ಬೀದರ್:- ಇತ್ತೀಚೆಗೆ ಪಹಲ್ಗಾಮ್ನಲ್ಲಿ ನಡೆದ ಉಗ್ರರ ದಾಳಿ ಖಂಡಿಸಿ ಪಾಕಿಸ್ತಾನದ ವಿರುದ್ದ ಬೀದರ್ ನಲ್ಲಿ ವಿಭಿನ್ನ ಹೋರಾಟ ನಡೆದಿದೆ.
ಕಬಡ್ಡಿ ನೋಡಲು ಹೋದಾಗ ದುರಂತ: 50 ವರ್ಷದ ವ್ಯಕ್ತಿ ದುರ್ಮರಣ! ಘಟನೆ ನಡೆದಿದ್ದೆಲ್ಲಿ?
ಬೀದರ್ನ ಅಂಬೇಡ್ಕರ್ ವೃತ್ತದಲ್ಲಿ ನಡು ರಸ್ತೆಯಲ್ಲಿ ಪಾಕಿಸ್ತಾನ ಧ್ವಜ ಅಂಟಿಸಿ ಯುವಕರು ಆಕ್ರೋಶ ಹೊರ ಹಾಕಿದ್ದಾರೆ. ಇದೇ ವೇಳೆ ರಸ್ತೆಗೆ ಧ್ವಜ ಅಂಟಿಸಿ, ಪಾಕ್ ಧ್ವಜ ಹರಿದು ಯುವಕರು ಘೋಷಣೆ ಕೂಗಿದ್ದಾರೆ. ಅಂಬೇಡ್ಕರ್ ವೃತ್ತದಲ್ಲಿ ಎರಡು ಮಾರ್ಗಗಳಲ್ಲಿ ಧ್ವಜ ಅಂಟಿಸಲಾಗಿದ್ದು, ಅದಕ್ಕೆ ಕಾಲಿನಿಂದ ಒದ್ದು ಆಕ್ರೋಶ ಹೊರ ಹಾಕಲಾಗಿದೆ.