ಚಾಮರಾಜನಗರ: ರಾಜ್ಯದ ಹುಲಿ ಸಂರಕ್ಚಿತ ಅರಣ್ಯ ಪ್ರದೇಶಗಳಲ್ಲಿ ಒಂದಾಗಿರುವ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರದಲ್ಲಿ ಪ್ರವಾಸಿಗರ ಮುಂದೆಯೇ ಹುಲಿಯೊಂದು ಜಿಂಕೆಯನ್ನು ಅಟ್ಟಾಡಿಕೊಂಡು ಬೇಟೆಯಾಡಿದೆ.
ಬಂಡೀಪುರ ಸಫಾರಿ ವಲಯದ ತಾವರೆಕಟ್ಟೆ ಕೆರೆ ಬಳಿ ಪ್ರವಾಸಿಗರ ಮುಂದೆಯೇ ಆಹಾರ ಅರಸುತ್ತಿದ್ದ ಜಿಂಕೆ ಮೇಲೆ ಹುಲಿ ದಾಳಿ ನಡೆಸಿ ತನ್ನ ಭೇಟೆಯನ್ನು ಹೊತ್ತೊಯ್ದಿದೆ.
ಜಿಂಕೆಯನ್ನು ಭೇಟೆಯಾಡಿ ಜೀವ ಹೋಗುವವರೆಗೂ ಕಾದು, ನಂತರ ಸತ್ತ ಜಿಂಕೆಯನ್ನು ಪ್ರವಾಸಿಗರ ಮುಂದೇನೇ ಎಳೆದುಕೊಂಡು ಹೋದ ದೃಶ್ಯ ಪ್ರವಾಸಿಗರಿಗೆ ಥ್ರಿಲ್ ಎನಿಸಿದೆ.
ಅತಿ ಹುಲಿ ವಾಸಸ್ಥಾನವಾದ ಬಂಡೀಪುರದಲ್ಲಿ ರಜಾ ದಿನಗಳಾದ ಕಾರಣ ಭಾರಿ ಸಂಖ್ಯೆಯಲ್ಲಿ ಹುಲಿ ನೋಡಲೇಂದೆ ಪ್ರವಾಸಿಗರು ಹೆಚ್ಚಾಗಿ ದೇಶ ವಿದೇಶಗಳಿಂದ ಆಗಮಿಸುತ್ತಾರೆ.
ಹಲವಾರು ಬಾರಿ ಹುಲಿ ಕಾಣಸಿಗದೆ ಬೇಸರಿಸಿಕೊಂಡು ಪ್ರವಾಸಿಗರು ವಾಪಸ್ಸು ತೆರಳೋದು ಹೆಚ್ಚು. ಅಂತಹದರಲ್ಲಿ ಜಿಂಕೆಯನ್ನು ಹುಲಿ ಭೇಟಿಯಾಡುವ ಅಪರೂಪದ ದೃಶ್ಯ ಕಂಡು ಹುಲಿ ಪ್ರಿಯರು ಫುಲ್ ದಿಲ್ ಖುಷ್ ಆಗಿದ್ದಾರೆ.ಇದೀಗ ಈ ಹುಲಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ಲಾಗಿದೆ.