ಬೆಳಗಾವಿ: ಜಮೀನಿನಲ್ಲಿ ಕೆಲಸ ಮಾಡುವ ವೇಳೆ ಹಾವು ಕಚ್ಚಿ ರೈತ ಸಾವನ್ನಪ್ಪಿರುವ ಘಟನೆ ಬೆಳಗಾವಿ ತಾಲೂಕಿನ ಬೆಳವಟ್ಟಿ ಗ್ರಾಮದಲ್ಲಿ ನಡೆದಿದೆ. ರವೀಂದ್ರ ಕಾಂಬ್ಳೆ(38) ಮೃತ ದುರ್ದೈವಿಯಾಗಿದ್ದು, ಇಂದು ಬೆಳಗ್ಗೆ ಗೆಣಸು ಹಚ್ಚಲು ಜಮೀನಿಗೆ ಕೆಲಸಕ್ಕೆ ಹೋಗಿದ್ದ ವೇಳೆ ಗೆಣಸಿನ ಬಳ್ಳಿ ಕೆಳಗೆ ಇದ್ದ ಹಾವು ಕಚ್ಚಿದೆ.
ಟೆಕ್ ಉದ್ಯಮಕ್ಕೆ ಸೆಡ್ಡು: 16ನೇ ವಯಸ್ಸಿನಲ್ಲಿಯೇ 100 ಕೋಟಿ ಮೌಲ್ಯದ ಕಂಪನಿಯ ಮುಖ್ಯಸ್ಥೆ..!
ಬಳ್ಳಿ ಮೇಲೆತ್ತುವಾಗ ಎರಡು ಬಾರಿ ಕೈಗೆ ಕಚ್ಚಿದ್ದು, ಕುಟುಂಬಸ್ಥರು ತಕ್ಷಣ ಬೆಳಗಾವಿ ಬಿಮ್ಸ್ ಆಸ್ಪತ್ರೆಗೆ ರವಾನಿಸಿದ್ದು, ಮಾರ್ಗ ಮಧ್ಯದಲ್ಲಿ ರೈತ ರವೀಂದ್ರ ಮೃತಪಟ್ಟಿದ್ದಾರೆ. ಬಿಮ್ಸ್ ಆಸ್ಪತ್ರೆ ಆವರಣದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆಯಾಗಿದೆ.