ಬೀದರ್: ಜೆಡಿಎಸ್ ಪಕ್ಷದ ಯುವ ಜನತಾದಳದ ರಾಜ್ಯಾಧ್ಯಕ್ಷರಾಗಿರುವ ನಿಖಿಲ್ ಕುಮಾರಸ್ವಾಮಿರವರು, ಮಾಜಿ ಸಚಿವರಾಗಿರುವ ಬಂಡೆಪ್ಪ ಖಾಶೆಂಪುರ್ ರವರ ನೇತೃತ್ವದಲ್ಲಿ ಗುರುವಾರ ನಡೆದ, ‘ಸದಸ್ಯತ್ವ ನೋಂದಣಿ ಅಭಿಯಾನ ಹಾಗೂ ಜೆಡಿಎಸ್ ಪಕ್ಷದ ಕಾರ್ಯಕರ್ತರ ಸಭೆ’ಯೂ ಅದ್ಧೂರಿಯಾಗಿ, ಯಶಸ್ವಿಯಾಗಿ ನಡೆಯಿತು.
ಬೆಂಗಳೂರಿನಿಂದ ಬೀದರ್ ನಗರಕ್ಕೆ ವಿಮಾನದ ಮೂಲಕ ಆಗಮಿಸಿದ್ದ ನಿಖಿಲ್ ಕುಮಾರಸ್ವಾಮಿರವರನ್ನು ಜೆಡಿಎಸ್ ಪಕ್ಷದ ಮುಖಂಡರು, ಕಾರ್ಯಕರ್ತರು ಬೀದರ್ ವಿಮಾನ ನಿಲ್ದಾಣದ ಆವರಣದಲ್ಲಿ ಸನ್ಮಾನಿಸಿ, ಗೌರವದಿಂದ ಬರಮಾಡಿಕೊಂಡರು.
ಬಳಿಕ ನಿಖಿಲ್ ಕುಮಾರಸ್ವಾಮಿರವರು, ಬೀದರ್ ನಗರದ ಗುರುನಾನಕ್ ಗೆ ಭೇಟಿ ನೀಡಿ, ಪ್ರಾರ್ಥಿಸಿದರು. ನಂತರ ಜೆಡಿಎಸ್ ಪಕ್ಷದ ಪ್ರಮುಖರಾಗಿರುವ ಸೂರ್ಯಕಾಂತ್ ನಾಗಮಾರಪಳ್ಳಿರವರ ಮನೆಗೆ ಭೇಟಿ ನೀಡಿ ಉಪಹಾರ ಸೇವಿಸಿದರು.
ನಂತರ ಅವರು, ನಗರದ ಗುಂಪಾದಲ್ಲಿರುವ ಸಿದ್ದಾರೂಡ ಮಠದ ಚಿದಂಬರಂ ಆಶ್ರಮಕ್ಕೆ ಭೇಟಿ ನೀಡಿ, ಸದ್ಗುರು ಡಾ. ಶಿವಕುಮಾರ್ ಮಹಾಸ್ವಾಮಿಗಳ ಆಶೀರ್ವಾದ ಪಡೆದರು. ಇದೇ ವೇಳೆ ಅಭಿಮಾನಿಗಳು, ಹಾಗೂ ಜೆಡಿಎಸ್ ಪಕ್ಷದ ಕಾರ್ಯಕರ್ತರು ಕ್ರೇನ್, ಜೆಸಿಬಿಗಳ ಮೂಲಕ ದೊಡ್ಡದೊಡ್ಡ ಹಾರ ಹಾಕಿ ಹೂಮಳೆ ಸುರಿಸಿ, ಹರ್ಷ ವ್ಯಕ್ತಪಡಿಸಿದರು.
ಬಳಿಕ ನಿಖಿಲ್ ಕುಮಾರಸ್ವಾಮಿರವರು, ಬೀದರ್ ನಗರದ ಗುರುಪಾದಪ್ಪ ನಾಗಮಾರಪಳ್ಳಿ ಆಸ್ಪತ್ರೆಗೆ ಭೇಟಿ ನೀಡಿ ಅಲ್ಲಿನ ರೋಗಿಗಳಿಗೆ ಹಣ್ಣು ನೀಡಿ, ಆರೋಗ್ಯ ವಿಚಾರಿಸಿದರು. ನಂತರ ಜೆಡಿಎಸ್ ಪಕ್ಷದ ಬೀದರ್ ಉತ್ತರ ತಾಲೂಕು ಅಧ್ಯಕ್ಷರಾದ ಬಸವರಾಜ ಪಾಟೀಲ್ ಹಾರೂರಗೇರಿ, ನಗರ ಘಟಕದ ಅಧ್ಯಕ್ಷ ಸುದರ್ಶನ್ ಸುಂದದರಾಜ್, ಜೆಡಿಎಸ್ ಜಿಲ್ಲಾಧ್ಯಕ್ಷರಾದ ರಮೇಶ್ ಪಾಟೀಲ್ ಸೋಲ್ಪೂರ್ ರವರ ಮನೆಗಳಿಗೆ ಭೇಟಿ ನೀಡಿದರು. ನಂತರ ಬೀದರ್ ನಗರದ ಲಾವಣ್ಯ ಕನ್ವೆನ್ಷನ್ ಹಾಲ್ ನಲ್ಲಿ ವೇದಿಕೆ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಮಾಜಿ ಸಚಿವರು, ಜೆಡಿಎಸ್ ಪಕ್ಷದ ಹಿರಿಯ ನಾಯಕರಾದ ಬಂಡೆಪ್ಪ ಖಾಶೆಂಪುರ್, ಮಾಜಿ ಶಾಸಕರಾದ ಸುರೇಶ್ ಗೌಡ, ಮಲ್ಲಿಕಾರ್ಜುನ ಖೂಬಾ, ಜೆಡಿಎಸ್ ಜಿಲ್ಲಾಧ್ಯಕ್ಷರಾದ ರಮೇಶ್ ಪಾಟೀಲ್ ಸೋಲ್ಪೂರ್, ಪ್ರಮುಖರಾದ ಸೂರ್ಯಕಾಂತ್ ನಾಗಮಾರಪಳ್ಳಿ, ಉಮಕಾಂತ್ ನಾಗಮಾರಪಳ್ಳಿ, ಬಸವರಾಜ ಪಾಟೀಲ್ ಹಾರೂರಗೇರಿ, ಶಾಂತಲಿಂಗ ಸಾವಳಗಿ, ರಾಜಶೇಖರ ಜವಳೆ, ಅಶೋಕ್ ಕೊಡ್ಗೆ, ರಾಜು ಕಡ್ಯಾಳ, ಸುದರ್ಶನ್ ಸುಂದರರಾಜ್, ಸಿದ್ರಾಮಪ್ಪ ವಂಕ್ಕೆ, ಐಲಿಂಜಾನ್ ಮಠಪತಿ, ಬಸವರಾಜ ಪಾಟೀಲ್ ಹಾರೂರಗೇರಿ, ಮಲ್ಲಿಕಾರ್ಜುನ ನೆಳ್ಗೆ, ಅಭಿ ಕಾಳೆ, ಜಾಫೇಡ್ ಕಡ್ಯಾಳ, ಪ್ರಶಾಂತ್ ವಿಶ್ವಕರ್ಮರವರು ಸೇರಿದಂತೆ ಅನೇಕರಿದ್ದರು.