ತುಮಕೂರು : ಜನವಸತಿ ಪ್ರದೇಶದಲ್ಲಿ ಕರಡಿ ಕಾಣಸಿಕೊಂಡಿದ್ದು, ಜನರಲ್ಲಿ ಆತಂಕ ಸೃಷ್ಟಿಯಾಗಿದೆ. ತುಮಕೂರು ಜಿಲ್ಲೆಯ ಕೊರಟಗೆರೆ ಪಟ್ಟಣದಲ್ಲಿ ಘಟನೆ ನಡೆದಿದೆ.
ಕೊರಟಗೆರೆಯ 15ನೇ ವಾರ್ಡ್ ನ ವಾಲ್ಮೀಕಿ ನಗರದಲ್ಲಿ ಕರಡಿ ಪ್ರತ್ಯಕ್ಷವಾಗಿದ್ದು, ತಡರಾತ್ರಿ ಕರಡಿ ಓಡಾಟದಿಂದ ಸ್ಥಳೀಯರು ಭಯಭೀತರಾಗಿದ್ದಾರೆ. ಪಟ್ಟಣ ಸಮೀಪದ ಬೆಟ್ಟದಿಂದ ಕರಡಿ ಬಂದಿರುವ ಶಂಕೆ ವ್ಯಕ್ತವಾಗಿದೆ.
ವಾಲ್ಮೀಕಿ ನಗರದ ಸುತ್ತಮುತ್ತ ಕೆಲ ಹೊತ್ತು ಕರಡಿ ತಿರುಗಾಡಿದ್ದು, ಸ್ಥಳೀಯರು ಮೊಬೈಲ್ ನಲ್ಲಿ ಕರಡಿ ಓಡಾಟದ ವಿಡಿಯೋ ಸೆರೆ ಹಿಡಿದಿದ್ದಾರೆ. ಕೂಡಲೇ ಕರಡಿಯನ್ನ ಸೆರೆಹಿಡಿಯುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.