ಸೂರ್ಯೋದಯ: 06:29, ಸೂರ್ಯಾಸ್ತ : 05:35 ಶಾಲಿವಾಹನ ಶಕೆ -1946 ಸಂವತ್-2080 ಕ್ರೋಧಿನಾಮ ಸಂವತ್ಸರ, ದಕ್ಷಿಣ ಅಯಣ, ಶುಕ್ಲ ಪಕ್ಷ, ಶರದ ಋತು, ಕಾರ್ತಿಕ್ ಮಾಸ, ತಿಥಿ: ಅಷ್ಟಮಿ ನಕ್ಷತ್ರ: ಮಖಾ ರಾಹು ಕಾಲ: 09:00 ನಿಂದ 1:30 ತನಕ ಯಮಗಂಡ: 01:30 ನಿಂದ 03:00 ತನಕ ಗುಳಿಕ ಕಾಲ: 06:00 ನಿಂದ 07:30 ತನಕ ಅಮೃತಕಾಲ: ಸಂ.4:49 ನಿಂದ ಸಂ.6:34 ತನಕ ಅಭಿಜಿತ್ ಮುಹುರ್ತ: ಬೆ.11:40 ನಿಂದ ಮ.12:24 ತನಕ ಮೇಷ ರಾಶಿ: ನಿಮ್ಮ ವ್ಯವಹಾರ ಕಾರ್ಯ ನಷ್ಟವಾಗಲು ಅಕ್ಕಪಕ್ಕದವರ ಕೈಚಳಕವೇ ಕಾರಣ,ಯಂತ್ರಗಳ ಬಿಡಿ ಭಾಗಗಳ ಉದ್ಯಮದಾರರಿಗೆ ಆರ್ಥಿಕ ನಷ್ಟ, ಗುತ್ತಿಗೆದಾರರಿಗೆ ಹೊಸ ಟೆಂಡರ್ ಭಾಗ್ಯ, ಒಳಸಂಚುಗಳ ಬಗ್ಗೆ ಜಾಗೃತಿ ಇರಲಿ,ರಿಯಲ್ ಎಸ್ಟೇಟ್ ಮತ್ತು ಡೆವಲಪರ್ಸ್ ನವರಿಗೆ ಉದ್ಯಮದಲ್ಲಿ ಚೇತರಿಕೆ,ತಮಗೆ ಬರಬೇಕಾದ ಬಾಕಿ ಸಾಲದ ಮೊತ್ತ ಕೈಸೇರುವುದು. ಈ ಹಿಂದೆ ನೀವು ಪಟ್ಟಿದ್ದ ಶ್ರಮಕ್ಕೆ ಈಗ ಪ್ರತಿಫಲ ದೊರೆಯಲಿದೆ. ವ್ಯಾಪಾರ- ವ್ಯವಹಾರ ಮಾಡುವವರಿಗೆ ಹೊಸ ಆದಾಯ ಮೂಲ ಗೋಚರಿಸಲಿದೆ, ಅಷ್ಟೇ…
Author: AIN Admin
ಬೆಂಗಳೂರು: ರಾಜ್ಯದ ಮೂರು ಕ್ಷೇತ್ರಗಳ ಬೈ ಎಲೆಕ್ಷನ್ ಫಲಿತಾಂಶ ನಾಳೆ ಹೊರಬೀಳಲಿದೆ. ಸಂಡೂರು, ಶಿಗ್ಗಾಂವಿ, ಚನ್ನಪಟ್ಟಣದ ಮತದಾರರು ನೀಡಿರುವ ಮತಗಳ ಎಣಿಕೆ ನಡೆಯಲಿದ್ದು,ಯಾರು ಗೆಲ್ತಾರೆ ಯಾರು ಸೋಲ್ತಾರೆ ಅನ್ನೋದು ಬಹಿರಂಗವಾಗಲಿದೆ.ಮೂರರಲ್ಲಿ ಎಲ್ಲರ ಚಿತ್ತ ನೆಟ್ಟಿರೋದು ಚನ್ನಪಟ್ಟಣದ ಕಡೆ..ಯಾಕಂದ್ರೆ ಗೌಡರ ಕುಟುಂಬ ಹಾಗೂ ಡಿಕೆ ಬ್ರದರ್ಸ್ ನಡುವಿನ ಕಾಳಗದಲ್ಲಿ ಯಾರ ಕೈಮೇಲಾಗುತ್ತದೆ ಅನ್ನೋ ಕುತೂಹಲವಿದೆ. ಸಂಡೂರು,ಶಿಗ್ಗಾಂವಿ ಹಾಗೂ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರಗಳ ಬೈ ಎಲೆಕ್ಷನ್ ಫಲಿತಾಂಶಕ್ಕೆ ಕ್ಷಣಗಣನೆ ಆರಂಭವಾಗಿದೆ.