೆ. ಒಬ್ಬ ಸಾಮಾನ್ಯ ಬಡ ವ್ಯಕ್ತಿ ತನ್ನ ಹೆಂಡತಿಯ ಹೆಸರಿನಲ್ಲಿ ಹೊಸ ಗ್ಯಾಸ್ ಸಂಪರ್ಕವನ್ನು ಉಚಿತವಾಗಿ ಪಡೆಯಬಹುದು. ಈ ಪ್ರಧಾನಮಂತ್ರಿ ಉಜ್ವಲ ಯೋಜನೆ ಅಡಿಯಲ್ಲಿ, ಪ್ರತಿ ಕುಟುಂಬವು ಒಮ್ಮೆ ಮಾತ್ರ ಉಚಿತ ಗ್ಯಾಸ್ ಸಂಪರ್ಕವನ್ನು ಪಡೆಯಬಹುದು. ನಿಮ್ಮ ಕುಟುಂಬದ ಯಾವುದೇ ಸದಸ್ಯರು ಈ ಪ್ರಯೋಜನವನ್ನು ಈ ಹಿಂದೆ ಪಡೆಯದಿದ್ದಲ್ಲಿ ಮಾತ್ರ ನೀವು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತೀರಿ. https://ainlivenews.com/no-visa-required-just-an-indian-passport-to-go-to-these-countries/ ಬಿಳಿ ಪಡಿತರ ಚೀಟಿ ಹೊಂದಿರುವ ಕುಟುಂಬಗಳಿಗೆ ಪ್ರಧಾನಮಂತ್ರಿ ಉಜ್ವಲ ಯೋಜನೆ ಜಾರಿಗೊಳಿಸಲಾಗುವುದು. ಬಡತನ ರೇಖೆಗಿಂತ…

Read More

ಯಾವುದೇ ನೋವು ನಿವಾರಕಗಳೂ ಅಡ್ಡ ಪರಿಣಾಮಗಳಿಂದ ಸಂಪೂರ್ಣ ಮುಕ್ತವಲ್ಲ. ಶೀತ, ಕೆಮ್ಮು, ಜ್ವರ, ತಲೆನೋವು, ಆ್ಯಸಿಡಿಟಿ, ಮಲಬದ್ಧತೆ, ಮೈ-ಕೈ ನೋವು ಹೀಗೆ ಏನೇ ಸಮಸ್ಯೆಗಳು ಎದುರಾದರೂ ಜನರು ಯಾವುದೇ ರೀತಿಯ ಆರೋಗ್ಯ ಸಮಸ್ಯೆಗಳು ಪ್ರಾರಂಭವಾದ ಕೂಡಲೆ ಮಾತ್ರೆಗಳನ್ನು ಸೇವಿಸುತ್ತಾರೆ. ಇದು ಆಂಟಾಸಿಡ್, ನೋವು ನಿವಾರಕ ಅಥವಾ ಆ್ಯಂಟಿ ಬಯಾಟಿಕ್ ಆಗಿರಬಹುದು. ಜನರು ಜೀವನಶೈಲಿಯ ಬದಲಾವಣೆಗಳು ಮತ್ತು ಸುಧಾರಣೆಗಳ ಮೇಲೆ ಔಷಧಿಗಳನ್ನು ಆಯ್ಕೆ ಮಾಡುತ್ತಾರೆ. ಇದು ಬೇಗ ಗುಣವಾಗುವ ಸುಲಭದ ಮಾರ್ಗವಾಗಿದೆ. ತಜ್ಞರ ಪ್ರಕಾರ, ಔಷಧಿಗಳ ಮಿತಿಮೀರಿದ ಬಳಕೆಯು ನಿರ್ದಿಷ್ಟ ಅಂಗಗಳ ಮೇಲೆ ಮತ್ತು ಒಟ್ಟಾರೆ ಆರೋಗ್ಯದ ಮೇಲೆ ಗಂಭೀರ ಅಡ್ಡ ಪರಿಣಾಮಗಳನ್ನು ಉಂಟುಮಾಡಬಹುದು. ಬೇಜವಾಬ್ದಾರಿಯಿಂದ ಮಾತ್ರೆಗಳನ್ನು ಸೇವಿಸುವುದರಿಂದ ಉಂಟಾಗುವ ಅಡ್ಡ ಪರಿಣಾಮಗಳು ಹೀಗಿವೆ ಮೂತ್ರಪಿಂಡದ ಹಾನಿ: ಮೂತ್ರಪಿಂಡಗಳು ರಕ್ತವನ್ನು ಫಿಲ್ಟರ್ ಮಾಡುವ ಮತ್ತು ಮೂತ್ರದ ಮೂಲಕ ದೇಹದಿಂದ ವಿಷವನ್ನು ತೆಗೆದುಹಾಕುವ ಹುರುಳಿ-ಆಕಾರದ ಅಂಗಗಳಾಗಿವೆ. ಆದರೆ, ಡ್ರಗ್ಸ್ ಮೂತ್ರಪಿಂಡಗಳಿಗೆ ರಕ್ತದ ಹರಿವನ್ನು ಅಡ್ಡಿಪಡಿಸುತ್ತದೆ. ಇದು ಅಲರ್ಜಿಯನ್ನು ಉಂಟುಮಾಡಬಹುದು. ಒಂದು ಅಧ್ಯಯನದ ಪ್ರಕಾರ, ಶೇ. 20ರಷ್ಟು ಮೂತ್ರಪಿಂಡ ವೈಫಲ್ಯದ…

