Close Menu
Ain Live News
    Facebook X (Twitter) Instagram YouTube
    Sunday, July 6
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    ಬಳ್ಳಾರಿ: ಉಸ್ತುವಾರಿ ಸಚಿವರೇ ನೀವು ನೋಡಲೇಬೇಕಾದ ಸ್ಟೋರಿ -ಸರ್ಕಾರಿ ಶಾಲೆ ಅಂದ್ರೆ ಯಾಕೆ ಈ ಅಸಡ್ಡೆ!

    By AIN AuthorDecember 17, 2023
    Share
    Facebook Twitter LinkedIn Pinterest Email
    Demo

    ಬಳ್ಳಾರಿ:-ಶಾಸಕರೇ ,ಸಚಿವರೇ, ಬಳ್ಳಾರಿ ಉಸ್ತುವಾರಿ ಸಚಿವರೇ ಸ್ವಲ್ಪ ಈ ಕಡೇ ಗಮನಹರಿಸಿ. ಸರ್ಕಾರಿ ಶಾಲೆಗಳನ್ನು ಉಳಿಸಿ ಬೆಳೆಸಬೇಕಾದ ಜನಪ್ರತಿನಿಧಿಗಳೆ ಏಕೆ ಈ ನಿರ್ಲಕ್ಷ್ಯೆ……?

    ಹೌದು. ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳೆಂದರೇ ಯಾಕೆ ಈ ಅಸಡ್ಯೆ ಎಂಬ ಪ್ರಶ್ನೆ ಸಹಜವಾಗಿ ಮೂಡುತ್ತದೆ. ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ಕರೂರು ಗ್ರಾಮದಲ್ಲಿರುವ ಡಾ!ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಯಲ್ಲಿ ಬಡವರು, ಕೂಲಿ ಕಾರ್ಮಿಕರು, ರೈತರು, ದಲಿತರ ಮಕ್ಕಳು ಓದುತ್ತಾರೆ. ಆದರೆ ಸಂಬಂಧಪಟ್ಟ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯದಿಂದ ಈ ಶಾಲೆ ಮೂಲಭೂತ ಸೌಕರ್ಯದಿಂದ ವಂಚಿತವಾಗಿದೆ.

    ಯಾವುದೇ ಮೂಲಭೂತ ಸೌಲಭ್ಯಗಳು ಇಲ್ಲದೇ ಇದ್ದರು ವಿಧ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ಈಗಾಗಲೇ ಕಲ್ಯಾಣ ಕರ್ನಾಟಕ ಶೈಕ್ಷಣಿಕವಾಗಿ ಸಾಕಷ್ಟು ಹಿಂದುಳಿದಿದೆ. ಈ ಭಾಗವನ್ನು ಅಭಿವೃದ್ದಿ ಪಡಿಸುವ ಸಲುವಾಗಿ 371(ಜೆ)ಯನ್ನು ಜಾರಿಗೊಳ್ಳಿಸಲಾಗಿದೆ. ಎಪಿಎಂಸಿ ಕಟ್ಟಡದಲ್ಲಿ ಅನಧಿಕೃತವಾಗಿ 7 ವರ್ಷಗಳಿಂದ ತರಗತಿ ನಡೆಸಿಕೊಂಡು ಸಿಬ್ಬಂದಿಗಳು ಬಂದಿದ್ದಾರೆ.

    ಬಾಲಕರು – 140, ಬಾಲಕೀಯರು -90, ಒಟ್ಟು 230 ವಿಧ್ಯಾರ್ಥಿಗಳನ್ನು ಹೊಂದಿರುವ ಅಂಬೇಡ್ಕರ್ ವಸತಿ ಶಾಲೆಯಲ್ಲಿ ಸುಮಾರು 230 ಮಕ್ಕಳಿಗೆ ಕೇವಲ 3 ಶೌಚಾಲಯಗಳು ಮಾತ್ರ ಇವೆ. ನಾಮಕಾವಸ್ಥೆಗೆ ಮಾತ್ರ ಶೌಚಾಲಯ ಇದ್ದು, ಹೊರಗಡೆ ಬಯಲು ಪ್ರದೇಶವೇ ಮಕ್ಕಳಿಗೆ ಶೌಚಾಲಯವಾಗಿದೆ.

    ಮುಖ ತೊಳೆಯಲು, ಸ್ನಾನ ಮಾಡಲು, ಬಟ್ಟೆತೊಳೆಯಲು ಕೇವಲ ಎರಡೇ ಎರಡು ಕೊಳಾಯಿ(ನಲ್ಲಿ) ಮಾತ್ರ, ಭತ್ತದ ರಾಶಿಗಳ ನಡುವೆ ವಿಧ್ಯಾಭ್ಯಾಸ ಮಾಡಲಾಗುತ್ತಿದೆ. ಭತ್ತದ ರಾಶಿಗಳಿಂದ ಬರುವ ಧೂಳು, ಕಸ, ಜನಜಂಗೂಳಿಯ ನಡುವೆ ಊಟ,ಆಟ,ಪಾಟದ ಕಲಿಕೆ,. ಆಟವಾಡಲು ಕ್ರೀಡಾಂಗಣ ವ್ಯವಸ್ಥೆಯಿಲ್ಲ, ಸುತ್ತಲು ನಿರಂತರ ದನಕರಗಳ ಒಡಾಟ, ಸ್ವಚ್ಚತೆ ಸಂಪೂರ್ಣ ಮರೀಚಿಕೆ ಆಗಿದೆ.

