ಹಾಸನ/ಶಿವಮೊಗ್ಗ: ಹಾಸನದಲ್ಲಿ ಮಹಾಮಾರಿ ಹೃದಯಾಘಾತಕ್ಕೆ ಒಂದೂವರೆ ತಿಂಗಳ ಬಾಣಂತಿ ಬಲಿಯಾಗಿದ್ದು, ಈ ಮೂಲಕ ಹಾರ್ಟ್ ಅಟ್ಯಾಕ್ನಿಂದ ಸಾವನ್ನಪ್ಪಿದವರ ಸಂಖ್ಯೆ 24ಕ್ಕೆ ಏರಿಕೆಯಾಗಿದೆ.
ಹಾಸನ ಮೂಲದ ಹರ್ಷಿತಾ (22) ಶಿವಮೊಗ್ಗ ಜಿಲ್ಲೆಯಲ್ಲಿ ಹೃದಯಾಘಾತ ದಿಂದ ಸಾವಪ್ಪಿದ್ದಾರೆ. ಒಂದೂವರೆ ತಿಂಗಳ ಬಾಣಂತಿಯಾಗಿದ್ದ ಹರ್ಷಿತಾ ಹಾಸನದ ಕೊಮ್ಮೆನಹಳ್ಳಿಯವರಾಗಿದ್ದು, ಬಾಣಂತನಕ್ಕೆಂದು ಶಿವಮೊಗ್ಗದ ಆಯನೂರಿಗೆ ಹೋಗಿದ್ದರು. ಭಾನುವಾರ ರಾತ್ರಿ ಕಾಣಿಸಿಕೊಂಡಿದ್ದ ಎದೆನೋವು ಕಾಣಿಸಿಕೊಂಡಿದ್ದು, ಅಂದೇ ಹಾಸನದಲ್ಲಿದ್ದ ಪತಿಯನ್ನು ಕರೆಸಿಕೊಂಡಿದ್ದಾರೆ. ಬೆಳಗ್ಗೆ ಆಯನೂರು ಆಸ್ಪತ್ರೆಗೆ ಆಂಬುಲೆನ್ಸ್ನಲ್ಲಿ ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗಮಧ್ಯೆ ಸಾವಪ್ಪಿದ್ದಾರೆ.
ಇದಲ್ಲದೇ ಹೊಳೆನರಸೀಪುರ ತಾಲೂಕಿನ ಸೋಮನಹಳ್ಳಿ ಗ್ರಾಮದಲ್ಲಿ 27 ವರ್ಷದ ಸಂಜಯ್ ಎಂಬಾತ ಕೂಡ ಹೃದಯಸ್ತಂಭನದಿಂದ ಸಾವನ್ನಪ್ಪಿದ್ದರು. ಸೋಮವಾರ ಒಂದೇ ದಿನ ಹಾಸನ ಜಿಲ್ಲೆಯಲ್ಲಿ ಆರು ಹೃದಯಾಘಾತ ಪ್ರಕರಣ ವರದಿಯಾಗಿದ್ದು, ಜೂನ್ 27 ರಂದು ಈಶ್ಚರಪ್ಪ ಹಾಗು ಜೂನ್ 30 ರಂದು ಕುಮಾರ್(53) ಲೇಪಾಕ್ಷಿ(51), ಮುತ್ತಯ್ಯ(58) ಸತ್ಯನಾರಾಯಣ ರಾವ್(63) ಹಾಗು ಸಂಜಯ್(27) ಮೃತಪಟ್ಟಿದ್ದಾರೆ. ಇನ್ನೂ 40 ದಿನಗಳಲ್ಲಿ 24 ಜನರಿಗೆ ಹೃದಯಾಘಾತವಾಗಿದ್ದ ಹಿನ್ನೆಲೆ ಅಸಹಜ ಸಾವು ಪ್ರಕರಣಗಳಲ್ಲಿ ಮರಣೋತ್ತರ ಪರೀಕ್ಷೆ ನಡೆಸಲು ಸೂಚಿಸಲಾಗಿದೆ.