ಬೆಂಗಳೂರು:- ನಗರದ ಶಿವಾನಂದ ಸರ್ಕಲ್ ಬಳಿಯಿರುವ ʻಬೆಳ್ಳುಳ್ಳಿ ಕಬಾಬ್ʼ ಖ್ಯಾತಿಯ ಚಂದ್ರು ಹೋಟೆಲ್ ಮಳೆ ನೀರಿನಿಂದ ಜಲಾವೃತವಾಗಿದ್ದು, ಭಾರೀ ನಷ್ಟ ತಂದೊಡ್ಡಿದೆ.
ಮದ್ದೂರು ತಾಲೂಕು ಕಚೇರಿ ಭ್ರಷ್ಟಾಚಾರದ ತವರೂರು – ರೈತ ಮುಖಂಡರ ಗಂಭೀರ ಆರೋಪ
ಬೆಳ್ಳುಳ್ಳಿ ಕಬಾಬ್..! ಒನ್ ಮೋರ್ ಒನ್ ಮೋರ್ ಅಂತಿರಬೇಕು.. ಚಟಪಟ… ಚಟಪಟ.. ಅನ್ನೋ ಡೈಲಾಗ್ ಹೊಡೆದು ಸಿಕ್ಕಾಪಟ್ಟೆ ಫೇಮಸ್ ಆಗಿರುವ ಮಳೆಯಿಂದ ನಷ್ಟ ಅನುಭವಿಸಿದ್ದಾರೆ. ಬೆಂಗಳೂರು ಕೆಫೆ ಕಟ್ಟದಲ್ಲಿರುವ ಚಂದ್ರು ಮಾಲೀಕತ್ವದ ಹೋಟೆಲ್ ಬೇಸ್ಮೆಂಟ್ ಸಂಪೂರ್ಣ ಜಲಾವೃತವಾಗಿದೆ. ಹೀಗಾಗಿ ಕಳೆದ 2 ದಿನಗಳಿಂದ ಹೋಟೆಲ್ ಬಂದ್ ಆಗಿದೆ
ಈ ಬಗ್ಗೆ ಹೋಟೆಲ್ ಮಾಲೀಕ ಚಂದ್ರು ಮಾತನಾಡಿ,, ಹೋಟೆಲ್ ಓಪನ್ ಮಾಡಿ ನಾಲ್ಕು ವರ್ಷ ಆಯ್ತು. ಇದುವರೆಗೆ ಇಂತಹ ಸಮಸ್ಯೆ ಇರಲಿಲ್ಲ. ಆದ್ರೆ ಮೊನ್ನೆ, ನಿನ್ನೆ ರಾತ್ರಿ ಸುರಿದ ಮಳೆಗೆ ರಸ್ತೆಯಲ್ಲಿದ್ದ ನೀರೆಲ್ಲ ಬೇಸ್ಮೆಂಟ್‌ಗೆ ತುಂಬಿಕೊಂಡಿದೆ. ಬೆಳಗ್ಗೆ 7 ಗಂಟೆಯಿಂದ ಹೊರತೆಗೆಯುತ್ತಿದ್ದರೂ ನೀರು ಖಾಲಿ ಆಗ್ತಿಲ್ಲ ಅಂತ ಹೇಳಿದ್ದಾರೆ.
ರಸ್ತೆಯಲ್ಲಿದ್ದ ಮಳೆ ನೀರಿನೊಂದಿಗೆ ಮರಳೂ ಸೇರಿಕೊಂಡಿದೆ, ಜನರೇಟರ್ ಆಯಿಲ್, ಡೀಸೆಲ್ ಎಲ್ಲ ಹೊರಗೆ ಬಂದುಬಿಟ್ಟಿದೆ. 10 ಎಲೆಕ್ಟ್ರಿಕ್ ಬೈಕ್‌ಗಳು ಕೆಟ್ಟುಹೋಗಿದೆ. ಜನರೇಟರ್ ಕೂಡ ಕೆಟ್ಟಿದೆ. ವಿಧಿಯಿಲ್ಲದೇ 2 ದಿನಗಳಿಂದ ಹೋಟೆಲ್ ಬಂದ್ ಮಾಡಬೇಕಾಗಿದೆ. ಎಲ್ಲಾ ಕ್ಲೀನ್ ಮಾಡಿದ ಬಳಿಕವೇ ಹೋಟೆಲ್ ಓಪನ್ ಮಾಡ್ತೀವಿ ಅಂತ ತಿಳಿಸಿದ್ದಾರೆ.