ಕಳೆದ ಒಂದು ವಾರದಿಂದ ಸುರಿಯುತ್ತಿರುವ ಮಹಾಮಳೆಗೆ ರಾಜ್ಯ ರಾಜಧಾನಿ ಬೆಂಗಳೂರು ಅಕ್ಷರಶಃ ನಲುಗಿಹೋಗಿದೆ. ಸಿಲಿಕಾನ್ ಸಿಟಿಯ ಕೆಲ ಏರಿಯಾಗಳು ಕೆರೆಗಳಂತಾಗಿವೆ ಇಂತಹ ಏರಿಯಾಗಳಿಗೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಭೇಟಿ ಕೊಟ್ಟು ಸಿಟಿ ರೌಂಡ್ಸ್ ನಡೆಸಿದರು.
ಮಾನ್ಯತಾ ಟೆಕ್ ಪಾರ್ಕ್, HBR ಲೇಔಟ್, ವಡ್ಡರಪಾಳ್ಯ ಲೇಔಟ್, ಗೆದ್ದಲಹಳ್ಳಿ, ಸಾಯಿ ಲೇಔಟ್ , ಪಣತ್ತೂರು ರೈಲ್ವೆ ಬ್ರಿಡ್ಜ್ ಸೇರಿ ಹಲವು ವೀಕ್ಷಣೆ ಮಾಡಿದ್ರು ಸಿಎಂ, ಡಿಸಿಎಂ. ಈ ವೇಳೆ ಸಾಯಿ ಲೇಔಟ್ ಬಳಿ ಸಿಎಂ, ಡಿಸಿಎಂಗೆ ಸ್ಥಳೀಯರು ಗೇರಾವ್ ಹಾಕಿದ್ರು.
ಮಹದೇವಪುರದ ಪಣತ್ತೂರಿನ ಕಾಡಬೀಸನಹಳ್ಳಿ ಬಳಿ ವೀಕ್ಷಣೆ ಮುಗಿಯುತ್ತಿದ್ದಂತೆ ಡಿಸಿಎಂ ಡಿಕೆಶಿ ಸಿಟಿ ರೌಂಡ್ಸ್ ಅರ್ಧಕ್ಕೆ ಮೊಟಕುಗೊಳಿಸಿ ಹೊರನಡೆಸಿದರು.
ಸಿಎಂ ಸಿದ್ದರಾಮಯ್ಯ ಮಾತ್ರ ಸಿಟಿ ರೌಂಡ್ಸ್ ಮುಂದುವರೆಸಿದರು.