ಬೆಳಗಾವಿ:- ಇಲ್ಲಿನ ನ್ಯಾಷನಲ್ ಹೈವೇಯಲ್ಲಿ ಸರಣಿ ಅಪಘಾತ ಸಂಭವಿಸಿದೆ . ಬೆಳಗಾವಿ ಟು ಬೈಲಹೊಂಗಲ ಹೋಗುವ ದಾರಿಯಲ್ಲಿ ಸರ್ಕಾರಿ ಬಸ್ಸು ಮತ್ತು ಟ್ಯಾಂಕರ್ ಹಾಗೂ ಒಂದು ಬೈಕ್ ನಡುವೆ ಸರಣಿ ಅಪಘಾತ ಸಂಭವಿಸಿದ್ದು, ಪ್ಯಾಸೆಂಜರ್ ಗಳಿಗೆ ಯಾವುದೇ ರೀತಿಯ ಹಾನಿಯಾಗಿಲ್ಲ.
ಘಟನೆಯಲ್ಲಿ ಸಣ್ಣ ಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನಾ ಸ್ಥಳಕ್ಕೆ ಹಿರೇ ಬಾಗೇವಾಡಿ ಪೊಲೀಸರು ಆಗಮಿಸಿ ಅಂಬುಲೆನ್ಸ್ ಮುಖಾಂತರ ಗಾಯಾಳುಗಳನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ , ಚಿಕಿತ್ಸೆ ಪಡೆಯುತ್ತಿದ್ದಾರೆ.