ನಾಳೆ ಮೂರು ಕ್ಷೇತ್ರಗಳ ಮತ ಎಣಿಕೆ ನಡೆಯಲಿದ್ದು ಮಧ್ಯಾಹ್ನದೊಳಗೆ ಫಲಿತಾಂಶ ಹೊರಬೀಳಲಿದೆ.ಮತದಾರರು ಹಾಕಿರುವ ಮತಗಳು ಯಾರಿಗೆ ಅನ್ನೋದು ಗೊತ್ತಾಗುತ್ತದೆ. ಮೂರು ಕ್ಷೇತ್ರಗಳಲ್ಲೂ ಸಾಕಷ್ಟು ಪೈಪೋಟಿ ಇದ್ದು ಇಂತವರೇ ಗೆಲ್ತಾರೆ ಅಂತ ಹೇಳೋದು ಕಷ್ಟ.ಸಮೀಕ್ಷೆಗಳು ವರದಿ ಪ್ರಕಟಿಸಿದ್ದು ಮೂರು ಕ್ಷೇತ್ರಗಳು ಒಂದೊಂದು ಪಕ್ಷ ಗೆಲ್ಲಲಿವೆ ಎಂದಿದ..ಆದರೆ ಫಲಿತಾಂಶವೇ ಉಲ್ಟಾ ಆದ್ರೂ ಅಚ್ಚರಿಯಿಲ್ಲ.ಹಾಗಾಗಿ ನಾಳಿನ ಫಲಿತಾಂಶ ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.ಯಾರು ಸೋಲ್ತಾರೆ ಯಾರು ಗೆಲ್ತಾರೆ ಅನ್ನೋದು ನಾಳೆ ಹೊರಬೀಳಲಿದೆ. https://ainlivenews.com/if-bpl-card-is-cancelled-will-grilakshmi-get-money-finally-lakshmi-hebbalkar-kotru-clarification/ ಇನ್ನು ಮೂರು ಕ್ಷೇತ್ರಗಳಲ್ಲಿ ಸಾಕಷ್ಟು ಕುತೂಹಲ…
ಬೆಂಗಳೂರು: ಹನಿ ಟ್ರಾಪ್ ಮಾಡಿ 2.5 ಕೋಟಿ ವಸೂಲಿ ಮಾಡಿದ್ದ ಗ್ಯಾಂಗ್ ಅನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ,. ತಬ್ಸಂ ಬೇಗಂ, ಅಜೀಮ್ ಉದ್ದಿನ್ ಆನಂದ್. ಅಭಿಷೇಕ್ ಬಂಧಿತ ಆರೋಪಿಗಳಾಗಿದ್ದು, ಆರ್ ಟಿ ನಗರ ಜಿಮ್ ನಲ್ಲಿ ಮಹಿಳೆ ತಬಸುಮ್ ಕೇಂದ್ರ ಸರ್ಕಾರಿ ನೌಕರನನ್ನು ಪರಿಚಯ ಮಾಡಿಕೊಂಡಿದ್ದಳು. ನಂತರ ಫೋನ್ ನಂಬರ್ ಪಡೆದು ಚಾಟಿಂಗ್ ಮಾಡಲಾರಂಭಿಸಿದ್ದಾರೆ. ನಂತರ, ಟೀ, ತಿಂಡಿ ಎನ್ನುತ್ತಾ ಸ್ನೇಹ ಬೆಳೆಸಿಕೊಂಡಿದ್ದಾರೆ. ನಂತರ, ತನ್ನ ಪರಿಚಯದ ಬಗ್ಗೆ ಹೇಳಿಕೊಳ್ಳುತ್ತಾ ತಾನೊಂದು