ಬೆಳಗಾವಿ: ಬೆಳಗಾವಿಯ ಗಣಪತಗಲ್ಲಿ ಸೇರಿದಂತೆ ಮಾರುಕಟ್ಟೆಯ ವಿವಿಧ ವಿಭಾಗಗಳಲ್ಲಿ ಪಾಲಿಕೆ ಸಿಬ್ಬಂದಿ ಹಾಗೂ ಸಂಚಾರಿ ಪೊಲೀಸರು ಅತಿಕ್ರಮಣ ತೆರವು ಕಾರ್ಯಾಚರಣೆ ನಡೆಸಿದರು.
ತೆಂಗಿನಕಾಯಿ ತಿನ್ನೋದರಿಂದ ಆರೋಗ್ಯಕ್ಕೆ ಎಷ್ಟೆಲ್ಲಾ ಬೆನಿಫಿಟ್ ಗೊತ್ತಾ!? ನೀವು ತಿಳಿಯಿರಿ!
ಜನಸಂಖ್ಯೆ ಹೆಚ್ಚಳದಿಂದಾಗಿ ವಾಹನ ದಟ್ಟನೆಯೂ ಅತಿಯಾಗಿದ್ದು, ಸುಗಮ ಸಂಚಾರ ವಾಹನ ಸವಾರರಿಗೆ ಪಾದಚಾರಿಗಳಿಗೆ ದುಃಸ್ತರವಾಗಿದೆ. ಈ ನಿಟ್ಟಿನಲ್ಲಿ ಬೆಳಗಾವಿ ಮಹಾನಗರ ಪಾಲಿಕೆ ಹಾಗೂ ಸಂಚಾರಿ ಪೊಲೀಸರು ಹಲವಾರು ದಿನಗಳಿಂದ ಬೀದಿಬದಿ ಹಾಗೂ ಇನ್ನಿತರ ವ್ಯಾಪಾರಿಗಳಿಂದಾಗುವ ರಸ್ತೆ ಅತಿಕ್ರಮಣಗಳನ್ನು ಗಣಪತ ಗಲ್ಲಿ ಸೇರಿದಂತೆ ಮಾರುಕಟ್ಟೆಯ ಬೇರೆಬೇರೆ ಭಾಗಗಳಲ್ಲಿ ತೆರವು ಕಾರ್ಯಾಚರಣೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಪಾಲಿಕೆ ಸಿಬ್ಬಂದಿ ಅತಿಕ್ರಮಿತ ವಸ್ತುಗಳನ್ನು ವಶಕ್ಕೆ ಪಡೆದರು. ಅಂಗಡಿ ಮಾಲೀಕರಿಗೆ ಅತಿಕ್ರಮಣ ಮಾಡದಂತೆ ತಿಳಿ ಹೇಳಲಾಯಿತು. ಹಲವು ದಿನಗಳಿಂದ ನಡೆದ ಈ ಜಂಟಿ ಕಾರ್ಯಚರಣೆಗೆ ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗಿದೆ.
ಬಾಳಪ್ಪ ತೇರದಾಳ AIN NEWS ಬೆಳಗಾವಿ