ನೀರು ಕುಡಿಯೋದು ಆರೋಗ್ಯಕ್ಕೆ ಒಳ್ಳೆಯದು ನಿಜ. ಆದರೆ ಬಹಳಷ್ಟು ಜನರು ನಿಂತುಕೊಂಡೇ ನೀರನ್ನು ಕುಡಿಯುತ್ತಾರೆ. ಹೀಗೆ ನಿಂತು ನೀರು ಕುಡಿಯೋ ಅಭ್ಯಾಸ ಒಳ್ಳೆಯದಲ್ಲ ಅಂತ ಹಿರಿಯರು ಹೇಳೋದನ್ನು ಕೇಳಿರಬಹುದು. ಹಾಗಿದ್ದರೆ ನಿಜವಾಗಿಯೂ ನಿಂತು ನೀರು ಕುಡಿಯೋದ್ರಿಂದ ಒಳ್ಳೆಯದಾ ? ಅಲ್ಲವಾ? ಅದು ಆರೋಗ್ಯಕ್ಕೆ ಸಮಸ್ಯೆ ಉಂಟುಮಾಡುತ್ತದಾ? ಇದಕ್ಕೆಲ್ಲ ಇಲ್ಲಿದೆ ಉತ್ತರ.
ಅಪ್ಪಿತಪ್ಪಿಯೂ ಈ ದಿನ ಮಾತ್ರ ಉಗುರು ಕಟ್ ಮಾಡಬಾರದಂತೆ!ಹಾಗಾದ್ರೆ ಯಾವ ದಿನ ಬೆಸ್ಟ್?
ನಿಂತು ನೀರು ಕುಡಿಯಬೇಡಿ ಎನ್ನುವುದಕ್ಕೆ ಕಾರಣ: ನಾವು ಎದ್ದುನಿಂತು ನೀರು ಕುಡಿಯುವುದರಿಂದ ಜೀರ್ಣಾಂಗ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ. ಇದು ನರಮಂಡಲವನ್ನು ಹಾಳುಮಾಡಬಹುದು. ನಿಂತು ನೀರು ಕುಡಿಯುವುದರಿಂದ ದೇಹಕ್ಕೆ ಹೋಗುವ ನೀರಿನ ವೇಗ ಹೆಚ್ಚಾಗುತ್ತದೆ. ಅದರಿಂದ ನಮ್ಮ ಆರೋಗ್ಯಕ್ಕೆ ಕೆಲವು ರೀತಿಯಲ್ಲಿ ಹಾನಿಕಾರಕವಾಗಬಹುದು ಎಂದು ಹೇಳಲಾಗುತ್ತದೆ.
ನಿಮಗೆ ಗೊತ್ತಾ? ನೀರಿಗೂ ಎಕ್ಸ್‌ಪೈರ್ಡ್ ಡೇಟ್ ಇರುತ್ತದೆ. ಕಂಡ ಕಂಡಲ್ಲಿ ಸಿಕ್ಕ ಸಿಕ್ಕ ನೀರಿನ ಬಾಟಲಿಗಳಿಂದ ನೀರು ಕುಡಿಯುವ ಮೊದಲು ಅದು ಕುಡಿಯಲು ಯೋಗ್ಯವಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸಬೇಕಾಗುತ್ತದೆ. ಈ ರೀತಿ ಅವಧಿ ಮೀರಿದ ನೀರನ್ನು ಕುಡಿಯುವುದರಿಂದ ದೇಹದಲ್ಲಿ ಅನೇಕ ರೀತಿಯಲ್ಲಿ ಸಮಸ್ಯೆ ಉಂಟಾಗಬಹುದು. ಹಾಗಾದರೆ ಈ ರೀತಿ ಎಕ್ಸ್‌ಪೈರ್ಡ್ ಡೇಟ್ ಆದಂತಹ ನೀರನ್ನು ಕುಡಿಯುವುದರಿಂದ ಆರೋಗ್ಯದ ಮೇಲೆ ಏನೆಲ್ಲಾ ದುಷ್ಪರಿಣಾಮಗಳು ಉಂಟಾಗುತ್ತದೆ? ಸಂಗ್ರಹಿಸಿಟ್ಟ ನೀರು ಎಲ್ಲಿಯ ವರೆಗೆ ಕುಡಿಯಲು ಯೋಗ್ಯವಾಗಿರುತ್ತದೆ ಎಂಬುದನ್ನು ತಿಳಿದುಕೊಳ್ಳಿ.
