ಕನ್ನಡ ಕಿರುತೆರೆಯ ಪ್ರಮುಖ ಧಾರಾವಾಹಿಗಳಲ್ಲಿ ಒಂದಾಗಿರುವ ಭಾಗ್ಯಲಕ್ಷ್ಮೀ ಎಲ್ಲರ ಮನೆ ಮನ ಗೆದ್ದಿದೆ. ಭಾಗ್ಯಲಕ್ಷ್ಮೀಯಾಗಿ ನಟಿ ಕಂ ಆಂಕರ್ ಸುಷ್ಮಾ ಅಮೋಘವಾಗಿ ಅಭಿನಯಿಸುತ್ತಿದ್ದಾರೆ. ಭಾಗ್ಯ ಪಾತ್ರದಲ್ಲಿ ಗೃಹಿಣಿಯರ ಮೆಚ್ಚುಗೆ ಪಡೆದುಕೊಂಡಿದ್ದಾರೆ. ಭಾಗ್ಯನಿಗೆ ಇಬ್ಬರು ಮಕ್ಕಳು. ತನ್ವಿ ಪಾತ್ರವನ್ನೂ ಅಮೃತಾ ಗೌಡ ಅಚ್ಚುಕಟ್ಟಾಗಿ ನಿಭಾಯಿಸುತ್ತಿದ್ದಾರೆ. ಓದೋದ್ರಲ್ಲಿ ಸ್ವಲ್ಪ ಹಿಂದೆ ಇದ್ದಾರೆ. ಆದರೆ ರಿಯಲ್ ಲೈಫ್ ನಲ್ಲಿ ತನ್ವಿ ಊರೂಫ್ ಅಮೃತಾ ಗೌಡ ಬ್ರಿಲಿಯೆಂಟ್ ಸ್ಟುಡೆಂಟ್.
ದ್ವೀತಿಯ ಪಿಯುಸಿಯಲ್ಲಿ ಅಮೃತಾ ಗೌಡ ಡಿಸ್ಟಿಂಕ್ಷನ್ ನಲ್ಲಿ ಪಾಸಾಗಿದ್ದಾರೆ. ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದಿದ್ದ ನಟಿ ಅಮೃತಾ , ಬಳಿಕ ಪಿಯುಸಿಯಲ್ಲಿ ವಾಣಿಜ್ಯ ವಿಭಾಗವನ್ನು ಆಯ್ಕೆ ಮಾಡಿಕೊಂಡಿದ್ದರು. ತಮ್ಮ ವಿದ್ಯಾಭ್ಯಾಸದ ಜೊತೆಗೆ ನಟನೆಯನ್ನು ಆಯ್ಕೆ ಮಾಡಿಕೊಂಡು ಎರಡೂ ಕ್ಷೇತ್ರವನ್ನು ಉತ್ತಮವಾಗಿ ನಿಭಾಯಿಸುತ್ತಿದ್ದಾರೆ ಅನ್ನೋದಕ್ಕೆ ಈಗ ಹೊರಬಿದ್ದಿರುವ ದ್ವೀತಿಯ ಪಿಯುಸಿ ಫಲಿತಾಂಶ.
ನಿನ್ನೆ ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ ಘೋಷಣೆಯಾಗಿದ್ದು, ನಟಿ ಅಮೃತಾ ಗೌಡ 600 ಅಂಕಗಳಲ್ಲಿ 543 ಅಂಕ ಗಳಿಸಿ ಶೇಕಡಾ 91ರಷ್ಟು ಅಂಕ ಪಡೆಯುವ ಮೂಲಕ ಡಿಸ್ಟಿಂಕ್ಷನ್ನಲ್ಲಿ ಪಾಸಾಗಿದ್ದಾರೆ. ಅಮೃತಾ ಗೌಡ ಕನ್ನಡದಲ್ಲಿ 100ಕ್ಕೆ 97 ಅಂಕ ಪಡೆದಿದ್ದು, ಇಂಗ್ಲಿಷ್ನಲ್ಲಿ 81, ಅಕೌಂಟೆನ್ಸಿಯಲ್ಲಿ 94, ಸ್ಟಾಟಿಸ್ಟಿಕ್ಸ್ನಲ್ಲಿ 95, ಬ್ಯುಸಿನೆಸ್ ಸ್ಟಡೀಸ್ನಲ್ಲಿ 83 ಹಾಗೂ ಎಕನಾಮಿಕ್ಸ್ನಲ್ಲಿ 93 ಅಂಕಗಳನ್ನು ಗಳಿಸಿದ್ದಾರೆ. ಡಿಸ್ಟಿಂಕ್ಷನ್ ನಲ್ಲಿ ಪಾಸಾಗಿರುವ ಅಮೃತಾ ಗೌಡಗೆ ಶುಭಾಶಯಗಳ ಮಹಾಪೂರವೇ ಹರಿದು ಬರ್ತಿದೆ.