ಚಾಮರಾಜನಗರ : ಮಂಟೇಸ್ವಾಮಿ ಪರಂಪರೆಯು ಕಾಯಕ ಯೋಗಿಗಳ ಶಕ್ತಿಯಾಗಿದ್ದು, ಸಮಾಜದಲ್ಲಿ ಜನರು ಶಾಂತಿ, ಸಮಾನತೆ ಹಾಗೂ ಸಹಬಾಳ್ವೆಯಲ್ಲಿ ಬದುಕುವ ಸಂಕೇತವಾಗಿದ್ದಾರೆ. ಹಾಗಾಗಿ ಆ ಪರಂಪರೆಯು ಶ್ರೀಮಂತವಾಗಿರಬೇಕು ಎಂದು ಹರವೆ ಮಠದ ಸರ್ಪಭೂಷಣ ಸ್ವಾಮೀಜಿಗಳು ಹೇಳಿದರು.
ಚಾಮರಾಜನಗರ ನಗರಸಭಾ ವ್ಯಾಪ್ತಿಯ ಕರಿನಂಜನಪುರ ಬಡಾವಣೆಯಲ್ಲಿ ಇಂದು ಶ್ರೀ ಮಂಟೇಸ್ಚಾಮಿ ದೇವರಗುಡ್ಡರ ದೇವಸ್ಥಾನದ ಸೇವಾ ಟ್ರಸ್ಟಿನಿಂದ ಶ್ರೀ ಮಂಟೇಸ್ವಾಮಿ ದೇವಸ್ಥಾನದ ಭೂಮಿಪೂಜೆ ಕಾರ್ಯ ನೆರವೇರಿಸಿ ಶ್ರೀಗಳು ಮಾತನಾಡಿದ ಅವರು, ಪ್ರಸ್ತುತ ಮಂಟೇಸ್ವಾಮಿ ಗುಡ್ಡರು ಮಂಟೇಸ್ಚಾಮಿ ಪರಂಪರೆಯನ್ನು ಉಳಿಸಿ ಬೆಳಿಸಿಕೊಂಡು ಹೋಗುತ್ತಿದ್ದಾರೆ. ಸಮಾಜದ ಎಲ್ಲಾ ವರ್ಗದ ಜನರು ಒಗ್ಗಟ್ಟಿನಿಂದ ಕಾಯಕ ನಿಷ್ಟೆಯಲ್ಲಿ ತೊಡಗುವಂತೆ ಆಶೀರ್ವದಿಸಿದರು.
ಕಾರ್ಯಕ್ರಮದಲ್ಲಿ ಮಂಟೇಸ್ವಾಮಿ ದೇವಾಲಯಕ್ಕೆ ಸ್ಥಳ ದಾನ ಮಾಡಿದ ಶಿವಮಲ್ಲಪ್ಪ ಹಾಗೂ ಸುಬ್ರಹ್ಮಣ್ಯ ರವರನ್ನು ಸನ್ಮಾನಿಸಲಾಯಿತು. ಈ ವೇಳೆಯಲ್ಲಿ ಚಂದ್ರಶೇಖರ್, ನಗರಸಭಾ ಸದಸ್ಯ ಮನೋಜ್ಪಾಟೀಲ್, ಮಲ್ಲೇಶಪ್ಪ, ಲಿಂಗಪ್ಪ, ಕುಮಾರ್, ನಾಗರಾಜು ಷಡಕ್ಷರಸ್ವಾಮಿ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.