    ಕುಣಿಗಳಲ್ಲಿ ನಿಂತ ನೀರಿನಲ್ಲಿ ದನಗಳ ಮಲಗುವಿಕೆ, ಸೊಳ್ಳೆಗಳ ತಾಣವಾಗಿದೆ. ವಿಧ್ಯಾರ್ಥಿಗಳನ್ನು ರೋಗರುಜಿನಿಗಳಿಗೆ ಆಹ್ವಾನಿಸುತ್ತಿರುವ ಸುತ್ತಲಿನ ಪರಿಸರ ಮತ್ತು ಪರಿಸ್ಥಿತಿ. ಎಪಿಎಂಸಿ ವಾಣಿಜ್ಯ ಕಟ್ಟಡಗಳಲ್ಲಿ ರಸ್ತೇಯ ಧೂಳಿನ ನಡುವೇ ವಿಧ್ಯಾರ್ಥಿಗಳ ಕಲಿಕೆ ಮಾಡುತ್ತಿದ್ದಾರೆ. ರಾತ್ರಿ ವೇಳೆ ಕರೆಂಟ್ ಹೋದರೇ ಪರಿಯ್ಯಾಯ ವ್ಯವಸ್ಥೆ ಇಲ್ಲ. ಪ್ರತಿದಿನ ಕತ್ತಲಲ್ಲೆ ಮಕ್ಕಳು ಊಟ ಮತ್ತು ಕಲಿಕೆ ಮಾಡುತ್ತಿದ್ದಾರೆ. ಗೋಡಾನುಗಳೇ ಇಲ್ಲಿನ ಮಕ್ಕಳಿಗೆ ತರಗತಿ ಕೊಠಡಿಗಳು, ಮತ್ತು ವಸತಿ ನಿಲಯಗಳು.

    ಪ್ರಸ್ತುತ 230 ವಿಧ್ಯಾರ್ಥಿಗಳು ಅಧ್ಯಾಯನ ಮಾಡುತ್ತಿರುವ ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಯ ದುಸ್ಥಿತಿ ಇದಾಗಿದ್ದು ಸಂಬಂಧ ಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳುವಂತೆ ಆಗ್ರಹ ಕೇಳಿ ಬಂದಿದೆ.

    Demo
    Share. Facebook Twitter LinkedIn Email WhatsApp

    Related Posts

    ಪತ್ನಿಗೆ ಚಾಕುವಿನಿಂದ ಇರಿದು ಬರ್ಬರ ಕೊಲೆ..! ಗಂಡ ಎಸ್ಕೇಪ್ – ಅನಾಥವಾಯ್ತು ಮಗು

    July 6, 2025

    KSRTC ಬಸ್ ಮತ್ತು ಕಾರು ನಡುವೆ ಭೀಕರ ಅಪಘಾತ: ಮೂವರು ಸ್ಥಳದಲ್ಲೇ ಸಾವು..!

    July 6, 2025

    ಮಕ್ಕಳ ಹೃದಯದ ಗೆಲುವಿಗಾಗಿ ಸರ್ಕಾರದ ಹೋರಾಟ: ಹಾಸನದಿಂದ ನವ ಚಿಂತನೆ!

    July 6, 2025

    ಪಿಎಂ ವಿಶ್ವಕರ್ಮ ಯೋಜನೆ ಪ್ರಗತಿ ಪರಿಶೀಲನಾ ಸಭೆ

    July 6, 2025

    ಸಿದ್ದರಾಮಯ್ಯ ದೆಹಲಿಗೆ? ನಾಯಕತ್ವ ಬದಲಾವಣೆಗೆ ವೇದಿಕೆ ಸಿದ್ಧ: ವಿಜಯೇಂದ್ರ ಭವಿಷ್ಯ

    July 6, 2025

    ಶಿವಮೊಗ್ಗದಲ್ಲಿ ದೇವರಿಗೆ ಅಪಮಾನ: ಇಬ್ಬರು ಕಿಡಿಗೇಡಿಗಳು ಅರೆಸ್ಟ್..!

    July 6, 2025

    ಚಿಕ್ಕಮಗಳೂರಿನಲ್ಲಿ ಮತ್ತೊಂದು ಹೃದಯಾಘಾತ ದುರಂತ: ಕುಸಿದು ಬಿದ್ದ ವೃದ್ಧ ಸಾವು..!

    July 6, 2025

    ಕೋಲಾರ: ಕೋಮುಲ್‌ ಅಧ್ಯಕ್ಷರಾಗಿ ಶಾಸಕ ಕೆ.ವೈ.ನಂಜೇಗೌಡ ಅವಿರೋಧ ಆಯ್ಕೆ

    July 6, 2025

    ಕೌಟುಂಬಿಕ ಕಲಹ: ದಾವಣಗೆರೆ PSI ತುಮಕೂರಿನಲ್ಲಿ ಆತ್ಮಹತ್ಯೆ..!

    July 6, 2025

    ಹಾರ್ಟ್ ಅಟ್ಯಾಕ್ ಭೂತ: ರಾಜ್ಯದಲ್ಲಿ ಒಂದೇ ದಿನ ಇಬ್ಬರು ಹೃದಯಾಘಾತಕ್ಕೆ ಬಲಿ..!

    July 6, 2025

    ಗಣೇಶ ಮತ್ತು ನಾಗದೇವರ ಮೂರ್ತಿಗೆ ಕಾಲಿನಿಂದ ಒದ್ದು ಅವಮಾನ..!

    July 6, 2025

    ಬೆಂಗೇರಿಯಲ್ಲಿ ಹಿಂದೂ ಮುಸ್ಲಿಂ ಭಾವೈಕ್ಯತೆಯ ಮೊಹರಂ ಹಬ್ಬ ಆಚರಣೆ

    July 6, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.