ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ರಬಕವಿಯ ಶ್ರೀ ಶಂಕರಲಿಂಗ ದೇವಸ್ಥಾನ ಟ್ರಸ್ಟ್ ಇದರ ಅಡಿಯಲ್ಲಿ ನಡೇಯುವ ಜೂನ್ ತಿಂಗಳ ೫, ೬ ಮತ್ತು ೭, ೨೦೨೫ ರಂದು ಶ್ರೀ ಹನುಮಾನ್ ದೇವರ ನೀರೋಕಳಿ ಮತ್ತು ಹಾಲೋಕಳಿ ಜರುಗಲಿದೆ.
ಅದಕ್ಕೆ ಪೂರ್ವಭಾವಿಯಾಗಿ ನಾಳೆ ತಾ. ೮-೫-೨೦೨೫ ಗುರುವಾರ ಬೆಳಿಗ್ಗೆ ೧೦ ಗಂಟೆಗೆ ಓಕುಳಿ ಹೊಂಡದ ಪೂಜಾ ಕೈಂಕರ್ಯವನ್ನು ನಗರದ ಶ್ರೀ ನಾಯಕರು, ಶ್ರೀ ಗೌಡರು, ಟ್ರಸ್ಟ್ ಸದಸ್ಯರು ಮತ್ತು ಎಲ್ಲ ಸದ್ಭಕ್ತರ ಸಮ್ಮುಖದಲ್ಲಿ ಜರುಗಲಿದೆ.
ನಿಮಗೆ ರಾತ್ರಿ ಮಲಗುವಾಗ ನರ ನೋವು ಬಂದರೆ ನಿರ್ಲಕ್ಷ್ಯ ಬೇಡ, ತಪ್ಪದೇ ಈ 3 ಪರೀಕ್ಷೆಗಳನ್ನು ಮಾಡಿಸಿ!
ಎಲ್ಲರೂ ಈ ಪೂಜೆಯಲ್ಲಿ ಪಾಲ್ಗೊಳ್ಳಬೇಕೆಂದು ತಮ್ಮೆಲ್ಲರಲ್ಲಿ ವಿನಂತಿ. ಇದೇ ತಿಂಗಳ ೧೬ ರಿಂದ ದೇವರಿಗೆ ಐದು ವಾರ ಹಿಡಿಯುವುದು ಇದೆ. ಜೂನ್ ೧೧ ರಂದು ಕಾರಹುಣ್ಣಿಮೆ ನಿಮಿತ್ತ ಎತ್ತುಗಳನ್ನು ಓಡಿಸುವುದು ಇದೇ ಎಂದು , ಶ್ರೀ ಶಂಕರಲಿಂಗ ದೇವಸ್ಥಾನ ಟ್ರಸ್ಟ್ ಅಧ್ಯಕ್ಷರು ಬಾಲಚಂದ್ರ ಉಮದಿ ಹೇಳಿದರು.