ಈ ಬಾರಿಯ ಮಾರ್ಚ್ ತಿಂಗಳು ಸಿಲಿಕಾನ್ ಸಿಟಿ ಬೆಂಗಳೂರಿಗರಿಗೆ ಸಾಕಪ್ಪಾ ಸಾಕು ಅನ್ನೋ ಹಾಗಾಗಿದೆ. ಮಧ್ಯಾಹ್ನ ಆದ್ರೆ ನೆತ್ತಿ ಸುಡುವ ಬಿಸಿಲಿನ ಶಾಖ ತಾಳಲಾರದೇ ಒದ್ದಾಡುತ್ತಿದ್ದಾರೆ. ಮಾರ್ಚ್ ಆರಂಭದಿಂದಲೂ ಬೆಂಗಳೂರಲ್ಲಿ ಬಿಸಿಲಿನ ಸೆಕೆ ಸುಸ್ತಾಗುವಂತೆ ಮಾಡುತ್ತಿದೆ. ದಿನ ಕಳೆದಂತೆ ತಾಪಮಾನ ಏರಿಕೆಯಾಗುತ್ತಿದೆ.
ಬೆಳಿಗ್ಗೆ ಎದ್ದಾಕ್ಷಣ ಈ ರೀತಿ ಅಗ್ತಿದ್ಯಾ? ಹಾಗಿದ್ರೆ ಇದು ರೋಗದ ಲಕ್ಷಣ!
ತಾಪಮಾನ ಹೆಚ್ಚಳವಾಗುತ್ತಿದ್ದರಿಂದ ಕ್ಷಣಕ್ಕೊಮ್ಮೆ ಒಂದು ಗ್ಲಾಸ್ ನೀರು ಕುಡಿದರೆ ಸಾಕು ಎನ್ನುವಷ್ಟು ದಾಹವಾಗುತ್ತಿದೆ. ಆದರೆ ಬಿರು ಬಿಸಿಲಿನಿಂದ, ಬಿಸಿಗಾಳಿಯಿಂದ, ಬೆವರಿನಿಂದ ದೇಹದಲ್ಲಿ ನೀರಿನ ಅಂಶ ಕಡಿಮೆಯಾಗಿ ಜನರ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ.
ಸದ್ಯ ಎಲ್ಲ ಕಡೆ ಶಾಲೆಗಳು ರಜೆ ಇರುವುದರಿಂದ ಪೋಷಕರು ಮಕ್ಕಳ ಬಗ್ಗೆ ಹೆಚ್ಚಿನ ಹೊತ್ತು ಕೊಟ್ಟು ಬಿಸಿಲಿಗೆ ಕಳುಹಿಸಬಾರದು. ಆಗಾಗ ನೀರು ಕುಡಿಯುವಂತೆ ಹಾಗೂ ನೀರಿನಂಶ ಇರುವಂತ ತಿನಿಸುಗಳನ್ನು ನೀಡಬೇಕು. ಇದರಿಂದ ಆಗುವ ಆರೋಗ್ಯದ ಸಮಸ್ಯೆಗಳನ್ನು ಮೊದಲೇ ತಡೆಯಬಹುದಾಗಿದೆ. ಹಾಗೇ ಗರ್ಭಿಣಿಯರು, ಮಹಿಳೆಯರು, ವೃದ್ಧರು ಬಹುತೇಕ ನೆರಳಿನ ಪ್ರದೇಶವನ್ನೇ ಆಯ್ಕೆ ಮಾಡಿಕೊಂಡು ಸಂಜೆ ಮೇಲೆ ಹೊರ ಬಂದರೆ ಆರೋಗ್ಯಕ್ಕೆ ಇನ್ನಷ್ಟು ಒಳ್ಳೆಯದಾಗಲಿದೆ.
ಈ ಬಿರುಬಿಸಿಲಿಗೆ ಹೊರ ಬರುವುದರಿಂದ ತಲೆನೋವು, ತಲೆ ತಿರುಗುವಿಕೆ, ಸ್ನಾಯು ಸೆಳೆತ, ತೀವೃ ಹೃದಯ ಬಡಿತ, ವಾಕರಿಕೆ ಅಥವಾ ವಾಂತಿ, ರಕ್ತದೊತ್ತಡ ಕುಸಿಯುವುದು, ಪ್ರಜ್ಞೆ ತಪ್ಪುವಿಕೆ, ಮೂರ್ಛೆ ರೋಗದಂತಹವು ಬರುತ್ತಾವೆ. ಇವುಗಳಿಂದ ನಾವು ಆರೋಗ್ಯವಾಗಿರಲು ಬಿಸಿಲಿನಿಂದ ಅಂತರ ಕಾಯ್ದುಕೊಳ್ಳಬೇಕಾಗಿದೆ.
ಜನರು ಇದಕ್ಕೆಲ್ಲ ಸಿಂಪಲ್ ಆಗಿ ಥಿಂಕ್ ಮಾಡಬೇಕು. ಮನೆಯಲ್ಲೇ ಹೆಚ್ಚು ಹೆಚ್ಚು ನೀರನ್ನು ಕುಡಿಯಬೇಕು. ನಿಂಬೆಹಣ್ಣಿನ ಜ್ಯೂಸ್ ಮಾಡಿಕೊಂಡು ಕುಡಿಯಬೇಕು. ಬೇಸಿಗೆಯಲ್ಲಿ ಹೇಳಿ ಮಾಡಿಸಿದಂತ ಪಾನೀಯ ಎಂದರೆ ಅದು ಮಜ್ಜಿಗೆ. ಇದನ್ನು ಅನ್ನದಲ್ಲೋ ಅಥವಾ ಹಾಗೇ ಕುಡಿಯಿರಿ. ಲಸ್ಸಿ, ಹಣ್ಣಿನ ಜ್ಯೂಸ್, ಓಆರ್ಎಸ್ ಹಾಗೂ ನೀರಿನ ಅಂಶ ಹೆಚ್ಚಾಗಿರುವ ತಾಜಾ ಹಣ್ಣುಗಳನ್ನು ಅಧಿಕವಾಗಿ ತಿನ್ನಬೇಕು. ಇದರಿಂದ ದೇಹದಲ್ಲಿ ನೀರಿನ ಪ್ರಮಾಣ ಸಮತೋಲನದಲ್ಲಿ ಇರುತ್ತದೆ.
ಬಿಸಿಲಿನ ಶಾಖದಲ್ಲೇ ಕೆಲಸ ಮಾಡುವಾಗ ಇಷ್ಟು ನಿಮಿಷಗಳಿಗೆ ಒಮ್ಮೆ ಎನ್ನುವಂತೆ ವಿಶ್ರಾಂತಿ ತೆಗೆದುಕೊಳ್ಳುವುದು ಉತ್ತಮ. ಹೊರಗೆ ಹೋಗುವಾಗ ತಿಳಿ ಬಣ್ಣದ ಸಡಿಲವಾಗಿರುವ ಉಡುಪುಗಳನ್ನು ಧರಿಸಬೇಕು. ಅಲ್ಲದೇ ತಲೆಗೆ ಹ್ಯಾಟ್, ಕೊಡೆ, ಸನ್ಗ್ಲಾಸ್, ಟವೆಲ್ಗಳನ್ನು ಹೋಗುವಾಗ ತೆಗೆದುಕೊಂಡು ಹೋಗಿ. ಇದರಿಂದ ಬಿಸಿಲಿನ ಶಾಖದಿಂದ ಕಾಪಾಡಿಕೊಳ್ಳಬಹುದು.