ಹುಬ್ಬಳ್ಳಿ : ಬಸನಗೌಡ ಪಾಟೀಲ್ ಯತ್ನಾಳ್ ನಮ್ಮ ಪಕ್ಷಕ್ಕೆ ಬಂದ್ರೆ ಕರೆದುಕೊಳ್ಳುತ್ತೇವೆ ಎಂದು ಶಾಸಕ ರಾಜು ಕಾಗೆ ಪ್ರತಿಕ್ರಿಯಿಸಿದ್ದಾರೆ. ಹುಬ್ಬಳ್ಳಿಯಲ್ಲಿ ಮಾಧ್ಯಮದವರೊಂದಿಗೆ ಶಾಸಕ ರಾಜು ಕಾಗೆ ಪ್ರತಿಕ್ರಿಯೆ ನೀಡಿದರು.
ಹೈಕಮಾಂಡ್ ಜೊತೆಗೆ ಚರ್ಚೆ ಮಾಡಿ ಕರೆದುಕೊಂಡು ಬನ್ನಿ ಅಂದ್ರೆ ಸ್ವಾಗತ ಮಾಡುತ್ತೀನಿ. ನಾನೇ ಬಸನಗೌಡ ಪಾಟೀಲ್ ಯತ್ನಾಳರನ್ನು ಕಾಂಗ್ರೆಸ್ ಗೆ ಕರೆದುಕೊಂಡು ಬರುತ್ತೇನೆ. ನನಗೆ ಜಾವಾಬ್ದಾರಿ ಕೊಟ್ಟರೆ ಕರೆದುಕೊಂಡು ಬರುತ್ತೇನೆ ಎಂದರು.
ಯತ್ನಾಳ್ ಬೆಂಬಲಿಸಿದ ಸ್ವಾಮೀಜಿಗಳ ನಿರ್ಧಾರ ತಪ್ಪು ; ವಿಜಯಾನಂದ ಕಾಶಪ್ಪನವರ್
ಇನ್ನೂ ಬೆಲೆ ಏರಿಕೆಯಿಂದ ಅಷ್ಟೇನೂ ಹೊರೆ ಆಗೋದಿಲ್ಲಾ ನಮಗೂ ಇತಿ ಮಿತಿ ಇದೆ. ಹೊಸ ಬಸ್ ನಿಲ್ದಾಣ ನಿರ್ಮಾಣ, ಹೊಸ ಬಸ್ ಖರೀದಿ ಮಾಡುತ್ತಿದ್ದೇವೆ. ಸದ್ಯದ ವ್ಯವಸ್ಥೆ ಸರಿಪಡಿಸಬೇಕು. ನೋ ಪ್ರಾಪಿಟ್ , ನೋ ಲಾಸ್ ನಲ್ಲಿ ಸಂಸ್ಥೆ ನಡೆಯಬೇಕು. ಐದು ಗ್ಯಾರಂಟಿ ಜನರಿಗೆ ಉಪಯೋಗ ಆಗುತ್ತಿದೆ. ಅಂದು ನಮ್ಮ ಯೋಜನೆಗಳನ್ನ ಯಾರು ವಿರೋಧ ಮಾಡುತ್ತಿದ್ದರು ಅವರೇ ನಮ್ಮನ್ನ ಕಾಫಿ ಮಾಡುತ್ತಿದ್ದಾರೆ. ಸರ್ಕಾರದಲ್ಲಿ ಅಡೆತಡೆ ಸಹಜ ಆದರೆ ಸಿದ್ದರಾಮಯ್ಯ ಪಾರದರ್ಶಕವಾಗಿ ಸರ್ಕಾರ ನಡೆಸುತ್ತಿದ್ದಾರೆ