ಬೆಂಗಳೂರು: ಆಹಾರ ಇಲಾಖೆಯಿಂದ ಕಳಪೆ ಗುಣಮಟ್ಟದ ಆಹಾರದ ವಿರುದ್ಧ ಸಮರ ಸಾರಿದೆ. ಇಡ್ಲಿ, ಗೋಬಿ, ಕಲ್ಲಂಗಡಿ ಸೇರಿದಂತೆ ಅನೇಕ ಆಹಾರಗಳ ಗುಣಮಟ್ಟದ ಬಗ್ಗೆ ಪರಿಶೀಲನೆ ನಡೆಸಿದ್ದಾಯ್ತು. ಇದೀಗ ಜಿಲೇಬಿ ಮತ್ತು ಶರಬತ್ ನಲ್ಲಿ ಕೃತಕ ಬಣ್ಣ ಬಳಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಕಾರ್ಯಚರಣೆಗೆ ಸಿದ್ದವಾಗಿದೆ.
ಸಾರ್ವಜನಿಕರ ಆರೋಗ್ಯ ದೃಷ್ಟಿಯಿಂದ ಸ್ವಚ್ಚತೆ ಕಾಪಾಡದೇ ತಯಾರಿಸಲಾಗುತ್ತಿರುವ ಜಿಲೇಬಿ ಮತ್ತು ಶರಬತ್ ಮಾದರಿ ಸಂಗ್ರಹಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದೆ. ಪ್ರತಿ ಜಿಲ್ಲೆಯ ಅಂಕಿತಾಧಿಕಾರಿಗಳ ವ್ಯಾಪ್ತಿಯಲ್ಲಿ ಜಿಲೇಬಿ ಮತ್ತು ಶರಬತ್‌ನ ತಲಾ 5 ಮಾದರಿಗಳನ್ನು ಸಂಗ್ರಹಿಸುವಂತೆ ಆದೇಶಿಸಲಾಗಿದೆ.
ಒಟ್ಟಾರೆ, ರಾಜ್ಯಾದ್ಯಂತ 10 ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಲು ಯೋಜನೆ ರೂಪಿಸಲಾಗಿದೆ.ಪ್ರತಿ ಜಿಲ್ಲೆಯ ಅಂಕಿತಾಧಿಕಾರಿ ವ್ಯಾಪ್ತಿಯಲ್ಲಿ ತಲಾ ಐದು ಮಾದರಿ ಸಂಗ್ರಹಿಸಿ, ಮೂರು ದಿನಗಳ ಒಳಗೆ ಪ್ರಯೋಗಾಲಯಕ್ಕೆ ಕಳುಹಿಸುವಂತೆ ಆಹಾರ ಗುಣಮಟ್ಟ ಮತ್ತು ಸುರಕ್ಷತಾ ಇಲಾಖೆ ಸೂಚಿಸಿದೆ.