ನೀರಿನ ಬಾಟಲಿಗಳ ಮೇಲೆ ಮುಕ್ತಾಯ ದಿನಾಂಕ ಅಥವಾ ಎಕ್ಸ್‌ಪೈರ್ಡ್ ಡೇಟ್ ಹಾಕುವುದು ಕಡ್ಡಾಯ. ಆದರೆ ನಿಜವಾಗಿಯೂ ಪ್ಲಾಸ್ಟಿಕ್ ಬಾಟಲಿಗಳಲ್ಲಿರುವ ನೀರನ್ನು ಎಷ್ಟು ಸಮಯದ ವರೆಗೆ ಕುಡಿಯಬಹುದು? ಸಾಮಾನ್ಯವಾಗಿ ಸಂಶೋಧನೆಗಳು ಹೇಳುವ ಪ್ರಕಾರ, ನಳ್ಳಿ ಮತ್ತು ಪ್ಲಾಸ್ಟಿಕ್ ಬಾಟಲಿಗಳಲ್ಲಿ 6 ತಿಂಗಳಿಗಿಂತ ಹೆಚ್ಚು ಸಮಯ ಸಂಗ್ರಹಿಸಿಟ್ಟ ನೀರನ್ನು ಕುಡಿಯಬಾರದು. ಇದು ಆರೋಗ್ಯಕ್ಕೆ ಒಳ್ಳೆಯದಲ್ಲ. ಏಕೆಂದರೆ ಸಂಗ್ರಹಿಸಿಟ್ಟ ನೀರಿನಲ್ಲಿ ಅನಿಲಗಳು ಆವಿಯಾಗಲು ಪ್ರಾರಂಭವಾಗುವುದರಿಂದ ನೀರಿನ ರುಚಿ ಬದಲಾಗುತ್ತದೆ. ಏಕೆಂದರೆ ಗಾಳಿಯಲ್ಲಿನ ಇಂಗಾಲದ ಡೈ ಆಕ್ಸೈಡ್ ನೀರಿನೊಂದಿಗೆ ಬೆರೆತು ಹೋಗುತ್ತದೆ. ಹಾಗಾಗಿ 6 ತಿಂಗಳಿಗಿಂತ ಹೆಚ್ಚು ಸಮಯ ನೀರನ್ನು ಯಾವುದೇ ಪಾತ್ರೆ ಅಥವಾ ಬಾಟಲಿಗಳಲ್ಲಿ ಸಂಗ್ರಹಿಸಿಟ್ಟು ಕುಡಿಯಬಾರದು. ಆರೋಗ್ಯದ ದೃಷ್ಟಿಯಿಂದ ಕನಿಷ್ಠ 6 ತಿಂಗಳ ವರೆಗೆ ಕುಡಿಯುವ ನೀರನ್ನು ಸುರಕ್ಷಿತವಾಗಿ ಇಡಬೇಕೆಂದರೆ ಶೀತ, ಶುಷ್ಕ ಸ್ಥಳದಲ್ಲಿ ನೀರನ್ನು ಶೇಖರಿಸಿಡಬೇಕು. ಜೊತೆಗೆ ಆ ಸ್ಥಳದಲ್ಲಿ ಶುಚಿತ್ವವನ್ನು ಕೂಡ ಕಾಪಾಡಬೇಕು.
ಅದರಲ್ಲಿಯೂ ಪ್ಲಾಸ್ಟಿಕ್ ಬಾಟಲಿಗಳಲ್ಲಿರುವ ನೀರು 6 ತಿಂಗಳಿಗಿಂತ ಹಳೆಯದಾದರೆ ಅವುಗಳನ್ನು ಕುಡಿಯುವುದು ಒಳ್ಳೆಯದಲ್ಲ. ಇದರಿಂದ ಆರೋಗ್ಯ ಹಾಳಾಗುತ್ತದೆ. ಏಕೆಂದರೆ ಸಾಮಾನ್ಯವಾಗಿ ಪ್ಲಾಸ್ಟಿಕ್ ಬಿಪಿಎ ನೀರನ್ನು ಕಲುಷಿತಗೊಳಿಸುವ ಇತರ ರಾಸಾಯನಿಕಗಳನ್ನು ಬಿಡುಗಡೆ ಮಾಡುತ್ತದೆ. ಇದನ್ನು ಮಾನವರು ಬಳಸುವುದರಿಂದ ಕರುಳಿಗೆ ಸಂಬಂಧಿಸಿದ ಆರೋಗ್ಯ ಸಮಸ್ಯೆಗಳು ಉಂಟಾಗಿ ಆರೋಗ್ಯ ಕ್ಷೀಣಿಸಬಹುದು. ಜೊತೆಗೆ ಇದು ರೋಗ ನಿರೋಧಕ ಶಕ್ತಿಯನ್ನು ಕೂಡ ಕಡಿಮೆ ಮಾಡಬಹುದು. ಹಾಗಾಗಿಯೇ ನೀರನ್ನು ಬಿಸಿಯಾದ ವಾತಾವರಣದಲ್ಲಿ ಇಡುವುದಕ್ಕಿಂತ ತಂಪಾದ ಮತ್ತು ಶುಷ್ಕ ಸ್ಥಳದಲ್ಲಿ ಸಂಗ್ರಹಿಸುವುದರಿಂದ ಅಡ್ಡಪರಿಣಾಮಗಳನ್ನು ತಪ್ಪಿಸಬಹುದು.