ಮಗುವನ್ನು ದತ್ತು ಪಡೆದು ಸಾಕುತ್ತಿದ್ದು, ಅದಕ್ಕೆ ಒಂದಷ್ಟು ಸಹಾಯ ಮಾಡುವಂತೆ ಕೇಳಿಕೊಂಡಿದ್ದಾರೆ. ಇದೇ ನೆಪವನ್ನಿಟ್ಟುಕೊಂಡು 2021ರಿಂದ ನಿರಂತರವಾಗಿ ಸ್ಬಲ್ಪ ಸ್ವಲ್ಪವೇ ಹಣವನ್ನು ಪಡೆದುಕೊಂಡಿದ್ದಾಳೆ. ತಬಸುಮ್ ಗ್ಯಾಂಗ್‌ನಿಂದ ಹನಿಟ್ರ್ಯಾಪ್ ಮಾಡಲು ಮುಂದಾಗಿದ್ದು, ನೌಕರನ ಕೆಲವೊಂದು ಖಾಸಗಿ ಫೋಟೋ, ವಿಡಿಯೋಗಳನ್ನು ಸೆರೆ ಹಿಡಿದುಕೊಂಡಿದ್ದಾರೆ. https://ainlivenews.com/good-news-for-teacher-post-aspirants-recruitment-of-10-thousand-teachers-soon/ ನಂತರ ಅವರ ಖಾಸಗಿ ಫೊಟೋಗಳನ್ನು ವಾಟ್ಸಾಪ್‌ಗೆ ಕಳಿಸಿ ಹಣಕ್ಕೆ ಡಿಮ್ಯಾಂಡ್ ಮಾಡಿದ್ದಾರೆ. ಹಂತ ಹಂತವಾಗಿ ಆರೋಪಿಗಳು 2.5 ಕೋಟಿ ರೂ. ಹಣವನ್ನು ವಸೂಲಿ ಮಾಡಿದ್ದಾರೆ. ಇದರ ನಂತರವೂ ಹಣಕ್ಕೆ ಬೇಡಿಕೆ ಇಟ್ಟಿದ್ದರಿಂದ…
ಬೆಂಗಳೂರು: ಅದು ಗಂಡ ಹೆಂಡತಿ ಹಾಗೂ ಇಬ್ಬರು ಮಕ್ಕಳಿದ್ದ ಸುಂದರ ಸಂಸಾರ..ಜಾರ್ಖಾಂಡ್ ಮೂಲದ ಈ ದಂಪತಿ ಬೆಂಗಳೂರಿಗೆ ಬಂದು ಬದುಕು ಕಟ್ಟಿಕೊಂಡಿದ್ರು..ಆದ್ರೆ ಪತಿ ಪತ್ನಿ ನಡುವಿನ ಜಗಳ ಇಬ್ಬರು ಪುಟ್ಟ ಮಕ್ಕಳನ್ನ ಬಲಿ ಪಡೆದಿದೆ..ಹೆತ್ತ ಕರುಳೇ ಮುದ್ದು ಮಕ್ಕಳ ಹೆಣ ಉರುಳಿಸಿದೆ..ಈ ಕಂಪ್ಲೇಂಟ್ ಸ್ಟೋರಿ.. ಹೌದು..ಜಾರ್ಖಾಂಡ್ ಮೂಲದ ಸುನಿಲ್ ಸಾಹು ಹಾಗೂ ಮಮತಾ ಸಾಹು ದಂಪತಿ ಬೆಂಗಳೂರಿನ ಸುಬ್ರಹ್ಮಣ್ಯಪುರದಲ್ಲಿ ಬಾಡಿಗೆ ಮನೆ ಮಾಡಿಕೊಂಡು ವಾಸಮಾಡಿಕೊಂಡಿದ್ರು.. ಸುನಿಲ್ ಸಾಹು ಆಟೋ ಓಡಿಸಿಕೊಂಡಿದ್ರೆ ಮಮತಾ ಗೃಹಿಣಿಯಾಗಿದ್ಳು..ಹೀಗಿರಬೇಕಾದ್ರೆ ಪತ್ನಿಗೆ ಪತಿ ಮೇಲೆ ಅನುಮಾನ…ಜಾರ್ಖಾಂಡ್ ಮೂಲದ ಮಹಿಳೆ ಜೊತೆಗೆ ಫೋನಲ್ಲಿ ಮಾತಾಡ್ತಾನೆ ಅನ್ನೋ ಸಂಶಯ ಇತ್ತು..