ಬಳ್ಳಾರಿ: ಕುರುಗೋಡು ತಾಲೂಕಿನ ಕಲ್ಲುಕಂಬ ಗ್ರಾಮದಲ್ಲಿ ಭಕ್ತ ಕನಕದಾಸ ಮತ್ತು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣರ ಪ್ರತಿಮೆಗಳನ್ನು ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್, ವಿಧಾನ ಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ ಅವರು ಅನಾವರಣಗೊಳಿಸಿದರು.
ಮೊದಲಿಗೆ ಸಚಿವ ಭೈರತಿ ಸುರೇಶ್ ಅವರನ್ನು ಗ್ರಾಮದ ಮತ್ತು ಸಮುದಾಯದ ಜನತೆ ಸ್ವಾಗತಿಸಿದರು. ಮೊದಲಿಗೆ ಗ್ರಾಮದ ಹೊರ ವಲಯದ ಕಂಪ್ಲಿ ರಸ್ತೆಯಲ್ಲಿ ಮೇಷ್ಟ್ರು ಪಂಪಾಪತಿ ಅವರ ನಿವೇಶನದಲ್ಲಿ ರಚಿಸಿದ್ದ ಏಳು ಅಡಿ ಎತ್ತರದ ಸಂಗೊಳ್ಳಿ ರಾಯಣ್ಣನ ಕಂಚಿನ ಪ್ರತಿಮೆಯನ್ನು ಅನಾವರಣ ಮಾಡಿದರು. ಸಂಸದ ಇ.ತುಕಾರಂ, ಮಾಜಿ ಸಚಿವ ಬಿ.ನಾಗೇಂದ್ರ, ಶಾಸಕರಾದ ಜಿ.ಎನ್.ಗಣೇಶ್ ಮೊದಲಾದ ಗಣ್ಯರೊಂದಿಗೆ ಅನಾವರಣ ಮಾಡಿದರು.
ಜಾತಿಗಣತಿ ಮಂಡನೆ ಲಿಂಗಾಯತರ ಸಂಖ್ಯೆ ಕಡಿಮೆ ; ಸಚಿವ ಎಂ.ಬಿ.ಪಾಟೀಲ್ ಹೇಳಿದ್ದೇನು..?
ನಂತರ ಇಲ್ಲಿಂದ ಕುಂಬ ಕಳಸ, ಮಂಗಳ ವಾದ್ಯಗಳೊಂದಿಗೆ ಬೃಹತ್ ಆಕರ್ಷಕ ಮೆರವಣಿಗೆ ಮೂಲಕ ಗ್ರಾಮದ ಅಗಸೆ ಬಳಿ ಶಿಲಾ ಮಂಟಪದಲ್ಲಿ ರಚಿಸಿ ಭಕ್ತ ಕನಕದಾಸರ ಶಿಲಾ ಮೂರ್ತಿಯನ್ನು ಅನಾವರಣ ಮಾಡಲಾಯಿತು. ಬಳಿಕ ವೇದಿಕೆ ಕಾರ್ಯಕ್ರಮವನ್ನು ನಿರಂಜನಾನಂದಪುರಿ ಸ್ವಾಮಿಗಳು ಕನಕಗುರುಪೀಠ, ಕಾಗಿನೆಲೆ ಹಾಗೂ ಸಿದ್ದರಾಮಾನಂದಪುರಿ ಸ್ವಾಮಿಗಳು ತಿಂಥಿಣಿ ಬ್ರಿಡ್ಜ್ ಶಾಖಾಮಠ ಇವರ ಸಾನಿಧ್ಯದಲ್ಲಿ ಉದ್ಘಾಟಿಸಲಾಯ್ತು. ಕಂಪ್ಲಿ ಶಾಸಕ ಜೆ.ಎನ್.ಗಣೇಶ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಮಾಜಿ ಸಚಿವ ಬಿ.ನಾಗೇಂದ್ರ, ಕೃಷ್ಣರಾಜ ನಗರ ಶಾಸಕ ಡಿ.ರವಿಶಂಕರ್, ಹನೂರು ಶಾಸಕ ಎಂ.ಆರ್.ಮಂಜುನಾಥ, ಶಾಸಕರಾದ ರಾಘವೇಂದ್ರ ಹಿಟ್ನಾಳ್, ಶಾಸಕ ಭರತ್ ರೆಡ್ಡಿ ಮೊದಲಾದವರು ಉಪಸ್ಥಿತರಿದ್ದರು.