Read More

ಬೆಂಗಳೂರು: ರಾಜ್ಯ ಸರ್ಕಾರ ಭೂಮಿ ಅಕ್ರಮ ಸಾಗುವಳಿದಾರರ ಪಾಲಾಗುವುದನ್ನು ತಪ್ಪಿಸಲು ರಾಜ್ಯ ಸರ್ಕಾರ ಬಗರ್ ಹುಕುಂ ಆ್ಯಪ್‌ ಬಿಡುಗಡೆ ಮಾಡಿದೆ.  ಸಾಗುವಳಿ ಭೂಮಿಯಲ್ಲಿ ಕೃಷಿ ಅಥವಾ ಇನ್ಯಾವುದೇ ಚಟುವಟಿಕೆ ಬಗ್ಗೆ ಸ್ಯಾಟಲೈಟ್ ಇಮೇಜ್ ಮೂಲಕ ಮಾಹಿತಿ ಪಡೆದು ಅರ್ಜಿ ವಿಲೇವಾರಿ ಮಾಡುವುದಕ್ಕೆ ಸರ್ಕಾರ ಬಗರ್ ಹುಕುಂ ಆ್ಯಪ್ ರೂಪಿಸಿದೆ. ಇನ್ನೂ ಇದರ ಬೆನ್ನಲ್ಲೇ ಬಗರ್ ಹುಕುಂ ಅಡಿಯಲ್ಲಿ ಅರ್ಜಿ ಸಲ್ಲಿಸಿರುವ ಅರ್ಹ ಫಲಾನುಭವಿಗಳ ಪೈಕಿ ಕನಿಷ್ಟ 5,000 ಜನರ ಅರ್ಜಿಗಳನ್ನಾದರೂ “ಬಗರ್ ಹುಕುಂ” ಕಮಿಟಿಯ ಎದುರು ಮಂಡಿಸಿ ಡಿ.15ರ ಒಳಗೆ ಸಾಗುವಳಿ ಚೀಟಿ ನೀಡಲಾಗುವುದು ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಭರವಸೆ ನೀಡಿದರು. https://ainlivenews.com/is-it-okay-to-make-yogurt-in-winter-stop-worrying-follow-these-tips/ ಈ ಬಗ್ಗೆ ಮಾಹಿತಿ ನೀಡಿದ ಅವರು, “ರಾಜ್ಯಾದ್ಯಂತ ಲಕ್ಷಾಂತರ ಜನ ಬಗರ್ ಹುಕುಂ ಅಡಿಯಲ್ಲಿ ಜಮೀನು ಮಂಜೂರಾತಿಗೆ ಕೋರಿ ಅರ್ಜಿ ಸಲ್ಲಿಸಿದ್ದಾರೆ. ಆದರೆ, ಈ ಪೈಕಿ 1,26,000 ಅರ್ಜಿಗಳನ್ನು ಮಾತ್ರ ಅರ್ಹ ಎಂದು ಪರಿಗಣಿಸಲಾಗಿದೆ. ಕೆಲ ಜಿಲ್ಲೆಗಳಲ್ಲಿ ಅರ್ಹ ಫಲಾನುಭವಿಗಳ ಅರ್ಜಿಗಳನ್ನು ಈಗಾಗಲೇ ಬಗರ್ ಹುಕುಂ…