ಇದೇ ಕಾರಣಕ್ಕೆ ಇಬ್ಬರ ಮಧ್ಯೆ ಆಗಾಗ ಗಲಾಟೆ ನಡೀತಿತ್ತು..ಅದ್ರಂತೆ ನವಂಬರ್ 21 ರ ಸಂಜೆ ಕೂಡ ಗಲಾಟೆ ಆಗಿದೆ. https://ainlivenews.com/do-you-know-the-side-effects-of-excessive-consumption-of-black-pepper/ ಲಾಟೆ ಬಳಿಕ ಸಂಜೆ 7.30 ಕ್ಕೆ ಸರಿಯಾಗಿ ಗಂಡ ಸುನಿಲ್ ಸಾಹು ಆಟೋ ತೆಗೆದುಕೊಂಡು ಕೆಲಸಕ್ಕೆ ಹೋಗಿದ್ದಾನೆ.ಹೀಗೆ ಹೋದವನಿಗೆ 9.45 ರ ಸುಮಾರಿಗೆ ಬಂದ ಅದೊಂದು ಫೋಟೊ ನಿಂತಲ್ಲೇ ನಡುಗುವಂತೆ…
ಬೆಂಗಳೂರು: ಸಚಿವ ಜಮೀರ್ʼಗೆ ಕಾನೂನು ಪ್ರಕಾರ ವಕ್ಫ್ ಅದಾಲತ್ ಮಾಡಲು ಅವಕಾಶ ಇಲ್ಲ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಸಚಿವ ಜಮೀರ್ ಖಾನ್ ಗೆ ಕಾನೂನು ಪ್ರಕಾರ ವಕ್ಫ್ ಅದಾಲತ್ ಮಾಡಲು ಅವಕಾಶ ಇಲ್ಲ. ಒತ್ತಡದ ಮೂಲಕ ಆಸ್ತಿಗೆ ನೋಟಿಸ್ ಕೊಡಲಾಗುತ್ತಿದೆ. ವಕ್ಫ್ ಟ್ರಿಬ್ಯೂನಲ್ ನಲ್ಲಿ ಯಾರಿಗೂ ನ್ಯಾಯ ಸಿಗುವುದಿಲ್ಲ. ಕೇವಲ ಒಂದು ಧರ್ಮ ಓಲೈಕೆಗಾಗಿ ವಕ್ಫ್ ಬಳಕೆ ಮಾಡಲಾಗಿದೆ ಎಂದು ಆರೋಪಿಸಿದರು. https://ainlivenews.com/do-you-know-the-side-effects-of-excessive-consumption-of-black-pepper/ ವಕ್ಫ್ ವಿವಾದದಲ್ಲಿ ಜಮೀರ್ ಮತ್ತು ಸಿಎಂ ಸಿದ್ದರಾಮಯ್ಯ ಅವರನ್ನು ಮನೆಗೆ ಕಳಿಸಬೇಕು. ಅಲ್ಲಿಯವರೆಗೆ ಹೋರಾಟ ನಡೆಯಲಿದೆ ಎಂದು ಶೋಭಾ ಕರಂದ್ಲಾಜೆ ಎಚ್ಚರಿಕೆ ನೀಡಿದರು. ರಾಜರಾಜ ಚೋಳನ ದೇವಸ್ಥಾನ ವಕ್ಫ್ ಆಸ್ತಿಯಾಗಿದೆ. ವಿಜಯಪುರ ಜಿಲ್ಲೆಯಲ್ಲಿ ಊರಿಗೆ ಊರೇ ವಕ್ಫ್ ಆಗಿದೆ. ಹೊಯ್ಸಳ, ಚಾಲುಕ್ಯರು ಕಟ್ಟಿದ ದೇವಸ್ಥಾನ ವಕ್ಫ್ ಆಗಿದೆ. ಈ ಹಿನ್ನೆಲೆಯಲ್ಲಿ ವಕ್ಫ್ ತಿದ್ದುಪಡಿ ಕಾಯ್ದೆ ಜಾರಿಯಾಗಬೇಕು ಎಂದು ಹೇಳಿದರು.
