ಬೆಂಗಳೂರು:- ನಗರದ ಪುರಭವನದಲ್ಲಿ ಇಂದು 2025-26ನೇ ಸಾಲಿನ ಬಿಬಿಎಂಪಿ ಬಜೆಟ್ ಮಂಡನೆ ಆಗಲಿದೆ. ಬಿಬಿಎಂಪಿಯ 2025-26ನೇ ಸಾಲಿನ ಆಯವ್ಯಯವನ್ನು ಚುನಾಯಿತ ಕೌನ್ಸಿಲರ್‌ಗಳ ಅನುಪಸ್ಥಿತಿಯಲ್ಲಿ ಸತತ 5ನೇ ಬಾರಿಗೆ ಅಧಿಕಾರಿಗಳೇ ಮಂಡಿಸುತ್ತಿದ್ದಾರೆ. ಪಾಲಿಕೆ ಇತಿಹಾಸದಲ್ಲೇ ಈ ಸಲ ದಾಖಲೆ ಗಾತ್ರದ ಬಜೆಟ್ ಮಂಡನೆಯಾಗಲಿದೆ
ಹಣಕಾಸು ವಿಭಾಗದ ವಿಶೇಷ ಆಯುಕ್ತ ಡಾ.ಕೆ. ಹರೀಶ್ ಕುಮಾರ್ ಅವರು ಆಡಳಿತಾಧಿಕಾರಿಗಳಿಂದ ಅನುಮೋದನೆ ಪಡೆದ ಮುಂಗಡ ಪತ್ರವನ್ನು ಮಂಡಿಸಲಿದ್ದಾರೆ. ಆಯವ್ಯಯದ ಗಾತ್ರವು 19 ಸಾವಿರ ಕೋಟಿ ರೂ. ದಾಟುವ ಸಾಧ್ಯತೆಗಳಿವೆ. ರಾಜಧಾನಿಯ ಮೂಲಸೌಲಭ್ಯಗಳ ಅಭಿವೃದ್ಧಿಗೆ ರಾಜ್ಯ ಸರಕಾರವು ಬಜೆಟ್‌ನಲ್ಲಿ 7 ಸಾವಿರ ಕೋಟಿ ರೂ. ಅನುದಾನ ಘೋಷಿಸಿದೆ. ಈ ಮೊದಲು 3 ಸಾವಿರ ಕೋಟಿ ರೂ. ನೀಡಲಾಗುತ್ತಿತ್ತು. ಕೇಂದ್ರ ಮತ್ತು ರಾಜ್ಯ ಸರಕಾರದ ಅನುದಾನ, ಸ್ವಂತ ವರಮಾನ ಆಧರಿಸಿ ಲೆಕ್ಕಪತ್ರ ಮಂಡಿಸಲಾಗುತ್ತಿದ್ದು, ವೆಚ್ಚವು 20 ಸಾವಿರ ಕೋಟಿ ರೂ. ಗಡಿ ತಲುಪಲಿದೆ ಎಂದು ಮೂಲಗಳು ತಿಳಿಸಿವೆ.
ಬಿಬಿಎಂಪಿ ಬಜೆಟ್ ನಿರೀಕ್ಷೆಗಳೇನು ?
1. ರಸ್ತೆ ಗುಂಡಿ ಮುಕ್ತಿ, ನಗರದ ಸ್ವಚ್ಛತೆ, ಸುಗಮ ಸಂಚಾರ, ಹಸೀರಕರಣ, ಆರೋಗ್ಯ ಮತ್ತು ಶಿಕ್ಷಣಕ್ಕೆ ಒತ್ತು ಸಿಗಲಿದೆ.
2. ಘನತ್ಯಾಜ್ಯ ನಿರ್ವಹಣೆ ಸಮಸ್ಯೆ ಪರಿಹರಿಸುವ ಯೋಜನೆ ರೂಪಿಸಲಾಗಿದೆ.
3. ಪೂರ್ವ ಮತ್ತು ಪಶ್ಚಿಮ, ಉತ್ತರ ಮತ್ತು ದಕ್ಷಿಣ ಭಾಗದ ಸುರಂಗ ನಿರ್ಮಾಣದ ಯೋಜನೆ ಪ್ರಸ್ತಾಪ ಆಗಲಿದೆ.
