ಬೆಂಗಳೂರು :- ಒಂದೆಡೆ ಬೇಸಿಗೆ ಶುರುವಾಗಿದೆ. ಸುಡು ಬಿಸಿಲಿಗೆ ಕೊಂಚ ನಾಲಿಗೆ ತಂಪು ಪಾನೀಯ ಕೇಳುವುದು ಸಹಜ. ಅದರಂತೆ ಬೇಸಿಗೆಯಲ್ಲಿ ಐಸ್ ಕ್ರೀಮ್ ಗೆ ಇನ್ನಿಲ್ಲದ ಬೇಡಿಕೆ. ಆದರೆ ಇದೀಗ ಶಾಕಿಂಗ್ ಸುದ್ದಿ ಒಂದು ಹೊರ ಬಿದ್ದಿದೆ.
ಐಸ್ಕ್ರೀಂ ಘಟಕಗಳ ಮೇಲೆ ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳು ದಾಳಿ ಮಾಡಿ, ಐಸ್ಕ್ರೀಂಗಳನ್ನ ಲ್ಯಾಬ್ಗೆ ರವಾನೆ ಮಾಡಿದ್ದಾರೆ.
ಆಹಾರ ಗುಣಮಟ್ಟ ಸುರಕ್ಷತಾ ಇಲಾಖೆ ಅಧಿಕಾರಿಗಳು ಪ್ರತಿ ತಿಂಗಳು ಕೂಡ ಆಹಾರ ಪದಾರ್ಥಗಳನ್ನ ತಪಾಸಣೆ ಮಾಡುತ್ತಾರೆ. ಈಗ ಬೇಸಿಗೆ ಬಿಸಿಲು ಜಾಸ್ತಿ ಇರುವುದರಿಂದ ಐಸ್ಕ್ರೀಂ ಅನ್ನು ಜನರು ಜಾಸ್ತಿ ಸೇವನೆ ಮಾಡುತ್ತಾರೆ. ಐಸ್ಕ್ರೀಂನಲ್ಲಿ ಕಲರ್ ಬಳಸಿರುವ ಕಾರಣ ಎಚ್ಚೆತ್ತುಕೊಂಡ ಸುರಕ್ಷತಾ ಇಲಾಖೆ ಐಸ್ಕ್ರೀಂ ತಯಾರಿಕಾ ಘಟಕಗಳ ಮೇಲೆ ದಾಳಿ ಮಾಡಿ ಸ್ಯಾಂಪಲ್ಗಳನ್ನು ಲ್ಯಾಬ್ಗೆ ರವಾನೆ ಮಾಡಿದ್ದಾರೆ.
ಇನ್ನೂ ಐಸ್ಕ್ರೀಂ ಆದ್ಮೇಲೆ ಕೇಕ್ನ ಸರದಿ. ಕೇಕ್ಗೆ ಬಣ್ಣ ಬರಲು ಕೆಮಿಕಲ್ ಬಳಕೆ ಮಾಡುತ್ತಾರೆ ಎಂದು ಹೇಳಲಾಗುತ್ತಿದೆ. ಕಲರ್ ಬಳಕೆ, ಕೆಮಿಕಲ್ ಬಳಕೆಯಿಂದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಲಿದೆ ಎಂದು ಆಹಾರ ತಜ್ಞರು ಹೇಳುತ್ತಿದ್ದಾರೆ.
ಕೇಕ್ಗೆ ಕಲರ್ ಕೆಮಿಕಲ್, ಏನೆಲ್ಲ ಪ್ರಾಬ್ಲಂ?
ಸನ್ಸೆಟ್ ಯೆಲ್ಲೋ, ಸನ್ ಸೆಟ್ ಗ್ರೀನ್ ಕಲರ್ ಬಳಕೆ ಮಾಡುವುದರಿಂದ ಕಾರ್ಸ್ಮೋಜೆನಿಕ್ ಕ್ಯಾನ್ಸರ್ಕಾರಕ ಉತ್ಪತ್ತಿಯಾಗುತ್ತದೆ. ಕ್ಯಾನ್ಸರ್ ಸಮಸ್ಯೆ, ಹೃದಯ ಸಂಬಂಧಿ ಕಾಯಿಲೆ, ಕಿಡ್ನಿ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ ಎಂದು ಆಹಾರ ತಜ್ಞರು ಎಚ್ಚರಿಸಿದ್ದಾರೆ.