Read More

ಪ್ರಧಾನಮಂತ್ರಿ ಆವಾಸ್ ಯೋಜನೆ ಎಂದು ಕರೆಯಲ್ಪಡುವ ಉಚಿತ ವಸತಿ ಯೋಜನೆಯಡಿ ನೀವು ಮನೆಯನ್ನು ಪಡೆಯಲು ಬಯಸಿದರೆ, ನೀವು ಈ ಕೆಳಗಿನವುಗಳನ್ನು ಮಾಡಬೇಕಾಗಿದೆ. ಈ ಪೋಸ್ಟ್‌ನಲ್ಲಿ ನೀವು ಅದರ ಬಗ್ಗೆ ನೋಡಬಹುದು. ಪ್ರಧಾನಮಂತ್ರಿ ಆವಾಸ್ ಯೋಜನೆ ಯೋಜನೆಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು 25 ಜೂನ್ 2015 ರಂದು ಪ್ರಾರಂಭಿಸಿತು. ಈ ಯೋಜನೆಯಡಿಯಲ್ಲಿ ವಸತಿರಹಿತರು ಮನೆ ನಿರ್ಮಿಸಲು ಅಥವಾ ಖರೀದಿಸಲು ಪ್ರಯೋಜನವನ್ನು ಪಡೆಯುತ್ತಾರೆ. ಅದಕ್ಕೆ ಕೆಲವು ಅರ್ಹತೆಗಳಿರಬೇಕು. ನೀವು ಆ ಅರ್ಹತೆಗಳನ್ನು ಹೊಂದಿದ್ದರೆ ನೀವು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಫಲಾನುಭವಿಗಳ ಪಟ್ಟಿಯನ್ನು rhreporting.nic.in ನಲ್ಲಿ ಕಾಣಬಹುದು. ಈ ಯೋಜನೆಗೆ ನೀವು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಈ ಯೋಜನೆಯ ಉದ್ದೇಶವೇನು? ಬಡತನ ರೇಖೆಗಿಂತ ಕೆಳಗಿರುವ ಮತ್ತು ಸ್ವಂತ ಮನೆ ನಿರ್ಮಿಸಲು ಸಾಧ್ಯವಾಗದ ಜನರು ಈ ಯೋಜನೆಯ ಮೂಲಕ ಸ್ವಂತ ಮನೆ ನಿರ್ಮಿಸಿಕೊಳ್ಳಬಹುದು ಫಲಾನುಭವಿಗಳಿಗೆ ಅರ್ಹತೆ ಅಭ್ಯರ್ಥಿಯು ಈ ಕೆಳಗಿನ ಯಾವುದೇ ಅರ್ಹತೆಗಳನ್ನು ಹೊಂದಿರಬೇಕು. ಒಂದು ಅಥವಾ ಎರಡು ಕೊಠಡಿಗಳು, ಕಚ್ಚಾ ಗೋಡೆಗಳು, ಕಚ್ಚಾ ಛಾವಣಿಯಿರುವ…

Read More

ಹಿಂದೂ ಧರ್ಮದಲ್ಲಿ ಮಂಗಳವಾರವನ್ನು ಆಂಜನೇಯ ಸ್ವಾಮಿಗೆ ಮತ್ತು ನವಗ್ರಹಗಳಲ್ಲಿ ಒಂದಾದ ಮಂಗಳ ಗ್ರಹಕ್ಕೆ ಸಮರ್ಪಿಸಲಾಗಿದೆ. ಆಂಜನೇಯ ಸ್ವಾಮಿಯು ನಮ್ಮೆಲ್ಲಾ ಸಂಕಷ್ಟಗಳನ್ನು ದೂರ ಮಾಡುವುದರಿಂದ ಆತನನ್ನು ಸಂಕಟಮೋಚನ ಎಂದು ಕರೆಯಲಾಗುತ್ತದೆ. ಈ ದಿನದಂದು ಹನುಮಂತನ ಭಕ್ತರು ಆಹಾರ, ವಸ್ತು ಮತ್ತು ಪಾನೀಯಗಳ ಬಗ್ಗೆ ಗಮನ ಹರಿಸುವುದು ಬಹಳ ಮುಖ್ಯ.ಹನುಮಂತ ಯಾವಾಗಲೂ ತನ್ನ ಭಕ್ತರನ್ನು ರಕ್ಷಿಸುತ್ತಾನೆ, ಆದ್ದರಿಂದ  ಹನುಮಂತನಿಗೆ ಅಸಮಾಧಾನವನ್ನುಂಟುಮಾಡುವ ಯಾವುದನ್ನೂ ಮಾಡಬೇಡಿ, ನೀವು ಹನುಮಂತನ ಕೋಪವನ್ನು ಎದುರಿಸಬೇಕಾಗುತ್ತದೆ. ಆದ್ದರಿಂದ ಈ ವಿಷಯಗಳನ್ನು ನೆನಪಿಡಿ. ಮಂಗಳವಾರ ತಾಮ್ರ ಅಥವಾ ಕಬ್ಬಿಣ  ಖರೀದಿಸಬೇಡಿ ಅಥವಾ ಮಾರಾಟ ಮಾಡಬೇಡಿ. ಇದು ನಕಾರಾತ್ಮಕ ಶಕ್ತಿಯನ್ನು ಸೃಷ್ಟಿಸುತ್ತದೆ, ಇದು ನಿಮ್ಮ ದೈಹಿಕ ಸ್ಥಿತಿಯನ್ನು ಇನ್ನಷ್ಟು ಹದಗೆಡಿಸುತ್ತದೆ. ಮಂಗಳವಾರದಂದು ಕೆಂಪು ಬಟ್ಟೆಗಳನ್ನು ಧರಿಸಿ ಮತ್ತು ಕೆಂಪು ಬಟ್ಟೆಗಳನ್ನು ಧರಿಸಿ ಬಜರಂಗಬಲಿ ಪೂಜೆ ಮಾಡಿ. ಇದರಿಂದ ಹನುಮಂತನಿಗೆ ತುಂಬಾ ಸಂತೋಷವಾಗುತ್ತದೆ, ನಿಮ್ಮ ಇಷ್ಟಾರ್ಥಗಳು ಈಡೇರುತ್ತವೆ. ಮಂಗಳವಾರ ಡೈರಿ ಉತ್ಪನ್ನಗಳನ್ನು ಖರೀದಿಸಬೇಡಿ ಅಥವಾ ಮಾರಾಟ ಮಾಡಬೇಡಿ, ಇದು ನಿಮ್ಮ ಮಂಗಳವನ್ನು ದುರ್ಬಲಗೊಳಿಸುತ್ತದೆ, ಇದು ಮನೆಯಲ್ಲಿ ಕುಟುಂಬದ…

