ಢಾಕಾ: ಬಾಂಗ್ಲಾದೇಶದ ಜನಪ್ರಿಯ ನಟಿ ನುಸ್ರತ್ ಫರಿಯಾ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಆ ದೇಶದ ಪೊಲೀಸರು ಆಕೆಯನ್ನು ಕೊಲೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಬಂಧಿಸಿದರು. ಇತ್ತೀಚೆಗೆ, ನಟಿ ಫರಿಯಾ ಅವರನ್ನು ಥೈಲ್ಯಾಂಡ್‌ಗೆ ಪ್ರಯಾಣಿಸುತ್ತಿದ್ದಾಗ ಢಾಕಾ ಶಹಜಲಾಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಯಿತು.
ನುಸ್ರತ್ ಫರಿಯಾರನ್ನು ಬಂಧಿಸಿ ಢಾಕಾದ ವಟರಾ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. 2023ರಲ್ಲಿ ಬಿಡುಗಡೆಯಾದ `ಮುಜಿಬ್: ದಿ ಮೇಕಿಂಗ್ ಆಫ್ ಎ ನೇಷನ್’ ಚಿತ್ರದಲ್ಲಿ ಫರಿಯಾ ಹಸೀನಾ ಪಾತ್ರದಲ್ಲಿ ನುಸ್ರತ್ ಫರಿಯಾ ನಟಿಸಿದ್ದರು.
ಈ 3 ರಾಶಿಯವರು ತಾಮ್ರದ ಉಂಗುರ ಧರಿಸುವುದರಿಂದ ಬದಲಾಗುತ್ತೆ ಅದೃಷ್ಟ: ಹಣದ ರಾಶಿಯೇ ಹರಿದು ಬರುತ್ತಂತೆ!
ನಿರ್ದೇಶಕ ಶ್ಯಾಮ್ ಬೆನೆಗಲ್ ನಿರ್ದೇಶಿಸಿದ ಈ ಚಿತ್ರ, ಬಾಂಗ್ಲಾದೇಶ ಮತ್ತು ಭಾರತದ ಜಂಟಿಯಾಗಿ ನಿರ್ಮಾಣ ಮಾಡಿತ್ತು. ನುಸ್ರತ್, ರೇಡಿಯೋ ಜಾಕಿ ಮತ್ತು ನಿರೂಪಕಿಯಾಗಿ ವೃತ್ತಿಜೀವನವನ್ನು ಪ್ರಾರಂಭಿಸಿದರು. 2015ರಲ್ಲಿ ಬಿಡುಗಡೆಯಾದ `ಆಶಿಕಿ: ಟ್ರೂ ಲವ್’ ಚಿತ್ರದ ಮೂಲಕ ನುಸ್ರತ್ ಸಿನಿರಂಗಕ್ಕೆ ಪದಾರ್ಪಣೆ ಮಾಡಿದ್ದರು. ನುಸ್ರತ್ ಭಾರತೀಯ ಚಿತ್ರಗಳಲ್ಲೂ ನಟಿಸಿದ್ದು, ಮಾಡೆಲಿಂಗ್‌ನಲ್ಲಿ ಸಕ್ರಿಯರಾಗಿದ್ದರು.