4. ರಸ್ತೆಗಳಲ್ಲಿ ನೀರು ನಿಲ್ಲದಂತೆ ಪ್ರವಾಹ ನಿಯಂತ್ರಣಕ್ಕೆ ಯೋಜನೆ ರೂಪಿಸುವ ಸಾಧ್ಯತೆ.
5. ಇಂದಿರಾ ಕ್ಯಾಂಟೀನ್ ಗೆ ಹೆಚ್ಚಿನ ಅನುದಾನ.. ಹೆಚ್ಚುವರಿಯಾಗಿ 52 ಹೊಸ ಇಂದಿರಾ ಕ್ಯಾಂಟೀನ್ ನಿರ್ಮಾಣ ಸಾಧ್ಯತೆ.
6. ಪ್ರತಿ ವಿಧಾನಸಭ ಕ್ಷೇತ್ರಕ್ಕೆ ಅಂಬ್ಯೂಲೆನ್ಸ್ ಘೋಷಣೆ ಸಾಧ್ಯತೆ.
7. ಬಿಬಿಎಂಪಿ 20 ಆಸ್ಫತ್ರೆ ಗಳನ್ನ ಮೇಲ್ದರ್ಜೆಗೆ ಏರಿಸಲಿದ್ದಾರೆ.
8. ಬಿಬಿಎಂಪಿ ಶಾಲೆ.ಕಾಲೇಜು ಗಳಲ್ಲಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ.. ಪ್ರತಿ ಶಾಲೆ.ಕಾಲೇಜು ಗಳಿಗೂ ಮೂಲಭೂತ ಸೌಕರ್ಯ ವ್ಯವಸ್ಥೆ.
9. ಸರ್ಕಾರದ ಸಹಭಾಗಿತ್ವದಲ್ಲಿ ಬೃಹತ್ ಕಾಮಗಾರಿಗಳ ನಿರ್ಮಾಣಕ್ಕೆ ನಿಗಮ ಸ್ಥಾಪನೆ ಸಾಧ್ಯತೆ
10. ನಗರದ ಟ್ರಾಫಿಕ್ ಕಂಟ್ರೋಲ್‌ಗೆ ಪ್ಲೈಓವರ್.. ಟನಲ್ ರಸ್ತೆ, ಪೆರಿಫೆರಲ್ ರಿಂಗ್ ರೋಡ್ ನಿರ್ಮಾಣ.
11. ಮಳೆಗಾಲದಲ್ಲಿ ರಾಜಕಾಲುವೆ ನೀರು ರಸ್ತೆಗೆ ಬರದಂತೆ ತಡೆಗೋಡೆ ನಿರ್ಮಾಣ.
12. ಮೆಟ್ರೋ ನಿಗಮದ ಜೊತೆ ಸೇರಿ ಡಬಲ್ ಡೆಕ್ಕರ್ ರಸ್ತೆ ನಿರ್ಮಾಣ ಸಾಧ್ಯತೆ.
13. ಸಾರ್ವಜನಿಕರಿಗೆ ತೆರಿಗೆ ಕಟ್ಟಲು ದಿನದ 24 ಗಂಟೆ ಅನ್ ಲೈನ್ ವ್ಯವಸ್ಥೆ.
14. 14. ಪ್ರಸಕ್ತ ವರ್ಷ 6 ಸಾವಿರ ಕೋಟಿ ತೆರಿಗೆ ವಸೂಲಿಗೆ ಪ್ರಸ್ತಾವನೆ ಸಾಧ್ಯತೆ
15. ಮಳೆಗಾಲದಲ್ಲಿ ಒಣಗಿದ ಮರ.ಕೊಂಬೆಗಳ ತೆರವಿಗೆ ಹೆಚ್ಚಿನ ಅನುದಾನ. ಮಳೆಗಾಲದಲ್ಲಿ ಒಣಗಿದ ಮರ.ಕೊಂಬೆಗಳ ತೆರವಿಗೆ ಹೆಚ್ಚುವರಿ ಸಿಬ್ಬಂದಿಗಳ ನೇಮಕ.