Read More

ಸೂರ್ಯೋದಯ: 06:35, ಸೂರ್ಯಾst : 05:36 ಶಾಲಿವಾಹನ ಶಕೆ -1946 ಸಂವತ್-2080 ಕ್ರೋಧಿನಾಮ ಸಂವತ್ಸರ, ದಕ್ಷಿಣ ಅಯಣ, ಶುಕ್ಲ ಪಕ್ಷ, ಶರದ ಋತು, ಮಾರ್ಗಶಿರ ಮಾಸ, ತಿಥಿ:ಬಿದಿಗಿ ನಕ್ಷತ್ರ: ಮೂಲ ರಾಹು ಕಾಲ: 03:00 ನಿಂದ 04:30 ತನಕ ಯಮಗಂಡ: 09:00 ನಿಂದ 10:30 ತನಕ ಗುಳಿಕ ಕಾಲ: 12:00 ನಿಂದ 01:30 ತನಕ ಅಮೃತಕಾಲ: ಬೆ.10:07 ನಿಂದ ಬೆ.11:47 ತನಕ ಅಭಿಜಿತ್ ಮುಹುರ್ತ: ಬೆ.11:44 ನಿಂದ ಮ.12:28 ತನಕ ಮೇಷ ರಾಶಿ: ವಿವಾಹ ಕಾರ್ಯ ನಿರೀಕ್ಷೆಯಲ್ಲಿರುವವರಿಗೆ ಶುಭ, ಪ್ರೇಮಿಗಳ ಬಾಂಧವ್ಯ ವೃದ್ಧಿ, ಕುಟುಂಬದಲ್ಲಿ ಜಗಳ ಸಂಭವ, ವ್ಯಾಪಾರದ ಆರ್ಥಿಕ ಮುಗ್ಗಟ್ಟು, ಮಕ್ಕಳಿಂದ ಮನಸ್ತಾಪ, ರಾಜಕೀಯ ರಂಗದ ಜನಪ್ರತಿನಿಧಿಗಳಿಗೆ ಅಧಿಕಾರ ಕಳೆದುಕೊಳ್ಳುವ ಭೀತಿ, ಅಣ್ಣ-ತಮ್ಮಂದಿರ ಆಸ್ತಿಗಾಗಿ ಹೋರಾಟ, ಸಹೋದರಿಗಳಿಂದ ಮನಸ್ತಾಪ, ಎಲ್ಲ ಚಲನಚಿತ್ರ ನಟ ನಟಿಯರಿಗೆ ನಷ್ಟ, ನಿಮ್ಮ ಪ್ರಾಮಾಣಿಕ ಪ್ರಯತ್ನಕ್ಕೆ ಹಿರಿಯ ಅಧಿಕಾರಿಗಳಿಂದ ಪ್ರಶಂಸೆ, ಸಾಲಗಾರರಿಂದ ಅವಮಾನ, ಹೊಸ ವ್ಯಾಪಾರ ಪ್ರಾರಂಭಿಸಲು ಸೂಕ್ತ ಸಮಯವಲ್ಲ, ಜಾತಕ ಆಧಾರದ (ಜನ್ಮ ದಿನಾಂಕ…

Read More