ಬೆಂಗಳೂರು: ಅತಿ ಹೆಚ್ಚು ಜನದಟ್ಟಣೆ ಇರುವ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಬಾಡಿಗೆ ಕಟ್ಟಿ ಜೀವನ ಮಾಡೋದು ಕಷ್ಟ ಮರ್ರೆ. ಬರುವ ಸಂಬಳದಲ್ಲಿ ಅರ್ಧ ಬಾಡಿಗೆಗೆ ಹೋದ್ರೆ ಜೀವನ ಮಾಡೋದು ಹೇಗೆ ಎಂದು ಸಾಕಷ್ಟು ಮಂದಿ ಲೀಸ್ ಗೆ ಹೋಗ್ತಾರೆ. ಆದರೆ ಲೀಸ್ ಗೆ ನೀವ್ ಬ್ರೋಕರ್ ಗಳನ್ನು ನಂಬಿ ಹೋಗ್ತಿದ್ದೀರಾ!? ಹಾಗಿದ್ರೆ ಎಚ್ಚರ ವಹಿಸಿ ಜನರೇ. ಎಸ್, ಯಾರದ್ದೋ ಮನೆ ತೋರಿಸಿ ನಾನೇ ಓನರ್ ಎಂದು ಈ ಬ್ರೋಕರ್ ಗಳು ಯಾಮಾರಿಸ್ತಾರೆ. ಇದೀಗ ಅಂತದ್ದೇ ಪ್ರಕರಣ ಒಂದು ನಗರದಲ್ಲಿ ಬೆಳಕಿಗೆ ಬಂದಿದೆ.
ಕೊಡಿಗೆ ಹಳ್ಳಿ ಸಮೀಪವಿರುವ ಶ್ರೀ ಸಾಯಿ ಬಾಲಾಜಿ ಮಿಡೋಸ್ ಅಪಾರ್ಟ್ಮೆಂಟ್ ನಲ್ಲಿ ಪದ್ಮಪ್ರಭಾಕರ್ , 2023 ರಲ್ಲಿ ರಘು ಎನ್ನುವವರಿಂದ ಪ್ಲಾಟ್ ನಂ 305 & 405 ನ್ನು 25 ಲಕ್ಷಕ್ಕೆ ಲೀಸ್ ಗೆ ಪಡೆದುಕೊಂಡಿದ್ರಂತೆ, 2024 ರ ಜನವರಿ ತಿಂಗಳಲ್ಲಿ ಸಾಯಿ ಪ್ರಶಾಂತ್ ಅನ್ನೋ ವ್ಯಕ್ತಿ ಬಂದು ಈ ಪ್ಲಾಟ್ ಓನರ್ ನಾನು ಮನೆಯನ್ನು ಖಾಲಿ ಮಾಡಿ ಎಂದು ಧಮ್ಕಿ ಹಾಕಿದ್ದಾರಂತೆ.
kshaya Tritiya 2025: ಅಕ್ಷಯ ತೃತೀಯದಂದೇ ಚಿನ್ನ ಖರೀದಿಸಲು ಕಾರಣವೇನು..? ಇಲ್ಲಿದೆ ಮಾಹಿತಿ
ಅಲ್ಲದೆ ಇದೇ ಪ್ಲಾಟ್ ಗಳನ್ನ ಎರಡು ವರ್ಷಕ್ಕೂ ಮೊದಲೇ ರಘು ನನಗೆ ಮಾರಾಟ ಮಾಡಿದ್ದಾರೆ ನೋಡಿ ಎಂದು ಕ್ರಯ ಪತ್ರವನ್ನು ತೋರಿಸಿದ್ದಾರೆ ಇದರಿಂದ ಪದ್ಮ ಗಾಬಾರಿಯಾಗಿದ್ದಾರೆ. ಅಲ್ಲದೆ ಬ್ಯಾಂಕ್ ಅಧಿಕಾರಿಗಳು ಕೂಡ ಬಂದು ಪ್ರಶಾಂತ್ ಅನ್ನೋರು ನಮ್ಮಿಂದ ಲೋನ್ ಪಡೆದುಕೊಂಡಿದ್ದಾರೆಂದು ಹೇಳಿದ್ರಂತೆ.
ಕೇವಲ ಸಾಯಿ ಮೆಡೋಸ್ ಮಾತ್ರವಲ್ಲದೆ ಸಾಯಿ ಕ್ಯಾಸೋ ನಿಲಯ, ಸಾಯಿ ಶಾಂತಿ ನಿಲಯದಲ್ಲೂ ಕೂಡ ಹಲವು ಪ್ಲಾಟ್ ಗಳಿದ್ದು ಇವುಗಳಲ್ಲಿ ಸುಮಾರು 32 ಪ್ಲಾಟ್ ಗಳನ್ನು ಕೂಡ ಇದೇ ರೀತಿ ಹಲವು ಜನರಿಗೆ ಮೋಸ ಮಾಡಿದ್ದಾರಂತೆ . ನಮ್ಮಿಂದ ಕೂಡ ಲಕ್ಷಾಂತರ ಹಣ ಪಡೆದು ವಂಚನೆ ಮಾಡಿದ್ದಾರೆ. ದೂರು ಕೊಡಲು ಹೋದ್ರೆ ಪೋಲಿಸರು ಸಿವಿಲ್ ಮ್ಯಾಟರ್ ಇದು ಕೋರ್ಟ್ ಗೆ ಹೋಗಿ ಎಂದು ಹೇಳ್ತಾರಂತೆ. ರಘು ವಿರುದ್ಧ ದೂರು ದಾಖಲಾಗಿದ್ರು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ .
ರಘು ಹಾಗೂ ಪ್ರಶಾಂತ್ ಅವರನ್ನ ಕರೆಸಿ ಮಾತುಕತೆ ಮಾಡಿ ನಮ್ಮ ಸಮಸ್ಯೆ ಬಗೆ ಹರಿಸಿ ಎಂದು ಕೇಳಿ ಕೊಂಡರು ಕ್ಯಾರೇ ಎನ್ನುತ್ತಿಲ್ಲವಂತೆ. ಇನ್ನೂ ಬ್ಯಾಂಕ್ ಅಧಿಕಾರಿಗಳು ತಮಗೆ ಇಷ್ಟಬಂದಾಗ ಬಂದು ಕಿರುಕುಳ ಕೊಡ್ತಿದ್ದಾರೆ .ಇವರಿಬ್ಬರ ಜೊತೆ ಸೇರಿ ನಮಗೆ ವಂಚನೆ ಮಾಡುತ್ತಿರೋ ಅನುಮಾನ ಇದೆ ಎಂದು ಸಂಶಯ ವ್ಯಕ್ತಪಡಿಸಿದ್ರು.. ಇದರಿಂದ ನೊಂದ ಜನ ಪೋಲಿಸ್ ಕಮೀಷನರ್ ಗೆ ಕಚೇರಿಗೆ ಬಂದು ದೂರು ಕೊಡಲು ಮುಂದಾಗಿದ್ದಾರೆ.