ಬೆಂಗಳೂರು: ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಸನ ಜೆಡಿಎಸ್ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಜಾಮೀನು ಅರ್ಜಿ ವಜಾಗೊಂಡಿದೆ. ಈ ಹಿಂದೆ ಮೂರು ಪ್ರಕರಣಗಳಲ್ಲಿ ಜಾಮೀನು ಅರ್ಜಿ ವಜಾಗೊಂಡಿತ್ತು. ನಾಲ್ಕನೇ ಪ್ರಕರಣದಲ್ಲಿ ಆದೇಶ ಬಾಕಿಯಿತ್ತು. ಇದೀಗ ನಾಲ್ಕನೇ ಪ್ರಕರಣದ ಜಾಮೀನು ಅರ್ಜಿಯನ್ನು ಸಹ ಹೈಕೋರ್ಟ್ ಏಕಸದಸ್ಯ ಪೀಠ ವಜಾಗೊಳಿಸಿದೆ. ಮೂರು ಅತ್ಯಾಚಾರ ಕೇಸ್, ಒಂದು ಅಶ್ಲೀಲ ದೃಶ್ಯ ಪ್ರಕರಣದ ಜಾಮೀನು ಅರ್ಜಿಯನ್ನು ಕೋರ್ಟ್ ವಜಾ ಮಾಡಿತ್ತು. ಆದ್ರೆ ನಾಲ್ಕನೆ ಪ್ರಕರಣದ ಜಾಮೀನಿ ಅರ್ಜಿಯ ಆದೇಶವನ್ನು ಕಾಯ್ದಿರಿಸಿತ್ತು. ಇಂದು ಹೈಕೋರ್ಟ್, ಪ್ರಜ್ವಲ್ ರೇವಣ್ಣ ವಿರುದ್ಧ 4ನೇ ಪ್ರಕರಣ ಜಾಮೀನು ಅರ್ಜಿಯನ್ನು ಸಹ ವಜಾಗೊಳಿಸಿ ಆದೇಶ ಹೊರಡಿಸಿದೆ. https://ainlivenews.com/do-you-know-the-side-effects-of-excessive-consumption-of-black-pepper/ ಅಶ್ಲೀಲ ದೃಶ್ಯ ಪ್ರಕರಣ ಸೇರಿದಂತೆ ಇತರೆ ಒಟ್ಟು ನಾಲ್ಕು ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ ಆಗಸ್ಟ್ನಲ್ಲಿ 2,144 ಪುಟಗಳ ಚಾರ್ಜ್ಶೀಟ್ ಸಲ್ಲಿಸಿತ್ತು. ಇದರ ಬೆನ್ನಲ್ಲೇ ಪ್ರಜ್ವಲ್ ರೇವಣ್ಣ ಸಹ ಜಾಮೀನಿಗಾಗಿ ಕೆಳಗಿನ ಕೋರ್ಟ್ನಲ್ಲಿ ಕಸರತ್ತು ನಡೆಸಿದ್ದರು. ಆದ್ರೆ, ಅದು…
ಬೆಂಗಳೂರು: ಸಿದ್ದರಾಮಯ್ಯ ಬಂದ ಬಳಿಕ ಮುಸ್ಲಿಮರಿಗೆ ಎರಡು ಕೊಂಬು ಬಂದಿದೆ ಎಂದು ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ವಕ್ಫ್ ಬೋರ್ಡ್ ಕ್ಯಾನ್ಸರ್, ಕಾಂಗ್ರೆಸ್ ಬಂದ ಬಳಿಕ ಮಿನಿ ಪಾಕಿಸ್ತಾನ ಮಾಡಲು ಹೊರಟಿದ್ದಾರೆ. ಲಾಲ್ ಬಾಗ್, ವಿಧಾನಸೌಧ ನಮ್ಮದು ಎಂದು ಹೇಳುತ್ತಿದ್ದಾರೆ. ಒಳ್ಳೊಳ್ಳೆ ಜಮೀನು ಇರುತ್ತದೆ ಅದು ವಕ್ಫ್ ಬೋರ್ಡ್ ಆಗಿದೆ. ಬಡವರು, ರೈತರು ಕಂಗಾಲಾಗಿದ್ದಾರೆ. ಸಿದ್ದರಾಮಯ್ಯ ಬಂದ ಬಳಿಕ ಮುಸ್ಲಿಮರಿಗೆ ಎರಡು ಕೊಂಬು ಬಂದಿದೆ. ಸಿದ್ದರಾಮಯ್ಯ ಮುಸ್ಲಿಮರ ಚಾಂಪಿಯನ್ ಆಗಲು ಹೊರಟಿದ್ದಾರೆ ಎಂದರು. https://ainlivenews.com/do-you-know-the-side-effects-of-excessive-consumption-of-black-pepper/ ರೈತರ ಜಮೀನು ಕಿತ್ತುಕೊಳ್ಳುವುದು ಕಾಂಗ್ರೆಸ್ ಸಣ್ಣ ವಿಚಾರ. ಕಾಂಗ್ರೆಸ್ ಅಧಿಕಾರದಲ್ಲಿ ಮುಸ್ಲಿಮರ ಓಲೈಕೆ ಆಗುತ್ತಿದೆ. ಅವರ ವಿರುದ್ಧದ ಪ್ರಕರಣ ವಾಪಸ್ ಪಡೆಯಲಾಗ್ತಿದೆ. ನಾವಿದ್ದಾಗ ನಕ್ಸಲ್ ಇರಲಿಲ್ಲ. ಇವಾಗ ನಗರ ನಕ್ಸಲರು, ಕಾಡಲ್ಲಿ ನಕ್ಸಲರು ಬಂದಿದ್ದಾರೆ ಎಂದರು. ಕಾಂಗ್ರೆಸ್ ಬಂದರೆ ನಕ್ಸಲರಿಗೆ, ಲವ್ ಜಿಹಾದಿಗಳಿಗೆ ಹಬ್ಬ. ವಕ್ಫ್ ಬೋರ್ಡ್ ಗೆ ನ್ಯಾಯಾಂಗದ ಅಧಿಕಾರ ಕೊಡಲಾಗಿದೆ. ರಾಜ್ಯದಲ್ಲಿ ತಮ್ಮ ಜಮೀನನ್ನು ರೈತರು…
ಬೆಂಗಳೂರು: ಗೋವಿಂದರಾಜನಗರ ಪೊಲೀಸರ ಕಾರ್ಯಾಚರಣೆ ನಡೆಸಿ ಐವರು ಬೈಕ್, ಮೋಬೈಲ್ ಕಳ್ಳರನ್ನು ಬಂಧಿಸಿದ್ದಾರೆ. ಮೊಹಮ್ಮದ್ ಸೋಹೆಲ್, ಭರತ್,ಹರೀಶ್, ಸಂತೋಷ್,ಸಲ್ಮಾನ್ ಖಾನ್ ಬಂಧಿತ ಆರೋಪಿಗಳಾಗಿದ್ದು, ಬೈಕ್ ಕದ್ದು ಅವುಗಳನ್ನ ಮೊಬೈಲ್ ಕಳ್ಳತನಕ್ಕೆ ಬಳಸಿಕೊಳ್ತಿದ್ದರು. ರಸ್ತೆಗಳಲ್ಲಿ ಓಡಾಡುವವರು ಬಾರ್ ಗಳಲ್ಲಿರುವವರಿಂದ ಕಳ್ಳತನ ಮಾಡ್ತಿದ್ದರು. ಬಿಲ್ಡಂಗ್ ಕನ್ಸ್ಟ್ರಕ್ಚನ್ ಕೆಲಸಗಾರರನ್ನೂ ಟಾರ್ಗೆಟ್ ಮಾಡಿ ಮೊಬೈಲ್ ಕಳ್ಳತನ ಮಾಡುತ್ತಿದ್ದರು. ಇಬ್ಬರು ನಚಿಕೇತ್ ಪಾರ್ಕ್ ಮತ್ತು ಮೂವರು ಜಿಕೆ ಡಬ್ಲ್ಯೂ ಲೇಔಟ್ ಬಳಿ ಬಂಧಿಸಿದ್ದು, https://ainlivenews.com/do-not-cut-nails-on-this-day-for-any-reason-difficult-poverty-is-rampant/ ಬಂಧಿತರಿಂದ ಒಟ್ಟು 6 ಲಕ್ಷ ಮೌಲ್ಯದ 38 ಮೊಬೈಲ್ ಮತ್ತು 8 ಬೈಕ್ ಗಳು ವಶಕ್ಕೆ ಪಡೆಯಲಾಗಿದೆ. ಇನ್ನೂ ಘಟನೆ ಸಂಬಂಧ ಗೋವಿಂದರಾಜನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರು: ಗೋವಿಂದಪುರ ಪೊಲೀಸರ ಕಾರ್ಯಾಚರಣೆ ನಡೆಸಿ ಒರಿಸ್ಸಾದಿಂದ ಬೆಂಗಳೂರಿಗೆ ಗಾಂಜಾ ಸಾಗಾಟ ಮಾಡ್ತಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕೇರಳ ಮೂಲದ ಅಚ್ಚು, ಬೆಂಗಳೂರು ಮೂಲದ ಜಮೀರ್ ಹಾಗೂ ಆತನ ಪತ್ನಿ ರೇಷ್ಮಾ ಬಂಧಿತ ಆರೋಪಿಗಳಾಗಿದ್ದು, ಒರಿಸ್ಸಾ ಮತ್ತು ಆಂಧ್ರ ಭಾಗದಲ್ಲಿ ಕ್ವಿಂಟಾಲ್ ಗಟ್ಟಲೇ ಗಾಂಜಾ ಸಂಗ್ರಹ ಮಾಡಿ ಸಂಗ್ರಹಿಸಿದ್ದ ಗಾಂಜಾವನ್ನು ಹೊಸ ವರ್ಷಾಚರಣೆ ಸಂದರ್ಭದಲ್ಲಿ ಬೆಂಗಳೂರು, ಕೇರಳದಲ್ಲಿ ಮಾರಲು ಯೋಜಿಸಿದ್ದರು. ಜಮೀರ್ ಮತ್ತು ರೇಷ್ಮಾ ದಂಪತಿ ಬೆಂಗಳೂರಿನಲ್ಲಿ ಮತ್ತು ಡ್ರಗ್ ಪೆಡ್ಲರ್ ಅಚ್ಚು ಕೇರಳದಲ್ಲಿ ಗಾಂಜಾ ಮಾರಲು ನಿರ್ಧರಿಸಿದ್ದನು.. https://ainlivenews.com/do-not-cut-nails-on-this-day-for-any-reason-difficult-poverty-is-rampant/ ಸಂಗ್ರಹಿಸಲಾಗಿದ್ದ ಗಾಂಜಾ ಅನ್ನು ಬೆಂಗಳೂರು ಮತ್ತು ಕೇರಳಕ್ಕೆ ಸಾಗಿಸಲು ಆರೋಪಿಗಳು ಸೆಲ್ಫ್ ಡ್ರೈವಿಂಗ್ ಕಾರು ಬಾಡಿಗೆ ಪಡೆದಿದ್ದರು. ಬಳಿಕ, ಬೆಡ್ಶೀಟ್ನಲ್ಲಿ ಗಾಂಜಾ ತುಂಬಿ, ಕಾರಿನಲ್ಲಿ ಬೆಂಗಳೂರಿಗೆ ತರುತ್ತಿದ್ದರು. ಗಾಂಜಾ ತರುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಗೋವಿಂದಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಪೊಲೀಸರು ತಪಾಸಣೆ ನಡೆಸಿದಾಗ ಕಾರಿನಲ್ಲಿ 3 ಕೋಟಿ ರೂ. ಮೌಲ್ಯದ ಗಾಂಜಾ ಪತ್ತೆಯಾಗಿದೆ. ಕೂಡಲೆ ಆರೋಪಿಗಳನ್ನು ವಶಕ್ಕೆ ಪಡೆದು,…
ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಐದು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯವೂ ಪರ್ತ್‌ನಲ್ಲಿ ನಡೆಯುತ್ತಿದೆ. ಭರ್ಜರಿ ಓಪನಿಂಗ್ ತೆಗೆದುಕೊಂಡಿದ್ದ ಕನ್ನಡಿಗ ಕೆ.ಎಲ್ ಅವರು ವಿವಾದಾತ್ಮಕ ತೀರ್ಪಿಗೆ ಔಟ್ ಆಗಿದ್ದು ಅಭಿಮಾನಿಗಳಿಗೆ ನಿರಾಸೆಯಾಗಿದೆ. ಹೌದು ಟಾಸ್ ಗೆದ್ದು ಮೊದಲ ಬ್ಯಾಟ್ ಮಾಡಿದ ಭಾರತ 32 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡಿತ್ತು. ಪರಿಸ್ಥಿತಿ ಹೀಗಿದ್ದರೂ ಆರಂಭಿಕರಾಗಿ ಕಣಕ್ಕೆ ಇಳಿದಿದ್ದ ರಾಹುಲ್ ನಿಧಾನವಾಗಿ ಬ್ಯಾಟ್ ಬೀಸಿ ಇನ್ನಿಂಗ್ಸ್ ಕಟ್ಟುತ್ತಿದ್ದರು. ಭಾರತ ಇನ್ನಿಂಗ್ಸ್‌ನ 23 ಓವರ್ ಅನ್ನು ಸ್ಟ್ರಾಕ್ ಎಸೆಯುತ್ತಿದ್ದರು. ಎರಡನೇ ಎಸೆತದ ವೇಳೆ ಸ್ಟೈಕ್‌ನಲ್ಲಿ ರಾಹುಲ್ ಬಾಲನ್ನು ತಡೆಯಲು ಯತ್ನಿಸಿದರು. ಆದರೆ ಬಾಲ್ ಬ್ಯಾಟ್‌ನ ಎಡ್ಜ್ ಬಳಿ ಸಾಗಿ ವಿಕೆಟ್ ಕೀಪರ್ ಕೈ ಸೇರಿತು. https://ainlivenews.com/do-not-cut-nails-on-this-day-for-any-reason-difficult-poverty-is-rampant/ ಆಸ್ಟ್ರೇಲಿಯಾದ ಆಟಗಾರರು ಔಟ್ ಮನವಿ ಸಲ್ಲಿಸಿದರೂ ಫೀಲ್ಡ್ ಅಂಪೈರ್ ಔಟ್ ನೀಡಿರಲಿಲ್ಲ. ಹೀಗಾಗಿ ಆಸೀಸ್ ಆಟಗಾರರು ಡಿಆರ್‌ಎಸ್ (DRS) ಮನವಿ ಮಾಡಿದರು. ರಿಪ್ಲೈ ವೇಳೆ ಚೆಂಡು ಬ್ಯಾಟ್‌ಗೆ ತಾಗಿದೆಯೇ ಅಥವಾ ಪ್ಯಾಡ್‌ಗೆ ತಾಗಿದೆಯೇ ಎಂಬುದು ಸ್ಪಷ್ಟವಾಗಿರಲಿಲ್ಲವಾದರೂ, ಸ್ನಿಕ್ಕೋಮೀಟರ್…